logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಸೇಡಂ ಜಿಲ್ಲೆಗಾಗಿ ಮೊಳಗಿದ ಕಹಳೆ. ಹೋರಾಟ ಸಂಘ ಅಸ್ತಿತ್ವಕ್ಕೆ .. ಅನೇಕ‌ ವರ್ಷಗಳಿಂದ ಸೇಡಂ ಜಿಲ್ಲೆಯಾಗಿಸುವ ಕನಸಿಗೆ ಈಗ ಅಧಿಕೃತ ಯೋಜನೆ ರೂಪಿಸಿದಂತಾಗಿದೆ. ಈ ಹಿನ್ನೆಲೆಯಲ್ಲಿ ಸೇಡಂ ಜಿಲ್ಲಾ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಪಟ್ಟಣದಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಸೇಡಂ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಹೋರಾಟದ ರೂಪುರೇಷೆ ಕೈಗೊಳ್ಳಲಾಯಿತು ಅಲ್ಲದೆ ಇದೇ ವೇಳೆ ನೂತನ ಪದಾಧಿಕಾರಿಗಳನ್ನು ಸಹ ನೇಮಕ ಮಾಡಲಾಗಿದ್ದು, ಭೀಮರೆಡ್ಡಿ ಪಾಟೀಲ ಜಿಲ್ಲೇಡಪಲ್ಲಿ (ಗೌರವ ಅಧ್ಯಕ್ಷರು). ವಿಜಯಕುಮಾರ ಆಡಕಿ (ಅಧ್ಯಕ್ಷರು).ಮಹೇಶ ಪಾಟೀಲ‌ ತರ್ನಳ್ಳಿ (ಉಪಾಧ್ಯಕ್ಷರು).ಅನೀಲರೆಡ್ಡಿ ಸಂಗೆಂಪಲ್ಲಿ (ಉಪಾಧ್ಯಕ್ಷರು. ಪ್ರೇಮ ಗಡಾಳೆ (ಉಪಾಧ್ಯಕ್ಷರು). ಕಾಶಪ್ಪ ರೆಬ್ಬನಪಲ್ಲಿ (ಉಪಾಧ್ಯಕ್ಷರು. ಮುಕುಂದ ದೇಶಪಾಂಡೆ (ಉಪಾಧ್ಯಕ್ಷ). ಶ್ರಿನಿವಾಸ ಕಾಸೋಜು (ಖಜಾಂಚಿ). ರಮೇಶ ಮಾಲಪಾಣಿ (ಸಹ ಖಜಾಂಚಿ). ವಿಜಯಕುಮಾರ ಸೂರವಾರ (ಪ್ರಧಾನ ಕಾರ್ಯದರ್ಶಿ). ಶಿವಾರೆಡ್ಡಿ ಗೌಡನಹಳ್ಳಿ (ಕಾರ್ಯದರ್ಶಿ). ಅಬ್ದುಲ ಸತ್ತಾರ (ಸಹ ಕಾರ್ಯದರ್ಶಿ). ಸಂತೋಷ ಪೂಜಾರಿ ನೀಲಹಳ್ಳಿ (ಸಂಘಟನಾ ಕಾರ್ಯದರ್ಶಿ). ಜಗನ್ನಾಥ ಕೋಡ್ಲಾ (ಸಹ ಸಂಘಟನಾ ಕಾರ್ಯದರ್ಶಿ). ರಮೇಶ ಶಿಲಾರಕೋಟ (ಕಾನೂನು ಸಲಹೆಗಾರ) ಅವರನ್ನು ಅಯ್ಕೆ ಮಾಡಲಾಗಿದೆ. ಈ ವೇಳೆ ನೂತನ ಅಧ್ಯಕ್ಷ‌ ವಿಜಯಕುಮಾರ ಆಡಕಿ ಮಾತನಾಡಿ, ಸೇಡಂ ತಾಲೂಕು" ಜಿಲ್ಲೆಯಾಗುವ ಬಹುತೇಕ ಲಕ್ಷಣಗಳು ಹೊಂದಿದೆ. ರಾಷ್ಟ್ರಕೂಟರ ರಾಜಧಾನಿಯಾಗಿ ಮೆರೆದ ಈ ನೆಲ ಪ್ರತಿನಿತ್ಯ ಒಂದಿಲ್ಲೊಂದು ಕಾರಣಕ್ಕೆ ರಾಜ್ಯಮಟ್ಟದಲ್ಲಿ‌ ಸುದ್ದಿಯಾಗುತ್ತದೆ. ಜಿಲ್ಲಾ ಮಟ್ಟದಲ್ಲಿರಬೇಕಾದ ಅನೇಕ ಕಚೇರಿಗಳು ಈಗಾಗಲೇ ನಮ್ಮಲ್ಲಿವೆ. ಜಿಲ್ಲೆಯಾಗಿಸುವ ಕನಸಿಗೆ ಶಕ್ತಿ ತುಂಬುವಂತೆ ಈಗಾಗಲೇ ಪುರಸಭೆ ನಗರಸಭೆಯಾಗಿ ಮಾರ್ಪಾಡಾಗಿದೆ. ಸಾಮಾಜಿಕ, ಧಾರ್ಮಿಕ, ಸಂಘಟನಾತ್ಮಕ, ಸಾಹಿತ್ಯ, ರಂಗಭೂಮಿ‌, ಕಲೆ ಹೀಗೆ ಹತ್ತು ಹಲವಾರು ರೀತಿಯಿಂದ ಸೇಡಂ ನೆಲ ಗುರುತಿಸಿಕೊಳ್ಳುತ್ತದೆ. ಹಾಗಾಗಿ ಅನೇಕ ಯೋಜನೆ, ಯೋಚನೆಗಳನ್ನು ಮುಂದಿಟ್ಟುಕೊಂಡು "*ಸೇಡಮ್‌ ಜಿಲ್ಲಾ‌‌ ಹೋರಾಟ ಸಮಿತಿ*" ಯನ್ನು ಹುಟ್ಟುಹಾಕಿದ್ದೇವೆ. ಮುಂದಿನ ಯೋಜನೆಗಳನ್ನು ಬರುವ ದಿನಗಳಲ್ಲಿ ಪರಿಚಯಿಸುತ್ತೇವೆ ಎಂದು ಹೇಳಿದ್ದಾರೆ.

