Shuru
Apke Nagar Ki App…
ಎಚ್ ಟಿ ಎಂ ಆಯುರ್ವೇದ ಬೆಂಗಳೂರು ಹಕೀಮ್ ನೌಷದ್ ಖಾನ್ ( ಪಾರಂಪರಿಕ )
Naushad khan Vahab khan
ಎಚ್ ಟಿ ಎಂ ಆಯುರ್ವೇದ ಬೆಂಗಳೂರು ಹಕೀಮ್ ನೌಷದ್ ಖಾನ್ ( ಪಾರಂಪರಿಕ )
- Ramakrishna KPHosakote, Bengaluru Rural😢on 20 December
More news from Karnataka and nearby areas
- ಹುಟ್ಟೂರಿಗೆ ಬಂದ ರಕ್ಷಿತಾ ಶೆಟ್ಟಿಗೆ ಅದ್ಧೂರಿ ಸ್ವಾಗತಬಿಗ್‌ಬಾಸ್ ಸೀಸನ್ 12ರ ರನ್ನರ್. #JBNEWSಕನ್ನಡ1
- ಮಳವಳ್ಳಿ ತಾಲೂಕಿನ ಹೊನಗನಹಳ್ಳಿ ಹಳ ದಾಸನಹಳ್ಳಿ ಮಾರ್ಗ ಮಧ್ಯದಲ್ಲಿ ಸಮೀಪ ಸುಟ್ಟು ಬಸ್ಮವಾದ ಮಾರುತಿ ಕಾರು ಮಳವಳ್ಳಿ ತಾಲೂಕಿನ ಹಳದಾಸನಹಳ್ಳಿ ಹೊರಗನಹಳ್ಳಿ ಮಾರ್ಗ ಮಧ್ಯದ ರಸ್ತೆಯಲ್ಲಿ ಹಾಕಲಾಗಿದ್ದ ರಾಗಿ ಮುಂದಿನ ಮೆದೆಗೆ ಮಾರುತಿ ಕಾರು ಡಿಕ್ಕಿ ಹೊಡೆದು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಬುಧವಾರ ರಾತ್ರಿ ಜರುಗಿದೆ ಬೆಂಗಳೂರಿಂದ ಕಗಲಿಪುರದಲ್ಲಿ ನಡೆಯುತ್ತಿರುವ ಮನೆಯ ಗೃಹಪ್ರವೇಶಕ್ಕೆಂದು ಈ ಮಾರುತಿ ಕಾರಿನಲ್ಲಿ ಕುಟುಂಬ ಒಂದು ಬಂದಿತ್ತು ಎನ್ನಲಾಗಿದೆ. ಬುದುವಾರ ಮಧ್ಯರಾತ್ರಿ ಕೆಲಸ ನಿಮಿತ್ತವೋ ಮಾರುತಿ ಕಾರಿನಲ್ಲಿ ಹೋಗುವಾಗ ತಿರುವಿನಲ್ಲಿ ಹಾಕಲಾಗಿದ್ದ ರಾಗಿ ಹುಲಿನ ಮೆದೆಗೆ ಡಿಕ್ಕಿ ಹೊಡೆದು ರಸ್ತೆ ಬದಿಗೆ ಜಾರಿಕೊಂಡು ಹೋಗಿ ಕಾರು ಬೆಂಕಿಯಿಂದ ಸುಟ್ಟು ಹೋಗಿದೆ . ಈ ಸಂದರ್ಭದಲ್ಲಿ ಕಾರಿನಲ್ಲಿ ಇದ್ದವರು ಯಾರು? ಯಾವ ರೀತಿ ಈ ಘಟನೆ ನಡೆದಿದೆ ಎಂಬುದು ಅನುಮಾನ ಮೂಡಿಸಿದೆ ಈ ಬಗ್ಗೆ ಬೆಳಕವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಾಗ ಮಾತ್ರ ಘಟನೆಯ ಸಂಪೂರ್ಣ ವಿವರ ಬೆಳಕಿಗೆ ಬರಲಿದೆ1
- ಹನೂರು ಪಟ್ಟಣದ ಕೊಳ್ಳೇಗಾಲ ರಸ್ತೆಯಲ್ಲಿ ಬೈಕ್ ಸವಾರನೋರ್ವ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಹನೂರು ಹೊರವಲಯದ ಹುಲ್ಲೇಪುರದ ಪೆಟ್ರೋಲ್ ಬಂಕ್ ಸಮೀಪ ಬೂದುಬಾಳ ಗ್ರಾಮದ ಸುದೀಪ್ ಎಂಬವರು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ನಿಯಂತ್ರಣ ತಪ್ಪಿ ಬಿದ್ದು ತೀವ್ರ ಗಾಯಗೊಂಡಿದ್ದಾರೆ. ಘಟನೆಯ ಬಳಿಕ 108 ಆಂಬ್ಯುಲೆನ್ಸ್ ಆಗಮಿಸಲು ವಿಳಂಬವಾದ ಕಾರಣ, ಸ್ಥಳೀಯರು ತಕ್ಷಣ ಗಾಯಾಳುವನ್ನು ಹನೂರು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.1
