Shuru
Apke Nagar Ki App…
ದಾವಣಗೆರೆ (ಚನ್ನಗಿರಿ) : ಕೆರೆಗೆ ಈಜಲು ಇಳಿದ ನಾಲ್ವರಲ್ಲಿ ಇಬ್ಬರ ಶವ ಪತ್ತೆ ಹರಿಹರ/ಚನ್ನಗಿರಿ: ಕೆರೆಬೀಳಚಿ ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಯುವಕರಲ್ಲಿ ಇಬ್ಬರು ನೀರು ಪಾಲಾದ ದುರ್ಘಟನೆ ಸಂಭವಿಸಿದ್ದು, ಇದೀಗ ಇಬ್ಬರ ಶವಗಳು ಪತ್ತೆಯಾಗಿವೆ. ತಂದೆಯ ಅಂತ್ಯಸಂಸ್ಕಾರ ಬಳಿಕ ಸೈಯದ್ ನಯಾಜ್ ತನ್ನ ಸ್ನೇಹಿತರಾದ ಶಾದಬ್, ಖಾಲಿದ್ ಅಹ್ಮದ್ ಹಾಗೂ ಮಕ್ಸುದ್ ಜೊತೆ ಸುಳೆಕೆರೆ ಕಡೆ ತೆರಳಿ ಕೆರೆಯಲ್ಲಿ ಈಜಲು ಇಳಿದಿದ್ದರು. ಈ ವೇಳೆ ಈಜಲು ಬಾರದ ಕಾರಣ ಇಬ್ಬರು ನೀರಿನಲ್ಲಿ ಕೊಚ್ಚಿಹೋಗಿದ್ದರು. ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದರು. ನಂತರ ನಡೆದ ಶೋಧ ಕಾರ್ಯದಲ್ಲಿ ಇಬ್ಬರ ಶವಗಳನ್ನು ಪತ್ತೆ ಹಚ್ಚಲಾಗಿದೆ. NDRF ತಂಡ ಹಾಗೂ ಸ್ಥಳೀಯ ಯುವಕರು ಶೋಧ ಕಾರ್ಯದಲ್ಲಿ ತೊಡಗಿದ್ದರು. ಈ ಕುರಿತು ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Nandheesh kumar ac
ದಾವಣಗೆರೆ (ಚನ್ನಗಿರಿ) : ಕೆರೆಗೆ ಈಜಲು ಇಳಿದ ನಾಲ್ವರಲ್ಲಿ ಇಬ್ಬರ ಶವ ಪತ್ತೆ ಹರಿಹರ/ಚನ್ನಗಿರಿ: ಕೆರೆಬೀಳಚಿ ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಯುವಕರಲ್ಲಿ ಇಬ್ಬರು ನೀರು ಪಾಲಾದ ದುರ್ಘಟನೆ ಸಂಭವಿಸಿದ್ದು, ಇದೀಗ ಇಬ್ಬರ ಶವಗಳು ಪತ್ತೆಯಾಗಿವೆ. ತಂದೆಯ ಅಂತ್ಯಸಂಸ್ಕಾರ ಬಳಿಕ ಸೈಯದ್ ನಯಾಜ್ ತನ್ನ ಸ್ನೇಹಿತರಾದ ಶಾದಬ್, ಖಾಲಿದ್ ಅಹ್ಮದ್ ಹಾಗೂ ಮಕ್ಸುದ್ ಜೊತೆ ಸುಳೆಕೆರೆ ಕಡೆ ತೆರಳಿ ಕೆರೆಯಲ್ಲಿ ಈಜಲು ಇಳಿದಿದ್ದರು. ಈ ವೇಳೆ ಈಜಲು ಬಾರದ ಕಾರಣ ಇಬ್ಬರು ನೀರಿನಲ್ಲಿ ಕೊಚ್ಚಿಹೋಗಿದ್ದರು. ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದರು. ನಂತರ ನಡೆದ ಶೋಧ ಕಾರ್ಯದಲ್ಲಿ ಇಬ್ಬರ ಶವಗಳನ್ನು ಪತ್ತೆ ಹಚ್ಚಲಾಗಿದೆ. NDRF ತಂಡ ಹಾಗೂ ಸ್ಥಳೀಯ ಯುವಕರು ಶೋಧ ಕಾರ್ಯದಲ್ಲಿ ತೊಡಗಿದ್ದರು. ಈ ಕುರಿತು ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
More news from ಕರ್ನಾಟಕ and nearby areas
- ಹರಿಹರ/ಚನ್ನಗಿರಿ: ಕೆರೆಬೀಳಚಿ ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಯುವಕರಲ್ಲಿ ಇಬ್ಬರು ನೀರು ಪಾಲಾದ ದುರ್ಘಟನೆ ಸಂಭವಿಸಿದ್ದು, ಇದೀಗ ಇಬ್ಬರ ಶವಗಳು ಪತ್ತೆಯಾಗಿವೆ. ತಂದೆಯ ಅಂತ್ಯಸಂಸ್ಕಾರ ಬಳಿಕ ಸೈಯದ್ ನಯಾಜ್ ತನ್ನ ಸ್ನೇಹಿತರಾದ ಶಾದಬ್, ಖಾಲಿದ್ ಅಹ್ಮದ್ ಹಾಗೂ ಮಕ್ಸುದ್ ಜೊತೆ ಸುಳೆಕೆರೆ ಕಡೆ ತೆರಳಿ ಕೆರೆಯಲ್ಲಿ ಈಜಲು ಇಳಿದಿದ್ದರು. ಈ ವೇಳೆ ಈಜಲು ಬಾರದ ಕಾರಣ ಇಬ್ಬರು ನೀರಿನಲ್ಲಿ ಕೊಚ್ಚಿಹೋಗಿದ್ದರು. ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದರು. ನಂತರ ನಡೆದ ಶೋಧ ಕಾರ್ಯದಲ್ಲಿ ಇಬ್ಬರ ಶವಗಳನ್ನು ಪತ್ತೆ ಹಚ್ಚಲಾಗಿದೆ. NDRF ತಂಡ ಹಾಗೂ ಸ್ಥಳೀಯ ಯುವಕರು ಶೋಧ ಕಾರ್ಯದಲ್ಲಿ ತೊಡಗಿದ್ದರು. ಈ ಕುರಿತು ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.1
- Post by Suresh Belagere1
- ಏ.25 ಮತ್ತು 26 ರಂದು ಕೃಷಿ ಪ್ರಾಯೋಗಿಕ ತರಬೇತಿ ಶಿಭಿರ ಆಯೋಜಿಸಲಾಗಿದೆ. ಕೃಷಿ ವಿಶ್ವ ವಿದ್ಯಾಲಯದಲ್ಲಿ ನಾನಾ ವಿಭಾಗಗಳಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಚಿತ್ರದುರ್ಗ ನಗರದ ಎ.ಪಿ.ಎಂ.ಸಿ ಆವರಣದಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಇದೇ ಏಪ್ರಿಲ್ 25 ಮತ್ತು 26ರಂದು ಪ್ರಾಯೋಗಿಕ ತರಬೇತಿ ಆಯೋಜಿಸಲಾಗಿದೆ. ಕೃಷಿ, ತೋಟಗಾರಿಕೆ, ರೇಷ್ಮೆ ಸಸಿಗಳು, ಹಣ್ಣುತರಕಾರಿ, ಬಿತ್ತನೆ ಬೀಜಗಳು, ಆಹಾರ ಧಾನ್ಯ, ಕೃಷಿ ಪರಿಕರಗಳ ಬಗ್ಗೆ ತರಬೇತಿಯಲ್ಲಿ ಪರಿಚಯಿಸಲಾಗುವುದು.1
- ಶಿವಮೊಗ್ಗ: ಭದ್ರಾವತಿ ನಗರದ ಹೃದಯ ಭಾಗದಲ್ಲಿ ಕ್ಷೇತ್ರ ಶಿಕ್ಷಣಾ ಧಿಕಾರಿಗಳ ಕಛೇರಿ ಸಮೀಪ ನೂತನವಾಗಿ ನಿರ್ಮಾಣಗೊಂಡಿ ರುವ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್ ಭವನ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಉದ್ಘಾಟನೆ ಗೊಳಿಸದೆ ಅವಮಾನಗೊಳಿಸಿರುವುದು ಖಂಡನೀಯ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಆಕ್ರೋಶ ವ್ಯಕ್ತಪಡಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೂತನ ಅಂಬೇಡ್ಕರ್ ಭವನ ಮುಖ್ಯಮಂತ್ರಿ ಸಿದ್ದರಾ ಮಯ್ಯರವರು ಉದ್ಘಾಟಿಸ ಬೇಕೆಂಬುದು ಕ್ಷೇತ್ರದ ನಾಗರೀಕರ ಬೇಡಿಕೆಯಾಗಿತ್ತು. ಸಿದ್ದರಾಮಯ್ಯರವರು ಪಕ್ಕದ ತರೀಕೆರೆ ತಾಲೂಕಿನ ಶಾಸಕರ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿ ದ್ದರು. ಅಲ್ಲದೆ ಬಾಳೆ ಹೊನ್ನೂರಿನ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸಿ ದ್ದಾರೆ. ಆದರೆ ಈ ಕ್ಷೇತ್ರಕ್ಕೆ ಆಗಮಿ ಸದೆ ಅಂಬೇಡ್ಕರ್‌ರವರಿಗೆ ಅವಮಾನಗೊಳಿಸಿದ್ದಾರೆ. ಕ್ಷೇತ್ರದ ಎಂಪಿಎಂ ಅಭಿವೃದ್ಧಿಪಡಿಸುವು ದಾಗಿ ಭರವಸೆ ನೀಡಿದ್ದ ಸಿದ್ದರಾಮ ಯ್ಯರವರು ಇದುವರೆಗೂ ಅಭಿವೃದ್ಧಿಪಡಿಸದೆ ನಿರ್ಲಕ್ಷ್ಯವಹಿಸಿ ರುವುದು ಖಂಡನೀಯ. ಪದೇ ಪದೇ ಕ್ಷೇತ್ರದ ಜನರಿಗೆ ಅವಮಾನ ಗೊಳಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯರವರ ವಿರುದ್ಧ ಪ್ರತಿಭಟನೆ ನಡೆಸುವು ದಾಗಿ ಎಚ್ಚರಿಸಿದರು. ಅಂಬೇಡ್ಕರ್ ಭವನ ನಿರ್ಮಾಣ ದಲ್ಲಿ ಪ್ರಮುಖ ಪಾತ್ರವಹಿಸಿರುವ ಮಾಜಿ ಶಾಸಕ ಎಂ.ಜೆ ಅಪ್ಪಾಜಿ, ಹಾಲಿ ಶಾಸಕ ಬಿ.ಕೆ ಸಂಗಮೇಶ್ವರ್, ಸಂಸದ ಬಿ.ವೈ ರಾಘವೇಂದ್ರ, ಸಮಾಜ ಕಲ್ಯಾಣ ಇಲಾಖೆ ಹಾಗು ನಗರಸಭೆ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಅಲ್ಲದೆ ಭವನ ನಿರ್ಮಾಣಕ್ಕೆ ಹೋರಾಟ ನಡೆಸಿದ ಹಾಗು ಉದ್ಘಾಟನೆ ಕಾರ್ಯಕ್ರಮ ಯಶಸ್ವಿಗೊಳಿಸಿದ ಪ್ರತಿಯೊಬ್ಬ ರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಉದ್ಘಾಟನಾ ಕಾರ್ಯ ಕ್ರಮದಲ್ಲಿ ಅಂಬೇಡ್ಕರ್ ಭವನ ಕ್ಕಾಗಿ ಹೋರಾಟ ನಡೆಸಿದ ನಿಜವಾದ ಹೋರಾಟಗಾರರನ್ನು ಕಡೆಗಣಿಸಲಾಗಿದೆ. ಈ ಹಿನ್ನಲೆ ಯಲ್ಲಿ ಜೂ.21 ರಂದು ಹೋರಾಟ ಗಾರರಾದ ದಿವಂಗತ ಕಾಮ್ರೇಡ್ ಡಿ.