ಜೂನ್ 22ರಂದು ಬೆಳಗಾವಿಯಲ್ಲಿ ಕನ್ನಡ ಕಡ್ಡಾಯದ ವಿರುದ್ಧ ಎಂಇಎಸ್ ನಾಯಕರು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಅನುಮತಿ ನೀಡಬಾರದೆಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಚಿಕ್ಕೋಡಿ ಘಟಕವು ಉಪವಿಭಾಗೀಯ ದಂಡಾಧಿಕಾರಿಗಳ ಮೂಲಕ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಕಳೆದ ಐದು ದಶಕಗಳಿಂದ ಗಡಿಭಾಗದ ಬೆಳಗಾವಿಯಲ್ಲಿ ಎಂಇಎಸ್ ನಾಯಕರು ಭಾಷಾ ರಾಜಕಾರಣ ನಡೆಸುತ್ತಾ, ಮರಾಠಿ ಭಾಷಿಕರನ್ನು ಪ್ರಚೋದಿಸಿ ಕರ್ನಾಟಕ ಸರ್ಕಾರ ಹಾಗೂ ಕನ್ನಡಿಗರ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಎಂದು ಕರವೇ ಆರೋಪಿಸಿದೆ. ನಾಡದ್ರೋಹಿ ಎಂಇಎಸ್ ನಾಯಕರನ್ನು ತಕ್ಷಣವೇ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಗಡಿಪಾರು ಮಾಡಬೇಕೆಂದೂ ಕರವೇ ಆಗ್ರಹಿಸಿದೆ. ಕರವೇ ಚಿಕ್ಕೋಡಿ ತಾಲ್ಲೂಕು ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ, ಬೆಳಗಾವಿ ಕನ್ನಡದ ನೆಲ, ಕರ್ನಾಟಕದ ಕಿರೀಟವಾಗಿದ್ದು, ಇಲ್ಲಿ ಕನ್ನಡವೇ ಸಾರ್ವಭೌಮವಾಗಿದೆ. ಕನ್ನಡ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಗೆ ಗೌರವ ನೀಡುವುದು ಇಲ್ಲಿಯ ನಿವಾಸಿಗಳ ಕರ್ತವ್ಯವಾಗಿದೆ. ಜೂನ್ 22 ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿರುವ ಎಂಇಎಸ್ ನಾಯಕರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಬೇಕು ಹಾಗೂ ಅವರಿಗೆ ಯಾವುದೇ ಕಾರಣಕ್ಕೂ ಪ್ರತಿಭಟನೆಗೆ ಅನುಮತಿ ನೀಡಬಾರದು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು. ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಕನ್ನಡ ನೆಲ, ಜಲ ಸಂಪನ್ಮೂಲಗಳನ್ನು ಮತ್ತು ಕರ್ನಾಟಕ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಕನ್ನಡಕ್ಕೆ ದ್ರೋಹ ಮಾಡುವ ಎಂಇಎಸ್‌ನ ಕಾರ್ಯ ನಾಡದ್ರೋಹಿಯಾಗಿದೆ. ರಾಜಕೀಯ ಒತ್ತಡಕ್ಕೆ ಮಣಿದು