ತೈಲ ಬೆಲೆ ಏರಿಕೆ ಭೀತಿ ನಡುವೆ ಪ್ರಧಾನಿ ಮೋದಿ ಮಿತವ್ಯಯ ಕರೆ “ಪೆಟ್ರೋಲ್ ಕಡಿಮೆ ಬಳಸಿ, ಒಂದು ವರ್ಷ ಚಿನ್ನ ಖರೀದಿ ತಪ್ಪಿಸಿ” ⛽ ತೈಲ ಬೆಲೆ ಏರಿಕೆ ಭೀತಿ ನಡುವೆ ಪ್ರಧಾನಿ ಮೋದಿ ಮಿತವ್ಯಯ ಕರೆ “ಪೆಟ್ರೋಲ್ ಕಡಿಮೆ ಬಳಸಿ, ಒಂದು ವರ್ಷ ಚಿನ್ನ ಖರೀದಿ ತಪ್ಪಿಸಿ” ಹೈದರಾಬಾದ್: ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ದೇಶದ ಜನರಿಗೆ ಮಿತವ್ಯಯ ಹಾಗೂ ಇಂಧನ ಉಳಿತಾಯದ ಸಂದೇಶ ನೀಡಿದ್ದಾರೆ. “ಅಂತಾರಾಷ್ಟ್ರೀಯ ಸಂಘರ್ಷಗಳಿಂದ ಉಂಟಾಗುತ್ತಿರುವ ಬೆಲೆ ಏರಿಕೆಯನ್ನು ಎದುರಿಸಲು ಎಲ್ಲರ ಸಾಮೂಹಿಕ ಭಾಗವಹಿಸುವಿಕೆ ಅಗತ್ಯ” ಎಂದು ಹೇಳಿರುವ ಮೋದಿ, ಪರೋಕ್ಷವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಸನ್ನಿಹಿತವಾಗಿದೆ ಎಂಬ ಸೂಚನೆ ನೀಡಿದ್ದಾರೆ. ಪ್ರಧಾನಿ ನೀಡಿದ ಪ್ರಮುಖ ಸಲಹೆಗಳು: ▪️ ಕೊರೋನಾ ಕಾಲದಂತೆ Work From Home ಪದ್ಧತಿ ಹೆಚ್ಚಿಸಿ ▪️ ಆನ್‌ಲೈನ್ ಹಾಗೂ ವರ್ಚುವಲ್ ಸಭೆಗಳಿಗೆ ಆದ್ಯತೆ ನೀಡಿ ▪️ ಸ್ವಂತ ವಾಹನ ಬಿಟ್ಟು ಬಸ್, ಮೆಟ್ರೋ, ರೈಲು ಬಳಸಿ ▪️ ಅನಗತ್ಯ ವಿದೇಶ ಪ್ರವಾಸ ಹಾಗೂ ಐಷಾರಾಮಿ ಖರ್ಚು ಕಡಿಮೆ ಮಾಡಿ ▪️ ಒಂದು ವರ್ಷ ಅನಗತ್ಯ ಚಿನ್ನ ಖರೀದಿ ತಪ್ಪಿಸಿ ▪️ ಸಾವಯವ ಕೃಷಿಗೆ ಉತ್ತೇಜನ ನೀಡಿ ▪️ ಕೃಷಿಯಲ್ಲಿ ಡೀಸೆಲ್ ಬದಲು ಸೌರ ಪಂಪ್‌ಸೆಟ್ ಬಳಸಿ ▪️ ಮಿತವ್ಯಯ ಮತ್ತು ದಕ್ಷತೆಯ ಜೀವನಶೈಲಿ ಅಳವಡಿಸಿಕೊಳ್ಳಿ ಇದೇ ವೇಳೆ ಜಾಗತಿಕ ಕಚ್ಚಾ ತೈಲ ದರ ಬ್ಯಾರೆಲ್‌ಗೆ 70 ಡಾಲರ್‌ನಿಂದ 126 ಡಾಲರ್‌ಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಕಳೆದ 10 ವಾರಗಳಲ್ಲಿ ₹1 ಲಕ್ಷ ಕೋಟಿ ನಷ್ಟ ಅನುಭವಿಸಿದ್ದು, ಮೇ 15ರೊಳಗೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ. #PetrolPrice #DieselPrice #NarendraModi #FuelPriceHike #IndiaNews #BreakingNews #WorkFromHome #GoldPrice #OilCrisis #KarnatakaNews

- ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಅವರು ಅಪಘಾತದಲ್ಲಿ ಗಾಯಗೊಂಡ ಅಪರಿಚಿತರನ್ನು ತಮ್ಮ ಸ್ವಂತ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು. ಅವರ ಈ ತಕ್ಷಣದ ನೆರವಿಗೆ ಕರ್ನಾಟಕದ ಜನರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇದು ರಾಜಕೀಯದಲ್ಲಿ ಮಾನವೀಯತೆಯು ಎಷ್ಟು ಮುಖ್ಯ ಎಂಬುದನ್ನು ತೋರಿಸಿದೆ.1
- ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಸಂಗಾಪುರ ರಸ್ತೆಯು ಹದಗೆಟ್ಟಿದ್ದು, ಇಲ್ಲಿನ ಜನರಿಗೆ ತೀವ್ರ ತೊಂದರೆಯಾಗಿದೆ. ಈ ರಸ್ತೆ ಸಮಸ್ಯೆಯನ್ನು ಪರಿಹರಿಸಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.1
- ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ಸಚಿವ ಎನ್.ಎಸ್.ಬೋಸರಾಜು ಅವರು ಶ್ರೀಮಹರ್ಷಿ ವಾಲ್ಮೀಕಿ ವೃತ್ತವನ್ನು ಉದ್ಘಾಟಿಸಿದರು. ಈ ವೃತ್ತದ ಲೋಕಾರ್ಪಣೆಯು ಸ್ಥಳೀಯ ಸಮುದಾಯಕ್ಕೆ ಮಹತ್ವದ ಸಂಕೇತವಾಗಿದೆ.1
- ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯದ ದಾರಿಗೆ ಅಡ್ಡಲಾಗಿ ಅಕ್ರಮ ಶೆಡ್ ನಿರ್ಮಿಸಲಾಗಿದೆ. ಇದರಿಂದ ಮಹಿಳೆಯರಿಗೆ ಶೌಚಾಲಯಕ್ಕೆ ತೆರಳಲು ಮತ್ತು ನೀರು ಸರಬರಾಜು ಪೈಪ್‌ಲೈನ್‌ಗಳಿಗೆ ತೊಂದರೆಯಾಗಿದೆ ಎಂದು ಕರವೇ ಆರೋಪಿಸಿದೆ. ಕರ್ನಾಟಕ ರಕ್ಷಣಾ ವೇದಿಕೆ ಈ ಅಕ್ರಮ ಶೆಡ್ ತೆರವುಗೊಳಿಸಲು ಆಗ್ರಹಿಸಿ, ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.1
- ಜೈಭೀಮ್ ನ್ಯೂಸ್ ಚಾನಲ್‌ನ ರಾಜ್ಯ ಸಮಿತಿಗೆ ಜಾಕಿರಾ ಹುಸೇನ್ ಅಧ್ಯಕ್ಷರಾಗಿ ಮತ್ತು ಮಲ್ಲಿಕಾರ್ಜುನ ಛಲವಾದಿ ರಾಜಾನಕೊಲ್ಲೂರ್ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಚಾನಲ್‌ನ 4ನೇ ವಾರ್ಷಿಕೋತ್ಸವ ಮತ್ತು 135ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಅಂಗವಾಗಿ ಘಟಪ್ರಭದಲ್ಲಿ ಈ ಸಮಿತಿ ರಚಿಸಲಾಯಿತು.2
- ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ವಿಶೇಷ ಸನ್ಮಾನ. ಕುಷ್ಟಗಿ:- ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕುಷ್ಟಗಿ ಪಟ್ಟಣದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ, ದ್ವೀತಿಯ ಮತ್ತು ಅತಿ ಹೆಚ್ಚು ಅಂಕಪಡೆದ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ವಿಧ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಕುಷ್ಟಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೆಂಕಪ್ಪ ವಾಲಿಕಾರ ತಿಳಿಸಿದರು. ಇಲ್ಲಿನ ಹಳೆ ಪ್ರವಾಸಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು 2025- 2026ನೇ ಸಾಲಿನ ಈ ವರ್ಷದ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾಲೂಕಿನ ಮುದೇನೂರು ಗ್ರಾಮದಲ್ಲಿ ಹಮ್ಮಿಕೊಳ್ಳಬೇಕಾಗಿತ್ತು. ಕಾರಣಾಂತರಗಳಿಂದ ಮುದೇನೂರು ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ಆಗುವುದಿಲ್ಲ ಆದರೆ ಮುಂದಿನ ತಿಂಗಳಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳಿಂದ ಮತ್ತು ಎಲ್ಲಾ ಸದಸ್ಯರಿಂದ ಒಪ್ಪಿಗೆ ಪಡೆಯಲಾಗಿದೆ. ಮುಂದಿನ ದಿನಮಾನದಲ್ಲಿ ಯಾವ ಕಡೆ ಸಮ್ಮೇಳನ ನೆಡೆಸಿದರೆ ಸೂಕ್ತ ಆಗುತ್ತದೆ ಎಂಬ ತೀರ್ಮಾನ ತೆಗೆದುಕೊಂಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲಾಗುವದು ಎಂದರು. ಅದರಂತೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಎಸ್.ಎಸ್‌ಎಲ್.ಸಿ. ಮತ್ತು ಯುಪಿಸಿ ಮಕ್ಕಳಿಗೆ ವಿಶೇಷ ಸನ್ಮಾನ ಸಮಾರಂಭ ಏರ್ಪಡಿಸಿಲಾಗುತ್ತಿದೆ ಆದ್ದರಿಂದ ತಾಲೂಕಿನ ಪ್ರಥಮ, ದ್ವೀತಿಯ ಸ್ಥಾನದಲ್ಲಿ ಹಾಗೂ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನಿಸಲಾಗುವದು ಈ ಒಂದು ಕಾರ್ಯಕ್ರಮಕ್ಕೆ ಪ್ರತಿಯೊಬ್ಬರ ಸಲಹೆ ಸಹಕಾರ ಬಹಳ ಅಗತ್ಯವಾಗಿದ್ದು ಈ ಒಂದು ಸಮಾರಂಭವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣೇಗೌಡ ಪಾಟೀಲ ಮಾತನಾಡಿ ಯಾವುದೇ ಕಾರ್ಯಕ್ರಮ ಮಾಡಬೇಕಾದರೆ ಮೊದಲು ಸೂಕ್ತ ತೀರ್ಮಾನ ತೆಗೆದುಕೊಂಡು ಸಭೆ ಸಮಾರಂಭ ಏರ್ಪಡಿಸಬೇಕಾಗುತ್ತದೆ ಈ ವರ್ಷದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕುಷ್ಟಗಿ ತಾಲೂಕಿನಲ್ಲಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಆದರೆ ಪ್ರತಿಯೊಬ್ಬರ ಸಲಹೆ ಸಹಕಾರ ಅಗತ್ಯವಾಗಿದೆ ಸೂಕ್ತ ನಿರ್ಧಾರದೊಂದಿಗೆ ಜಿಲ್ಲಾ ಸಮ್ಮೇಳನ ನಡೆಸಲಾಗುವದು ಎಂಬ ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶರಣಪ್ಪ ವಡಗೇರಿ, ನಿಕಟ ಪೂರ್ವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹನಮೇಶ ಗುಮಗೇರಾ, ರವೀಂದ್ರ ಬಾಕಳೆ, ಉಮೇಶ ಹಿರೇಮಠ, ಸಾಹಿತಿಗಳಾದ ಅಮರೇಗೌಡ ಪಾಟೀಲ ಜಾಲಿಹಾಳ, ದೇವರಾಜ ವಿಶ್ವ ಕರ್ಮ, ದೊಡ್ಡಪ್ಪ ಕೈಲವಾಡಗಿ, ಹ.ಯ.ಈಟಿಯವರ್, ಆರ್.ಕೆ.ಸುಬೇದಾರ, ವಿದ್ಯಾ ಕಂಪಾಪೂರಮಠ, ಎಸ್.ಜೆ.ಕಡೆಮನಿ, ಶ್ರೀನಿವಾಸ ಕಟ್ಲಿ, ನಿಂಗಪ್ಪ ಸಜ್ಜನ್, ಚನ್ನಪ್ಪ ಬಾವಿಮನಿ, ಸಂತೋಷ ತೋಟದ್, ಹನಮೇಶ ಶಾಖಾಪೂರ, ಕ.ಕಾ.ಪ.ಸ.ತಾಲೂಕು ಅಧ್ಯಕ್ಷ ಪವಾಡೆಪ್ಪ ಚೌಡ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರಾಜ್ಯ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತ ಲಲಿತಮ್ಮ ಹಿರೇಮಠ ಇವರಿಗೆ ಸನ್ಮಾನಿಸಿ ಗೌರವಿಸಿದರು.2
- ಹೆಗಲಿಗೆ ಮಹಾಂತ ಜೋಳಿಗೆ ಹಾಕಿಕೊಂಡು ಭಕ್ತರ ದುಶ್ಚಟ ಬೇಡಿದ ಶ್ರೀಗಳು ಇಳಕಲ್: ಮಹಾಂತ ಜೋಳಿಗೆಯ ಶಿವಶಿಲ್ಪಿ ಡಾ.ಮಹಾಂತ ಶ್ರೀಗಳ ೮ನೇ ಪುಣ್ಯಸ್ಮರಣೆ ನಿಮಿತ್ತ ತಾಲೂಕಿನ ಚಿಕ್ಕ ಕೊಡಗಲಿ ಗ್ರಾಮದಲ್ಲಿ ಗುರುಮಹಾಂತ ಶ್ರೀಗಳು ಹೆಗಲಿಗೆ ಮಹಾಂತ ಜೋಳಿಗೆ ಹಾಕಿಕೊಂಡು ಭಕ್ತರ ದುಶ್ಚಟ ಬೇಡಿದರು. ಶರಣ ಸಿದ್ಧಾಂತ ವಿದ್ಯಾಪೀಠದಡಿ ಭಾನುವಾರ ಗ್ರಾಮದಲ್ಲಿ ಮಹಾಂತ ಜೋಳಿಗೆಯೊಂದಿಗೆ ಶ್ರೀಗಳು ಸಂಚಾರ ನಡೆಸಿದರು. ಮನೆ, ಮನೆಗೆ ತೆರಳಿ ಭಕ್ತರಿಗೆ ದುಶ್ಚಟಗಳನ್ನು ತ್ಯಜಿಸಲು ಸಲಹೆ ನೀಡಿದರು. ಅಲ್ಲದೇ ಕೆಲ ಯುವಕರು ಸ್ವ ಇಚ್ಛೆಯಿಂದ ದುಶ್ಚಟ ಬಿಡುವುದಾಗಿ ಹೇಳಿ ಮಹಾಂತ ಜೋಳಿಗೆ ಮೇಲೆ ಪ್ರಮಾಣ ಮಾಡಿದರು. "ಚಿಕ್ಕ ಕೊಡಗಲಿ ಗ್ರಾಮ ಭಕ್ತಿಯ ಬೀಡು. ಯುವಕರು ಸೇರಿದಂತೆ ಎಲ್ಲರೂ ದುಶ್ಚಟಗಳನ್ನು ತ್ಯಜಿಸಿ ಅರೋಗ್ಯಯುತ ಬದುಕು ಸಾಗಿಸಬೇಕು,'' ಎಂದು ಗುರುಮಹಾಂತ ಶ್ರೀಗಳು ಸಲಹೆ ನೀಡಿದರು. ಈ ವೇಳೆ ಗ್ರಾಮದ ಅಯರು ಮತ್ತು ಭಕ್ತರು ಇದ್ದರು.1
- ಹುನಗುಂದ ಸಮೀಪದ ಟೋಲ್ ಬಳಿ ಧಗ ಧಗ ಹೊತ್ತಿ ಉರಿದ ಭತ್ತ ಹೊತ್ತ ಲಾರಿ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರ ಗ್ರಾಮದ ಮಧ್ಯದ ಟೋಲ್ ನಾಕಾ ಬಳಿ ಭತ್ತ ಹೊತ್ತ ಬರುತ್ತಿದ್ದ ಲಾರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಧಗ ಧಗ ಹೊತ್ತಿ ಉರಿದ ಘಟನೆ ಮೇ ೧೦ ರಾತ್ರಿ ಸಮಯದಲ್ಲಿ ನಡೆದಿದೆ. ತಮಿಳುನಾಡು ರಾಜ್ಯದ ಲಾರಿ ಭತ್ತವನ್ನು ಹೊತ್ತುಕೊಂಡ ಹುನಗುಂದ ಮಾರ್ಗವಾಗಿ ತೆರಳಬೇಕಾಗಿದ್ದ ಲಾರಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಲಾರಿ ಬಾಲಕಪ್ರಾಣಾಪಾಯದಿಂದ ಪಾರಾಗಿದ್ದಾನೆ. ರಾತ್ರಿ ಹತ್ತಿದ ಬೆಂಕಿ ಮುಂಜಾನೆಯವರೆಗೂ ಉರಿಯುತ್ತಿದ್ದರೂ,ಅಗ್ನಿಶಾಮಕ ದಳದ ಸಿಬ್ಬಂದಿಯಾಗಲಿ ಅಥವಾ ಟೋಲ್ ನಾಕಾ ಸಿಬ್ಬಂದಿಯಾಗಲಿ ಬೆಂಕಿಯನ್ನು ನಂದಿಸುವ ಪ್ರಯತ್ನವನ್ನು ಮಾಡಿಲ್ಲ ಎಂದು ತಿಳಿದು ಬಂದಿದೆ. ಈ ಘಟನೆ ಕುರಿತು ಹುನಗುಂದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.1