logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮಂಡ್ಯ ಜಿಲ್ಲೆಯಲ್ಲಿ 2538ಕ್ಕೂ ಅಧಿಕ ಗ್ಯಾರಂಟಿ ಸದಸ್ಯರ ನೇಮಕ ಶೀಘ್ರ ಮಂಡ್ಯ-ವಾರ್ಡ್, ಗ್ರಾಮ ಪಂಚಾಯಿತಿ ಮಟ್ಟದಲ್ಲಿ 423 ಗ್ಯಾರಂಟಿ ಸಮಿತಿಗಳ ರಚನೆಗೆ ವೇಗ,ಪ್ರತಿ ಗ್ಯಾರಂಟಿ ಸಮಿತಿಯಲ್ಲಿ 6 ಸದಸ್ಯರ ನೇಮಕ ಗ್ಯಾರಂಟಿ ಯೋಜನೆಗಳಿಂದ ಅರ್ಹರು ವಂಚಿತರಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಸದಸ್ಯರ ನೇಮಕಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ಹತ್ತು ದಿನದೊಳಗೆ ಪಟ್ಟಿ ತಯಾರಿಸುವಂತೆ ಜಿಲ್ಲಾ, ತಾಲೂಕು ಸಮಿತಿ ಸದಸ್ಯರಿಗೆ ಸೂಚನೆ ಮಂಡ್ಯ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವಂತೆ ಮಾಡಲು ಜಿಲ್ಲೆಯಲ್ಲಿ 2538ಕ್ಕೂ ಅಧಿಕ ಗ್ಯಾರಂಟಿ ಸದಸ್ಯರನ್ನು ನೇಮಕ ಮಾಡುವ ಕಾರ್ಯ ತ್ವರಿತವಾಗಿ ಆಗಬೇಕಿದ್ದು ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಪಟ್ಟಿ ಅಂತಿಮಗೊಳಿಸಬೇಕೆಂದು ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಶಾಸಕ ದಿನೇಶ್ ಗೂಳಿಗೌಡ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಗ್ಯಾರಂಟಿ ಸಮಿತಿ ಸದಸ್ಯರಿಗೆ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಸಮಿತಿ ರಚನೆ ಮಾಡಲಾಗಿದೆ. ಇದೀಗ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರತಿ ವಾರ್ಡ್ ಅಥವಾ ಪಂಚಾಯಿತಿಗೆ 6 ಜನರನ್ನು ಒಳಗೊಂಡ ಗ್ಯಾರಂಟಿ ಸದಸ್ಯರನ್ನು ನೇಮಕ ಮಾಡಬೇಕೆಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೂಚನೆ ನೀಡಿರುವುದರಿಂದ ಜಿಲ್ಲಾ ಮತ್ತು ತಾಲೂಕು ಸಮಿತಿ ಸದಸ್ಯರು 10 ದಿನದೊಳಗೆ ಸದಸ್ಯರ ಪಟ್ಟಿ ಸಿದ್ಧಪಡಿಸಿ ಕೊಡಬೇಕು ಎಂದು ಹೇಳಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ 2 ನಗರಸಭೆ (66 ವಾರ್ಡ್), 6 ಪುರಸಭೆ (115 ವಾರ್ಡ್), 1 ಪಟ್ಟಣ ಪಂಚಾಯತಿ (13 ವಾರ್ಡ್) ಹಾಗೂ 229 ಗ್ರಾಮ ಪಂಚಾಯತಿಗಳಲ್ಲಿ 423 ಗ್ಯಾರಂಟಿ ಸಮಿತಿಗಳನ್ನು ರಚಿಸಲಾಗುತ್ತಿದೆ. ಒಂದು ಸಮಿತಿಯಲ್ಲಿ 6 ಜನ ಗ್ಯಾರಂಟಿ ಸದಸ್ಯರನ್ನು ಒಳಗೊಂಡಂತೆ 2538ಕ್ಕೂ ಅಧಿಕ ಸದಸ್ಯರನ್ನು ನೇಮಕ ಮಾಡಬೇಕಿದೆ. ಪ್ರತಿ ಸಮಿತಿಯಲ್ಲಿ ಎಸ್‌ಸಿ/ಎಸ್‌ಟಿ–1, ಅಲ್ಪಸಂಖ್ಯಾತರು–1, ಮಹಿಳೆಯರು–2, ಹಿಂದುಳಿದ ವರ್ಗ–1 ಹಾಗೂ ಸಾಮಾನ್ಯ ವರ್ಗ–1 ಸದಸ್ಯರಿಗೆ ಪ್ರಾತಿನಿಧ್ಯ ಕಲ್ಪಿಸಲಾಗುತ್ತಿದೆ. ಅಲ್ಪಸಂಖ್ಯಾತರ ಪ್ರಾತಿನಿಧ್ಯ ಲಭ್ಯವಿಲ್ಲದ ಸಂದರ್ಭದಲ್ಲಿ ಸಾಮಾನ್ಯ ವರ್ಗದಿಂದ ಸದಸ್ಯರನ್ನು ನೇಮಿಸಲು ಅವಕಾಶವಿದೆ ಎಂದು ಹೇಳಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನವನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡುವುದು, ಫಲಾನುಭವಿಗಳ ಸಮಸ್ಯೆಗಳನ್ನು ಗುರುತಿಸಿ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು ಪರಿಹರಿಸುವುದು ಹಾಗೂ ಯೋಜನೆಗಳಿಂದ ಅರ್ಹರು ವಂಚಿತರಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಸಮಿತಿಗಳನ್ನು ರಚನೆ ಮಾಡಲಾಗುತ್ತಿದೆ. ಈ ಕೂಡಲೇ ಸಮಿತಿ ಸದಸ್ಯರನ್ನು ನೇಮಕ ಮಾಡುವ ಕುರಿತು ಶೀಘ್ರದಲ್ಲೇ ಪಟ್ಟಿ ತಯಾರಿಸಿ ರಾಜ್ಯ ಸಮಿತಿಗೆ ಸಲ್ಲಿಸಬೇಕೆಂದು ಹೇಳಿದ್ದಾರೆ. *ನಗರಸಭೆ, ಪುರಸಭೆ ಮಾಹಿತಿ* ಮಂಡ್ಯ ನಗರಸಭೆ-35 ವಾರ್ಡ್ ಮದ್ದೂರು ನಗರಸಭೆ-31 ವಾರ್ಡ್ ಮಳವಳ್ಳಿ ಪುರಸಭೆ-23 ವಾರ್ಡ್ ಶ್ರೀರಂಗಪಟ್ಟಣ ಪುರಸಭೆ-23 ವಾರ್ಡ್ ಕೆ.ಆರ್.ಪೇಟೆ ಪುರಸಭೆ-23 ವಾರ್ಡ್ ಪಾಂಡವಪುರ ಪುರಸಭೆ-23 ವಾರ್ಡ್ ನಾಗಮಂಗಲ ಪುರಸಭೆ-23 ವಾರ್ಡ್ ಬೆಳ್ಳೂರು ಪಟ್ಟಣ ಪಂಚಾಯತಿ-23 ವಾರ್ಡ್ *229 ಗ್ರಾಮ ಪಂಚಾಯತಿ* ಮದ್ದೂರು: 38 ಕೆ.ಆರ್.ಪೇಟೆ: 34 ಮಳವಳ್ಳಿ: 39 ಮಂಡ್ಯ ತಾಲೂಕು: 46 ನಾಗಮಂಗಲ: 27 ಪಾಂಡವಪುರ: 24 ಶ್ರೀರಂಗಪಟ್ಟಣ: 21 *119 ಸದಸ್ಯರ ಜೊತೆಗೆ 2538 ಸದಸ್ಯರ ನೇಮಕ* ಪ್ರಸ್ತುತ ರಾಜ್ಯ ಸರ್ಕಾರ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಸಮಿತಿ ರಚನೆ ಮಾಡಿದೆ. ಮಂಡ್ಯ ಜಿಲ್ಲೆಯಲ್ಲಿ 21 ಸದಸ್ಯರನ್ನು ಒಳಗೊಂಡ ಜಿಲ್ಲಾ ಸಮಿತಿ ಜೊತೆಗೆ ಪ್ರತಿ ತಾಲೂಕಿನಲ್ಲಿ 14 ಸದಸ್ಯರನ್ನು ಒಳಗೊಂಡ ತಾಲೂಕು ಸಮಿತಿ ಸದಸ್ಯರು ಸೇರಿದಂತೆ 119 ಗ್ಯಾರಂಟಿ ಸಮಿತಿ ಸದಸ್ಯರನ್ನು ನೇಮಿಸಲಾಗಿದೆ. ಈಗ ವಾರ್ಡ್ ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ 2538 ಸದಸ್ಯರನ್ನು ನೇಮಕ ಮಾಡಬೇಕಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಗ್ಯಾರಂಟಿ ಸಮಿತಿ ಸದಸ್ಯರನ್ನು ನೇಮಕ ಮಾಡುವುದರಿಂದ ಜಿಲ್ಲೆಯ ಗ್ಯಾರಂಟಿ ಸಮಿತಿ ಸದಸ್ಯರ ಸಂಖ್ಯೆ 2657ಕ್ಕೆ ಏರಿಕೆಯಾಗಲಿದೆ. ಇದರಿಂದ ಪ್ರತಿಯೊಂದು ಅರ್ಹ ಕುಟುಂಬಕ್ಕೂ ಗ್ಯಾರಂಟಿ ಯೋಜನೆಯ ಪ್ರಯೋಜನ ತಲುಪಲಿದ್ದು ಯಾವುದೇ ಅರ್ಹ ಫಲಾನುಭವಿ ಯೋಜನೆಯಿಂದ ವಂಚಿತರಾಗುವುದಿಲ್ಲ ಎಂದು ದಿನೇಶ್ ಗೂಳಿಗೌಡ ಅವರು ಹೇಳಿದ್ದಾರೆ.

2 hrs ago
user_Arunprasad G B
Arunprasad G B
Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
2 hrs ago
2c1bebc2-4e3d-4acf-ba19-e2e27544d352

More news from ಕರ್ನಾಟಕ and nearby areas
  • ಶಾಸಕ ಬಾಬು ಬಂಡಿಸಿದೇಗೌಡ ಕತ್ತೆ ಕೆಲಸ ಮಾಡುವ ವಿಡಿಯೋ ವೈರಲ್,ಏನಂದ್ರು ಗೊತ್ತಾ ನೆಟ್ಟಿಗರು ಮಂಡ್ಯ ಶ್ರೀರಂಗಪಟ್ಟಣ ಶಾಸಕ ಬಾಬು ಬಂಡಿ ಸಿದ್ದೇಗೌಡ ವ್ಯವಸಾಯ ಮಾಡುವ ವಿಡಿಯೋ ಆಗಿಸಿ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಗದ್ದೆ ಕೆಲಸ ಮಾಡುವ ವಿಡಿಯೋ ಬೈಕೇರಿ ಹೋಗುವ ಜೊತೆಯಲ್ಲಿ ಗುದ್ದಲಿ ಹಿಡಿದು ಗದ್ದೆಯಲ್ಲಿ ಕೆಲಸ ಮಾಡುವ ವಿಡಿಯೋಗೆ ನೆಟ್ಟಗಿರೋ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಲ್ಮೆಟ್ ಹಾಕದೆ ಗಾಡಿ ಓಡಿಸಬೇಕು ಕೆಲವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ
    1
    ಶಾಸಕ ಬಾಬು ಬಂಡಿಸಿದೇಗೌಡ ಕತ್ತೆ ಕೆಲಸ ಮಾಡುವ ವಿಡಿಯೋ ವೈರಲ್,ಏನಂದ್ರು ಗೊತ್ತಾ ನೆಟ್ಟಿಗರು
ಮಂಡ್ಯ ಶ್ರೀರಂಗಪಟ್ಟಣ ಶಾಸಕ ಬಾಬು ಬಂಡಿ ಸಿದ್ದೇಗೌಡ ವ್ಯವಸಾಯ ಮಾಡುವ ವಿಡಿಯೋ ಆಗಿಸಿ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಗದ್ದೆ ಕೆಲಸ ಮಾಡುವ ವಿಡಿಯೋ ಬೈಕೇರಿ ಹೋಗುವ ಜೊತೆಯಲ್ಲಿ ಗುದ್ದಲಿ ಹಿಡಿದು ಗದ್ದೆಯಲ್ಲಿ ಕೆಲಸ ಮಾಡುವ ವಿಡಿಯೋಗೆ ನೆಟ್ಟಗಿರೋ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೆಲ್ಮೆಟ್ ಹಾಕದೆ ಗಾಡಿ ಓಡಿಸಬೇಕು ಕೆಲವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    15 min ago
  • ಮಳವಳ್ಳಿ ತಾಲೂಕು ನಲ್ಲಿ ಅಕ್ರಮ ಮಣ್ಣು ದಂದೆ ಮಳವಳ್ಳಿ : ಮಳವಳ್ಳಿ ತಾಲೂಕಿನಲ್ಲಿ ಮಣ್ಣಿನ ದಂಧೆ ಅಕ್ರಮವಾಗಿ ನಡೆಯುತ್ತಿದ್ದು ಕೆಲ ಗ್ರಾಮಗಳಲ್ಲಿ ಅವೇರಳ್ಳಿ ಹೆಬ್ಬಣಿ ಮುಂತಾದ ಗ್ರಾಮಗಳಲ್ಲಿ ಮಣ್ಣಿನ ದಂಧೆ ಸಾಗುತ್ತಿದೆ ಇದಕ್ಕೆ ಗ್ರಾಮಸ್ಥರ ಆಕ್ರೋಶ ಹಾಗೂ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿ ಇದಕ್ಕೆ ಸೂಕ್ತವಾದ ಕಾನೂನಿ ಕ್ರಮವನ್ನು ಜರಗಿಸಬೇಕು ಎಂದು ತಹಸಿಲ್ದಾರ್ ಜಿಲ್ಲಾ ಕಚೇರಿ ನಲ್ಲಿ ಮನವಿ ಮಾಡಲು ತೀರ್ಮಾನಿಸಿದ್ದಾರೆ
    1
    ಮಳವಳ್ಳಿ ತಾಲೂಕು ನಲ್ಲಿ ಅಕ್ರಮ ಮಣ್ಣು ದಂದೆ 
