ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರ: ಪೋತ್ನಾಳನಲ್ಲಿ ಭುಗಿಲೆದ್ದ ರೈತರ ಆಕ್ರೋಶ ಮಾನ್ವಿ : ಭೀಕರ ಬರಗಾಲ, ಕುಡಿಯುವ ನೀರಿನ ಸಮಸ್ಯೆ ಮತ್ತು ಜೋಳ ಖರೀದಿ ಕೇಂದ್ರದಿಂದ ಬಾಕಿ ಹಣ ಪಾವತಿ ವಿಳಂಬದಿಂದ ಆಕ್ರೋಶಗೊಂಡ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನೂರಾರು ಸಂಖ್ಯೆಯ ರೈತರೂಂದಿಗೆ ತಾಲೂಕಿನ ಪೋತ್ನಾಳ್ ಬಳಿ ರಾಜ್ಯ ಹೆದ್ದಾರಿ ತಡೆದು ಭಾರಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರ ಹಾಗೂ ಮಾಜಿಸಚಿವ, ಶಾಸಕರ ನಿರ್ಲಕ್ಷ್ಯತನ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಖಾಲಿ ಕೂಡ ಹಿಡಿದು ನೂರಾರು ಸಂಖ್ಯೆಯಲ್ಲಿ ರೈತರು ಸುಮಾರು ಎರಡೂವರೆ ಗಂಟೆ ನಡೆಸಿದ ರಸ್ತೆ ತಡೆ ಚಳುವಳಿಗೆ ರಸ್ತೆಯ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಬಿಸಿಲಿನಲ್ಲಿ ತತ್ತರಿಸುವಂತೆ ಮಾಡಿತು. 2025-26 ಸಾಲಿನಲ್ಲಿ ಜೋಳ ಖರೀದಿ ಕೇಂದ್ರಕ್ಕೆ ನೀಡಿದ ಜೋಳದ ಬಾಬತ್ತು ಬಾಕಿ ಹಣ ಬಿಡುಗಡೆ ಮಾಡಬೇಕು. ಹಿರೇಹಳ್ಳಕ್ಕೆ ಕುಡಿಯುವ ನೀರು ಒದಗಿಸಬೇಕು ಮತ್ತು ಬರ ಪರಿಹಾರ ಕೂಡಲೇ ಬಿಡುಗಡೆ ಮಾಡಬೇಕೆನ್ನುವ ಮೂರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಜೋಳ ಖರೀದಿ ಮಾಡಿ 5-6 ತಿಂಗಳು ಕಳೆದರೂ ಇದುವರೆಗೂ ಹಣ ಪಾವತಿಸಿಲ್ಲ. ಮುಂಗಾರು ಮುಗಿದು ಹಿಂಗಾರು ಆರಂಭವಾಗಿದ್ದು ಮಳೆ ಇಲ್ಲದೆ ಬೆಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಮಕ್ಕಳ ಶಾಲಾ ಕಾಲೇಜು ಶುಲ್ಕ ಕಟ್ಟಲು, ಬ್ಯಾಂಕ್ ಸಾಲ ತೀರಿಸಲು, ಬಿತ್ತನೆ ಬೀಜ ಗೊಬ್ಬರ ಖರೀದಿಸಲು ಮತ್ತು ಕುಟುಂಬದ ಆಸ್ಪತ್ರೆ ವೆಚ್ಚ. ಭರಿಸಲು ಸಾಧ್ಯವಾಗದೆ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಕುರಿತು ಹಲವು ಬಾರಿ ಅಧಿಕಾರಿಗಳಿಗೆ, ಸಚಿವರಿಗೆ, ಶಾಸಕರಿಗೆ ಮನವಿ ನೀಡಿ, ರಸ್ತೆ ತಡೆ ಮಾಡಿ ಗಮನ ಸೆಳೆದರು ಯಾರೂ ಸ್ಪಂದಿಸಿಲ್ಲ ಎಂದು ರೈತ ಮುಖಂಡರು ಮಾಜಿ ಸಚಿವ ಎನ್ ಎಸ್ ಬೋಸರಾಜು ಮತ್ತು ಶಾಸಕ ಹಂಪಯ್ಯನಾಯಕ ಸಾಹುಕಾರ ಅವರ ವಿರುದ್ದ ಕೆಂಡಾಮಂಡಲವಾಗಿ ತರಾಟೆಗೆ ತೆಗೆದುಕೊಂಡರು. ತಮ್ಮ ಬೇಡಿಕೆಗಳನ್ನು ಶೀಘ್ರ ಪರಿಹರಿಸದಿದ್ದರೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಗಂಭೀರ ಹೋರಾಟವನ್ನು ಎದುರಿಸಬೇಕಾಗುತ್ತದೆ. ರೈತರನ್ನು ಈ ಸರ್ಕಾರ ಕೊಲೆ ಮಾಡುತ್ತಿದೆ. ಕುಟುಂಬಗಳ ಪರಿಸ್ಥಿತಿ ಗಂಭೀರವಾಗಿದ್ದರೂ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ತೀವ್ರ ಬಿಸಿಲಿನ ತಾಪಮಾನದ ಮಧ್ಯೆಯೂ ರೈತರು ಹೋರಾಟವನ್ನು ನಡೆಸಿದರು. ಈ ಹೋರಾಟ ಜಿಲ್ಲೆಯಲ್ಲಿ ರೈತರ ಪರಿಸ್ಥಿತಿ ಮತ್ತು ಅವರ ಸಂಕಷ್ಟಕ್ಕೆ ನಿದರ್ಶನವಾಗಿದ್ದು ಸರ್ಕಾರ ಕೂಡಲೇ ಪರಿಹಾರ ಒದಗಿಸದಿದ್ದರೆ ಜಿಲ್ಲೆಯಾದ್ಯಂತ ಈ ಹೋರಾಟದ ನಡೆಯುವುದಕ್ಕೆ ದಿಕ್ಸೂಚಿಯಂತಿತ್ತು. ಈ ಪ್ರತಿಭಟನೆಯಲ್ಲಿ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನಪಾಷಾ ದಿದ್ದಿಗಿ, ಜಿಲ್ಲಾಧ್ಯಕ್ಷ ಕೆ.ವೈ.ಬಸವರಾಜನಾಯಕ ಕೊಟ್ನೆಕಲ್, ಸಿಐಟಿಯು ಅಧ್ಯಕ್ಷ ಹೆಚ್.ಶರ್ಫುದ್ದೀನ್ ಪೋತ್ನಾಳ, ಕೆ.ಎಸ್.ಕುಮಾರಸ್ವಾಮಿ, ರಾಜ್ಯ ಜೆಡಿಎಸ್ ಪಕ್ಷದ ಯುವ ಉಪಾಧ್ಯಕ್ಷ ರಾಜಾರಾಮಚಂದ್ರನಾಯಕ, ರಾಜಶೇಖರಗೌಡ, ರಾಮನಗೌಡ, ಪಾರ್ಶನಾಥಗೌಡ, ನಾಗನಗೌಡ, ಅಮರೇಗೌಡ ಖರಾಬದಿನ್ನಿ, ದುರುಗಪ್ಪ ತಡಕಲ್, ಹೊಳೆಯಪ್ಪ ಊಟಕನೂರು, ಬಸವರಾಜ ಬಾಗಲವಾಡ, ಬಸವರಾಜ್ ತಡಕಲ್, ಯಲ್ಲಪ್ಪ ಊಟಕನೂರು, ಮೌನೇಶನಾಯಕ ಮ್ಯಾಕಲ್, ಮಲ್ಲಪ್ಪ ತಡಕಲ್, ಶೇಕಪ್ಪ ತಡಕಲ್, ಶಿವು ನುಗುಡೋಣಿ ಹೊಸೂರು, ಲಚ್ಚಪ್ಪಗೌಡ ತಡಕಲ್, ಕೆ.ಸಾಜಿದ್ ಪಾಷ, ಬಸವರಾಜಸ್ವಾಮಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರ: ಪೋತ್ನಾಳನಲ್ಲಿ ಭುಗಿಲೆದ್ದ ರೈತರ ಆಕ್ರೋಶ ಮಾನ್ವಿ : ಭೀಕರ ಬರಗಾಲ, ಕುಡಿಯುವ ನೀರಿನ ಸಮಸ್ಯೆ ಮತ್ತು ಜೋಳ ಖರೀದಿ ಕೇಂದ್ರದಿಂದ ಬಾಕಿ ಹಣ ಪಾವತಿ ವಿಳಂಬದಿಂದ ಆಕ್ರೋಶಗೊಂಡ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನೂರಾರು ಸಂಖ್ಯೆಯ ರೈತರೂಂದಿಗೆ ತಾಲೂಕಿನ ಪೋತ್ನಾಳ್ ಬಳಿ ರಾಜ್ಯ ಹೆದ್ದಾರಿ ತಡೆದು ಭಾರಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರ ಹಾಗೂ ಮಾಜಿಸಚಿವ, ಶಾಸಕರ ನಿರ್ಲಕ್ಷ್ಯತನ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಖಾಲಿ ಕೂಡ ಹಿಡಿದು ನೂರಾರು ಸಂಖ್ಯೆಯಲ್ಲಿ ರೈತರು ಸುಮಾರು ಎರಡೂವರೆ ಗಂಟೆ ನಡೆಸಿದ ರಸ್ತೆ ತಡೆ ಚಳುವಳಿಗೆ ರಸ್ತೆಯ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು
ಬಿಸಿಲಿನಲ್ಲಿ ತತ್ತರಿಸುವಂತೆ ಮಾಡಿತು. 2025-26 ಸಾಲಿನಲ್ಲಿ ಜೋಳ ಖರೀದಿ ಕೇಂದ್ರಕ್ಕೆ ನೀಡಿದ ಜೋಳದ ಬಾಬತ್ತು ಬಾಕಿ ಹಣ ಬಿಡುಗಡೆ ಮಾಡಬೇಕು. ಹಿರೇಹಳ್ಳಕ್ಕೆ ಕುಡಿಯುವ ನೀರು ಒದಗಿಸಬೇಕು ಮತ್ತು ಬರ ಪರಿಹಾರ ಕೂಡಲೇ ಬಿಡುಗಡೆ ಮಾಡಬೇಕೆನ್ನುವ ಮೂರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಜೋಳ ಖರೀದಿ ಮಾಡಿ 5-6 ತಿಂಗಳು ಕಳೆದರೂ ಇದುವರೆಗೂ ಹಣ ಪಾವತಿಸಿಲ್ಲ. ಮುಂಗಾರು ಮುಗಿದು ಹಿಂಗಾರು ಆರಂಭವಾಗಿದ್ದು ಮಳೆ ಇಲ್ಲದೆ ಬೆಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಮಕ್ಕಳ ಶಾಲಾ ಕಾಲೇಜು ಶುಲ್ಕ ಕಟ್ಟಲು, ಬ್ಯಾಂಕ್ ಸಾಲ ತೀರಿಸಲು, ಬಿತ್ತನೆ ಬೀಜ ಗೊಬ್ಬರ ಖರೀದಿಸಲು ಮತ್ತು ಕುಟುಂಬದ ಆಸ್ಪತ್ರೆ ವೆಚ್ಚ. ಭರಿಸಲು ಸಾಧ್ಯವಾಗದೆ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಕುರಿತು
ಹಲವು ಬಾರಿ ಅಧಿಕಾರಿಗಳಿಗೆ, ಸಚಿವರಿಗೆ, ಶಾಸಕರಿಗೆ ಮನವಿ ನೀಡಿ, ರಸ್ತೆ ತಡೆ ಮಾಡಿ ಗಮನ ಸೆಳೆದರು ಯಾರೂ ಸ್ಪಂದಿಸಿಲ್ಲ ಎಂದು ರೈತ ಮುಖಂಡರು ಮಾಜಿ ಸಚಿವ ಎನ್ ಎಸ್ ಬೋಸರಾಜು ಮತ್ತು ಶಾಸಕ ಹಂಪಯ್ಯನಾಯಕ ಸಾಹುಕಾರ ಅವರ ವಿರುದ್ದ ಕೆಂಡಾಮಂಡಲವಾಗಿ ತರಾಟೆಗೆ ತೆಗೆದುಕೊಂಡರು. ತಮ್ಮ ಬೇಡಿಕೆಗಳನ್ನು ಶೀಘ್ರ ಪರಿಹರಿಸದಿದ್ದರೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಗಂಭೀರ ಹೋರಾಟವನ್ನು ಎದುರಿಸಬೇಕಾಗುತ್ತದೆ. ರೈತರನ್ನು ಈ ಸರ್ಕಾರ ಕೊಲೆ ಮಾಡುತ್ತಿದೆ. ಕುಟುಂಬಗಳ ಪರಿಸ್ಥಿತಿ ಗಂಭೀರವಾಗಿದ್ದರೂ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ತೀವ್ರ ಬಿಸಿಲಿನ ತಾಪಮಾನದ ಮಧ್ಯೆಯೂ ರೈತರು ಹೋರಾಟವನ್ನು ನಡೆಸಿದರು. ಈ ಹೋರಾಟ ಜಿಲ್ಲೆಯಲ್ಲಿ ರೈತರ ಪರಿಸ್ಥಿತಿ ಮತ್ತು
ಅವರ ಸಂಕಷ್ಟಕ್ಕೆ ನಿದರ್ಶನವಾಗಿದ್ದು ಸರ್ಕಾರ ಕೂಡಲೇ ಪರಿಹಾರ ಒದಗಿಸದಿದ್ದರೆ ಜಿಲ್ಲೆಯಾದ್ಯಂತ ಈ ಹೋರಾಟದ ನಡೆಯುವುದಕ್ಕೆ ದಿಕ್ಸೂಚಿಯಂತಿತ್ತು. ಈ ಪ್ರತಿಭಟನೆಯಲ್ಲಿ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನಪಾಷಾ ದಿದ್ದಿಗಿ, ಜಿಲ್ಲಾಧ್ಯಕ್ಷ ಕೆ.ವೈ.ಬಸವರಾಜನಾಯಕ ಕೊಟ್ನೆಕಲ್, ಸಿಐಟಿಯು ಅಧ್ಯಕ್ಷ ಹೆಚ್.ಶರ್ಫುದ್ದೀನ್ ಪೋತ್ನಾಳ, ಕೆ.ಎಸ್.