ಶಿವಮೊಗ್ಗ-ಶಾದಿ ಮಹಲ್ ಗಳಲ್ಲಿ ಕಳ್ಳತನ: ಮಹಿಳೆ ಅರೆಸ್ಟ್ ಶಿವಮೊಗ್ಗ: ಶಾದಿ ಮಹಲ್‌ಗಳಲ್ಲಿ ಮದುವೆಗೆ ಆಹ್ವಾನಿತೆಯಂತೆ ತೆರಳಿ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿ 18 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶಪಡಿಸಿ ಕೊಂಡಿದ್ದಾರೆ. ಸೂಳೆಬೈಲ್ ನಿವಾಸಿ ರುಕ್ಸಾನಾ ಫಿರ್ದೋಸ್ (30) ಬಂಧಿತ ಮಹಿಳೆ. ಖಚಿತ ಮಾಹಿತಿಯ ಮೇರೆಗೆ ಮಾರ್ಚ್ 7ರಂದು ಆಕೆಯನ್ನು ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಕೃತ್ಯಗಳು ಬಯಲಾಗಿವೆ. ಆರೋಪಿಯಿಂದ 120 ಗ್ರಾಂ. ಚಿನ್ನಾಭರಣ ವಶಪಡಿಸಿ ಕೊಳ್ಳಲಾಗಿದೆ. ಶಾದಿ ಮಹಲ್‌ಗಳಲ್ಲಿನ ಮದುವೆಗೆ ತೆರಳುತ್ತಿದ್ದ ರುಕ್ಸಾನಾ, ಗುರುತು ಮರೆಮಾಚಲು ಬುರ್ಕಾ ಧರಿಸುತ್ತಿ ದ್ದರು. ಅಲ್ಲಿನ ಕೊಠಡಿಗಳಲ್ಲಿ ಉಳಿದುಕೊಂಡು ಮದುವೆ ಮನೆಯವರು ಹಾಗೂ ಆಹ್ವಾನಿ ತರು ತಂದಿರುತ್ತಿದ್ದ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ತುಂಗಾನಗರ ಠಾಣೆ ವ್ಯಾಪ್ತಿಯ ನಾಲ್ಕು ಶಾದಿ ಮಹಲ್‌ಗಳಲ್ಲಿ ಕಳ್ಳತನ ನಡೆದಿದ್ದು, ಎಸ್‌ಪಿ ಬಿ.ನಿಖಿಲ್ ಕುಮಾರ್ ಮಾರ್ಗದರ್ಶನದಲ್ಲಿ ತುಂಗಾನಗರ ಠಾಣೆ ಇನ್‌ಸ್ಪೆಕ್ಟರ್ ಕೆ.ಟಿ. ಗುರುರಾಜ್, ಪಿಎಸ್‌ಐ ಗಾದಿಲಿಂಗಪ್ಪ ಗೌಡರ್ ನೇತೃತ್ವದಲ್ಲಿ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

- ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಎನ್ ಆರ್ ಪುರದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿಲು ವಿಶೇಷ ವಿಮಾನದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಕ್ಕೆ ಆಗಮಿಸಿದರು ಅವರನ್ನು ಕೆ ಆರ್ ಐ ಡಿ ಎಲ್ ಅಧ್ಯಕ್ಷರು ಹಾಗೂ ಭದ್ರಾವತಿಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿಕೆ ಸಂಗಮೇಶ್ವರ ಹಾಗೂ ಪಂಚ ಗ್ಯಾರಂಟಿ ಅಧ್ಯಕ್ಷರಾದ ಬಿಎಸ್ ಗಣೇಶ್ ಅವರು ಸ್ವಾಗತಿಸಿದರು2
- ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ನಿಶ್ಚಿತ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ವಿಧಾನಪರಿಷತ್ ಹಾಗೂ ಬಾಗಲಕೋಟೆಯಲ್ಲಿ ಲಿಂಗಾಯತ ಸಮುದಾಯದ ಮುಖಂಡರಿಗೆ ಪಕ್ಷ ಟಿಕೆಟ್ ನೀಡಿತ್ತು. ಹೀಗಾಗಿ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗಕ್ಕೆ ಅವಕಾಶ ಕಲ್ಪಿಸಿತು. ಇದನ್ನು ಎಲ್ಲರೂ ಒಪ್ಪಿ, ಒಗ್ಗೂಡಿ ಉಪಚುನಾವಣೆ ಎದುರಿಸಿದ್ದೇವೆ. ಎಲ್ಲ ವರ್ಗದ ಜನಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ' ಎಂದರು 'ಸ್ವಾಭಿಮಾನಿ ಬಳಗದ ರಾಜ್ಯ ಘಟಕದ ಅಧ್ಯಕ್ಷ ಜಿ.ಬಿ. ವಿನಯ್‌ಕುಮಾರ್ ಅವರು ಬಿಜೆಪಿಗೆ ಬಾಹ್ಯ ಬೆಂಬಲ ಮಾತ್ರ ವ್ಯಕ್ತಪಡಿಸಿದ್ದರು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಪಕ್ಷದ ಕೆಲ ಮುಖಂಡರು ಗೊಂದಲ ಉಂಟಾಗುವಂತಹ ಹೇಳಿಕೆಗಳನ್ನು ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ವಿನಯ್‌ಕುಮಾರ್ ಅವರಿಗೆ ಜಿಲ್ಲೆಯಲ್ಲಿ ಯಾವ ಕ್ಷೇತ್ರವೂ ಖಾಲಿ ಇಲ್ಲ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು. 'ದಾವಣಗೆರೆ ಉತ್ತರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇವರನ್ನು ಹೊರತುಪಡಿಸಿ ಇನ್ನೂ ಹಲವರು ಅವಕಾಶಕ್ಕಾಗಿ ಕಾದು ಪಕ್ಷದಲ್ಲಿ ದುಡಿಯುತ್ತಿದ್ದಾರೆ. ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ನಾನೇ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ವಿನಯ್‌ಕುಮಾರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಾಧ್ಯವಿಲ್ಲ. ಬೇಕಿದ್ದರೆ ಪಕ್ಷೇತರರಾಗಿ ಕಣಕ್ಕೆ ಇಳಿಯಲಿ' ಎಂದರು.1