ಮಳವಳ್ಳಿ : ಮಳವಳ್ಳಿ ತಾಲೂಕಿನಲ್ಲಿ ಮಣ್ಣಿನ ದಂಧೆ ಅಕ್ರಮವಾಗಿ ನಡೆಯುತ್ತಿದ್ದು ಕೆಲ ಗ್ರಾಮಗಳಲ್ಲಿ ಅವೇರಳ್ಳಿ ಹೆಬ್ಬಣಿ ಮುಂತಾದ ಗ್ರಾಮಗಳಲ್ಲಿ ಮಣ್ಣಿನ ದಂಧೆ ಸಾಗುತ್ತಿದೆ ಇದಕ್ಕೆ ಗ್ರಾಮಸ್ಥರ ಆಕ್ರೋಶ ಹಾಗೂ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿ ಇದಕ್ಕೆ ಸೂಕ್ತವಾದ ಕಾನೂನಿ ಕ್ರಮವನ್ನು ಜರಗಿಸಬೇಕು ಎಂದು ತಹಸಿಲ್ದಾರ್ ಜಿಲ್ಲಾ ಕಚೇರಿ ನಲ್ಲಿ ಮನವಿ ಮಾಡಲು ತೀರ್ಮಾನಿಸಿದ್ದಾರೆ
    user_ಎ.ಏನ್.ಎಸ್ ನ್ಯೂಸ್
    ಎ.ಏನ್.ಎಸ್ ನ್ಯೂಸ್
    ರಾಜಕೀಯ ಪಕ್ಷದ ಕಚೇರಿ ಮಳವಳ್ಳಿ, ಮಂಡ್ಯ, ಕರ್ನಾಟಕ•
    2 hrs ago
  • ಯೋಗಾಭ್ಯಾಸ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ: ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ ಮಳವಳ್ಳಿ: ಬೆಳದಿಂಗಳಲ್ಲಿ ಶರಣರ ಚಿಂತನ‌ಮಂಥನ ಸಮಿತಿ ವತಿಯಿಂದ ಹುಣ್ಣಿಮೆ ಪ್ರಯುಕ್ತ 142 ನೇ ಚಿಂತನ ಮಂಥನ ಕಾರ್ಯಕ್ರಮ ಮಳವಳ್ಳಿ ಪಟ್ಟಣದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಪೂರಿಗಾಲಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ ಉದ್ಘಾಟಿಸಿ ಮಾತನಾಡಿ,ಪ್ರತಿ ದಿನ ಮನೆಯಲ್ಲಿ ಯೋಗಾಭ್ಯಾಸದಿಂದ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ ಎಂದರು. ಇದೇ ವೇಳೆ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಯೋಗಾಸನ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕಿ ಶಶಿಕಲಾ, ಯೋಗ ಶಿಕ್ಷಕ ಶ್ರೀನಿಧಿ, ಚಿಂತನ ಮಂಥನ ಸಮಿತಿ ಮಲ್ಲೇಶ್, ನಾಗರಾಜು, ಪರಶಿವಮೂರ್ತಿ,ನಟರಾಜಮೂರ್ತಿ ಸೇರಿದಂತೆ ಹಲವರು ಇದ್ದರು.
    1
    ಯೋಗಾಭ್ಯಾಸ ಮಾಡಿ  ಆರೋಗ್ಯ ಕಾಪಾಡಿಕೊಳ್ಳಿ: ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ
ಮಳವಳ್ಳಿ:  ಬೆಳದಿಂಗಳಲ್ಲಿ  ಶರಣರ ಚಿಂತನ‌ಮಂಥನ ಸಮಿತಿ ವತಿಯಿಂದ ಹುಣ್ಣಿಮೆ ಪ್ರಯುಕ್ತ  142 ನೇ ಚಿಂತನ ಮಂಥನ ಕಾರ್ಯಕ್ರಮ ಮಳವಳ್ಳಿ ಪಟ್ಟಣದ ಶ್ರೀ ಬಸವೇಶ್ವರ  ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು  ಪೂರಿಗಾಲಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ ಉದ್ಘಾಟಿಸಿ ಮಾತನಾಡಿ,ಪ್ರತಿ ದಿನ  ಮನೆಯಲ್ಲಿ ಯೋಗಾಭ್ಯಾಸದಿಂದ ಮಾಡಿ  ಆರೋಗ್ಯ ಕಾಪಾಡಿಕೊಳ್ಳಿ ಎಂದರು.
ಇದೇ ವೇಳೆ  ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಯೋಗಾಸನ  ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ  ಯೋಗ ಶಿಕ್ಷಕಿ ಶಶಿಕಲಾ, ಯೋಗ ಶಿಕ್ಷಕ ಶ್ರೀನಿಧಿ, ಚಿಂತನ ಮಂಥನ ಸಮಿತಿ ಮಲ್ಲೇಶ್, ನಾಗರಾಜು, ಪರಶಿವಮೂರ್ತಿ,ನಟರಾಜಮೂರ್ತಿ  ಸೇರಿದಂತೆ ಹಲವರು ಇದ್ದರು.
