ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ಕೆರೆಯಲ್ಲಿ ಮಣ್ಣು ಮಾಫಿಯಾ ಅಧಿಕಾರಿಗಳ ಕಣ್ಣು ಮುಚ್ಚಿಸಿ ಮಾಡುತ್ತಿರುವ ಅತಿ ದೊಡ್ಡ ದಂಧೆ. ಯಾವುದೇ ಅನುಮತಿ ಇಲ್ಲದೇ ಮತ್ತು ಅಕ್ರಮವಾಗಿ ಹಾಗೂ ಕಾನೂನು ಬಾಹಿರವಾಗಿ ಕೆರೆಗಳ ಭೂ ಮಾಫಿಯಾ ದಂಧೆ. ಚಿಂತಾಮಣಿ ತಾಲೂಕಿನ ಕಸಬಾ ಹೋಬಳಿಯ ಚೋಕ್ಕರೆಡ್ಡಿಹಳ್ಳಿ ಕೆರೆಯ ಸರ್ವೇ ನಂಬರ್ 51 ರಲ್ಲಿ ವ್ಯಾಪಕವಾಗಿ ಮಣ್ಣಿನ ಅಕ್ರಮ ಸಾಗಾಣಿಕೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ಥಳೀಯ ಅಫ್ಜಲ್ ಅಹಮದ್ ಅವರು ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಚೋಕ್ಕರೆಡ್ಡಿ ಹಳ್ಳಿ ಕೆರೆ, ಕಸಬಾ ಹೋಬಳಿ, ಸರ್ವೆ ನಂಬರ್ 51ರ ಸರ್ಕಾರಿ ಕೆರೆಯಲ್ಲಿ ಎರಡು ಎಕ್ಕರೆ ಅಷ್ಟು , ಸುಮಾರು 10 ರಿಂದ 12 ಅಡಿಗಳಷ್ಟು ಆಳಕ್ಕೆ ಮಣ್ಣನ್ನು ಅಕ್ರಮವಾಗಿ ಅಗೆದು ಸಾಗಿಸಲಾಗುತ್ತಿದೆ. ಮಣ್ಣು ಸಾಗಿಸಲು ಬಳಕೆಯಾದ ಟಿಪ್ಪರ್ ಸಂಖ್ಯೆ KA 67 0353 ಮತ್ತು ಎರಡು ಹಿಟಾಚಿ ಯಂತ್ರಗಳನ್ನು ಬಳಸಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ. ಈ ಮಣ್ಣನ್ನು ಅಕ್ರಮವಾಗಿ ಪಕ್ಕದ ಲೇಔಟ್‌ಗಳಿಗೆ ಸಾಗಿಸಿ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದ ಗ್ರಾಮಸ್ಥರು ಇದನ್ನು ತಡೆಯಲು ಹೋದಾಗ ಅವರ ಮೇಲೆ ದೌರ್ಜನ್ಯ ನಡೆಸಲು ಕೂಡ ಯತ್ನಿಸಲಾಗಿದೆ ಎಂದು ಅಫ್ಜಲ್ ಅಹಮದ್ ಆರೋಪಿಸಿದ್ದಾರೆ. ನಮ್ಮ ಜಮೀನಿನ ಪಕ್ಕದಲ್ಲೇ ಇರುವ ಈ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದಾರೆ. ಅಧಿಕಾರಿಗಳಾದ ತಹಶಿಲ್ದಾರರ ಸುದರ್ಶನ್ ಯಾದವ್, ಆರ್ ಐ ಗೋಕುಲ್ ಮತ್ತು ಒನ್ ಒನ್ ಟೂ ಪೋಲೀಸರ ಗಮನಕ್ಕೆ ಈ ವಿಷಯವನ್ನು ತಂದಿದ್ದೇವೆ. ಅವರು ಬಂದು ನೋಡಿ ಕೊಂಡು ಹೋಗಿದ್ದಾರೆ. ಸುಮಾರು ಎಕರೆಗಟ್ಟಲೆ ಸರ್ಕಾರಿ ಜಾಗದಲ್ಲಿ ಕೆರೆಯನ್ನು ಹಾಳು ಮಾಡುತ್ತಿದ್ದಾರೆ. ದಯವಿಟ್ಟು ಮಾಧ್ಯಮದವರು ಮತ್ತು ಸರ್ಕಾರ ಈ ಕೆರೆಯನ್ನು ಉಳಿಸಿಕೊಡಬೇಕೆಂದು ನಾವು ಮನವಿ ಮಾಡಿದ್ದಾರೆ. ರೈತರ ದೂರಿನ ಮೇರೆಗೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಈ ಅಕ್ರಮ ಸಾಗಾಣಿಕೆಗೆ ಕಡಿವಾಣ ಬೀಳುತ್ತದೆಯೇ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂದು ಕಾದು ನೋಡಬೇಕಿದೆ.
ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ಕೆರೆಯಲ್ಲಿ ಮಣ್ಣು ಮಾಫಿಯಾ ಅಧಿಕಾರಿಗಳ ಕಣ್ಣು ಮುಚ್ಚಿಸಿ ಮಾಡುತ್ತಿರುವ ಅತಿ ದೊಡ್ಡ ದಂಧೆ. ಯಾವುದೇ ಅನುಮತಿ ಇಲ್ಲದೇ ಮತ್ತು ಅಕ್ರಮವಾಗಿ ಹಾಗೂ ಕಾನೂನು ಬಾಹಿರವಾಗಿ ಕೆರೆಗಳ ಭೂ ಮಾಫಿಯಾ ದಂಧೆ. ಚಿಂತಾಮಣಿ ತಾಲೂಕಿನ ಕಸಬಾ ಹೋಬಳಿಯ ಚೋಕ್ಕರೆಡ್ಡಿಹಳ್ಳಿ ಕೆರೆಯ ಸರ್ವೇ ನಂಬರ್ 51 ರಲ್ಲಿ ವ್ಯಾಪಕವಾಗಿ ಮಣ್ಣಿನ ಅಕ್ರಮ ಸಾಗಾಣಿಕೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ
ಬಗ್ಗೆ ಸ್ಥಳೀಯ ಅಫ್ಜಲ್ ಅಹಮದ್ ಅವರು ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಚೋಕ್ಕರೆಡ್ಡಿ ಹಳ್ಳಿ ಕೆರೆ, ಕಸಬಾ ಹೋಬಳಿ, ಸರ್ವೆ ನಂಬರ್ 51ರ ಸರ್ಕಾರಿ ಕೆರೆಯಲ್ಲಿ ಎರಡು ಎಕ್ಕರೆ ಅಷ್ಟು , ಸುಮಾರು 10 ರಿಂದ 12 ಅಡಿಗಳಷ್ಟು ಆಳಕ್ಕೆ ಮಣ್ಣನ್ನು ಅಕ್ರಮವಾಗಿ ಅಗೆದು ಸಾಗಿಸಲಾಗುತ್ತಿದೆ. ಮಣ್ಣು ಸಾಗಿಸಲು ಬಳಕೆಯಾದ ಟಿಪ್ಪರ್ ಸಂಖ್ಯೆ KA 67 0353 ಮತ್ತು ಎರಡು ಹಿಟಾಚಿ ಯಂತ್ರಗಳನ್ನು ಬಳಸಲಾಗಿದೆ ಎಂದು
ದೂರುದಾರರು ತಿಳಿಸಿದ್ದಾರೆ. ಈ ಮಣ್ಣನ್ನು ಅಕ್ರಮವಾಗಿ ಪಕ್ಕದ ಲೇಔಟ್‌ಗಳಿಗೆ ಸಾಗಿಸಿ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದ ಗ್ರಾಮಸ್ಥರು ಇದನ್ನು ತಡೆಯಲು ಹೋದಾಗ ಅವರ ಮೇಲೆ ದೌರ್ಜನ್ಯ ನಡೆಸಲು ಕೂಡ ಯತ್ನಿಸಲಾಗಿದೆ ಎಂದು ಅಫ್ಜಲ್ ಅಹಮದ್ ಆರೋಪಿಸಿದ್ದಾರೆ. ನಮ್ಮ ಜಮೀನಿನ ಪಕ್ಕದಲ್ಲೇ ಇರುವ ಈ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದಾರೆ. ಅಧಿಕಾರಿಗಳಾದ ತಹಶಿಲ್ದಾರರ ಸುದರ್ಶನ್ ಯಾದವ್, ಆರ್ ಐ ಗೋಕುಲ್ ಮತ್ತು ಒನ್ ಒನ್ ಟೂ ಪೋಲೀಸರ ಗಮನಕ್ಕೆ ಈ ವಿಷಯವನ್ನು