ಕುಮಾರಸ್ವಾಮಿ, ರಾಜ್ಯ ಜೆಡಿಎಸ್ ಪಕ್ಷದ ಯುವ ಉಪಾಧ್ಯಕ್ಷ ರಾಜಾರಾಮಚಂದ್ರನಾಯಕ, ರಾಜಶೇಖರಗೌಡ, ರಾಮನಗೌಡ, ಪಾರ್ಶನಾಥಗೌಡ, ನಾಗನಗೌಡ, ಅಮರೇಗೌಡ ಖರಾಬದಿನ್ನಿ, ದುರುಗಪ್ಪ ತಡಕಲ್, ಹೊಳೆಯಪ್ಪ ಊಟಕನೂರು, ಬಸವರಾಜ ಬಾಗಲವಾಡ, ಬಸವರಾಜ್ ತಡಕಲ್, ಯಲ್ಲಪ್ಪ ಊಟಕನೂರು, ಮೌನೇಶನಾಯಕ ಮ್ಯಾಕಲ್, ಮಲ್ಲಪ್ಪ ತಡಕಲ್, ಶೇಕಪ್ಪ ತಡಕಲ್, ಶಿವು ನುಗುಡೋಣಿ ಹೊಸೂರು, ಲಚ್ಚಪ್ಪಗೌಡ ತಡಕಲ್, ಕೆ.ಸಾಜಿದ್ ಪಾಷ, ಬಸವರಾಜಸ್ವಾಮಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
- ಮಸ್ಕಿ ಟಾಟಾ ಎಸಿ ಚಾಲಕರ–ಮಾಲಕರ ಸಂಘದಿಂದ ಅದ್ದೂರಿ ಗಣೇಶ ವಿಸರ್ಜನೆ ಟಾಟಾ ಎಸಿ ಚಾಲಕರ–ಮಾಲಕರ ಸಂಘದಿಂದ ಅದ್ದೂರಿ ಗಣೇಶ ವಿಸರ್ಜನೆ ಮಸ್ಕಿ: ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಮಲ್ಲಿಕಾರ್ಜುನ ಬಂಡೆ ಟಾಟಾ ಎಸಿ ಚಾಲಕರ ಹಾಗೂ ಮಾಲಕರ ಸಂಘದ ವತಿಯಿಂದ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಯ ವಿಸರ್ಜನಾ ಕಾರ್ಯಕ್ರಮವನ್ನು ಸೋಮವಾರ ಸಂಜೆ ಸುಮಾರು 7 ಗಂಟೆಗೆ ಸಂಭ್ರಮದಿಂದ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಸದಸ್ಯರು, ಚಾಲಕರು ಹಾಗೂ ಮಾಲಕರು ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿ, ನೃತ್ಯ ಮಾಡುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು. ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಭಕ್ತಿಭಾವ ಹಾಗೂ ಸಡಗರದಿಂದ ವಿಸರ್ಜನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.1
- ಲಿಂಗಸೂರು ಪಟ್ಟಣದ 7ನೇ ವಾರ್ಡಿನಲ್ಲಿ ವಾರ್ಡ್ ನಂಬರ್ 7 ರ ಕಾ ಮಹಾರಾಜ್ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ಲಿಂಗಸುಗೂರು ಪಟ್ಟಣದ ಪಟ್ಟಣದ 7ನೇ ಎಕ್ಸ್ಪರ್ಟ್ ಸ್ಕೂಲ್ ಹತ್ತಿರ ಪ್ರತಿ ವರ್ಷದಂತೆ ಈ ವರ್ಷವೂ ವಾರ್ಡ್ ನಂಬರ್ 7 ರ ಕಾ ಮಹಾರಾಜ್ ಗಣೇಶ್ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು ಬೆಳಗಿನ ಜಾವ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಪ್ರತಿಷ್ಠಾಪನೆ ಮಾಡಲಾಯಿತು. ಈ ಸಂದರ್ಭದಲ್ಲಿ ಗಣೇಶ ಯುವಕ ಮಂಡಳಿಯ ಸದಸ್ಯರು, ವಾರ್ಡಿನ ಗುರು ಹಿರಿಯರು ಮಹಿಳೆಯರು ಮಕ್ಕಳು ಗಣೇಶನ ಭಕ್ತರು ಭಾಗವಹಿಸಿದ್ದರು.4
