ಶಿಕಾರಿಪುರ, ಜೀವವನ್ನು ಉಳಿಸುವ ತ್ಯಾಗಮಯಿ ಮಹಿಳೆಯರನ್ನ ವೈದ್ಯಲೋಕ ಗೌರವಿಸುತ್ತಿರುವುದು ಹೆಮ್ಮೆ. ಮಹಿಳೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳುವುದರ ಜೊತೆಗೆ ಒಂದು ಸಂಸಾರವನ್ನು ತೂಗಬಲ್ಲ ಮಹಿಳೆ ಮತ್ತೊಬ್ಬರ ಜೀವವನ್ನ ಉಳಿಸಿ ತ್ಯಾಗಮಯಿ ಎನಿಸಿಕೊಳ್ಳುತ್ತಾಳೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳು ನಮ್ಮ ಮುಂದೆ ದೇಶದ ಮೊಟ್ಟ ಮೊದಲ ಪ್ರಧಾನಿಯಾಗಿ ಶ್ರೀಮತಿ ಇಂದಿರಾಗಾಂಧಿ ಐಪಿಎಸ್ ಅಧಿಕಾರಿಯಾಗಿ ಕಿರಣ್ ಬೇಡಿ ವೈದ್ಯಕೀಯ ಕ್ಷೇತ್ರದಲ್ಲಿ ಮೊಟ್ಟಮೊದಲ ಮಹಿಳೆಯಾಗಿ ಆನಂದ ಗೋಪಾಲ್ ಜೋಶಿ ರಾಷ್ಟ್ರಪತಿಯಾಗಿ ದ್ರೌಪತಿ ಮುರ್ಮು ಹಾಗೂ ವಾಯು ಸೇನೆಯ ಪೈಲೆಟ್ ಆಗಿ ದುರ್ಗಾ ಬ್ಯಾನರ್ಜಿ ರಾಜ್ಯಸಭಾ ಸದಸ್ಯರಾಗಿ ಸುಧಾ ಮೂರ್ತಿ ಇಂಥವರು ನೆನಪಿಗೆ ಬರುವ ಇಂಥ ಸಂದರ್ಭದಲ್ಲಿ ಇದೆಲ್ಲವನ್ನು ಮೀರಿ ನಮ್ಮ ವೈದ್ಯರಾದ ಡಾ ಮಾಲತೇಶ ಮತ್ತು ಕುಟುಂಬದವರು ತಮ್ಮ ಜೀವವನ್ನು ಉಳಿಸಿಕೊಂಡು ಮತ್ತೊಬ್ಬರ ಜೀವವನ್ನು ಉಳಿಸುವ ವಿಶೇಷ ಸಾಧನೆಗಾಗಿ ಮಹಿಳೆಯರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮಕ್ಕೆ ವೈದ್ಯಲೋಕ ದೊಡ್ಡ ಸಾಕ್ಷಿಯಾಗಿದೆ ಎಂದು ಜಿಕೆ ಹೆಬ್ಬಾರ್ ಅಭಿಪ್ರಾಯಸಿದರು ಅವರು ಪ್ರಕೃತಿ ಚಿಕಿತ್ಸಾಲಯ ಐಶ್ವರ್ಯ ಹೋಮಿಯೋ ಫಾರ್ಮಸಿ ಸೃಷ್ಟಿ ಟ್ರಸ್ಟ್ ಗಳ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಆಧ್ಯಾತ್ಮ 344ನೇ ಕಾರ್ಯಕ್ರಮದ ನಿಮಿತ್ತ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ತ್ಯಾಗದ ಮಾತೇರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ತಾಯಿಯಾಗಿ ಮಕ್ಕಳ ಸಂರಕ್ಷಣೆ ಮಡದಿಯಾಗಿ ಗಂಡನ ಸಂರಕ್ಷಣೆ ಸಹೋದರಿಯಾಗಿ ಸೋದರನ ಸಂರಕ್ಷಣೆ ಹೀಗೆ ಕುಟುಂಬದಲ್ಲಿ ತನ್ನ ಜವಾಬ್ದಾರಿಯ ಜೊತೆಗೆ ವಿವಿಧ ಕ್ಷೇತ್ರದಲ್ಲೂ ನಮ್ಮ ಮಹಿಳೆಯರು ಉನ್ನತ ಸ್ಥಾನದಲ್ಲಿ ಗುರುಸಿತುಕೊಂಡಿರುವುದು ಶ್ಲಾಗನೀಯ ಪ್ರತಿಯೊಬ್ಬರನ್ನು ಪ್ರತಿಯೊಂದು ರೀತಿಯಲ್ಲೂ ಗೌರಸುತ್ತಿರುವ ಈ ಸಮಾಜ ಮತ್ತೊಬ್ಬರ ಅನಾರೋಗ್ಯ ನಿಮಿತ್ತ ಅವರಿಗೆ ಅಂಗಾಂಗ ದಾನ ಮಾಡಿ ಜೀವ ಉಳಿಸುವ ಜೀವದಾನ ಮಾಡುವ ಪುಣ್ಯದ ಕೆಲಸದಲ್ಲೂ ಸಹ ಮಹಿಳೆ ತೊಡಗಿಸಿಕೊಂಡಿದ್ದಾಳೆ ಅದಕ್ಕೆ ಈ ಕಾರ್ಯಕ್ರಮವೇ ಪೂರಕ ಕಾರಣ ಅಂತವರನ್ನು ವೇದಿಕೆಯಲ್ಲಿ ಗೌರವಿಸಿ ಸನ್ಮಾನಿಸುವ ಈ ಸಂಸ್ಥೆಯ ಡಾ. ಮಾಲತೇಶ ಅವರಿಗೆ ಅಭಿನಂದನೆಗ ಹಾಗೂ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿದ ತಹಸಿಲ್ದಾರ್ ಶ್ರೀಮತಿ ವೀಣಾ ಯು ಮಾತನಾಡಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಧೈರ್ಯದಿಂದ ಮುನ್ನುಗಬೇಕು. ಅದರ ಜೊತೆಗೆ ತಮ್ಮ ಮಕ್ಕಳನ್ನ ವಿದ್ಯಾವಂತರಾಗಿ ಮಾಡುವುದರ ಜೊತೆಗೆ ಆರೋಗ್ಯವಂತ ಬದುಕನ್ನ ಕಟ್ಟಿಕೊಡಬೇಕು ಯುವ ಪೀಳಿಗೆಯನ್ನು ಪ್ರಗತಿಯತ್ತ ಸಾಗಿಸುವ ಹೆಚ್ಚಿನ ಜವಾಬ್ದಾರಿ ಮಹಿಳೆಯರದ್ದು ಎಂದರು. ಮತ್ತೊಬ್ಬ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ ಗೀತಾ ಚೊಂಡಿ ಗೆರೆ ಮಠ. ಮಾತನಾಡಿ ದಾನ ಮಾಡುವ ಮುಂಚೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಆರೋಗ್ಯವಾದ ಮಾಹಿತಿಗಳನ್ನು ನೀಡುವುದರ ಜೊತೆಗೆ ಅಂಗಾಂಗ ದಾನ ಮಾಡುವವರು ರಕ್ತ ಸಂಬಂಧಿಯವರಿಗೆ ದಾನ ಮಾಡಿದಾಗ ಆ ಅಂಗದ ಆಯಸ್ಸು ಜಾಸ್ತಿ ಆಗುತ್ತದೆ ಎಂದು ಮತ್ತು ಬೇರೆಯವರಿಗೆ ನೀಡಿದರಲ್ಲಿ ಅದರ ಆಯಸ್ಸು ಕಡಿಮೆಯಾಗಲಿದೆ ಎಂದು ಆರೋಗ್ಯಕ್ಕೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿಯನ್ನು ನೀಡಿದ್ದಲ್ಲದೆ ಮಾನಸಿಕ ಒತ್ತಡ ಕಡಿಮೆ ಮಾಡಿಕೊಂಡು ಯೋಗ ಧ್ಯಾನದ ಕಡೆ ಗಮನಹರಿಸಿ ಎಂದು ಸಲಹೆ ನೀಡಿದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ವೈದ್ಯರಾದ ಪ್ರಕೃತಿ ಚಿಕಿತ್ಸಾಲಯ ಇವರು ಡಾಕ್ಟರ್ ನಾಗವೇಣಿ ಎಂ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಈ ಕಾರ್ಯಕ್ರಮದಲ್ಲಿ ಅಂಗಾಂಗದಾನಿಗಳಾದ ಶ್ರೀಮತಿ ಆಶಾ ಎಸ್ ಎಂ ಶ್ರೀಮತಿ ಲಲಿತಮ್ಮ ಎಲ್ಲಪ್ಪ ಕಲಾವಿದರಾದ ಶ್ರೀಮತಿ ರೇಣುಕಮ್ಮ ಈಸೂರ್ ನೀನಾಸo. ನ ಶ್ರೀಮತಿ ಕಲ್ಪನಾ ಕೆ ರಾಜ್ ಹಾಗೂ ಮಾನ್ಯ ದಂಡಾಧಿಕಾರಿಗಳಾದ ಶ್ರೀಮತಿ ವೀಣಾ ಯು ಮತ್ತು ಡಾ. ಗೀತಾ ಅವರುಗಳನ್ನ ಸನ್ಮಾನಿಸಿ ಗೌರವಿಸಲಾಯಿತು. ಶ್ರೀಮತಿ ನೀತುರವರು ಮಹಾವೀರ ಜಯಂತಿಯ ಶುಭಾಶಯಗ ಳೊಂದಿಗೆ ಮಹಾ ವೀರ ರ ಜೀವನದ ನಡೆದ ಹಾದಿಯನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ಆರ್ ಜಯಣ್ಣ ,ಶ್ರೀಮತಿ ಪ್ರಣತಿ ಹಂಚಿ, ಶ್ರೀಮತಿ ನೀಲಮ್ಮ, ಖ್ಯಾತ ವೈದ್ಯರಾದ ಡಾ ಮಾಲತೇಶಪ್ಪ ,ಡಾ ಅಶ್ವಿನಿ ಫಿಜಿಯೋಥೆರಪಿಸ್ಟ್ ಕಾವ್ಯ ಶಿಕ್ಷಕಿ ಅನುಷಾ ಶಿಕ್ಷಕಿ ಲತಾ ಧನ್ಯಮಯಿ ನಿವೃತ್ತ ಶಿಕ್ಷಕರಾದ ಬಸವಣ್ಣಪ್ಪ ಪ್ರವೀಣ್ ಜ್ಯೋತಿ ಜೈನ್ ಮುರಿಗೆಪ್ಪ ಗೌಡ ಪಾಟೀಲ್ ತಿಪ್ಪೇಶಪ್ಪ ಗೀತಾಮಯಪ್ಪ ನೇತ್ರಾವತಿ ಪ್ರವೀಣ್ ಪೋಷಕರು ಮಹಿಳೆಯರು ಮಕ್ಕಳು ಹಲವಾರು ಮುಖಂಡರು ಉಪಸಿತರಿದ್ದರು.
ಶಿಕಾರಿಪುರ, ಜೀವವನ್ನು ಉಳಿಸುವ ತ್ಯಾಗಮಯಿ ಮಹಿಳೆಯರನ್ನ ವೈದ್ಯಲೋಕ ಗೌರವಿಸುತ್ತಿರುವುದು ಹೆಮ್ಮೆ. ಮಹಿಳೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳುವುದರ ಜೊತೆಗೆ ಒಂದು ಸಂಸಾರವನ್ನು ತೂಗಬಲ್ಲ ಮಹಿಳೆ ಮತ್ತೊಬ್ಬರ ಜೀವವನ್ನ ಉಳಿಸಿ ತ್ಯಾಗಮಯಿ ಎನಿಸಿಕೊಳ್ಳುತ್ತಾಳೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳು ನಮ್ಮ ಮುಂದೆ ದೇಶದ ಮೊಟ್ಟ ಮೊದಲ ಪ್ರಧಾನಿಯಾಗಿ ಶ್ರೀಮತಿ ಇಂದಿರಾಗಾಂಧಿ ಐಪಿಎಸ್ ಅಧಿಕಾರಿಯಾಗಿ ಕಿರಣ್ ಬೇಡಿ ವೈದ್ಯಕೀಯ ಕ್ಷೇತ್ರದಲ್ಲಿ ಮೊಟ್ಟಮೊದಲ ಮಹಿಳೆಯಾಗಿ ಆನಂದ ಗೋಪಾಲ್ ಜೋಶಿ ರಾಷ್ಟ್ರಪತಿಯಾಗಿ ದ್ರೌಪತಿ ಮುರ್ಮು ಹಾಗೂ ವಾಯು ಸೇನೆಯ ಪೈಲೆಟ್ ಆಗಿ ದುರ್ಗಾ ಬ್ಯಾನರ್ಜಿ ರಾಜ್ಯಸಭಾ ಸದಸ್ಯರಾಗಿ ಸುಧಾ ಮೂರ್ತಿ ಇಂಥವರು ನೆನಪಿಗೆ ಬರುವ ಇಂಥ ಸಂದರ್ಭದಲ್ಲಿ ಇದೆಲ್ಲವನ್ನು ಮೀರಿ ನಮ್ಮ ವೈದ್ಯರಾದ ಡಾ ಮಾಲತೇಶ ಮತ್ತು ಕುಟುಂಬದವರು ತಮ್ಮ ಜೀವವನ್ನು ಉಳಿಸಿಕೊಂಡು ಮತ್ತೊಬ್ಬರ ಜೀವವನ್ನು ಉಳಿಸುವ ವಿಶೇಷ ಸಾಧನೆಗಾಗಿ ಮಹಿಳೆಯರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮಕ್ಕೆ ವೈದ್ಯಲೋಕ ದೊಡ್ಡ ಸಾಕ್ಷಿಯಾಗಿದೆ ಎಂದು ಜಿಕೆ ಹೆಬ್ಬಾರ್ ಅಭಿಪ್ರಾಯಸಿದರು ಅವರು ಪ್ರಕೃತಿ ಚಿಕಿತ್ಸಾಲಯ ಐಶ್ವರ್ಯ ಹೋಮಿಯೋ ಫಾರ್ಮಸಿ ಸೃಷ್ಟಿ ಟ್ರಸ್ಟ್ ಗಳ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಆಧ್ಯಾತ್ಮ 344ನೇ ಕಾರ್ಯಕ್ರಮದ ನಿಮಿತ್ತ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ತ್ಯಾಗದ ಮಾತೇರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ತಾಯಿಯಾಗಿ ಮಕ್ಕಳ ಸಂರಕ್ಷಣೆ ಮಡದಿಯಾಗಿ ಗಂಡನ ಸಂರಕ್ಷಣೆ ಸಹೋದರಿಯಾಗಿ ಸೋದರನ ಸಂರಕ್ಷಣೆ ಹೀಗೆ ಕುಟುಂಬದಲ್ಲಿ ತನ್ನ ಜವಾಬ್ದಾರಿಯ ಜೊತೆಗೆ ವಿವಿಧ ಕ್ಷೇತ್ರದಲ್ಲೂ ನಮ್ಮ ಮಹಿಳೆಯರು ಉನ್ನತ ಸ್ಥಾನದಲ್ಲಿ ಗುರುಸಿತುಕೊಂಡಿರುವುದು ಶ್ಲಾಗನೀಯ ಪ್ರತಿಯೊಬ್ಬರನ್ನು ಪ್ರತಿಯೊಂದು ರೀತಿಯಲ್ಲೂ ಗೌರಸುತ್ತಿರುವ ಈ ಸಮಾಜ ಮತ್ತೊಬ್ಬರ ಅನಾರೋಗ್ಯ ನಿಮಿತ್ತ ಅವರಿಗೆ ಅಂಗಾಂಗ ದಾನ ಮಾಡಿ ಜೀವ ಉಳಿಸುವ ಜೀವದಾನ ಮಾಡುವ ಪುಣ್ಯದ ಕೆಲಸದಲ್ಲೂ ಸಹ ಮಹಿಳೆ ತೊಡಗಿಸಿಕೊಂಡಿದ್ದಾಳೆ ಅದಕ್ಕೆ ಈ ಕಾರ್ಯಕ್ರಮವೇ ಪೂರಕ ಕಾರಣ ಅಂತವರನ್ನು ವೇದಿಕೆಯಲ್ಲಿ ಗೌರವಿಸಿ ಸನ್ಮಾನಿಸುವ ಈ ಸಂಸ್ಥೆಯ ಡಾ. ಮಾಲತೇಶ ಅವರಿಗೆ ಅಭಿನಂದನೆಗ ಹಾಗೂ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿದ
ತಹಸಿಲ್ದಾರ್ ಶ್ರೀಮತಿ ವೀಣಾ ಯು ಮಾತನಾಡಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಧೈರ್ಯದಿಂದ ಮುನ್ನುಗಬೇಕು. ಅದರ ಜೊತೆಗೆ ತಮ್ಮ ಮಕ್ಕಳನ್ನ ವಿದ್ಯಾವಂತರಾಗಿ ಮಾಡುವುದರ ಜೊತೆಗೆ ಆರೋಗ್ಯವಂತ ಬದುಕನ್ನ ಕಟ್ಟಿಕೊಡಬೇಕು ಯುವ ಪೀಳಿಗೆಯನ್ನು ಪ್ರಗತಿಯತ್ತ ಸಾಗಿಸುವ ಹೆಚ್ಚಿನ ಜವಾಬ್ದಾರಿ ಮಹಿಳೆಯರದ್ದು ಎಂದರು. ಮತ್ತೊಬ್ಬ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ ಗೀತಾ ಚೊಂಡಿ ಗೆರೆ ಮಠ. ಮಾತನಾಡಿ ದಾನ ಮಾಡುವ ಮುಂಚೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಆರೋಗ್ಯವಾದ ಮಾಹಿತಿಗಳನ್ನು ನೀಡುವುದರ ಜೊತೆಗೆ ಅಂಗಾಂಗ ದಾನ ಮಾಡುವವರು ರಕ್ತ ಸಂಬಂಧಿಯವರಿಗೆ ದಾನ ಮಾಡಿದಾಗ ಆ ಅಂಗದ ಆಯಸ್ಸು ಜಾಸ್ತಿ ಆಗುತ್ತದೆ ಎಂದು ಮತ್ತು ಬೇರೆಯವರಿಗೆ ನೀಡಿದರಲ್ಲಿ ಅದರ ಆಯಸ್ಸು ಕಡಿಮೆಯಾಗಲಿದೆ ಎಂದು ಆರೋಗ್ಯಕ್ಕೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿಯನ್ನು ನೀಡಿದ್ದಲ್ಲದೆ ಮಾನಸಿಕ ಒತ್ತಡ ಕಡಿಮೆ ಮಾಡಿಕೊಂಡು ಯೋಗ ಧ್ಯಾನದ ಕಡೆ ಗಮನಹರಿಸಿ ಎಂದು ಸಲಹೆ ನೀಡಿದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ವೈದ್ಯರಾದ ಪ್ರಕೃತಿ ಚಿಕಿತ್ಸಾಲಯ ಇವರು ಡಾಕ್ಟರ್ ನಾಗವೇಣಿ ಎಂ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಈ ಕಾರ್ಯಕ್ರಮದಲ್ಲಿ ಅಂಗಾಂಗದಾನಿಗಳಾದ ಶ್ರೀಮತಿ ಆಶಾ ಎಸ್ ಎಂ ಶ್ರೀಮತಿ ಲಲಿತಮ್ಮ ಎಲ್ಲಪ್ಪ ಕಲಾವಿದರಾದ ಶ್ರೀಮತಿ ರೇಣುಕಮ್ಮ ಈಸೂರ್ ನೀನಾಸo. ನ ಶ್ರೀಮತಿ ಕಲ್ಪನಾ ಕೆ ರಾಜ್ ಹಾಗೂ ಮಾನ್ಯ ದಂಡಾಧಿಕಾರಿಗಳಾದ ಶ್ರೀಮತಿ ವೀಣಾ ಯು ಮತ್ತು ಡಾ. ಗೀತಾ ಅವರುಗಳನ್ನ ಸನ್ಮಾನಿಸಿ ಗೌರವಿಸಲಾಯಿತು. ಶ್ರೀಮತಿ ನೀತುರವರು ಮಹಾವೀರ ಜಯಂತಿಯ ಶುಭಾಶಯಗ ಳೊಂದಿಗೆ ಮಹಾ ವೀರ ರ ಜೀವನದ ನಡೆದ ಹಾದಿಯನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ಆರ್ ಜಯಣ್ಣ ,ಶ್ರೀಮತಿ ಪ್ರಣತಿ ಹಂಚಿ, ಶ್ರೀಮತಿ ನೀಲಮ್ಮ, ಖ್ಯಾತ ವೈದ್ಯರಾದ ಡಾ ಮಾಲತೇಶಪ್ಪ ,ಡಾ ಅಶ್ವಿನಿ ಫಿಜಿಯೋಥೆರಪಿಸ್ಟ್ ಕಾವ್ಯ ಶಿಕ್ಷಕಿ ಅನುಷಾ ಶಿಕ್ಷಕಿ ಲತಾ ಧನ್ಯಮಯಿ ನಿವೃತ್ತ ಶಿಕ್ಷಕರಾದ ಬಸವಣ್ಣಪ್ಪ ಪ್ರವೀಣ್ ಜ್ಯೋತಿ ಜೈನ್ ಮುರಿಗೆಪ್ಪ ಗೌಡ ಪಾಟೀಲ್ ತಿಪ್ಪೇಶಪ್ಪ ಗೀತಾಮಯಪ್ಪ ನೇತ್ರಾವತಿ ಪ್ರವೀಣ್ ಪೋಷಕರು ಮಹಿಳೆಯರು ಮಕ್ಕಳು ಹಲವಾರು ಮುಖಂಡರು ಉಪಸಿತರಿದ್ದರು.
- ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾನದಿಗೆ ಸೇತುವೆಗಳ ಮೇಲಿಂದ ಕಸ ಎಸೆಯುತ್ತಿದ್ದು ಅವರುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭದ್ರಾನದಿ ಸಂರಕ್ಷಣಾ ಪಡೆ ವತಿಯಿಂದ ನಗರಸಭೆ ಪೌರಾಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.ಪವಿತ್ರ ನದಿಗೆ ಕೆಲ ಅನಾಗರಿಕ ಸಾರ್ವಜನಿಕರು ಎರಡು ಸೇತುವೆಗಳ ಮೇಲಿಂದ ಕಸ,ಪ್ಲಾಸ್ಟಿಕ್ ಬ್ಯಾಗ್ ಎಸೆದು ಮಲೀನ ಮಾಡುತ್ತಿದ್ದು, ಇದರಿಂದ ನದಿ ಹಾಗೂ ಜಲಚರಗಳಿಗೆ ಕುತ್ತು ತರುತ್ತಿದೆ. 1974 ಜಾಲಮಾಲಿನ್ಯ ಕಾಯ್ದೆ ತಡೆಗಟ್ಟುವ ಸೆಕ್ಷನ್ 24 ರ ಅನ್ವಯ ಅಪರಾಧವಾಗಿದೆ. ಈ ಹಿನ್ನಲೆಯಲ್ಲಿ 41 ಮತ್ತು 45 ರ ಸೆಕ್ಷನ್ ಅನ್ವಯ ದಂಡನೆಯನ್ನು ವಿಧಿಸಬಹು ದಾಗಿದೆ. ಘನ ತ್ಯಾಜ್ಯ ನಿರ್ವಹಣೆ 2016 ರ ಕಾಯ್ದೆ ಅನ್ವಯ ಯಾವುದೇ ನದಿ ಪಾತ್ರ ಗಳಲ್ಲಿ ಕಸ ಎಸೆಯುವುದು, ಘನತ್ಯಾಜ್ಯ ನಿರ್ಬಂಧವಿದ್ದರೂ ಆದೇಶ ಗಾಳಿಗೆ ತೂರಿದಂತಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಲವು ನಗರಸಭೆಗಳ ಮೇಲೆ ಪರಿಸರ ಪರಿಹಾರ ವಿಧಿಸಿದ್ದು ಓಡಿಶಾ ರಾಜ್ಯದ ಕೇಂದ್ರಪುರ ಮುನಿಸಿಪಾಲಿಟಿ, ಚಂಬಲ್ ನದಿ ಪ್ರಕರಣ, ಗೊರಕ್ ಪುರ ಕೊಳಚೆ ನೀರು ಪ್ರಕರಣಗಳನ್ನು ಗಮನಿಸಿ ಕೂಡಲೇ ಭದ್ರಾ ನದಿಯ ಮಾಲಿನ್ಯ ತಡೆಗೆ ಮುಂದಾಗುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಭದ್ರಾ ನದಿ ಸಂರಕ್ಷಣಾ ಪಡೆಯ ಸಿ.ತೀರ್ಥೇಶ್,ಡಿಎಸ್ಎಸ್ ಮುಖಂಡ ದಾಸರಕಲ್ಲಳ್ಳಿ ನಾಗರಾಜ್, ಹರೀಶ್, ಹಿರಿಯ ಹೋರಾಟಗಾರ ಜಯಣ್ಣ, ಗಣೇಶ್, ರೈತ ಮುಖಂಡ ಇಮ್ರಾನ್ ಪಾಷಾ, ಭದ್ರಾನದಿ ಸಂರಕ್ಷಣಪಡೆಯ ಮುಖ್ಯಸ್ಥ ರಾದ ಕಾರ್ತಿಕ್ ಕಿದ್ಮಯ್ ಉಪಸ್ಥಿತರಿದ್ದರು.1
- ಶಿಗ್ಗಾವ್ ಸವಣೂರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ ಅವರು ದಾವಣಗೆರೆಯ ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಇವರ ಪರ ಪ್ರಚಾರ ಕೈಗೊಳ್ಳಲು ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದರು,1
- ಏಪ್ರಿಲ್1 ರಿಂದ 15 ನೇ ತಾರೀಖಿನವರೆಗೆ ಸ್ವಯಂ ಜನಗಣತೆ..1
- ಕಡೂರು : ಸುಮಾರು ಎರಡು ಎಕರೆ ಪ್ರದೇಶದ ತೋಟದಲ್ಲಿ ಫಸಲು ಬಂದಿದ್ದ ಸುಮಾರು 20ಲಕ್ಷ ಮೌಲ್ಯದ ಬಾಳೆಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿರುವ ಘಟನೆ ತಾಲ್ಲೂಕಿನ ಅಂಚೇಚೋಮನಹಳ್ಳಿ ಗ್ರಾಮದ ಬಳಿ ಸೋಮವಾರ ತಡರಾತ್ರಿ ನಡೆದಿದೆ. ಡಿ.ಕಾರೇಹಳ್ಳಿ ಗ್ರಾಮದ ರೈತ ಚಂದ್ರಪ್ಪ ಎಂಬುವವರಿಗೆ ಸೇರಿದ ಜಮೀನನಲ್ಲಿ ಕಿಡಿಗೇಡಿಗಳು ಸೋಮವಾರ ತಡರಾತ್ರಿ ಬಾಳೆಗೊನೆ ಬಿಟ್ಟಿದ್ದ ಸುಮಾರು 1500 ಬಾಳೆಗಿಡಗಳನ್ನು ಕಡಿದು ಹಾಕಿದ್ದಾರೆ. ಬಾಳೆಗಿಡಗಳ ಬೆಳೆಗಾಗಿ ಸಂಘ, ಬ್ಯಾಂಕ್ ಹಾಗೂ ಕೈಗಡ ಸೇರಿ ಸುಮಾರು 5ಲಕ್ಷ ಸಾಲ ಮಾಡಲಾಗಿದೆ. ಬಾಳೆಗಿಡದ ಬೆಳೆಯನ್ನು ನಂಬಿಕೊಂಡು ಜೀವನ ನಡೆಸುತ್ತಾ ಬರಲಾಗಿದೆ. ಸುಮಾರು 20ಲಕ್ಷ ಮೌಲ್ಯದ ಬಾಳೆಗಿಡಗಳನ್ನು ಕಡಿದು ಹಾಕಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚುವಂತೆ ರೈತ ಚಂದ್ರಪ್ಪ ದೂರು ನೀಡಿದ್ದಾರೆ. ಮಂಗಳವಾರ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೃತ್ಯ ವೆಸಗಿದ ಕಿಡಿಗೇಡಿಗಳ ಪತ್ತೆಗಾಗಿ ದೂರು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ. ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.3