    user_ಸುಮಿತ್ರ‌ ಹೆಚ್‌ ಪಿ
    ಸುಮಿತ್ರ‌ ಹೆಚ್‌ ಪಿ
    ವರದಿಗಾರರು ಮಳವಳ್ಳಿ, ಮಂಡ್ಯ, ಕರ್ನಾಟಕ•
    2 hrs ago
  • ದೇಶದ ನಂಬರ್ ಒನ್ ವಿಐ Vi ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ ದೇಶದ ನಂಬರ್ ಒನ್ ಬಿ ಐ ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ ರೂ 325 ರಿಚಾರ್ಜ್ ಮಾಡಿಸಿದರೆ ಅನ್ಲಿಮಿಟೆಡ್ ಡಾಟಾ ಅನ್ಲಿಮಿಟೆಡ್ ಕರೆ 100 ಎಸ್ ಎಮ್ ಎಸ್ ಇಂದೇ ವಿಐ ಗ್ರಹಕರಾಗಿ ಕೊಡುಗೆ ತಮ್ಮದಾಗಿಸಿಕೊಳ್ಳಿ ವಿತರಕರ ವಿಶೇಷ ಪ್ರಕಟಣೆ
    1
    ದೇಶದ ನಂಬರ್ ಒನ್ ವಿಐ Vi ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ
ದೇಶದ ನಂಬರ್ ಒನ್ ಬಿ ಐ ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ ರೂ 325 ರಿಚಾರ್ಜ್ ಮಾಡಿಸಿದರೆ ಅನ್ಲಿಮಿಟೆಡ್ ಡಾಟಾ ಅನ್ಲಿಮಿಟೆಡ್ ಕರೆ 100 ಎಸ್ ಎಮ್ ಎಸ್ ಇಂದೇ ವಿಐ ಗ್ರಹಕರಾಗಿ ಕೊಡುಗೆ ತಮ್ಮದಾಗಿಸಿಕೊಳ್ಳಿ ವಿತರಕರ ವಿಶೇಷ ಪ್ರಕಟಣೆ
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    23 hrs ago
  • ಮೈಸೂರು : ಅರಣ್ಯ ಭವನದಲ್ಲಿ ನಮ್ಮ ದಸರಾ‌ ಗಜಪಡೆ ಭರ್ಜರಿ ರಿಲ್ಯಾಕ್ಸ್ ನಾಡಹಬ್ಬ ದಸರಾ 2026 ಹಿನ್ನಲೆ ಮೈಸೂರಿಗೆ ಆಗಮಿಸಿದ ಗಜಪಡೆ ಅರಣ್ಯ ಭವನದಲ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿದೆ.ಮೊದಲ ಹಂತದಲ್ಲಿ ಬಂದಿರುವ 9 ಆನೆಗಳ ತಂಡ ಅರಣ್ಯ ಭವನದಲ್ಲಿ ಬೀಡು ಬಿಟ್ಟಿವೆ. ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ವತಿಯಿಂದ ಆನೆಗಳನ್ನ ಸಂಪ್ರದಾಯವಾಗಿ ಸ್ವಾಗತಿಸಲಾಗುತ್ತದೆ. ಅಕ್ಟೋಬರ್ 21 ರಂದು ನಡೆಯಲಿರುವ ಜಂಬೂಸವಾರಿಗೆ ಗಜಪಡೆ ಸಜ್ಜಾಗಲಿದೆ...
    1
    ಮೈಸೂರು : ಅರಣ್ಯ ಭವನದಲ್ಲಿ ನಮ್ಮ  ದಸರಾ‌ ಗಜಪಡೆ ಭರ್ಜರಿ  ರಿಲ್ಯಾಕ್ಸ್
ನಾಡಹಬ್ಬ ದಸರಾ 2026 ಹಿನ್ನಲೆ ಮೈಸೂರಿಗೆ ಆಗಮಿಸಿದ ಗಜಪಡೆ ಅರಣ್ಯ ಭವನದಲ್ಲಿ ರಿಲ್ಯಾಕ್ಸ್  ಮೂಡ್ ನಲ್ಲಿದೆ.ಮೊದಲ ಹಂತದಲ್ಲಿ ಬಂದಿರುವ 9 ಆನೆಗಳ ತಂಡ ಅರಣ್ಯ ಭವನದಲ್ಲಿ ಬೀಡು ಬಿಟ್ಟಿವೆ. ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ವತಿಯಿಂದ ಆನೆಗಳನ್ನ ಸಂಪ್ರದಾಯವಾಗಿ ಸ್ವಾಗತಿಸಲಾಗುತ್ತದೆ. ಅಕ್ಟೋಬರ್ 21 ರಂದು ನಡೆಯಲಿರುವ ಜಂಬೂಸವಾರಿಗೆ ಗಜಪಡೆ ಸಜ್ಜಾಗಲಿದೆ...
    user_Ashwini
    Ashwini
    ಮೈಸೂರು, ಮೈಸೂರು, ಕರ್ನಾಟಕ•
    7 hrs ago
  • News by dailynews ಶಹೀನ್ ಷಾ ಅಹಮ್ಮದ್ ಬಹಿರಂಗ ಸವಾಲು: ಪೊಲೀಸರಿಗೆ ಬೆದರಿಕೆ ಹಾಕಿದ ಆಡಿಯೋ ಬಿಡುಗಡೆ ಮಾಡಿ ತೋರಿಸಿ! ಸಾಕ್ಷಿ ಎಲ್ಲಿದೆ?: ಪ್ರತಿಯೊಂದನ್ನೂ ರೆಕಾರ್ಡ್ ಮಾಡುವವರು, ಪೊಲೀಸರಿಗೆ ಧಮಕಿ ಹಾಕಿದ ವೀಡಿಯೊ ಅಥವಾ ಆಡಿಯೋ ಸಾಬೀತುಪಡಿಸಲಿ. #tanveersait #viral #mysuru #cmdkshivakumar #viralnews News by dailynews ಶಹೀನ್ ಷಾ ಅಹಮ್ಮದ್ ಬಹಿರಂಗ ಸವಾಲು: ಪೊಲೀಸರಿಗೆ ಬೆದರಿಕೆ ಹಾಕಿದ ಆಡಿಯೋ ಬಿಡುಗಡೆ ಮಾಡಿ ತೋರಿಸಿ! ಸಾಕ್ಷಿ ಎಲ್ಲಿದೆ?: ಪ್ರತಿಯೊಂದನ್ನೂ ರೆಕಾರ್ಡ್ ಮಾಡುವವರು, ಪೊಲೀಸರಿಗೆ ಧಮಕಿ ಹಾಕಿದ ವೀಡಿಯೊ ಅಥವಾ ಆಡಿಯೋ ಸಾಬೀತುಪಡಿಸಲಿ. #tanveersait #viral #mysuru #cmdkshivakumar #viralnews
    1
    News by dailynews 
ಶಹೀನ್ ಷಾ ಅಹಮ್ಮದ್ ಬಹಿರಂಗ ಸವಾಲು: ಪೊಲೀಸರಿಗೆ ಬೆದರಿಕೆ ಹಾಕಿದ ಆಡಿಯೋ ಬಿಡುಗಡೆ ಮಾಡಿ ತೋರಿಸಿ!
