ಏಪ್ರಿಲ್ 20ರಿಂದ ಮುಂಡವಾಡ ಗ್ರಾಮದಲ್ಲಿ ಶ್ರೀ ಹಾಲೇಶ್ವರ ಜಾತ್ರಾ ಮಹೋತ್ಸವ ಗದಗ: ಏಪ್ರಿಲ್ 20ರಿಂದ ಮುಂಡವಾಡ ಗ್ರಾಮದಲ್ಲಿ ಶ್ರೀ ಹಾಲೇಶ್ವರ ಜಾತ್ರಾ ಮಹೋತ್ಸವ ಮುಂಡರಗಿ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮುಂಡವಾಡ ಗ್ರಾಮದಲ್ಲಿ ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರ ಜಾತ್ರಾ ಮಹೋತ್ಸವವು ಏಪ್ರಿಲ್ 20 ಮತ್ತು 21ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವೈಭವದಿಂದ ಜರುಗಲಿದೆ. ಶ್ರೀ ಶಾಲಿವಾಹನ ಶಕೆ 1948ನೇ ಪರಾಭವನಾಮ ಸಂವತ್ಸರದ ಅಕ್ಷಯ ತೃತೀಯ ಹಾಗೂ ಬಸವ ಜಯಂತಿಯ ಪ್ರಯುಕ್ತ ಈ ಸಡಗರದ ಜಾತ್ರೆ ಹಮ್ಮಿಕೊಳ್ಳಲಾಗಿದೆ. ಶ್ರೀ ಸದ್ಗುರು ಶಿವಯೋಗಿ ಹಾಲನಂಜುಂಡೇಶ್ವರ ಮಹಾಸ್ವಾಮಿಗಳ ಕೃಪಾ ಆಶೀರ್ವಾದದೊಂದಿಗೆ, ಹಾಲಸ್ವಾಮಿಯ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ಹಾಗೂ ಗ್ರಾಮದ ಸಕಲ ದೇವರಿಗೆ ಮಹಾಪೂಜೆ ನೆರವೇರಲಿದೆ. ಕಾರ್ಯಕ್ರಮಗಳ ವಿವರ: ಏಪ್ರಿಲ್ 20 (ಸೋಮವಾರ): ಬೆಳಿಗ್ಗೆ 8:00 ಗಂಟೆಗೆ ಎತ್ತಿನ ಮೆರವಣಿಗೆಯೊಂದಿಗೆ ಸಂಭ್ರಮ ಆರಂಭವಾಗಲಿದೆ. ಸಾಯಂಕಾಲ 5:30ಕ್ಕೆ ಶ್ರೀ ಹಾಲಸ್ವಾಮಿಯ ನಿಶಾನೆ ಹರಾಜು ಪ್ರಕ್ರಿಯೆ ನಡೆದ ನಂತರ, ಭಕ್ತರ ಸಮ್ಮುಖದಲ್ಲಿ ವೈಭವದ 'ಮಹಾ ರಥೋತ್ಸವ' ಜರುಗಲಿದೆ. ರಾತ್ರಿ 9:00 ಗಂಟೆಗೆ ರಾಜ್ಯ ಪ್ರಶಸ್ತಿ ವಿಜೇತ ಶ್ರೀ ವೀರಣ್ಣ ಚನ್ನಪ್ಪ ಅಂಗಡಿ ಹಾಗೂ ತಂಡದವರಿಂದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಏಪ್ರಿಲ್ 21 (ಮಂಗಳವಾರ): ಸಾಯಂಕಾಲ 5:00 ಗಂಟೆಗೆ ಗ್ರಾಮದ ಸಾಂಪ್ರದಾಯಿಕ ಕಲೆಯಾದ 'ಕಡುಬಿನ ಕಾಳಗ' ಹಾಗೂ ರಾತ್ರಿ 9:00 ಗಂಟೆಗೆ ರೋಚಕವಾದ 'ಟಗರಿನ ಕಾಳಗ' ಆಯೋಜಿಸಲಾಗಿದೆ. ಈ ಎಲ್ಲ ಧಾರ್ಮಿಕ ಹಾಗೂ ಜಾನಪದ ಕಾರ್ಯಕ್ರಮಗಳಲ್ಲಿ ಮುಂಡವಾಡ ಗ್ರಾಮದ ಸದ್ಭಕ್ತರು ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗಳ ಕೃಪೆಗೆ ಪಾತ್ರರಾಗಬೇಕೆಂದು ವ್ಯವಸ್ಥಾಪಕ ಮಂಡಳಿ ಮತ್ತು ಗ್ರಾಮದ ಗುರು-ಹಿರಿಯರು ಪ್ರಕಟಣೆಯಲ್ಲಿ ಕೋರಿದ್ದಾರೆ.

