logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಇಂದು ಮಹಿಳೆಯು ಎಲ್ಲಾ ರಂಗಗಳಲ್ಲೂ ಮುಂಚೂಣಿಯಲ್ಲಿದ್ದಾಳೆ :ವಿದ್ಯಾ ವಿದ್ಯಾಧರ ಸವದಿ ಅಭಿಮತ ​ಅಥಣಿ: "ಇಡೀ ಜಗತ್ತಿನ ಸರ್ವಶಕ್ತಿಗಳ ಒಟ್ಟು ಮೊತ್ತವೇ ಸ್ತ್ರೀ. ಇಂದು ಮಹಿಳೆಯು ಸಮಾಜದ ಎಲ್ಲಾ ರಂಗಗಳಲ್ಲೂ ಮುಂಚೂಣಿಯಲ್ಲಿದ್ದು, ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾಳೆ," ಎಂದು ಶ್ರೀಮತಿ ವಿದ್ಯಾ ವಿದ್ಯಾಧರ ಸವದಿ ಅವರು ಅಭಿಪ್ರಾಯಪಟ್ಟರು. ​ಸ್ಥಳೀಯ ನ್ಯಾಯಾಲಯಗಳ ಸಂಕೀರ್ಣದ ಸಭಾಂಗಣದಲ್ಲಿ ತಾಲೂಕು ನ್ಯಾಯವಾದಿಗಳ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು  ಮಾತನಾಡುತ್ತ ಮಹಿಳಾ ಸಬಲೀಕರಣದ ಮಹತ್ವವನ್ನು ಒತ್ತಿ ಹೇಳಿದ ಅವರು"ಹೆಣ್ಣು ಅಬಲೆಯಲ್ಲ, ಅವಳು ಈ ಸಮಾಜದ ಕಣ್ಣು" ಎಂದು ವಿದ್ಯಾ ಸವದಿ ಅವರು, ಬಣ್ಣಿಸಿದರು.   ​ಕಾರ್ಯಕ್ರಮವನ್ನು 11ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ  ಈರಣ್ಣ ಇ. ಎಸ್. ಅವರು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿದಇಂದು ಎಲ್ಲ ಇಲಾಖೆಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ವಿವರಿಸಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಶ್ರೀಮತಿ ಸುನಿತಾ ಪ್ರಭಣ್ಣವರ ಮಾನ್ಯ 2ನೇ ಹೆಚ್ಚುವರಿ ಸಿವಿಲ್ ಜಡ್ಜ್ ಜೆ ಎಂ ಎಫ್ ಸಿ ಅಥಣಿ ಅವರು ಒಬ್ಬ ಮಹಿಳೆ ಮುಖ್ಯ ವೇದಿಕೆಗೆ ಬರುವವರೆಗೆ ತುಂಬಾ ಕಷ್ಟಗಳನ್ನು ದಾಟಿ ಬರಬೇಕಾಗುತ್ತದೆ ಎಂದು ಹೇಳಿದರು. ವೇದಿಕೆಯ ಮೇಲೆ ಪ್ರಧಾನ ಸಿವಿಲ್ ಜಡ್ಜ್  ಶ್ರೀ ಸಾಲಮಂಟಪ, 3ನೇ ಸಿವಿಲ್ ಜಡ್ಜ್  ಭಾಗ್ಯಶ್ರೀ ಮಾದರ ಜೆ ಎಮ್ ಎಫ್ ಸಿ ನ್ಯಾಯಾಧೀಶರು, ಎಪಿಪಿ ಕವಿತಾ ಛಲವಾದಿ, ಮಹಿಳಾ ಪ್ರತಿನಿಧಿ ಗೀತಾ ಕಾಂಬಳೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿಗಳಾದ ಶ್ರೀಮತಿ ರೇಖಾ ಎಂ. ಕುಳ್ಳೊಳ್ಳಿ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿ ಗಳು ಹಾಗೂ ಪಟ್ಟಣದ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶ್ರೀಮತಿ ರೇಖಾ ಎಮ್. ಕುಳೊಳ್ಳಿ ಮುಖ್ಯಅತಿಥಿಗಳ ನ್ನು ಪರಿಚಯಿಸಿದರು.ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಎ ಎ ಹುದ್ದಾರ ವಕೀಲರು ಅಧ್ಯಕ್ಷತೆ ವಹಿಸಿದ್ದರು.ಶ್ರೀಮತಿ ದೀಪಿಕಾಕಾಂಬಳೆವಕೀಲರು ವಂದಿಸಿದರು. ಎಸ್ ಸಿ ನಾಯಿಕ್, ಬಿ ಟಿ ಕಾಂಬಳೆ ವಕೀಲರು ನಿರೂಪಿಸಿದರು.

