ಮದ್ಯ, ಮಾದಕ ವಸ್ತುಗಳ ಸೇವನೆ ವಿರುದ್ಧ ಯುವಜನತೆ ಜಾಗೃತರಾಗಿ : ಜಿಲ್ಲಾಧಿಕಾರಿ ಶ್ರೀರೂಪ* ಮದ್ಯ, ಮಾದಕ ವಸ್ತುಗಳ ಸೇವನೆ ವಿರುದ್ಧ ಯುವಜನತೆ ಜಾಗೃತರಾಗಿ : ಜಿಲ್ಲಾಧಿಕಾರಿ ಶ್ರೀರೂಪ* ಚಾಮರಾಜನಗರ, ಅಮಲು ಭರಿಸುವ ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆಯ ವಿರುದ್ದ ಯುವಜನರು ಜಾಗೃತರಾಗಿ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸಲಹೆ ಮಾಡಿದರು. ನಗರದ ಹೊರವಲಯದಲ್ಲಿರುವ ಚಾಮರಾಜನಗರ ವಿಶ್ವವಿದ್ಯಾಲಯದ ಸೆಮಿನಾರ್ ಹಾಲ್‍ನಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಚಾಮರಾಜನಗರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸಮಾಜ ಸುಧಾರಕರಾದ ಶ್ರೀ ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯುವಕರು ಈ ದೇಶದ ಆಸ್ತಿ ಹಾಗೂ ಮಾನವ ಸಂಪನ್ಮೂಲವಾಗಿದ್ದು, ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಯುವಶಕ್ತಿ ಅಮಲು ಭರಿಸುವ ಮಾದಕ ವಸ್ತುಗಳ ಸೇವನೆಗೆ ಒಳಗಾಗಬಾರದು. ವ್ಯಸನಮುಕ್ತ ಕುರಿತ ಪ್ರತಿಜ್ಞಾವಿಧಿಯನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡು ಮದ್ಯ ಹಾಗೂ ಮಾದಕ ಪದಾರ್ಥಗಳ ಸೇವನೆ ಬಗ್ಗೆ ಜಾಗೃತಿ ಹೊಂದಬೇಕಾಗಿದೆ. ಕುತೂಹಲಕ್ಕಾಗಿ ಒಮ್ಮೆ ಸೇವಿಸುವ ಮಾದಕ ವಸ್ತುಗಳು ಚಟವಾಗಿ ಪರಿವರ್ತನೆಯಾಗದಂತೆ ಗಮನ ಹರಿಸಬೇಕಾಗಿದೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ವಿರುದ್ಧ ಯುವಕರು ತಾವು ಜಾಗೃತರಾಗಿ ಇತರರಿಗೂ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಮದ್ಯ, ಮಾದಕ ವಸ್ತುಗಳ ಸೇವನೆ ವಿರುದ್ಧ ಯುವಜನತೆ ಜಾಗೃತರಾಗಿ : ಜಿಲ್ಲಾಧಿಕಾರಿ ಶ್ರೀರೂಪ* ಮದ್ಯ, ಮಾದಕ ವಸ್ತುಗಳ ಸೇವನೆ ವಿರುದ್ಧ ಯುವಜನತೆ ಜಾಗೃತರಾಗಿ : ಜಿಲ್ಲಾಧಿಕಾರಿ ಶ್ರೀರೂಪ* ಚಾಮರಾಜನಗರ, ಅಮಲು ಭರಿಸುವ ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆಯ ವಿರುದ್ದ ಯುವಜನರು ಜಾಗೃತರಾಗಿ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸಲಹೆ ಮಾಡಿದರು. ನಗರದ ಹೊರವಲಯದಲ್ಲಿರುವ ಚಾಮರಾಜನಗರ ವಿಶ್ವವಿದ್ಯಾಲಯದ ಸೆಮಿನಾರ್ ಹಾಲ್‍ನಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಚಾಮರಾಜನಗರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸಮಾಜ ಸುಧಾರಕರಾದ ಶ್ರೀ ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯುವಕರು ಈ ದೇಶದ ಆಸ್ತಿ ಹಾಗೂ ಮಾನವ ಸಂಪನ್ಮೂಲವಾಗಿದ್ದು, ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಯುವಶಕ್ತಿ ಅಮಲು ಭರಿಸುವ ಮಾದಕ ವಸ್ತುಗಳ ಸೇವನೆಗೆ ಒಳಗಾಗಬಾರದು. ವ್ಯಸನಮುಕ್ತ ಕುರಿತ ಪ್ರತಿಜ್ಞಾವಿಧಿಯನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡು ಮದ್ಯ ಹಾಗೂ ಮಾದಕ ಪದಾರ್ಥಗಳ ಸೇವನೆ ಬಗ್ಗೆ ಜಾಗೃತಿ ಹೊಂದಬೇಕಾಗಿದೆ. ಕುತೂಹಲಕ್ಕಾಗಿ ಒಮ್ಮೆ ಸೇವಿಸುವ ಮಾದಕ ವಸ್ತುಗಳು ಚಟವಾಗಿ ಪರಿವರ್ತನೆಯಾಗದಂತೆ ಗಮನ ಹರಿಸಬೇಕಾಗಿದೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ವಿರುದ್ಧ ಯುವಕರು ತಾವು ಜಾಗೃತರಾಗಿ ಇತರರಿಗೂ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
- ಧರ್ಮಸ್ಥಳ ಬುರುಡೇ ಕೇಸ್ ಫಂಡಿಂಗ್ ಆರೋಪದಿಂದ ರಮಾ ನಾಗರಾಜ್ ನಿರ್ದೋಷಿ ಧರ್ಮಸ್ಥಳ ಬುರುಡೆ ಕೇಸ್ ನಲ್ಲಿ ಚಿತ್ರದುರ್ಗದ ಸಮಾಜಿಕ ಹೋರಾಟಗಾರ್ತಿ ರಮಾ ನಾಗರಾಜ್ ಆರೋಪ ಮುಕ್ತ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ. ಇನ್ನೂ ಧರ್ಮಸ್ಥಳದ ಬುರುಡೆ ಕೇಸ್ ಗೆ ಚಿತ್ರದುರ್ಗದ ರಮಾ ನಾಗರಾಜ್ ಫಂಡಿಂಗ್ ಮಾಡಿದ್ದಾಗಿ ಮಾಸ್ಕ್ ಮ್ಯಾನ್ ಚನ್ನಯ್ಯ ಆರೋಪ ಮಾಡಿದ್ದು ಈ ಆರೋಪ ಸುಳ್ಳು ಎಂದು ಉಚ್ಚ ನ್ಯಾಯಾಲಯದಿಂದ ರಮಾ ನಾಗರಾಜ್ ನಿರ್ದೋಷಿ ಎಂದು ತೀರ್ಪು ನೀಡಿದೆ. ರಮಾ ನಾಗರಾಜ್, ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ, ಜಯಂತಿ, ವಿಠ್ಠಲ ಗೌಡ, ಪ್ರಕಾಶ್ ರೈ ಆರೋಪ ಮುಕ್ತ ಎಂದು ಹೈಕೋರ್ಟ್ ಆದೇಶ ನೀಡಿದ್ದು ಈ ಕುರಿತು ಚಿತ್ರದುರ್ಗದಲ್ಲಿ ರಮಾ ನಾಗರಾಜ್ ಹಾಗೂ ಗಿರೀಶ್ ಮಟ್ಟಣ್ಣನವರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು ಈ ವೇಳೆ ಸಮಾಜಿಕ ಹೋರಾಟಗಾರ್ತಿ ರಮಾ ನಾಗರಾಜ್ ಅವರು ಮಾತನಾಡಿದ್ದು ಧರ್ಮಸ್ಥಳ ಸಂಘದ ಬಗ್ಗೆ ಹೋರಾಟ ಮಾಡಿದ್ದಕ್ಕೆ ನನ್ನ ಮೇಲೆ ವಿನಾಃ ಕಾರಣ ಆರೋಪ ಮಾಡಿದ್ದರು ಎಂದು ರಮಾ ನಾಗರಾಜ್ ಸ್ಪಷ್ಟನೆ ಕೊಟ್ಟಿದ್ದಾರೆ.1
- ಸಾರ್ವಜನಿಕ ಸ್ಥಳದಲ್ಲಿ ನಿದ್ರೆಗೆ ಜಾರುವ ವ್ಯಕ್ತಿಗಳಿಗೆ ಅತಿ ಹೆಚ್ಚು ದಣಿವು, ನಿದ್ರಾಹೀನತೆ ಅಥವಾ ಆರೋಗ್ಯದ ಸಮಸ್ಯೆ ಮತ್ತು ಮಧ್ಯದ ಪ್ರಭಾವ ಕಾರಣವಿರಬಹುದು. ನಿದ್ರಾದೇವಿ ಆವರಿಸಿದಾಗ ಇವೆಲ್ಲವನ್ನೂ ಮರೆತು ಎಂಥದೆ ಸ್ಥಳದಲ್ಲಿಯೂ ಸಹ ತನ್ನನ್ನು ತಾನು ಮರೆತು ನಿದ್ರೆಗೆ ಜಾರುವ ಕೆಲವು ವ್ಯಕ್ತಿಗಳು ಇದ್ದಾರೆ .. ಹೌದು ಆತ್ಮೀಯ ವೀಕ್ಷಕರೇ ಚಳ್ಳಕೆರೆ ನಗರದ ನೆಹರು ಸರ್ಕಲ್ ಬಳಿಯ ರಸ್ತೆಯ ಪಕ್ಕದಲ್ಲಿ ಮೆಟ್ಟಿಲುಗಳ ಮೇಲೆ ಕುಳಿತು ಒಬ್ಬ ವ್ಯಕ್ತಿ ಮೊಬೈಲ್ ಹಾಗೂ ಬ್ಯಾಗನ್ನು ಮರೆತು ನಿದ್ರೆ ಮಾಡುವುದು ಕಂಡು ಬಂತು ಅಲ್ಲಿ ತಕ್ಷಣ ಆ ವ್ಯಕ್ತಿಯನ್ನು ಎಚ್ಚರಿಸಿ ಮಾತನಾಡಿಸಿ ಮೊಬೈಲ್ ಹಾಗೂ ಬ್ಯಾಗ್ ಗಳ ಜೋಪಾನತೆಗೆ ಎಚ್ಚರಿಕೆಯನ್ನು ನೀಡಿಲಾಯ್ತು ಸಾರ್ವಜನಿಕ ಸ್ಥಳದಲ್ಲಿ ನಿದ್ರೆಗೆ ಜಾರುವ ವ್ಯಕ್ತಿಗಳಿಗೆ ಅತಿ ಹೆಚ್ಚು ದಣಿವು, ನಿದ್ರಾಹೀನತೆ ಅಥವಾ ಆರೋಗ್ಯದ ಸಮಸ್ಯೆ ಮತ್ತು ಮಧ್ಯದ ಪ್ರಭಾವ ಕಾರಣವಿರಬಹುದು. ಹೀಗೆ ನಿದ್ದೆ ಮಾಡುವ ವೇಳೆ ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ನಿದ್ದೆ ಮಾಡುವ ವೇಳೆ ತುಂಬಾ ಜಾಗೃತೆ ವಹಿಸಬೇಕು ಮೊಬೈಲ್ ಬ್ಯಾಗ್ ಗಳು ಇತರೆ ವಸ್ತುಗಳನ್ನ ಕಾಣುವ ರೀತಿಯಲ್ಲಿ ಇಟ್ಟುಕೊಂಡು ನಿದ್ರೆ ಮಾಡಿದರೆ ಆ ವಸ್ತುಗಳು ಕಳೆದು ಹೋದರೆ ಯಾರು ಹೊಣೆ ಆಗ್ತಾರೆ ಅಲ್ವೇ ಸ್ನೇಹಿತರೇ..1
- ಪ್ರತಿಯೊಬ್ಬರು ಪಕ್ಷದಲ್ಲಿ ಶಿಸ್ಥು ಸಂಘಟನೆ ಕಾಪಾಡಿಕೊಳ್ಳೋದು ಮುಖ್ಯ - ಕಾಂಗ್ರೇಸ್ ಜಿಲ್ಲಾಧ್ಯಕ್ಷ ಶಿರಾಜ್ ಶೇಖ್ - ವಿಜಯನಗರ ಜಿಲ್ಲೆ ಕೂಡ್ಲಿಗಿ *ಪ್ರತಿಯೊಬ್ಬರು ಪಕ್ಷದಲ್ಲಿ ಶಿಸ್ಥು ಸಂಘಟನೆ ಕಾಪಾಡಿಕೊಳ್ಳೋದು ಮುಖ್ಯ - ಕಾಂಗ್ರೇಸ್ ಜಿಲ್ಲಾಧ್ಯಕ್ಷ ಶಿರಾಜ್ ಶೇಖ್*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಕ್ಷ ಭಲವರ್ಧನೆಗೆ ಎಲ್ಲರೂ ಶಿಸ್ಥು , ಹಾಗೂ ಸಂಘಟನಾತ್ಮಕ ಮನೋಭಾವ ಬಳೆಸಿಕೊಳ್ಳಬೇಕೆಂದು. ಕಾಂಗ್ರೇಸ್ ಪಕ್ಷದ ವಿಜಯನಗರ ಜಿಲ್ಲಾಧ್ಯಕ್ಷರು , ಹಾಗೂ ಮಾಜಿ ಶಾಸಕರಾದ ಶಿರಾಜ್ ಶೇಖ್ ಕಾರ್ಯಕರ್ತರಿಗೆ ಕರೆ ನೀಡಿದರು. ಅವರು ಪಟ್ಟಣದ ಅನುಬಂಧ ಕಲ್ಯಾಣ ಮಂಟಪದಲ್ಲಿ , ಜುಲೈ 30 ರಂದು. ಕಾಂಗ್ರೆಸ್ ಪಕ್ಷದ ವಿವಿದ ವಿಭಾಗಗಳ ನಾಯಕರ ಆಯ್ಕೆ , ಹಾಗೂ ಪಕ್ಷ ಸಂಘಟನೆಗಾಗಿ ಆಯೋಜಿಸಲಾಗಿದ್ದ. ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ ರವರ ನೇತೃತ್ವದಲ್ಲಿ ಜರುಗಿದ ಸಂಘಟನೆ ಸೃಜನ ಅಭಿಯಾನದಲ್ಲಿ , ಕಾರ್ಯಕರ್ತರನ್ನುದ್ಧೇಶಿಸಿ ಮಾತನಾಡಿದರು. ಟಿಪಿಸಿಸಿ ಕಾರ್ಯದರ್ಶಿಗಳು ಹಾಗೂ ಎಐಸಿಸಿ ಸಲಹಾ ಸಮಿತಿಯ ಹಿರಿಯರು. ವೀಕ್ಷಕರಾದ ಪಕ್ಷದ ರಾಷ್ಟ್ರೀಯ ನಾಯಕರಾದ ಹರಕರ್ ವೇಣುಗೋಪಾಲ್ ರಾವ್ ಹಾಗೂ ಕೆಪಿಸಿಸಿ ಅಬ್ಜರ್ವರ್ ಗಳಾದ ಮರಿಯೋಜಿರಾವ್ , ಶ್ರೀಮತಿ ಆರತಿ ಚಂದ್ರಶೇಖರ್ , ಕೆಪಿಸಿಸಿ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಸುಭಾಷ್ ರಾಥೋಡ್ , ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಜಿಲ್ಲಾ ಹಾಗೂ ತಾಲೂಕು ಮುಖಂಡರ ಅಭಿಪ್ರಾಯಗಳನ್ನು , ಸಲಹೆ ಸೂಸನೆಗಳನ್ನು ಆಲಿಸಲಾಯಿತು. ಪಕ್ಷದ ಸಂಘಟೆ ಭಲವರ್ಧೆನೆಗಾಗಿ , ಪ್ರಮುಖರು ಸದೀರ್ಘವಾಗಿ ಚರ್ಚಿಸಿದರು. ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ , ಕೂಡ್ಲಿಗಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಮ್ ಗುರುಸಿದ್ದನಗೌಡ , ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ಆಧ್ಯಕ್ಷ ಕೆ.ಜಿ.ಕಮಾರ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಪಕ್ಷದ ಅನೇಕ ಮುಖಂಡರು , ವಿವಿದ ವಿಭಾಗಗಳ ಪ್ರಮುಖರು , ಕ್ಷೇತ್ರದೆಲ್ಲೆಡೆಗಳಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು ಅಭಿಯಾನದಲ್ಲಿ ಭಾಗವಹಿಸಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಮೈಸೂರಿನಿಂದ ಪ್ರಧಾನಿಗೆ ಡಿಕೆಶಿ ಮನವಿ: "ಕರ್ನಾಟಕಕ್ಕೆ ಸಹಾಯ ಮಾಡಿ, ರಾಜ್ಯವನ್ನು ರಕ್ಷಿಸಿ" ಮೈಸೂರು: "ಕರ್ನಾಟಕವು ದೇಶದ ಪ್ರಮುಖ ಹಾಗೂ ಅಭಿವೃದ್ಧಿಶೀಲ ರಾಜ್ಯ. ಕರ್ನಾಟಕ ಬೆಳೆದರೆ ಇಡೀ ಭಾರತ ಬೆಳೆದಂತೆ. ಹೀಗಾಗಿ ಕರ್ನಾಟಕಕ್ಕೆ ಸಹಾಯ ಮಾಡಿ, ರಾಜ್ಯವನ್ನು ರಕ್ಷಿಸಿ" ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮೈಸೂರಿನ ರಾಮಕೃಷ್ಣ ಆಶ್ರಮದ ವಿದ್ಯಾಶಾಲಾ ಆವರಣದಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. "ಇಡೀ ದೇಶವೇ ಇಂದು ಕರ್ನಾಟಕದತ್ತ ನೋಡುತ್ತಿದೆ. ಇಲ್ಲಿನ ಸಂಸ್ಕೃತಿ, ವಾತಾವರಣ ಹಾಗೂ ಜನರ ಸಂಕಲ್ಪ ಶಕ್ತಿ ಅನನ್ಯವಾದದ್ದು. ನಾವು-ನೀವು ಕೈಜೋಡಿಸಿ ಕರ್ನಾಟಕವನ್ನು ಇನ್ನಷ್ಟು ಬೆಳೆಸೋಣ. ನಮಗೆ ನಿಮ್ಮ (ಕೇಂದ್ರದ) ಸಂಪೂರ್ಣ ಸಹಕಾರ ಬೇಕು" ಎಂದು ಪ್ರಧಾನಿಯವರಲ್ಲಿ ಕೋರಿದರು. "ಸ್ವಾಮಿ ವಿವೇಕಾನಂದರ ಚಿಂತನೆಗಳು ಹಾಗೂ ತ್ಯಾಗವೇ ನಮಗೆ ಪ್ರೇರಣೆ. ಅವರ ತತ್ತ್ವಗಳ ಅಡಿಯಲ್ಲೇ ಯುವಶಕ್ತಿಯನ್ನು ಬಳಸಿಕೊಂಡು ಹೊಸ ಯುಗದ ಆಡಳಿತ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು. ಯುವಜನತೆಯ ಶಕ್ತಿಯನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯಲು ಗ್ರಾಮ ಪಂಚಾಯಿತಿ ಮತ್ತು ನಗರ ಮಟ್ಟದಲ್ಲಿ ಯುವಜನ ಪಡೆಗಳನ್ನು ಕಟ್ಟುವ ಸಂಕಲ್ಪ ಮಾಡಲಾಗಿದೆ ಎಂದು ವಿವರಿಸಿದರು. "ಮೈಸೂರಿನ ಇತಿಹಾಸಕ್ಕೆ ಜಾಗತಿಕ ಮಟ್ಟದ ಗೌರವವಿದೆ. ಸ್ವಾಮಿ ವಿವೇಕಾನಂದರು ಮೈಸೂರಿನಿಂದಲೇ ನೇರವಾಗಿ ಚಿಕಾಗೋಗೆ ತೆರಳಿ ವಿಶ್ವವಿಖ್ಯಾತ ಭಾಷಣ ಮಾಡಿದ್ದರು. ಇಂದು ನಿರ್ಮಾಣವಾಗುತ್ತಿರುವ ವಿವೇಕ ಸ್ಮಾರಕ ಮತ್ತು ಈ ರಾಮಕೃಷ್ಣ ಆಶ್ರಮ ಬರಿ ಕರ್ನಾಟಕದ ಆಸ್ತಿಯಲ್ಲ, ಇಡೀ ದೇಶದ ಆಸ್ತಿ" ಎಂದು ಬಣ್ಣಿಸಿದರು. ರಾಮಕೃಷ್ಣ ಆಶ್ರಮದ ಪರವಾಗಿ ರಾಜ್ಯ ಸರ್ಕಾರ ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದ ಅವರು, ಈ ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸಿದ್ದು ತಮ್ಮ ಪಾಲಿನ ದೊಡ್ಡ ಭಾಗ್ಯ ಎಂದು ಹರ್ಷ ವ್ಯಕ್ತಪಡಿಸಿದರು.1
- ಚಿಕ್ಕನಾಯಕನಹಳ್ಳಿಯಲ್ಲಿ ಹೇಮಾವತಿ ನೀರಿಗಾಗಿ ರೈತರು ಅಹೋರಾತ್ರಿ ಧರಣೀಯ ಮುಂದುವರಿಸಿದ್ದಾರೆ4
- ಬಿದರೆಕೆರೆ-ಬೇಡತ್ತೂರು ರೈಲ್ವೆ ನಿಲ್ದಾಣಕ್ಕೆ ಮಿಡಿಗೇಶಿ ಹೆಸರಿಡಲು ಒತ್ತಾಯ ಮಧುಗಿರಿ ತಾಲೂಕಿನಲ್ಲಿ ನಡೆಯುತ್ತಿರುವ ತುಮಕೂರು ರಾಯದುರ್ಗ ರೈಲ್ವೆ ಕಾಮಗಾರಿಯಲ್ಲಿ ಬಿದರೆಕೆರೆ ಬೇಡತ್ತೂರು ಗ್ರಾಮದ ರೈಲ್ವೆ ನಿಲ್ದಾಣಕ್ಕೆ ಮಿಡಿಗೇಶಿ ಹೆಸರಿಡುವಂತೆ, ಬಿಜೆಪಿ ಒಬಿಸಿ ಮೋರ್ಚ ಜಿಲ್ಲಾ ಉಪಾಧ್ಯಕ್ಷ ಮಿಡಿಗೇರ್ ಶ್ರೀ ಕೃಷ್ಣಮೂರ್ತಿ ಇವತ್ತಾಯಿಸಿದ್ದಾರೆ2
- ಪೊಲೀಸ್ ಕಾನ್ಸ್‍ಟೇಬಲ್(ಸಿವಿಲ್) ನೇಮಕಾತಿ ಪರೀಕ್ಷೆ* *ಕೆ.ಇ.ಎ. ಮಾರ್ಗಸೂಚಿಗಳ ಪಾಲನೆ ಕಡ್ಡಾಯ* *-ಜಿಲ್ಲಾಧಿಕಾರಿ ಟಿ.ವೆಂಕಟೇಶ್* *ಪೊಲೀಸ್ ಕಾನ್ಸ್‍ಟೇಬಲ್(ಸಿವಿಲ್) ನೇಮಕಾತಿ ಪರೀಕ್ಷೆ* *ಕೆ.ಇ.ಎ. ಮಾರ್ಗಸೂಚಿಗಳ ಪಾಲನೆ ಕಡ್ಡಾಯ* *-ಜಿಲ್ಲಾಧಿಕಾರಿ ಟಿ.