ಗುಳೇದಗುಡ್ಡ ನಗರದಲ್ಲಿ ಬೀಡಾಡಿ ದನಗಳ ಹಾವಳಿ ಮಿತಿಮೀರಿದ್ದು, ವ್ಯಾಪಾರಸ್ಥರು, ವಾಹನ ಸವಾರರು ಹಾಗೂ ಸಾಮಾನ್ಯ ನಾಗರಿಕರು ರಸ್ತೆಗಳು ಮತ್ತು ಮಾರುಕಟ್ಟೆಗಳಲ್ಲಿ ಸಂಚರಿಸಲು ಭಯಪಡುವಂತಾಗಿದೆ. ಅದರಲ್ಲೂ ಸಂತೆಯ ದಿನದಂದು ಈ ದನಗಳು ಮಾರುಕಟ್ಟೆಯಲ್ಲಿ ಬೀಡುಬಿಟ್ಟು ವ್ಯಾಪಾರಸ್ಥರು ಮತ್ತು ಗ್ರಾಹಕರಿಗೆ ತೀವ್ರ ತೊಂದರೆ ಉಂಟುಮಾಡುತ್ತಿವೆ. ಇತ್ತೀಚೆಗೆ ರವಿವಾರ ಪಟ್ಟಣದ ಗಚ್ಚಿನಕಟ್ಟಿ ಹತ್ತಿರ ಎರಡು ಗೂಳಿಗಳ ಕಾಳಗದಿಂದ ಸಾರ್ವಜನಿಕರು ಭಯಭೀತಗೊಂಡಿದ್ದಾರೆ. ನಗರದ ಭಾರತ್ ಮಾರ್ಕೆಟ್, ಕಾಲೇಜ್ ಸರ್ಕಲ್, ಬಸ್ ನಿಲ್ದಾಣದ ಹತ್ತಿರ, ಗಚ್ಚಿನಕಟ್ಟಿ ಹಾಗೂ ಮುಖ್ಯ ರಸ್ತೆಗಳಲ್ಲಿ ಬೀಡಾಡಿ ದನಗಳ ಹಿಂಡು ಮಲಗಿ, ಅಡ್ಡಾದಿಡ್ಡಿಯಾಗಿ ನಿಂತು ವಾಹನ ಸವಾರರಿಗೆ ಭಯ ಹುಟ್ಟಿಸುತ್ತಿವೆ. ಇದರಿಂದಾಗಿ ಸಂಚಾರಕ್ಕೆ ಅತೀವ ತೊಂದರೆಯಾಗುತ್ತಿದ್ದು, ದನಗಳು ಹಾಯ್ದು ಗಾಯಗೊಳಿಸಿದ ಹಲವು ಘಟನೆಗಳು ನಡೆದಿವೆ. ದನಗಳ ತಿವಿದ ಪರಿಣಾಮವಾಗಿ ಕೆಲವರು ಕಣ್ಣು ಕಳೆದುಕೊಂಡಿದ್ದು, ಕೈಕಾಲುಗಳಿಗೆ ಗಾಯಗಳಾಗಿವೆ. ಶಾಲೆ-ಕಾಲೇಜುಗಳಿಗೆ ಹೋಗುವ ಮಕ್ಕಳು, ವೃದ್ಧರು ಮತ್ತು ಮಹಿಳೆಯರು ಈ ಬೀಡಾಡಿ ದನಗಳಿಂದ ಭಯಭೀತರಾಗಿ ಓಡಾಡುವಂತಾಗಿದೆ. ಬೀಡಾಡಿ ದನಗಳ ಹಾವಳಿ ಮಿತಿಮೀರಿದ್ದರೂ ಗುಳೇದಗುಡ್ಡ ಪುರಸಭೆಯವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಪುರಸಭೆಯು ತಕ್ಷಣವೇ ಕ್ರಮ ಕೈಗೊಂಡು, ಮುಖ್ಯ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲುವ ದನಗಳ ನಿಯಂತ್ರಣಕ್ಕೆ ಮುಂದಾಗಬೇಕು ಹಾಗೂ ದನಗಳು ಬೀದಿಗೆ ಬರದಂತೆ ಅವುಗಳ ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ನಗರದ ರಸ್ತೆ ಮತ್ತು ಸಂತೆಗಳಲ್ಲಿ ಬೀಡಾಡಿ ದನಗಳ ಹಾವಳಿಯಿಂದ ಮುಕ್ತಿ ನೀಡುವಂತೆ ಜನತೆ ಒತ್ತಾಯಿಸಿದ್ದಾರೆ.

