ಕುಷ್ಟಗಿ ತಾಲೂಕಿನ ಸಮೀಪದ ಬಿಜಕಲ್ ಸರ್ಕಾರಿ ಪ್ರೌಢ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿಗಾಗಿ ಶಾಲಾ ಸಂಸತ್ ರಚನೆಗೆ ಮಾದರಿ ಚುನಾವಣಾ ಪ್ರಕ್ರಿಯೆಯನ್ನು ಅತ್ಯಂತ ಶಿಸ್ತುಬದ್ಧವಾಗಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲೆಯ ಮುಖ್ಯಗುರು ಬಸವರಾಜ ಬಾಗಲಿ ಅವರು, ನಮ್ಮನ್ನು ಆಳುವ ಪ್ರತಿನಿಧಿಗಳನ್ನು ನಾವೇ ಆಯ್ಕೆ ಮಾಡುವ ಪದ್ಧತಿಯೇ ಚುನಾವಣೆ ಎಂದು ತಿಳಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಾರ್ವತ್ರಿಕ ಚುನಾವಣೆಗಳು ಭದ್ರ ಬುನಾದಿಯಾಗಿದ್ದು, ವಿದ್ಯಾರ್ಥಿ ಜೀವನದಲ್ಲಿಯೇ ಚುನಾವಣೆ ಹಾಗೂ ಮತದಾನದ ಮಹತ್ವವನ್ನು ಅರಿಯುವುದು ಅತ್ಯಗತ್ಯ ಎಂದು ಅವರು ಹೇಳಿದರು. ಸಾರ್ವತ್ರಿಕ ಚುನಾವಣೆಗಳು ನಡೆಯುವ ಮಾದರಿಯಲ್ಲಿಯೇ ಶಾಲಾ ಆವರಣದಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಗಿದ್ದು, ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ತತ್ವಗಳು, ಮತದಾನದ ಹಕ್ಕು ಹಾಗೂ ಜವಾಬ್ದಾರಿಗಳ ಬಗ್ಗೆ ಪ್ರಾಯೋಗಿಕ ಅರಿವು ಮೂಡಿಸಲಾಯಿತು. ಭವಿಷ್ಯದ ಜಾಗೃತ ಪ್ರಜೆಗಳಾಗಿ ರೂಪುಗೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಮುಖ್ಯಗುರುಗಳು ಅಭಿಪ್ರಾಯಪಟ್ಟರು. ಮತದಾರರ ಸಾಕ್ಷರತಾ ಕ್ಲಬ್ (ಇಎಲ್‌ಸಿ) ಉಸ್ತುವಾರಿ ಶಿಕ್ಷಕ ಪ್ರಸನ್ನಕುಮಾರ್ ಭಿಕ್ಷಾವತಿಮಠ ಅವರು ಚುನಾವಣಾ ನಿಯಮಗಳು, ಮತದಾರರ ಜವಾಬ್ದಾರಿ ಹಾಗೂ ಪ್ರತಿನಿಧಿಗಳ ಆಯ್ಕೆಯ ಮಹತ್ವವನ್ನು ವಿವರಿಸಿ, ಯಾವುದೇ ಮತ ಅಸಿಂಧುವಾಗದಂತೆ ಎಚ್ಚರಿಕೆಯಿಂದ ಮತದಾನ ಮಾಡುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ವೀರನಗೌಡ ಪೊಲೀಸ್ ಪಾಟೀಲ್, ಸದಸ್ಯ ಸಿದ್ದಪ್ಪ ಚಲವಾದಿ ಹಾಗೂ ಗ್ರಾಮದ ಪ್ರಮುಖರಾದ ಶ್ರೀಧರ ವೆಂಕಲಕುಂಟಿ, ಮೌನೇಶ್ ಬಡಿಗೇರ ಸೇರಿದಂತೆ ಹಲವರು ಈ ಚುನಾವಣಾ ಪ್ರಕ್ರಿಯೆಯನ್ನು ವೀಕ್ಷಿಸಿದರು. ಶಿಕ್ಷಕ ವಿಜಯಕುಮಾರ್ ಬಿರಾದಾರ್ ಮತದಾನ ಕೇಂದ್ರದ ಅಧ್ಯಕ್ಷಾಧಿಕಾರಿಯಾಗಿ ಕಾರ್ಯನಿರ್ವಹಿಸಿದರೆ, ಶಶಿಧರ ಗೊರಬಾಳ, ಹಂಪಯ್ಯ ಜಂಬಲದಿನ್ನಿ ಹಾಗೂ ಸಂಗೀತಾ ವೈ.ಬಿ. ಮತಗಟ್ಟೆ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದರು. ನಂತರ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಸಂತೋಷ್ ನಾಗಲೋಟಿ ಎಣಿಕೆ ಅಧಿಕಾರಿಯಾಗಿ ಹಾಗೂ ವಿಜಯಲಕ್ಷ್ಮಿ ದೇಸಾಯಿ ಸಹಾಯಕ ಎಣಿಕೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಫಲಿತಾಂಶ ಪ್ರಕಟಿಸಿದರು. ಚುನಾವಣೆಯ ಬಳಿಕ 10ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಅನಿತಾ ಶರಣಪ್ಪ ಯಲಬುರ್ತಿ ಅವರು ಸಂಸದೀಯ ನಾಯಕಿಯಾಗಿ ಹಾಗೂ ಶಾಲಾ ಸಂಸತ್ತಿನ ಪ್ರಧಾನಮಂತ್ರಿಯಾಗಿ ಆಯ್ಕೆಯಾದರು. ನಿಯೋಜಿತ ಪ್ರಧಾನಮಂತ್ರಿಯವರು ತಮ್ಮ ಮಂತ್ರಿಮಂಡಲದ ಸದಸ್ಯರ ಪಟ್ಟಿಯನ್ನು ಮುಖ್ಯಗುರುಗಳಿಗೆ ಸಲ್ಲಿಸಿದ್ದು, ಬಳಿಕ ನೂತನ ಸರ್ಕಾರ ರಚನೆಗೆ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಯಿತು. ಅನಂತರ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಮಂತ್ರಿ ಸೇರಿದಂತೆ ಎಲ್ಲಾ ಸಚಿವರಿಗೆ ಮುಖ್ಯಗುರು ಬಸವರಾಜ ಬಾಗಲಿ ಅವರು ಪ್ರಮಾಣವಚನ ಬೋಧಿಸಿ, ಅಧಿಕಾರದ ಗೌಪ್ಯತೆ ಹಾಗೂ ಕರ್ತವ್ಯನಿಷ್ಠೆಯ ಮಹತ್ವವನ್ನು ತಿಳಿಸಿದರು. ಜೂನ್ 22, 2026ರಂದು ನೂತನ ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ಶಾಲಾ ಸಂಸತ್ತಿನ ಪ್ರಥಮ ಸಭೆಯನ್ನು ನಡೆಸುವ ಕುರಿತು ಸದಸ್ಯರಿಗೆ ಅಗತ್ಯ ಮಾರ್ಗದರ್ಶನ ನೀಡಲಾಯಿತು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ನಾಯಕತ್ವ ಗುಣಗಳು ಹಾಗೂ ಜವಾಬ್ದಾರಿಯುತ ನಾಗರಿಕತೆಯ ಅರಿವು ಬೆಳೆಸುವಲ್ಲಿ ಮಹತ್ವದ ಹೆಜ್ಜೆಯಾಯಿತು. ಬಿಜಕಲ್ ಶಾಲೆಯಲ್ಲಿ ನಡೆದ ಈ ಮಾದರಿ ಶಾಲಾ ಸಂಸತ್ ಚುನಾವಣೆಯು ಸಾರ್ವತ್ರಿಕ ಚುನಾವಣೆ ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿದೆ ಎಂಬುದನ್ನು ಯಶಸ್ವಿಯಾಗಿ ಪ್ರದರ್ಶಿಸಿತು.
ಕುಷ್ಟಗಿ ತಾಲೂಕಿನ ಸಮೀಪದ ಬಿಜಕಲ್ ಸರ್ಕಾರಿ ಪ್ರೌಢ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿಗಾಗಿ ಶಾಲಾ ಸಂಸತ್ ರಚನೆಗೆ ಮಾದರಿ ಚುನಾವಣಾ ಪ್ರಕ್ರಿಯೆಯನ್ನು ಅತ್ಯಂತ ಶಿಸ್ತುಬದ್ಧವಾಗಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲೆಯ ಮುಖ್ಯಗುರು ಬಸವರಾಜ ಬಾಗಲಿ ಅವರು, ನಮ್ಮನ್ನು ಆಳುವ ಪ್ರತಿನಿಧಿಗಳನ್ನು ನಾವೇ ಆಯ್ಕೆ ಮಾಡುವ ಪದ್ಧತಿಯೇ ಚುನಾವಣೆ ಎಂದು ತಿಳಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಾರ್ವತ್ರಿಕ ಚುನಾವಣೆಗಳು ಭದ್ರ ಬುನಾದಿಯಾಗಿದ್ದು, ವಿದ್ಯಾರ್ಥಿ ಜೀವನದಲ್ಲಿಯೇ ಚುನಾವಣೆ ಹಾಗೂ ಮತದಾನದ ಮಹತ್ವವನ್ನು ಅರಿಯುವುದು ಅತ್ಯಗತ್ಯ ಎಂದು ಅವರು ಹೇಳಿದರು. ಸಾರ್ವತ್ರಿಕ ಚುನಾವಣೆಗಳು ನಡೆಯುವ ಮಾದರಿಯಲ್ಲಿಯೇ ಶಾಲಾ ಆವರಣದಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಗಿದ್ದು, ವಿದ್ಯಾರ್ಥಿಗಳಿಗೆ
