ನವದೆಹಲಿ.01 ಆಗಸ್ಟ್.2026 6,400 ಕೋಟಿ ರೂ. ವೆಚ್ಚದ ಶಿವಮೊಗ್ಗ - ತುಮಕೂರು ಚತುಷ್ಪಥ ಹೆದ್ದಾರಿ ಯೋಜನೆ ಮುಂದಿನ ಮಾರ್ಚ್ ವೇಳೆಗೆ ಪೂರ್ಣ, ಜನಪ್ರಿಯ ಸಂಸದರಾದ ಬಿ.ವೈ.ರಾಘವೇಂದ್ರ. ನವದೆಹಲಿ. ಸಂಸದರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ ಹೆದ್ದಾರಿ ಪೂರ್ಣಕ್ಕೆ ತಮ್ಮ ಸತತ ಪರಿಶ್ರಮ ಮುಂದುವರಿಸಿರುವ ಅಂಕಿ-ಅಂಶ ಸಹಿತ ಲೋಕಸಭೆಯಲ್ಲಿ ಸಂಸದರಿಗೆ ಮಾಹಿತಿ ಒದಗಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಾಕಿ ಇರುವ ಭೂಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಸರ್ಕಾರದಿಂದ ವಿಳಂಬ ನೀತಿ ಸ್ಥಳೀಯ ಆಡಳಿತದ ಸಕ್ರಿಯ ಬೆಂಬಲಕ್ಕೆ ಸಂಸದರ ಒತ್ತಾಯ ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ ಬದಲಾಯಿಸಲಿರುವ ಶಿವಮೊಗ್ಗ - ತುಮಕೂರು ಎನ್‌ಎಚ್-69 (ಹಳೆಯ ಎನ್‌ಎಚ್-206) ರಾಷ್ಟ್ರೀಯ ಹೆದ್ದಾರಿಯ 4 ಪಥಗಳ ವಿಸ್ತರಣೆ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಒಟ್ಟು ಸುಮಾರು 6,400 ಕೋಟಿ ರೂ. ಅಂದಾಜು ವೆಚ್ಚದ, 214.43 ಕಿ.ಮೀ ಉದ್ದದ ಈ ಬೃಹತ್ ಯೋಜನೆಯಲ್ಲಿ ಈಗಾಗಲೇ 197.42 ಕಿ.ಮೀ ಗೂ ಹೆಚ್ಚಿನ ಕಾಮಗಾರಿ ಮುಗಿದಿದ್ದು, ಯೋಜನೆಯ ನಾಲ್ಕು ಹಂತಗಳ ಪೈಕಿ ಮೂರು ಹಂತಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮಾರ್ಚ್ 2027ರ ವೇಳೆಗೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ಸಂಸದರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಯೋಜನೆ ಕುರಿತಂತೆ ಸಂಪೂರ್ಣ ಮಾಹಿತಿ ಒದಗಿಸಿದ್ದಾರೆ. ಮಲ್ಲಸಂದ್ರದಿಂದ ಕರಡಿವರೆಗಿನ (52.89 ಕಿ.ಮೀ) ಮೊದಲ ಹಂತ ಶೇ.100 ರಷ್ಟು ಪೂರ್ಣಗೊಂಡಿದ್ದರೆ, ಕರಡಿಯಿಂದ ಬಾಣಾವರ (56.70 ಕಿ.ಮೀ) ಮತ್ತು ಬಾಣಾವರದಿಂದ ಬೆಟ್ಟದಹಳ್ಳಿ (48.51 ಕಿ.ಮೀ) ಭಾಗದ ಕಾಮಗಾರಿಗಳು ಶೇ.98 ಕ್ಕಿಂತ ಹೆಚ್ಚು ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಿವೆ. ಬೆಟ್ಟದಹಳ್ಳಿಯಿಂದ ಶಿವಮೊಗ್ಗದವರೆಗಿನ ಕೊನೆಯ ಹಂತದ 56.33 ಕಿ.