ಸಿ ಮಾಯಣ್ಣ, ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ನೆನಪಿನಲ್ಲಿ ಅಂಬೇಡ್ಕರ್ ಭವನ ದಲ್ಲಿ ಸಮಿತಿಯಿಂದ ನಿಜವಾದ ಹೋರಾಟಗಾರ ರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು. ಕಳೆದ 2 ದಿನಗಳ ಹಿಂದೆ ನಿಧನ ಹೊಂದಿದ ಸಮಿತಿ ಕಾರ್ಯಾಧ್ಯಕ್ಷ ರಾದ ಐ.ಎಲ್ ಅರುಣ್ ಕುಮಾರ್ ಅವರು, ಕಳೆದ 50 ವರ್ಷಗಳಿಂದ ದೀನ ದಲಿತರ ಸೇವೆ ಸಲ್ಲಿಸುತ್ತಾ ಹಲವಾರು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಇವರ ನಿಧನ ತುಂಬಾ ನೋವುಂಟು ಮಾಡಿದ್ದು, ಸಮಿತಿ ಪದಾಧಿಕಾರಿ ಗಳು, ಸದಸ್ಯರು ಶ್ರದ್ದಾಂಜಲಿ ಸಲ್ಲಿಸುತ್ತೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ರಾದ ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಶಾರದಮ್ಮ, ನಗರಸಭೆ ಮಾಜಿ ಸದಸ್ಯೆ ಶೋಭಾ ರವಿಕುಮಾರ್, ಹಳೇನಗರ ಮನೆ ಮಾಲೀಕರ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ, ದಲಿತ ಮುಖಂಡರಾದ ವಿಜಿಯಮ್ಮ ಸೇರಿದಂತೆ ಸಮಿತಿ ಪದಾಧಿ ಕಾರಿಗಳು, ಮುಖಂಡರು ಉಪಸ್ಥಿತರಿದ್ದರು.1
- ಭದ್ರಾವತಿ ತಾಲೂಕು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಭವನ ಹಲವಾರು ವರ್ಷದಿಂದ ಕಾಮಗಾರಿಕೆಯಲ್ಲಿ ಕುಂಠಿತವಾಗಿತ್ತು ಹಾಗಾಗಿ ಮಾನವ ಹಕ್ಕು ಹುರಾಟ ಸಮಿತಿ ಅಂಬೇಡ್ಕರ್ ಭವನ ಸಮಿತಿ ಇವರ ಹೋರಾಟದಿಂದ ಸಂಪೂರ್ಣವಾಗಿ ಕಾಮಗಾರಿ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ಧವಾಗಿದೆ ಅಂತಹ ಹಲವು ಹೋರಾಟಗಾರರಿಗೆ ವೇದಿಕೆ ದೊರಕದ ಕಾರಣ ಹಾಗೂ ಇನ್ನು ಹಲವು ಕಾರಣಾಂತರಗಳಿಂದ ಹಲವು ಗಣ್ಯ ವ್ಯಕ್ತಿಗಳಿಗೆ ವೇದಿಕೆ ಸಿಗದ ಕಾರಣ ಮಾನವ ಹಕ್ಕು ಹೋರಾಟ ಸಮಿತಿ ಬಿ ಎನ್ ರಾಜು ಅಸಮಾಧಾನ ವ್ಯಕ್ತಪಡಿಸಿದರು ಮುಂದಿನ ದಿನಗಳಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭವನ ಅದ್ದೂರಿಯಾಗಿ ಉದ್ಘಾಟನೆ ವಿವಿಧ ಕಾರ್ಯಕ್ರಮವನ್ನು ಮಾಡಲು ತೀರ್ಮಾನಿಸಿದೆ ಎಂದು ಮಾನವ ಹೋರಾಟ ಸಮಿತಿ ಮಾಹಿತಿ ತಿಳಿಸಿದರು..1