4 hrs ago
user_Dr RAMANNA.S.D
Dr RAMANNA.S.D
Journalist ಅಥಣಿ, ಬೆಳಗಾವಿ, ಕರ್ನಾಟಕ•
4 hrs ago
5948f43f-4a2b-43fb-89d1-0f6e080cfc44

ಇಂದು ಮಹಿಳೆಯು ಎಲ್ಲಾ ರಂಗಗಳಲ್ಲೂ ಮುಂಚೂಣಿಯಲ್ಲಿದ್ದಾಳೆ :ವಿದ್ಯಾ ವಿದ್ಯಾಧರ ಸವದಿ ಅಭಿಮತ ​ಅಥಣಿ: "ಇಡೀ ಜಗತ್ತಿನ ಸರ್ವಶಕ್ತಿಗಳ ಒಟ್ಟು ಮೊತ್ತವೇ ಸ್ತ್ರೀ. ಇಂದು ಮಹಿಳೆಯು ಸಮಾಜದ ಎಲ್ಲಾ ರಂಗಗಳಲ್ಲೂ ಮುಂಚೂಣಿಯಲ್ಲಿದ್ದು, ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾಳೆ," ಎಂದು ಶ್ರೀಮತಿ ವಿದ್ಯಾ ವಿದ್ಯಾಧರ ಸವದಿ ಅವರು ಅಭಿಪ್ರಾಯಪಟ್ಟರು. ​ಸ್ಥಳೀಯ ನ್ಯಾಯಾಲಯಗಳ ಸಂಕೀರ್ಣದ ಸಭಾಂಗಣದಲ್ಲಿ ತಾಲೂಕು ನ್ಯಾಯವಾದಿಗಳ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು  ಮಾತನಾಡುತ್ತ ಮಹಿಳಾ ಸಬಲೀಕರಣದ ಮಹತ್ವವನ್ನು ಒತ್ತಿ ಹೇಳಿದ ಅವರು"ಹೆಣ್ಣು ಅಬಲೆಯಲ್ಲ, ಅವಳು ಈ ಸಮಾಜದ ಕಣ್ಣು" ಎಂದು ವಿದ್ಯಾ ಸವದಿ ಅವರು,

e8d73c69-a16e-446d-86b9-7c186db64a06

ಬಣ್ಣಿಸಿದರು.   ​ಕಾರ್ಯಕ್ರಮವನ್ನು 11ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ  ಈರಣ್ಣ ಇ. ಎಸ್. ಅವರು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿದಇಂದು ಎಲ್ಲ ಇಲಾಖೆಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ವಿವರಿಸಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಶ್ರೀಮತಿ ಸುನಿತಾ ಪ್ರಭಣ್ಣವರ ಮಾನ್ಯ 2ನೇ ಹೆಚ್ಚುವರಿ ಸಿವಿಲ್ ಜಡ್ಜ್ ಜೆ ಎಂ ಎಫ್ ಸಿ ಅಥಣಿ ಅವರು ಒಬ್ಬ ಮಹಿಳೆ ಮುಖ್ಯ ವೇದಿಕೆಗೆ ಬರುವವರೆಗೆ ತುಂಬಾ ಕಷ್ಟಗಳನ್ನು ದಾಟಿ ಬರಬೇಕಾಗುತ್ತದೆ ಎಂದು ಹೇಳಿದರು. ವೇದಿಕೆಯ ಮೇಲೆ ಪ್ರಧಾನ ಸಿವಿಲ್ ಜಡ್ಜ್  ಶ್ರೀ ಸಾಲಮಂಟಪ, 3ನೇ ಸಿವಿಲ್ ಜಡ್ಜ್  ಭಾಗ್ಯಶ್ರೀ ಮಾದರ ಜೆ ಎಮ್

d112df6b-07fa-4100-bd90-5dd20f8308f9

ಎಫ್ ಸಿ ನ್ಯಾಯಾಧೀಶರು, ಎಪಿಪಿ ಕವಿತಾ ಛಲವಾದಿ, ಮಹಿಳಾ ಪ್ರತಿನಿಧಿ ಗೀತಾ ಕಾಂಬಳೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿಗಳಾದ ಶ್ರೀಮತಿ ರೇಖಾ ಎಂ. ಕುಳ್ಳೊಳ್ಳಿ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿ ಗಳು ಹಾಗೂ ಪಟ್ಟಣದ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶ್ರೀಮತಿ ರೇಖಾ ಎಮ್. ಕುಳೊಳ್ಳಿ ಮುಖ್ಯಅತಿಥಿಗಳ ನ್ನು ಪರಿಚಯಿಸಿದರು.ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಎ ಎ ಹುದ್ದಾರ ವಕೀಲರು ಅಧ್ಯಕ್ಷತೆ ವಹಿಸಿದ್ದರು.ಶ್ರೀಮತಿ ದೀಪಿಕಾಕಾಂಬಳೆವಕೀಲರು ವಂದಿಸಿದರು. ಎಸ್ ಸಿ ನಾಯಿಕ್, ಬಿ ಟಿ ಕಾಂಬಳೆ ವಕೀಲರು ನಿರೂಪಿಸಿದರು.