ಮೀ ಕಾಮಗಾರಿಯೂ ಈಗಾಗಲೇ ಶೇ.83.78 ರಷ್ಟು ಭೌತಿಕ ಪ್ರಗತಿ ಸಾಧಿಸಿದ್ದು, ಮಾರ್ಚ್ 2027 ರ ವೇಳೆಗೆ ಸಂಪೂರ್ಣ ಮುಕ್ತಾಯಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ಈ ಬೃಹತ್ ಯೋಜನೆಗೆ ಅಗತ್ಯವಿರುವ 1,271.41 ಹೆಕ್ಟೇರ್ ಭೂಮಿಯಲ್ಲಿ ಈಗಾಗಲೇ 1,268.33 ಹೆಕ್ಟೇರ್ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ಗುತ್ತಿಗೆದಾರರಿಗೆ ಹಸ್ತಾಂತರಿಸಲಾಗಿದೆ. ಭೂಸ್ವಾಧೀನ, ಅರಣ್ಯ ಇಲಾಖೆ ತೆರವು ಹಾಗೂ ರೈಲ್ವೆ ಮೇಲ್ಸೇತುವೆಗಳ (ROB/RUB) ಅನುಮತಿ ಸೇರಿದಂತೆ ಎದುರಾಗಿದ್ದ ತಾಂತ್ರಿಕ ತೊಡಕುಗಳನ್ನು 'ಭೂಮಿ ರಾಶಿ' ಹಾಗೂ 'ಪರಿವೇಶ' ಪೋರ್ಟಲ್ ಮೂಲಕ ಬಗೆಹರಿಸಲಾಗುತ್ತಿದೆ. ಈ ಬೃಹತ್ ಹೆದ್ದಾರಿ ಯೋಜನೆ ಪೂರ್ಣಗೊಂಡ ಬಳಿಕ ಶಿವಮೊಗ್ಗ - ಬೆಂಗಳೂರು ನಡುವಿನ ಪ್ರಯಾಣಿಸುವ ಸಮಯ ಗಣನೀಯವಾಗಿ ಕಡಿಮೆಯಾಗಲಿದ್ದು, ಮಲೆನಾಡು ಭಾಗದ ವ್ಯಾಪಾರ, ಕೃಷಿ ಸಾಗಾಣಿಕೆ ಹಾಗೂ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ಸಿಗಲಿದೆ. ಈ ಬೃಹತ್ ಹೆದ್ದಾರಿ ಯೋಜನೆಯ ಪ್ರಾರಂಭದಿಂದಲೂ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ತಮ್ಮ ಸತತ ಪರಿಶ್ರಮವನ್ನು ಮುಂದುವರಿಸಿಕೊಂಡೇ ಬರುತ್ತಿರುವ ಸಂಸದ ರಾಘವೇಂದ್ರ, _"ಶಿವಮೊಗ್ಗ ಜಿಲ್ಲೆಯ ನಾಗರಿಕರ ದಶಕಗಳ ಕನಸಾಗಿದ್ದ ಈ ಹೆದ್ದಾರಿ ಅಗಲೀಕರಣಕ್ಕೆ 6,400 ಕೋಟಿ ರೂ.ಗಳಿಗೂ ಅಧಿಕ ಅನುದಾನ ನೀಡಿ ಯೋಜನೆಯನ್ನು ಕ್ಷಿಪ್ರಗತಿಯಲ್ಲಿ ಸಾಕಾರಗೊಳಿಸುತ್ತಿರುವ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಹಾಗೂ ಕೇಂದ್ರ ರಸ್ತೆ ಸಾರಿಗೆ ಸಚಿವ ಶ್ರೀ ನಿತಿನ್ ಗಡ್ಕರಿ ಅವರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಮಸ್ತ ಜನತೆಯ ಪರವಾಗಿ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇನ್ನು ಕೆಲವೇ ತಿಂಗಳುಗಳಲ್ಲಿ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳ್ಳಲಿದ್ದು, ಬಾಕಿ ಇರುವ ಸ್ಥಳೀಯ ಭೂಸ್ವಾಧೀನ ಹಾಗೂ ಉಪಯುಕ್ತತೆಗಳ ವರ್ಗಾವಣೆಗೆ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತ ಪೂರ್ಣ ಪ್ರಮಾಣದ ಸಹಕಾರ ನೀಡಬೇಕು ಎಂದು ಮತ್ತೊಮ್ಮೆ ಒತ್ತಾಯಿಸುತ್ತೇನೆ. ಈ ಮೂಲಕ ಕಾಮಗಾರಿಯನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲು ಬೆಂಬಲಿಸಬೇಕು,ಎಂದು ಹೇಳಿದ್ದು, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ನವದೆಹಲಿ.01 ಆಗಸ್ಟ್.2026 6,400 ಕೋಟಿ ರೂ. ವೆಚ್ಚದ ಶಿವಮೊಗ್ಗ - ತುಮಕೂರು ಚತುಷ್ಪಥ ಹೆದ್ದಾರಿ ಯೋಜನೆ ಮುಂದಿನ ಮಾರ್ಚ್ ವೇಳೆಗೆ ಪೂರ್ಣ, ಜನಪ್ರಿಯ ಸಂಸದರಾದ ಬಿ.ವೈ.ರಾಘವೇಂದ್ರ. ನವದೆಹಲಿ. ಸಂಸದರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ ಹೆದ್ದಾರಿ ಪೂರ್ಣಕ್ಕೆ ತಮ್ಮ ಸತತ ಪರಿಶ್ರಮ ಮುಂದುವರಿಸಿರುವ ಅಂಕಿ-ಅಂಶ ಸಹಿತ ಲೋಕಸಭೆಯಲ್ಲಿ ಸಂಸದರಿಗೆ ಮಾಹಿತಿ ಒದಗಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಾಕಿ ಇರುವ ಭೂಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಸರ್ಕಾರದಿಂದ ವಿಳಂಬ ನೀತಿ ಸ್ಥಳೀಯ ಆಡಳಿತದ ಸಕ್ರಿಯ ಬೆಂಬಲಕ್ಕೆ ಸಂಸದರ ಒತ್ತಾಯ ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ ಬದಲಾಯಿಸಲಿರುವ ಶಿವಮೊಗ್ಗ - ತುಮಕೂರು ಎನ್‌ಎಚ್-69 (ಹಳೆಯ ಎನ್‌ಎಚ್-206) ರಾಷ್ಟ್ರೀಯ ಹೆದ್ದಾರಿಯ 4 ಪಥಗಳ ವಿಸ್ತರಣೆ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಒಟ್ಟು ಸುಮಾರು 6,400 ಕೋಟಿ ರೂ. ಅಂದಾಜು ವೆಚ್ಚದ, 214.43 ಕಿ.ಮೀ ಉದ್ದದ ಈ ಬೃಹತ್ ಯೋಜನೆಯಲ್ಲಿ ಈಗಾಗಲೇ 197.42 ಕಿ.ಮೀ ಗೂ ಹೆಚ್ಚಿನ ಕಾಮಗಾರಿ ಮುಗಿದಿದ್ದು, ಯೋಜನೆಯ ನಾಲ್ಕು ಹಂತಗಳ ಪೈಕಿ ಮೂರು ಹಂತಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮಾರ್ಚ್ 2027ರ ವೇಳೆಗೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ಸಂಸದರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಯೋಜನೆ ಕುರಿತಂತೆ ಸಂಪೂರ್ಣ ಮಾಹಿತಿ ಒದಗಿಸಿದ್ದಾರೆ. ಮಲ್ಲಸಂದ್ರದಿಂದ ಕರಡಿವರೆಗಿನ (52.89 ಕಿ.