ಪ್ರಜಾಪ್ರಭುತ್ವದ ತತ್ವಗಳು, ಮತದಾನದ ಹಕ್ಕು ಹಾಗೂ ಜವಾಬ್ದಾರಿಗಳ ಬಗ್ಗೆ ಪ್ರಾಯೋಗಿಕ ಅರಿವು ಮೂಡಿಸಲಾಯಿತು. ಭವಿಷ್ಯದ ಜಾಗೃತ ಪ್ರಜೆಗಳಾಗಿ ರೂಪುಗೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಮುಖ್ಯಗುರುಗಳು ಅಭಿಪ್ರಾಯಪಟ್ಟರು. ಮತದಾರರ ಸಾಕ್ಷರತಾ ಕ್ಲಬ್ (ಇಎಲ್‌ಸಿ) ಉಸ್ತುವಾರಿ ಶಿಕ್ಷಕ ಪ್ರಸನ್ನಕುಮಾರ್ ಭಿಕ್ಷಾವತಿಮಠ ಅವರು ಚುನಾವಣಾ ನಿಯಮಗಳು, ಮತದಾರರ ಜವಾಬ್ದಾರಿ ಹಾಗೂ ಪ್ರತಿನಿಧಿಗಳ ಆಯ್ಕೆಯ ಮಹತ್ವವನ್ನು ವಿವರಿಸಿ, ಯಾವುದೇ ಮತ ಅಸಿಂಧುವಾಗದಂತೆ ಎಚ್ಚರಿಕೆಯಿಂದ ಮತದಾನ ಮಾಡುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ವೀರನಗೌಡ ಪೊಲೀಸ್ ಪಾಟೀಲ್, ಸದಸ್ಯ ಸಿದ್ದಪ್ಪ ಚಲವಾದಿ ಹಾಗೂ ಗ್ರಾಮದ ಪ್ರಮುಖರಾದ ಶ್ರೀಧರ ವೆಂಕಲಕುಂಟಿ, ಮೌನೇಶ್ ಬಡಿಗೇರ ಸೇರಿದಂತೆ ಹಲವರು ಈ ಚುನಾವಣಾ ಪ್ರಕ್ರಿಯೆಯನ್ನು
ವೀಕ್ಷಿಸಿದರು. ಶಿಕ್ಷಕ ವಿಜಯಕುಮಾರ್ ಬಿರಾದಾರ್ ಮತದಾನ ಕೇಂದ್ರದ ಅಧ್ಯಕ್ಷಾಧಿಕಾರಿಯಾಗಿ ಕಾರ್ಯನಿರ್ವಹಿಸಿದರೆ, ಶಶಿಧರ ಗೊರಬಾಳ, ಹಂಪಯ್ಯ ಜಂಬಲದಿನ್ನಿ ಹಾಗೂ ಸಂಗೀತಾ ವೈ.ಬಿ. ಮತಗಟ್ಟೆ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದರು. ನಂತರ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಸಂತೋಷ್ ನಾಗಲೋಟಿ ಎಣಿಕೆ ಅಧಿಕಾರಿಯಾಗಿ ಹಾಗೂ ವಿಜಯಲಕ್ಷ್ಮಿ ದೇಸಾಯಿ ಸಹಾಯಕ ಎಣಿಕೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಫಲಿತಾಂಶ ಪ್ರಕಟಿಸಿದರು. ಚುನಾವಣೆಯ ಬಳಿಕ 10ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಅನಿತಾ ಶರಣಪ್ಪ ಯಲಬುರ್ತಿ ಅವರು ಸಂಸದೀಯ ನಾಯಕಿಯಾಗಿ ಹಾಗೂ ಶಾಲಾ ಸಂಸತ್ತಿನ ಪ್ರಧಾನಮಂತ್ರಿಯಾಗಿ ಆಯ್ಕೆಯಾದರು. ನಿಯೋಜಿತ ಪ್ರಧಾನಮಂತ್ರಿಯವರು ತಮ್ಮ ಮಂತ್ರಿಮಂಡಲದ ಸದಸ್ಯರ ಪಟ್ಟಿಯನ್ನು ಮುಖ್ಯಗುರುಗಳಿಗೆ ಸಲ್ಲಿಸಿದ್ದು, ಬಳಿಕ ನೂತನ ಸರ್ಕಾರ ರಚನೆಗೆ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಯಿತು.
ಅನಂತರ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಮಂತ್ರಿ ಸೇರಿದಂತೆ ಎಲ್ಲಾ ಸಚಿವರಿಗೆ ಮುಖ್ಯಗುರು ಬಸವರಾಜ ಬಾಗಲಿ ಅವರು ಪ್ರಮಾಣವಚನ ಬೋಧಿಸಿ, ಅಧಿಕಾರದ ಗೌಪ್ಯತೆ ಹಾಗೂ ಕರ್ತವ್ಯನಿಷ್ಠೆಯ ಮಹತ್ವವನ್ನು ತಿಳಿಸಿದರು. ಜೂನ್ 22, 2026ರಂದು ನೂತನ ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ಶಾಲಾ ಸಂಸತ್ತಿನ ಪ್ರಥಮ ಸಭೆಯನ್ನು ನಡೆಸುವ ಕುರಿತು ಸದಸ್ಯರಿಗೆ ಅಗತ್ಯ ಮಾರ್ಗದರ್ಶನ ನೀಡಲಾಯಿತು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ನಾಯಕತ್ವ ಗುಣಗಳು ಹಾಗೂ ಜವಾಬ್ದಾರಿಯುತ ನಾಗರಿಕತೆಯ ಅರಿವು ಬೆಳೆಸುವಲ್ಲಿ ಮಹತ್ವದ ಹೆಜ್ಜೆಯಾಯಿತು. ಬಿಜಕಲ್ ಶಾಲೆಯಲ್ಲಿ ನಡೆದ ಈ ಮಾದರಿ ಶಾಲಾ ಸಂಸತ್ ಚುನಾವಣೆಯು ಸಾರ್ವತ್ರಿಕ ಚುನಾವಣೆ ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿದೆ ಎಂಬುದನ್ನು ಯಶಸ್ವಿಯಾಗಿ ಪ್ರದರ್ಶಿಸಿತು.
