ಮೊಳಕಾಲ್ಮುರು ಪಟ್ಟಣದ ತಾಲ್ಲೂಕು ಕಚೇರಿ ಬಳಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಸಮಾಜ ಪರಿವರ್ತನಾ ಸಮಿತಿ ವತಿಯಿಂದ ಬೆಸ್ಕಾಂ ಇಲಾಖೆಯನ್ನು ಖಾಸಗೀಕರಣ ಮಾಡುವುದನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಉಪ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಬಸವರೆಡ್ಡಿ ಅವರು, ದೇಶದ ಪ್ರತಿಯೊಂದು ವ್ಯವಸ್ಥೆಯನ್ನು ಖಾಸಗೀಕರಣ ಮಾಡುವುದರಿಂದ ದೇಶದ ಅಭಿವೃದ್ಧಿ ಸಂಪೂರ್ಣ ಶೂನ್ಯವಾಗಲಿದ್ದು, ರೈತರ ಬದುಕು ಸರ್ವನಾಶವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಖಾಸಗಿ ಸಂಸ್ಥೆಗಳ ಉದ್ದಾರಕ್ಕಾಗಿ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂಬ ಕಳವಳ ವ್ಯಕ್ತಪಡಿಸಿದ ಬಸವರೆಡ್ಡಿ, ಖಾಸಗೀಕರಣದಿಂದ ರೈತರಿಗೆ ಹಾಗೂ ಸಾಮಾನ್ಯ ಜನರ ಬದುಕಿಗೆ ಭಾರಿ ತೊಂದರೆಯಾಗುತ್ತದೆ ಎಂದು ತಿಳಿಸಿದರು. ಕರ್ನಾಟಕ ರಾಜ್ಯ ಸರ್ಕಾರವು ಉಚಿತ ಕರೆಂಟ್ ನೀಡುವ ಭರವಸೆ ನೀಡಿತ್ತು, ಆದರೆ ಇದೀಗ ಸರ್ಕಾರ ನಡೆಸುವುದು ಕಷ್ಟ ಎಂದು ಹೇಳಿ ಬೆಸ್ಕಾಂ ಅನ್ನು ಟಾಟಾ ಕಂಪನಿಗೆ ಖಾಸಗೀಕರಣ ಮಾಡಲು ಮುಂದಾಗಿದೆ. ಇದರಿಂದ ಸಾಮಾನ್ಯ ಜನರಿಗೆ ಜೀವನ ನಡೆಸುವುದು ಕಷ್ಟವಾಗುತ್ತಿದೆ ಎಂದು ಅವರು ದೂರಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಟಿ. ರವಿಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆ ಬೆಳೆ ಇಲ್ಲದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಬೆಳೆ ವಿಮೆ ಲಭ್ಯವಾಗಿದ್ದರೂ, ಮೊಳಕಾಲ್ಮುರು ತಾಲ್ಲೂಕಿನಲ್ಲಿ ಇದುವರೆಗೂ ಬೆಳೆ ವಿಮೆ ಬಂದಿಲ್ಲ. ಜೊತೆಗೆ, ಒಬ್ಬ ರೈತನಿಗೆ ಪ್ರತಿ ಎಕರೆಗೆ ಕೇವಲ 400 ರೂಪಾಯಿಗಳಂತೆ ಬೆಳೆ ವಿಮೆ ಬಂದಿದೆ ಎಂಬ ಮಾತು ಕೇಳಿಬರುತ್ತಿದೆ ಎಂದರು. ಬೆಸ್ಕಾಂ ಇಲಾಖೆಯನ್ನು ಖಾಸಗೀಕರಣ ಮಾಡಿದರೆ ರೈತರು ಜೀವನ ನಡೆಸುವುದು ಅಸಾಧ್ಯವಾಗಲಿದ್ದು, ರೈತರಿಗೆ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗದೇ ಕಂಗಾಲಾಗಿದ್ದಾರೆ. ಖಾಸಗೀಕರಣ ಮುಂದುವರಿದರೆ ರೈತರ ಆತ್ಮಹತ್ಯೆಗಳನ್ನು ನೋಡಬೇಕಾಗುತ್ತದೆ ಎಂದು ಅವರು ತೀವ್ರ ಎಚ್ಚರಿಕೆ ನೀಡಿದರು. ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಟಿ. ರವಿಕುಮಾರ್, ಸಮಾಜ ಪರಿವರ್ತನಾ ಸಮಿತಿ ಕಾರ್ಯದರ್ಶಿ ಮರ್ಲಹಳ್ಳಿ ಪರಮೇಶ್, ಸಂಸ್ಥಾಪಕ ನಾಗಸಮುದ್ರ ಮರಿಸ್ವಾಮಿ, ರಾಂಪುರ ಡಿ. ಸಿ. ನಾಗರಾಜ್, ಕೋಟೆ ವೀರಣ್ಣ, ದಾಸಪ್ಪ, ಶ್ರೀನಿವಾಸ್ ಮೂರ್ತಿ, ಮರ್ಲಹಳ್ಳಿ ಮಂಜಣ್ಣ, ಕೋನಸಾಗರ ಪ್ರಕಾಶ್, ರುದ್ರಮ್ಮನಹಳ್ಳಿ ತಿಪ್ಪೇಸ್ವಾಮಿ, ಬಿ. ಜಿ. ಕೆರೆ ಮೂರ್ತಿ, ಕಾಮಯ್ಯ, ಗುಡ್ಡದಹಳ್ಳಿ ಶಿವಣ್ಣ, ತಮ್ಮೆನಹಳ್ಳಿ ತಿಪ್ಪೇಸ್ವಾಮಿ, ಪರೆಸ್ಟ್ ಪಾಪಯ್ಯ, ಬಸಣ್ಣ, ಎನ್. ಗಂಗಣ್ಣ, ನಿಂಗಣ್ಣ, ಈರಣ್ಣ, ಮರ್ಲಹಳ್ಳಿ ದೊಡ್ಡಯ್ಯ, ಸುರಮ್ಮನಹಳ್ಳಿ ರಾಜಣ್ಣ, ಹಿರೇಹಳ್ಳಿ ಮೀಸೆ ತಿಪ್ಪೇಸ್ವಾಮಿ, ಮೊಗಳಹಳ್ಳಿ ಗೌಡರ ತಿಪ್ಪೇಸ್ವಾಮಿ, ಕೆ. ಟಿ. ನಾಗೇಶ್, ತಿಪ್ಪೇಶ್ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.
ಮೊಳಕಾಲ್ಮುರು ಪಟ್ಟಣದ ತಾಲ್ಲೂಕು ಕಚೇರಿ ಬಳಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಸಮಾಜ ಪರಿವರ್ತನಾ ಸಮಿತಿ ವತಿಯಿಂದ ಬೆಸ್ಕಾಂ ಇಲಾಖೆಯನ್ನು ಖಾಸಗೀಕರಣ ಮಾಡುವುದನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಉಪ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಬಸವರೆಡ್ಡಿ ಅವರು, ದೇಶದ ಪ್ರತಿಯೊಂದು ವ್ಯವಸ್ಥೆಯನ್ನು ಖಾಸಗೀಕರಣ ಮಾಡುವುದರಿಂದ ದೇಶದ ಅಭಿವೃದ್ಧಿ ಸಂಪೂರ್ಣ ಶೂನ್ಯವಾಗಲಿದ್ದು, ರೈತರ ಬದುಕು ಸರ್ವನಾಶವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಖಾಸಗಿ ಸಂಸ್ಥೆಗಳ ಉದ್ದಾರಕ್ಕಾಗಿ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂಬ ಕಳವಳ ವ್ಯಕ್ತಪಡಿಸಿದ ಬಸವರೆಡ್ಡಿ, ಖಾಸಗೀಕರಣದಿಂದ ರೈತರಿಗೆ ಹಾಗೂ ಸಾಮಾನ್ಯ ಜನರ ಬದುಕಿಗೆ ಭಾರಿ ತೊಂದರೆಯಾಗುತ್ತದೆ ಎಂದು ತಿಳಿಸಿದರು. ಕರ್ನಾಟಕ ರಾಜ್ಯ ಸರ್ಕಾರವು ಉಚಿತ ಕರೆಂಟ್ ನೀಡುವ ಭರವಸೆ ನೀಡಿತ್ತು,
ಆದರೆ ಇದೀಗ ಸರ್ಕಾರ ನಡೆಸುವುದು ಕಷ್ಟ ಎಂದು ಹೇಳಿ ಬೆಸ್ಕಾಂ ಅನ್ನು ಟಾಟಾ ಕಂಪನಿಗೆ ಖಾಸಗೀಕರಣ ಮಾಡಲು ಮುಂದಾಗಿದೆ. ಇದರಿಂದ ಸಾಮಾನ್ಯ ಜನರಿಗೆ ಜೀವನ ನಡೆಸುವುದು ಕಷ್ಟವಾಗುತ್ತಿದೆ ಎಂದು ಅವರು ದೂರಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಟಿ. ರವಿಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆ ಬೆಳೆ ಇಲ್ಲದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಬೆಳೆ ವಿಮೆ ಲಭ್ಯವಾಗಿದ್ದರೂ, ಮೊಳಕಾಲ್ಮುರು ತಾಲ್ಲೂಕಿನಲ್ಲಿ ಇದುವರೆಗೂ ಬೆಳೆ ವಿಮೆ ಬಂದಿಲ್ಲ. ಜೊತೆಗೆ, ಒಬ್ಬ ರೈತನಿಗೆ ಪ್ರತಿ ಎಕರೆಗೆ ಕೇವಲ 400 ರೂಪಾಯಿಗಳಂತೆ ಬೆಳೆ ವಿಮೆ ಬಂದಿದೆ ಎಂಬ ಮಾತು ಕೇಳಿಬರುತ್ತಿದೆ ಎಂದರು. ಬೆಸ್ಕಾಂ ಇಲಾಖೆಯನ್ನು ಖಾಸಗೀಕರಣ ಮಾಡಿದರೆ ರೈತರು ಜೀವನ ನಡೆಸುವುದು ಅಸಾಧ್ಯವಾಗಲಿದ್ದು, ರೈತರಿಗೆ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗದೇ
ಕಂಗಾಲಾಗಿದ್ದಾರೆ. ಖಾಸಗೀಕರಣ ಮುಂದುವರಿದರೆ ರೈತರ ಆತ್ಮಹತ್ಯೆಗಳನ್ನು ನೋಡಬೇಕಾಗುತ್ತದೆ ಎಂದು ಅವರು ತೀವ್ರ ಎಚ್ಚರಿಕೆ ನೀಡಿದರು. ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಟಿ. ರವಿಕುಮಾರ್, ಸಮಾಜ ಪರಿವರ್ತನಾ ಸಮಿತಿ ಕಾರ್ಯದರ್ಶಿ ಮರ್ಲಹಳ್ಳಿ ಪರಮೇಶ್, ಸಂಸ್ಥಾಪಕ ನಾಗಸಮುದ್ರ ಮರಿಸ್ವಾಮಿ, ರಾಂಪುರ ಡಿ. ಸಿ. ನಾಗರಾಜ್, ಕೋಟೆ ವೀರಣ್ಣ, ದಾಸಪ್ಪ, ಶ್ರೀನಿವಾಸ್ ಮೂರ್ತಿ, ಮರ್ಲಹಳ್ಳಿ ಮಂಜಣ್ಣ, ಕೋನಸಾಗರ ಪ್ರಕಾಶ್, ರುದ್ರಮ್ಮನಹಳ್ಳಿ ತಿಪ್ಪೇಸ್ವಾಮಿ, ಬಿ. ಜಿ. ಕೆರೆ ಮೂರ್ತಿ, ಕಾಮಯ್ಯ, ಗುಡ್ಡದಹಳ್ಳಿ ಶಿವಣ್ಣ, ತಮ್ಮೆನಹಳ್ಳಿ ತಿಪ್ಪೇಸ್ವಾಮಿ, ಪರೆಸ್ಟ್ ಪಾಪಯ್ಯ, ಬಸಣ್ಣ, ಎನ್. ಗಂಗಣ್ಣ, ನಿಂಗಣ್ಣ, ಈರಣ್ಣ, ಮರ್ಲಹಳ್ಳಿ ದೊಡ್ಡಯ್ಯ, ಸುರಮ್ಮನಹಳ್ಳಿ ರಾಜಣ್ಣ, ಹಿರೇಹಳ್ಳಿ ಮೀಸೆ ತಿಪ್ಪೇಸ್ವಾಮಿ, ಮೊಗಳಹಳ್ಳಿ ಗೌಡರ ತಿಪ್ಪೇಸ್ವಾಮಿ, ಕೆ. ಟಿ. ನಾಗೇಶ್, ತಿಪ್ಪೇಶ್ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.