ಸಾಕ್ಷಿ ಎಲ್ಲಿದೆ?: ಪ್ರತಿಯೊಂದನ್ನೂ ರೆಕಾರ್ಡ್ ಮಾಡುವವರು, ಪೊಲೀಸರಿಗೆ ಧಮಕಿ ಹಾಕಿದ ವೀಡಿಯೊ ಅಥವಾ ಆಡಿಯೋ ಸಾಬೀತುಪಡಿಸಲಿ.
#tanveersait #viral #mysuru #cmdkshivakumar #viralnews

    user_ಸೈಯದ್ ಅತೀಕ್
    ಸೈಯದ್ ಅತೀಕ್
    Furniture Manufacturer ಮೈಸೂರು, ಮೈಸೂರು, ಕರ್ನಾಟಕ•
    12 hrs ago
  • ಹೆಬ್ಬಾಲೆಯಲ್ಲಿ 25 ಲಕ್ಷದಲ್ಲಿ ಪ್ರೇಕ್ಷಕ ಗ್ಯಾಲರಿ ಬನಶಂಕರಿ ಅಮ್ಮನವರ ರಂಗ ಮಂದಿರ ಉದ್ಘಾಟನಾ ಸಮಾರಂಭ. ಕೊಡಗು: ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮದ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮಾರಂಭದಲ್ಲಿ ಇನ್ನುಳಿಕೆ ಆಗಿರುವ ಪ್ರೇಕ್ಷಕ ಗ್ಯಾಲರಿಯನ್ನು 15 ಲಕ್ಷ ರೂ ವೆಚ್ಚದಲ್ಲಿ ಮುಂದಿನ ದಿನಗಳಲ್ಲಿ ವಿಸ್ತರಿಸಿಕೊಡುವುದಾಗಿ ಮಡಿಕೇರಿ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾಕ್ಟರ್ ಮಂತರ್ ಗೌಡ ಭರವಸೆ ನೀಡಿದರು. ತಾಲೂಕಿನ ಹೆಬ್ಬಾಲೆ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಸಕರ ಅನುದಾನದಿಂದ 20 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರೇಕ್ಷಕರ ಗ್ಯಾಲರಿ ಮತ್ತು 5 ಲಕ್ಷದಲ್ಲಿ ಬನಶಂಕರಿ ಅಮ್ಮನವರ ಬಯಲು ರಂಗಮಂದಿರವನ್ನು ಉದ್ಘಾಟಿಸಿ ಮಾತನಾಡಿ ಈ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ಉದ್ಘಾಟನಾ ಸಮಾರಂಭದಲ್ಲಿ ಭರವಸೇನು ನೀಡಿದರು. ಸಮಾರಂಭದಲ್ಲಿ ಗ್ಯಾರಂಟಿ ಯೋಜನಾ ಅಧ್ಯಕ್ಷರಾದ ವಿಪಿ ಶಶಿಧರ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಚಂದ್ರಕಲಾ, ಶಾಲಾ ಅಭಿವೃದ್ಧಿ ಅಧ್ಯಕ್ಷರಾದ ಪ್ರದೀಪ್ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅರುಣ್ ಕುಮಾರಿ, ದಿನೇಶ್, ರಾಜಶೇಖರ್ ಮುಖ್ಯ ಶಿಕ್ಷಕರಾದ ವೆಂಕಟೇಶ್ ಮುಂತಾದ ನಾಯಕರು ಹಾಜರಿದ್ದರು.
    4
    ಹೆಬ್ಬಾಲೆಯಲ್ಲಿ 25 ಲಕ್ಷದಲ್ಲಿ  ಪ್ರೇಕ್ಷಕ ಗ್ಯಾಲರಿ ಬನಶಂಕರಿ ಅಮ್ಮನವರ ರಂಗ ಮಂದಿರ ಉದ್ಘಾಟನಾ ಸಮಾರಂಭ.