ಮೀ) ಮೊದಲ ಹಂತ ಶೇ.100 ರಷ್ಟು ಪೂರ್ಣಗೊಂಡಿದ್ದರೆ, ಕರಡಿಯಿಂದ ಬಾಣಾವರ (56.70 ಕಿ.ಮೀ) ಮತ್ತು ಬಾಣಾವರದಿಂದ ಬೆಟ್ಟದಹಳ್ಳಿ (48.51 ಕಿ.ಮೀ) ಭಾಗದ ಕಾಮಗಾರಿಗಳು ಶೇ.98 ಕ್ಕಿಂತ ಹೆಚ್ಚು ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಿವೆ. ಬೆಟ್ಟದಹಳ್ಳಿಯಿಂದ ಶಿವಮೊಗ್ಗದವರೆಗಿನ ಕೊನೆಯ ಹಂತದ 56.33 ಕಿ.ಮೀ ಕಾಮಗಾರಿಯೂ ಈಗಾಗಲೇ ಶೇ.83.78 ರಷ್ಟು ಭೌತಿಕ ಪ್ರಗತಿ ಸಾಧಿಸಿದ್ದು, ಮಾರ್ಚ್ 2027 ರ ವೇಳೆಗೆ ಸಂಪೂರ್ಣ ಮುಕ್ತಾಯಗೊಳ್ಳಲಿದೆ ಎಂದು ಸಂಸದ
ಬಿ.ವೈ.ರಾಘವೇಂದ್ರ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ಈ ಬೃಹತ್ ಯೋಜನೆಗೆ ಅಗತ್ಯವಿರುವ 1,271.41 ಹೆಕ್ಟೇರ್ ಭೂಮಿಯಲ್ಲಿ ಈಗಾಗಲೇ 1,268.33 ಹೆಕ್ಟೇರ್ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ಗುತ್ತಿಗೆದಾರರಿಗೆ ಹಸ್ತಾಂತರಿಸಲಾಗಿದೆ. ಭೂಸ್ವಾಧೀನ, ಅರಣ್ಯ ಇಲಾಖೆ ತೆರವು ಹಾಗೂ ರೈಲ್ವೆ ಮೇಲ್ಸೇತುವೆಗಳ (ROB/RUB) ಅನುಮತಿ ಸೇರಿದಂತೆ ಎದುರಾಗಿದ್ದ ತಾಂತ್ರಿಕ ತೊಡಕುಗಳನ್ನು 'ಭೂಮಿ ರಾಶಿ' ಹಾಗೂ 'ಪರಿವೇಶ' ಪೋರ್ಟಲ್ ಮೂಲಕ ಬಗೆಹರಿಸಲಾಗುತ್ತಿದೆ. ಈ ಬೃಹತ್ ಹೆದ್ದಾರಿ ಯೋಜನೆ ಪೂರ್ಣಗೊಂಡ ಬಳಿಕ ಶಿವಮೊಗ್ಗ - ಬೆಂಗಳೂರು ನಡುವಿನ ಪ್ರಯಾಣಿಸುವ ಸಮಯ ಗಣನೀಯವಾಗಿ ಕಡಿಮೆಯಾಗಲಿದ್ದು, ಮಲೆನಾಡು ಭಾಗದ ವ್ಯಾಪಾರ, ಕೃಷಿ ಸಾಗಾಣಿಕೆ ಹಾಗೂ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ಸಿಗಲಿದೆ. ಈ ಬೃಹತ್ ಹೆದ್ದಾರಿ ಯೋಜನೆಯ ಪ್ರಾರಂಭದಿಂದಲೂ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ತಮ್ಮ ಸತತ ಪರಿಶ್ರಮವನ್ನು ಮುಂದುವರಿಸಿಕೊಂಡೇ ಬರುತ್ತಿರುವ ಸಂಸದ ರಾಘವೇಂದ್ರ, _"ಶಿವಮೊಗ್ಗ ಜಿಲ್ಲೆಯ ನಾಗರಿಕರ ದಶಕಗಳ ಕನಸಾಗಿದ್ದ ಈ ಹೆದ್ದಾರಿ ಅಗಲೀಕರಣಕ್ಕೆ 6,400 ಕೋಟಿ ರೂ.