Shuru
Apke Nagar Ki App…
ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ *ಪತ್ರಕರ್ತರ ಮೇಲಿನ ದೌರ್ಜನ್ಯ ಖಂಡಿಸಿ ಬೆಳಗಾವಿ ಚಲೋ’: ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅಸ್ಲಾಂ ಪಾಷಾ ಮನವಿ*
Md mansoor
ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ *ಪತ್ರಕರ್ತರ ಮೇಲಿನ ದೌರ್ಜನ್ಯ ಖಂಡಿಸಿ ಬೆಳಗಾವಿ ಚಲೋ’: ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅಸ್ಲಾಂ ಪಾಷಾ ಮನವಿ*
More news from ಕರ್ನಾಟಕ and nearby areas
- ಸ್ಥಳೀಯ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ Ambani a2z ಮೊಬೈಲ್ ಆ್ಯಪ್ ಲೋಕಾರ್ಪಣೆ. ಸ್ಥಳೀಯ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ Ambani a2z ಮೊಬೈಲ್ ಆ್ಯಪ್ ಲೋಕಾರ್ಪಣೆ. ಸ್ಥಳೀಯ ಕಾರ್ಮಿಕರಿಗೆ ಹಾಗೂ ನಿರುದ್ಯೋಗಿಗಳಿಗೆ ನಿರಂತರ ಉದ್ಯೋಗಾವಕಾಶ ಕಲ್ಪಿಸುವ ಮತ್ತು ಸಾರ್ವಜನಿಕರಿಗೆ ತ್ವರಿತವಾಗಿ ಮನೆ ಬಾಗಿಲಿಗೆ ಅಗತ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಚಿಂತಾಮಣಿಯಲ್ಲಿ Ambani a2zಎಂಬ ವಿನೂತನ ಸರ್ವೀಸ್ ವರ್ಕರ್ಸ್ ಮೊಬೈಲ್ ಆ್ಯಪ್ ಅನ್ನು ಅನಾವರಣಗೊಳಿಸಲಾಗಿದೆ. ಚಿಂತಾಮಣಿಯ ಮೋಕ್ಷಾಂಬಾನಿ ಟೆಕ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್(Mokshambani Tech Services Pvt. Ltd.)ಸಂಸ್ಥೆಯ ಮಾಲೀಕರು ಹಾಗೂ ನಿರ್ದೇಶಕರಾದ ಅಂಬಾನಿ ಮಂಜುನಾಥ್ ಅವರ ನೇತೃತ್ವದಲ್ಲಿ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.1
- ಪ್ರಜಾಸೇವಾ ಕಾರ್ಯಕ್ರಮ ಪ್ರಚಾರದ ಕೊರತೆ ತಾಲೂಕು ಆಡಳಿತದ ವಿರುದ್ಧ ಕೆಆರ್ಎಸ್ ಮುಖಂಡ ಶಿವರೆಡ್ಡಿ ಆಕ್ರೋಶ ಪ್ರಜಾಸೇವಾ ಕಾರ್ಯಕ್ರಮ ಪ್ರಚಾರದ ಕೊರತೆ ತಾಲೂಕು ಆಡಳಿತದ ವಿರುದ್ಧ ಕೆಆರ್ಎಸ್ ಮುಖಂಡ ಶಿವರೆಡ್ಡಿ ಆಕ್ರೋಶ1
- ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ *ಪತ್ರಕರ್ತರ ಮೇಲಿನ ದೌರ್ಜನ್ಯ ಖಂಡಿಸಿ ಬೆಳಗಾವಿ ಚಲೋ’: ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅಸ್ಲಾಂ ಪಾಷಾ ಮನವಿ*1