- ದಕ್ಷಿಣ ಭಾರತದಲ್ಲೇ ಅತ್ಯಂತ ಅಭೂತಪೂರ್ವವಾದ ಮಹಾಶಿಲಾ ತಾಣವೆಂದರೆ ರಾಜನಕೊಲ್ಲೂರು. ಇಲ್ಲಿ ಅನೇಕ ಬಗೆಯ ಮರಳುಗಲ್ಲಿನ ಮಹಾಶಿಲೆಗಳು ಇವೆ. ಕರ್ನಾಟಕದ ಅತ್ಯಂತ ಸುಪ್ರಸಿದ್ದ ತಾಣಗಳು ದಕ್ಷಿಣ ಭಾರತದಲ್ಲೇ ಅತ್ಯಂತ ಅಭೂತಪೂರ್ವವಾದ ಮಹಾಶಿಲಾ ತಾಣವೆಂದರೆ ರಾಜನಕೊಲ್ಲೂರು. ಇಲ್ಲಿ ಅನೇಕ ಬಗೆಯ ಮರಳುಗಲ್ಲಿನ ಮಹಾಶಿಲೆಗಳು ಇವೆ. ಡೋಲ್ಡನ್‌ಗಳೆಂಬ ಜಾವಡಿಗೆ ಆಧಾರವಾಗಿ ನಿಂತ ಬದಿಯ ಚಪ್ಪಡಿಗಳುಳ್ಳ ಆಯತಾಕಾರದ ರಚನೆಗಳನ್ನು ಡೋಲೈನ್ ಗಳೆಂದು ಕರೆಯುತ್ತಾರೆ. ಇಲ್ಲಿ ಕಾಣುವ ವಿವಿಧ ಬಗೆಗಳನ್ನು ಗಮನಿಸಿ, ಕೆಲವಕ್ಕೆ ಮೂರು ಅಥವಾ ನಾಲ್ಕು ಬದಿಗಳಿವೆ. ಹಾಗೂ ಸಣ್ಣ ಕಿಟಕಿ-ರಂಧ್ರವು ಅದರಲ್ಲಿ ಇರಬಹುದು ಅಥವಾ ಇಲ್ಲದಿರಬಹುದು. ಡೋಲೈನ್‌ಗಳ ಮಧ್ಯೆ ಇರುವ ಭಾಗಶಃ ಹೂತಿರುವ, ಡಬ್ಬಿ ಆಕಾರದ ರಚನೆಗಳನ್ನು ಸಿಸ್ಟ್‌ಗಳೆಂದು ಕರೆಯುತ್ತಾರೆ. ಸಿಸ್ಟ್ ತನ್ನೊಳಗೇ ಕುಸಿದು ಬೀಳದಂತೆ ತಡೆಗಟ್ಟುವ ರೀತಿಯಲ್ಲಿ, ರಾಜನಕೊಲ್ಲೂರಿನ ಎಲ್ಲ ಸಿಸ್ಟ್‌ಗಳಲ್ಲೂ ಅದರ ಬದಿಯ ಉದ್ದನೆಯ ಚಪ್ಪಡಿಗಳು, ಸ್ವಲ್ಪ ಚಿಕ್ಕ ಚಪ್ಪಡಿಗಳಿಗಿಂತ ಮುಂದಕ್ಕೆ ಚಾಚಿವೆ.1
- ಸೈದಾಪುರ ಎಪಿಎಂಸಿಯಲ್ಲಿ ಮೂಲಸೌಕರ್ಯಗಳು ಒದಗಿಸಿ-ಉಮೇಶ್ ಮುದ್ನಾಳ ಆಗ್ರಹ ಸೈದಾಪೂರ ದನಗಳ, ಕುರಿ, ಆಡಳು, ಕೋಳಿ ಸಂತೆ ಪ್ರಾರಂಭ ಮಾಡಿ, ಆ ಸ್ಥಳದಲ್ಲಿ ಕುಡಿಯುವ ನೀರು ಮತ್ತು ರೈತರಿಗೆ ಮೂಲಭೂತ ಸೌಕರ್ಯಗಳು ಒದಗಿಸಲು ಉಮೇಶ ಮುದ್ನಾಳ ಆಗ್ರಹ, ಜಿಲ್ಲಾಡಳಿತಕ್ಕೆ ಒಂದು ವಾರದ ಗಡುವು. ಸೈದಾಪೂರ : ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಪ್ರತಿ ಗುರುವಾರ ನಡೆಯುತ್ತಿರುವ ಸಂತೆಯಲ್ಲಿ ದನ, ಆಡು, ಕುರಿ, ಕೋಳಿ ಮಾರಾಟಕ್ಕೆ ಪ್ರಾರಂಭ ಮಾಡಿ, ಸಂತೆ ಸ್ಥಳದಲ್ಲಿ ಕುಡಿಯುವ ನೀರು & ಮೂಲಭೂತ ಸೌಕರ್ಯ ಒದಗಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ.ಕೆ.ಮುದ್ನಾಳ 1 ವಾರದ ಗಡುವು ನೀಡಿ ಜಿಲ್ಲಾಡಳಿತಕ್ಕೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳ್ಳಂ ಬೆಳಿಗ್ಗೆ ಸಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕೆ. ಮುದ್ನಾಳ ಅವರು ಉಪ ಎಪಿಎಂಸಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದರು. ಸ್ಥಳದಲ್ಲಿ ರೈತರೊಂದಿಗೆ ಚರ್ಚಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲೇ ಅತಿದೊಡ್ಡ ಜಾನುವಾರು ಸಂತೆಗಳಾದ ಶುಕ್ರವಾರ-ಶಹಾಪೂರ, ಮಂಗಳವಾರ-ಯಾದಗಿರಿ, ಸೋಮವಾರ-ಗುರುಮಠಕಲ್, ಗುರುವಾರ-ಸೈದಾಪೂರದಲ್ಲಿ ಪ್ರಾರಂಭ ಮಾಡಬೇಕೆಂದು ಒತ್ತಾಯಿಸಿದರು. ಸಂತೆ ಆವರಣದಲ್ಲಿ ದನ-ಕರುಗಳ, ಕುರಿ, ಆಡು, ಕೋಳಿ ಮಾರಾಟಕ್ಕೆ ಬಂದ ರೈತರಿಗೆ ಸೂಕ್ತ ಸ್ಥಳಾವಕಾಶವಿಲ್ಲದೇ ಜಾಲಿ ಕಂಟಿಗಳು ಬೆಳೆದು, ವಿಷ-ಜಂತುಗಳು ಸೇರಿಕೊಂಡಿವೆ. ಚರಂಡಿಯಲ್ಲಿ ತುಂಬಿ ನಿಂತು ಗಬ್ಬೆದ್ದು ನಾರುತ್ತಿದೆ. ಕುಡುಕರ ಹಾವಳಿ, ಅಕ್ರಮ ಚಟುವಟಿಕೆ ನಡೆಯುತ್ತಿದ್ದು, ಎಲ್ಲೆಡೆ ಅಸ್ವಚ್ಛತೆ ಆವರಿಸಿದ್ದು, ದುರ್ವಾಸನೆ ಬೀರುತ್ತಿದೆ. ಕೆಲವೆಡೆ ಭಿಕ್ಷುಕರು ಹಾಗೂ ಪುಂಡ-ಪೊಕರಿಗಳ ತಂಗುದಾಣವಾಗಿ ಮಾರ್ಪಟ್ಟಿರುವುದು ರೈತರು ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಸಂತೆಗೆ ಆಗಮಿಸುವ ರೈತರು ಹಾಗೂ ವ್ಯಾಪಾರಿಗಳು ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ತಿಳಿಸಿದರು. ಬಿರುಬಿಸಿಲಿನ ನಡುವೆಯೂ ಜನ-ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಂಡು ಜನ-ಜಾನುವಾರುಗಳಿಗೆ ರೋಗ-ರುಜಿನ ಹರಡದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು. ಸಂತೆ ಪ್ರಾರಂಭವಾದ ನಂತರ ಸಂತೆ ಒಳಗಡೆ ನಡೆಯುತ್ತಿರುವ ಪ್ರತಿ ವಾರ ಪಶುವೈದ್ಯರನ್ನು ಕಡ್ಡಾಯವಾಗಿ ನಿಯೋಜಿಸಿ, ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಬೇಕು. ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಜಾನುವಾರುಗಳನ್ನು ಕಟ್ಟಲು ಸಾಲುಸಾಲಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ನೆರಳಿಗಾಗಿ ಮರಗಳನ್ನು ನೆಡುವುದು ಅಥವಾ ಶೆಡ್ ನಿರ್ಮಿಸುವುದು ಅಗತ್ಯವಾಗಿದೆ. ಅಲ್ಲದೆ ಮಾರುಕಟ್ಟೆ ಆವರಣದಲ್ಲಿ ಉದ್ಯಾನ ನಿರ್ಮಿಸಿ ಪರಿಸರವನ್ನು ಸುಂದರ ಹಾಗೂ ಸ್ವಚ್ಛವಾಗಿಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಜಿಲ್ಲಾಧಿಕಾರಿಗಳು ಹಾಗೂ ಸಂಬAಧಪಟ್ಟ ಎಪಿಎಂಸಿ ಅಧಿಕಾರಿಗಳು ಕೂಡಲೇ ಸಂತೆ ಆವರಣಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ರೈತರು ಮತ್ತು ಜಾನುವಾರುಗಳಿಗೆ ಅನುಕೂಲಕರ ವಾತಾವರಣ ಕಲ್ಪಿಸಬೇಕು ಎಂದು ಉಮೇಶ್ ಕೆ. ಮುದ್ನಾಳ ಆಗ್ರಹಿಸಿದರು. ಪ್ರತಿ ಗುರುವಾರ ಸಾವಿರಾರು ರೈತರು ಆಗಮಿಸುವ ಈ ಸಂತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಅತ್ಯಗತ್ಯವಾಗಿದೆ. ಸಂಬAಧಪಟ್ಟ ಅಧಿಕಾರಿಗಳು ಶೀಘ್ರವೇ ಅಗತ್ಯ ಕ್ರಮ ಕೈಗೊಂಡು ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಆವರಣದಲ್ಲಿ ಖಾಸಗಿ ಅಂಗಡಿ ಮಾಲೀಕರು ಎ.ಪಿ.ಎಂ.ಸಿ ಶೆಡ್ ನಲ್ಲಿ ಅಕ್ರಮವಾಗಿ ದಾಸ್ತಾನಿಗಾಗಿ ಬಳಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಒಂದು ನಿರ್ಲಕ್ಷ್ಯ ವಹಿಸಿದರೆ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಮುಂಬಾಗದಲ್ಲಿರುವ ಯಾದಗಿರಿ – ರಾಯಚೂರು ಕರಿಬೆಟ್ಟ ಸರ್ಕಲನ ಮುಖ್ಯ ರಸ್ತೆ ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.3
- ರೈತರ ಹೋರಾಟ ಬರಗಾಲ ಹೋರಾಟ ನಮ್ಮ ಯಾದಗಿರಿ ಜಿಲ್ಲಾ ಬರಗಾಲ ಘೋಷಣೆ ಮಾಡು ಅಂತ ಹೋರಾಟ ನಡೆದಿದೆ ಮುಖಂಡ ಅಮಿನ್ ರೆಡ್ಡಿ ಅಳಿಗೆ ರೈತರ ಹೋರಾಟ ಬರಗಾಲ ಹೋರಾಟ ನಮ್ಮ ಯಾದಗಿರಿ ಜಿಲ್ಲಾ ಬರಗಾಲ ಘೋಷಣೆ ಮಾಡು ಅಂತ ಹೋರಾಟ ನಡೆದಿದೆ ಮುಖಂಡ ಅಮಿನ್ ರೆಡ್ಡಿ ಅಳಿಗೆ1
- ಮಾತೆ ಮಾಣಿಕೇಶ್ವರಿ ನಗರದಲ್ಲಿ ಗಣೇಶನ ಭವ್ಯ ಮೆರವಣಿಗೆ ಯಾದಗಿರಿ: ನಗರದ ಮಾತೆ ಮಾಣಿಕೇಶ್ವರಿ ನಗರದಲ್ಲಿ ಮಹಿಳಾ ಬಳಗದ ವತಿಯಿಂದ ಗಣೇಶ ಚತುರ್ದಶಿ ಅಂಗವಾಗಿ ಗಣೇಶನ ಆಗಮನ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಮಹಿಳೆಯರು ಕುಂಭಮೇಳದೊಂದಿಗೆ ಭವ್ಯ ಮೆರವಣಿಗೆ ನಡೆಸಿದರು. ಶ್ರೀ ಮ.ನಿ.ಪ್ರ. ಕಲ್ಯಾಣ ಸ್ವಾಮಿಗಳು ಹಾಗೂ ಪರಮಪೂಜ್ಯ ಷಟಾಕ್ಷರಿ ಚಲಿಸಿದ ಸ್ವಾಮಿಗಳು ಮೆರವಣಿಗೆಗೆ ಚಾಲನೆ ನೀಡಿದರು. ಕುಂಭಮೇಳದೊಂದಿಗೆ ಸಾಗಿದ ಗಣೇಶನ ಭವ್ಯ ಮೆರವಣಿಗೆಯು ಮಾತೆ ಮಾಣಿಕೇಶ್ವರಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಮಹಿಳೆಯರು ಸೇರಿದಂತೆ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶನ ದರ್ಶನ ಪಡೆದು ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಭಕ್ತರು ಭಕ್ತಿ-ಶ್ರದ್ಧೆಯಿಂದ ಗಣೇಶನನ್ನು ಪೂಜಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.1
