Shuru
Apke Nagar Ki App…
ಹುನಗುಂದ ಪಟ್ಟಣದಲ್ಲಿ ಕನಕದಾಸರ ಜಯಂತ್ಯೋತ್ಸವ: ಪುತ್ಥಳಿಗೆ ಮಾಲಾರ್ಪಣೆ, ಅದ್ಧೂರಿ ಮೆರವಣಿಗೆ ಹುನಗುಂದ: ಪಟ್ಟಣದಲ್ಲಿ ದಾಸಶ್ರೇಷ್ಠ ಭಕ್ತ ಕನಕದಾಸರ ೫೨೬ನೇ ಜಯಂತ್ಯೋತ್ಸವವನ್ನು ಸಮಾಜದ ಬಾಂಧವರು ಅತ್ಯಂತ ಸಡಗರ ಹಾಗೂ ಸಂಭ್ರಮದಿAದ ಆಚರಿಸಿದರು. ಇಲ್ಲಿನ ಕನಕದಾಸರ ವೃತ್ತದಲ್ಲಿ ಕನಕದಾಸರ ಭಾವಚಿತ್ರಕ್ಕೆ ಸಮಾಜದ ಹಿರಿಯರು ಮತ್ತು ಮುಖಂಡರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ನಂತರ ಕನಕದಾಸರ ಭಾವಚಿತ್ರದ ಭವ್ಯ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿAದ ಸಂಚರಿಸಿತು. ಈ ಸಂದರ್ಭದಲ್ಲಿ ಸಮಾಜದ ಮುಖಂಡರು, ಮಹಿಳೆಯರು, ಯುವಕರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.
Aaryan Ganiger
ಹುನಗುಂದ ಪಟ್ಟಣದಲ್ಲಿ ಕನಕದಾಸರ ಜಯಂತ್ಯೋತ್ಸವ: ಪುತ್ಥಳಿಗೆ ಮಾಲಾರ್ಪಣೆ, ಅದ್ಧೂರಿ ಮೆರವಣಿಗೆ ಹುನಗುಂದ: ಪಟ್ಟಣದಲ್ಲಿ ದಾಸಶ್ರೇಷ್ಠ ಭಕ್ತ ಕನಕದಾಸರ ೫೨೬ನೇ ಜಯಂತ್ಯೋತ್ಸವವನ್ನು ಸಮಾಜದ ಬಾಂಧವರು ಅತ್ಯಂತ ಸಡಗರ ಹಾಗೂ ಸಂಭ್ರಮದಿAದ ಆಚರಿಸಿದರು. ಇಲ್ಲಿನ ಕನಕದಾಸರ ವೃತ್ತದಲ್ಲಿ ಕನಕದಾಸರ ಭಾವಚಿತ್ರಕ್ಕೆ ಸಮಾಜದ ಹಿರಿಯರು ಮತ್ತು ಮುಖಂಡರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ನಂತರ ಕನಕದಾಸರ ಭಾವಚಿತ್ರದ ಭವ್ಯ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿAದ ಸಂಚರಿಸಿತು. ಈ ಸಂದರ್ಭದಲ್ಲಿ ಸಮಾಜದ ಮುಖಂಡರು, ಮಹಿಳೆಯರು, ಯುವಕರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.