ತಂದಿದ್ದೇವೆ. ಅವರು ಬಂದು ನೋಡಿ ಕೊಂಡು ಹೋಗಿದ್ದಾರೆ. ಸುಮಾರು ಎಕರೆಗಟ್ಟಲೆ ಸರ್ಕಾರಿ ಜಾಗದಲ್ಲಿ ಕೆರೆಯನ್ನು ಹಾಳು ಮಾಡುತ್ತಿದ್ದಾರೆ. ದಯವಿಟ್ಟು ಮಾಧ್ಯಮದವರು ಮತ್ತು ಸರ್ಕಾರ ಈ ಕೆರೆಯನ್ನು ಉಳಿಸಿಕೊಡಬೇಕೆಂದು ನಾವು ಮನವಿ ಮಾಡಿದ್ದಾರೆ. ರೈತರ ದೂರಿನ ಮೇರೆಗೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಈ ಅಕ್ರಮ ಸಾಗಾಣಿಕೆಗೆ ಕಡಿವಾಣ ಬೀಳುತ್ತದೆಯೇ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂದು ಕಾದು ನೋಡಬೇಕಿದೆ.
- Post by Naveedpasha1
- ದೇವನಹಳ್ಳಿ ಯುವಕನಿಂದ ಆತ್ಮಹತ್ಯೆ ಹೈಡ್ರಾಮಾ ಪ್ರಕರಣ ಸ್ಥಳಕ್ಕೆ ಆಗಮಿಸಿದ SDRF ತಂಡ ದೇವನಹಳ್ಳಿ ಹೊರವಲಯದ ಖಾಸಗಿ ಕಟ್ಟಡ ಮೇಲೆ ಹತ್ತಿರುವ ಯುವಕ ಆನಂದ್. ಯುವಕನನ್ನ ರೆಸ್ಕ್ಯೂ ಮಾಡಲು ಪ್ಲಾನ್ ಮಾಡ್ತಿರುವ SDRF ತಂಡ. ಮಧ್ಯಾಹ್ನ 2 ಗಂಟೆಯಿಂದಲ ಕಟ್ಟಡದ ಮೇಲಿರುವ ಆನಂದ್. ಸುಮಾರು 10ಕ್ಕೂ ಹೆಚ್ಚು SDRF ಸಿಬ್ಬಂದಿಯಿಂದ ಕಾರ್ಯಾಚರಣೆ. ಪೋಕ್ಸೋ ಪ್ರಕರಣ ಆರೋಪಿಯಾಗಿರುವ ಆನಂದ್. ಕೆಲ ದಿನಗಳ ಹಿಂದೆ ಬೇಲ್ ಪಡೆದು ಆಚೆ ಬಂದಿದ್ದ ಆರೋಪಿ ಆನಂದ್. ಕೆಲ ದಿನಗಳ ಹಿಂದೆ ಹುಡುಗಿ ಮೇಜರ್ ಆಗಿರುವ ಕಾರಣ ಮದುವೆ ಆಗಲು ಡಿಮ್ಯಾಂಡ್. ಹುಡುಗಿ ಮನೆಯವರಿಗೆ ಇಷ್ಟ ಇಲ್ಲದ ಕಾರಣ ಆನಂದ್ ಇಟ್ಟ ಪ್ರಸ್ತಾವನೆ ರಿಜೆಕ್ಟ್. ಹುಡುಗಿ ಮನೆಯವರು ಪೊಲೀಸರಿಗೆ ಮತ್ತೇ ದೂರು ಕೊಟ್ಟ ಹಿನ್ನೆಲೆ ಮನನೊಂದಿರುವ ಯುವಕ. ಹಾಗಾಗಿ ಸ್ಥಳಕ್ಕೆ ಡಿಸಿ ಬರಬೇಕು, ನನ್ನ ಪ್ರಶ್ನೆಗಳಿಗೆ ಉತ್ತರ ಕೊಡೇಕು ಎಂದು ಪಟ್ಟು. ಹಡುಗನ ಹೈಡ್ರಾಮಾ ನೋಡಲು ಮುಗಿಬಿದ್ದಿರುವ ಸ್ಥಳೀಯ ಜನತೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ಪಟ್ಟಣದ ಹೊರವಲಯದಲ್ಲಿ ಘಟನೆ.4
- ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್-ಲಾರಿ ಡಿಕ್ಕಿ ಚಾಲಕ-ಕಂಡಕ್ಟರ್ ಗಾಯ, ರಕ್ಷಣಾ ಕಾರ್ಯಾಚರಣೆ1