- ಮೊಳಕಾಲ್ಮುರು ಪಟ್ಟಣದ ತಾಲ್ಲೂಕು ಕಚೇರಿ ಬಳಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಸಮಾಜ ಪರಿವರ್ತನಾ ಸಮಿತಿ ವತಿಯಿಂದ ಬೆಸ್ಕಾಂ ಇಲಾಖೆಯನ್ನು ಖಾಸಗೀಕರಣ ಮಾಡುವುದನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಉಪ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಬಸವರೆಡ್ಡಿ ಅವರು, ದೇಶದ ಪ್ರತಿಯೊಂದು ವ್ಯವಸ್ಥೆಯನ್ನು ಖಾಸಗೀಕರಣ ಮಾಡುವುದರಿಂದ ದೇಶದ ಅಭಿವೃದ್ಧಿ ಸಂಪೂರ್ಣ ಶೂನ್ಯವಾಗಲಿದ್ದು, ರೈತರ ಬದುಕು ಸರ್ವನಾಶವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಖಾಸಗಿ ಸಂಸ್ಥೆಗಳ ಉದ್ದಾರಕ್ಕಾಗಿ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂಬ ಕಳವಳ ವ್ಯಕ್ತಪಡಿಸಿದ ಬಸವರೆಡ್ಡಿ, ಖಾಸಗೀಕರಣದಿಂದ ರೈತರಿಗೆ ಹಾಗೂ ಸಾಮಾನ್ಯ ಜನರ ಬದುಕಿಗೆ ಭಾರಿ ತೊಂದರೆಯಾಗುತ್ತದೆ ಎಂದು ತಿಳಿಸಿದರು. ಕರ್ನಾಟಕ ರಾಜ್ಯ ಸರ್ಕಾರವು ಉಚಿತ ಕರೆಂಟ್ ನೀಡುವ ಭರವಸೆ ನೀಡಿತ್ತು, ಆದರೆ ಇದೀಗ ಸರ್ಕಾರ ನಡೆಸುವುದು ಕಷ್ಟ ಎಂದು ಹೇಳಿ ಬೆಸ್ಕಾಂ ಅನ್ನು ಟಾಟಾ ಕಂಪನಿಗೆ ಖಾಸಗೀಕರಣ ಮಾಡಲು ಮುಂದಾಗಿದೆ. ಇದರಿಂದ ಸಾಮಾನ್ಯ ಜನರಿಗೆ ಜೀವನ ನಡೆಸುವುದು ಕಷ್ಟವಾಗುತ್ತಿದೆ ಎಂದು ಅವರು ದೂರಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಟಿ. ರವಿಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆ ಬೆಳೆ ಇಲ್ಲದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಬೆಳೆ ವಿಮೆ ಲಭ್ಯವಾಗಿದ್ದರೂ, ಮೊಳಕಾಲ್ಮುರು ತಾಲ್ಲೂಕಿನಲ್ಲಿ ಇದುವರೆಗೂ ಬೆಳೆ ವಿಮೆ ಬಂದಿಲ್ಲ. ಜೊತೆಗೆ, ಒಬ್ಬ ರೈತನಿಗೆ ಪ್ರತಿ ಎಕರೆಗೆ ಕೇವಲ 400 ರೂಪಾಯಿಗಳಂತೆ ಬೆಳೆ ವಿಮೆ ಬಂದಿದೆ ಎಂಬ ಮಾತು ಕೇಳಿಬರುತ್ತಿದೆ ಎಂದರು. ಬೆಸ್ಕಾಂ ಇಲಾಖೆಯನ್ನು ಖಾಸಗೀಕರಣ ಮಾಡಿದರೆ ರೈತರು ಜೀವನ ನಡೆಸುವುದು ಅಸಾಧ್ಯವಾಗಲಿದ್ದು, ರೈತರಿಗೆ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗದೇ ಕಂಗಾಲಾಗಿದ್ದಾರೆ. ಖಾಸಗೀಕರಣ ಮುಂದುವರಿದರೆ ರೈತರ ಆತ್ಮಹತ್ಯೆಗಳನ್ನು ನೋಡಬೇಕಾಗುತ್ತದೆ ಎಂದು ಅವರು ತೀವ್ರ ಎಚ್ಚರಿಕೆ ನೀಡಿದರು. ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಟಿ. ರವಿಕುಮಾರ್, ಸಮಾಜ ಪರಿವರ್ತನಾ ಸಮಿತಿ ಕಾರ್ಯದರ್ಶಿ ಮರ್ಲಹಳ್ಳಿ ಪರಮೇಶ್, ಸಂಸ್ಥಾಪಕ ನಾಗಸಮುದ್ರ ಮರಿಸ್ವಾಮಿ, ರಾಂಪುರ ಡಿ. ಸಿ. ನಾಗರಾಜ್, ಕೋಟೆ ವೀರಣ್ಣ, ದಾಸಪ್ಪ, ಶ್ರೀನಿವಾಸ್ ಮೂರ್ತಿ, ಮರ್ಲಹಳ್ಳಿ ಮಂಜಣ್ಣ, ಕೋನಸಾಗರ ಪ್ರಕಾಶ್, ರುದ್ರಮ್ಮನಹಳ್ಳಿ ತಿಪ್ಪೇಸ್ವಾಮಿ, ಬಿ. ಜಿ. ಕೆರೆ ಮೂರ್ತಿ, ಕಾಮಯ್ಯ, ಗುಡ್ಡದಹಳ್ಳಿ ಶಿವಣ್ಣ, ತಮ್ಮೆನಹಳ್ಳಿ ತಿಪ್ಪೇಸ್ವಾಮಿ, ಪರೆಸ್ಟ್ ಪಾಪಯ್ಯ, ಬಸಣ್ಣ, ಎನ್. ಗಂಗಣ್ಣ, ನಿಂಗಣ್ಣ, ಈರಣ್ಣ, ಮರ್ಲಹಳ್ಳಿ ದೊಡ್ಡಯ್ಯ, ಸುರಮ್ಮನಹಳ್ಳಿ ರಾಜಣ್ಣ, ಹಿರೇಹಳ್ಳಿ ಮೀಸೆ ತಿಪ್ಪೇಸ್ವಾಮಿ, ಮೊಗಳಹಳ್ಳಿ ಗೌಡರ ತಿಪ್ಪೇಸ್ವಾಮಿ, ಕೆ. ಟಿ. ನಾಗೇಶ್, ತಿಪ್ಪೇಶ್ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.3
- ಸಂಸದ ಗೋವಿಂದ ಕಾರಜೋಳ ಅವರು ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ವಿದ್ಯುತ್ ಖಾಸಗೀಕರಣವು ಸರ್ಕಾರದ ಹುನ್ನಾರ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರವು ವಿದ್ಯುತ್ ಇಲಾಖೆಯನ್ನು ಟಾಟಾ ಕಂಪನಿಗೆ ನೀಡಿ ಖಾಸಗೀಕರಣ ಮಾಡುವ ಹುನ್ನಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದರು. ಈಗಾಗಲೇ ಖಾಸಗೀಕರಣದ ಕುರಿತು ಜಾಹೀರಾತುಗಳು ಬರುತ್ತಿವೆ ಎಂದು ತಿಳಿಸಿದ ಅವರು, ಸಾರ್ವಜನಿಕರು ಸರ್ಕಾರದ ಈ ಮೋಸದಾಟಕ್ಕೆ ಬಲಿಯಾಗಬಾರದು ಎಂದು ಎಚ್ಚರಿಕೆ ನೀಡಿದರು.1
- ಶೂರು ಆ್ಯಪ್ ನ್ಯೂಸ್ ವರದಿಯ ಫಲಿತಾಂಶವಾಗಿ, ಚಳ್ಳಕೆರೆ ತಾಲೂಕಿನ ಬೊಮ್ಮಸಂದ್ರ ಕೆರೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಸಾಗಾಟದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಸ್ಥಳ ಪರಿಶೀಲನೆ ವೇಳೆ, ಕೆರೆಯೊಳಗೆ ಮರಳು ತೆಗೆಯಲು ಕೊರೆದಿದ್ದ ಆಳವಾದ ಸುರಂಗಗಳು ಹಾಗೂ ಗುಂಡಿಗಳನ್ನು ಕಂಡು ಅಧಿಕಾರಿಗಳು ದಂಗಾಗಿದ್ದಾರೆ. ಚಳ್ಳಕೆರೆ ತಹಶೀಲ್ದಾರ್ ರೇಹಾನ್ ಪಾಷಾ, ಪೊಲೀಸ್ ಠಾಣಾಧಿಕಾರಿ ಕೆ. ಕುಮಾರ್, ಕಸಬ ಕಂದಾಯ ನಿರೀಕ್ಷಕ ತಿಪ್ಪೇಸ್ವಾಮಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಈ ದಾಳಿಯಲ್ಲಿ ಪಾಲ್ಗೊಂಡಿದ್ದರು. ಅವರು ಮರಳು