More news from ಕರ್ನಾಟಕ and nearby areas
- ನಂದವಾಡಗಿ ಗ್ರಾಮದಲ್ಲಿ ಸಂಭ್ರಮದಿಂದ ಜರುಗಿದ ಭಕ್ತ ಕನಕದಾಸರ ಜಯಂತಿ.. ನಂದವಾಡಗಿ ಗ್ರಾಮದಲ್ಲಿ ನಡೆದ ಶ್ರೀ ಭಕ್ತ ಕನಕದಾಸರ ಜಯಂತಿಯಲ್ಲಿ ಭಾಗಿಯಾಗಿ ಕನಕದಾಸರ ಮೂರ್ತಿ ಗೆ ಸಮಾಜ ಸೇವಕರಾದ ಅಶೋಕ ಚಲವಾದಿ, ಸವಿತಾ ಚಲವಾದಿ ಮಾಲಾರ್ಪಣೆ ಮಾಡಿದರು . ಈ ಸಂದರ್ಭದಲ್ಲಿ ಸರಸ್ವತಿ ಈಟಿ ಉಪಸ್ಥಿತರಿದ್ದರು. ಈ ಸಮಾರಂಬದಲ್ಲಿ ನಂದವಾಡಗಿ ಪೂಜ್ಯರ ಆಶೀರ್ವಾದ ಪಡೆಯಲಾಯಿತು.4
- ಹುನಗುಂದ ಪಟ್ಟಣದಲ್ಲಿ ಕನಕದಾಸರ ಜಯಂತ್ಯೋತ್ಸವ: ಪುತ್ಥಳಿಗೆ ಮಾಲಾರ್ಪಣೆ, ಅದ್ಧೂರಿ ಮೆರವಣಿಗೆ ಹುನಗುಂದ: ಪಟ್ಟಣದಲ್ಲಿ ದಾಸಶ್ರೇಷ್ಠ ಭಕ್ತ ಕನಕದಾಸರ ೫೨೬ನೇ ಜಯಂತ್ಯೋತ್ಸವವನ್ನು ಸಮಾಜದ ಬಾಂಧವರು ಅತ್ಯಂತ ಸಡಗರ ಹಾಗೂ ಸಂಭ್ರಮದಿAದ ಆಚರಿಸಿದರು. ಇಲ್ಲಿನ ಕನಕದಾಸರ ವೃತ್ತದಲ್ಲಿ ಕನಕದಾಸರ ಭಾವಚಿತ್ರಕ್ಕೆ ಸಮಾಜದ ಹಿರಿಯರು ಮತ್ತು ಮುಖಂಡರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ನಂತರ ಕನಕದಾಸರ ಭಾವಚಿತ್ರದ ಭವ್ಯ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿAದ ಸಂಚರಿಸಿತು. ಈ ಸಂದರ್ಭದಲ್ಲಿ ಸಮಾಜದ ಮುಖಂಡರು, ಮಹಿಳೆಯರು, ಯುವಕರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.1
- ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ' ನಡೆಸುತ್ತಿರುವ ನಿರಂತರ ಧರಣಿ ಸ್ಥಳಕ್ಕೆ ಸಚಿವರು, ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಭೇಟಿ! ಅಧಿವೇಶನ ಮುಗಿದ ತಕ್ಷಣ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ, ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಕೊಂಡೊಯ್ಯುತ್ತೇವೆ" — ಸಚಿವ ಶ್ರೀ ಶಿವರಾಜ್ ತಂಗಡಗಿ ಭರವಸೆ ಕೊಪ್ಪಳ: ಕೊಪ್ಪಳ ನಗರಕ್ಕೆ ಹೊಂದಿಕೊಂಡಿರುವ ಬಲ್ಡೋಟಾ ಸಮೂಹದ (MSPL) ಪೆಲ್ಲೆಟ್ ಘಟಕದಿಂದ ಉಂಟಾಗುತ್ತಿರುವ ತೀವ್ರ ವಾಯುಮಾಲಿನ್ಯ ಹಾಗೂ ಕಂದು ಧೂಳನ್ನು ವಿರೋಧಿಸಿ 'ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ' ನಡೆಸುತ್ತಿರುವ ನಿರಂತರ ಹೋರಾಟದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶಿವರಾಜ್ ತಂಗಡಗಿ, ಕೊಪ್ಪಳ ಶಾಸಕ ಶ್ರೀ ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿದರು. "ಬಲ್ಡೋಟಾ ತಡೆಯಿರಿ, ಬೇಕೇ ಬೇಕು ನ್ಯಾಯ ಬೇಕು, ಶುದ್ಧ ಗಾಳಿ ಮತ್ತು ಶುದ್ಧ ಪರಿಸರ ನಮ್ಮ ಹಕ್ಕು" ಎಂಬ ಘೋಷಣೆಗಳೊಂದಿಗೆ ಪ್ರತಿಭಟನಾಕಾರರು ಜನಪ್ರತಿನಿಧಿಗಳನ್ನು ಬರಮಾಡಿಕೊಂಡರು. ಧರಣಿ ಸ್ಥಳದ ಪ್ರಮುಖ ಮುಖ್ಯಾಂಶಗಳು: ಹೋರಾಟಗಾರರ ಮನವಿ ಮತ್ತು ಅಳಲು: 2011ರಿಂದ ಕಾರ್ಯಾಚರಣೆ ನಡೆಸುತ್ತಿರುವ ಎಂಎಸ್ಪಿಎಲ್ (MSPL) ಪೆಲ್ಲೆಟ್ ಘಟಕದ ಕಂದು ಧೂಳು, ದಟ್ಟ ಹೊಗೆ ಮತ್ತು ವಿಷಾನಿಲವು ಕೊಪ್ಪಳ ಜಿಲ್ಲಾ ಕೇಂದ್ರದ ಸುಮಾರು ಶೇ. 40ರಷ್ಟು ಭಾಗಕ್ಕೆ ಹರಡುತ್ತಿದೆ. ಇದರಿಂದ ಜನರ ಆರೋಗ್ಯ ಮತ್ತು ಪರಿಸರಕ್ಕೆ ತೀವ್ರ ಹಾನಿಯಾಗುತ್ತಿದ್ದು, ಕೂಡಲೇ ಮಾಲಿನ್ಯ ತಡೆಗಟ್ಟಬೇಕೆಂದು ಹೋರಾಟ ಸಮಿತಿಯವರು ಮನವಿ ಪತ್ರ ಓದಿ ಒತ್ತಾಯಿಸಿದರು. ಜನಪ್ರತಿನಿಧಿಗಳ ಬೆಂಬಲ: ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ ಅವರು, "ನಾನಾಗಲಿ, ಶಾಸಕರಾಗಲಿ, ಲೋಕಸಭಾ ಸದಸ್ಯರಾಗಲಿ—ನಮ್ಮ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ನಿಮ್ಮ ಪರವಾಗಿದ್ದೇವೆ. ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿರುವ ಸಾಕಷ್ಟು ಉದಾಹರಣೆಗಳು ನಿಮ್ಮ ಕಣ್ಣೆದುರಿಗಿವೆ," ಎಂದು ಸ್ಪಷ್ಟಪಡಿಸಿದರು. ಡಿಸಿ ಕಚೇರಿಯಲ್ಲಿ ಸಭೆ ಹಾಗೂ ಸಿಎಂ ಭೇಟಿಯ ಭರವಸೆ: "ಬೆಳಗಾವಿ/ನಗರ ಅಧಿವೇಶನ ಮುಗಿದ ತಕ್ಷಣ, ಕಾನೂನು ತೊಡಕುಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಮ್ಮೆಲ್ಲರನ್ನೂ ಕರೆದು ಮಹತ್ವದ ಸಭೆ ನಡೆಸಲಾಗುವುದು. ಅಂದೇ ದಿನಾಂಕ ನಿಗದಿಪಡಿಸಿ, ನಿಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಕರೆದುಕೊಂಡು ಹೋಗುವ ನಿರ್ಧಾರ ಕೈಗೊಳ್ಳುತ್ತೇವೆ," ಎಂದು ಸಚಿವರು ಭರವಸೆ ನೀಡಿದರು. ಸಚಿವರು ಹಾಗೂ ಅಧಿಕಾರಿಗಳ ಭೇಟಿಯ ಸಂದರ್ಭದಲ್ಲಿ ಇತರೆ ಸ್ಥಳೀಯ ವಿಷಯಗಳ ಬಗ್ಗೆ ಚರ್ಚಿಸಲು ಮುಂದಾದಾಗ, ಹೋರಾಟಗಾರರು ಸದ್ಯಕ್ಕೆ ಪರಿಸರ ಮಾಲಿನ್ಯ ಮತ್ತು ಬಲ್ಡೋಟಾ ವಿಷಯವನ್ನು ಮಾತ್ರ ಕೇಂದ್ರೀಕರಿಸುವಂತೆ ಒತ್ತಾಯಿಸಿದರು. ಕೊಪ್ಪಳದ ಪರಿಸರ ಹಾಗೂ ಜನರ ಆರೋಗ್ಯ ರಕ್ಷಣೆಗಾಗಿ ನಡೆಯುತ್ತಿರುವ 'ಬಲ್ಡೋಟಾ ಹಠಾವೋ' ಹೋರಾಟದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶಿವರಾಜ್ ತಂಗಡಗಿ, ಸಂಸದರು, ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಹೋರಾಟಗಾರರೊಂದಿಗೆ ಚರ್ಚೆ ನಡೆಸಿದರು. ಜನರ ಹಿತಾಸಕ್ತಿ ಕಾಪಾಡುವುದಾಗಿ ಭರವಸೆ ನೀಡಿದ್ದಾರೆ. 📌 ಕೊಪ್ಪಳ ಉಳಿಸಿ ಹೋರಾಟಕ್ಕೆ ಕೈಜೋಡಿಸಿ, ಈ ಸುದ್ದಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ! #KoppalBachavo #BaldotaHatao #KoppalNews #ShivarajTangadagi #RaghavendraHitnal #SaveKoppal #ShuruNews #DigitalNews #KannadaNews1
- ಕುಷ್ಟಗಿ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ದರ ಏರಿಕೆ ಖಂಡಿಸಿ ಪ್ರತಿಭಟನೆ. ಕುಷ್ಟಗಿ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಕಾಂಗ್ರೆಸ್ ಸರಕಾರ ದರ ಏರಿಕೆ ಖಂಡಿಸಿ ಶಾಸಕ ದೊಡ್ಡನಗೌಡ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಮಲ್ಲಯ್ಯ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಪಾದಯಾತ್ರೆ ಮೆರವಣಿಗೆ ನಡೆಯಿತು. ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಜಿಪಂ ಸದಸ್ಯ ಫಕೀರಪ್ಪ ಚಳಗೇರಿ, ಕೆ ಮಹೇಶ್, ಶರಣು ತಳ್ಳಿಕೇರಿ ಸೇರಿದಂತೆ ಅನೇಕರು ಇದ್ದರು.1
- ಕುಷ್ಟಗಿಯಲ್ಲಿ ಭಕ್ತಶ್ರೇಷ್ಠ ಕನಕದಾಸರ 539ನೇ ಜಯಂತಿ ಆಚರಣೆ ಕಂಚಿನ ಪ್ರತಿಮೆಗೆ ಶಾಸಕ ದೊಡ್ಡನಗೌಡ ಪಾಟೀಲರಿಂದ ವಿಶೇಷ ಪೂಜೆ ಅನೇಕ ಗಣ್ಯ ವ್ಯಕ್ತಿಗಳು ಭಾಗಿ ಕುಷ್ಟಗಿ:* ಇಲ್ಲಿನ ಭಕ್ತಶ್ರೇಷ್ಠ ಕನಕದಾಸ ಸರ್ಕಲ್ನಲ್ಲಿ ಭಕ್ತಶ್ರೇಷ್ಠ ಕನಕದಾಸರ 539ನೇ ಜಯಂತಿ ಅಂಗವಾಗಿ ಶ್ರೀ ಕನಕದಾಸರ ಕಂಚಿನ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ನಮನ ಸಲ್ಲಿಸಲಾಯಿತು. ಶಾಸಕ ದೊಡ್ಡನಗೌಡ ಪಾಟೀಲ ಅವರು ಕಂಚಿನ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಭಕ್ತಿ ಮೆರೆದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ದೊಡ್ಡನಗೌಡ ಪಾಟೀಲ ಅವರು, "ಭಕ್ತಶ್ರೇಷ್ಠ ಕನಕದಾಸರು ಒಬ್ಬ ಮಹಾನ್ ಸಂತ, ನಾಯಕ. ಇವರು ಒಂದೇ ಜಾತಿಗೆ ಸೀಮಿತರಾಗದೆ, ತಮ್ಮ ಕೀರ್ತನೆಗಳ ಮೂಲಕ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀಡಿದವರು. ಇವರ ಒಂದು ತತ್ವವನ್ನು ಸರ್ವರು ಅಳವಡಿಸಿಕೊಂಡಾಗಲೇ ಇವರ ಜಯಂತಿಗೆ ಅರ್ಥ ಬರುತ್ತದೆ" ಎಂದು ಹೇಳಿದರು. ನಂತರ ಮಾತನಾಡಿದ ದಿಶಾ ಸಮಿತಿ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ದೊಡ್ಡಬಸವನಗೌಡ ಪಾಟೀಲ ಬಯ್ಯಾಪೂರ ಅವರು, "ಕನಕದಾಸರು ಹಿಂದುಳಿದ ವರ್ಗದಲ್ಲಿ ಜನಿಸಿದರು. ಅವರು ಸರ್ವರಿಗೂ ಒಳಿತನ್ನು ಬಯಸಿ, ಕುಲದ ನೆಲೆಯನ್ನು ತೊಳೆದುಹಾಕಿ, ಭಕ್ತಿಯಲ್ಲಿ ಶಕ್ತಿಯನ್ನು ತುಂಬಿ, ನಾನು-ನನ್ನದು ಎಂಬುದನ್ನು ತೊಳೆದು, ಸರ್ವರು ಸಮಾನರು, ಸರ್ವರು ಒಂದಾಗಿ ಬಾಳಿ ಬದುಕಬೇಕು ಎಂದು ತೋರಿಸಿಕೊಟ್ಟವರು. ಆದ್ದರಿಂದ ಅವರ ಆದರ್ಶದ ಮಾರ್ಗವನ್ನು ನಾವುಗಳು ಅಳವಡಿಸಿಕೊಂಡು, ಪ್ರತಿಯೊಬ್ಬರು ಕನಕದಾಸರ ತತ್ವಗಳನ್ನು ಪಾಲನೆ ಮಾಡಬೇಕು" ಎಂದು ತಿಳಿಸಿದರು. ತದನಂತರ ಮಾತನಾಡಿದ ಮಾಜಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಂಡಳಿ ಅಧ್ಯಕ್ಷ ಹಾಗೂ ರಾಜ್ಯ ಬಿಜೆಪಿ ಪಕ್ಷದ ಮುಖಂಡ ಶರಣು ತಳ್ಳಿಕೇರಿ ಅವರು, "ನಮ್ಮಲ್ಲಿ ಜಾತಿ ವ್ಯವಸ್ಥೆ ತೊಲಗಬೇಕಾದರೆ, ನಮ್ಮ ಭಾರತದ ಸಂಸ್ಕೃತ ದೇಶದಲ್ಲಿ ಅನೇಕ ಮಹಾನ್ ನಾಯಕರು ಮಾನವ ಕುಲದ ಒಳಿತಿಗಾಗಿ ಸರ್ವರು ಒಂದಾಗಿ ಬಾಳಬೇಕು, ಜಾತಿ ವ್ಯವಸ್ಥೆ ತೊಲಗಬೇಕು ಎಂದು ಹೇಳಿದ್ದಾರೆ. ಇವತ್ತು ಕನಕದಾಸರು ಕೂಡ ಒಂದೇ ಜಾತಿಗೆ ಸೀಮಿತವಾದವರಲ್ಲ. ಅವರ ಮಾರ್ಗದರ್ಶನ ನಮಗೆ ಬಹಳ ಮುಖ್ಯವಾಗಿದೆ. ಇವತ್ತು ಕನಕದಾಸರ ತತ್ವಗಳು ಅವಶ್ಯ" ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಕೆ. ಮಹೇಶ, ಮಾಜಿ ಪುರಸಭೆ ಸದಸ್ಯ ಕಲ್ಲೇಶ ತಾಳದ್, ಹಾಲುಮತ ಸಮಾಜದ ಹಿರಿಯ ಮುಖಂಡರಾದ ಮಾಹಾಲಿಂಗಪ್ಪ ದೋಟಿಹಾಳ, ಹನಮಂತಪ್ಪ ಚೌಡ್ಕಿ, ಸತ್ಯಪ್ಪ ರಾಜೂರು, ಸಂಗಪ್ಪ ಪಂಚಮ್, ಹನಮಂತಪ್ಪ ಹಳ್ಳಿ, ಹನಮಂತಪ್ಪ ವಡಗೇರಿ, ಹನಮಂತಪ್ಪ ಕತ್ತಿ, ಶಿವಕುಮಾರ ಕತ್ತಿ, ಸಂಗನಗೌಡ ಜೈನರ್, ಜಂಬಣ್ಣ ಬೂದರ್, ಯಮನೂರು ಸಂಗಂಟಿ, ದೇವಪ್ಪ ಕಟ್ಟಿಹೊಲ, ಕೊಳ್ಳಪ್ಪ ಬೂದರ್, ಮಂಜುನಾಥ ನಾಲಗಾರ, ಶೈಲಾಜ ಬಾಗಲಿ, ಲಕ್ಷ್ಮಿ ಗಲ್ಲಗೋನಾಳ, ಶರಣಪ್ಪ ಕತ್ತಿ, ನಾಗರಾಜ ಕೋರಿ, ಬಸವರಾಜ ಗದ್ದಿ, ಯಲ್ಲಪ್ಪ ಬಾಗಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.4
- ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯದ ಒಕ್ಕೂಟದಿಂದ ನ.30ರಂದು ಬೃಹತ್ ಪ್ರತಿಭಟನೆ ಯಲಬುರ್ಗಾ: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣದಲ್ಲಿ ಅವೈಜ್ಞಾನಿಕ ಹಾಗೂ ಸಮರ್ಪಕ ಅಧ್ಯಯನವಿಲ್ಲದ ಕ್ರಮ ಅನುಸರಿಸಲಾಗಿದೆ ಎಂದು ಆರೋಪಿಸಿ, ಬಂಜಾರ, ಭೋವಿ, ಕೊರಮ ಹಾಗೂ ಕೊರಚ ಸಮುದಾಯ ಗಳ ಒಕ್ಕೂಟದಿಂದ ನ.30ರಂದು ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿದೆ ಎಂದು ಗೋರಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಲ್ಕು ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಜನಸಂಖ್ಯೆಯ ವಾಸ್ತವಿಕ ಸ್ಥಿತಿಗತಿಗಳನ್ನು ಸಮರ್ಪಕವಾಗಿ ಪರಿಗಣಿಸದೆ ಒಳಮೀಸಲಾತಿ ವರ್ಗೀಕರಣ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದರಿಂದ ಈಗಾಗಲೇ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಮತ್ತಷ್ಟು ಅನ್ಯಾಯವಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲಿ ಸರ್ಕಾರದ ಗಮನ ಸೆಳೆಯಲು ಸಂಘಟಿತ ಹೋರಾಟ ಅನಿವಾರ್ಯವಾಗಿದೆ ಎಂದರು. ಪಟ್ಟಣದ ಸೇವಾಲಾಲ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದ್ದು, ನಾಲ್ಕು ಸಮುದಾಯಗಳ ಮುಖಂಡರು, ಮಹಿಳೆಯರು, ಯುವಕರು ಹಾಗೂ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಯಾವುದೇ ಒಂದು ಸಮುದಾಯದ ಹೋರಾಟವಲ್ಲ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟವಾಗಿದೆ. ಹೀಗಾಗಿ ಎಲ್ಲರೂ ಪಕ್ಷಾತೀತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣವು ಕೇವಲ ಅಂಕಿ-ಅಅಶಗಳ ಆಧಾರದಲ್ಲಿ ನಡೆಯಬಾರದು. ಆಯಾ ಸಮುದಾಯಗಳ ಜನಸಂಖ್ಯೆ, ಸಾಮಾಜಿಕ ಹಿಂದುಳಿದಿರುವಿಕೆ, ಶೈಕ್ಷಣಿಕ ಪ್ರಗತಿ, ಆರ್ಥಿಕ ಪರಿಸ್ಥಿತಿ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ದೊರೆತಿರುವ ಪ್ರಾತಿನಿಧ್ಯ ಸೇರಿದಂತೆ ಸಮಗ್ರ ಅಂಶಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು. ಸಮುದಾಯಗಳ ವಾಸ್ತವಿಕ ಪರಿಸ್ಥಿತಿಯನ್ನು ಅರಿತು ನ್ಯಾಯಸಮ್ಮತ ನಿರ್ಧಾರ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸಾಧ್ಯತೆಯಿದೆ. ಹೀಗಾಗಿ ಸರ್ಕಾರ ಸಮುದಾಯಗಳ ವಾಸ್ತವ ಸ್ಥಿತಿಗತಿಗಳನ್ನು ಅರಿತು ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಅಧಿವೇಶನಕ್ಕೂ ಮುನ್ನ ಸಮಸ್ಯೆ ಬಗೆಹರಿಸಲು ಆಗ್ರಹ: ರಾಜ್ಯ ಸರ್ಕಾರ ಚಳಿಗಾಲದ ಅಧಿವೇಶನಕ್ಕೂ ಮುನ್ನವೇ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನಾಲ್ಕು ಸಮುದಾಯಗಳ ಮುಖಂಡ ರೊಂದಿಗೆ ಚರ್ಚಿಸಬೇಕು. ಯಾವುದೇ ಸಮುದಾ ಯದ ಹಕ್ಕುಗಳಿಗೆ ಧಕ್ಕೆಯಾಗದಂತೆ ವೈಜ್ಞಾನಿಕ ಹಾಗೂ ಪಾರದರ್ಶಕ ಅಧ್ಯಯನ ನಡೆಸಿ ನ್ಯಾಯಸಮ್ಮತ ನಿರ್ಧಾರ ಕೈಗೊಳ್ಳಬೇಕು ಎಂದು ಎಚ್ಚರಿಸಿದರು. ನಾಲ್ಕು ಸಮುದಾಯಗಳ ಹಕ್ಕು ಮತ್ತು ಮುಂದಿನ ಪೀಳಿಗೆಯ ಭವಿಷ್ಯವನ್ನು ಕಾಪಾಡುವ ಉದ್ದೇಶದಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸಬೇಕು. ಹಕ್ಕುಗಳ ರಕ್ಷಣೆಗಾಗಿ ಒಗ್ಗಟ್ಟಿನಿಂದ ಧ್ವನಿ ಎತ್ತಿದಾಗ ಮಾತ್ರ ಸರ್ಕಾರದ ಗಮನ ಸೆಳೆಯಲು ಸಾಧ್ಯ. ಆದ್ದರಿಂದ ನ.30ರಂದು ನಡೆಯುವ ಪ್ರತಿಭಟನೆ ಯನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಸಹಕರಿಸಬೇಕು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪರಸಪ್ಪ ನಾಯಕ, ಲೋಕೇಶ ಭಜಂತ್ರಿ, ದುರ್ಗಪ್ಪ ವಡ್ಡರ, ಗಣೇಶ ವಡ್ಡರ, ದೇವಪ್ಪ ಪೂಜಾರ, ವಂಕಟೇಶ ಕಾರಭಾರಿ, ವೆಂಕಟೇಶ ನಾಯಕ, ಪ್ರವೀಣ ವಡ್ಡರ, ನಾಗರಾಜ ನಾಯಕ, ಲಕ್ಷ್ಮಣ ಸೇರಿದಂತೆ ನಾಲ್ಕು ಸಮುದಾಯಗಳ ಮುಖಂಡರು ಹಾಜರಿದ್ದರು.1
- ಯಲಬುರ್ಗಾ ಪಟ್ಟಣದಲ್ಲಿ ಇಂದು ಭಕ್ತ ಕನಕದಾಸ ಜಯಂತಿ ಆಚರಣೆ ಮಾಡಲಾಯಿತು ಕನಕ ಜಯಂತೋತ್ಸವದ ಪ್ರಯುಕ್ತ ಕೇಂದ್ರ ಸಾಹಿತ್ಯ ಜನಪದ ಆಕಾಡಮಿ ಪ್ರಶಸ್ತಿ ಪುರಸ್ಕೃತ ಮಾರೇಪ್ಪ ಮಾರೇಪ್ಪ ಚನ್ನದಾಸರ ಹಾಗೂ ಸಂಗಡಿಗರಿಂದ ಕನಕ ಹಾಗೂ ಪುರಂದ ದಾಸರ ತತ್ವ ಪದ ಕಾರ್ಯಕ್ರಮ ಜರುಗಿತು.1
- ಕನಕದಾಸರ ಜಯಂತ್ಯೋತ್ಸವ: ಪುತ್ಥಳಿಗೆ ಮಾಲಾರ್ಪಣೆ, ಅದ್ಧೂರಿ ಮೆರವಣಿಗೆ ಇಳಕಲ್ಲ: ನಗರದಲ್ಲಿ ದಾಸಶ್ರೇಷ್ಠ ಭಕ್ತ ಕನಕದಾಸರ ೫೨೬ನೇ ಜಯಂತ್ಯೋತ್ಸವವನ್ನು ಸಮಾಜದ ಬಾಂಧವರು ಅತ್ಯಂತ ಸಡಗರ ಹಾಗೂ ಸಂಭ್ರಮದಿAದ ಆಚರಿಸಿದರು. ಇಲ್ಲಿನ ಕನಕದಾಸರ ವೃತ್ತದಲ್ಲಿ ಕನಕದಾಸರ ಭಾವಚಿತ್ರಕ್ಕೆ ಸಮಾಜದ ಹಿರಿಯರು ಮತ್ತು ಮುಖಂಡರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ನಂತರ ಕನಕದಾಸರ ಭಾವಚಿತ್ರದ ಭವ್ಯ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿAದ ಸಂಚರಿಸಿತು. ಮೆರವಣಿಗೆಯಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಪುತ್ರ ರಾಜುಗೌಡ ಪಾಟೀಲ ಪಾಲ್ಗೊಂಡು, ಸ್ವತಃ ಡೊಳ್ಳು ಬಾರಿಸುವ ಮೂಲಕ ನೆರೆದಿದ್ದವರಲ್ಲಿ ಉತ್ಸಾಹ ತುಂಬಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮಹಾಂತಗೌಡ ಪಾಟೀಲ ತೊಂಡಿಹಾಳ, ಸಂಗಣ್ಣ ಓಲೇಕಾರ, ದೊಡ್ಡಬಸು ಕುರಿ, ಸಿದ್ದಣ್ಣ ಘಂಟಿ, ಮಹಾಂತೇಶ ಪೂಜಾರಿ, ಬಿಜೆಪಿ ಮುಖಂಡರಾದ ಎಂ.ಆರ್. ಪಾಟೀಲ, ಆನಂದ ಚಲವಾದಿ, ಮಂಜುನಾಥ ಹೊಸಮನಿ ಸೇರಿದಂತೆ ಸಮಾಜದ ಮಹಿಳೆಯರು, ಯುವಕರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.1