49 min ago
user_Suddi - Junction
Suddi - Junction
Voice of people ಸೇಡಂ, ಕಲಬುರಗಿ, ಕರ್ನಾಟಕ•

More news from ಕರ್ನಾಟಕ and nearby areas
  • ಸೇಡಂ ಜಿಲ್ಲೆಗಾಗಿ ಮೊಳಗಿದ ಕಹಳೆ. ಹೋರಾಟ ಸಂಘ ಅಸ್ತಿತ್ವಕ್ಕೆ .. ಅನೇಕ‌ ವರ್ಷಗಳಿಂದ ಸೇಡಂ ಜಿಲ್ಲೆಯಾಗಿಸುವ ಕನಸಿಗೆ ಈಗ ಅಧಿಕೃತ ಯೋಜನೆ ರೂಪಿಸಿದಂತಾಗಿದೆ. ಈ ಹಿನ್ನೆಲೆಯಲ್ಲಿ ಸೇಡಂ ಜಿಲ್ಲಾ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಪಟ್ಟಣದಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಸೇಡಂ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಹೋರಾಟದ ರೂಪುರೇಷೆ ಕೈಗೊಳ್ಳಲಾಯಿತು ಅಲ್ಲದೆ ಇದೇ ವೇಳೆ ನೂತನ ಪದಾಧಿಕಾರಿಗಳನ್ನು ಸಹ ನೇಮಕ ಮಾಡಲಾಗಿದ್ದು, ಭೀಮರೆಡ್ಡಿ ಪಾಟೀಲ ಜಿಲ್ಲೇಡಪಲ್ಲಿ (ಗೌರವ ಅಧ್ಯಕ್ಷರು). ವಿಜಯಕುಮಾರ ಆಡಕಿ (ಅಧ್ಯಕ್ಷರು).ಮಹೇಶ ಪಾಟೀಲ‌ ತರ್ನಳ್ಳಿ (ಉಪಾಧ್ಯಕ್ಷರು).ಅನೀಲರೆಡ್ಡಿ ಸಂಗೆಂಪಲ್ಲಿ (ಉಪಾಧ್ಯಕ್ಷರು. ಪ್ರೇಮ ಗಡಾಳೆ (ಉಪಾಧ್ಯಕ್ಷರು). ಕಾಶಪ್ಪ ರೆಬ್ಬನಪಲ್ಲಿ (ಉಪಾಧ್ಯಕ್ಷರು. ಮುಕುಂದ ದೇಶಪಾಂಡೆ (ಉಪಾಧ್ಯಕ್ಷ). ಶ್ರಿನಿವಾಸ ಕಾಸೋಜು (ಖಜಾಂಚಿ). ರಮೇಶ ಮಾಲಪಾಣಿ (ಸಹ ಖಜಾಂಚಿ). ವಿಜಯಕುಮಾರ ಸೂರವಾರ (ಪ್ರಧಾನ ಕಾರ್ಯದರ್ಶಿ). ಶಿವಾರೆಡ್ಡಿ ಗೌಡನಹಳ್ಳಿ (ಕಾರ್ಯದರ್ಶಿ). ಅಬ್ದುಲ ಸತ್ತಾರ (ಸಹ ಕಾರ್ಯದರ್ಶಿ). ಸಂತೋಷ ಪೂಜಾರಿ ನೀಲಹಳ್ಳಿ (ಸಂಘಟನಾ ಕಾರ್ಯದರ್ಶಿ). ಜಗನ್ನಾಥ ಕೋಡ್ಲಾ (ಸಹ ಸಂಘಟನಾ ಕಾರ್ಯದರ್ಶಿ). ರಮೇಶ ಶಿಲಾರಕೋಟ (ಕಾನೂನು ಸಲಹೆಗಾರ) ಅವರನ್ನು ಅಯ್ಕೆ ಮಾಡಲಾಗಿದೆ. ಈ ವೇಳೆ ನೂತನ ಅಧ್ಯಕ್ಷ‌ ವಿಜಯಕುಮಾರ ಆಡಕಿ ಮಾತನಾಡಿ, ಸೇಡಂ ತಾಲೂಕು" ಜಿಲ್ಲೆಯಾಗುವ ಬಹುತೇಕ ಲಕ್ಷಣಗಳು ಹೊಂದಿದೆ. ರಾಷ್ಟ್ರಕೂಟರ ರಾಜಧಾನಿಯಾಗಿ ಮೆರೆದ ಈ ನೆಲ ಪ್ರತಿನಿತ್ಯ ಒಂದಿಲ್ಲೊಂದು ಕಾರಣಕ್ಕೆ ರಾಜ್ಯಮಟ್ಟದಲ್ಲಿ‌ ಸುದ್ದಿಯಾಗುತ್ತದೆ. ಜಿಲ್ಲಾ ಮಟ್ಟದಲ್ಲಿರಬೇಕಾದ ಅನೇಕ ಕಚೇರಿಗಳು ಈಗಾಗಲೇ ನಮ್ಮಲ್ಲಿವೆ. ಜಿಲ್ಲೆಯಾಗಿಸುವ ಕನಸಿಗೆ ಶಕ್ತಿ ತುಂಬುವಂತೆ ಈಗಾಗಲೇ ಪುರಸಭೆ ನಗರಸಭೆಯಾಗಿ ಮಾರ್ಪಾಡಾಗಿದೆ. ಸಾಮಾಜಿಕ, ಧಾರ್ಮಿಕ, ಸಂಘಟನಾತ್ಮಕ, ಸಾಹಿತ್ಯ, ರಂಗಭೂಮಿ‌, ಕಲೆ ಹೀಗೆ ಹತ್ತು ಹಲವಾರು ರೀತಿಯಿಂದ ಸೇಡಂ ನೆಲ ಗುರುತಿಸಿಕೊಳ್ಳುತ್ತದೆ. ಹಾಗಾಗಿ ಅನೇಕ ಯೋಜನೆ, ಯೋಚನೆಗಳನ್ನು ಮುಂದಿಟ್ಟುಕೊಂಡು "*ಸೇಡಮ್‌ ಜಿಲ್ಲಾ‌‌ ಹೋರಾಟ ಸಮಿತಿ*" ಯನ್ನು ಹುಟ್ಟುಹಾಕಿದ್ದೇವೆ. ಮುಂದಿನ ಯೋಜನೆಗಳನ್ನು ಬರುವ ದಿನಗಳಲ್ಲಿ ಪರಿಚಯಿಸುತ್ತೇವೆ ಎಂದು ಹೇಳಿದ್ದಾರೆ.