ಗಳಿಗೂ ಅಧಿಕ ಅನುದಾನ ನೀಡಿ ಯೋಜನೆಯನ್ನು ಕ್ಷಿಪ್ರಗತಿಯಲ್ಲಿ ಸಾಕಾರಗೊಳಿಸುತ್ತಿರುವ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಹಾಗೂ ಕೇಂದ್ರ ರಸ್ತೆ ಸಾರಿಗೆ ಸಚಿವ ಶ್ರೀ ನಿತಿನ್ ಗಡ್ಕರಿ ಅವರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಮಸ್ತ ಜನತೆಯ ಪರವಾಗಿ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇನ್ನು ಕೆಲವೇ ತಿಂಗಳುಗಳಲ್ಲಿ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳ್ಳಲಿದ್ದು, ಬಾಕಿ ಇರುವ ಸ್ಥಳೀಯ ಭೂಸ್ವಾಧೀನ ಹಾಗೂ ಉಪಯುಕ್ತತೆಗಳ ವರ್ಗಾವಣೆಗೆ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತ ಪೂರ್ಣ ಪ್ರಮಾಣದ ಸಹಕಾರ ನೀಡಬೇಕು ಎಂದು ಮತ್ತೊಮ್ಮೆ ಒತ್ತಾಯಿಸುತ್ತೇನೆ. ಈ ಮೂಲಕ ಕಾಮಗಾರಿಯನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲು ಬೆಂಬಲಿಸಬೇಕು,ಎಂದು ಹೇಳಿದ್ದು, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
- ಹೊಲದಲ್ಲಿ ನಡೆದ ‘ನಾಟಿ ಸಂಭ್ರಮ' ಕಾರ್ಯಕ್ರಮದಲ್ಲಿ ನಾಟಿ ಮಾಡುವ ಮಹಿಳೆಯರಿಗೆ ಸೊರಬ: ದೇಶಕ್ಕೆ ಅನ್ನ ನೀಡುವ ರೈತ ಮಳೆಯನ್ನೇ ನಂಬಿ ಕೃಷಿ ಚಟುವಟಿಕೆ ಮಾಡಬೇಕಾಗಿದೆ. ಆದರೆ ಈ ವರ್ಷ ಮಳೆಯ ಕೊರತೆಯಿಂದ ರೈತ ಆತಂಕ ಪಡುವಂತಾಗಿದೆ. ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಹಾಗೂ ನಾಟಿ ಮಾಡುವ ಮಹಿಳೆಯರಿಗೆ ಹಲವು ಸಲಕರಣೆ ನೀಡಲಾಗಿದೆ ಎಂದು ದಂತ ವೈದ್ಯ ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ| ಜ್ಞಾನೇಶ್ ಎಚ್.ಈ. ಹೇಳಿದರು. ತಾಲೂಕಿನ ಕೊಡಕಣಿಯ ವೀರಭದ್ರಪ್ಪ ಗೌಡರ ಹೊಲದಲ್ಲಿ ನಡೆದ ‘ನಾಟಿ ಸಂಭ್ರಮ' ಕಾರ್ಯಕ್ರಮದಲ್ಲಿ ನಾಟಿ ಮಾಡುವ ಮಹಿಳೆಯರಿಗೆ ರೋಟರಿ ವತಿಯಿಂದ ಹಲವು ವಸ್ತುಗಳನ್ನು ನೀಡಿ ಅವರೊಂದಿಗೆ ನಾಟಿ ಮಾಡುವ ಮೂಲಕ ಅವರು ಮಾತನಾಡಿದರು. ರೈತ ಇಂದು ಸಂಕಷ್ಟ ಅನುಭವಿಸು ವಂತಾಗಿದೆ. ರೈತರ ಕಣ್ಣೀರನ್ನು ಒರೆಸುವ ನಿಟ್ಟಿನಲ್ಲಿ ಸರ್ಕಾರಗಳು ಮುಂದಾಗಬೇಕು ಎಂದರು. ರೋಟರಿ ಕ್ಲಬ್ ಅಧ್ಯಕ್ಷ ಮಾಲತೇಶ್ ಕೊಡಕಣಿ ಮಾತನಾಡಿ, ರೋಟರಿ ಸಂಸ್ಥೆ ಹಲವು ಸಮಾಜಮುಖಿ ಚಿಂತನೆ ಹೊಂದಿ ಕಾರ್ಯಕ್ರಮ ಮಾಡುತ್ತಾ ಬಂದಿದೆ. ಇನ್ನು ಮುಂದೆ ಯೂ ಇದೇ ರೀತಿ ರೈತಸ್ನೇಹಿಯಾಗಿ ಕಾರ್ಯಕ್ರಮ ಮಾಡುತ್ತದೆ ಎಂದರು. ರೋಟರಿ ಕ್ಲಬ್ ನೂತನ ಅಧ್ಯಕ್ಷ ಮಾಲತೇಶ್ ಕೊಡಕಣಿ, ಕಾರ್ಯದರ್ಶಿ ಪ್ರಕಾಶ್ ಬಿಳವಗೋಡು, ಡಾ। ನಾಗರಾಜ್, ನಿಕಟಪೂರ್ವ ಕಾರ್ಯದರ್ಶಿ ಕೃಷ್ಣಪ್ಪ ಓಟೂರು, ರೋಟರಿ ಮಾಜಿ ಅಧ್ಯಕ್ಷರಾದ ಸಂತೋಷ್, ವೀರಭದ್ರಪ್ಪ ಗೌಡ, ಪರಶುರಾಮ್, ಹಾಲಮ್ಮ, ಶೃತಿ, ಪದ್ಮಾ, ಜಯಮ್ಮ, ಅನ್ನಪೂರ್ಣ, ಶಿಲ್ಪಾ ಕುಮಾರ್ ಮೊದಲಾದವರಿದ್ದರು1
- ಪ್ರಧಾನಿ ಶ್ರೀ Narendra Modi ಅವರು ವಿವೇಕ ಸ್ಮಾರಕದಲ್ಲಿ ಯೋಗ ಮತ್ತು ಧ್ಯಾನ ಸಭಾಂಗಣ ಹಾಗೂ ಪ್ರದರ್ಶನ ಸಭಾಂಗಣವನ್ನು ಉದ್ಘಾಟಿಸಿ, ಶ್ರೀ ರಾಮಕೃಷ್ಣ ಪರಮಹಂಸರ ಚಿತ್ರಪಟದ ಮುಂದೆ ಶ್ರದ್ಧಾ-ಭಕ್ತಿಯಿಂದ ಧ್ಯಾನ ಮಗ್ನರಾಗಿ ಅವರನ್ನು ಸ್ಮರಿಸಿದರು.1
- ದವಳಗಿರಿ ಬಡಾವಣೆ: ಟ್ರಾನ್ಸ್‌ಫಾರ್ಮರ್ ಶಾರ್ಟ್ ಸರ್ಕ್ಯೂಟ್; ಕತ್ತಲಲ್ಲಿ ಮುಳುಗಿದ ನಿವಾಸಿಗಳು! ದವಳಗಿರಿ ಬಡಾವಣೆ: ಟ್ರಾನ್ಸ್‌ಫಾರ್ಮರ್ ಶಾರ್ಟ್ ಸರ್ಕ್ಯೂಟ್; ಕತ್ತಲಲ್ಲಿ ಮುಳುಗಿದ ನಿವಾಸಿಗಳು! ಚಿತ್ರದುರ್ಗ : ನಗರದ ದವಳಗಿರಿ ಬಡಾವಣೆಯ ಮೂರನೇ ಹಂತದಲ್ಲಿ ಭಾರಿ ಮಳೆಯ ಹಿನ್ನೆಲೆಯಲ್ಲಿ ಮುಖ್ಯ ರಸ್ತೆಯಲ್ಲಿರುವ ಟ್ರಾನ್ಸ್‌ಫಾರ್ಮರ್ (ವಿದ್ಯುತ್ ಪರಿವರ್ತಕ) ಪೆಟ್ಟಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಪರಿಣಾಮವಾಗಿ ಇಡೀ ಬಡಾವಣೆಯಾದ್ಯಂತ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಸ್ಥಳೀಯರ ಆತಂಕ: ಶಾರ್ಟ್ ಸರ್ಕ್ಯೂಟ್ ಆದ ತಕ್ಷಣ ಟ್ರಾನ್ಸ್‌ಫಾರ್ಮರ್‌ನಿಂದ ಭಾರಿ ಪ್ರಮಾಣದಲ್ಲಿ ಕಿಡಿಗಳು ಸಿಡಿದು, ಹೊಗೆ ಕಾಣಿಸಿಕೊಂಡಿದೆ. ಇದರಿಂದಾಗಿ ಸುತ್ತಮುತ್ತಲಿನ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಅಧಿಕಾರಿಗಳ ಗಮನಕ್ಕೆ ಮನವಿ:ವಿದ್ಯುತ್ ಕೈಕೊಟ್ಟಿರುವುದರಿಂದ ಇಡೀ ಬಡಾವಣೆ ಕತ್ತಲಲ್ಲಿ ಮುಳುಗಿದೆ. ಬೆಸ್ಕಾಂ (BESCOM) ಅಧಿಕಾರಿಗಳು ಹಾಗೂ ಸಂಬಂಧಪಟ್ಟ ವಿದ್ಯುತ್ ಇಲಾಖೆಯ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಬೇಕು. ಹಾನಿಗೊಳಗಾದ ಟ್ರಾನ್ಸ್‌ಫಾರ್ಮರ್ ಅನ್ನು ದುರಸ್ತಿಗೊಳಿಸಿ, ಬಡಾವಣೆಗೆ ಶೀಘ್ರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ.3