- ಬಳ್ಳಾರಿ ನಗರದ ಹೊಸ ಬಸ್ ನಿಲ್ದಾಣದ ಮುಂಭಾಗದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸರಕಾರಿ ಬಸ್ ಮತ್ತು ಲಾರಿ ನಡುವೆ ಸಾಗುತ್ತಿದ್ದ ವೇಳೆ, ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಸುಮಾರು 18–20 ವರ್ಷದ ಯುವಕ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ರಸ್ತೆ ಸುರಕ್ಷತೆಗೆ ಹೆಚ್ಚು ಗಮನ ನೀಡುವುದು ಅತ್ಯಗತ್ಯ ⚠️1
- Post by Suresh Belagere1
- ಚಿತ್ರದುರ್ಗದ ಜಿಲ್ಲಾ ಬಜೆಪಿ ಕಚೇರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ನಾರಿ ಶಕ್ತಿ ವಂದನ ಅಭಿಯಾನ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ಶ್ಯಾಮಲ ಶಿವಪ್ರಕಾಶ್ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದು ನಾರಿ ಶಕ್ತಿ ವಂದನ ಕಾಯ್ದೆ, 2023, ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಒಂದು ಮಹತ್ವದ ಕ್ಷಣವನ್ನು ಗುರುತಿಸುತ್ತದೆ ಎಂದು ತಿಳಿಸಿದರು.1
- Post by Mayur TV Hangal YouTube c1
- ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ನೇತೃತ್ವ ಹಾಗೂ ಕೊರ್ಡೆಲ್ ಕ್ರಿಕೆಟರ್ಸ್ ಕುಲಶೇಖರ ಸಹಯೋಗದಲ್ಲಿ, ಇತ್ತೀಚಿಗೆ ವೆನ್ಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಹಣ್ಣು ಹಂಪಲು, ಪುಸ್ತಕ ಹಾಗೂ ಇತರ ಅವಶ್ಯ ಪರಿಕರಗಳ ವಿತರಣಾ ಕಾರ್ಯಕ್ರಮವು ನಡೆಯಿತು. ಅಶಕ್ತ ಹಾಗೂ ಬಡ ಮಕ್ಕಳಿಗೆ ನೆರವಾಗುವುದು ಅತ್ಯಂತ ಪುಣ್ಯದ ಕಾರ್ಯವಾಗಿದ್ದು ಕಾರ್ಯಕ್ರಮದ ರೂವಾರಿಗಳಿಗೆ ತುಂಬು ಹೃದಯದ ಅಭಿನಂದನೆಗಳು. ಬೆಥನಿ ಕನ್ಯಾ ಮಠದ ಭಗಿನಿ ಶುಭಾ, ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸ್ಥಾಪಕ ಸಂಚಾಲಕ ಫ್ರಾಂಕ್ಲಿನ್ ಮೊಂತೆರೊ, ಪ್ರೀತಿ ಮಿನೇಜಸ್, ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿ ಡಾ.ಶಿವಪ್ರಕಾಶ್, ಸೈಂಟ್ ತೆರೆಸಾ ಶಾಲೆಯ ಉಪ ಪ್ರಾಂಶುಪಾಲೆ ಸಿ.ವಿದ್ಯಾ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಮಾಜಿ ಕಾರ್ಪೊರೇಟರ್ ಪದ್ಮನಾಭ ಅಮೀನ್, ಉದ್ಯಮಿ ಸಿಂಥಿಯಾ ಮೊರಾಸ್, ಅರುಣ್ ಡಿಸೋಜ ಉರ್ವ, ಜೂಲಿಯೆಟ್ ಡಿಕುನ್ಹಾ ಉರ್ವಸ್ಟೋರ್, ಪ್ರೀಮಾ ಫೆರ್ನಾಂಡಿಸ್ ಎಕ್ಕೂರು, ಜೂಲಿಯನಾ ಮೊರಾಸ್, ಆಗ್ನೆಸ್ ರೆಬೆಲ್ಲೊ ಮುಂಬೈ, ರಿಯೊ ಮಿನೇಜಸ್, ಓಸ್ವಾಲ್ಡ್ ಡಿಕುನ್ಹ ಬಿಜೈ, ಮಧು ಬಿಜೈ, ಕೊರ್ಡೆಲ್ ಕ್ರಿಕೆಟರ್ಸ್‌ನ ನವೀನ್ ಫರ್ನಾಂಡಿಸ್, ಪ್ರವೀಣ್ ಫರ್ನಾಂಡಿಸ್, ಜೊನ್ಸಿ ರೇಗೊ, ಫಿಲಿಪ್ ಡಿಸೋಜ, ಸಂದೀಪ್ ಡಿಸೋಜ, ರೊನಾಲ್ಡ್ ಕೊರ್ಡೆಲ್ ಮತ್ತು ರಾಬರ್ಟ್ ಕೊರ್ಡೆಲ್ ಉಪಸ್ಥಿತರಿದ್ದರು.1
- ದಾವಣಗೆರೆ : ಈ ಬಾರಿ ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಅಹಿಂದ ನಾಯಕ ವಿನಯ್ ಕುಮಾರ್ ಹೇಳಿದರು.1