More news from ಕರ್ನಾಟಕ and nearby areas
  • ಗೋಕಾಕ : ಮನೆ ಮುಂದೆ ನಿಲ್ಲಿಸಿದ, ,ಅಂಗಡಿ ಮುಂದೆ ನಿಲ್ಲಿಸಿದ ಅಥವಾ ಜನನಿ ಬಿಡದಲ್ಲಿ ನಿಲ್ಲಿಸಿದ ಮೊಟರ ಸೈಕಲಗಳನ್ನು ಕಳ್ಳತನ ಮಾಡುವ ಕಳ್ಳರನ್ನು ನೋಡಿದ್ದೀರಿ ಅಂತವರಿಗೆ ಪೋಲಿಸ್ ಇಲಾಖೆ ಜೈಲಿನ ರುಚಿ ತೊರಿಸಿದ್ದನ್ನು ನೋಡಿದ್ದೀರಿ ಕೇಳಿದ್ದರಿ. ಆದರೆ ಯಾರಿಗೆ ಯಾವ ಗಾಡಿ ಬೇಕೊ ಅದೆ ಕಂಪನಿಯ ಮೊಟರ ಸೈಕಲ್ ಕಳ್ಳತನ ಮಾಡಿ ಮಾರಾಟ ಮಾಡುತಿದ್ದರು ಈ ಐನಾತಿ ಕಳ್ಳರು, ಒಂದು ದಿನ ಮೊದಲು ಅಡ್ವಾನ್ಸ್ ಕೊಟ್ಟರೆ ಸಾಕು ಈ ಐನಾತಿ ಕಳ್ಳರು ಅದೆ ಕಂಪನಿಯ ಮೊಟರ ಸೈಕಲ್ ಎಲ್ಲೆ ಇರಲಿ ಅಂತದನ್ನೆ ಕಳ್ಳತನ ಮಾಡುತಿದ್ದ ಐನಾತಿ ಕಳ್ಳರನ್ನು ಹಿಡಿದು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ ಗೋಕಾಕ ನಗರ ಪೋಲಿಸರು. ಹೌದು ದಿನಾಂಕ 5/2/2026 ರಂದು ಗೋಕಾಕ ನಗರದ ಠಾಣೆಯಲ್ಲಿ ಮರಡಿಮಠದ ಪ್ರಕಾಶ ಬಸವಣ್ಣಿ ಕಡೋಲಿ ಇವರು ನಗರದ ರಿಲಾಯನ್ಸ್ ಮಾಲ್ಸ್ ಮುಂಬಾಗದಲ್ಲಿ ನಿಲ್ಲಿಸಿದ್ದ ತಮ್ಮ ಮೊಟರ ಸೈಕಲ್ ಕಳೆದುಕೊಂಡಿದ್ದ ಪ್ರಕರಣ ಗೋಕಾಕ ನಗರ ಪೋಲಿಸ್ ಠಾಣೆಯಲ್ಲಿ ದಾಖಲಾಗಿತ್ತು. ಬೆಳಗಾವಿ ಎಸ್ಪಿ ಕೆ,ರಾಮರಾಜನ್ ಡಿವೈಎಸ್ಪಿ. ರವಿ ನಾಯಕ , ಸಿಪಿಐ ಸುರೇಶಬಾಬು ಮಾರ್ಗದರ್ಶನದಲ್ಲಿ ಪಿಎಸ್‌ಐ. ಕಿರಣ ಮೊಹಿತೆ ನೇತೃತ್ವದ ಸಿಬ್ಬಂದಿಗಳ ತಂಡ ರಚಿಸಿ ಕೊನೆಗೆ ಕಳ್ಳರನ್ನು ಪತ್ತೆ ಹಚ್ಚಿ ಬಂದಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸುವಲ್ಲಿ ಗೋಕಾಕ ನಗರ ಪೋಲಿಸರು ಯಶಸ್ವಿಯಾದರು. ಇನ್ನು ಬೈಕ್ ಕಳ್ಳತನ ಪ್ರಕರಣದಲ್ಲಿ ಗೋಕಾಕ ಪೊಲೀಸ್‌ರಿಂದ ಬಂಧಿತರಾದ ಕುಂದರಗಿ ಗ್ರಾಮದವರಾದ ಪರಶುರಾಮ ಯಲ್ಲಪ್ಪಾ ಹಣಬರಟ್ಟಿ ಮತ್ತು ಲಗಮಣ್ಣಾ ಮಾರುತಿ ಮಲ್ಲನ್ನವರ ಇವರನ್ನು ವಿಚಾರಣೆಗೆ ಒಳಪಡಿಸಿದಾಗ ಗೋಕಾಕ ಶಹರದಿಂದ 6 ಮೊಟರ ಸೈಕಲ್,ಯಮಕನಮರಡಿ,ಹುಕ್ಕೇರಿ,ನೆಸರಗಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ 9 ಮೊಟರ ಸೈಕಲ್ ಕಳವು ಮಾಡಿದ್ದು ಒಟ್ಟು 5,45,000/ ರೂ ಕಿಮ್ಮತ್ತಿನ ಒಟ್ಟು 15 ಮೊಟರ ಸೈಕಲಗಳನ್ನು ಕಳ್ಳತನ ಮಾಡಿದ್ದು ಒಪ್ಪಿಕೊಂಡಿದ್ದು, ಅವರಿಂದ ಜಪ್ತಮಾಡಿ ಆರೋಪಿತರನ್ನು ನ್ಯಾಯಾಂಗ ಬಂದನಕ್ಕೆ ಕಳುಹಿಸಿದ್ದಾರೆ. ಇನ್ನು ಈ ಪ್ರಕರಣ ಬೇದಿಸಿ ಕಳ್ಳರನ್ನು ಬಂದಿಸುವಲ್ಲಿ ಯಶಸ್ವಿಯಾದ ಸಿಪಿಆಯ್ ಸುರೇಶಬಾಬು,ಪಿಎಸ್ಐ ಕಿರಣ ಮೊಹಿತೆ ಹಾಗೂ ಸಿಬ್ಬಂದಿಗಳಾದ ಕೆ,ಎನ್ ,ಇಳಿಗೇರ, ಬಿ,ಎಸ್,ಸಿದ್ನಾಳ ,ಎಮ್,ಹುಚ್ಚಗೌಡರ ಸೇರಿದಂತೆ ಇನ್ನೂಳಿದವರ ಕಾರ್ಯವನ್ನು ಎಸ್,ಪಿ, ಕೆ ರಾಮರಾಜನ್ ಶ್ಲ್ಯಾಘಿಸಿರುತ್ತಾರೆ.
    4
    ಗೋಕಾಕ : ಮನೆ ಮುಂದೆ ನಿಲ್ಲಿಸಿದ, ,ಅಂಗಡಿ ಮುಂದೆ ನಿಲ್ಲಿಸಿದ ಅಥವಾ ಜನನಿ ಬಿಡದಲ್ಲಿ ನಿಲ್ಲಿಸಿದ ಮೊಟರ ಸೈಕಲಗಳನ್ನು ಕಳ್ಳತನ ಮಾಡುವ ಕಳ್ಳರನ್ನು ನೋಡಿದ್ದೀರಿ ಅಂತವರಿಗೆ ಪೋಲಿಸ್ ಇಲಾಖೆ ಜೈಲಿನ ರುಚಿ ತೊರಿಸಿದ್ದನ್ನು ನೋಡಿದ್ದೀರಿ ಕೇಳಿದ್ದರಿ.
ಆದರೆ ಯಾರಿಗೆ ಯಾವ ಗಾಡಿ ಬೇಕೊ ಅದೆ ಕಂಪನಿಯ ಮೊಟರ ಸೈಕಲ್ ಕಳ್ಳತನ ಮಾಡಿ ಮಾರಾಟ ಮಾಡುತಿದ್ದರು ಈ ಐನಾತಿ ಕಳ್ಳರು, ಒಂದು ದಿನ ಮೊದಲು ಅಡ್ವಾನ್ಸ್ ಕೊಟ್ಟರೆ ಸಾಕು ಈ ಐನಾತಿ ಕಳ್ಳರು ಅದೆ ಕಂಪನಿಯ ಮೊಟರ ಸೈಕಲ್ ಎಲ್ಲೆ ಇರಲಿ ಅಂತದನ್ನೆ ಕಳ್ಳತನ ಮಾಡುತಿದ್ದ ಐನಾತಿ ಕಳ್ಳರನ್ನು ಹಿಡಿದು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ ಗೋಕಾಕ ನಗರ ಪೋಲಿಸರು.