- ನರಗುಂದದಲ್ಲಿ ಭಿಕರ ರಸ್ತೆ ಅಪಘಾತ ವ್ಯಕ್ತಿ ಓರ್ವನ ಮೇಲೆ ಹತ್ತಿ ಇಳಿದ ಲಾರಿ1
- ಗದಗ ಜಿಲ್ಲಾ ಮುಂಡರಗಿ ತಾಲೂಕಿನಲ್ಲಿ ತುಂಗಭದ್ರಾ ನದಿ ತಾಯಿಯ ಒಡಲು ಬಗೆಯುತ್ತಿರುವ ದಂದೆ ಕೊರರು ರಾಜಾರೋಷವಾಗಿ ಅಕ್ರಮ ಮರಳು ಸಾಗಾಟ ಗಣಿಗಾರಿಕೆ ಮೇಲೆ ದಾಳಿ ನಡೆಸಿ ಸುಮಾರು ಆರಕ್ಕು ಹೆಚ್ಚು ಮರಳು ತುಂಬಿದ ಟ್ರ್ಯಾಕ್ಟರ್ ವಶ ಪಡಿಸಿಕೊಂಡಿದ್ದಾರೆ ಸದ್ಯ ಮುಂಡರಗಿ ಪೊಲೀಸ ಠಾಣಾ ದಲ್ಲಿ ವಾಹನಗಳು ಇವೆ1
- Post by Onlinetv24x71
- ಕುಷ್ಟಗಿ:- ಈ ರಾಜ್ಯದಲ್ಲಿ ಪ್ರತಿ ಮನೆಗೊಂದು ಪೂಜಾ ಮಂದಿರಗಳು ಇರುತ್ತದೆಯೋ ಅದೇ ರೀತಿಯಾಗಿ ಈ ರಾಜ್ಯದಲ್ಲಿ ಕೂಡ ಪ್ರತಿ ಮನೆಗೊಂದು ಗ್ರಂಥಾಲಯ ಇರಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರ ರಾಜ್ಯಾಧ್ಯಕ್ಷ ಡಾ. ಮಾನಸ ಹೇಳಿದರು. ಇಲ್ಲಿನ ಮಾಜಿ ಶಾಸಕ ಕೆ.ಶರಣಪ್ಪ ವಕೀಲರು ಇವರ ಮನೆಯಲ್ಲಿ ಮನೆಗೊಂದು ಗ್ರಂಥಾಲಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪುಸ್ತಕ ಅಂದರೆ ಬರೀ ಪುಸ್ತಕ ಅಲ್ಲ; ಅದು ಜ್ಞಾನದ ಆಗರ. ನಾವು ಜ್ಞಾನದ ವಾರಸುದಾರರು. ಹಾಗಾಗಿ ಹಿರಿಯರು ಮನೆಯಲ್ಲಿ ಪೂಜಾ ಮನೆ ಮಾಡಿದ್ದಾರೆ. ನಾವು ಪೂಜಾ ಮನೆ ಪಕ್ಕ ಒಂದು ಗ್ರಂಥಾಲಯ ಕಟ್ಟೋಣ, ಪುಸ್ತಕ ಜೋಡಿಸೋಣ ಎಂದರು. ಈ ಸಂದರ್ಭದಲ್ಲಿ ಸಮಾರಂಭದಲ್ಲಿ ರಾಜ್ಯೋತ್ಸವ ಪುರಸ್ಕೃತರಾದ ಶೇಖರಗೌಡ ಮಾಲಿಪಾಟೀಲ, ಪುಸ್ತಕ ಪ್ರಾಧಿಕಾರದ ಸದಸ್ಯರು ಹಾಗೂ ಸಂಶೋಧಕರಾದ ಡಾ.ಶರಣಬಸಪ್ಪ ಕೋಲಕಾರ, ರಾಜ್ಯ ಚಲನಚಿತ್ರ ಅಕಾಡೆಮಿಯ ಸದಸ್ಯರು ಮತ್ತು ಲೇಖಕಿ ಸಾವಿತ್ರಿ ಮುಜಮದಾರ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಗ್ರಂಥಾಲಯ ಜಾಗೃತಿ ಅಭಿಯಾನದ ಸಂಚಾಲಕರು ಹಾಗೂ ಸಾಹಿತಿಗಳಾದ ಜಿ ಎಸ್ ಗೋನಾಳ, ರವೀಂದ್ರ ಬಾಕಳೆ, ಕರಿಸಿದ್ದನಗೌಡ ಮಾಲಿಪಾಟೀಲ, ಸಾಹಿತಿಗಳಾದ ಹನುಮಂತಪ್ಪ ಈಟಿ, ಡಾ.ನಾಗರಾಜ ಹೀರಾ, ಕನ್ನಡಪರ ಹೋರಾಟಗಾರರಾದ ಸ.