ಬೆಳಗಾವಿ ಜಿಲ್ಲಾಡಳಿತ ಜೂನ್ 22ರಂದು ನಾಡದ್ರೋಹಿ ಎಂಇಎಸ್‌ಗೆ ಪ್ರತಿಭಟನೆಗೆ ಅನುಮತಿ ನೀಡಿದರೆ, ಅದಕ್ಕೆ ಪ್ರತಿಯಾಗಿ ಕರವೇ ಅಂದೇ ಬೆಳಗಾವಿಯಲ್ಲಿ “ಕನ್ನಡವೇ ಸಾರ್ವಭೌಮ” ಎಂಬ ಕನ್ನಡದ ಸ್ವಾಭಿಮಾನಿ ರ‍್ಯಾಲಿಯನ್ನು ನಡೆಸಲಿದೆ ಎಂದು ಎಚ್ಚರಿಸಿದರು. ಈ ರ‍್ಯಾಲಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಲಕ್ಷಾಂತರ ಕರವೇ ಕಾರ್ಯಕರ್ತರು ಬೆಳಗಾವಿಗೆ ಆಗಮಿಸಲಿದ್ದು, ಇದು ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆಯಿದೆ ಎಂದು ಅವರು ವಿವರಿಸಿದರು. ಈ ಸಂದರ್ಭದಲ್ಲಿ ಮೋಹನ ಪಾಟೀಲ, ಲಕ್ಷ್ಮಿಕಾಂತ ಖೋತ, ಅಮೂಲ ನಾವಿ, ರಮೇಶ ಡಂಗೇರ, ಅನೀಲ ನಾವಿ, ಚಿದಾನಂದ ಶಿರೋಳೆ, ಶಂಕರ ಅವಡಖಾನ, ಖಾನಪ್ಪ ಬಾಡಕರ, ದುಂಡಪ್ಪ ಚೌಗಲಾ, ಶುಭಂ ಕದಂ, ಸುರೇಶ ಖದ್ದಿ, ರಫಿಕ್ ಪಠಾಣ, ದುಂಡಪ್ಪ ಬಡಿಗೇರ, ರುದ್ರಯ್ಯ ಹೀರೆಮಠ, ಯಾಸೀನ್ ಜಮಾದಾರ ಸೇರಿದಂತೆ ಹಲವು ಕನ್ನಡಪರ ಕಾರ್ಯಕರ್ತರು ಉಪಸ್ಥಿತರಿದ್ದರು.

- ಬೆಳಗಾವಿಯ ಹುಕ್ಕೇರಿಯಲ್ಲಿ ಮುಸ್ಲಿಂ 11 ಜಮಾತ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಬಲವಾಗಿ ಒತ್ತಾಯಿಸಲಾಯಿತು.1
- ಜೂನ್ 22ರಂದು ಬೆಳಗಾವಿಯಲ್ಲಿ ಕನ್ನಡ ಕಡ್ಡಾಯದ ವಿರುದ್ಧ ಎಂಇಎಸ್ ನಾಯಕರು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಅನುಮತಿ ನೀಡಬಾರದೆಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಚಿಕ್ಕೋಡಿ ಘಟಕವು ಉಪವಿಭಾಗೀಯ ದಂಡಾಧಿಕಾರಿಗಳ ಮೂಲಕ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಕಳೆದ ಐದು ದಶಕಗಳಿಂದ ಗಡಿಭಾಗದ ಬೆಳಗಾವಿಯಲ್ಲಿ ಎಂಇಎಸ್ ನಾಯಕರು ಭಾಷಾ ರಾಜಕಾರಣ ನಡೆಸುತ್ತಾ, ಮರಾಠಿ ಭಾಷಿಕರನ್ನು ಪ್ರಚೋದಿಸಿ ಕರ್ನಾಟಕ ಸರ್ಕಾರ ಹಾಗೂ ಕನ್ನಡಿಗರ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಎಂದು ಕರವೇ ಆರೋಪಿಸಿದೆ. ನಾಡದ್ರೋಹಿ ಎಂಇಎಸ್ ನಾಯಕರನ್ನು ತಕ್ಷಣವೇ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಗಡಿಪಾರು ಮಾಡಬೇಕೆಂದೂ ಕರವೇ ಆಗ್ರಹಿಸಿದೆ. ಕರವೇ ಚಿಕ್ಕೋಡಿ ತಾಲ್ಲೂಕು ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ, ಬೆಳಗಾವಿ ಕನ್ನಡದ ನೆಲ, ಕರ್ನಾಟಕದ ಕಿರೀಟವಾಗಿದ್ದು, ಇಲ್ಲಿ ಕನ್ನಡವೇ ಸಾರ್ವಭೌಮವಾಗಿದೆ. ಕನ್ನಡ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಗೆ ಗೌರವ ನೀಡುವುದು ಇಲ್ಲಿಯ ನಿವಾಸಿಗಳ ಕರ್ತವ್ಯವಾಗಿದೆ. ಜೂನ್ 22 ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿರುವ ಎಂಇಎಸ್ ನಾಯಕರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಬೇಕು ಹಾಗೂ ಅವರಿಗೆ ಯಾವುದೇ ಕಾರಣಕ್ಕೂ ಪ್ರತಿಭಟನೆಗೆ ಅನುಮತಿ ನೀಡಬಾರದು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು. ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಕನ್ನಡ ನೆಲ, ಜಲ ಸಂಪನ್ಮೂಲಗಳನ್ನು ಮತ್ತು ಕರ್ನಾಟಕ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಕನ್ನಡಕ್ಕೆ ದ್ರೋಹ ಮಾಡುವ ಎಂಇಎಸ್‌ನ ಕಾರ್ಯ ನಾಡದ್ರೋಹಿಯಾಗಿದೆ. ರಾಜಕೀಯ ಒತ್ತಡಕ್ಕೆ ಮಣಿದು ಬೆಳಗಾವಿ ಜಿಲ್ಲಾಡಳಿತ ಜೂನ್ 22ರಂದು ನಾಡದ್ರೋಹಿ ಎಂಇಎಸ್‌ಗೆ ಪ್ರತಿಭಟನೆಗೆ ಅನುಮತಿ ನೀಡಿದರೆ, ಅದಕ್ಕೆ ಪ್ರತಿಯಾಗಿ ಕರವೇ ಅಂದೇ ಬೆಳಗಾವಿಯಲ್ಲಿ “ಕನ್ನಡವೇ ಸಾರ್ವಭೌಮ” ಎಂಬ ಕನ್ನಡದ ಸ್ವಾಭಿಮಾನಿ ರ‍್ಯಾಲಿಯನ್ನು ನಡೆಸಲಿದೆ ಎಂದು ಎಚ್ಚರಿಸಿದರು. ಈ ರ‍್ಯಾಲಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಲಕ್ಷಾಂತರ ಕರವೇ ಕಾರ್ಯಕರ್ತರು ಬೆಳಗಾವಿಗೆ ಆಗಮಿಸಲಿದ್ದು, ಇದು ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆಯಿದೆ ಎಂದು ಅವರು ವಿವರಿಸಿದರು. ಈ ಸಂದರ್ಭದಲ್ಲಿ ಮೋಹನ ಪಾಟೀಲ, ಲಕ್ಷ್ಮಿಕಾಂತ ಖೋತ, ಅಮೂಲ ನಾವಿ, ರಮೇಶ ಡಂಗೇರ, ಅನೀಲ ನಾವಿ, ಚಿದಾನಂದ ಶಿರೋಳೆ, ಶಂಕರ ಅವಡಖಾನ, ಖಾನಪ್ಪ ಬಾಡಕರ, ದುಂಡಪ್ಪ ಚೌಗಲಾ, ಶುಭಂ ಕದಂ, ಸುರೇಶ ಖದ್ದಿ, ರಫಿಕ್ ಪಠಾಣ, ದುಂಡಪ್ಪ ಬಡಿಗೇರ, ರುದ್ರಯ್ಯ ಹೀರೆಮಠ, ಯಾಸೀನ್ ಜಮಾದಾರ ಸೇರಿದಂತೆ ಹಲವು ಕನ್ನಡಪರ ಕಾರ್ಯಕರ್ತರು ಉಪಸ್ಥಿತರಿದ್ದರು.1
- ಚಿಕ್ಕೋಡಿ ಪಟ್ಟಣದ ಗುರುವಾರ ಪೇಟೆಯಲ್ಲಿರುವ ಶ್ರೀಮತಿ ಜಯಶ್ರೀ ಯಾದವ್ ಅವರಿಗೆ ಸೇರಿದ ಬಟ್ಟೆ ಅಂಗಡಿಯಲ್ಲಿ ನಿನ್ನೆ ರಾತ್ರಿ ವಿದ್ಯುತ್ ಅವಘಡ ಸಂಭವಿಸಿ, ಬೆಂಕಿ ಕಾಣಿಸಿಕೊಂಡ ಕಾರಣ ಅಂಗಡಿಯು ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಈ ದುರ್ಘಟನೆಯ ಹಿನ್ನೆಲೆಯಲ್ಲಿ, ಶಾಸಕರಾದ ಶ್ರೀ ಗಣೇಶ್ ಅಣ್ಣಾ ಹುಕ್ಕೇರಿ ಅವರ ಧರ್ಮಪತ್ನಿ ಶ್ರೀಮತಿ ಸ್ವಪ್ನಾಲಿ ಹುಕ್ಕೇರಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ವೇಳೆ ಅವರು ಅಂಗಡಿ ಮಾಲೀಕರು ಮತ್ತು ಅವರ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರಲ್ಲದೆ, ಈ ಸಂಕಷ್ಟದ ಸಮಯದಲ್ಲಿ ಧೈರ್ಯದಿಂದಿರಲು ಮನವಿ ಮಾಡಿದರು. ಅಲ್ಲದೆ, ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾಯಿತು. ಈ ದುರ್ಘಟನೆಯಿಂದ ನೋವುಂಡಿರುವ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಲಾಗಿದೆ.1
- ನ್ಯಾಯ, ಸಮಾನತೆ ಮತ್ತು ಬಾಂಧವ್ಯದ ಕನಸನ್ನು ನನಸಾಗಿಸುವ ಸಲುವಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಒಬ್ಬ ಮಹಾಮಾನವನ ಬಗ್ಗೆ ಈ ಪೋಸ್ಟ್ ತಿಳಿಸುತ್ತದೆ.1
- ಕಲಘಟಗಿ ತಾಲ್ಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮದಲ್ಲಿ ಶುಕ್ರವಾರ ಮಳೆರಾಯನ ಆಗಮನಕ್ಕಾಗಿ ಗ್ರಾಮಸ್ಥರು ವಿಶೇಷವಾಗಿ ಕಪ್ಪೆಗಳ ಮದುವೆ ನೆರವೇರಿಸಿ ಪೂಜೆ ಸಲ್ಲಿಸಿದ್ದು, ಇಡೀ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮದುವೆಗಾಗಿ ಬೆಳಿಗ್ಗೆ ಅಂಬರೀಷ್ ಕಲಬಾವಿ ಅವರ ಮನೆಯಲ್ಲಿ ಹೆಣ್ಣು ಕಪ್ಪೆಗೆ ಹಣ್ಣು ಇಡಲಾಯಿತು. ನಂತರ ಮಹೇಶ ಹೊಸಮನಿ ಅವರ ಮನೆಯಲ್ಲಿ ಗಂಡು ಕಪ್ಪೆಗೆ ಊಟ ಮಾಡಿ ಬರುವಂತಹ ವಿಶಿಷ್ಟ ಕಾರ್ಯಕ್ರಮವನ್ನು ನಡೆಸಲಾಯಿತು. ಮದುವೆ ಶಾಸ್ತ್ರದ ಭಾಗವಾಗಿ, ಗ್ರಾಮದ ಪ್ರಮುಖ ಓಣಿಗಳಲ್ಲಿ ಹಾಲ ಕಂಬ ತಂದು, ಕರಡಿ ಮಜಲು ನಡೆಸಲಾಯಿತು. ಮಹಿಳೆಯರು ಆರತಿ ಹಿಡಿದು ಕಪ್ಪೆಗಳ ಮೆರವಣಿಗೆ ಮಾಡಿದರು. ನಂತರ ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ಅರಶಿಣ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಹಿಂದೂ ಸಮಾಜದ ಮದುವೆ ಸಂಪ್ರದಾಯದ ಪ್ರಕಾರ ಕಪ್ಪೆಗಳನ್ನು ವಧು-ವರರಂತೆ ಅಲಂಕರಿಸಲಾಗಿತ್ತು. ಮದುವೆ ಗಂಟು ಕಟ್ಟಿ, ಹೆಣ್ಣು ಹಾಗೂ ಗಂಡು ಕಪ್ಪೆಗಳನ್ನು ಜೊತೆಯಲ್ಲಿ ಇರಿಸಿ ಅರಶಿಣ, ಕುಂಕುಮ ಹಚ್ಚಲಾಯಿತು. ಮಹಿಳೆಯರು, ಮಕ್ಕಳು ಹಾಗೂ ಹಿರಿಯರು ಸೇರಿ ಒಬ್ಬರಿಗೊಬ್ಬರು ಅರಶಿಣ ಎರಚಾಡಿ ಸಂಭ್ರಮಿಸಿದರು. ಐದು ಗಿತ್ತಿಯರು ಆರತಿ ಬೆಳಗಿ ಸುರಿಗಿ ನೀರು ಸುರಿಸಿದರು. ತದನಂತರ ಹೆಣ್ಣು ಕಪ್ಪೆಗೆ ಪತ್ತಲು, ಗಂಡು ಕಪ್ಪೆಗೆ ಬಟ್ಟೆ ತೊಡಿಸಿ, ಬಾಶಿಂಗ್ ಹಾಕಿ ಹೂವು ಮೂಡಿಸಿ, ಬಳೆ ತೊಡಿಸಿ, ಅರಶಿಣ ಬೇರು ಹಾಗೂ ಎಲೆಯಿಂದ ಕಂಕಣ ಭಾಗ್ಯ ಕಟ್ಟಿ ಮದುವೆ ಕಾರ್ಯವನ್ನು ಪೂರ್ಣಗೊಳಿಸಲಾಯಿತು. ಆದಷ್ಟು ಬೇಗನೆ ಮಳೆರಾಯ ಭೂಮಿಗೆ ಆಗಮಿಸಲಿ ಎಂದು ಗ್ರಾಮದ ಎಲ್ಲರೂ ದೇವರಲ್ಲಿ ಪ್ರಾರ್ಥನೆ ಮಾಡಿದರು. ಈ ಕಪ್ಪೆ ಮದುವೆ ಅಂಗವಾಗಿ ಗ್ರಾಮಸ್ಥರು ಅನ್ನಪ್ರಸಾದವನ್ನೂ ಏರ್ಪಡಿಸಿದ್ದರು. ಬ್ರಹ್ಮಲಿಂಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ವಿ.ಎಸ್. ಬೆಣ್ಣಿ ಅವರು, ಮಳೆ ಬರುತ್ತದೆ ಎಂಬ ನಂಬಿಕೆಯಿಂದ ಹಿರಿಯರ ಕಾಲದ ಪದ್ಧತಿಯಂತೆ ಗಂಡು ಮತ್ತು ಹೆಣ್ಣು ಕಪ್ಪೆ ಜೋಡಿ ಲಗ್ನ ಕಾರ್ಯವನ್ನು ಭಕ್ತಿಯ ಜೊತೆಗೆ ವಿಜೃಂಭಣೆಯಿಂದ ನೆರವೇರಿಸಲಾಗಿದೆ ಎಂದು ತಿಳಿಸಿದರು.1
- ಆಝಾದ್ ನಗರದಲ್ಲಿ, ಎಳೆನೀರು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಯುವಕನೊಬ್ಬ ನೇಣು ಬಿಗಿದು ಜೀವಾಂತ್ಯ ಮಾಡಿಕೊಂಡಿದ್ದಾನೆ.1
- ಅಥಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂನ್ 20, 2026 ರಂದು 'ನಶಾ ಮುಕ್ತ ದಿನ'ದ ಅಂಗವಾಗಿ 'ನಶಾ ಮುಕ್ತ ಭಾರತ' ಅಭಿಯಾನದ ಅಡಿಯಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ, ಕಾಲೇಜಿನ ಪ್ರಾಚಾರ್ಯರಾದ ವಿಲಾಸ ಕಾಂಬಳೆ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಮಾದಕ ವಸ್ತುಗಳು ವ್ಯಕ್ತಿಯನ್ನು ಮಾತ್ರವಲ್ಲದೆ, ಇಡೀ ಕುಟುಂಬ ಮತ್ತು ಸಮಾಜವನ್ನು ವಿನಾಶದತ್ತ ಕೊಂಡೊಯ್ಯುತ್ತವೆ ಎಂದು ಎಚ್ಚರಿಸಿದ ಅವರು, ಯುವಜನತೆಯು ಇಂತಹ ದುಶ್ಚಟಗಳಿಂದ ದೂರವಿದ್ದು, ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಜವಾಬ್ದಾರಿಯುತ ನಾಗರಿಕರಾಗಿ ದೇಶವನ್ನು ಮಾದಕ ಮುಕ್ತವನ್ನಾಗಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯ ಎಂದು ಪ್ರಾಚಾರ್ಯರು ಒತ್ತಿ ಹೇಳಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆ ಮಾಡುವುದಿಲ್ಲ ಮತ್ತು ಇತರರನ್ನು ಅದರಿಂದ ದೂರವಿರುವಂತೆ ಪ್ರೇರೇಪಿಸುತ್ತೇವೆ ಎಂದು ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಈ ಜಾಗೃತಿ ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.1
- ಮಹಾನ್ ನಾಯಕ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಜ್ಞಾನವೇ ಶಕ್ತಿ ಮತ್ತು ಶಿಕ್ಷಣವೇ ಸ್ವಾತಂತ್ರ್ಯದ ದಾರಿ ಎಂದು ಸಾರಿದ ಮಹಾನ್ ಚೇತನವಾಗಿದ್ದಾರೆ. ಅವರು ಸಮಾನತೆ, ಸ್ವಾಭಿಮಾನ ಮತ್ತು ಸಾಮಾಜಿಕ ನ್ಯಾಯದ ಸಂಕೇತವಾಗಿದ್ದು, 'ಕಲಿಯಿರಿ, ಸಂಘಟಿತರಾಗಿ, ಹೋರಾಡಿರಿ' ಎಂಬ ಸಂದೇಶದ ಮೂಲಕ ಕೋಟ್ಯಂತರ ಜನರಿಗೆ ದಾರಿ ತೋರಿದ್ದಾರೆ. ಭಾರತದ ಸಂವಿಧಾನದ ಶಿಲ್ಪಿ ಮತ್ತು ಶೋಷಿತರ ಧ್ವನಿಯಾದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಶತಶತ ನಮನಗಳನ್ನು ಸಲ್ಲಿಸಲಾಗಿದೆ. ಅಜ್ಞಾನವನ್ನು ದೂರ ಮಾಡಿ, ಜ್ಞಾನದ ಬೆಳಕನ್ನು ಹರಡಿದ ಯುಗಪುರುಷರಾದ ಅವರು, ನ್ಯಾಯ, ಸಮಾನತೆ ಮತ್ತು ಬಾಂಧವ್ಯದ ಕನಸನ್ನು ನನಸಾಗಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾಮಾನವರು. ಅವರ ಆದರ್ಶದ ಹಾದಿಯಲ್ಲಿ ಸಾಗುತ್ತಾ, ಜೈ ಭೀಮ್ ಎಂದು ಘೋಷಿಸಲಾಗುವುದು.1