- ಖಾಸಗಿ ವಾಹನಗಳ ಮೇಲೆ ‘ಪ್ರೆಸ್’ (PRESS) ಎಂದು ಹಾಕಿಕೊಂಡು ಸಂಚರಿಸುವುದು ಕಾನೂನು ಬಾಹಿರವಾಗಿದ್ದು, ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ . ಮಾಧ್ಯಮ ರಂಗಕ್ಕೆ ಸಂಬಂಧಿಸಿಲ್ಲದ ವ್ಯಕ್ತಿಗಳು ತಮ್ಮ ಖಾಸಗಿ ವಾಹನಗಳ ಮೇಲೆ ‘ಪ್ರೆಸ್’ (PRESS) ಎಂದು ಹಾಕಿಕೊಂಡು ಸಂಚರಿಸುವುದು ಕಾನೂನು ಬಾಹಿರವಾಗಿದ್ದು, ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಚಿತ್ರದುರ್ಗ ಜಿಲ್ಲಾ ಪೊಲೀಸರು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ. ಸಾಮಾನ್ಯವಾಗಿ ಪತ್ರಕರ್ತರು ಮತ್ತು ಮಾಧ್ಯಮ ಕ್ಷೇತ್ರದ ಸಿಬ್ಬಂದಿ ತಮ್ಮ ಗುರುತಿಗಾಗಿ ವಾಹನಗಳ ಮೇಲೆ ‘PRESS’ ಎಂಬ ನಾಮಫಲಕವನ್ನು ಬಳಸುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧವಿಲ್ಲದ ಅನಾಮಧೇಯ ವ್ಯಕ್ತಿಗಳು ಸಹ ತಮ್ಮ ಮೋಟಾರ್ ಸೈಕಲ್ ಹಾಗೂ ಇತರೆ ವಾಹನಗಳ ಮೇಲೆ ‘PRESS’ ಬೋರ್ಡ್ ಹಾಕಿಕೊಂಡು.ಸಂಚರಿಸುತ್ತಿರುವುದು ಕಂಡುಬಂದಿದೆ. ಸಾಮಾನ್ಯ ಸಾರ್ವಜನಿಕರು ನಂಬರ್ ಪ್ಲೇಟ್ ಹಾಗೂ ವಾಹನಗಳ ಮೇಲೆ ಅಕ್ರಮವಾಗಿ ‘ಪ್ರೆಸ್’ ಎಂದು ಬರೆಸಿಕೊಂಡು ಚಲಾಯಿಸುತ್ತಿರುವುದನ್ನು ತಡೆಯಲು ಜಿಲ್ಲಾದ್ಯಂತ ವಿಶೇಷ ಅಭಿಯಾನ ನಡೆಸಲಾಗುತ್ತದೆ. ಚಿತ್ರದುರ್ಗ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ‘ಸ್ಪೆಷಲ್ ಡ್ರೈವ್’ ನಡೆಸುವ ಮೂಲಕ ಇಂತಹ ವಾಹನಗಳನ್ನು ಪತ್ತೆ ಹಚ್ಚಿ, ನಿಯಮ ಉಲ್ಲಂಘಿಸುವ ವಾಹನ ಚಾಲಕರು ಹಾಗೂ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.1
- Press ಎಂದು ಬೋರ್ಡ್ ಹಾಕಿಕೊಳ್ಳುವ ನಕಲಿ ಪತ್ರಕರ್ತರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಪತ್ರಕರ್ತರು ರಂದು ಪ್ರೆಸ್ ಬೋರ್ಡ್ ಹಾಕಿಕೊಳ್ಳುವ ನಕಲಿ ಪತ್ರಕರ್ತರ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಪತ್ರಕರ್ತರು ಮತ್ತು ಮಾಧ್ಯಮಕ್ಕೆ ಸಂಬಂಧಿಸಿದವರು ತಮ್ಮ ಗುರುತಿಗಾಗಿ PRESS ಎಂಬ ನಾಮ ಫಲಕ ಹಾಕಿಸಿಕೊಂಡಿರುತ್ತಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು ಮತ್ತು ಮೀಡಿಯಾ ಸಂಬಂಧಿಸಿದವರು ಹೊರತು ಪಡಿಸಿ ಅನಾಮಧೇಯ ವ್ಯಕ್ತಿಗಳು ಸಹ ತಮ್ಮ ಮೋಟಾರ್ ಸೈಕಲ್ ಗಳ ಮೇಲೆ ಪ್ರೆಸ್ (PRESS) ಎಂಬ ಬೋರ್ಡ್ ಹಾಕಿಕೊಂಡು ವಾಹನಗಳಲ್ಲಿ ಚಲಿಸುತ್ತಿದ್ದು ಕಂಡು ಬಂದಿರುತ್ತದೆ.1