ತುಂಬಿಕೊಂಡು ಬರುತ್ತಿದ್ದ ಎರಡು ಎತ್ತಿನಗಾಡಿಗಳನ್ನು ತಡೆದು, ಮತ್ತೆ ಕೆರೆಯಲ್ಲಿ ಮರಳು ತುಂಬಲು ಬರಬಾರದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಕೆರೆಯಲ್ಲಿನ ಸುರಂಗಗಳನ್ನು ಮುಚ್ಚಿ, ಅಕ್ರಮ ಮಣ್ಣು ಹಾಗೂ ಮರಳು ಸಾಗಾಟವನ್ನು ಸಂಪೂರ್ಣವಾಗಿ ತಡೆಗಟ್ಟಲು ಕೆರೆಯ ಸುತ್ತ ಕಾಲುವೆಗಳನ್ನು ತೆಗೆದು ಎಲ್ಲಾ ಮಾರ್ಗಗಳನ್ನು ಬಂದ್ ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.1
- ಆಸಿಡ್ ದಾಳಿ ಪ್ರಕರಣದಲ್ಲಿ ವೈದ್ಯರ ವಿರುದ್ಧ ಗಂಭೀರ ಆರೋಪ!ನ್ಯಾಯಕ್ಕೆ ಅಡ್ಡಿಯಾದ ವೈದ್ಯರ ವರದಿ? #Chitradurga #AcidAttackCase #JusticeForVictims #AcidAttackSurvivor #MedicalReportControversy #HospitalNegligence #VictimVoice #InvestigationDemand #KarnatakaNews #BreakingNews #ChitradurgaNews #JusticeDelayed #HumanRights #PublicInterest #NewsUpdate #KannadaNews #ViralNews #TruthMustComeOut #DistrictHospital #AcidAttackVictim #ಚಿತ್ರದುರ್ಗ #ಆಸಿಡ್_ದಾಳಿ #ಸಂತ್ರಸ್ತೆಗೆ_ನ್ಯಾಯ #ವೈದ್ಯರ_ವಿರುದ್ಧ_ಆರೋಪ #ಜಿಲ್ಲಾ_ಆಸ್ಪತ್ರೆ #ಸಮಗ್ರ_ತನಿಖೆ #ನ್ಯಾಯಕ್ಕಾಗಿ_ಹೋರಾಟ #ಗಾಯಾಳುಗಳ_ಆಕ್ರೋಶ #ವೈದ್ಯಕೀಯ_ವರದಿ #ಕನ್ನಡ_ಸುದ್ದಿ #ಬ್ರೇಕಿಂಗ್_ನ್ಯೂಸ್ #ಸತ್ಯಾಂಶ_ಬಹಿರಂಗಪಡಿಸಿ #ನ್ಯಾಯ_ಬೇಕು #ಚಿತ್ರದುರ್ಗ_ಸುದ್ದಿ #ಜನರ_ಧ್ವನಿ1
- ತುಂಗಭದ್ರಾ ಜಲಾಶಯದ ಹಳೆಯ ಗೇಟ್‌ಗಳ ಬದಲಾವಣೆ ಕಾರ್ಯವು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಸ್ಪಿಲ್‌ವೇಯಲ್ಲಿ 33 ಹೊಸ ಆಧುನಿಕ ಗೇಟ್‌ಗಳನ್ನು ಅಳವಡಿಸಲಾಗಿದೆ. ಈ ಮಹತ್ವದ ಕಾರ್ಯದಿಂದ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ಒಟ್ಟು ಐದು ರಾಜ್ಯಗಳ ರೈತರಿಗೆ ನೀರಿನ ಭದ್ರತೆ ಮತ್ತಷ್ಟು ಬಲಗೊಂಡಿದೆ ಎಂದು ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಬೋಯಪಾಟಿ ವಿಷ್ಣುವರ್ಧನ್ ತಿಳಿಸಿದ್ದಾರೆ. ಈ ಹೊಸ ವ್ಯವಸ್ಥೆಯ ಐತಿಹಾಸಿಕ ಲೋಕಾರ್ಪಣೆ ಕಾರ್ಯಕ್ರಮವು ನಾಳೆ ನಡೆಯಲಿದ್ದು, ಡಿ.ಕೆ. ಶಿವಕುಮಾರ್, ಚಂದ್ರಬಾಬು ನಾಯ್ಡು ಮತ್ತು ರೇವಂತ್ ರೆಡ್ಡಿ ಅವರ ಸಮ್ಮುಖದಲ್ಲಿ ಜರುಗಲಿದೆ. ಈ ನವೀಕರಣದಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ ಮತ್ತು ಜಲಾಶಯಕ್ಕೆ ಹೊಸ ಜೀವ ಬಂದಂತಾಗಿದೆ.1