- ಅಲಂಪೂರ್ ಪೇಟೆಯಲ್ಲಿ ಗಣೇಶನ ಪ್ರತಿಷ್ಠಾಪನೆ ; ಪ್ರಸಾದಕ್ಕೆ ಚಾಲನೆ ನೀಡಿದ ಮುಖಂಡರು ಇಲಕಲ್ ನಗರದ ಅಲಂಪೂರ ಪೇಟೆಯಲ್ಲಿ ಓಣಿಯ ಗುರುಹಿರಿಯರು ಯುವ ಮಿತ್ರರಿಂದ ಪ್ರತಿಷ್ಠಾಪನೆಗೊಂಡಿರುವ ಗಣೇಶಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರದ ಹಿರಿಯ ಮುಖಂಡರಾದ ವೆಂಕಟೇಶ ಸಾಕಾ, ಮಂಜುನಾಥ ಹೊಸಮನಿ, ನಗರ ಪಿಎಸ್ಐ ನಾಗರಾಜ ಗಡಾದ, ಹನುಮಂತ ತುಂಬದ, ಅಶೋಕ ಪೂಜಾರಿ ಹಾಗೂ ಅನಂಪುರ್ಪೇಟೆಯ ಯುವ ಮಿತ್ರರು ಉಪಸ್ಥಿತರಿದ್ದರು4
- ಪಕ್ಕ ಲವರ್’ ಸಿನಿಮಾ ಶುರು! 🎬 ಸ್ಥಳೀಯ ಪ್ರತಿಭೆಗಳಿಗೆ ದೊಡ್ಡ ಅವಕಾಶ! ಸಿನಿಮಾ ನಿರ್ಮಾಣಕ್ಕಿಂತ ಪ್ರಮೋಷನ್ ಮುಖ್ಯ! ಬಳ್ಳಾರಿಯ ಸ್ಥಳೀಯ ಪ್ರತಿಭೆಗಳನ್ನೇ ಒಳಗೊಂಡು ನಿರ್ಮಾಣವಾಗುತ್ತಿರುವ ‘ಪಕ್ಕ ಲವರ್’ ಕನ್ನಡ ಚಲನಚಿತ್ರದ ಟೈಟಲ್ ಹಾಗೂ ಹಾಡು ಬಿಡುಗಡೆಗೊಂಡಿದೆ. 🎬 ಸ್ಥಳೀಯ ಕಲಾವಿದರು ಹಾಗೂ ಪ್ರತಿಭೆಗಳಿಗೆ ಅವಕಾಶ ನೀಡಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಚಿತ್ರದ ನಿರ್ದೇಶಕ ಕೋಳೂರು ಶೇಖರ್ ಹೇಳಿದ್ದಾರೆ. ಚಿತ್ರದ ಶೇ.30ರಷ್ಟು ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಉಳಿದ ಚಿತ್ರೀಕರಣವನ್ನು ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ನಡೆಸಲಾಗಲಿದೆ. ಚಿತ್ರದ ನಾಯಕ ನಟ ಅವಿನಾಶ್, ‘ಪಕ್ಕ ಲವರ್’ ಸಿನಿಮಾ ಯಶಸ್ವಿಯಾಗುವ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಉದ್ಯಮಿ ಹಾಗೂ ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್, ಸಿನಿಮಾ ನಿರ್ಮಾಣದಷ್ಟೇ ಪ್ರಮೋಷನ್‌ಗೂ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. 👉 ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಗಬೇಕು ಎನ್ನುವ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ. ASN NEWS24 ಕನ್ನಡ – ಸುತ್ತಮುತ್ತ ನಡೆಯುವ ಸುದ್ದಿ ನಿಮ್ಮ ಮುಂದೆ. #PakkaLover #PakkaLoverMovie #KannadaMovie #KannadaCinema #KannadaFilm #Ballari #BallariNews #Bellary #KannadaNews #KannadaFilmIndustry #LocalTalent #LocalArtists #Avinash #KannadaActor #FilmPromotion #Sandalwood #SandalwoodNews #KarnatakaNews #ASNNews24 #ASNNews24Kannada1