ಹೌದು ದಿನಾಂಕ 5/2/2026 ರಂದು ಗೋಕಾಕ ನಗರದ ಠಾಣೆಯಲ್ಲಿ ಮರಡಿಮಠದ ಪ್ರಕಾಶ ಬಸವಣ್ಣಿ ಕಡೋಲಿ ಇವರು ನಗರದ ರಿಲಾಯನ್ಸ್ ಮಾಲ್ಸ್ ಮುಂಬಾಗದಲ್ಲಿ ನಿಲ್ಲಿಸಿದ್ದ ತಮ್ಮ ಮೊಟರ ಸೈಕಲ್ ಕಳೆದುಕೊಂಡಿದ್ದ ಪ್ರಕರಣ ಗೋಕಾಕ ನಗರ ಪೋಲಿಸ್ ಠಾಣೆಯಲ್ಲಿ ದಾಖಲಾಗಿತ್ತು.
ಬೆಳಗಾವಿ ಎಸ್ಪಿ ಕೆ,ರಾಮರಾಜನ್   ಡಿವೈಎಸ್ಪಿ. ರವಿ ನಾಯಕ , ಸಿಪಿಐ ಸುರೇಶಬಾಬು  ಮಾರ್ಗದರ್ಶನದಲ್ಲಿ ಪಿಎಸ್‌ಐ. ಕಿರಣ ಮೊಹಿತೆ ನೇತೃತ್ವದ ಸಿಬ್ಬಂದಿಗಳ ತಂಡ ರಚಿಸಿ ಕೊನೆಗೆ ಕಳ್ಳರನ್ನು ಪತ್ತೆ ಹಚ್ಚಿ ಬಂದಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸುವಲ್ಲಿ ಗೋಕಾಕ ನಗರ  ಪೋಲಿಸರು ಯಶಸ್ವಿಯಾದರು.
ಇನ್ನು ಬೈಕ್ ಕಳ್ಳತನ ಪ್ರಕರಣದಲ್ಲಿ ಗೋಕಾಕ  ಪೊಲೀಸ್‌ರಿಂದ ಬಂಧಿತರಾದ ಕುಂದರಗಿ ಗ್ರಾಮದವರಾದ ಪರಶುರಾಮ ಯಲ್ಲಪ್ಪಾ ಹಣಬರಟ್ಟಿ ಮತ್ತು ಲಗಮಣ್ಣಾ ಮಾರುತಿ ಮಲ್ಲನ್ನವರ ಇವರನ್ನು ವಿಚಾರಣೆಗೆ ಒಳಪಡಿಸಿದಾಗ ಗೋಕಾಕ ಶಹರದಿಂದ 6 ಮೊಟರ ಸೈಕಲ್,ಯಮಕನಮರಡಿ,ಹುಕ್ಕೇರಿ,ನೆಸರಗಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ 9 ಮೊಟರ ಸೈಕಲ್ ಕಳವು ಮಾಡಿದ್ದು ಒಟ್ಟು 5,45,000/ ರೂ ಕಿಮ್ಮತ್ತಿನ ಒಟ್ಟು 15 ಮೊಟರ ಸೈಕಲಗಳನ್ನು ಕಳ್ಳತನ ಮಾಡಿದ್ದು ಒಪ್ಪಿಕೊಂಡಿದ್ದು, ಅವರಿಂದ ಜಪ್ತಮಾಡಿ ಆರೋಪಿತರನ್ನು ನ್ಯಾಯಾಂಗ ಬಂದನಕ್ಕೆ ಕಳುಹಿಸಿದ್ದಾರೆ.
ಇನ್ನು ಈ ಪ್ರಕರಣ ಬೇದಿಸಿ ಕಳ್ಳರನ್ನು ಬಂದಿಸುವಲ್ಲಿ  ಯಶಸ್ವಿಯಾದ ಸಿಪಿಆಯ್ ಸುರೇಶಬಾಬು,ಪಿಎಸ್ಐ ಕಿರಣ ಮೊಹಿತೆ ಹಾಗೂ ಸಿಬ್ಬಂದಿಗಳಾದ ಕೆ,ಎನ್ ,ಇಳಿಗೇರ, ಬಿ,ಎಸ್,ಸಿದ್ನಾಳ ,ಎಮ್,ಹುಚ್ಚಗೌಡರ ಸೇರಿದಂತೆ ಇನ್ನೂಳಿದವರ ಕಾರ್ಯವನ್ನು ಎಸ್,ಪಿ, ಕೆ ರಾಮರಾಜನ್ ಶ್ಲ್ಯಾಘಿಸಿರುತ್ತಾರೆ.