ಕೊಡಗು: ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮದ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮಾರಂಭದಲ್ಲಿ ಇನ್ನುಳಿಕೆ ಆಗಿರುವ ಪ್ರೇಕ್ಷಕ ಗ್ಯಾಲರಿಯನ್ನು 15 ಲಕ್ಷ ರೂ ವೆಚ್ಚದಲ್ಲಿ ಮುಂದಿನ ದಿನಗಳಲ್ಲಿ ವಿಸ್ತರಿಸಿಕೊಡುವುದಾಗಿ ಮಡಿಕೇರಿ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾಕ್ಟರ್ ಮಂತರ್ ಗೌಡ ಭರವಸೆ ನೀಡಿದರು. ತಾಲೂಕಿನ ಹೆಬ್ಬಾಲೆ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಸಕರ ಅನುದಾನದಿಂದ 20 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರೇಕ್ಷಕರ ಗ್ಯಾಲರಿ ಮತ್ತು 5 ಲಕ್ಷದಲ್ಲಿ ಬನಶಂಕರಿ ಅಮ್ಮನವರ ಬಯಲು ರಂಗಮಂದಿರವನ್ನು ಉದ್ಘಾಟಿಸಿ ಮಾತನಾಡಿ ಈ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ಉದ್ಘಾಟನಾ ಸಮಾರಂಭದಲ್ಲಿ ಭರವಸೇನು ನೀಡಿದರು. ಸಮಾರಂಭದಲ್ಲಿ ಗ್ಯಾರಂಟಿ ಯೋಜನಾ ಅಧ್ಯಕ್ಷರಾದ ವಿಪಿ ಶಶಿಧರ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಚಂದ್ರಕಲಾ, ಶಾಲಾ ಅಭಿವೃದ್ಧಿ  ಅಧ್ಯಕ್ಷರಾದ ಪ್ರದೀಪ್  ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅರುಣ್ ಕುಮಾರಿ, ದಿನೇಶ್, ರಾಜಶೇಖರ್ ಮುಖ್ಯ ಶಿಕ್ಷಕರಾದ ವೆಂಕಟೇಶ್ ಮುಂತಾದ ನಾಯಕರು ಹಾಜರಿದ್ದರು.
    user_ಹೆಚ ಟಿ ಸತ್ಯನಾರಾಯಣ ಪ್ರಸಾದ್
    ಹೆಚ ಟಿ ಸತ್ಯನಾರಾಯಣ ಪ್ರಸಾದ್
    Teacher ನಂಜನಗೂಡು, ಮೈಸೂರು, ಕರ್ನಾಟಕ•
    3 hrs ago
  • ಜಿಲ್ಲಾಧ್ಯಂತ `ಬೀದಿ ನಾಟಕಗಳ ಮೂಲಕ ರಸ್ತೆ ಅಪಘಾತಗಳ ತಡೆ ಮತ್ತು ಜಾಗೃತಿ ಅಭಿಯಾನ' ಮಂಡ್ಯ: ಸಾಮಾಜಿಕ ಹಾಗೂ ಮಾನವೀಯ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀ ಮಹಾಲಿಂಗೇಗೌಡ ಮುದ್ದನಘಟ್ಟ ಫೌಂಡೇಶನ್ ವತಿಯಿಂದ ಜಿಲ್ಲೆಯ ಜನರಿಗಾಗಿ `ಉಚಿತ ಔಷಧ ನೆರವು' ಹಾಗೂ ಜಿಲ್ಲಾಧ್ಯಂತ `ಬೀದಿ ನಾಟಕಗಳ ಮೂಲಕ ರಸ್ತೆ ಅಪಘಾತಗಳ ತಡೆ ಮತ್ತು ಜಾಗೃತಿ ಅಭಿಯಾನ' ನಡೆಯಲಿದೆ ಎಂದು ಫೌಂಡೇಷನ್‌ನ ಟ್ರಸ್ಟಿ ಎಂ.ಎನ್.ರವಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೌಂಡೇಷನ್‌ನಿAದ ನಿರಂತರ ಜನಪರ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಅಂತೆಯೇ ಸಾಮಾಜಿಕ ಜವಾಬ್ದಾರಿಯಿಂದ ಔಷಧ ವಿತರಣೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು. ಆರ್ಥಿಕ ಸಮಸ್ಯೆಯಿಂದಾಗಿ ಉಚಿತ/ರಿಯಾಯಿತಿ ದರದಲ್ಲಿ ಚಿಕಿತ್ಸೆ ಮತ್ತು ಆರ್ಥಿಕವಾಗಿ ಹಿಂದುಳಿದ, ಹಿರಿಯ ನಾಗರಿಕ ಮತ್ತು ವಿಶೇಷ ಚೇತನರಿಗೆ, ಔಷಧ ಪಡೆಯಲು ಸಾಧ್ಯವಾಗದ ಕಾಯಿಲೆ ಪೀಡಿತರಿಗೆ ಈ ಯೋಜನೆಯಡಿ ಉಚಿತ ಔಷಧ ನೀಡಲಾಗುತ್ತದೆ. ಬಿಪಿ, ಶುಗರ್, ಥೈರಾಯ್ಡ್, ಮೆದುಳು, ಮಾನಸಿಕ, ಪಾರ್ಶ್ವವಾಯು (ಸ್ಟ್ರೋಕ್) ಮುಂತಾದ ದೀರ್ಘಕಾಲದ ಕಾಯಿಲೆಗಳಿಗೆ ಔಷಧ ಪಡೆಯುತ್ತಿರುವವರು ವೈದ್ಯರ ಸಲಹಾ ಚೀಟಿ ಮತ್ತು ಆರ್ಥಿಕ ಸಂಕಷ್ಟದ ವಿವರದೊಂದಿಗೆ ಅರ್ಜಿ ಸಲ್ಲಿಸಿ ಉಚಿತ ಔಷಧ ನೆರವು ಪಡೆಯಲು ಹೇಳಿದರು. ಜಿಲ್ಲೆಯಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು 'ರಸ್ತೆ ಸುರಕ್ಷತಾ ಜಾಗೃತಿ ಬೀದಿ ನಾಟಕ ಅಭಿಯಾನ' ಆಯೋಜಿಸಲಾಗಿದೆ. ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ನಾಟಕಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಹೆಲ್ಮೆಟ್ ಧರಿಸುವುದು, ಅತಿವೇಗ ಚಾಲನೆ ತಡೆಯುವುದು, ಸೀಟ್ ಬೆಲ್ಟ್ ಬಳಕೆ, ಮತ್ತು ಚಾಲನೆ ವೇಳೆ ಮೊಬೈಲ್ ಬಳಸದಿರುವ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ವಿವರಿಸಿದರು. ಗೋಷ್ಠಿಯಲ್ಲಿ ಟ್ರಸ್ಟ್ನ ಸಂಘಟನಾ ಕಾರ್ಯದರ್ಶಿಗಳಾದ ಎಂ.ಸಿ.ಅಮಿತ್‌ಗೌಡ, ವಿಶ್ವ, ಸದಸ್ಯೆ ಶೋಭ ಇದ್ದರು.