    1
    ಸೇಡಂ ಜಿಲ್ಲೆಗಾಗಿ ಮೊಳಗಿದ ಕಹಳೆ.
ಹೋರಾಟ ಸಂಘ ಅಸ್ತಿತ್ವಕ್ಕೆ ..
ಅನೇಕ‌ ವರ್ಷಗಳಿಂದ ಸೇಡಂ ಜಿಲ್ಲೆಯಾಗಿಸುವ ಕನಸಿಗೆ ಈಗ ಅಧಿಕೃತ ಯೋಜನೆ ರೂಪಿಸಿದಂತಾಗಿದೆ. ಈ ಹಿನ್ನೆಲೆಯಲ್ಲಿ ಸೇಡಂ ಜಿಲ್ಲಾ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
ಪಟ್ಟಣದಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಸೇಡಂ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಹೋರಾಟದ ರೂಪುರೇಷೆ ಕೈಗೊಳ್ಳಲಾಯಿತು ಅಲ್ಲದೆ ಇದೇ ವೇಳೆ  ನೂತನ ಪದಾಧಿಕಾರಿಗಳನ್ನು ಸಹ ನೇಮಕ ಮಾಡಲಾಗಿದ್ದು,
ಭೀಮರೆಡ್ಡಿ ಪಾಟೀಲ ಜಿಲ್ಲೇಡಪಲ್ಲಿ (ಗೌರವ ಅಧ್ಯಕ್ಷರು). ವಿಜಯಕುಮಾರ ಆಡಕಿ (ಅಧ್ಯಕ್ಷರು).ಮಹೇಶ ಪಾಟೀಲ‌ ತರ್ನಳ್ಳಿ (ಉಪಾಧ್ಯಕ್ಷರು).ಅನೀಲರೆಡ್ಡಿ ಸಂಗೆಂಪಲ್ಲಿ (ಉಪಾಧ್ಯಕ್ಷರು. ಪ್ರೇಮ ಗಡಾಳೆ (ಉಪಾಧ್ಯಕ್ಷರು). ಕಾಶಪ್ಪ ರೆಬ್ಬನಪಲ್ಲಿ (ಉಪಾಧ್ಯಕ್ಷರು. ಮುಕುಂದ ದೇಶಪಾಂಡೆ (ಉಪಾಧ್ಯಕ್ಷ). ಶ್ರಿನಿವಾಸ ಕಾಸೋಜು (ಖಜಾಂಚಿ). ರಮೇಶ ಮಾಲಪಾಣಿ (ಸಹ ಖಜಾಂಚಿ). ವಿಜಯಕುಮಾರ ಸೂರವಾರ (ಪ್ರಧಾನ ಕಾರ್ಯದರ್ಶಿ).  ಶಿವಾರೆಡ್ಡಿ ಗೌಡನಹಳ್ಳಿ (ಕಾರ್ಯದರ್ಶಿ). ಅಬ್ದುಲ ಸತ್ತಾರ (ಸಹ ಕಾರ್ಯದರ್ಶಿ).  ಸಂತೋಷ ಪೂಜಾರಿ ನೀಲಹಳ್ಳಿ (ಸಂಘಟನಾ ಕಾರ್ಯದರ್ಶಿ). ಜಗನ್ನಾಥ ಕೋಡ್ಲಾ (ಸಹ ಸಂಘಟನಾ ಕಾರ್ಯದರ್ಶಿ). ರಮೇಶ ಶಿಲಾರಕೋಟ (ಕಾನೂನು ಸಲಹೆಗಾರ) ಅವರನ್ನು ಅಯ್ಕೆ ಮಾಡಲಾಗಿದೆ. 
ಈ ವೇಳೆ ನೂತನ ಅಧ್ಯಕ್ಷ‌ ವಿಜಯಕುಮಾರ ಆಡಕಿ ಮಾತನಾಡಿ, ಸೇಡಂ ತಾಲೂಕು" ಜಿಲ್ಲೆಯಾಗುವ ಬಹುತೇಕ ಲಕ್ಷಣಗಳು ಹೊಂದಿದೆ.