    user_Manohar megeri
    Manohar megeri
    ಪತ್ರಕರ್ತ ಗೋಕಾಕ, ಬೆಳಗಾವಿ, ಕರ್ನಾಟಕ•
    7 hrs ago
  • ವಿಜಯಪುರ: ಕಾಂಗ್ರೆಸ ವಿರುದ್ಧ ಕಿಡಿಕಾರಿದ ಬಿಜೆಪಿವಕ್ತಾರ ಎನ. ಚಂದ್ರಶೇಖರ ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ರಾಜ್ಯ ವಕ್ತಾರ ಎಚ್‌.ಎನ್. ಚಂದ್ರಶೇಖರ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸ್ವಯಂಘೋಷಿತ ಆರ್ಥಿಕ ತಜ್ಞ ಸಿದ್ದರಾಮಯ್ಯ ಅವರು ರಾಜ್ಯವನ್ನು ಸಾಲದ ಸುಳಿಯಲ್ಲಿ ತಳ್ಳಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕರೇ ಆಕ್ರೋಶಗೊಂಡಿದ್ದಾರೆ ಎಂದರು. ಪಂಚ ಗ್ಯಾರಂಟಿ ಯೋಜನೆಯಲ್ಲಿ ಯುವನಿಧಿ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ ಮತ್ತು ರಾಜ್ಯದಲ್ಲಿ ನಿರುದ್ಯೋಗ ಹೆಚ್ಚಾಗಿದೆ ಎಂದು ಅವರು ಕಿಡಿ ಕಾರಿದರು.
    1
    ವಿಜಯಪುರ: ಕಾಂಗ್ರೆಸ ವಿರುದ್ಧ ಕಿಡಿಕಾರಿದ ಬಿಜೆಪಿವಕ್ತಾರ ಎನ. ಚಂದ್ರಶೇಖರ
ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ರಾಜ್ಯ ವಕ್ತಾರ ಎಚ್‌.ಎನ್. ಚಂದ್ರಶೇಖರ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸ್ವಯಂಘೋಷಿತ ಆರ್ಥಿಕ ತಜ್ಞ ಸಿದ್ದರಾಮಯ್ಯ ಅವರು ರಾಜ್ಯವನ್ನು ಸಾಲದ ಸುಳಿಯಲ್ಲಿ ತಳ್ಳಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕರೇ ಆಕ್ರೋಶಗೊಂಡಿದ್ದಾರೆ ಎಂದರು. ಪಂಚ ಗ್ಯಾರಂಟಿ ಯೋಜನೆಯಲ್ಲಿ ಯುವನಿಧಿ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ ಮತ್ತು ರಾಜ್ಯದಲ್ಲಿ ನಿರುದ್ಯೋಗ ಹೆಚ್ಚಾಗಿದೆ ಎಂದು ಅವರು ಕಿಡಿ ಕಾರಿದರು.
    user_ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
    ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
    ವಿಜಯಪುರ, ವಿಜಯಪುರ, ಕರ್ನಾಟಕ•
    5 hrs ago
  • ಸಂತಪೂರ ಪೊಲೀಸರ ದಾಳಿ: ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ 38 ಕೆ.ಜಿ ಗಾಂಜಾ ವಶ. #JB_News_Kannada
    1
    ಸಂತಪೂರ ಪೊಲೀಸರ ದಾಳಿ: ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ 38 ಕೆ.ಜಿ ಗಾಂಜಾ ವಶ.
#JB_News_Kannada
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Bagalkot, Bagalkote•
    5 hrs ago
  • ಹೋಳಿ ಹಬ್ಬದ ವೇಳೆ ನಡೆದ ಸ್ನೇಹಿತರ ನಡುವಿನ ಜಗಳ ಕೊಲೆ ಪ್ರಕರಣದಲ್ಲಿ ಅಂತ್ಯವಾದ ಘಟನೆ ತೇರದಾಳದಲ್ಲಿ ನಡೆದಿದ್ದು, ಈ ಸಂಬಂಧದ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತೇರದಾಳ ಪಟ್ಟಣದ ನಿವಾಸಿ ರಾಹುಲ್ ಎಂಬ ಯುವಕನನ್ನು ಸ್ನೇಹಿತನೇ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆಯು ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಜಗಳ ಹಾಗೂ ಗಲಾಟೆಯ ಕೆಲವು ದೃಶ್ಯಗಳು ಸೆರೆಯಾಗಿದ್ದು, ಅವು ಇದೀಗ ಹರಿದಾಡುತ್ತಿವೆ. ಹೋಳಿ ಹಬ್ಬದ ವೇಳೆ ಆರಂಭವಾದ ಸಣ್ಣ ಮಟ್ಟದ ವಾಗ್ವಾದವು ತೀವ್ರ ಸ್ವರೂಪ ಪಡೆದು ಕೊಲೆಗೆ ಕಾರಣವಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
    1
    ಹೋಳಿ ಹಬ್ಬದ ವೇಳೆ ನಡೆದ ಸ್ನೇಹಿತರ ನಡುವಿನ ಜಗಳ ಕೊಲೆ ಪ್ರಕರಣದಲ್ಲಿ ಅಂತ್ಯವಾದ ಘಟನೆ ತೇರದಾಳದಲ್ಲಿ ನಡೆದಿದ್ದು, ಈ ಸಂಬಂಧದ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ತೇರದಾಳ ಪಟ್ಟಣದ ನಿವಾಸಿ ರಾಹುಲ್ ಎಂಬ ಯುವಕನನ್ನು ಸ್ನೇಹಿತನೇ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆಯು ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಜಗಳ ಹಾಗೂ ಗಲಾಟೆಯ ಕೆಲವು ದೃಶ್ಯಗಳು ಸೆರೆಯಾಗಿದ್ದು, ಅವು ಇದೀಗ ಹರಿದಾಡುತ್ತಿವೆ.