- ಸ್ಥಳೀಯ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ 'Ambani a2z' ಮೊಬೈಲ್ ಆ್ಯಪ್ ಲೋಕಾರ್ಪಣೆ ಸ್ಥಳೀಯ ಕಾರ್ಮಿಕರಿಗೆ ಹಾಗೂ ನಿರುದ್ಯೋಗಿಗಳಿಗೆ ನಿರಂತರ ಉದ್ಯೋಗಾವಕಾಶ ಕಲ್ಪಿಸುವ ಮತ್ತು ಸಾರ್ವಜನಿಕರಿಗೆ ತ್ವರಿತವಾಗಿ ಮನೆ ಬಾಗಿಲಿಗೆ ಅಗತ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಚಿಂತಾಮಣಿಯಲ್ಲಿ 'Ambani a2z'ಎಂಬ ವಿನೂತನ ಸರ್ವೀಸ್ ವರ್ಕರ್ಸ್ ಮೊಬೈಲ್ ಆ್ಯಪ್ ಅನ್ನು ಅನಾವರಣಗೊಳಿಸಲಾಗಿದೆ. ಚಿಂತಾಮಣಿಯ ಮೋಕ್ಷಾಂಬಾನಿ ಟೆಕ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್(Mokshambani Tech Services Pvt. Ltd.)ಸಂಸ್ಥೆಯ ಮಾಲೀಕರು ಹಾಗೂ ನಿರ್ದೇಶಕರಾದ ಅಂಬಾನಿ ಮಂಜುನಾಥ್ ಅವರ ನೇತೃತ್ವದಲ್ಲಿ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಆ್ಯಪ್ನ ಪ್ರಮುಖ ವೈಶಿಷ್ಟ್ಯಗಳು: ಮಧ್ಯವರ್ತಿಗಳಿಲ್ಲದ ನೇರ ಸಂಪರ್ಕ: ಪ್ಲಂಬರ್,ಎಲೆಕ್ಟ್ರಿಷಿಯನ್,ಕಾರ್ಪೆಂಟರ್,ಪೇಂಟರ್, ಮನೆಗೆಲಸದವರು ಮತ್ತು ಚಾಲಕರು ಸೇರಿದಂತೆ ವಿವಿಧ ವೃತ್ತಿಯ ಕಾರ್ಮಿಕರು ಆ್ಯಪ್ನಲ್ಲಿ ನೋಂದಾಯಿಸಿಕೊಂಡು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಗ್ರಾಹಕರಿಂದ ಕೆಲಸ ಪಡೆಯಬಹುದು. ಮನೆ ಹಾಗೂ ಕಚೇರಿಗಳ ತುರ್ತು ಕೆಲಸಗಳಿಗೆ ನಂಬಿಕಸ್ತ ಮತ್ತು ಅನುಭವಿ ಕಾರ್ಮಿಕರನ್ನು ಮೊಬೈಲ್ ಮೂಲಕವೇ ಸುಲಭವಾಗಿ ಬುಕ್ ಮಾಡುವ ಸೌಲಭ್ಯವಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಲಭ್ಯವಿರುವ ಆನ್-ಡಿಮಾಂಡ್ ಸೇವೆಗಳ ಮಾದರಿಯಲ್ಲೇ,ಚಿಂತಾಮಣಿ ಹಾಗೂ ಸುತ್ತಮುತ್ತಲಿನ ತಾಲ್ಲೂಕುಗಳ ಜನರಿಗೂ ಒಂದೇ ಕ್ಲಿಕ್ನಲ್ಲಿ ಸೇವೆಗಳು ದೊರೆಯಲಿವೆ. ಆದಾಯ ಮತ್ತು ಸ್ಥಳೀಯ ಆರ್ಥಿಕತೆಗೆ ಉತ್ತೇಜನ: ಸ್ಥಳೀಯ ಕಾರ್ಮಿಕರು,ತಂತ್ರಜ್ಞರು ಮತ್ತು ಕುಶಲಕರ್ಮಿಗಳಿಗೆ ಡಿಜಿಟಲ್ ವೇದಿಕೆ ಕಲ್ಪಿಸಿ,ನಿರಂತರ ಕೆಲಸದ ಮೂಲಕ ಅವರ ಆದಾಯವನ್ನು ಹೆಚ್ಚಿಸುವುದು ಸಂಸ್ಥೆಯ ಪ್ರಮುಖ ಗುರಿಯಾಗಿದೆ.3
- ಸುಭಿಕ್ಷವಾದ ನಾಡು ನಮ್ಮ ಕನ್ನಡನಾಡು: ಶಿಡ್ಲಘಟ್ಟ ಸಾಹಿತ್ಯ ಸಮ್ಮೇಳನದಲ್ಲಿ ಶಾಸಕ ಬಿ.ಎನ್. ರವಿಕುಮಾರ್ ಬಣ್ಣನೆ1
- *ಪತ್ರಕರ್ತರ ಮೇಲಿನ ದೌರ್ಜನ್ಯ ಖಂಡಿಸಿ ಬೆಳಗಾವಿ ಚಲೋ’: ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅಸ್ಲಾಂ ಪಾಷಾ ಮನವಿ* ಚಿಂತಾಮಣಿ:ಪತ್ರಕರ್ತರ ಹಕ್ಕುಗಳು ಮತ್ತು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲು ‘ಬೆಳಗಾವಿ ಚಲೋ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಮಟ್ಟದ ಪತ್ರಕರ್ತರು ಮತ್ತು ಸಂಘಟನೆಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ತಾಲೂಕು ಅಧ್ಯಕ್ಷ ಸೈಯದ್ ಅಸ್ಲಾಂ ಪಾಷಾ ಕಳಕಳಿಯ ಮನವಿ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬೆಳಗಾವಿ ಚಲೋ ಹೋರಾಟವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಯುತ್ತಿರುವ ಹಲವಾರು ಘಟನೆಗಳು ನಮ್ಮ ಮುಂದಿದ್ದು,ಪತ್ರಕರ್ತರ ಹಕ್ಕುಗಳ ರಕ್ಷಣೆ ಹಾಗೂ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂಬುದು ಈ ಹೋರಾಟದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ವಿವರಿಸಿದ್ದಾರೆ.2
- ಮೈಸೂರು ಮಹಾರಾಜರ ಬಳಿ ಕೂಲಿ ಕೆಲಸ ಮಾಡ್ತಿದ್ರಾ ಹಾಜಿ ಮುಸ್ತಫಾ ಸಾಹೇಬರು? ಏನಿದು ಸಂಸದ ಮುನಿಸ್ವಾಮಿಯ ಲೆಕ್ಕಾಚಾರ?” “ಕ್ಲಾಕ್ ಟವರ್ ನಮ್ಮ ತಾತ ಕಟ್ಟಿಸಿದ್ದು! – ಜಮೀರ್ ಅಹ್ಮದ್ ಹೇಳಿಕೆ | ಹಾಜಿ ಮುಸ್ತಫಾ ಬಗ್ಗೆ ಮುನಿಸ್ವಾಮಿ ವ್ಯಂಗ್ಯ!” ಕೋಲಾರದ ಐತಿಹಾಸಿಕ ಕ್ಲಾಕ್ ಟವರ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಕ್ಲಾಕ್ ಟವರ್ ನಿರ್ಮಾಣದ ಹಿಂದೆ ತಮ್ಮ ತಾತ ಹಾಜಿ ಮೊಹಮ್ಮದ್ ಮುಸ್ತಫಾ ಸಾಹೇಬರ ಕೊಡುಗೆ ಇದೆ ಎಂದು ಅಂಜುಮಾನ್ ಇಸ್ಲಾಮಿಯಾ ಅಧ್ಯಕ್ಷ ಜಮೀರ್ ಅಹ್ಮದ್ ಹೇಳಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಕ್ಲಾಕ್ ಟವರ್ ತಮ್ಮ ತಾತ ನಿರ್ಮಿಸಿರುವ ಗೋಪುರವಾಗಿದ್ದು, ಕಟ್ಟಡ ಇರುವವರೆಗೂ ಹಾಜಿ ಮೊಹಮ್ಮದ್ ಮುಸ್ತಫಾ ಅವರ ಹೆಸರಿನೊಂದಿಗೆ ಗುರುತಿಸಬೇಕು ಎಂಬ ಅಭಿಪ್ರಾಯವನ್ನು ಜಮೀರ್ ಅಹ್ಮದ್ ವ್ಯಕ್ತಪಡಿಸಿದ್ದಾರೆ. ಈ ಗೋಪುರವನ್ನು ನಿರ್ವಹಣೆಗಾಗಿ ನಗರಸಭೆಗೆ ನೀಡಲಾಗಿದೆ, ಕುಟುಂಬದ ಆಸ್ತಿಯೆಂದು ಹೇಳುತ್ತಿಲ್ಲ ಎಂಬ ರೀತಿಯಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ. ಇನ್ನೊಂದೆಡೆ, ಸಂಸದ ಮಲ್ಲೇಶ್ ಬಾಬು ಅವರ ನಿಧಿಯಿಂದ ಸುಮಾರು ₹15 ಲಕ್ಷ ವೆಚ್ಚದಲ್ಲಿ ಕ್ಲಾಕ್ ಟವರ್ಗೆ ಗಡಿಯಾರ ಅಳವಡಿಸುವ ಸಂದರ್ಭದಲ್ಲಿ ಗಡಿಯಾರದಲ್ಲಿ ಸಂಸದರ ಹೆಸರು ನಮೂದಿಸಿರುವ ವಿಚಾರಕ್ಕೆ ವಿರೋಧ ವ್ಯಕ್ತವಾಗಿತ್ತು. ಈ ವಿವಾದದ ಬಳಿಕ ಗಡಿಯಾರ ತೆರವುಗೊಳಿಸಿರುವ ವಿಚಾರವೂ ಚರ್ಚೆಯಲ್ಲಿದೆ. ಇದೇ ವಿಚಾರವಾಗಿ ಮಾತನಾಡಿರುವ ಮಾಜಿ ಸಂಸದ ಮುನಿಸ್ವಾಮಿ, ಕ್ಲಾಕ್ ಟವರ್ ದೇಶದ ಆಸ್ತಿ, ನಗರಸಭೆಯ ಆಸ್ತಿ, ಜನರ ಆಸ್ತಿ ಎಂದು ಹೇಳುವ ಜೊತೆಗೆ, ಹಾಜಿ ಮೊಹಮ್ಮದ್ ಮುಸ್ತಫಾ ಸಾಹೇಬರು ಮೈಸೂರು ಮಹಾರಾಜರ ಬಳಿ ಕೂಲಿ ಕೆಲಸ ಮಾಡುತ್ತಿದ್ದರು ಎಂಬ ರೀತಿಯಲ್ಲಿ ವ್ಯಂಗ್ಯವಾಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಕ್ಲಾಕ್ ಟವರ್ ವಿವಾದದ ನಡುವೆ ಹಾಜಿ ಮೊಹಮ್ಮದ್ ಮುಸ್ತಫಾ ಸಾಹೇಬರ ಇತಿಹಾಸದ ಕುರಿತು ರಾಜಕೀಯ ವಾಕ್ಸಮರ ಆರಂಭವಾಗಿದ್ದು, ಈ ಹೇಳಿಕೆ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. KOLAR PULSE — ಜನರ ನಾಡಿ ಮಿಡಿತ.1
- ನಗರದ ಅಂಜನಿ ಲೇಕ್ ವುಡ್ ಬಡಾವಣೆಯಲ್ಲಿರುವ ಅಂತರಾಷ್ಟ್ರೀಯ ಮಟ್ಟದ ಅಂಜನಿ ಸ್ಕೇಟಿಂಗ್ ಕ್ರೀಡಾಂಗಣದಲ್ಲಿ ಡಿಸೆಂಬರ್ ,5ರಿಂದ 15 ರವರೆಗೆ "64 ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ಚಿಂತಾಮಣಿ: ನಗರದ ಅಂಜನಿ ಲೇಕ್ ವುಡ್ ಬಡಾವಣೆಯಲ್ಲಿರುವ ಅಂತರಾಷ್ಟ್ರೀಯ ಮಟ್ಟದ ಅಂಜನಿ ಸ್ಕೇಟಿಂಗ್ ಕ್ರೀಡಾಂಗಣದಲ್ಲಿ ಡಿಸೆಂಬರ್ 4 ರಿಂದ 15 ರವರೆಗೆ "64 ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ 2026" ಆಯೋಜಿಸಲಾಗಿದೆ ಎಂದು ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಆಡಳಿತವರ್ಗ ತಿಳಿಸಿದೆ. ಅಂಜನಿ ಲೇಕ್ ವುಡ್ ಬಡಾವಣೆಯಲ್ಲಿರುವ ಅಂತರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಕ್ರೀಡಾಂಗಣದಲ್ಲಿ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕ್ರೀಡಾಕೂಟವನ್ನು ಪ್ರಕಟಿಸಲಾಯಿತು.1