- Mohammed Nalapad ಅವರು ತಮ್ಮ ಮೇಲೆ ನಡೆದ Enforcement Directorate (ED) ದಾಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದು, ಇದನ್ನು ರಾಜಕೀಯ ಪ್ರೇರಿತ ಸಂಚು ಎಂದು ಆರೋಪಿಸಿದ್ದಾರೆ ⚠️ 👉 2021ರ FIR ನಂತರ ಈಗ ದಾಳಿ ಏಕೆ? ಎಂದು ಪ್ರಶ್ನೆ 👉 ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇನೆ ಎಂದ ನಲಪಾಡ್ 👉 ಕುಟುಂಬದ ಆತಂಕದ ಬಗ್ಗೆ ಭಾವುಕರಾಗಿ ಪ್ರತಿಕ್ರಿಯೆ 👉 ಶ್ರೀಕಿ ಪರಿಚಯವಿದೆ, ಆದರೆ ವೈಯಕ್ತಿಕ ಚಟುವಟಿಕೆಗಳಿಗೆ ಸಂಬಂಧವಿಲ್ಲ ಎಂದ ಸ್ಪಷ್ಟನೆ “ನಾನು ಯಾವುದೇ ತಪ್ಪು ಮಾಡಿಲ್ಲ, ಸತ್ಯಮೇವ ಜಯತೇ” ಎಂದು ತಮ್ಮ ಮಾತು ಮುಗಿಸಿದರು.1
- 🚩🚩🚩🚩3
- ಹನೂರು :ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಜೋಡಿ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಿಂದ ಬಾಲಕನೊಬ್ಬ ಮೃತಪಟ್ಟ ದುರ್ಘಟನೆ ನಡೆದಿದೆ. ಕಾಡೋಲ ಗ್ರಾಮದ ರೋಹಿತ್ (16) ಎಂಬ ಬಾಲಕ ಮೃತಪಟ್ಟಿದ್ದಾನೆ. ಬೆಟ್ಟದಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದ ವೇಳೆ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದನು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಘಟನೆಯ ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಮಹದೇಶ್ವರ ಬೆಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.1
- ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಸಾವು ಚನ್ನಗಿರಿಯ ದುರಂತಕ್ಕೆ ಗ್ರಾಮದಲ್ಲಿ ಶೋಕ1
- “ಸೇವೆಯೇ ನಿಜವಾದ ಗೌರವ”: ಮಹದೇವಪ್ಪ ಜನ್ಮದಿನದಲ್ಲಿ ಅಪ್ಪಟ್ಟ ಅಭಿಮಾನಿ ಗುರುದೇವ್ ಸಂದೇಶ1
- *ಭಾರತ ನಲ್ಲಿ ವೈರಲ್*1