ಹೋಳಿ ಹಬ್ಬದ ವೇಳೆ ಆರಂಭವಾದ ಸಣ್ಣ ಮಟ್ಟದ ವಾಗ್ವಾದವು ತೀವ್ರ ಸ್ವರೂಪ ಪಡೆದು ಕೊಲೆಗೆ ಕಾರಣವಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
    user_PKBagalkot
    PKBagalkot
    ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    5 hrs ago
  • ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಮಾರ್ಚ ೧೫ ರವಿವಾರದಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಹಿನ್ನಲೆ ಬೃಹತ್ ಶೋಭಾಯಾತ್ರೆ ನಡೆಯಲಿದ್ದು. ಈ ಕಾರ್ಯಕ್ರಮದಲ್ಲಿ ಶಾಸಕ ಸಿ.ಟಿ.ರವಿ ಪಾಲ್ಗೊಳ್ಳಲಿದ್ದು. ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಯಲಿದ್ದು. ಸಾಯಂಕಾಲ ಎಸ್.ಆರ್.ಕಂಠಿ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮ ಇದ್ದು, ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಹಿಂದೂ ಸಮಾಜದ ಮುಖಂಡರು ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮನವಿ ಮಾಡಿದ್ದಾರೆ. ವರದಿ ಭೀಮಣ್ಣ ಗಾಣಿಗೇರ ಇಳಕಲ್ಲ
    1
    ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಮಾರ್ಚ ೧೫ ರವಿವಾರದಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಹಿನ್ನಲೆ ಬೃಹತ್ ಶೋಭಾಯಾತ್ರೆ ನಡೆಯಲಿದ್ದು. ಈ ಕಾರ್ಯಕ್ರಮದಲ್ಲಿ ಶಾಸಕ ಸಿ.ಟಿ.ರವಿ ಪಾಲ್ಗೊಳ್ಳಲಿದ್ದು. ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಯಲಿದ್ದು. ಸಾಯಂಕಾಲ ಎಸ್.ಆರ್.ಕಂಠಿ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮ ಇದ್ದು, ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಹಿಂದೂ ಸಮಾಜದ ಮುಖಂಡರು ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮನವಿ ಮಾಡಿದ್ದಾರೆ. ವರದಿ ಭೀಮಣ್ಣ ಗಾಣಿಗೇರ ಇಳಕಲ್ಲ
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    11 hrs ago
  • Post by Nava karnataka News channel
    1
    Post by Nava karnataka News channel
    user_Nava karnataka News channel
    Nava karnataka News channel
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    13 hrs ago
  • 56,432 ಹುದ್ದೆಗಳ ನೇಮಕಾತಿಯ ಅಧಿಸೂಚನೆ ಕೂಡಲೇ ಹೊರಡಿಸಲು ಆಗ್ರಹಿಸಿ ವಿಜಯಪುರದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ
    1