ವೆಂಕಟೇಶ್* ಚಿತ್ರದುರ್ಗ(ಕರ್ನಾಟಕ ವಾರ್ತೆ)ಆ.01: ನಗರದ 26 ಪರೀಕ್ಷಾ ಕೇಂದ್ರಗಳಲ್ಲಿ ಆಗಸ್ಟ್ 2 ರಂದು ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಮೇಲ್ವಿಚಾರಕರು, ಅಧಿಕಾರಿಗಳು ಹಾಗೂ ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆ.ಇ.ಎ) ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು. ಈ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಸಭೆ ನಡೆಸಿ ಅವರು ಮಾತನಾಡಿದರು. ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು. ಮಾರ್ಗಾಧಿಕಾರಿಗಳು ಪ್ರಶ್ನೆ ಪತ್ರಿಕೆಗಳನ್ನು ನಿರ್ಧಿಷ್ಟ ಪಡಿಸಿದ ವಾಹನ ಹಾಗೂ ಪೊಲೀಸ್ ಬಂದೋಬಸ್ತ್‌ನೊಂದಿಗೆ ಸಾಗಿಸಬೇಕು. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು, ಕೊಠಡಿ ಮೇಲ್ವಾಚರಕರು ಹಾಗೂ ವಸ್ತ್ರಸಂಹಿತೆ ಅಧಿಕಾರಿಗಳು ಸಭೆ ನಡೆಸಿ, ಪರೀಕ್ಷ ಕೇಂದ್ರಗಳಲ್ಲಿ, ನಿರ್ವಹಿಸಬೇಕಾದ ಕರ್ತವ್ಯಗಳು ಬಗ್ಗೆ ತಿಳಿಸಬೇಕು. ಎಲ್ಲಾ ಕೇಂದ್ರಗಳಲ್ಲಿ ಸಿ.ಸಿ.ಟಿ.ವಿ ಹಾಗೂ ಮೊಬೈಲ್ ನೆಟ್‍ವರ್ಕ ಜಾಮರ್‌ಗಳು ಸುಸ್ಥಿತಿಯಲ್ಲಿ ಇದ್ದು ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.1
- ತಾಲ್ಲೂಕು ಕಚೇರಿ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ತಹಶಿಲ್ದಾರ್ ಕಚೇರಿ ಬಳಿ ಪ್ರತಿಭಟನೆ ತಾಲ್ಲೂಕು ಕಚೇರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಮೀನು ವರ್ಗಾವಣೆ ಮಾಡಿದ್ದು ಇದನ್ನ ಖಂಡಿಸಿ ಕರುನಾಡ ವಿಜಯ ಸೇನೆ ವತಿಯಿಂದ ಚಿತ್ರದುರ್ಗದ ತಹಶಿಲ್ದಾರ್ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು. ಗೂಳಯ್ಯನಹಟ್ಟಿ ಗ್ರಾಮದ ವಾಸಿಯಾದ ಚಂದ್ರಪ್ಪ ಅವರ ಹೆಸರಿಗೆ ಚಿಕ್ಕಪುರ ಗ್ರಾಮದ ರಿ.