- ಗುಳೇದಗುಡ್ಡ ನಗರದಲ್ಲಿ ಬೀಡಾಡಿ ದನಗಳ ಹಾವಳಿ ಮಿತಿಮೀರಿದ್ದು, ವ್ಯಾಪಾರಸ್ಥರು, ವಾಹನ ಸವಾರರು ಹಾಗೂ ಸಾಮಾನ್ಯ ನಾಗರಿಕರು ರಸ್ತೆಗಳು ಮತ್ತು ಮಾರುಕಟ್ಟೆಗಳಲ್ಲಿ ಸಂಚರಿಸಲು ಭಯಪಡುವಂತಾಗಿದೆ. ಅದರಲ್ಲೂ ಸಂತೆಯ ದಿನದಂದು ಈ ದನಗಳು ಮಾರುಕಟ್ಟೆಯಲ್ಲಿ ಬೀಡುಬಿಟ್ಟು ವ್ಯಾಪಾರಸ್ಥರು ಮತ್ತು ಗ್ರಾಹಕರಿಗೆ ತೀವ್ರ ತೊಂದರೆ ಉಂಟುಮಾಡುತ್ತಿವೆ. ಇತ್ತೀಚೆಗೆ ರವಿವಾರ ಪಟ್ಟಣದ ಗಚ್ಚಿನಕಟ್ಟಿ ಹತ್ತಿರ ಎರಡು ಗೂಳಿಗಳ ಕಾಳಗದಿಂದ ಸಾರ್ವಜನಿಕರು ಭಯಭೀತಗೊಂಡಿದ್ದಾರೆ. ನಗರದ ಭಾರತ್ ಮಾರ್ಕೆಟ್, ಕಾಲೇಜ್ ಸರ್ಕಲ್, ಬಸ್ ನಿಲ್ದಾಣದ ಹತ್ತಿರ, ಗಚ್ಚಿನಕಟ್ಟಿ ಹಾಗೂ ಮುಖ್ಯ ರಸ್ತೆಗಳಲ್ಲಿ ಬೀಡಾಡಿ ದನಗಳ ಹಿಂಡು ಮಲಗಿ, ಅಡ್ಡಾದಿಡ್ಡಿಯಾಗಿ ನಿಂತು ವಾಹನ ಸವಾರರಿಗೆ ಭಯ ಹುಟ್ಟಿಸುತ್ತಿವೆ. ಇದರಿಂದಾಗಿ ಸಂಚಾರಕ್ಕೆ ಅತೀವ ತೊಂದರೆಯಾಗುತ್ತಿದ್ದು, ದನಗಳು ಹಾಯ್ದು ಗಾಯಗೊಳಿಸಿದ ಹಲವು ಘಟನೆಗಳು ನಡೆದಿವೆ. ದನಗಳ ತಿವಿದ ಪರಿಣಾಮವಾಗಿ ಕೆಲವರು ಕಣ್ಣು ಕಳೆದುಕೊಂಡಿದ್ದು, ಕೈಕಾಲುಗಳಿಗೆ ಗಾಯಗಳಾಗಿವೆ. ಶಾಲೆ-ಕಾಲೇಜುಗಳಿಗೆ ಹೋಗುವ ಮಕ್ಕಳು, ವೃದ್ಧರು ಮತ್ತು ಮಹಿಳೆಯರು ಈ ಬೀಡಾಡಿ ದನಗಳಿಂದ ಭಯಭೀತರಾಗಿ ಓಡಾಡುವಂತಾಗಿದೆ. ಬೀಡಾಡಿ ದನಗಳ ಹಾವಳಿ ಮಿತಿಮೀರಿದ್ದರೂ ಗುಳೇದಗುಡ್ಡ ಪುರಸಭೆಯವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಪುರಸಭೆಯು ತಕ್ಷಣವೇ ಕ್ರಮ ಕೈಗೊಂಡು, ಮುಖ್ಯ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲುವ ದನಗಳ ನಿಯಂತ್ರಣಕ್ಕೆ ಮುಂದಾಗಬೇಕು ಹಾಗೂ ದನಗಳು ಬೀದಿಗೆ ಬರದಂತೆ ಅವುಗಳ ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ನಗರದ ರಸ್ತೆ ಮತ್ತು ಸಂತೆಗಳಲ್ಲಿ ಬೀಡಾಡಿ ದನಗಳ ಹಾವಳಿಯಿಂದ ಮುಕ್ತಿ ನೀಡುವಂತೆ ಜನತೆ ಒತ್ತಾಯಿಸಿದ್ದಾರೆ.1
- ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿರುವ ಅಧಿಕ ಮಾಸದ ಹುಣ್ಣಿಮೆಯ ಪವಿತ್ರ ದಿನದಂದು, ಬಾದಾಮಿ ತಾಲೂಕಿನ ಬನಶಂಕರಿ ದೇವಸ್ಥಾನ ಸಮೀಪದ ಹರಿದ್ರಾ ಪುಷ್ಕರಣಿಯಲ್ಲಿ ಭಕ್ತರು ಗಂಗಾ ಪೂಜೆಯನ್ನು ಭಕ್ತಿಭಾವದಿಂದ ನೆರವೇರಿಸಿದರು. ಪವಿತ್ರ ನದಿದೇವತೆ ಗಂಗೆಯನ್ನು ಆರಾಧಿಸುವ ಈ ಧಾರ್ಮಿಕ ಆಚರಣೆಯಲ್ಲಿ, ಭಕ್ತರು ಪುಷ್ಕರಣಿ ತೀರದಲ್ಲಿ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಕುಟುಂಬದ ಸುಖ-ಶಾಂತಿ ಹಾಗೂ ಸಮಸ್ತ ಲೋಕ ಕಲ್ಯಾಣಕ್ಕಾಗಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ರಾಮದುರ್ಗದಿಂದ ಆಗಮಿಸಿದ್ದ ಭಕ್ತರು ಮಾತನಾಡಿ, ಗಂಗಾ ಪೂಜೆಯು ತಮ್ಮ ಪರಂಪರೆಯಿಂದ ಬಂದಿರುವ ಧಾರ್ಮಿಕ ಆಚರಣೆಯಾಗಿದೆ ಎಂದು ತಿಳಿಸಿದರು. ಪ್ರತಿ ಹುಣ್ಣಿಮೆಯಂದು ವಿವಿಧ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದಾಗಿ ಹೇಳಿದ ಅವರು, ಬನಶಂಕರಿ ದೇವಿಯ ದರ್ಶನ ಪಡೆದು ಗಂಗಾ ಪೂಜೆ ನೆರವೇರಿಸಿ ಎಲ್ಲರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸಿದ್ದಾರೆ. ಅಧಿಕ ಮಾಸದ ಹುಣ್ಣಿಮೆಯ ಹಿನ್ನೆಲೆಯಲ್ಲಿ ದೇವಸ್ಥಾನ ಹಾಗೂ ಪುಷ್ಕರಣಿ ಪ್ರದೇಶದಲ್ಲಿ ಭಕ್ತರ ಸಂಚಾರ ಗಣನೀಯವಾಗಿ ಹೆಚ್ಚಾಗಿ ಕಂಡುಬಂದಿತು.1
- ಇಳಕಲ್ ತಾಲೂಕಿನ ಹಿರೇ ಓತಗೇರಿ ಗ್ರಾಮದಲ್ಲಿ, ಐಪಿಎಲ್ ಫೈನಲ್ ಪಂದ್ಯವನ್ನು ವಿಶೇಷವಾಗಿ ದೊಡ್ಡ ಪರದೆಯ ಮೇಲೆ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆರ್ ಸಿ ಬಿ (RCB) ತಂಡದ ಅಭಿಮಾನಿಗಳು ಸೇರಿದಂತೆ ಇಡೀ ಗ್ರಾಮಸ್ಥರು ಒಟ್ಟಾಗಿ ಸೇರಿ ಪಂದ್ಯವನ್ನು ವೀಕ್ಷಿಸಿದರು, ಸಮುದಾಯದ ಉತ್ಸಾಹ ಮತ್ತು ಒಗ್ಗಟ್ಟನ್ನು ಪ್ರದರ್ಶಿಸಿದರು.2