- ತುಮಕೂರು ಜಿಲ್ಲೆಯ ಹುಳಿಯಾರಿನ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಪೋಲಿಸ್ ಇಲಾಖೆ ಮತ್ತು ಎಬಿವಿಪಿ ವತಿಯಿಂದ ಪೋಕ್ಸೋ ಕಾಯ್ದೆಯ ಬಗ್ಗೆ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರ ಅವರು ಭಾಗವಹಿಸಿ, ಪೋಕ್ಸೋ ಕಾಯ್ದೆಯ ಗಂಭೀರತೆ ಹಾಗೂ ಹದಿಹರೆಯದ ವಿದ್ಯಾರ್ಥಿನಿಯರ ಸುರಕ್ಷತೆಯ ಕುರಿತು ವಿಸ್ತೃತವಾಗಿ ಮಾತನಾಡಿದರು. ಪವಿತ್ರ ಅವರು ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು ಸಣ್ಣಪುಟ್ಟ ಆಕರ್ಷಣೆಗಳಿಗೆ ಒಳಗಾಗಿ ದಾರಿ ತಪ್ಪುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ದಾಖಲಾಗುತ್ತಿರುವ ಪ್ರಕರಣಗಳನ್ನು ಉಲ್ಲೇಖಿಸಿ, ಅಪ್ರಾಪ್ತ ಹೆಣ್ಣುಮಕ್ಕಳು ಹೆಚ್ಚಾಗಿ ಜೆಸಿಬಿ ಹಾಗೂ ಇತರೆ ವಾಹನಗಳ ಚಾಲಕರು, ಫೋಟೋಗ್ರಾಫರ್‌ಗಳು, ಪಾನಿಪುರಿ ಹಾಗೂ ಚಾಟ್ಸ್ ಅಂಗಡಿಯವರ ಕಡೆಗೆ ಬೇಗನೆ ಆಕರ್ಷಿತರಾಗುತ್ತಿದ್ದಾರೆ ಎಂದು ತಿಳಿಸಿದರು. 'ಇತ್ತೀಚಿನ ಹುಡುಗಿಯರು ಅಂಕಲ್ ಗಳನ್ನು ಇಷ್ಟಪಡುತ್ತಿದ್ದಾರೆ' ಎಂಬ ಗಮನಾರ್ಹ ಅಂಶವನ್ನೂ ಅವರು ಹಂಚಿಕೊಂಡರು. ಪೋಕ್ಸೋ ಕಾಯ್ದೆಯ ಕಾನೂನು ಗಂಭೀರತೆಯನ್ನು ವಿವರಿಸಿದ ಅವರು, ಒಮ್ಮೆ ಈ ಕಾಯ್ದೆಯಡಿ ದೂರು ದಾಖಲಾಗಿ ಆರೋಪಿಯ ವಿರುದ್ಧ ಡಿಎನ್‌ಎ ಪರೀಕ್ಷೆಯ ವರದಿ ಸಾಬೀತಾದರೆ, ನಂತರದ ದಿನಗಳಲ್ಲಿ ಸಂತ್ರಸ್ತೆ ಅಥವಾ ಆಕೆಯ ಪೋಷಕರು ದೂರು ವಾಪಸ್ ಪಡೆಯಲು ಬಯಸಿದರೂ ಸಹ ಆರೋಪಿಗೆ ಕಾನೂನಿನಡಿಯಲ್ಲಿ ಶಿಕ್ಷೆ ಅನುಭವಿಸುವುದು ಖಚಿತ ಎಂದು ಸ್ಪಷ್ಟಪಡಿಸಿದರು. ಡಿಎನ್‌ಎ ವರದಿ ಸಕಾರಾತ್ಮಕವಾಗಿ ಬಂದಲ್ಲಿ ಆರೋಪಿಗೆ ಕಾನೂನಿನ ಪ್ರಕಾರ 20 ರಿಂದ 25 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಆಗುವುದು ಖಚಿತವಾಗುತ್ತದೆ ಎಂದು ಪವಿತ್ರ ಅವರು ತಿಳಿಸಿದರು.1
- ತುಮಕೂರಿನ ಜಯನಗರ ವೆಸ್ಟ್‌ನಲ್ಲಿರುವ ಮಾರುತಿ ಟ್ರೈನಿಂಗ್ ವುಡ್ ವರ್ಕ್‌ನ ವಿಳಾಸವು ಲಭ್ಯವಾಗಿದೆ. ಈ ಸಂಸ್ಥೆಯು ಸ್ಟೋನ್ ಇಂಡಿಯಾ ಬಳಿ ಇದೆ. ಜಯನಗರ ವೆಸ್ಟ್, ತುಮಕೂರು, 572102 ಎಂಬುದು ಈ ಸ್ಥಳದ ಸಂಪೂರ್ಣ ವಿಳಾಸವಾಗಿದೆ.1