- ಯಳಂದೂರು : ಶಾಲಾ ಕಾಲೇಜು ವಿದ್ಯಾರ್ಥಿಗಳು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆನ್ನುವುದು ನಮ್ಮೆಲ್ಲರ ಸುರಕ್ಷತೆಗಾಗಿ ಎನ್ನುವುದನ್ನು ನಾವೆಲ್ಲರೂ ಅರಿತು ಕೊಳ್ಳುವ ಮೂಲಕ ಪೋಷಕರು ಮತ್ತು ಸಾರ್ವಜನಿಕರಿಗೆ ವಿದ್ಯಾರ್ಥಿಗಳು ಜಾಗೃತಿ ಮೂಡಿಸಬೇಕೆಂದು ಡಿ ವೈ ಎಸ್ ಪಿ ಧರ್ಮೇಂದ್ರ ರವರು ಅಭಿಪ್ರಾಯ ವ್ಯಕ್ತಪಡಿಸಿದರು.. ಯಳಂದೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಮತ್ತು ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಡಿ ವೈ ಎಸ್ ಪಿ ಧರ್ಮೇಂದ್ರ ರವರು ಚಾಲನೆ ನೀಡಿ ಮಾತನಾಡಿ ಮಕ್ಕಳು ವಾಹನ ಚಲಾಯಿಸಿ ಅನಾಹುತಗಳಾದಲ್ಲಿ ಅವರ ಪಾಲಕರು ಜೈಲಿಗೆ ಹೋಗುವ ಪರಿಸ್ಥಿತಿ ಇದೆ. 18 ವರ್ಷ ತುಂಬಿದ ನಂತರವಷ್ಟೇ ವಾಹನ ಚಾಲನೆಗೆ ಅರ್ಹರು. ಸಾರಿಗೆ ಇಲಾಖೆಯ ಮೂಲಕ ಚಾಲನ ಪರವಾನಗಿ, ವಾಹನ ಮಾಲೀಕತ್ವ ಮತ್ತು ವಿಮೆ ಪ್ರಮಾಣ ಪತ್ರಗಳನ್ನು ಹೊಂದಿದ್ದಲ್ಲಿ ಮಾತ್ರ ವಾಹನ ಚಾಲನೆ ಮಾಡಬೇಕು. ಸಂಚಾರಿ ನಿಯಮಗಳು ಎಲ್ಲರ ಸುರಕ್ಷತೆಗಾಗಿ ರೂಪಿತವಾಗಿದ್ದು, ನಿಯಮ ಪಾಲನೆ ನಮ್ಮ ಜವಾಬ್ದಾರಿಯಲ್ಲ ಎನ್ನುವ ಧೋರಣೆ ನಾವೆಲ್ಲರೂ ಬಿಡಬೇಕು. ಕಾನೂನು ಪಾಲನೆ ನಮ್ಮ ಆದ್ಯ ಕರ್ತವ್ಯ. ವಿದ್ಯಾರ್ಥಿಗಳು ಶಿಸ್ತು, ಕಾನೂನು ಪಾಲನೆ ಮತ್ತು ಕಾನೂನಿನ ಬಗ್ಗೆ ತಿಳಿದುಕೊಂಡು ದೇಶದ ಅಭಿವೃದ್ಧಿಗೆ ಪಣ ತೊಡಬೇಕು, ಅಲ್ಲದೆ ಸಂಚಾರಿ ನಿಯಮದ ಬಗ್ಗೆ ರಸ್ತೆ ಸುರಕ್ಷತೆ ಮತ್ತು ಕಾನೂನಿನ ಬಗ್ಗೆ ವಿದ್ಯಾರ್ಥಿಗಳು ತಮ ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ತಿಳಿಸುವಂತಹ ಕೆಲಸ ಮಾಡಬೇಕು ಎಂಬ ಸಲಹೆ ನೀಡಿದರು. ನಂತರ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚಾರಿ ನಿಯಮದ ಬಗ್ಗೆ ವಿದ್ಯಾರ್ಥಿಗಳು ಜಾಥ ತೆರಳಿ ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಘೋಷಣೆ ಕೂಗುತ್ತಾ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಸಿಪಿಐ ಜಿ ಕೆ ಸುಬ್ರಹ್ಮಣ್ಯ, ಪಿಎಸ್ಐ. ಎಸ್ ಕೆ .