VIKAS NEWS BREAKING ಮುದಗಲ್‌ನಲ್ಲಿ ದಾಸಶ್ರೇಷ್ಠ ಕನಕದಾಸರ 539ನೇ ಜಯಂತಿ ಸಂಭ್ರಮ.! ಪುರಸಭೆ ಹಾಗೂ ನಾಡ ಕಾರ್ಯಾಲಯದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ; ಕನಕದಾಸರ ಸಮಾಜ ಸುಧಾರಣೆಯ ತತ್ವಾದರ್ಶಗಳ ಸ್ಮರಣೆ ಮುದಗಲ್: ದಾಸಶ್ರೇಷ್ಠ ಭಕ್ತ ಕನಕದಾಸರ 539ನೇ ಜಯಂತಿಯನ್ನು ಮುದಗಲ್ ಪಟ್ಟಣದ ಪುರಸಭೆ ಹಾಗೂ ಮೇಗಳಪೇಟೆಯ ವೃತ್ತದಲ್ಲಿ ಮತ್ತು ನಾಡ ಕಾರ್ಯಾಲಯದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಪುರಸಭೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಪೂಜೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ದೇವೇಂದ್ರ ವಕೀಲ್ ಹಾಗೂ ದೊಡ್ಡ ಸಿದ್ದಯ್ಯ ಅವರು, ಕನಕದಾಸರು ತಮ್ಮ ಕೀರ್ತನೆ ಮತ್ತು ದಾಸ ಸಾಹಿತ್ಯದ ಮೂಲಕ ಸಮಾಜಕ್ಕೆ ಸಮಾನತೆ, ಭಕ್ತಿ, ಮಾನವೀಯತೆ ಹಾಗೂ ಸಾಮಾಜಿಕ ಸುಧಾರಣೆಯ ಸಂದೇಶ ಸಾರಿದ ಮಹಾನ್ ದಾರ್ಶನಿಕರು. ಜಾತಿ-ಮತಗಳ ಅಸಮಾನತೆಯನ್ನು ಪ್ರಶ್ನಿಸಿ, ತಮ್ಮ ಸಾಹಿತ್ಯದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ನಂದಪ್ಪ ಕತ್ತಿ, ಶಿವನಾಗಪ್ಪ, ಅಯ್ಯಪ್ಪಯ್ಯ ಸ್ವಾಮಿ, ಚನ್ನಬಸವ ಗಿಡದೂರು, ನಾಗರಾಜ ದಫೇದಾರ್, ನಾಗರಾಜ ಪೂಜಾರಿ, ನಿಂಗಪ್ಪ, ಪರಮಾನಂದ, ಮಂಜುನಾಥ, ಬಸವರಾಜ ಜೆಲ್ಲಿ, ನಾಗಪ್ಪ ಸೇರಿದಂತೆ ಪುರಸಭೆ ಮತ್ತು ನಾಡ ಕಾರ್ಯಾಲಯದ ಸಿಬ್ಬಂದಿ ಹಾಗೂ ನೂರಾರು ಕನಕದಾಸರ ಅಭಿಮಾನಿಗಳು ಭಾಗವಹಿಸಿದ್ದರು. ವಿಕಾಸ್ ನ್ಯೂಸ್ ಕನ್ನಡ | ಮುದಗಲ್
VIKAS NEWS BREAKING ಮುದಗಲ್‌ನಲ್ಲಿ ದಾಸಶ್ರೇಷ್ಠ ಕನಕದಾಸರ 539ನೇ ಜಯಂತಿ ಸಂಭ್ರಮ.! ಪುರಸಭೆ ಹಾಗೂ ನಾಡ ಕಾರ್ಯಾಲಯದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ; ಕನಕದಾಸರ ಸಮಾಜ ಸುಧಾರಣೆಯ ತತ್ವಾದರ್ಶಗಳ ಸ್ಮರಣೆ ಮುದಗಲ್: ದಾಸಶ್ರೇಷ್ಠ ಭಕ್ತ ಕನಕದಾಸರ 539ನೇ ಜಯಂತಿಯನ್ನು ಮುದಗಲ್ ಪಟ್ಟಣದ ಪುರಸಭೆ ಹಾಗೂ ಮೇಗಳಪೇಟೆಯ ವೃತ್ತದಲ್ಲಿ ಮತ್ತು
ನಾಡ ಕಾರ್ಯಾಲಯದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಪುರಸಭೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಪೂಜೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ದೇವೇಂದ್ರ ವಕೀಲ್ ಹಾಗೂ ದೊಡ್ಡ ಸಿದ್ದಯ್ಯ ಅವರು, ಕನಕದಾಸರು ತಮ್ಮ ಕೀರ್ತನೆ ಮತ್ತು ದಾಸ ಸಾಹಿತ್ಯದ
ಮೂಲಕ ಸಮಾಜಕ್ಕೆ ಸಮಾನತೆ, ಭಕ್ತಿ, ಮಾನವೀಯತೆ ಹಾಗೂ ಸಾಮಾಜಿಕ ಸುಧಾರಣೆಯ ಸಂದೇಶ ಸಾರಿದ ಮಹಾನ್ ದಾರ್ಶನಿಕರು. ಜಾತಿ-ಮತಗಳ ಅಸಮಾನತೆಯನ್ನು ಪ್ರಶ್ನಿಸಿ, ತಮ್ಮ ಸಾಹಿತ್ಯದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ನಂದಪ್ಪ ಕತ್ತಿ,
ಶಿವನಾಗಪ್ಪ, ಅಯ್ಯಪ್ಪಯ್ಯ ಸ್ವಾಮಿ, ಚನ್ನಬಸವ ಗಿಡದೂರು, ನಾಗರಾಜ ದಫೇದಾರ್, ನಾಗರಾಜ ಪೂಜಾರಿ, ನಿಂಗಪ್ಪ, ಪರಮಾನಂದ, ಮಂಜುನಾಥ, ಬಸವರಾಜ ಜೆಲ್ಲಿ, ನಾಗಪ್ಪ ಸೇರಿದಂತೆ ಪುರಸಭೆ ಮತ್ತು ನಾಡ ಕಾರ್ಯಾಲಯದ ಸಿಬ್ಬಂದಿ ಹಾಗೂ ನೂರಾರು ಕನಕದಾಸರ ಅಭಿಮಾನಿಗಳು ಭಾಗವಹಿಸಿದ್ದರು. ವಿಕಾಸ್ ನ್ಯೂಸ್ ಕನ್ನಡ | ಮುದಗಲ್
- ಅಮರ ಕಲ್ಯಾಣ ಶರಣೋತ್ಸವ: ಶರಣರ ತತ್ವ-ಆದರ್ಶಗಳ ಹೊತ್ತ ಮಹಿಳೆಯರ ಭವ್ಯ ಮೆರವಣಿಗೆ, ಸಮಾನತೆಯ ಜಾಗೃತಿ, ಅಮರ ಕಲ್ಯಾಣ ಶರಣೋತ್ಸವ: ಶರಣರ ತತ್ವ-ಆದರ್ಶಗಳ ಹೊತ್ತ ಮಹಿಳೆಯರ ಭವ್ಯ ಮೆರವಣಿಗೆ, ಸಮಾನತೆಯ ಜಾಗೃತಿ ಚಿಕ್ಕಹೆಸರೂರು (ಕೊಡೆಕಲ್ಲು ಬಸವಣ್ಣನವರ ಮಠದ ಬಳಿ): ಸಮಾಜದಲ್ಲಿ ಸಮಸಮಾನತೆಯ ಸಂದೇಶ ಸಾರಿದ ಕಲ್ಯಾಣದ ಮಹಾನ್ ಶರಣರು ಮತ್ತು ಸಂತರ ತತ್ವ-ಆದರ್ಶಗಳ ಬರಹಗಳ ಪುಸ್ತಕಗಳನ್ನು ಮಹಿಳೆಯರು ತಲೆಯ ಮೇಲೆ ಹೊತ್ತು ಸಾಗಿದ ಭವ್ಯ ಮೆರವಣಿಗೆ ಹಾಗೂ ವಿಚಾರಧಾರೆ ಜಾಗೃತಿ ಕಾರ್ಯಕ್ರಮವು ಅಮರ ಕಲ್ಯಾಣ ಶರಣೋತ್ಸವದ ಅಂಗವಾಗಿ ಚಿಕ್ಕಹೆಸರೂರಿನಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಜರುಗಿತು. ಜೋಗಮ್ಮನವರ ಬಿಂದಿಗೆ ಸೇವೆ ಕುಣಿತ1