    1
    ಜಿಲ್ಲಾಧ್ಯಂತ `ಬೀದಿ ನಾಟಕಗಳ ಮೂಲಕ ರಸ್ತೆ ಅಪಘಾತಗಳ ತಡೆ ಮತ್ತು ಜಾಗೃತಿ ಅಭಿಯಾನ'
ಮಂಡ್ಯ: ಸಾಮಾಜಿಕ ಹಾಗೂ ಮಾನವೀಯ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀ ಮಹಾಲಿಂಗೇಗೌಡ ಮುದ್ದನಘಟ್ಟ ಫೌಂಡೇಶನ್ ವತಿಯಿಂದ ಜಿಲ್ಲೆಯ ಜನರಿಗಾಗಿ `ಉಚಿತ ಔಷಧ ನೆರವು' ಹಾಗೂ ಜಿಲ್ಲಾಧ್ಯಂತ `ಬೀದಿ ನಾಟಕಗಳ ಮೂಲಕ ರಸ್ತೆ ಅಪಘಾತಗಳ ತಡೆ ಮತ್ತು ಜಾಗೃತಿ ಅಭಿಯಾನ' ನಡೆಯಲಿದೆ ಎಂದು ಫೌಂಡೇಷನ್‌ನ ಟ್ರಸ್ಟಿ ಎಂ.ಎನ್.ರವಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೌಂಡೇಷನ್‌ನಿAದ ನಿರಂತರ ಜನಪರ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಅಂತೆಯೇ ಸಾಮಾಜಿಕ ಜವಾಬ್ದಾರಿಯಿಂದ ಔಷಧ ವಿತರಣೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ಆರ್ಥಿಕ ಸಮಸ್ಯೆಯಿಂದಾಗಿ ಉಚಿತ/ರಿಯಾಯಿತಿ ದರದಲ್ಲಿ ಚಿಕಿತ್ಸೆ ಮತ್ತು ಆರ್ಥಿಕವಾಗಿ ಹಿಂದುಳಿದ, ಹಿರಿಯ ನಾಗರಿಕ ಮತ್ತು ವಿಶೇಷ ಚೇತನರಿಗೆ, ಔಷಧ ಪಡೆಯಲು ಸಾಧ್ಯವಾಗದ ಕಾಯಿಲೆ ಪೀಡಿತರಿಗೆ ಈ ಯೋಜನೆಯಡಿ ಉಚಿತ ಔಷಧ ನೀಡಲಾಗುತ್ತದೆ. ಬಿಪಿ, ಶುಗರ್, ಥೈರಾಯ್ಡ್, ಮೆದುಳು, ಮಾನಸಿಕ, ಪಾರ್ಶ್ವವಾಯು (ಸ್ಟ್ರೋಕ್) ಮುಂತಾದ ದೀರ್ಘಕಾಲದ ಕಾಯಿಲೆಗಳಿಗೆ ಔಷಧ ಪಡೆಯುತ್ತಿರುವವರು ವೈದ್ಯರ ಸಲಹಾ ಚೀಟಿ ಮತ್ತು ಆರ್ಥಿಕ ಸಂಕಷ್ಟದ ವಿವರದೊಂದಿಗೆ ಅರ್ಜಿ ಸಲ್ಲಿಸಿ ಉಚಿತ ಔಷಧ ನೆರವು ಪಡೆಯಲು ಹೇಳಿದರು.
ಜಿಲ್ಲೆಯಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು 'ರಸ್ತೆ ಸುರಕ್ಷತಾ ಜಾಗೃತಿ ಬೀದಿ ನಾಟಕ ಅಭಿಯಾನ' ಆಯೋಜಿಸಲಾಗಿದೆ. ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ನಾಟಕಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಹೆಲ್ಮೆಟ್ ಧರಿಸುವುದು, ಅತಿವೇಗ ಚಾಲನೆ ತಡೆಯುವುದು, ಸೀಟ್ ಬೆಲ್ಟ್ ಬಳಕೆ, ಮತ್ತು ಚಾಲನೆ ವೇಳೆ ಮೊಬೈಲ್ ಬಳಸದಿರುವ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಟ್ರಸ್ಟ್ನ ಸಂಘಟನಾ ಕಾರ್ಯದರ್ಶಿಗಳಾದ ಎಂ.ಸಿ.ಅಮಿತ್‌ಗೌಡ, ವಿಶ್ವ, ಸದಸ್ಯೆ ಶೋಭ ಇದ್ದರು.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.