- ಇಳಕಲ್ ನಗರದಲ್ಲಿ ಮಡಿವಾಳ ಸಮಾಜದ ವತಿಯಿಂದ ಮಾಧ್ಯಮ ಘೋಷ್ಠಿ ನಡೆಸಲಾಯಿತು. ಈ ಸಂದರ್ಭದಲ್ಲಿ, ಉತ್ತರ ಕರ್ನಾಟಕದ ಯುವಕರ ಕಣ್ಮಣಿ ಹಾಗೂ ಅಭಿವೃದ್ಧಿಯ ಹರಿಕಾರರೆಂದು ಗುರುತಿಸಿಕೊಂಡಿರುವ ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಮನವಿ ಮಾಡಲಾಯಿತು. ಮಾಧ್ಯಮ ಘೋಷ್ಠಿಯಲ್ಲಿ ಮಡಿವಾಳ ಸಮಾಜದ ಮುಖಂಡರು ಹಾಗೂ ಯುವ ಮಿತ್ರರು ಉಪಸ್ಥಿತರಿದ್ದರು. ಜನಪ್ರಿಯ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ದೊರಕಿಸಿಕೊಡಬೇಕೆಂದು ಮಡಿವಾಳ ಸಮಾಜದ ಮುಖಂಡರು ಬಲವಾಗಿ ಆಗ್ರಹಿಸಿದರು.3
- ವಿಜಯಪುರ ಜಿಲ್ಲೆಯ ಐತಿಹಾಸಿಕ ತಾಳಿಕೋಟಿ ಪಟ್ಟಣದಲ್ಲಿ, ಶ್ರೀ ವೀರರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿ ನಿರ್ಮಾಣ ಸೇವಾ ಸಮಿತಿಯ ವತಿಯಿಂದ ಅದರ ಮೂರನೇ ವಾರ್ಷಿಕೋತ್ಸವದ ನಿಮಿತ್ತ ಪುರಾಣ ಕಾರ್ಯಕ್ರಮವನ್ನು ರಾಜವಾಡೆ ಆವರಣದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಈ ದೇಶದ ರೈತರು ಅನ್ನದಾತರಾಗಿದ್ದು, ದೇಶಕ್ಕೆ ಅನ್ನ ನೀಡುವ ಅವರ ಸೇವೆ ದೇವರ ಸೇವೆಗೆ ಸಮಾನವಾಗಿದೆ ಎಂದು ಹೇಳಿದರು. ರೈತರನ್ನು ಸನ್ಮಾನಿಸಿರುವುದು ಹೆಮ್ಮೆಯ ವಿಷಯ ಎಂದು ಅವರು ಬಣ್ಣಿಸಿದರು. ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ರೈತ ಮುಖಂಡರಾದ ದಶರಥಸಿಂಗ್ ಮನಗೂಳಿ ಅವರು ಮಾತನಾಡಿ, ಹುಟ್ಟು ಹೋರಾಟಗಾರ್ತಿಯಾದ ನೀಲಮ್ಮಗೌಡತಿ ಪಾಟೀಲ ಅವರು ಹಲವಾರು ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಿದ್ದು, ಅವರಿಗೆ ಎಲ್ಲರ ಸಹಕಾರ ನೀಡುವ ಅಗತ್ಯವಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 15 ಜೋಡಿ ರೈತ ದಂಪತಿಗಳನ್ನು ಸನ್ಮಾನಿಸಲಾಯಿತು. ಕಿತ್ತೂರಾಣಿ ಚೆನ್ನಮ್ಮಳ ನೂರಾರು ಅಭಿಮಾನಿಗಳು ಈ ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.1
- ಗದಗ್ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಕೊಂಚಿಗೇರಿ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಅಳವಡಿಸಲಾಗಿರುವ ಹೈ ಮಾಸ್ಕ್ ದೀಪ ಇಂದಿಗೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಹೈ ಮಾಸ್ಕ್ ದೀಪ ಸರಿಯಾಗಿ ಆನ್ ಆಗದಿರುವುದು ಮುಖ್ಯ ಸಮಸ್ಯೆಯಾಗಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಅವರು 'ನೋಡೋಣ' ಎಂದು ಹೇಳಿ ನಿರ್ಲಕ್ಷ್ಯ ತೋರುತ್ತಿದ್ದಾರೆ.1
- ಕೂಡ್ಲಿಗಿ ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಕಾರಣ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮಳೆರಾಯನ ಆಗಮನಕ್ಕಾಗಿ ತಾಲ್ಲೂಕಿನಾದ್ಯಂತ ವಿವಿಧ ಆಚರಣೆಗಳು ಮತ್ತು ಪೂಜೆಗಳನ್ನು ನಡೆಸಲಾಗುತ್ತಿದ್ದು, ಅದರ ಭಾಗವಾಗಿ ಶನಿವಾರ ಅಮ್ಮನಕೆರಿ ಗ್ರಾಮದಲ್ಲಿ ವಿಶೇಷ ಗುರ್ಜಿ ಪೂಜೆ ಸಲ್ಲಿಸಲಾಯಿತು. ಈ ಆಚರಣೆಯಲ್ಲಿ, ಜೋಳದ ರೊಟ್ಟಿ ಬೇಯಿಸುವ ಹಂಚಿನ ಮೇಲೆ ಸೆಗಣಿಯಿಂದ ತಯಾರಿಸಿದ ಗುರ್ಜಿಯನ್ನು ಒಬ್ಬ ಯುವಕನ ತಲೆಯ ಮೇಲೆ ಇಟ್ಟುಕೊಂಡು ಮನೆ ಮನೆಗೆ ಹೋಗಲಾಯಿತು. ಈ ವೇಳೆ ಮಹಿಳೆಯರು "ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ. ಹಳ್ಳಕೊಳ್ಳ ಸುತ್ತಾಡಿ ಬಂದೆ. ಕಾರ ಮಳೆಯೋ ಕಪ್ಪತ್ತ ಮಳೆಯೋ.. ಸುರಿ ಸುರಿ ಸುರಿಯೋ ಮಳೆರಾಯ, ಬಣ್ಣ ಕೊಡ್ತೀನಿ ಬಾರಲೇ ಮಳೆಯೇ ಸುಣ್ಣ ಕೊಡ್ತೀನಿ ಸುರಿಯಲೇ ಮಳೆಯೇ" ಎಂದು ಹಾಡುತ್ತಾ ಮಳೆಗಾಗಿ ಪ್ರಾರ್ಥಿಸಿದರು. ಅಮ್ಮನಕೆರಿ ಗ್ರಾಮದಲ್ಲಿ ಬೇಗ ಮಳೆ ಬರುವಂತೆ ಕೋರಿ ಈ ಗುರ್ಜಿ ಪೂಜೆಯನ್ನು ಆಚರಿಸಲಾಯಿತು.1
- ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಅಮ್ಮನಕೇರಿ ಗ್ರಾಮದಲ್ಲಿ, ಮಳೆಗಾಗಿ 'ಗೊರ್ಜೆವ್ವ' (ಗೌರವ್ವ) ಹೊತ್ತ ಮಕ್ಕಳಿಗೆ ಗಂಗೆ ಪೂಜೆ ನೆರವೇರಿಸಲಾಯಿತು. ಗೊರ್ಜೆವ್ವಳ ಮೂರ್ತಿ ಹೊತ್ತ ಬಾಲಕ ಗ್ರಾಮದಾದ್ಯಂತ ಮನೆ ಮನೆಗೆ ತೆರಳಿ ಪೂಜೆ ಸಲ್ಲಿಸುವ ಮೂಲಕ ವರುಣ ದೇವರ ಕೃಪೆಗೆ ಪ್ರಾರ್ಥಿಸಲಾಯಿತು. 'ಗೊರ್ಜೆಮ್ಮ' ಅಥವಾ ಗೌರಮ್ಮ ಆರಾಧನೆಯು ಕರ್ನಾಟಕದ ಗ್ರಾಮೀಣ ಜಾನಪದ ಸಂಪ್ರದಾಯದ ಒಂದು ವಿಶಿಷ್ಟ ಭಾಗವಾಗಿದೆ. ಇದು ಮುಖ್ಯವಾಗಿ ಮಹಿಳಾ ಶಕ್ತಿಯ ಆರಾಧನೆಯನ್ನು, ಗ್ರಾಮೀಣ ಪಶುಪಾಲನಾ ಸಮುದಾಯಗಳ ಸಂಸ್ಕೃತಿಯನ್ನು ಪ್ರತಿಬಿಂಬಿಸುವ, ಪ್ರಕೃತಿ, ಕೃಷಿ ಮತ್ತು ದೈವಭಕ್ತಿಯ ಸಂಗಮವಾಗಿರುವ ಆಚರಣೆಯಾಗಿದೆ. ಕಲ್ಯಾಣ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಗೊರ್ಜೆವ್ವ ಆಚರಣೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಸಲಾಗುತ್ತದೆ. ಗೊರ್ಜೆವ್ವ (ಗೌರವ್ವ) ದೇವಿಯನ್ನು ಪಶುಪಾಲಕರ ಮತ್ತು ಅವರ ಜಾನುವಾರುಗಳ ರಕ್ಷಕಿಯಾಗಿ ಪೂಜಿಸಲಾಗುತ್ತದೆ. ಈ ಸಂದರ್ಭದಲ್ಲಿ, ಮಹಿಳೆಯರು, ಯುವತಿಯರು ಮತ್ತು ಮಕ್ಕಳು ಒಗ್ಗೂಡಿ ಅರಿಶಿನ, ಮಣ್ಣು ಮತ್ತು ನೈಸರ್ಗಿಕ ಸಾಮಗ್ರಿಗಳನ್ನು ಬಳಸಿ ಗೌರಮ್ಮಳ (ಗೊರ್ಜೆಮ್ಮ) ವಿಗ್ರಹವನ್ನು ಸರಳ ಹಾಗೂ ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸುತ್ತಾರೆ. ಗೊರ್ಜೆವ್ವ ಉತ್ಸವವನ್ನು ರಾತ್ರಿ ಸಮಯದಲ್ಲಿ ಆಚರಿಸಲಾಗುತ್ತದೆ. ದೇವಿಯ ವಿಗ್ರಹವನ್ನು ಗ್ರಾಮದ ವಿವಿಧ ದೇವಾಲಯಗಳಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಮೆರವಣಿಗೆಯಲ್ಲಿ ಮಹಿಳೆಯರು ಕೈಯಲ್ಲಿ ತೈಲದೀಪಗಳನ್ನು ಹಿಡಿದು, ಹೂವುಗಳನ್ನು ಅರ್ಪಿಸಿ ಭಕ್ತಿಭಾವದಿಂದ ಸಾಗುತ್ತಾರೆ. ಹಬ್ಬದ ಪ್ರಮುಖ ಆಕರ್ಷಣೆಯಾಗಿ, ಪುರುಷ ಭಕ್ತರು ದೇವಿಯ ಮೇಲಿನ ಅಚಲ ಭಕ್ತಿಯ ಸಂಕೇತವಾಗಿ ಮುಖ್ಯ ದೇವಾಲಯದ ಎದುರು 'ಉರುಳು ಸೇವೆ' ಮಾಡುತ್ತಾರೆ. ಜಾನಪದ ಹಾಡುಗಳು ಮತ್ತು ಸೋಬಾನೆ ಪದಗಳ ಮೂಲಕ ಗೊರ್ಜೆವ್ವಳನ್ನು ಆರಾಧಿಸಲಾಗುತ್ತದೆ. ಮಹಿಳೆಯರು ವಿಶೇಷವಾಗಿ ಸೋಬಾನೆ ಪದಗಳನ್ನು ಹಾಗೂ ದೇವಿಯ ಮಹಿಮೆಯನ್ನು ಸಾರುವ ಜಾನಪದ ಗೀತೆಗಳನ್ನು ಹಾಡುತ್ತಾರೆ. "ಗಂಗಮ್ಮ ಗೌರಮ್ಮ" ಮುಂತಾದ ಭಕ್ತಿಗೀತೆಗಳನ್ನು ಹಾಡಿ, ಭಜನೆ ಮಾಡುವ ಮೂಲಕ ಮಳೆ ದೇವರನ್ನು ಆಹ್ವಾನಿಸಲಾಗುತ್ತದೆ. ಬಹುತೇಕ ಗ್ರಾಮೀಣ ಭಾಗಗಳಲ್ಲಿ, ಮಕ್ಕಳು ಅರೆಬೆತ್ತಲಾಗಿ ಮಣ್ಣಿನ ಗೊರ್ಜೆವ್ವಳನ್ನು ಕಟ್ಟಿಗೆಯ ಹಲಗೆಯ ಮೇಲೆ ಪ್ರತಿಷ್ಠಾಪಿಸಿಕೊಂಡು ವಿಶೇಷವಾಗಿ ಪೂಜಿಸುತ್ತಾರೆ. ಒಬ್ಬ ಅರೆಬೆತ್ತಲೆಯ ಬಾಲಕ ಅದನ್ನು ತನ್ನ ತಲೆಯ ಮೇಲೆ ಹೊತ್ತು ಗ್ರಾಮದ ಮನೆ ಮನೆಗೆ ತೆರಳಿ ಗೊರ್ಜೆವ್ವಳನ್ನು ಆರಾಧಿಸುತ್ತಾನೆ. ಮನೆಯ ಬಾಗಿಲಿಗೆ ಬಂದ ಗೊರ್ಜೆವ್ವಳಿಗೆ ಪೂಜೆ ಸಲ್ಲಿಸುವಂತೆ ಕೋರಲಾಗುತ್ತದೆ. ಮನೆಯವರು ಗೊರ್ಜೆವ್ವಳನ್ನು ಭಕ್ತಿಯಿಂದ ಸ್ವಾಗತಿಸಿ, ಹೊತ್ತವರಿಗೆ ಗಂಗಾಭಿಷೇಕ ಮಾಡಿ ನಮಿಸುತ್ತಾರೆ ಮತ್ತು ಆರಾಧಕರಿಗೆ ಧಾನ್ಯಗಳು ಹಾಗೂ ದಕ್ಷಿಣೆಯನ್ನು ನೀಡಿ ಕಳುಹಿಸಿಕೊಡುತ್ತಾರೆ. ಗೊರ್ಜೆವ್ವಳ ಆರಾಧಕರು ಜನರು ನೀಡಿದ ಧಾನ್ಯಗಳನ್ನು ಸಂಗ್ರಹಿಸಿ, ನಂತರ ಒಗ್ಗೂಡಿ ತಿಂಡಿ ತಿನಿಸುಗಳನ್ನು ತಯಾರಿಸಿ ಗೊರ್ಜೆವ್ವಳಿಗೆ ಎಡೆ ಮಾಡಿ ನಮಿಸುತ್ತಾರೆ. ನಂತರ ಶ್ರದ್ಧಾಭಕ್ತಿಯಿಂದ ಪ್ರಸಾದವನ್ನು ಸೇವಿಸುತ್ತಾರೆ. ಈ ಆರಾಧನೆಯಲ್ಲಿ ಬಾಲಕರು ಮತ್ತು ಬಾಲೆಯರ ದಂಡೇ ಭಾಗಿಯಾಗಿರುತ್ತದೆ. ಗೊರ್ಜೆವ್ವಳ ಆರಾಧಕರು ಗ್ರಾಮವೆಲ್ಲಾ ಅಲೆದಾಡಿದ ನಂತರ ಕೊನೆಗೆ ಗ್ರಾಮದಾಚೆಯ ದೇವಸ್ಥಾನದಲ್ಲಿ ತಂಗುತ್ತಾರೆ. ಇದು ಒಂದು ವಿಶಿಷ್ಟ ಮತ್ತು ವಿಶೇಷ ಜಾನಪದ ಆಚರಣೆಯಾಗಿದೆ.4
- ಬಳ್ಳಾರಿ ನಗರದ ಹವಾಂಭಾವಿ ಪ್ರದೇಶದಲ್ಲಿ ಅಕ್ರಮ ಸರ್ಕಾರಿ ಜಾಗ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದೆ. ಜಿಲ್ಲಾಡಳಿತವು ಪೊಲೀಸ್ ಭದ್ರತೆಯಲ್ಲಿ ಸರ್ವೇ ನಂ. 275ರಲ್ಲಿರುವ 1.33 ಎಕರೆ ಸರ್ಕಾರಿ ಜಾಗವನ್ನು ತೆರವುಗೊಳಿಸಿ ವಶಕ್ಕೆ ಪಡೆದುಕೊಂಡಿದೆ. ಈ ಜಾಗದ ಮೌಲ್ಯ ಕೋಟ್ಯಾಂತರ ರೂಪಾಯಿ ಎಂದು ಅಂದಾಜಿಸಲಾಗಿದೆ. ಜಿಲ್ಲಾಡಳಿತವು ತೆರವುಗೊಳಿಸಿದ ಈ ಜಾಗದಲ್ಲಿ ಸರ್ಕಾರಿ ಸ್ವಾಮ್ಯದ ಫಲಕವನ್ನು ಅಳವಡಿಸಿದ್ದು, ಅಕ್ರಮವಾಗಿ ಒತ್ತುವರಿ ಮಾಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ.1