ರಾಷ್ಟ್ರಕೂಟರ ರಾಜಧಾನಿಯಾಗಿ ಮೆರೆದ ಈ ನೆಲ ಪ್ರತಿನಿತ್ಯ  ಒಂದಿಲ್ಲೊಂದು ಕಾರಣಕ್ಕೆ ರಾಜ್ಯಮಟ್ಟದಲ್ಲಿ‌ ಸುದ್ದಿಯಾಗುತ್ತದೆ. ಜಿಲ್ಲಾ ಮಟ್ಟದಲ್ಲಿರಬೇಕಾದ ಅನೇಕ ಕಚೇರಿಗಳು ಈಗಾಗಲೇ ನಮ್ಮಲ್ಲಿವೆ. ಜಿಲ್ಲೆಯಾಗಿಸುವ ಕನಸಿಗೆ ಶಕ್ತಿ ತುಂಬುವಂತೆ ಈಗಾಗಲೇ ಪುರಸಭೆ ನಗರಸಭೆಯಾಗಿ ಮಾರ್ಪಾಡಾಗಿದೆ. ಸಾಮಾಜಿಕ, ಧಾರ್ಮಿಕ, ಸಂಘಟನಾತ್ಮಕ, ಸಾಹಿತ್ಯ, ರಂಗಭೂಮಿ‌, ಕಲೆ ಹೀಗೆ ಹತ್ತು ಹಲವಾರು ರೀತಿಯಿಂದ ಸೇಡಂ ನೆಲ ಗುರುತಿಸಿಕೊಳ್ಳುತ್ತದೆ.
ಹಾಗಾಗಿ ಅನೇಕ ಯೋಜನೆ, ಯೋಚನೆಗಳನ್ನು ಮುಂದಿಟ್ಟುಕೊಂಡು "*ಸೇಡಮ್‌ ಜಿಲ್ಲಾ‌‌ ಹೋರಾಟ ಸಮಿತಿ*" ಯನ್ನು ಹುಟ್ಟುಹಾಕಿದ್ದೇವೆ. ಮುಂದಿನ ಯೋಜನೆಗಳನ್ನು ಬರುವ ದಿನಗಳಲ್ಲಿ ಪರಿಚಯಿಸುತ್ತೇವೆ ಎಂದು ಹೇಳಿದ್ದಾರೆ.
    user_Suddi - Junction
    Suddi - Junction
    Voice of people ಸೇಡಂ, ಕಲಬುರಗಿ, ಕರ್ನಾಟಕ•
    49 min ago
  • ಚಿಂಚೋಳಿ ತಹಸೀಲ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆ ಚಿಂಚೋಳಿ: ಆಗಸ್ಟ್ 15ರಂದು ನಡೆಯಲಿರುವ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಚಿಂಚೋಳಿ ತಹಸೀಲ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಚರ್ಚಿಸಿದರು.
    3
    ಚಿಂಚೋಳಿ ತಹಸೀಲ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆ
ಚಿಂಚೋಳಿ: ಆಗಸ್ಟ್ 15ರಂದು ನಡೆಯಲಿರುವ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಚಿಂಚೋಳಿ ತಹಸೀಲ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಚರ್ಚಿಸಿದರು.
    user_VISION NEWS KALABURAGI
    VISION NEWS KALABURAGI
    Local News Reporter ಚಿಂಚೋಳಿ, ಕಲಬುರಗಿ, ಕರ್ನಾಟಕ•
    10 hrs ago
  • .ಗ್ಯಾಸ್ ಸೋರಿಕೆ ದುರಂತ: ಮೂವರು ಕಾರ್ಮಿಕರ ದುರ್ಮರಣ ಕಡೇಚೂರ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯಲ್ಲಿ ವಿಷಾನಿಲ ಸೋರಿಕೆ; ಸುರಕ್ಷತಾ ಕ್ರಮಗಳ ಕುರಿತು ಪ್ರಶ್ನೆ – ತನಿಖೆ ಆರಂಭ ಯಾದಗೀರ, ಆ.5: ಜಿಲ್ಲೆಯ ಯಾದಗೀರ ತಾಲೂಕಿನ ಕಡೇಚೂರ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ರಾಸಾಯನಿಕ ಕಂಪನಿಯೊಂದರಲ್ಲಿ ಸಂಭವಿಸಿದ ವಿಷಾನಿಲ (ಗ್ಯಾಸ್) ಸೋರಿಕೆ ದುರಂತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬುಧವಾರ ಮುಂಜಾನೆ ನಡೆದಿದ್ದು, ಕೈಗಾರಿಕಾ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಘಟನೆಯ ಬಳಿಕ ಕಂಪನಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಕಾರ್ಮಿಕರ ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಮೃತರನ್ನು ವಿಕ್ರಮ್ ಸಿಂಗ್ (30), ಸಂಜಯ್ ಸಿಂಗ್ (29) ಹಾಗೂ ಗಣೇಶ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕಂಪನಿಯ ಉತ್ಪಾದನಾ ಘಟಕದಲ್ಲಿ ಕಾರ್ಮಿಕರು ತಮ್ಮ ನಿತ್ಯದ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ವಿಷಾನಿಲ ಸೋರಿಕೆಯಾಗಿದ್ದು, ಮೂವರು ಕಾರ್ಮಿಕರು ಉಸಿರಾಟದ ತೊಂದರೆಯಿಂದ ತೀವ್ರ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸೈದಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಂಬಂಧಿತ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳವನ್ನು ಭದ್ರತಾ ವಲಯವಾಗಿ ಪರಿಗಣಿಸಿ, ಸೋರಿಕೆಗೆ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಲಾಗಿದೆ. ತಾಂತ್ರಿಕ ದೋಷ, ನಿರ್ವಹಣೆಯ ಲೋಪ ಅಥವಾ ಸುರಕ್ಷತಾ ನಿಯಮಗಳ ಉಲ್ಲಂಘನೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ದುರಂತದ ಹಿನ್ನೆಲೆಯಲ್ಲಿ ಕಂಪನಿಯಲ್ಲಿನ ಸುರಕ್ಷತಾ ವ್ಯವಸ್ಥೆಗಳು ಸಮರ್ಪಕವಾಗಿದ್ದವೆಯೇ, ಕಾರ್ಮಿಕರಿಗೆ ಅಗತ್ಯವಾದ ಸುರಕ್ಷತಾ ಸಾಧನಗಳನ್ನು ಒದಗಿಸಲಾಗಿತ್ತೇ ಹಾಗೂ ತುರ್ತು ಪರಿಸ್ಥಿತಿ ಎದುರಿಸಲು ಸೂಕ್ತ ವ್ಯವಸ್ಥೆ ಇತ್ತೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಕಾರ್ಮಿಕ ಸಂಘಟನೆಗಳು ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ. ಜಿಲ್ಲಾಡಳಿತವೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಿತ ಇಲಾಖೆಗಳ ಮೂಲಕ ಸಮಗ್ರ ತನಿಖೆಗೆ ಸೂಚನೆ ನೀಡಲಾಗಿದೆ. ಮೃತ ಕಾರ್ಮಿಕರ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸುವ ಕುರಿತು ಸರ್ಕಾರ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಸಂಬಂಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ತನಿಖಾ ವರದಿ ಬಳಿಕ ಗ್ಯಾಸ್ ಸೋರಿಕೆಗೆ ನಿಖರ ಕಾರಣ ಹಾಗೂ ಜವಾಬ್ದಾರಿಯ ಕುರಿತು ಸ್ಪಷ್ಟ ಚಿತ್ರಣ ದೊರೆಯುವ ನಿರೀಕ್ಷೆಯಿದೆ.. ವರದಿ ನಿಜಾಮುದ್ದಿನ್ ಯಾದಗಿರಿ
    4
    .ಗ್ಯಾಸ್ ಸೋರಿಕೆ ದುರಂತ: ಮೂವರು ಕಾರ್ಮಿಕರ ದುರ್ಮರಣ
ಕಡೇಚೂರ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯಲ್ಲಿ ವಿಷಾನಿಲ ಸೋರಿಕೆ; ಸುರಕ್ಷತಾ ಕ್ರಮಗಳ ಕುರಿತು ಪ್ರಶ್ನೆ – ತನಿಖೆ ಆರಂಭ
ಯಾದಗೀರ, ಆ.5: ಜಿಲ್ಲೆಯ ಯಾದಗೀರ ತಾಲೂಕಿನ ಕಡೇಚೂರ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ರಾಸಾಯನಿಕ ಕಂಪನಿಯೊಂದರಲ್ಲಿ ಸಂಭವಿಸಿದ ವಿಷಾನಿಲ (ಗ್ಯಾಸ್) ಸೋರಿಕೆ ದುರಂತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬುಧವಾರ ಮುಂಜಾನೆ ನಡೆದಿದ್ದು, ಕೈಗಾರಿಕಾ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಘಟನೆಯ ಬಳಿಕ ಕಂಪನಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಕಾರ್ಮಿಕರ ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.
ಮೃತರನ್ನು ವಿಕ್ರಮ್ ಸಿಂಗ್ (30), ಸಂಜಯ್ ಸಿಂಗ್ (29) ಹಾಗೂ ಗಣೇಶ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕಂಪನಿಯ ಉತ್ಪಾದನಾ ಘಟಕದಲ್ಲಿ ಕಾರ್ಮಿಕರು ತಮ್ಮ ನಿತ್ಯದ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ವಿಷಾನಿಲ ಸೋರಿಕೆಯಾಗಿದ್ದು, ಮೂವರು ಕಾರ್ಮಿಕರು ಉಸಿರಾಟದ ತೊಂದರೆಯಿಂದ ತೀವ್ರ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸೈದಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಂಬಂಧಿತ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳವನ್ನು ಭದ್ರತಾ ವಲಯವಾಗಿ ಪರಿಗಣಿಸಿ, ಸೋರಿಕೆಗೆ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಲಾಗಿದೆ. ತಾಂತ್ರಿಕ ದೋಷ, ನಿರ್ವಹಣೆಯ ಲೋಪ ಅಥವಾ ಸುರಕ್ಷತಾ ನಿಯಮಗಳ ಉಲ್ಲಂಘನೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ದುರಂತದ ಹಿನ್ನೆಲೆಯಲ್ಲಿ ಕಂಪನಿಯಲ್ಲಿನ ಸುರಕ್ಷತಾ ವ್ಯವಸ್ಥೆಗಳು ಸಮರ್ಪಕವಾಗಿದ್ದವೆಯೇ, ಕಾರ್ಮಿಕರಿಗೆ ಅಗತ್ಯವಾದ ಸುರಕ್ಷತಾ ಸಾಧನಗಳನ್ನು ಒದಗಿಸಲಾಗಿತ್ತೇ ಹಾಗೂ ತುರ್ತು ಪರಿಸ್ಥಿತಿ ಎದುರಿಸಲು ಸೂಕ್ತ ವ್ಯವಸ್ಥೆ ಇತ್ತೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಕಾರ್ಮಿಕ ಸಂಘಟನೆಗಳು ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ.