    56,432 ಹುದ್ದೆಗಳ ನೇಮಕಾತಿಯ ಅಧಿಸೂಚನೆ ಕೂಡಲೇ ಹೊರಡಿಸಲು ಆಗ್ರಹಿಸಿ  ವಿಜಯಪುರದಲ್ಲಿ  ಉದ್ಯೋಗಾಕಾಂಕ್ಷಿಗಳ ಹೋರಾಟ
    user_B Patil B Patil
    B Patil B Patil
    Farmer ಹಳಿಯಾಳ, ಉತ್ತರ ಕನ್ನಡ, ಕರ್ನಾಟಕ•
    10 hrs ago
  • ಕಲಬುರಗಿ: ಮತಾಂತರಕ್ಕೆ ಯತ್ನಿಸುತ್ತಿದ್ದವರನ್ನು ಠಾಣೆಗೆ ತಂದು ಒಪ್ಪಿಸಿದ ಹಿಂದೂ ಕಾರ್ಯಕರ್ತರು ಕಲಬುರ್ಗಿಯ ಶರಣಸಿರಸಗಿ ಗ್ರಾಮದಲ್ಲಿ ಕ್ರಿಶ್ಚಿಯನ್ ಧರ್ಮದ ಕರಪತ್ರ ಹಂಚಿ ಮತಾಂತರಕ್ಕೆ ಯತ್ನಿಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೇವರ ಮೂರ್ತಿ, ಫೋಟೋಗಳನ್ನು ಮನೆಯಿಂದ ಹೊರಗೆಸೆಯಿರಿ ನಿಮಗಾಗಿ ನಾವು ಪ್ರಾರ್ಥನೆ ಮಾಡುತ್ತೇವೆ ಎಂದು 20-30 ಜನರ ತಂದ ಧರ್ಮ ಪರಿವರ್ತನಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಜರಂಗದಳ ಕಾರ್ಯಕರ್ತನ ಮನೆಗೆ ಭೇಟಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹಿಂದೂ ಕಾರ್ಯಕರ್ತೆ ದಿವ್ಯಾ ನೇತೃತ್ವದಲ್ಲಿ ತಂಡವನ್ನು ಸಬ್ ಅರ್ಬನ್ ಪೊಲೀಸ್‌ ಠಾಣೆಗೆ ಒಪ್ಪಿಸಲಾಗಿದ್ದು, ಸರ್ಕಲ್ ಇನ್ಸೆಕ್ಟ‌ರ್ ಕಾನೂನು ಕ್ರಮದ ಭರವಸೆ ನೀಡಿದ್ದಾರೆ. ಜಿಲ್ಲೆಯಲ್ಲಿ ಮತಾಂತರ ತಡೆಗೆ ಕಠಿಣ ಕ್ರಮಕ್ಕಾಗಿ ಆಗ್ರಹ ಕೇಳಿಬಂದಿದೆ.
    2
    ಕಲಬುರಗಿ: ಮತಾಂತರಕ್ಕೆ ಯತ್ನಿಸುತ್ತಿದ್ದವರನ್ನು ಠಾಣೆಗೆ ತಂದು ಒಪ್ಪಿಸಿದ ಹಿಂದೂ ಕಾರ್ಯಕರ್ತರು
ಕಲಬುರ್ಗಿಯ ಶರಣಸಿರಸಗಿ ಗ್ರಾಮದಲ್ಲಿ ಕ್ರಿಶ್ಚಿಯನ್ ಧರ್ಮದ ಕರಪತ್ರ ಹಂಚಿ ಮತಾಂತರಕ್ಕೆ ಯತ್ನಿಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೇವರ ಮೂರ್ತಿ, ಫೋಟೋಗಳನ್ನು ಮನೆಯಿಂದ ಹೊರಗೆಸೆಯಿರಿ ನಿಮಗಾಗಿ ನಾವು ಪ್ರಾರ್ಥನೆ ಮಾಡುತ್ತೇವೆ ಎಂದು 20-30 ಜನರ ತಂದ ಧರ್ಮ ಪರಿವರ್ತನಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಜರಂಗದಳ ಕಾರ್ಯಕರ್ತನ ಮನೆಗೆ ಭೇಟಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹಿಂದೂ ಕಾರ್ಯಕರ್ತೆ ದಿವ್ಯಾ ನೇತೃತ್ವದಲ್ಲಿ ತಂಡವನ್ನು ಸಬ್ ಅರ್ಬನ್ ಪೊಲೀಸ್‌ ಠಾಣೆಗೆ ಒಪ್ಪಿಸಲಾಗಿದ್ದು, ಸರ್ಕಲ್ ಇನ್ಸೆಕ್ಟ‌ರ್ ಕಾನೂನು ಕ್ರಮದ ಭರವಸೆ ನೀಡಿದ್ದಾರೆ. ಜಿಲ್ಲೆಯಲ್ಲಿ ಮತಾಂತರ ತಡೆಗೆ ಕಠಿಣ ಕ್ರಮಕ್ಕಾಗಿ ಆಗ್ರಹ ಕೇಳಿಬಂದಿದೆ.
    user_ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
    ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
    ವಿಜಯಪುರ, ವಿಜಯಪುರ, ಕರ್ನಾಟಕ•
    12 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.