- ಪರಿಸರ ಸಂರಕ್ಷಣೆ ಮತ್ತು ಹಸಿರು ಅಭಿವೃದ್ಧಿಯ ಉದ್ದೇಶದಿಂದ ಅರಣ್ಯ ಇಲಾಖೆಯು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ರಸ್ತೆ ಮತ್ತು ಹೆದ್ದಾರಿಗಳ ಬದಿಯಲ್ಲಿ ಸಸಿ ನೆಡುವ ಕಾರ್ಯ ಕೈಗೊಂಡಿದ್ದರೂ, ಸಮರ್ಪಕ ಯೋಜನೆಯಿಲ್ಲದೆ ವಿದ್ಯುತ್ ತಂತಿಗಳ ಕೆಳಗೆ ಸಸಿಗಳನ್ನು ನೆಡುತ್ತಿರುವುದರಿಂದ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗುತ್ತಿದೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್-ಮುಸ್ಲಿಮೀನ್ (AIMIM) ಪಕ್ಷದ ರಾಯಚೂರು ನಗರ ಅಧ್ಯಕ್ಷ ಶಬ್ಬೀರ್ ಅಹ್ಮದ್ ಹೌದಾದಿ ಆರೋಪಿಸಿದ್ದಾರೆ. ಈ ಕುರಿತು ಅವರು 2026ರ ಜೂನ್ 20ರಂದು ಕಲಬುರ್ಗಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ರಾಯಚೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅಧಿಕೃತ ಮನವಿ ಪತ್ರ ಸಲ್ಲಿಸಿದ್ದಾರೆ. ವಿದ್ಯುತ್ ತಂತಿಗಳ ಕೆಳಗೆ ಸಸಿ ನೆಡುವುದರಿಂದ ಹಲವು ಸಮಸ್ಯೆಗಳು ಉದ್ಭವಿಸುತ್ತಿವೆ. ಮರಗಳು ಬೆಳೆದು ದೊಡ್ಡದಾದಾಗ ಅವುಗಳ ಕೊಂಬೆಗಳು ವಿದ್ಯುತ್ ತಂತಿಗಳಿಗೆ ತಾಗಿ, ಗಾಳಿಯ ಸಂದರ್ಭದಲ್ಲಿ ಘರ್ಷಣೆಯಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ಇದರಿಂದ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟುಹೋಗುವ ಅಪಾಯವಿದ್ದು, ಟಿವಿ, ಫ್ರಿಡ್ಜ್ ಸೇರಿದಂತೆ ಮನೆಗಳಲ್ಲಿನ ಬೆಲೆಬಾಳುವ ವಿದ್ಯುತ್ ಉಪಕರಣಗಳಿಗೆ ಹಾನಿಯಾಗುತ್ತಿದೆ. ಅಲ್ಲದೆ, ಮರಗಳ ಕೊಂಬೆಗಳು ಬೀದಿ ದೀಪಗಳನ್ನು ಮರೆಮಾಡುವುದರಿಂದ ರಸ್ತೆಗಳು ಕತ್ತಲಲ್ಲಿ ಮುಳುಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮರಗಳ ಕೊಂಬೆಗಳನ್ನು ಕತ್ತರಿಸುವ ಜವಾಬ್ದಾರಿ ಜೆಸ್ಕಾಂ ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿಗಳ ಮೇಲೆ ಬೀಳುತ್ತಿದ್ದು, ಇದು ಇಲಾಖೆಗಳ ನಡುವೆ ಅನಗತ್ಯ ಕೆಲಸದ ಒತ್ತಡಕ್ಕೆ ಕಾರಣವಾಗುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ರೈಲ್ವೆ ಸ್ಟೇಷನ್ ರಸ್ತೆಯಿಂದ RTO ಸರ್ಕಲ್ ವರೆಗೆ, RTO ಸರ್ಕಲ್‌ನಿಂದ BRB ಸರ್ಕಲ್ ವರೆಗೆ, ಜಿಲ್ಲಾಧಿಕಾರಿ ಬಂಗ್ಲಾದಿಂದ ಅಸ್ನಿಹಾಳ್ ಹಾಗೂ ಅಸ್ನಿಹಾಳ್‌ನಿಂದ ಮಿನಿ ವಿಧಾನಸೌಧದವರೆಗೆ, ಮಂತ್ರಾಲಯ ಕೆಫೆಯಿಂದ ಹಜರತ್ ಖ್ವಾಜಾ ಬಂದೇನವಾಜ್ ಕಾಲೋನಿ ಮಾರ್ಗವಾಗಿ ಮಿನಿ ವಿಧಾನಸೌಧದವರೆಗೆ, ಮತ್ತು ಬಸವೇಶ್ವರ ಸರ್ಕಲ್‌ನಿಂದ ಶಕ್ತಿನಗರ ಹಾಗೂ ರೈಲ್ವೆ ಸರ್ಕಲ್ ವರೆಗಿನ ಪ್ರದೇಶಗಳಲ್ಲಿ ಈ ಸಮಸ್ಯೆ ಕಂಡುಬಂದಿದೆ ಎಂದು ಶಬ್ಬೀರ್ ಅಹ್ಮದ್ ಹೌದಾದಿ ಗುರುತಿಸಿದ್ದಾರೆ. ಸಾರ್ವಜನಿಕರ ತೆರಿಗೆ ಹಣದ ಸದ್ಬಳಕೆಯೊಂದಿಗೆ ರಾಯಚೂರನ್ನು ಸುಂದರ ಹಾಗೂ ಹಸಿರು ನಗರವನ್ನಾಗಿ ರೂಪಿಸಲು, ಅರಣ್ಯ ಇಲಾಖೆ, ಜೆಸ್ಕಾಂ ಹಾಗೂ ಮಹಾನಗರ ಪಾಲಿಕೆ ಜಂಟಿಯಾಗಿ ಮುಂದಾಲೋಚನೆಯೊಂದಿಗೆ ಸಸಿ ನೆಡುವ ಯೋಜನೆ ರೂಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಮನವಿ ಪತ್ರದ ಪ್ರತಿಗಳನ್ನು ರಾಯಚೂರು ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಜೆಸ್ಕಾಂನ ಪ್ರಭಾರಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಿಗೂ ಸೂಕ್ತ ಕ್ರಮಕ್ಕಾಗಿ ಸಲ್ಲಿಸಲಾಗಿದ್ದು, ಮನವಿ ಸಲ್ಲಿಸುವ ಸಂದರ್ಭದಲ್ಲಿ AIMIM ಮುಖಂಡರಾದ ಶಹಬಾಜ್ ಖಾನ್, ತನ್ವೀರ್ ಅಹ್ಮದ್, ಮೊಹಮ್ಮದ್ ಸೋಫಿ ಹಾಗೂ ಆಸಿಫ್ ಬಾಬಾ ಉಪಸ್ಥಿತರಿದ್ದರು.3
- ಬೆಂಗಳೂರಿನಲ್ಲಿ ಕರ್ನಾಟಕ ಜನತಾ ಸೇನಾ ದಳ ಆಯೋಜಿಸಿದ್ದ ಸಂಗಮ ಸಮಾವೇಶ ಕಾರ್ಯಕ್ರಮದಲ್ಲಿ ಸಮಾಜಸೇವಕ ಹಾಗೂ ಪತ್ರಕರ್ತ ನಜೀರ್ ಅಹ್ಮದ್ ಚೋರಗಸ್ತಿ ಅವರಿಗೆ 'ಭಾರತ ಬುದ್ಧ ಶ್ರೀ ರಾಷ್ಟ್ರೀಯ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಅವರ ಸಮಾಜಮುಖಿ ಸೇವೆ, ಪತ್ರಿಕೋದ್ಯಮ ಕ್ಷೇತ್ರದ ಕೊಡುಗೆ ಹಾಗೂ ಜನಪರ ಕಾರ್ಯಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕಾರ್ಯಕ್ರಮದ ಸಾನ್ನಿಧ್ಯವನ್ನು ಬೆಂಗಳೂರಿನ ಶ್ರೀ ಬೇಲಿ ಮಠ ಮಹಾಸಂಸ್ಥಾನದ ಶ್ರೀ ಶ್ರೀ ಪರಮಪೂಜ್ಯ ಶ್ರೀ ನಿ.ಪ್ರ. ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ವಹಿಸಿದ್ದರು. ಸನ್ಮಾನ್ಯ ಶ್ರೀ ಪುರುಷೋತ್ತಮ ಬಿಳಿಮಳೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು, ಹಾಗೂ ಬೆಂಗಳೂರು ಉಪ ಪೊಲೀಸ್ ಆಯುಕ್ತರಾದ ಶ್ರೀ ಮಂಜುನಾಥ ಬಾಬು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜನತಾ ಸೇನಾ ದಳದ ಗೌರವಾಧ್ಯಕ್ಷರು, ಖ್ಯಾತ ಪತ್ರಕರ್ತರು, ನಾಟಕಕಾರರು, ಲೇಖಕರು, ನಿರ್ದೇಶಕರು, ಚಲನಚಿತ್ರ ತಂತ್ರಜ್ಞರು, ಪರಿಸರ ಪ್ರೇಮಿಗಳು, ಚಿಂತಕರು, ಸಾಹಿತಿಗಳು, ಸಮಾಜಸೇವಕರು ಹಾಗೂ ವಾಸ್ತು-ಜ್ಯೋತಿಷ್ಯ ತಜ್ಞರಾದ ಡಾ. ಕೆಂಚನೂರ್ ಶಂಕರ್ ಸ್ವಾಗತ ಭಾಷಣ ನೆರವೇರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಜನತಾ ಸೇನಾ ದಳದ ರಾಜ್ಯಾಧ್ಯಕ್ಷರಾದ ಶ್ರೀ ಎಚ್. ಸದಾಶಿವ, ಜಿಲ್ಲಾ ಕಾರ್ಮಿಕ ಅಧ್ಯಕ್ಷರಾದ ಡಾ. ಸಿದ್ದು ಕಲ್ಲೂರ್, ಶ್ರೀ ಆನಂದ ಜಾದವ್ ಸೇರಿದಂತೆ ಹಲವು ಗಣ್ಯರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಹಾಗೂ ಸಮಾಜಸೇವಕರು ಉಪಸ್ಥಿತರಿದ್ದರು.1