- ಹಕ್ಕುಪತ್ರ ಕೊಡಲು 25 ವರ್ಷ ಬೇಕಾ? ವ್ಯವಸ್ಥೆಯ ‘ಕಿವುಡು’ತನಕ್ಕೆ ಬಡಿದ ತಮಟೆ! ನಮಸ್ಕಾರ, ಇವತ್ತು ನಾವು ತೋರಿಸಲಿರೋದು ಕೇವಲ ಒಂದು ಪ್ರತಿಭಟನೆಯಲ್ಲ, ಇದು ಒಂದು ಜನಾಂಗದ ಸಬ್ರೂರಿ ಪರೀಕ್ಷೆ! ಅಧಿಕಾರಿಗಳ ಮೇಜಿನ ಮೇಲೆ ಫೈಲುಗಳು ಧೂಳು ಹಿಡಿಯುತ್ತಿದ್ದರೆ, ಇಲ್ಲಿ ಬಡವರ ಬದುಕು ಬೀದಿಗೆ ಬಂದಿದೆ. 25 ವರ್ಷ ಅಂದ್ರೆ ಒಂದು ತಲೆಮಾರೇ ಬದಲಾಗಿ ಹೋಗುತ್ತೆ. ಆದರೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳದ ಈ 61 ಕುಟುಂಬಗಳ ಹಣೆಬರಹ ಮಾತ್ರ ಬದಲಾಗಿಲ್ಲ. ಇವರ ತಾಳ್ಮೆ ಕಟ್ಟೆ ಹೊಡೆದಿದೆ, ಈಗ ಅಧಿಕಾರಿಗಳ ಕಿವಿಗೆ 'ತಮಟೆ' ಏಟು ಬೀಳುವ ಸಮಯ ಬಂದಿದೆ! ಅತಿಕ್ರಮಣಕಾರರಲ್ಲ, ಇವರು ಅನ್ಯಾಯಗಾರರಲ್ಲ. ಇವರು ತಮ್ಮ ಹಕ್ಕಿಗಾಗಿ 25 ವರ್ಷಗಳಿಂದ ಅಲೆದಾಡುತ್ತಿರುವ ಹೊಸ ಡಂಬಳದ ಮಾದಿಗ ಸಮಾಜದ ಮುಗ್ಧ ಜನ. ೧. ಮಂಜೂರಾದ ಜಾಗಕ್ಕೆ ಹಕ್ಕುಪತ್ರದ 'ಗ್ರಹಣ'! 2000ನೇ ಇಸವಿಯಲ್ಲೇ ಗ್ರಾಮ ಪಂಚಾಯಿತಿಯಿಂದ ಜಾಗ ಮಂಜೂರಾಗಿದೆ. ಸರ್ಕಾರಿ ದಾಖಲೆಗಳಲ್ಲಿ ಇವರಿಗೆ ಮನೆ ಕಟ್ಟಲು ಜಾಗವಿದೆ. ಆದರೆ ವಾಸ್ತವದಲ್ಲಿ ಕೈಗೆ ಹಕ್ಕುಪತ್ರವಿಲ್ಲ! ಅಧಿಕಾರಿಗಳೇ.. ನಿಮ್ಮ ಕಚೇರಿಯಿಂದ ಈ ಹಕ್ಕುಪತ್ರ ಜನರಿಗೆ ತಲುಪಲು ಕಾಲು ಶತಮಾನ ಬೇಕಾ? ನಿಮ್ಮ ಈ ಆಮೆಗತಿಯ ಕೆಲಸಕ್ಕೆ ಬಡವರ ಬದುಕು ಅತಂತ್ರವಾಗಿದೆ. ೨. ಅಂಬೇಡ್ಕರ್ ಕನಸಿನ ಭಾರತದಲ್ಲಿ ಇದೇನಾ ನ್ಯಾಯ? ಸಂವಿಧಾನ ನಮಗೆ ಹಕ್ಕುಗಳನ್ನು ಕೊಟ್ಟಿದೆ, ಆದರೆ ನೀವು ಆ ಹಕ್ಕುಗಳನ್ನು ಕಬೀಟಿನಲ್ಲಿ ಕೂಡಿಟ್ಟಿದ್ದೀರಿ. ಲಕ್ಷ್ಮಣ ತಗಡಿನಮನಿ ಅವರ ನೇತೃತ್ವದಲ್ಲಿ ನಡೆದ ಈ ಬೃಹತ್ ತಮಟೆ ಚಳುವಳಿ, ಅಧಿಕಾರಶಾಹಿಯ ಅಹಂಕಾರಕ್ಕೆ ಹಿಡಿದ ಕನ್ನಡಿ. "ನಾವು ದುಡಿಯುವುದನ್ನು ಬಿಟ್ಟು ನಿಮ್ಮ ಕಚೇರಿ ಮುಂದೆ ನಿಲ್ಲಬೇಕಾ?" ಎಂಬ ಇವರ ಪ್ರಶ್ನೆಗೆ ಉತ್ತರ ಕೊಡುವವರು ಯಾರು? "ಸರ್ಕಾರ ಸವಲತ್ತು ಕೊಟ್ಟರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮಗೆ ನ್ಯಾಯ ಸಿಗುತ್ತಿಲ್ಲ. ಇದು ನಮ್ಮ ಹಕ್ಕಿನ ಜಾಗಕ್ಕಾಗಿ ನಡೆಯುತ್ತಿರುವ ಕೊನೆಯ ಎಚ್ಚರಿಕೆ!"