ಕೃಷ್ಣಪುರದಲ್ಲಿ ವೈಕುಂಠ ಏಕಾದಶಿ ಸಡಗರ: ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ಕೃಷ್ಣಪುರ: ಇಲ್ಲಿನ ಪ್ರಸಿದ್ಧ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯನ್ನು ಅತ್ಯಂತ ಭಕ್ತಿ ಸಡಗರದಿಂದ ಆಚರಿಸಲಾಯಿತು. ಪಾಂಚರಾತ್ರ ಆಗಮ ರೀತ್ಯಾ ಸ್ವಾಮಿಗೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸುವ ಮೂಲಕ ಭಕ್ತರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಧಾರ್ಮಿಕ ವಿಧಿವಿಧಾನಗಳು: ದಿನದ ಆರಂಭದಲ್ಲಿ ಬೆಳಿಗ್ಗೆ 'ಕವಾಟೋದ್ಘಾಟನೆ'ಯೊಂದಿಗೆ ಪೂಜಾ ಕಾರ್ಯಕ್ರಮಗಳು ಚಾಲನೆ ಪಡೆದವು. ನಂತರ ಬೆಳಿಗ್ಗೆ 6:30ಕ್ಕೆ ಸ್ವಾಮಿಗೆ ಸುಪ್ರಭಾತ ಸೇವೆ, ಪ್ರಾಕಾರೋತ್ಸವ, ನೈವೇದ್ಯ ಮತ್ತು ಮಹಾಮಂಗಳಾರತಿಗಳನ್ನು ನೆರವೇರಿಸಲಾಯಿತು. ಬಳಿಕ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ವಿಶೇಷ ಪ್ರಸಾದ ವ್ಯವಸ್ಥೆ: ದೇವಸ್ಥಾನಕ್ಕೆ ಆಗಮಿಸಿದ ಸಹಸ್ರಾರು ಭಕ್ತರಿಗೆ ಬೆಳಿಗ್ಗೆ 6 ರಿಂದ ರಾತ್ರಿ 9 ಗಂಟೆಯವರೆಗೆ ನಿರಂತರವಾಗಿ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಬಂದಂತಹ ಎಲ್ಲಾ ಭಕ್ತಾದಿಗಳಿಗೆ ದೇವಸ್ಥಾನದ ವತಿಯಿಂದ ಉಚಿತವಾಗಿ ಲಾಡು ವಿತರಣೆ ಹಾಗೂ ಅವಲಕ್ಕಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ನಡೆದ ಕಾರ್ಯಕ್ರಮಗಳು: ರಾತ್ರಿ 9 ಗಂಟೆಗೆ ಮಹಾಮಂಗಳಾರತಿ ನೆರವೇರಿಸಿ, ನಂತರ 9:30ಕ್ಕೆ ಉತ್ಸವ ಮೂರ್ತಿಯನ್ನು ಕೆಳಗಿಳಿಸಿ ಸ್ವಾಮಿಗೆ 'ಏಕಾಂತ ಸೇವೆ'ಯನ್ನು ಮಾಡಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮಸ್ಥರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ 'ಚಕ್ರ ಭಜನೆ' ಕಾರ್ಯಕ್ರಮವು ಭಕ್ತರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನದ ಅರ್ಚಕರು, "ಪ್ರತಿ ವರ್ಷದಂತೆ ಈ ವರ್ಷವೂ ವೈಕುಂಠ ಏಕಾದಶಿಯನ್ನು ಸಡಗರದಿಂದ ಆಚರಿಸಲಾಗುತ್ತಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ," ಎಂದು ತಿಳಿಸಿದರು

- ಮುಂಬರುವ ಹೋಸ ವರ್ಷದ ದಿನಕ್ಕೆ ನಗರದ ಕಮಿಷನರ್ ಸಾಹೇಬರ ಸಿಂಪಲ್ ಕಡಕ್ ಇಂಟ್ರಕ್ಷನ್ ಇರತ್ತೆ...1
- ಚಿತ್ರದುರ್ಗದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಗೀಸರ್ ಸೋರಿಕೆಯಾಗಿ ಉಸಿರುಗಟ್ಟಿ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಿಎಸ್ ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ನೂತನ (20) ಗ್ಯಾಸ್ ಗೀಸರ್ ಸೋರಿಕೆಯಾಗಿ ಮೃತಪಟ್ಟಿದ್ದಾರೆ. ವೈದ್ಯರು ಸಾವು ಖಚಿತ ಪಡಿಸಿ ಶವಾಗಾರಕ್ಕೆ ಸ್ಥಳಾಂತರಿಸಲು ಯತ್ನಿಸಿದ್ದಾರೆ.ಪೋಷಕರು ಪೋಸ್ಟ್ ಮಾರ್ಟಂ ಆಗದೆ ಶವವನ್ನು ಬೈಕ್ ಮೇಲೆ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಮರಣೋತ್ತರ ಪರೀಕ್ಷೆಗೆ ವಿರೋಧಿಸಿ ಶವ ಕೊಂಡೊಯ್ದಿದ್ದಾರೆ. ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.1
- ಚಿತ್ರದುರ್ಗದಲ್ಲಿ ಯುವತಿಯ ಉಸಿರು ನಿಲ್ಲಿಸಿದ ಗ್ಯಾಸ್ ಗೀಜರ್1
- ಶಿಡ್ಲಘಟ್ಟ ನಗರದಲ್ಲಿ ರಾಷ್ಟ್ರಕವಿ ಕುವೆಂಪು ಜಯಂತಿ ಆಚರಣೆ! ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ವಿಶ್ವ ಮಾನವ ದಿನಾಚರಣೆ!1
- ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿಗಳಲ್ಲಿ ಟ್ರೋಪಿ ಗೆದ್ದ ಮಳ್ಳೂರು ಗ್ರಾಮದ ಜೈಭೀಮ್ ಬಾಯ್ಸ್ ಟೀಮ್2
- ಕೋಟೆ ಕಲ್ಲೂರು ಚನ್ನಕೇಶವ ದೇವಾಲಯದಲ್ಲಿ ಪೂಜೆಗಾಗಿ ಪೈಪೋಟಿ ತಹಸಿಲ್ದಾರ್ ಸಮ್ಮಖದಲ್ಲಿ ಮುಜರಾಯಿ ಇಲಾಖೆ ವಶಕ್ಕೆ ಪಡೆಯಲು ನಿರ್ಧಾರ.1
- ಶಿಡ್ಲಘಟ್ಟದ ನಡಿಪಿನಾಯಕನಹಳ್ಳಿಯಲ್ಲಿ ಒಂಟಿ ಮಹಿಳೆ ಮೇಲೆ ಮಂಕಿ ಕ್ಯಾಪ್ ಧರಿಸಿ ಬಂದ ದುಷ್ಕರ್ಮಿಗಳು, ಡೆಡ್ಲಿ ಅಟ್ಯಾಕ್!1
- ವೈಭವಯುತ ವೈಕುಂಠ ಏಕಾದಶಿ : ಸಹಸ್ರಾರು ಭಕ್ತರಿಂದ ವೈಕುಂಠ ನಾಥನ ದರ್ಶನ ಭದ್ರಾವತಿ: ನಗರದ ಪ್ರಮುಖ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ಮಂಗಳವಾರ ವೈಕುಂಠ ಏಕಾದಶಿ ವಿಜೃಂಭಣೆಯಿಂದ ಜರುಗಿತು. ಸಹಸ್ರಾರು ಭಕ್ತರು ಬೆಳಿಗ್ಗೆಯಿಂದ ಸ್ವಾಮಿಯ ದರ್ಶನಕ್ಕೆ ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತು. ಇದಕ್ಕೆ ಪೂರಕವಾಗಿ ದೇವಸ್ಥಾನ ಆಡಳಿತ ಮಂಡಳಿಗಳು ಸಹ ಸಿದ್ದತೆಗಳನ್ನು ಕೈಗೊಂಡಿದ್ದವು. ನಗರದ ಮಿಲಿಟರಿ ಕ್ಯಾಂಪ್ ನಲ್ಲಿರುವ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನದಲ್ಲಿ ಮಾಡಿರುವ ಅಲಂಕಾರ ಮಾಡಲಾಗಿತ್ತು.1
- *ಭಾರತ ನಲ್ಲಿ ವೈರಲ್*1