- ಲಿಂಗಸುಗೂರು.ತಾಲೂಕಿನಲ್ಲಿ ಪಂಪ್ಸೆಟ್ಟುಗಳು ಕಳ್ಳತನ ಆರೋಪ ರೈತರ ಆಕ್ರೋಶ ಲಿಂಗಸುಗೂರು . ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಹೊಲಗಳಿಗೆ ತೋಟಗಳಿಗೆ ನೀರು ಬಿಡುವಂತಹ ಪಂಪ್ಸೆಟ್ ಗಳು ಕಳ್ಳತನವಾಗಿದ್ದು ಕಳ್ಳತನವಾದ ಪಂಪ್ಸೆಟ್ಟುಗಳನ್ನು ಗುಜುರಿ ಅಂಗಡಿಯ ಮಾಲೀಕ ಖರೀದಿ ಮಾಡಿರುವ ಹಿನ್ನೆಲೆ ಕಳ್ಳನನ್ನು ತೋರಿಸಿ ಎಂದು ಗುಜರಿ ಅಂಗಡಿಯ ಮಾಲೀಕನ ಮೇಲೆ ರೈತರು ಆಕ್ರೋಶ ವ್ಯಕ್ತಪಡಿಸಿದರು ಇತ್ತೀಚೆಗೆ ಲಿಂಗಸುಗೂರು ತಾಲೂಕಿನ ಗ್ರಾಮಗಳಲ್ಲಿ ರೈತರು ಹೊಲಗಳಿಗೆ ನೀರು ಬಿಡುವಂತ ಪಂಪ್ಸೆಟ್ಟುಗಳು ಕಳ್ಳತನವಾಗುತ್ತಿದ್ದು ಕಳ್ಳತನವಾದ ಪಂಪ್ಸೆಟ್ಟುಗಳು ಎಲ್ಲಿ ಹೋದವು ಎಂದು ರೈತರು ಅನುಮಾನ ಗೊಂಡ ರೈತರು ಪಟ್ಟಣದ ಕರಡಕಲ್ ರಸ್ತೆಯಲ್ಲಿ ಇರುವ ಗುಜರಿ ಅಂಗಡಿಗೆ ಭೇಟಿ ನೀಡಿದಾಗ ಗುಜುರಿ ಅಂಗಡಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಪಂಪ್ಸೆಟ್ಟುಗಳು ಕಂಡುಬಂದಿದ್ದು ಕಳ್ಳತನ ಮಾಡಿದ ಕಳ್ಳರನ್ನು ತೋರಿಸಬೇಕು ಎಂದು ಗುಜುರಿ ಅಂಗಡಿಯ ಮಾಲೀಕನ ಮೇಲೆ ರೈತರು ಮುಗಿಬಿದ್ದಿರುವ ಘಟನೆ ಜರುಗಿದೆ. ಸ್ವಲ್ಪ ಸಮಯದ ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಂಗಡಿ ಮಾಲೀಕ ಹಾಗೂ ಕಳ್ಳನನ್ನು ವಶಕ ಪಡೆದು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.3
- ಆರ್. ಮಾನಸಯ್ಯ ನೆತೃತ್ವದಲ್ಲಿ ಅದ್ಧೂರಿಯಾಗಿ ಜರುಗಿದ ವಚನ ವತ್ತಿಗೆ ಮೆರವಣಿಗೆ ಲಿಂಗಸುಗೂರು, ನ.27: ತಾಲೂಕಿನ ಚಿಕ್ಕಹೆಸರೂರು ಗ್ರಾಮದಲ್ಲಿ ಆದಿಲಿಂಗ ಅನಾದಿಶರಣ ಶ್ರೀ ಆರೂಢ ಸಂಗಮನಾಥ ಅರಿವಿನ ಮಂಟಪ ಹಾಗೂ ಅಮರ ಕಲ್ಯಾಣ ಶಾಖಾ ಮಂಟಪದ ವತಿಯಿಂದ ವಚನ ವತ್ತಿಗೆ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಆದಿ ಬಸವೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಅಮರ ಕಲ್ಯಾಣ ಅರಿವಿನ ಮಂಟಪದವರೆಗೆ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ವಚನ ಸಾಹಿತ್ಯದ ಮಹತ್ವ, ಶರಣರ ತತ್ವಾದರ್ಶ ಹಾಗೂ ಬಸವಣ್ಣನವರ ಸಮಾನತೆಯ ಸಂದೇಶವನ್ನು ಸಾರುವ ಉದ್ದೇಶದಿಂದ ಆಯೋಜಿಸಿದ್ದ ಮೆರವಣಿಗೆ ಗಮನ ಸೆಳೆಯಿತು. ವಚನಗಳ ಮೂಲಕ ಸಮಾಜದಲ್ಲಿ ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಸಂದೇಶವನ್ನು ಸಾರಲಾಯಿತು. ಈ ಸಂದರ್ಭದಲ್ಲಿ ಸಾಹಿತಿ ಚಿಂತಕ ಆರ್. ಮಾನಸಯ್ಯ, ತಿಪ್ಪಣ್ಣ ಚಿಕ್ಕ ಹೆಸರೂರು, ಗುರುರಾಜ ಗೌಡೂರು, ಆದೇಶ ನಗನೂರು, ಲಿಂಗಪ್ಪ ಪರಂಗಿ, ಶಿವಪ್ಪ ನೂರಾರು ಭಕ್ತರು ಇದ್ದರು.4
- VIKAS NEWS BREAKING ಮುದಗಲ್‌ನಲ್ಲಿ ದಾಸಶ್ರೇಷ್ಠ ಕನಕದಾಸರ 539ನೇ ಜಯಂತಿ ಸಂಭ್ರಮ.! ಪುರಸಭೆ ಹಾಗೂ ನಾಡ ಕಾರ್ಯಾಲಯದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ; ಕನಕದಾಸರ ಸಮಾಜ ಸುಧಾರಣೆಯ ತತ್ವಾದರ್ಶಗಳ ಸ್ಮರಣೆ ಮುದಗಲ್: ದಾಸಶ್ರೇಷ್ಠ ಭಕ್ತ ಕನಕದಾಸರ 539ನೇ ಜಯಂತಿಯನ್ನು ಮುದಗಲ್ ಪಟ್ಟಣದ ಪುರಸಭೆ ಹಾಗೂ ಮೇಗಳಪೇಟೆಯ ವೃತ್ತದಲ್ಲಿ ಮತ್ತು ನಾಡ ಕಾರ್ಯಾಲಯದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಪುರಸಭೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಪೂಜೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ದೇವೇಂದ್ರ ವಕೀಲ್ ಹಾಗೂ ದೊಡ್ಡ ಸಿದ್ದಯ್ಯ ಅವರು, ಕನಕದಾಸರು ತಮ್ಮ ಕೀರ್ತನೆ ಮತ್ತು ದಾಸ ಸಾಹಿತ್ಯದ ಮೂಲಕ ಸಮಾಜಕ್ಕೆ ಸಮಾನತೆ, ಭಕ್ತಿ, ಮಾನವೀಯತೆ ಹಾಗೂ ಸಾಮಾಜಿಕ ಸುಧಾರಣೆಯ ಸಂದೇಶ ಸಾರಿದ ಮಹಾನ್ ದಾರ್ಶನಿಕರು. ಜಾತಿ-ಮತಗಳ ಅಸಮಾನತೆಯನ್ನು ಪ್ರಶ್ನಿಸಿ, ತಮ್ಮ ಸಾಹಿತ್ಯದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ನಂದಪ್ಪ ಕತ್ತಿ, ಶಿವನಾಗಪ್ಪ, ಅಯ್ಯಪ್ಪಯ್ಯ ಸ್ವಾಮಿ, ಚನ್ನಬಸವ ಗಿಡದೂರು, ನಾಗರಾಜ ದಫೇದಾರ್, ನಾಗರಾಜ ಪೂಜಾರಿ, ನಿಂಗಪ್ಪ, ಪರಮಾನಂದ, ಮಂಜುನಾಥ, ಬಸವರಾಜ ಜೆಲ್ಲಿ, ನಾಗಪ್ಪ ಸೇರಿದಂತೆ ಪುರಸಭೆ ಮತ್ತು ನಾಡ ಕಾರ್ಯಾಲಯದ ಸಿಬ್ಬಂದಿ ಹಾಗೂ ನೂರಾರು ಕನಕದಾಸರ ಅಭಿಮಾನಿಗಳು ಭಾಗವಹಿಸಿದ್ದರು. ವಿಕಾಸ್ ನ್ಯೂಸ್ ಕನ್ನಡ | ಮುದಗಲ್4
- ಕನಕದಾಸರ ಬದುಕು, ಸಾಹಿತ್ಯ ಮತ್ತು ಸಮಾನತೆಯ ಸಂದೇಶ ಇಂದಿನ ಸಮಾಜಕ್ಕೆ ದಾರಿದೀಪ: ಸಯ್ಯದ್ ಶಂಶುದ್ದೀನ್ ಕನಕದಾಸರ ಬದುಕು, ಸಾಹಿತ್ಯ ಮತ್ತು ಸಮಾನತೆಯ ಸಂದೇಶ ಇಂದಿನ ಸಮಾಜಕ್ಕೆ ದಾರಿದೀಪ: ಸಯ್ಯದ್ ಶಂಶುದ್ದೀನ್ ಹಟ್ಟಿ ಚಿನ್ನದ ಗಣಿ : ಪಟ್ಟಣದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಸಂತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಭಕ್ತಿಭಾವ ಹಾಗೂ ಗೌರವದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಸಯ್ಯದ್ ಶಂಶುದ್ದೀನ್ ಅವರು, ಕನಕದಾಸರ ಜೀವನ ಚರಿತ್ರೆ, ಸಾಮಾಜಿಕ ಚಿಂತನೆ, ಸಾಹಿತ್ಯಿಕ ಕೊಡುಗೆ ಹಾಗೂ ಅವರು ನಡೆಸಿದ ವೈಚಾರಿಕ ಹೋರಾಟದ ಕುರಿತು ವಿವರವಾಗಿ ತಿಳಿಸಿದರು. ಕನಕದಾಸರು ಕೇವಲ ಭಕ್ತ ಕವಿಗಳಾಗಿರದೆ, ಸಮಾಜದಲ್ಲಿನ ಜಾತಿಭೇದ, ಅಸಮಾನತೆ ಮತ್ತು ಸಾಮಾಜಿಕ ತಾರತಮ್ಯಗಳ ವಿರುದ್ಧ ತಮ್ಮ ಕೀರ್ತನೆಗಳ ಮೂಲಕ ಜನಜಾಗೃತಿ ಮೂಡಿಸಿದ ಮಹಾನ್ ದಾರ್ಶನಿಕರಾಗಿದ್ದರು. ತಮ್ಮ ಸಾಹಿತ್ಯದ ಮೂಲಕ ಮಾನವೀಯತೆ, ಸಮಾನತೆ, ಭಕ್ತಿ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಸಾರಿದ ಅವರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು. ಸಮಾಜದಲ್ಲಿ ಜಾತಿ, ಧರ್ಮಗಳ ಹೆಸರಿನಲ್ಲಿ ಭೇದಭಾವ ಮಾಡದೆ, ಎಲ್ಲರೂ ಪರಸ್ಪರ ಗೌರವದಿಂದ ಬದುಕಬೇಕು. ಕನಕದಾಸರ ಆದರ್ಶ ಮತ್ತು ವಿಚಾರಗಳನ್ನು ಇಂದಿನ ಯುವಜನತೆ ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಹಟ್ಟಿ ಘಟಕದ ಅಧ್ಯಕ್ಷ ಅಹ್ಮದ್ ಬಾಬಾ, ಉಪಾಧ್ಯಕ್ಷ ದೇವೇಂದ್ರಪ್ಪ ಗೊಡನಾಳ, ಮೈಬೂಬ್ ಗ್ಯಾರೇಜ್, ಶಿರಾಜುದ್ದೀನ್ ಕರೋಶಿ ಪಟ್ಟಣ ಪಂ, ಸದಸ್ಯ, ರಂಗನಾಥ್ ಮುಂಡರಗಿ ಪಟ್ಟಣ ಪಂಚಾಯತ್ ಸದಸ್ಯ, ಚನ್ನಬಸು ನಾಯಕ್, ಅಲ್ಲಭಕ್ಷ ಕಡ್ಡೋಣಿ, ಬಂದೇನವಾಜ್,ಗುಂಡಪ್ಪ, ಬುಜ್ಜ ನಾಯಕ್, ಸುನಿಲ್ ಕುಮಾರ್, ದಾವೂದ್, ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದು,2