ಆಕಾಶ್ ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲರಾದ ಆರ್ ನಂಜುಂಡಯ್ಯ ಶಿಕ್ಷಕ ಪುಟ್ಟಸ್ವಾಮಿ, ಶ್ರೀಧರ್ ನಾಯಕ್, ಪೊಲೀಸ್ ಪೇದೆ ಜಡೆ ಸ್ವಾಮಿ , ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ವರದಿ ಎಸ್.ಪುಟ್ಟಸ್ವಾಮಿ ಹೊನ್ನೂರು ಚಾಮರಾಜನಗರ ಜಿಲ್ಲೆ4
- *ಭಾರತ ನಲ್ಲಿ ವೈರಲ್*1
- STATEMENT GIVEN BY SHAFI ULLA BAIG SAHEB RELATED WAQF BOARD ISSUES AND DARGAHI MASJID SWADAY ROAD MYSORE1
- ಸ್ವಾವಲಂಬಿ ಜೀವನಕ್ಕೆ ಆದ್ಯತೆ ನೀಡಿ. ದೊಡ್ಡಬಳ್ಳಾಪುರ ಮಹಿಳೆಯರು, ವಿಶೇಷಚೇತನರು ಸ್ವಾವಲಂಬಿ ಜೀವನ ನಡೆಸಲು ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ ( ಗ್ಯಾಸ್ ) ಸಹಾಯಹಸ್ತ ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಆಹಾರ ಸಚಿವ ಮುನಿಯಪ್ಪ ತಿಳಿಸಿದರು. ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆಯ ವತಿಯಿಂದ ಬುಧವಾರ ನಡೆದ ಮಹಿಳೆಯರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರೆಯಲು ಚೆಕ್ ವಿತರಣೆ, ವಿಕಲಚೇತನರಿಗೆ ವೀಲ್ ಚೇರ್ ವಿತರಣೆ ಹಾಗೂ ಬ್ಯಾಟರಿ ಚಾಲಿತ ವಾಹನಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ಯಾಸ್ ಸಂಸ್ಥೆಯು 7 ಜಿಲ್ಲೆಗಳಲ್ಲಿ ಸುಮಾರು 20 ಸಾವಿರ ಕುಟುಂಬಗಳ ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಸಬಲೀಕರಣದ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ. ವಿಶೇಷ ಚೇತನರಿಗೆ ಉದ್ಯೊಗ ನೀಡುತ್ತಿದೆ. ಸಮಾಜ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಅಪಾರ. ಅದರಂತೆ ಮಕ್ಕಳನ್ನು ಉತ್ತಮ ಪ್ರಜೆಯಾಗಿಸುವುದು ಮಹಿಳೆಯರ ಆದ್ಯತೆ ಸಹ ಆಗಬೇಕು. ಸಂಸ್ಥೆ ನೀಡುತ್ತಿರುವ ಸೇವೆಯಿಂದ ವಿಶೇಷಚೇತನರು ತಮ್ಮ ಜೀವನ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಅನ್ಯರಿಗೂ ಮಾದರಿಯಾಗುವಂತೆ ಬದುಕುತ್ತಿದ್ದಾರೆ. ಇಂದು ನೀಡುತ್ತಿರುವ ವೀಲ್ ಚೇರ್ ಹಾಗೂ ಹಣದ ಸೇವೆಯು ಸ್ವಾವಲಂಬಿ ಜೀವನ ನಡೆಸಲು ಎಡೆ ಮಾಡಿಕೊಡುತ್ತದೆ ಎಂದರು. ಶಾಸಕ ಧೀರಜ್ ಮುನಿರಾಜು ಮಾತನಾಡಿ ತಾಲ್ಲೂಕಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಂದಿನ ಬಜೆಟ್‌ನಲ್ಲಿ ರಾಜ್ಯ ಸರಕಾರದ ಯೋಜನೆಗಳು ಇನ್ನು ಹೆಚ್ಚಾಗಿ ತಲುಪಬೇಕಿದೆ. ರಾಜ್ಯದಲ್ಲೇ ಅತಿ ಹೆಚ್ಚು ರಾಗಿ ಖರೀದಿಸುವ ತಾಲೂಕು ಇದಾಗಿದೆ. ರೈತರ ಸ್ವಾವಲಂಬಿ ಜೀವನ ನಡೆಸಲು ಇದು ಸಹಕಾರಿಯಾಗಿದೆ. ಈವರೆಗೆ ತಾಲೂಕಿನಲ್ಲಿ 12,930 ರೈತರು ನೋಂದಣಿಯಾಗಿದ್ದಾರೆ. ಆದರೆ, ರಾಗಿ ಖರೀದಿ ಕೇಂದ್ರಗಳು ಕೇವಲ 2 ಇರುವುದರಿಂದ ರೈತರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ವಾರಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ತಪ್ಪಿಸಲು ಇನ್ನೂ 3 ಅಥವಾ 4 ಕೇಂದ್ರಗಳನ್ನು ತೆರೆಯಬೇಕಾಗಿದ್ದು, ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲು ಸಚಿವರಲ್ಲಿ ಮನವಿ ಮಾಡಿದರು. ಫೊಟೊ:೨೧ಡಿಬಿಪಿ೪ ದೊಡ್ಡಬಳ್ಳಾಪುರದ ಗ್ಯಾಸ್ ಸಂಸ್ಥೆಯಿಂದ ಮಹಿಳೆಯರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರೆಯಲು ಸಚಿವ ಕೆಎಚ್ ಮುನಿಯಪ್ಪ ಚೆಕ್ ವಿತರಣೆ ಮಾಡಿದರು. ಶಾಸಕ ಧೀರಜ್ ಮುನಿರಾಜು, ಸಂಸ್ಥೆಯ ಅಮಲಿನಾಯಕ್, ಕೆಪಿಸಿಸಿ ಸದಸ್ಯ ಮುನಿರಾಜು, ಮೋಟಿವೇಷನ್ ಸಂಸ್ಥೆಯ ಮಹೇಶ್ ಚಂದ್ರಶೇಖರ, ನಗರಸಭಾ ಸದಸ್ಯೆ ನಾಗರತ್ನಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮುದ್ದಣ್ಣ, ವಿಕಲಚೇತನ ಇಲಾಖೆ ಉಪ ನಿರ್ದೇಶಕ ಜಗದೀಶ್ ಇದ್ದರು.1
- ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದ ₹21 ಕೋಟಿ ವೆಚ್ಚದ ನೀರಿನ ಟ್ಯಾಂಕ್.. #JBNEWSKANNADA1
- *ಭಾರತ ನಲ್ಲಿ ವೈರಲ್*1