ಜಿಲ್ಲಾಡಳಿತವೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಿತ ಇಲಾಖೆಗಳ ಮೂಲಕ ಸಮಗ್ರ ತನಿಖೆಗೆ ಸೂಚನೆ ನೀಡಲಾಗಿದೆ. ಮೃತ ಕಾರ್ಮಿಕರ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸುವ ಕುರಿತು ಸರ್ಕಾರ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಸಂಬಂಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ತನಿಖಾ ವರದಿ ಬಳಿಕ ಗ್ಯಾಸ್ ಸೋರಿಕೆಗೆ ನಿಖರ ಕಾರಣ ಹಾಗೂ ಜವಾಬ್ದಾರಿಯ ಕುರಿತು ಸ್ಪಷ್ಟ ಚಿತ್ರಣ ದೊರೆಯುವ ನಿರೀಕ್ಷೆಯಿದೆ..
ವರದಿ ನಿಜಾಮುದ್ದಿನ್ ಯಾದಗಿರಿ
    user_Nizamuddin
    Nizamuddin
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    46 min ago
  • ಕಲಬುರಗಿ:ಎರಡನೇ ಸಚಿವ ಸಂಪುಟ ವಿಸ್ತರಣೆ- ಶಾಸಕ ಬಸವರಾಜ್ ಮತ್ತಿಮೂಡ್ ಲೇವಡಿ ಡಿಕೆ ಶಿವಕುಮಾರ್ ಅವರ ಮಂತ್ರಿ ಮಂಡಲದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಗ್ರಾಮೀಣ ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ್ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.ಡಿಕೆ ಸಂಪುಟ ವಿಸ್ತರಣೆಯನ್ನು ಪೇಮೆಂಟ್ ಸಿಟ್ ಎಂದ ಬಿಜೆಪಿ ಶಾಸಕ ಕೆಲವರು ಹೇಳ್ತಿದ್ದಾರೆ ಪೇಮೆಂಟ್ ಸಿಟ್, ಪೇಮೆಂಟ್ ಸಿಟ್ ಅಂತಾ ಸಹಜವಾಗಿ ನೋಡಿದ್ರೆ ಅನಿಸುತ್ತದೆ,ಕೆಲವರು ಮಾತಾಡ್ತಿದ್ದಾರೆ ಮಂತ್ರಿಗಳದು ಪೇಮೆಂಟ್ ಸಿಟ್ ಅಂತಾ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು. ಅವರ ಹೈ ಕಮಾಂಡ್ ಅವರ ಸಚಿವ ಸಂಪುಟ ಅವರಿಗೆ ಬಿಟ್ಟಿದ್ದು ಎಂದು ಹೇಳಿದರು
    1
    ಕಲಬುರಗಿ:ಎರಡನೇ ಸಚಿವ ಸಂಪುಟ ವಿಸ್ತರಣೆ- ಶಾಸಕ ಬಸವರಾಜ್ ಮತ್ತಿಮೂಡ್ ಲೇವಡಿ
ಡಿಕೆ ಶಿವಕುಮಾರ್ ಅವರ ಮಂತ್ರಿ ಮಂಡಲದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಗ್ರಾಮೀಣ ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ್ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.ಡಿಕೆ ಸಂಪುಟ ವಿಸ್ತರಣೆಯನ್ನು  ಪೇಮೆಂಟ್ ಸಿಟ್ ಎಂದ ಬಿಜೆಪಿ ಶಾಸಕ ಕೆಲವರು ಹೇಳ್ತಿದ್ದಾರೆ ಪೇಮೆಂಟ್ ಸಿಟ್, ಪೇಮೆಂಟ್ ಸಿಟ್ ಅಂತಾ ಸಹಜವಾಗಿ ನೋಡಿದ್ರೆ ಅನಿಸುತ್ತದೆ,ಕೆಲವರು ಮಾತಾಡ್ತಿದ್ದಾರೆ ಮಂತ್ರಿಗಳದು ಪೇಮೆಂಟ್ ಸಿಟ್ ಅಂತಾ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು. ಅವರ ಹೈ ಕಮಾಂಡ್ ಅವರ ಸಚಿವ ಸಂಪುಟ ಅವರಿಗೆ ಬಿಟ್ಟಿದ್ದು ಎಂದು ಹೇಳಿದರು
    user_MAHESH
    MAHESH
    ಚಿತ್ತಾಪುರ, ಕಲಬುರಗಿ, ಕರ್ನಾಟಕ•
    7 hrs ago
  • ಕಡೆಚೂರು ಕೈಗಾರಿಕಾ ಪ್ರದೇಶ ದುರಂತ: ಮೃತರ ಕುಟುಂಬಕ್ಕೆ ತಲಾ ₹20 ಲಕ್ಷ ಪರಿಹಾರ ಘೋಷಣೆ – ಜಯ ಕರ್ನಾಟಕ ರಕ್ಷಣಾ ಸೇನೆ ಪ್ರತಿಭಟನೆ ಫಲ ಯಾದಗಿರಿ, ಆ.5: ಜಿಲ್ಲೆಯ ಕಡೆಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ಸೀಲ್ ಲ್ಯಾಬೊರೇಟರೀಸ್ ಕಂಪನಿಯಲ್ಲಿ ಸಂಭವಿಸಿದ ಭೀಕರ ಬಾಯ್ಲರ್ ಸ್ಫೋಟದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಘಟಕವು ಬುಧವಾರ ಕಂಪನಿ ಎದುರು ಪ್ರತಿಭಟನೆ ನಡೆಸಿತು. ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಂ. ಜಲ್ಲಪ್ಪನೋರ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸೈದಾಪುರ ವಲಯ ಅಧ್ಯಕ್ಷ ವೀರೇಶ್ ಸಜ್ಜನ್, ಕಡೆಚೂರು ಗ್ರಾಮ ಘಟಕದ ಅಧ್ಯಕ್ಷ ಶರಣು ಕಡೆಚೂರು, ಮುಖಂಡರಾದ ಚಂದ್ರು ಹುಸೇನಿ, ಶೇಖರ್ ಸೇರಿದಂತೆ ಸಂಘಟನೆಯ ಹಲವಾರು ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು, ಸ್ಥಳೀಯ ಮುಖಂಡ ಸಿದ್ದನಗೌಡ ಸೇರಿದಂತೆ ಅನೇಕರು ಭಾಗವಹಿಸಿದರು. ಪ್ರತಿಭಟನಾಕಾರರು ಕಂಪನಿಯ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿ, ಮೃತ ಕಾರ್ಮಿಕರ ಕುಟುಂಬಗಳಿಗೆ ಸಮರ್ಪಕ ಪರಿಹಾರ ನೀಡಬೇಕು, ಗಾಯಾಳುಗಳಿಗೆ ಉನ್ನತ ಮಟ್ಟದ ಚಿಕಿತ್ಸೆ ಕಲ್ಪಿಸಬೇಕು ಹಾಗೂ ಘಟನೆಯ ಕುರಿತು ನ್ಯಾಯಸಮ್ಮತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್‌ಪಿ) ಮಧ್ಯಸ್ಥಿಕೆ ವಹಿಸಿ ಸಂಘಟನೆಯ ಮುಖಂಡರೊಂದಿಗೆ ಹಾಗೂ ಕಂಪನಿ ಆಡಳಿತದೊಂದಿಗೆ ಮಾತುಕತೆ ನಡೆಸಿದರು. ಬಳಿಕ ಸೀಲ್ ಲ್ಯಾಬೊರೇಟರೀಸ್ ಸಂಸ್ಥೆಯ ವತಿಯಿಂದ ದುರಂತದಲ್ಲಿ ಮೃತಪಟ್ಟ ಮೂವರು ಕಾರ್ಮಿಕರ ಕುಟುಂಬಗಳಿಗೆ ತಲಾ ₹20 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಲಾಯಿತು. ಪರಿಹಾರ ಘೋಷಣೆಯ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಈ ಸಂದರ್ಭದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಂ. ಜಲ್ಲಪ್ಪನೋರ ಮಾತನಾಡಿ, ಸಂಘಟನೆಯ ಹೋರಾಟಕ್ಕೆ ಬೆಂಬಲ ನೀಡಿ ನ್ಯಾಯ ದೊರಕಿಸುವಲ್ಲಿ ಸಹಕರಿಸಿದ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸಂಘಟನೆಯ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಗ್ರಾಮಸ್ಥರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು. ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ನ್ಯಾಯ ದೊರಕುವಂತೆ ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕೈಗಾರಿಕೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಕಡೆಚೂರು ಕೈಗಾರಿಕಾ ಪ್ರದೇಶ ದುರಂತ: ಮೃತರ ಕುಟುಂಬಕ್ಕೆ ತಲಾ ₹20 ಲಕ್ಷ ಪರಿಹಾರ ಘೋಷಣೆ – ಜಯ ಕರ್ನಾಟಕ ರಕ್ಷಣಾ ಸೇನೆ ಪ್ರತಿಭಟನೆ ಫಲ ಯಾದಗಿರಿ, ಆ.5: ಜಿಲ್ಲೆಯ ಕಡೆಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ಸೀಲ್ ಲ್ಯಾಬೊರೇಟರೀಸ್ ಕಂಪನಿಯಲ್ಲಿ ಸಂಭವಿಸಿದ ಭೀಕರ ಬಾಯ್ಲರ್ ಸ್ಫೋಟದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಘಟಕವು ಬುಧವಾರ ಕಂಪನಿ ಎದುರು ಪ್ರತಿಭಟನೆ ನಡೆಸಿತು. ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಂ. ಜಲ್ಲಪ್ಪನೋರ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸೈದಾಪುರ ವಲಯ ಅಧ್ಯಕ್ಷ ವೀರೇಶ್ ಸಜ್ಜನ್, ಕಡೆಚೂರು ಗ್ರಾಮ ಘಟಕದ ಅಧ್ಯಕ್ಷ ಶರಣು ಕಡೆಚೂರು, ಮುಖಂಡರಾದ ಚಂದ್ರು ಹುಸೇನಿ, ಶೇಖರ್ ಸೇರಿದಂತೆ ಸಂಘಟನೆಯ ಹಲವಾರು ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು, ಸ್ಥಳೀಯ ಮುಖಂಡ ಸಿದ್ದನಗೌಡ ಸೇರಿದಂತೆ ಅನೇಕರು ಭಾಗವಹಿಸಿದರು. ಪ್ರತಿಭಟನಾಕಾರರು ಕಂಪನಿಯ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿ, ಮೃತ ಕಾರ್ಮಿಕರ ಕುಟುಂಬಗಳಿಗೆ ಸಮರ್ಪಕ ಪರಿಹಾರ ನೀಡಬೇಕು, ಗಾಯಾಳುಗಳಿಗೆ ಉನ್ನತ ಮಟ್ಟದ ಚಿಕಿತ್ಸೆ ಕಲ್ಪಿಸಬೇಕು ಹಾಗೂ ಘಟನೆಯ ಕುರಿತು ನ್ಯಾಯಸಮ್ಮತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್‌ಪಿ) ಮಧ್ಯಸ್ಥಿಕೆ ವಹಿಸಿ ಸಂಘಟನೆಯ ಮುಖಂಡರೊಂದಿಗೆ ಹಾಗೂ ಕಂಪನಿ ಆಡಳಿತದೊಂದಿಗೆ ಮಾತುಕತೆ ನಡೆಸಿದರು. ಬಳಿಕ ಸೀಲ್ ಲ್ಯಾಬೊರೇಟರೀಸ್ ಸಂಸ್ಥೆಯ ವತಿಯಿಂದ ದುರಂತದಲ್ಲಿ ಮೃತಪಟ್ಟ ಮೂವರು ಕಾರ್ಮಿಕರ ಕುಟುಂಬಗಳಿಗೆ ತಲಾ ₹20 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಲಾಯಿತು. ಪರಿಹಾರ ಘೋಷಣೆಯ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಈ ಸಂದರ್ಭದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಂ. ಜಲ್ಲಪ್ಪನೋರ ಮಾತನಾಡಿ, ಸಂಘಟನೆಯ ಹೋರಾಟಕ್ಕೆ ಬೆಂಬಲ ನೀಡಿ ನ್ಯಾಯ ದೊರಕಿಸುವಲ್ಲಿ ಸಹಕರಿಸಿದ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸಂಘಟನೆಯ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಗ್ರಾಮಸ್ಥರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು. ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ನ್ಯಾಯ ದೊರಕುವಂತೆ ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕೈಗಾರಿಕೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
    1
    ಕಡೆಚೂರು ಕೈಗಾರಿಕಾ ಪ್ರದೇಶ ದುರಂತ: ಮೃತರ ಕುಟುಂಬಕ್ಕೆ ತಲಾ ₹20 ಲಕ್ಷ ಪರಿಹಾರ ಘೋಷಣೆ – ಜಯ ಕರ್ನಾಟಕ ರಕ್ಷಣಾ ಸೇನೆ ಪ್ರತಿಭಟನೆ ಫಲ

ಯಾದಗಿರಿ, ಆ.5: ಜಿಲ್ಲೆಯ ಕಡೆಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ಸೀಲ್ ಲ್ಯಾಬೊರೇಟರೀಸ್ ಕಂಪನಿಯಲ್ಲಿ ಸಂಭವಿಸಿದ ಭೀಕರ ಬಾಯ್ಲರ್ ಸ್ಫೋಟದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಘಟಕವು ಬುಧವಾರ ಕಂಪನಿ ಎದುರು ಪ್ರತಿಭಟನೆ ನಡೆಸಿತು.

ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಂ. ಜಲ್ಲಪ್ಪನೋರ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸೈದಾಪುರ ವಲಯ ಅಧ್ಯಕ್ಷ ವೀರೇಶ್ ಸಜ್ಜನ್, ಕಡೆಚೂರು ಗ್ರಾಮ ಘಟಕದ ಅಧ್ಯಕ್ಷ ಶರಣು ಕಡೆಚೂರು, ಮುಖಂಡರಾದ ಚಂದ್ರು ಹುಸೇನಿ, ಶೇಖರ್ ಸೇರಿದಂತೆ ಸಂಘಟನೆಯ ಹಲವಾರು ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು, ಸ್ಥಳೀಯ ಮುಖಂಡ ಸಿದ್ದನಗೌಡ ಸೇರಿದಂತೆ ಅನೇಕರು ಭಾಗವಹಿಸಿದರು.

ಪ್ರತಿಭಟನಾಕಾರರು ಕಂಪನಿಯ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿ, ಮೃತ ಕಾರ್ಮಿಕರ ಕುಟುಂಬಗಳಿಗೆ ಸಮರ್ಪಕ ಪರಿಹಾರ ನೀಡಬೇಕು, ಗಾಯಾಳುಗಳಿಗೆ ಉನ್ನತ ಮಟ್ಟದ ಚಿಕಿತ್ಸೆ ಕಲ್ಪಿಸಬೇಕು ಹಾಗೂ ಘಟನೆಯ ಕುರಿತು ನ್ಯಾಯಸಮ್ಮತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್‌ಪಿ) ಮಧ್ಯಸ್ಥಿಕೆ ವಹಿಸಿ ಸಂಘಟನೆಯ ಮುಖಂಡರೊಂದಿಗೆ ಹಾಗೂ ಕಂಪನಿ ಆಡಳಿತದೊಂದಿಗೆ ಮಾತುಕತೆ ನಡೆಸಿದರು. ಬಳಿಕ ಸೀಲ್ ಲ್ಯಾಬೊರೇಟರೀಸ್ ಸಂಸ್ಥೆಯ ವತಿಯಿಂದ ದುರಂತದಲ್ಲಿ ಮೃತಪಟ್ಟ ಮೂವರು ಕಾರ್ಮಿಕರ ಕುಟುಂಬಗಳಿಗೆ ತಲಾ ₹20 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಲಾಯಿತು.

ಪರಿಹಾರ ಘೋಷಣೆಯ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಈ ಸಂದರ್ಭದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಂ. ಜಲ್ಲಪ್ಪನೋರ ಮಾತನಾಡಿ, ಸಂಘಟನೆಯ ಹೋರಾಟಕ್ಕೆ ಬೆಂಬಲ ನೀಡಿ ನ್ಯಾಯ ದೊರಕಿಸುವಲ್ಲಿ ಸಹಕರಿಸಿದ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸಂಘಟನೆಯ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಗ್ರಾಮಸ್ಥರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.

ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ನ್ಯಾಯ ದೊರಕುವಂತೆ ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕೈಗಾರಿಕೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    17 min ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.