- ಚಳ್ಳಕೆರೆ ತಾಲೂಕಿನ ಆಂಧ್ರಪ್ರದೇಶ ಗಡಿಭಾಗದಲ್ಲಿರುವ 87 ವರ್ಷಗಳ ಇತಿಹಾಸ ಹೊಂದಿರುವ ರೇಣುಕಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮೂಲಸೌಕರ್ಯಗಳ ಕೊರತೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಶಾಲಾ ಕಟ್ಟಡಗಳು ಶಿಥಿಲಗೊಂಡಿದ್ದು, ವಿದ್ಯಾರ್ಥಿಗಳು ಮರದ ನೆರಳಿನಲ್ಲಿ ಪಾಠ ಕೇಳುವ ದುಸ್ಥಿತಿಯನ್ನು ಎದುರಿಸುತ್ತಿದ್ದಾರೆ. 1939ರಲ್ಲಿ ಸ್ಥಾಪನೆಯಾದ ಈ ಶಾಲೆಯು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ್ದರೂ, ಇಂದು ಶಿಥಿಲಗೊಂಡ ಕಟ್ಟಡಗಳು, ಕೊಠಡಿಗಳ ಕೊರತೆ ಮತ್ತು ಅಪಾಯಕಾರಿ ತಡೆಗೋಡೆಗಳಿಂದಾಗಿ ಶಿಕ್ಷಣ ವ್ಯವಸ್ಥೆ ಸಂಕಷ್ಟದಲ್ಲಿದೆ. ಶಾಲೆಯ ಐದು ಕೊಠಡಿಗಳು ಸಂಪೂರ್ಣವಾಗಿ ಶಿಥಿಲಗೊಂಡಿರುವುದರಿಂದ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬಯಲು ರಂಗಮಂದಿರ, ಕೂಸಿನ ಮನೆ ಹಾಗೂ ಮರದ ಕೆಳಗೆ ತರಗತಿಗಳನ್ನು ನಡೆಸಲಾಗುತ್ತಿದೆ. ಶಾಲೆಯಲ್ಲಿ 256 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸಮರ್ಪಕ ಕೊಠಡಿಗಳ ಕೊರತೆಯಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಮಳೆಗಾಲದಲ್ಲಿ ಮರದ ಕೆಳಗಿನ ಪಾಠಗಳಿಗೆ ಅಡಚಣೆಯಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, 2005-06ರಲ್ಲಿ ನಿರ್ಮಿಸಲಾದ ಶೌಚಾಲಯ ಕಟ್ಟಡವೂ ಶಿಥಿಲಾವಸ್ಥೆಗೆ ತಲುಪಿದ್ದು, ಮೇಲ್ಛಾವಣಿ ಸೋರಿಕೆ ಮತ್ತು ತುಕ್ಕು ಹಿಡಿದ ಬಾಗಿಲು-ಕಿಟಕಿಗಳಿಂದ ಬಳಕೆಗೆ ಅನಾನುಕೂಲವಾಗಿದೆ. ಈ ಬಗ್ಗೆ ಹಲವು ಬಾರಿ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಶಾಶ್ವತ ಪರಿಹಾರ ದೊರಕಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಶಿಥಿಲ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಕೊಠಡಿಗಳ ನಿರ್ಮಾಣ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವಂತೆ ಗ್ರಾಮಸ್ಥರು ಸರ್ಕಾರಕ್ಕೆ ಒತ್ತಾಯಿಸಿದ್ದು, ಶಿಕ್ಷಣದ ಹಕ್ಕು ಸಮಾನವಾಗಿ ದೊರೆಯಬೇಕಾದರೆ ಗಡಿಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.1