Shuru
Apke Nagar Ki App…
ಹುಣಸಿಗಿ ನಾರಾಯಣಪುರ ಮುಖ್ಯ ರಸ್ತೆ ಕಾಮಗಾರಿ ನಡೆಯುವ ಹುಣಸಗಿ ನಾರಾಯಣಪುರ ಮುಖ್ಯ ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ವಿದ್ಯುತ್ ಕಂಬವನ್ನು ಸ್ಥಳಾಂತರಿಸದೆ ರಸ್ತೆಯಲ್ಲಿ ಇಟ್ಟು ಅವಜ್ಞಾನಿಕವಾಗಿ ರಸ್ತೆ ಕಾಮಗಾರಿ ನಡೆಸುತ್ತಿರುವುದು
ಮಲ್ಲಿಕಾರ್ಜುನ ಚಲವಾದಿ ರಾಜನಕೋಳೂರು
ಹುಣಸಿಗಿ ನಾರಾಯಣಪುರ ಮುಖ್ಯ ರಸ್ತೆ ಕಾಮಗಾರಿ ನಡೆಯುವ ಹುಣಸಗಿ ನಾರಾಯಣಪುರ ಮುಖ್ಯ ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ವಿದ್ಯುತ್ ಕಂಬವನ್ನು ಸ್ಥಳಾಂತರಿಸದೆ ರಸ್ತೆಯಲ್ಲಿ ಇಟ್ಟು ಅವಜ್ಞಾನಿಕವಾಗಿ ರಸ್ತೆ ಕಾಮಗಾರಿ ನಡೆಸುತ್ತಿರುವುದು
More news from ಕರ್ನಾಟಕ and nearby areas
- ಸಿಡಿಲು ಬಡಿದ ಪರಿಣಾಮ ಬುದುರು ಗ್ರಾಮದಲ್ಲಿ ಇತ್ತೀಚೆಗೆ 56 ಕುರಿಗಳು ಮೃತಪಟ್ಟ ಹಿನ್ನೆಲೆಯಲ್ಲಿ, ನಿನ್ನೆ (ದಿನಾಂಕ ಉಲ್ಲೇಖಿಸಲಾಗಿಲ್ಲ) ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಅವರು ಬುದುರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಗಾಲದಲ್ಲಿ ಸಿಡಿಲು ಹಾಗೂ ಮಳೆಯಿಂದ ಸುರಕ್ಷತವಾಗಿರಲು ಸಲಹೆ ನೀಡಿದ ಅವರು, ಸರ್ಕಾರದಿಂದ ಶೀಘ್ರದಲ್ಲೇ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.1
- ಕರ್ನಾಟಕದಲ್ಲಿ ಫೈನಾನ್ಸ್ ಕಂಪನಿಯಲ್ಲಿ ಯಾವುದೇ ವಾಹನ ಖರೀದಿ ಮಾಡದಲ್ಲಿ ಮತ್ತು ಅದರಿಂದ ಲೋನ ಮಾಡಿದವರಿಗೆ 1 2 ಕಂತುಗಳು ತುಂಬಾಲಿಲ್ಲ ಅಂದರೆ ಫೈನಾನ್ಸಿ ಏಜೆಂಟ್ರು ಬಂದು ವಾಹನ ಹೋಯ್ತಾರೆ ಅಂತ ಭಯಪಡುವ ಅವಶ್ಯಕತೆ ಇಲ್ಲ ಯಾಕಂದರೆ ಅವರು 6: ಕಂತು ಆಗುವರೆಗೂ ವಯ್ಯುವುದಿಲ್ಲ 6 ಕಂತು ಹೆಚ್ಚಾದರೆ ಫೈನಾನ್ಸ್ ಕಂಪನಿಯವರು ಕೊರ್ಟದಿಂದ ಆದೇಶ ಲೆಟರ್ ತಂದು ವಾಹನ ಒಯ್ಯಬಹುದು . ಹಾಗೆ ಬಂದರೆ ದಯವಿಟ್ಟು ಸಾರ್ವಜನಿಕರು ವಾಹನ ಬಿಡಬಾರದು.1
- ದಾರಿ ಕಾಣದಾಗಿದೆ ಅಲ್ಲಿಪೂರಿಗೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆರೋಪ ! ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕನಸು ನನಸು ಮಾಡುವುದು ಯಾವಾಗ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಜಿಲ್ಲಾಡಳಿತಕ್ಕೆ ಪ್ರಶ್ನಿಸಿದ್ದಾರೆ ! ಜನ ಸಾಮಾನ್ಯರಿಗೆ ಸಾರಿಗೆ ರಸ್ತೆ ಸರಿಪಡಿಸದ ಅಧಿಕಾರಿ ಜನಪ್ರತಿನಿದಿಗಳ ವಿರುದ್ಧ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆಕ್ರೋಶ ಯಾದಗಿರಿ: ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಅಲ್ಲಿಪೂರ ದಿಂದ ಚಾಮನಹಳ್ಳಿಗೆ ಹೋಗುವ ಒಳ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ತೆಗ್ಗು ದಿನ್ನೆಗಳಿಂದ ಸಂಚಾರಕ್ಕೆ ತೊಂದರೆ ಆಗಿದೆ. ಅಲ್ಲದೇ ಎರಡು ಬದಿಯಲ್ಲಿ ಇಕ್ಕೆಲಗಳಲ್ಲಿ ಜಾಲೆ ಬೆಳೆದಿರುವುದ ರಿಂದ ವಾಹನಗಳು ಕಾಣುತ್ತಿಲ್ಲ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ ಮುದ್ನಾಳ್ ದೂರಿದ್ದಾರೆ. ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿ ಅವರು ಈ ಒಳ ರಸ್ತೆಗಳ ಮುಖಾಂತರ ರೈತರ ದನಕರುಗಳಿಗೂ ವಾಹನ ಸವಾರರ ಕಣ್ಣಿಗೆ ತಗಲುವುದಲ್ಲದೇ, ತೊಂದರೆ ಆಗುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿದೆ. ಜಿಲ್ಲಾಡಳಿತ ಇತ್ತ ಗಮನ ಹರಿಸಿ ಗ್ರಾಮಗಳ ಸಂಪರ್ಕ ವಿರುವ ಒಳ ರಸ್ತೆಗಳ ಸಮಸ್ಯೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ. ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕನಸು ನನಸು ಮಾಡುವ ಕೆಲಸ ಸರ್ಕಾರದಿಂದ ಆಗಬೇಕು. ಜಿಲ್ಲಾಡಳಿತ ದಿಂದ ಈ ಕೆಲಸವನ್ನು ಅತಿ ಶೀಘ್ರದಲ್ಲೇ ಕೈಗೆತ್ತಿಕೊಂಡು ಕಾಮಗಾರಿ ಮಾಡಲು ಮುಂದಾಗಬೇಕು. ಈ ಭಾಗದಲ್ಲಿ ಬಡವರು, ಕೃಷಿ ಕೂಲಿ ಕಾರ್ಮಿಕರು ಹೆಚ್ಚಾಗಿದ್ದು, ಇವರು ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ. ಈ ಭಾಗದ ವಿದ್ಯಾರ್ಥಿಗಳಿಗೂ ತೊಂದರೆ ಆಗುತ್ತಿದ್ದು, ಕೂಡಲೇ ಈ ಸಮಸ್ಯೆ ಪರಿಹರಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕೋಟ್ : ಜನಪ್ರತಿನಿಧಿ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಸ್ಪಂದಿಸಿದೇ ಎಸಿ ರೂಮ್‌ಲ್ಲಿ ಕುಂಭಕರ್ಣ ನಿದ್ರೆಯಲ್ಲಿ ಜಾರಿದ್ದಾರೆ ತಕ್ಷಣ ರಸ್ತೆಯ ಎರಡು ಬದಿಯಲ್ಲಿರುವ ಜಾಲಿಕಂಟಿಗಳನ್ನು ತೆರವುಗೊಳಿಸಿ ರಸ್ತೆ ದುರಸ್ಥಿಗೊಳಿಸಬೇಕೆಂದು ಎಚ್ಚರಿಸಿದ್ದಾರೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್2
- ಮುದನೂರಿನಲ್ಲಿ ವರುಣನ ಅಟ್ಟಹಾಸ: ಕೋರಿ ಸಿದ್ದೇಶ್ವರ ಮಠಕ್ಕೆ ಸಿಡಿಲು ಬಡಿದು ಅಗ್ನಿ ಅವಘಡ; ದೇವರ ಮೂರ್ತಿಗಳು ಸುಟ್ಟು ಭಸ್ಮ ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮುದನೂರು ಗ್ರಾಮದಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಸಿಡಿಲು ಅಘಾತಕ್ಕೆ ಐತಿಹಾಸಿಕ ಶ್ರೀ ಕೋರಿ ಸಿದ್ದೇಶ್ವರ ಶಾಖಾ ಮಠದ ಒಳಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮಠದ ಪಾವಿತ್ರ್ಯತೆಯ ಸಂಕೇತವಾಗಿದ್ದ ದೇವರ ಮೂರ್ತಿಗಳು ಹಾಗೂ ಪೂಜಾ ಸಾಮಗ್ರಿಗಳು ಅಗ್ನಿಗೆ ಆಹುತಿಯಾಗಿವೆ. ಘಟನೆಯ ವಿವರ: ಸೋಮವಾರ ತಡರಾತ್ರಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಮಳೆಯಾಗುತ್ತಿದ್ದು, ಈ ವೇಳೆ ಮುದನೂರು ಗ್ರಾಮದ ಮಠದ ಮೇಲೆ ನೇರವಾಗಿ ಸಿಡಿಲು ಬಡಿದಿದೆ. ಸಿಡಿಲಿನ ತೀವ್ರತೆಗೆ ಮಠದ ಒಳಗೆ ಅಗ್ನಿ ಆವರಿಸಿದ್ದು, ನೋಡನೋಡುತ್ತಿದ್ದಂತೆಯೇ ಬೆಂಕಿ ಧಗಧಗಿಸಿದೆ. ಮಠದ ಕಟ್ಟಡಕ್ಕೆ ಹಾನಿಯಾಗುವುದರ ಜೊತೆಗೆ ಬೆಲೆಬಾಳುವ ಪೂಜಾ ಪರಿಕರಗಳು ಕರಕಲಾಗಿವೆ. ಭಕ್ತರಲ್ಲಿ ಆತಂಕ: ಸಿಡಿಲಿನ ಅಘಾತದ ಭೀಕರ ಶಬ್ದಕ್ಕೆ ಗ್ರಾಮಸ್ಥರು ನಡುಗಿ ಹೋಗಿದ್ದಾರೆ. ಮಠದ ಭಕ್ತರು ಸಮಯಪ್ರಜ್ಞೆ ಮೆರೆದು ತಕ್ಷಣವೇ ದೂರ ಸರಿದಿದ್ದರಿಂದ ಪ್ರಾಣಾಪಾಯ ತಪ್ಪಿದೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಗ್ನಿಶಾಮಕ ದಳವು ಸಕಾಲಕ್ಕೆ ಧಾವಿಸಿ ಬೆಂಕಿ ನಂದಿಸುವ ಮೂಲಕ ಮಠದ ಉಳಿದ ಭಾಗಕ್ಕೆ ಬೆಂಕಿ ಹರಡುವುದನ್ನು ತಡೆದಿದೆ.1
- ಕುಷ್ಟಗಿ:- ಪಟ್ಟಣದ ತಾವರಗೇರಾ ರಸ್ತೆಯ ಪಂಚಪೀಠಾಧಿಪತಿಗಳ ಸಮುಖ್ಯದಲ್ಲಿ ಇಲ್ಲಿನ ಶ್ರೀ ಮದ್ದಾನೇಶ್ವರ ಹಿರೇಮಠ ಇವರ ಕುಟುಂಬದ ಸಮಾಜ ಸೇವಕ ರವಿಕುಮಾರ ಹಿರೇಮಠ ಹಾಗೂ ವಿಜಯಕುಮಾರ ಹಿರೇಮಠ ಇವರ ಮಗನ ಮದುವೆ ಸಮಾರಂಭದಲ್ಲಿ ಬಾಳೇಹೊನ್ನೂರಿನ ಶ್ರೀ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಶೈಲ ಪೀಠದ ಚನ್ನಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಶೈಲ ಹಾಗೂ ಶ್ರೀ ಷ.ಬ್ರ ಕರಿಬಸ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಹಿರೇಮಠ, ಶ್ರೀ ಷ.ಬ್ರ.ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಚಂದ್ರಶೇಖರ ಮಾಹಾಸ್ವಾಮಿಗಳು, ಶ್ರೀ ಶಿವಲಿಂಗ ಮಾಹಾಸ್ವಾಮಿಗಳ ನೇತೃತ್ವದಲ್ಲಿ ಸುಮಾರು 51 ಸರ್ವ ಧರ್ಮಗಳ ನವ ಜೋಡಿಗಳು ತಮ್ಮ ದಾಂಪತ್ಯ ಜೀವನಕ್ಕೆ ಗುರುವಾರ ಶ್ರೀಗಳ ಆಶೀರ್ವಾದ ಪಡೆಯುವ ಮೂಲಕ ಕಾಲಿಟ್ಟರು. ಈ ಸಂದರ್ಭದಲ್ಲಿ 51 ಸರ್ವ ಧರ್ಮಗಳ ಉಚಿತ ಸಾಮೂಹಿಕ ಕಾರ್ಯಕ್ರಮ ಅತ್ಯಂತ ಅದ್ಧೂರಿಯಾಗಿ ನೆಡೆದವು. ತದ ನಂತರ ಸಾಮೂಹಿಕ ಕಾರ್ಯಕ್ರಮ ಕುರಿತು ಶ್ರೀ ಜಗದ್ಗುರು ಬಾಳೆಹೊನ್ನೂರಿನ ರೇಣುಕಾಚಾರ್ಯ ವೀರಸೋಮಶ್ವರ ಮಾಹಾಸ್ವಾಮಿಗಳು ಮಾತನಾಡಿ ರವಿಕುಮಾರ ಹಿರೇಮಠ ಇವರು ತಮ್ಮ ಮಗನ ಮದುವೆ ಸಮಾರಂಭದಲ್ಲಿ 51 ಉಚಿತ ಸಾಮೂಹಿಕ ಮದುವೆ ಮಾಡುವಂತದ್ದು ಇದು ಒಂದು ದೊಡ್ಡ ಕಾರ್ಯವಾಗಿದೆ ಆದ್ದರಿಂದ ಸತಿ ಪತಿಗಳು ಒಂದಾಗಿ ಸುಗಮ ಸಂಸಾರ ನೆಡೆಸುವ ಮೂಲಕ ತಮ್ಮ ಉತ್ತಮ ದಾಂಪತ್ಯ ಜೀವನ ನೆಡೆಸಬೇಕು ಎಂದರು. ನಂತರ ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶ್ರೀ ಷ.ಬ್ರ. ವೀರಸಂಗಮೇಶ್ವ ಶಿವಾಚಾರ್ಯ ಮಾಹಾ ಸ್ವಾಮೀಗಳು ಚಳಗೇರಿ, ಶ್ರೀ. ಷ.ಬ್ರ. ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಹಿರೇಮಠ ಕುಷ್ಟಗಿ, ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕೇಸೂರು, ಶ್ರೀ ಶಿವಲಿಂಗ ಮಹಾಸ್ವಾಮಿಗಳು ಬಿಜಕಲ್, ಹೊನ್ನಳ್ಳಿ ಮಾಜಿ ಸಚಿವ ಹಾಗೂ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ಹಾಗೂ ಮಾಜಿ ಶಾಸಕ ಮತ್ತು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪೂರ, ಇವರ ಸಮುಖ್ಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನೆಡೆದವು. ನಂತರ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ ಮತ್ತು ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪೂರ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಧು ವರರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ 51 ನವ ಜೋಡಿಗಳಿಗೆ ದೊಡ್ಡ ವೇದಿಕೆಯಲ್ಲಿ ಸಂಪ್ರದಾಯವಾಗಿ ನವ ಜೋಡಿಗಳ ವಿವಾಹ ಕಾರ್ಯಕ್ರಮವನ್ನು ಮಾಡಲಾಯಿತು. ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಸಂಖ್ಯೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಮಾಡಲಾಯಿತು.4
- ಅಫಜಲಪುರ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಅರ್ಜುನ ಕೆರೂರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ನ್ಯಾಯಾಲಯದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಹಿರಿಯ ನ್ಯಾಯಾಧೀಶರು ಸಲಹೆ ನೀಡಿದರು. ಜೊತೆಗೆ, ಲೋಕ ಅದಾಲತ್ ಮೂಲಕ ಜನರಿಗೆ ಹೆಚ್ಚು ನ್ಯಾಯ ಒದಗಿಸುವ ಕಾರ್ಯವನ್ನು ಬಲಪಡಿಸಬೇಕೆಂದು ಕರೆ ನೀಡಲಾಯಿತು. ಹಿರಿಯ ನ್ಯಾಯವಾದಿಗಳು ನೂತನ ಅಧ್ಯಕ್ಷರಿಗೆ ಶುಭಾಶಯ ತಿಳಿಸಿ, ಅವರ ನೇತೃತ್ವದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣ ಮತ್ತು ವಕೀಲರ ಹಿತಾಸಕ್ತಿಗೆ ಆದ್ಯತೆ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. #Afzalpur #LawyersAssociation #ArjunKerur #CourtDevelopment #LegalNews #LokAdalat #Suddi9TV1
- ಬಬಲೇಶ್ವರ: ಲೋಕ್ ಅದಾಲತ್ ಪ್ರಕಾರಣ ರಾಜಿ ಡಿಸಿ ಅಭಿನಂದನೆ ವಿಜಯಪುರ ನಗರದ ಜಿಲ್ಲಾ ನ್ಯಾಯಾಲಯ ಸಂಕಿರ್ಣದಲ್ಲಿ ಹಮ್ಮಿಕೊಂಡಿದ್ದ ಲೋಕ್ ಅದಾಲತ್‌ನಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಯ ಪ್ರಕರಣಗಳನ್ನು ರೈತರು ಇತ್ಯರ್ಥಪಡಿಸಿಕೊಂಡ ಹಿನ್ನೆಲೆಯಲ್ಲಿ, ಗುರುವಾರದಂದು ಜಿಲ್ಲಾಧಿಕಾರಿ ಆನಂದ್ ಕೆ ಅವರು ಪತ್ರಿಕಾಗೋಷ್ಠಿಯಲ್ಲಿ ರೈತರನ್ನು ಅಭಿನಂದಿಸಿದರು. ಇನ್ನೂ ಎರಡು ತಿಂಗಳ ಕಾಲ ಈ ಲೋಕ್ ಅದಾಲತ್ ಮುಂದುವರಿಯಲಿದ್ದು, ಭೂ ಸಂತ್ರಸ್ತರು ಹಾಗೂ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು.1
- ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ಕಾಶೆಮ್ಮ ಮತ್ತು ಬಸವರಾಜ ಮಾನೇಗಾರ ಕುಟುಂಬವು ತಮ್ಮ ಪುತ್ರ ರಮೇಶ್ ಹಾಗೂ ಸುಧಾ ಅವರ ವಿವಾಹಕ್ಕಾಗಿ ಕರ್ನಾಟಕದ ನಕಾಶೆಯ ರೂಪದಲ್ಲಿ ವಿಶಿಷ್ಟ ಮದುವೆ ಆಮಂತ್ರಣ ಪತ್ರಿಕೆಯನ್ನು ಸಿದ್ಧಪಡಿಸಿದೆ. ಮೇ 4 ರಂದು ಯರಗೋಳ ಗ್ರಾಮದಲ್ಲಿ ನಡೆಯಲಿರುವ ಈ ವಿವಾಹಕ್ಕೆ ಸಂಬಂಧಿಕರು ಮತ್ತು ಸ್ನೇಹಿತರನ್ನು ಆಹ್ವಾನಿಸಲು ಈ ಕನ್ನಡ ಕಾಳಜಿ ಮೆರೆವ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ. ಈ ವಿನೂತನ ಪ್ರಯತ್ನವು ಗಮನ ಸೆಳೆದಿದೆ.1