ಸ. ನಂ:8/1 ರಲ್ಲಿ 2 ಎಕರೆ 20 ಗುಂಟೆ ಜಮೀನು ಇರುತ್ತದೆ. ಜಮೀನಿನ ಪೈಕಿ 1 ಎಕರೆ 20 ಗುಂಟೆ ಜಮೀನನ್ನು ಸರ್ವೆ ಸ್ಟೇಚ್ ನಕ್ಷೆ ಸಂಖ್ಯೆ ಚಿತ್ರದುರ್ಗ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ನೊಂದಣಿ ಆಗಿರುತ್ತದೆ. ಇದರ ಪ್ರಕಾರ ಕಾನೂನುಬದ್ದವಾಗಿ ಜಯಲಕ್ಷ್ಮಿ ಇವರಿಗೆ 1 ಎಕರೆ 20 ಗುಂಟೆ ಜಮೀನು ಪಹಣಿ ವರ್ಗಾವಣೆಯಾಗಬೇಕಾಗಿದ್ದು, ಆದರೆ ತಾಲ್ಲೂಕು ಕಛೇರಿಯ ಅಧಿಕಾರಿಗಳ ನಿರ್ಲಕ್ಷ್ಯತನ ಮತ್ತು ಬೇಜವಾಬ್ದಾರಿತನದಿಂದ ಪೂರಾ 2 ಎಕರೆ 20 ಗುಂಟೆ ಜಮೀನು ಜಯಲಕ್ಷ್ಮೀ ಇವರ ಹೆಸರಿಗೆ ಪಹಣಿ ಮಾಡಲು ಮುಂದಾಗಿರುತ್ತಾರೆ1
- *ಕ್ರೀಡೆ: ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆ *ಕ್ರೀಡೆ: ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಸಮೀಪದ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ದಿನಾಂಕ:28-07- 2026 ರಂದು ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ ಸರ್ಜಾರಿ ಪ್ರೌಢಶಾಲೆಯ ಅವನದ ಬಯಲು ರಂಗ ಮಂದಿರದ ಮುಂಭಾಗದಲ್ಲಿ ನಡೆದ ನಾಯಕನಹಟ್ಟಿ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಲಕರ ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಥಮ:ನಿತೀಶ್ ಮತ್ತು ತಂಡ ಕಬಡ್ಡಿ ಕ್ರೀಡೆಯಲ್ಲಿ ಗೆದ್ದು ತಾಲೂಕು ಮಟ್ಟಕ್ಕೆ ಆಯ್ಕೆ ಕ್ರೀಡಾಪಟುಗಳಾಗಿದ್ದಾರೆ ವಿನಯ್ ಕುಮಾರ್ ಮತ್ತು ತಂಡ ವಾಲಿಬಾಲ್ ಕ್ರೀಡೆಯಲ್ಲಿ ಗೆದ್ದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ *ಖೋ ಖೋ* ದ್ವಿತೀಯ: ತ್ರಿಶಾ ಮತ್ತು ತಂಡ *ಎತ್ತರ ಜಿಗಿತ* ತೃತೀಯ : ಮೇಘನಾ *400 ಮೀಟರ್ ಓಟ* ತೃತೀಯ: ತಿಪ್ಪೇಸ್ವಾಮಿ ಎಲ್ಲಾ ಕ್ರೀಡಾಪಟುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಶ್ ಕೆ.ಎಸ್. ಕೆ.ಎಸ್,ಮುಖ್ಯ ಶಿಕ್ಷಕಕರಾದ ನಿರ್ಮಲ B, ಎಸ್ ಡಿ ಎಂ ಸಿ ಅಧ್ಯಕ್ಷರಾದ ಕಾಟಯ್ಯ , ಶಿಕ್ಷಕರಾದ ನಾಗಭೂಷಣ್, B.P ಹಾಗೂ ಊರಿನ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.1