- ಚಪ್ಪಲಿ ಪೊರಕೆ ತೋರಿಸುವುದು ಬಿಜೆಪಿ ಸಂಸ್ಕೃತಿ ಎಂದು ಚಿತ್ರದುರ್ಗದಲ್ಲಿ ಯೋಗೀಶ್ ಬಾಬು ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿ ದ್ರಾಕ್ಷ ರಸ ಮಂಡಳಿ ಅಧ್ಯಕ್ಷರಾದ ಯೋಗೀಶ್ ಬಾಬು ಅವರು ಮಾತನಾಡಿದ್ದು ಯಾರಿಗೂ ಕೂಡ ಅಲ್ಲಿಗೆ ಬರ್ರಿ ಇಲ್ಲಿಗೆ ಬರ್ರಿ ಎಂದು ಸವಾಲ್ ಹಾಕುವುದು ಸರಿಯಲ್ಲ, ಎಲ್ಲರಿಗೂ ಕೂಡ ವಾಕ್ ಸ್ವಾತಂತ್ರ್ಯ ಇರುತ್ತದೆ. ದಾವಣಗೆರೆಗೆ ಬನ್ನಿ ಎಂದು ಹೇಳುವುದು ತಪ್ಪು ಎಂದು ಟಾಂಗ್ ಕೊಟ್ಟಿದ್ದಾರೆ1
- Post by Ramesh Belur1
- ಮಂಗಳೂರಿನ ಮೀನುಗಾರಿಕಾ ಧಕ್ಕೆಯಲ್ಲಿರುವ ಸಂದೇಶ್ ಎಂಬವರ ಮಾಲಿಕತ್ವದ 'ಗುರುರಾಜ್’ ಎಂಬ ಆಳಸಮುದ್ರ ಮೀನುಗಾರಿಕಾ ಬೋಟ್‍ನಲ್ಲಿ ಗೋಬಿಂದ ದಾಸ್(42) ಎಂಬವರು ಮಾರ್ಚ್ 6 ರಂದು ರಾತ್ರಿ ಒಟ್ಟು 9 ಜನ ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿರುತ್ತಾರೆ. ಮೀನುಹಿಡಿಯುವ ಸಲುವಾಗಿ ಬಲೆ ಬೀಸಲು ತೊಡಗಿದಾಗ ಗೋಬಿಂದ ದಾಸ್ ಬೋಟ್‍ನಲ್ಲಿ ಇರದೇ ಕಾಣೆಯಾಗಿದ್ದಾರೆ. ಅಥವಾ ರಾತ್ರಿ ಸಮಯ ಗೋಬಿಂದ ದಾಸ್ ಆಕಸ್ಮಿಕವಾಗಿ ಬೋಟ್‍ನಿಂದ ಜಾರಿ ಆಳ ಸಮುದ್ರ ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ದಕ್ಷಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದವರ ಚಹರೆ: ಎತ್ತರ 5 ಅಡಿ, ಗೋಧಿ ಮೈ ಬಣ್ಣ, ಸಾಧಾರಣ ಶರೀರ, ಕಪ್ಪು ಬಿಳಿ ಮಿಶ್ರಿತ ಕೂದಲು, ಹಿಂದಿ, ಬೆಂಗಾಳಿ ಭಾಷೆ ಮಾತನಾಡುತ್ತಾರೆ. ನೀಲಿ ಬಣ್ಣದ ಟೀಶರ್ಟ್,ಮತ್ತು ಕಪ್ಪು ಬಣ್ಣದ ಬರ್ಮುಡಾ ಚಡ್ಡಿ ಧರಿಸಿದ್ದರು. ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ದಕ್ಷಿಣ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.1
- Post by Suresh Belagere1