- ಮಳೆಯಲ್ಲೂ ಕರ್ತವ್ಯಕ್ಕೆ ಆದ್ಯತೆ; ಕೆಲಸದ ಪ್ರಗತಿ ಪರಿಶೀಲಿಸಿದ ಸಚಿವ ಸತೀಶ್ ಜಾರಕಿಹೊಳಿ ನಿರಂತರ ಸುರಿಯುತ್ತಿರುವ ಮಳೆಯ ನಡುವೆಯೂ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಗೋಕಾಕ ತಾಲೂಕಿನ ಕೌಜಲಗಿ ಸಮೀಪದ ಘಟಪ್ರಭಾ ಬಲದಂಡೆ ಮುಖ್ಯ ಕಾಲುವೆಗೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಹಾಗೂ ಸ್ಥಳದ ಪರಿಸ್ಥಿತಿಯನ್ನು ಪರಿಶೀಲಿಸಿದರು. ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಕಾಮಗಾರಿಯ ಕುರಿತು ಮಾಹಿತಿ ಪಡೆದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಶೀಘ್ರ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.1
- ವೇಗವಾಗಿ ಬಂದು ಕಾರ್ ಡಿಕ್ಕಿ : ಮಗು ಸೇರಿ ಆರು ಕುರಿಗಳು ಸ್ಥಳದಲ್ಲೇ ಸಾವು. ಕಾರ್ ಡಿಕ್ಕಿ : ಮಗು ಸೇರಿ ಆರು ಕುರಿಗಳು ಸ್ಥಳದಲ್ಲೇ ಸಾವು ಹಾವೇರಿ : ವೇಗವಾಗಿ ಬಂದ ಕಾರೊಂದು ಮುಂದೆ ಚಲಿಸುತ್ತಿದ್ದ ಆಟೋ ಮತ್ತು ಕುರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ 6 ಕುರಿಗಳು ಹಾಗೂ ಆಟೋದಲ್ಲಿ ಕುಳಿತಿದ್ದ ಮಗು ಸ್ಥಳದಲ್ಲೇ ಸಾವನ್ನಪ್ಪಿದ ಕರುಣಾಜನಕ ಘಟನೆ ಹಾವೇರಿ ಆರ್ ಟಿ ಓ ಕಛೇರಿ ಹತ್ತಿರ ಜರುಗಿದೆ. ವೇಗವಾಗಿ ಬಂದ ಕಾರು ಮುಂದೆ ಚಲಿಸುತ್ತಿದ್ದ ಕುರಿಗಳು ಹಾಗೂ ಆಟೋಗೆ ವೇಗವಾಗಿ ಡಿಕ್ಕಿ ಆದ ಪರಿಣಾಮವಾಗಿ ಸ್ಥಳದಲ್ಲಿಯೇ ಆರು ಕುರಿಗಳು ಹಾಗೂ ಒಂದು ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ತೀವ್ರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು, ಕೆಲ ಕಾಲ ಉದ್ವಿಗ್ನ ವಾತಾವರಣವಿದ್ದರೂ ಪೋಲೀಸರು ಸ್ಥಳಕ್ಕಾಗಮಿಸಿ ಸಾರ್ವಜನಿಕರ ಅಕ್ರೊಷದ ವಾತಾವರಣವನ್ನ ಸಮಾಧಾನ ಪಡಿಸಿದರು ಎನ್ನಲಾಗಿದೆ.1