- ತಾಯಿ ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಶಾಸಕ ವಜ್ಜಲ್ ನಿರ್ಲಕ್ಷ್ಯ : ಡಿ.ಎಸ್ ಹೂಲಗೇರಿ ಗಂಭೀರ ಅರೋಪ ಲಿಂಗಸುಗೂರು: ಪಟ್ಟಣದಲ್ಲಿ 35 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಶಾಸಕ ಮಾನಪ್ಪ ವಜ್ಜಲ್ ನಿರ್ಲಕ್ಷ್ಯ ವಹಿಸಿ ಅಡ್ಡಗಾಲು ಆಗಿದ್ದಾರೆ ಎಂದು ಮಾಜಿ ಶಾಸಕ, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರಾದ ಡಿ.ಎಸ್ ಹೂಲಗೇರಿ ಗಂಭೀರ ಆರೋಪ ಮಾಡಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸ್ಪತ್ರೆ ಆರಂಭಕ್ಕೆ ಆರೋಗ್ಯ ಸಚಿವರು ದಿನಾಂಕ ನೀಡಿದ್ದರು. ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ಶಾಸಕರಿಗೆ ಇರುತ್ತದೆ ಆದರೆ ಶಾಸಕ ಮಾನಪ್ಪ ವಜ್ಜಲ್ ಅವರು ಉದ್ಘಾಟನೆ ಮಾಡದೇ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ, ಜನರ ಸೇವೆಗೆ ಆಸ್ಪತ್ರೆ ಆರಂಭಿಸಬೇಕೇ ಹೊರತು ವಿನಾಃಕಾರಣ ಜನರಿಂದ ಸೌಲತ್ತು ದೂರ ಆಗದಂತೆ ಶಾಸಕ ವಜ್ಜಲ್ ರವರು ನೋಡಿಕೊಳ್ಳಬೇಕೆಂದು ತಿಳಿಸಿದರು. ಕ್ಷೇತ್ರದ ಅಭಿವೃದ್ದಿ ಸಂಪೂರ್ಣ ಕುಂಠಿತಗೊಂಡಿದೆ. 35ಕೋಟಿ ಖರ್ಚು ಮಾಡಿ ಜನರ ಆರೋಗ್ಯದ ಹಿತದೃಷ್ಠೀಯಿಂದ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದರೆ ಶಾಸಕ ವಜ್ಜಲ್ ರು ಆಸ್ಪತ್ರೆ ಉದ್ಘಾಟನೆಗೆ ವಿನಾ ಕಾರಣ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಲೆ ಏರಿಕೆಗೆ ಮೂಲ ಕಾರಣ ಪೆಟ್ರೋಲ್, ಡಿಸೇಲ್ ದರ ಏರಿಕೆ ಪ್ರಮುಖ ಕಾರಣವಾಗಿದೆ, ಇದನ್ನು ಅರಿಯದ ಶಾಸಕ ಮಾನಪ್ಪ ವಜ್ಜಲ್ ಹಾಗೂ ಬಿಜೆಪಿ ಪಕ್ಷದಿಂದ ಬೆಲೆ ಏರಿಕೆ ವಿರುದ್ದ ಪ್ರತಿಭಟನೆ ಮಾಡಿದ್ದಾರೆ, ಆದರೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ನೇರ ಕಾರಣವಾಗಿದೆ. ಆದರೆ ಬಿಜೆಪಿ ಹಾಗೂ ಶಾಸಕ ವಜ್ಜಲ್ ರವರು ಪೂರ್ವಾಪರ ಆರಿತುಕೊಳ್ಳದೇ ಹೋರಾಟ ಮಾಡಿರುವುದು ಖಂಡಿನೀಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಕೆಪಿಸಿಸಿ ಪದವಿದಾರರ ಜಿಲ್ಲಾಧ್ಯಕ್ಷ ಸಂಜೀವಪ್ಪ ಹುನಕುಂಟಿ, ಕಾಂಗ್ರೆಸ್ ಮುಖಂಡ ಮುದುಕಪ್ಪ ವಕೀಲರು,ಎಪಿಎಂಸಿ ಅಧ್ಯಕ್ಷ ಅಮರೇಶ ಹೆಸರೂರು, ಪ್ರಚಾರ ಸಮಿತಿ ಅಧ್ಯಕ್ಷ ಮಹ್ಮದ್ ರಫಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿಶ್ವಕ್ರಾಂತಿ ಗೆಜ್ಜಲಗಟ್ಟಾ, ಅಮರೇಗೌಡ ಐದನಾಳ, ಎಸ್ಸಿ ಸೆಲ್ ಅಧ್ಯಕ್ಷ ಉಮೇಶ ಐಹೋಳೆರ, ಜೀವನ ಗೌಡ ಗದ್ದೆನಗೌಡ ಸೇರಿದಂತೆ ಇದ್ದರು.1
- ಲಿಂಗಸೂಗೂರಿನಲ್ಲಿ ಅದ್ದೂರಿಯಾಗಿ ಕನಕದಾಸರ ಭಾವಚಿತ್ರ ಮೆರವಣಿಗೆ. ಲಿಂಗಸೂಗೂರಿನಲ್ಲಿ ಅದ್ದೂರಿಯಾಗಿ ಕನಕದಾಸರ ಭಾವಚಿತ್ರ ಮೆರವಣಿಗೆ ತಾಲೂಕು ಆಡಳಿತದಿಂದ ವಿಜೃಂಭಣೆಯ ಕನಕ ಜಯಂತಿ ಆಚರಣೆ – ಸಮಾಜದ ಮುಖಂಡರು, ವಿವಿಧ ರಾಜಕೀಯ ಪಕ್ಷಗಳ ನಾಯಕರು ಭಾಗಿ ಲಿಂಗಸೂಗೂರು: ಕನಕ ಜಯಂತಿ ಅಂಗವಾಗಿ ತಾಲೂಕು ಆಡಳಿತ ವತಿಯಿಂದ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಪ್ರಯುಕ್ತ ಕನಕದಾಸರ ಭಾವಚಿತ್ರದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು, ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸಿದ್ದರು. ಮೆರವಣಿಗೆಯುದ್ದಕ್ಕೂ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಅವರ ಭಕ್ತಿ, ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ದಾಸ ಸಾಹಿತ್ಯದ ಸಂದೇಶಗಳನ್ನು ಸ್ಮರಿಸಲಾಯಿತು. ಸಾರ್ವಜನಿಕರು ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡು ಜಯಂತಿ ಸಂಭ್ರಮಕ್ಕೆ ಸಾಕ್ಷಿಯಾದರು.3
- ಅಮರ ಕಲ್ಯಾಣ ಶರಣೋತ್ಸವ: ಶರಣರ ತತ್ವ-ಆದರ್ಶಗಳ ಹೊತ್ತ ಮಹಿಳೆಯರ ಭವ್ಯ ಮೆರವಣಿಗೆ, ಸಮಾನತೆಯ ಜಾಗೃತಿ : ಗುರುರಾಜ ಗೌಡೂರು ಭಾಷಣ ಲಿಂಗಸೂಗೂರ ಚಿಕ್ಕಹೆಸರೂರು: (ಕೊಡೆಕಲ್ಲು ಬಸವಣ್ಣನವರ ಮಠದ ಬಳಿ): ಸಮಾಜದಲ್ಲಿ ಸಮಸಮಾನತೆಯ ಸಂದೇಶ ಸಾರಿದ ಕಲ್ಯಾಣದ ಮಹಾನ್ ಶರಣರು ಮತ್ತು ಸಂತರ ತತ್ವ-ಆದರ್ಶಗಳ ಬರಹಗಳ ಪುಸ್ತಕಗಳನ್ನು ಮಹಿಳೆಯರು ತಲೆಯ ಮೇಲೆ ಹೊತ್ತು ಸಾಗಿದ ಭವ್ಯ ಮೆರವಣಿಗೆ ಹಾಗೂ ವಿಚಾರಧಾರೆ ಜಾಗೃತಿ ಕಾರ್ಯಕ್ರಮವು ಅಮರ ಕಲ್ಯಾಣ ಶರಣೋತ್ಸವದ ಅಂಗವಾಗಿ ಚಿಕ್ಕಹೆಸರೂರಿನಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಜರುಗಿತು. ಮೆರವಣಿಗೆ ಹಾಗೂ ಕಲಾತಂಡದ ಪ್ರದರ್ಶನ ಕೊಡೆಕಲ್ಲು ಬಸವಣ್ಣನವರ ಮಠದ ಸಮೀಪವಿರುವ ಚಿಕ್ಕಹೆಸರೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಈ ಶರಣೋತ್ಸವದಲ್ಲಿ, ಪಾಮನಕಲ್ಲೂರು ಬಸವಣ್ಣ ದೇವಸ್ಥಾನದಿಂದ ಮುಖ್ಯ ವೇದಿಕೆಯವರೆಗೆ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಮಹಿಳೆಯರು ಶರಣರ ಚಿಂತನೆ ಮತ್ತು ಆದರ್ಶಗಳನ್ನು ಸಾರುವ ಪುಸ್ತಕಗಳನ್ನು ತಲೆಯ ಮೇಲೆ ಹೊತ್ತು ಗೌರವ ಸಮರ್ಪಿಸಿದರು. ಭಜನೆ ಹಾಗೂ ವಿವಿಧ ಕಲಾತಂಡಗಳ ಕಲೆಯ ಸೊಬಗು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು. ಸಮಾನತೆಯ ಸಂದೇಶ ಮತ್ತು ವಿಚಾರ ಜಾಗೃತಿ ಗೆಜ್ಜಲಗಟ್ಟಾದ ಆರ್. ಮಾಸಯ್ಯ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾತಂಡದವರು ಹಾಗೂ ಗಣ್ಯರು ಪಾಲ್ಗೊಂಡು, ಬಸವಾದಿ ಶರಣರ ತತ್ವಗಳನ್ನು ಸ್ಮರಿಸಿದರು. ನಾಡಿಗೆ ಸಮಾನತೆಯ ಬೆಳಕು ನೀಡಿದ ಶರಣರ ಬದುಕು, ವಚನ ಸಾಹಿತ್ಯ ಮತ್ತು ಸಾಮಾಜಿಕ ಕಳಕಳಿಯ ಕುರಿತು ಭಾಷಣಗಳ ಮೂಲಕ ಸಾರ್ವಜನಿಕರಲ್ಲಿ ವಿಚಾರಧಾರೆ ಜಾಗೃತಿ ಮೂಡಿಸಲಾಯಿತು. ಶರಣರ ಆದರ್ಶಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಲಾಯಿತು. ಗಣ್ಯರ ಉಪಸ್ಥಿತಿ ಈ ವಿಶೇಷ ಕಾರ್ಯಕ್ರಮದಲ್ಲಿ ಪರಂಗಿ ಲಿಂಗಪ್ಪ (ಕಸಬಾ ಲಿಂಗಸೂಗೂರು), ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ತಾಲೂಕಾಧ್ಯಕ್ಷರಾದ ಗುರುರಾಜ ಗೌಡರು, ಎಂ. ಗಂಗಾಧರ್ (ಸಿಂಧನೂರು), ಆದೇಶ ನಾಗನೂರು ಸೇರಿದಂತೆ ವಿವಿಧ ಕಲಾತಂಡಗಳ ಕಲಾವಿದರು ಮತ್ತು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.1