ಶರಣಪ್ಪ ಪಾಟೀಲ, ಪತ್ರಕರ್ತರಾದ ರವೀಂದ್ರ ಬಾಕಳೆ, ಹನುಮೇಶ ಗುಮಗೇರಿ, ಪವಾಡೆಪ್ಪ ಚೌಡ್ಕಿ, ಪರಶಿವಮೂರ್ತಿ, ಉಮೇಶ ಹಿರೇಮಠ ಹಾಗೂ ಇತರರು ಇದ್ದರು. ಜಾನಪದ ಅಕಾಡೆಮಿಯ ಸದಸ್ಯರು ಹಾಗೂ ಸಾಹಿತಿಗಳಾದ ಜೀವನಸಾಬ ವಾಲೀಕಾರ ಅವರು ನಿರೂಪಿಸಿದರು. *2
- कर्नाटक के यादगिर में दर्दनाक सड़क हादसा सामने आया है। तेज रफ्तार कार और एक निजी बस की आमने-सामने टक्कर के बाद दोनों वाहनों में भीषण आग लग गई। आग इतनी तेजी से फैली कि कार सवार 7 लोग जिंदा जल गए। घटना के बाद इलाके में अफरा-तफरी मच गई। स्थानीय लोगों ने बचाव की कोशिश की, लेकिन आग की लपटें इतनी तेज थीं कि किसी को बचाया नहीं जा सका। सूचना मिलते ही पुलिस और दमकल की टीमें मौके पर पहुंचीं और आग पर काबू पाया। फिलहाल हादसे के कारणों की जांच की जा रही है, वहीं इस भयावह घटना से पूरे इलाके में सनसनी फैल गई है।1
- ಇಳಕಲ್ ನಗರದ ಸಮಾಜ ಸೇವಕಿ ಹೋರಾಟಗಾರ್ತಿ ಲಕ್ಷ್ಮೀಬಾಯಿ ಗಾಜಿ ಅವರಿಗೆ ರಾಜ್ಯದ ಪ್ರತಿಷ್ಠಿತ ದಿನಪತ್ರಿಕೆ ವಿಜಯ ಕರ್ನಾಟಕ ದಿನಪತ್ರಿಕೆ ಕೊಡ ಮಾಡುವ ವುಮೆನ್ ಹಚಿವರ್ಸ್ ಅವಾರ್ಡ್ ಪಡೆದಿದ್ದಾರೆ. ಹೀಗಾಗಿ ಇಳಕಲ್ ನಗರದ ಪತ್ರಕರ್ತರು ಹಾಗೂ ನಗರಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಸನ್ಮಾನಿಸಿದರು.1
- Post by Karibasava Balal1
- ಗದಗ ಜಿಲ್ಲಾ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿ ದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದು ದೇವಸ್ಥಾನದಲ್ಲಿ ತುಂಬಾ ಗಲಿಜು ಮತ್ತು ದುಶ್ಚಟಗಳ ತಾಣವಾಗಿದೆ ಇದನ್ನು ಅಧಿಕಾರಿಗಳು ತಡೆಯಬೇಕು ಎಂದು ಮೈಲಾರಪ್ಪ ಕಲಕೇರಿ ಅವರು ಆಗ್ರಹಿಸಿದರು3