- ಕರ್ನಾಟಕ ರಾಜ್ಯದಲ್ಲಿ ಶಿಕ್ಷಕರಿಗೆ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯನ್ನು ಚಾಮರಾಜನಗರ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಕರ್ನಾಟಕ ಅಡ್ವಾನ್ಸ್ಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ತಂತ್ರಾಂಶದ ಮೂಲಕ ಹೊಸ ಶೈಕ್ಷಣಿಕ ವರ್ಷದ ಆರಂಭದಿಂದಲೇ ಅನುಷ್ಠಾನಕ್ಕೆ ತರಲಾಗಿದೆ. ಈ ಹೊಸ ವ್ಯವಸ್ಥೆಯು ಶಿಕ್ಷಕರಿಗೆ ಎಷ್ಟು ಅನುಕೂಲಕರವಾಗಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ಅಲ್ಲದೆ, ಮೊಬೈಲ್ ಆಧಾರಿತ ಹಾಜರಾತಿಯ ಲಾಗಿನ್ ಸಮಯವನ್ನು ಮೀರಿದರೆ ವೇತನ ಕಡಿತವಾಗುತ್ತದೆಯೇ ಎಂಬ ಆತಂಕವೂ ವ್ಯಕ್ತವಾಗಿದೆ. ಈ ಮೊಬೈಲ್ ಆಧಾರಿತ ಹಾಜರಾತಿಯ ಬಗ್ಗೆ ಶಿಕ್ಷಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.1
- ಜಮಖಂಡಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಗೆಲುವನ್ನು ಅದ್ದೂರಿಯಾಗಿ ಸಂಭ್ರಮಿಸಲಾಯಿತು. ತಾಲೂಕು ಕ್ರೀಡಾಂಗಣದ ಮುಂಭಾಗದಲ್ಲಿ ಹಾಕಲಾಗಿದ್ದ ದೊಡ್ಡ ಪರದೆಯ ಮೇಲೆ ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಿದರು. ಆರ್‌ಸಿಬಿ ಗೆಲುವಿನ ನಂತರ, ಅಭಿಮಾನಿಗಳು ತಮ್ಮ ಹರ್ಷೋದ್ಗಾರವನ್ನು ಭರ್ಜರಿ ಬೈಕ್ ರ‍್ಯಾಲಿ ಮೂಲಕ ವ್ಯಕ್ತಪಡಿಸಿದರು. ಈ ಸಂಭ್ರಮಕ್ಕೆ ಶ್ರೀ ಕೃಷ್ಣಾನಂದ ಅವಧೂತರು ಪೂಜೆ ಸಲ್ಲಿಸಿದರು, ಹಾಗೂ ಗಣ್ಯರಿಂದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.1
- ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯಪುರದಲ್ಲಿ ತಮ್ಮದೇ ಪಕ್ಷದ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡಿದಾಗ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಮೊದಲು ಫೋನ್ ಮಾಡಿದ್ದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಂದು ಯತ್ನಾಳ್ ಆರೋಪಿಸಿದ್ದಾರೆ. ವಿಜಯೇಂದ್ರ ಅವರು 'ನನ್ನ ಪಾರ್ಟ್ನರ್ ಸಿಎಂ ಆದ' ಎಂದು ಸಂತೋಷ ಪಟ್ಟಿದ್ದರು ಎಂದು ಯತ್ನಾಳ್ ಹೇಳಿದ್ದಾರೆ. ಸಿದ್ದರಾಮಯ್ಯ ಕೆಳಗಿಳಿದಿದ್ದಕ್ಕೆ ಒಬ್ಬನೇ ಒಬ್ಬ ಮುಸ್ಲಿಂ ನಾಯಕ ಖಂಡಿಸಿಲ್ಲ, ಬದಲಿಗೆ ವಿಜಯೋತ್ಸವ ಆಚರಿಸಿದ್ದಾರೆ ಎಂದು ಯತ್ನಾಳ್ ಒತ್ತಿ ಹೇಳಿದ್ದಾರೆ. ಮುಂದುವರಿದು, ಯತ್ನಾಳ್ ಅವರು ವಿಜಯೇಂದ್ರ ಹಾಗೂ ಅಶೋಕ್ ಅವರಿಗೆ "ಯಾರ್ಯಾರ ಫೈಲ್ ಎಲ್ಲೆಲ್ಲಿದೆ ಗೊತ್ತಿದೆ, ಇನ್ಮುಂದೆ ಹುಷಾರಾಗಿರಿ" ಎಂದು ಎಚ್ಚರಿಕೆ ನೀಡಿದ್ದಾರೆ.1
- ಜಮಖಂಡಿ ನಗರದ ಶ್ರೀ ಹನುಮಾನ್ ದೇವಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಭಿಮಾನಿಗಳು ತಂಡದ ಬಗ್ಗೆ ಭಾರಿ ಉತ್ಸಾಹದಲ್ಲಿದ್ದು, ಇದೇ ಸಂಭ್ರಮದಲ್ಲಿ ಇಂದು ಸಂಜೆ 7 ಗಂಟೆಗೆ ತಾಲೂಕು ಕ್ರೀಡಾಂಗಣದ ಮುಂಭಾಗದಲ್ಲಿ ಫೈನಲ್ ಪಂದ್ಯವನ್ನು ಬಿಗ್ ಸ್ಕ್ರೀನ್‌ನಲ್ಲಿ ನೇರಪ್ರಸಾರ ಮಾಡಲು ವ್ಯವಸ್ಥೆ ಮಾಡಲಾಗಿದೆ.1
- ಧಾರವಾಡ ನಗರದಲ್ಲಿ ಪೆಟ್ರೋಲ್ ಬೆಲೆ ಗಣನೀಯವಾಗಿ ಏರಿಕೆಯಾದ ಬೆನ್ನಲ್ಲೇ ಪೆಟ್ರೋಲ್ ಕಳ್ಳರ ಹಾವಳಿ ಜೋರಾಗಿದೆ. ಧಾರವಾಡದ ಹಾಶ್ಮೀನಗರದ ಐಸ್ಕ್ರೀಮ್ ಪ್ಯಾಕ್ಟರಿ ಬಳಿ ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್‌ಗಳಿಂದ ನಿರಂತರವಾಗಿ ಪೆಟ್ರೋಲ್ ಕದಿಯಲಾಗುತ್ತಿದೆ. ಕಳೆದ ಒಂದು ವಾರದಿಂದ ಈ ರೀತಿಯ ಪೆಟ್ರೋಲ್ ಕಳ್ಳತನಗಳು ವರದಿಯಾಗುತ್ತಿವೆ. ಈ ಕೃತ್ಯದ ಹಿಂದೆ ಮೂವರು ಯುವಕರ ತಂಡವಿದ್ದು, ಅವರ ಪೆಟ್ರೋಲ್ ಕದಿಯುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಜನರು ಹಾಗೂ ವಾಹನಗಳ ಓಡಾಟ ಕಡಿಮೆಯಾದ ರಾತ್ರಿ ಸಮಯದಲ್ಲಿ ಈ ಯುವಕರ ಗ್ಯಾಂಗ್ ಸಕ್ರಿಯವಾಗಿ, ಹೊರಗೆ ನಿಲ್ಲಿಸಲಾದ ಬೈಕ್‌ಗಳನ್ನು ಗುರಿಯಾಗಿಸಿಕೊಂಡು ಪೆಟ್ರೋಲ್ ಕದಿಯುತ್ತಿದೆ. ಈ ಘಟನೆಗಳು ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿವೆ.1