ಎಂದು ಲಕ್ಷ್ಮಣ ತಗಡಿನಮನಿ ಮಾತನಾಡಿದರು ಈಗ ಚೆಂಡು ಅಧಿಕಾರಿಗಳ ಅಂಗಳದಲ್ಲಿದೆ. ಬರುವ ಏಪ್ರಿಲ್ 28ರ ಒಳಗಾಗಿ ಈ ಕುಟುಂಬಗಳ ಮುಖದಲ್ಲಿ ನಗು ಕಾಣಿಸದಿದ್ದರೆ, ಈ ಆಕ್ರೋಶ ವಿಧಾನಸೌಧದವರೆಗೂ ತಲುಪುವುದರಲ್ಲಿ ಅನುಮಾನವಿಲ್ಲ. ಜಿಲ್ಲಾಧಿಕಾರಿಗಳೇ ಹಾಗೂ ತಹಶೀಲ್ದಾರರೇ.. ಇನ್ನು ಮುಂದೆ ಭರವಸೆಗಳ ಮಾತು ಬೇಡ, ಫಲಾನುಭವಿಗಳ ಕೈಗೆ ಹಕ್ಕುಪತ್ರ ಸಿಗಲಿ. ನೋಡಿದ್ರಲ್ಲ, ಬಡವರ ಹೊಟ್ಟೆಯ ಮೇಲೆ ಹೊಡೆಯುವ ಈ ಅಧಿಕಾರಿಗಳ ಮನಸ್ಥಿತಿ ಬದಲಾಗಬೇಕಿದೆ. ಒಂದು ಸಣ್ಣ ಕಾಗದಕ್ಕಾಗಿ 25 ವರ್ಷ ಕಾಯಿಸುವುದು ಆಡಳಿತ ಯಂತ್ರಕ್ಕೆ ದೊಡ್ಡ ಅವಮಾನ. ಈ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ಕ್ಷಣ ಕ್ಷಣದ ಮಾಹಿತಿಗಾಗಿ ನೋಡ್ತಾ ಇರಿ ಸಮಗ್ರ ನ್ಯೂಸ್ ಟೈಮ್ಸ್1
- Post by H M ಹರಕುಣಿ1
- ಚಳ್ಳಕೆರೆ ವೀರಶೈವ ಸಮಾಜ ಸೇವಾ ಸಂಘ. ಚಳ್ಳಕೆರೆ ವೀರಶೈವ ಲಿಂಗಾಯತ ಸಂಘಟನೆಗಳ ಒಕ್ಕೂಟ ಹಾಗೂ ಗ್ರಾಮಾಂತರ ವೀರಶೈವ ಲಿಂಗಾಯತ ಸಂಘದ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರ ಜಯಂತೋತ್ಸವ ಕಾರ್ಯಕ್ರಮದ ಪ್ರಯುಕ್ತ ನಗರದ ಹಿರಿಯೂರು ರಸ್ತೆಯಲ್ಲಿನ ಬಸವೇಶ್ವರ ವೃತ್ತದಲ್ಲಿನ ಅಶ್ವಾರೂಡ ಢ ಬಸವೇಶ್ವರ ಪುತ್ಥಳಿ ಪುನರ್ ಪ್ರತಿಸ್ಥಾಪನೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.. ಕಾರ್ಯಕ್ರಮದಲ್ಲಿ ತುಮಕೂರು ಸಿದ್ದಗಂಗಾ ಮಠದ ಪರಮಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು, ಕರ್ಣ ಕೊಪ್ಪಳದ ಗವಿಮಠ ಸಂಸ್ಥಾನದ ಗವಿಸಿದ್ದೇಶ್ವರ ಮಹಾಸ್ವಾಮಿಗಳು.. ನೀನು ಕೊನೆಯ ಯಜಮಾನ ಕೊರಟಗೆರೆ ತಾಲೂಕಿನ ಕ್ಷೇತ್ರ ಸಿದ್ದಿರಿ ಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಹಾಗೂ ಚಿತ್ರದುರ್ಗ ಎಂಎಲ್ ಸಿ. ಕೆ ಎಸ್ ನವೀನ್, ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೆ ಸಿ ನಾಗರಾಜ್ ,ಶಾಸಕ ಟಿ.ರಘಮೂರ್ತಿ ವಿಶ್ವರೂಢ ಬಸವೇಶ್ವರ ಕಂಚಿನ ಪುತ್ಥಳಿಯನ್ನ ಪುನರ್ ಪ್ರತಿಷ್ಠಾಪನೆಯನ್ನು ನೆರವೇರಿಸಿದರು...1