Shuru
Apke Nagar Ki App…
ಇಂದು ಮಾನವಿ ತಾಲ್ಲೂಕಿನ ಖಾಸಗಿ ಶಾಲೆಗಳು ಒಕ್ಕೂಟದ ವತಿಯಿಂದ ಶಿಕ್ಷಕರ ದಿನಾಚರಣೆ ಕುರಿತು ಮಾನವಿ:ಇಂದು ನಮ್ಮ ಮಾನವಿ ತಾಲ್ಲೂಕಿನಲ್ಲಿ ತಾಲ್ಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳು ಒಕ್ಕೂಟದ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಮಾಡುವ ಮೂಲಕ ಇವತ್ತಿನ ಸಂದರ್ಭದಲ್ಲಿ ನಮ್ಮ ಮಾನವಿ ತಾಲ್ಲೂಕಿನಲ್ಲಿ ಮತ್ತು ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅದರಲ್ಲಿ ಪ್ರತಿಭೆಯನ್ನು ಗುರುತಿಸಿ ಹಾಗೂ ಅವರ ಮನೋಭಾವವನ್ನು ಗುರುತಿಸಿ ಅಂತವರುನ್ನು ಉತ್ತಮ ಶಿಕ್ಷಕ ಮತ್ತು ಶಿಕ್ಷಕಿ ಎಂದು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಇದೆ ಸಂದರ್ಭದಲ್ಲಿ ನಮ್ಮ ಮಾನವಿ ಶಾಸಕರು ಮತ್ತು ಮಾಜಿ ಸಚಿವರ ಹಾಗೂ ಮಾಜಿ ಶಾಸಕರು ಮತ್ತು ಇನ್ನಿತರ ಪ್ರಮುಖ ಶಾಲೆಗಳು ಮುಖ್ಯಸ್ಥರು ಶಿಕ್ಷಕರು ಭಾಗವಹಿಸಿದರು
Nagesh Nagesh
ಇಂದು ಮಾನವಿ ತಾಲ್ಲೂಕಿನ ಖಾಸಗಿ ಶಾಲೆಗಳು ಒಕ್ಕೂಟದ ವತಿಯಿಂದ ಶಿಕ್ಷಕರ ದಿನಾಚರಣೆ ಕುರಿತು ಮಾನವಿ:ಇಂದು ನಮ್ಮ ಮಾನವಿ ತಾಲ್ಲೂಕಿನಲ್ಲಿ ತಾಲ್ಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳು ಒಕ್ಕೂಟದ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಮಾಡುವ ಮೂಲಕ ಇವತ್ತಿನ ಸಂದರ್ಭದಲ್ಲಿ ನಮ್ಮ ಮಾನವಿ ತಾಲ್ಲೂಕಿನಲ್ಲಿ ಮತ್ತು ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅದರಲ್ಲಿ ಪ್ರತಿಭೆಯನ್ನು ಗುರುತಿಸಿ ಹಾಗೂ ಅವರ ಮನೋಭಾವವನ್ನು ಗುರುತಿಸಿ ಅಂತವರುನ್ನು ಉತ್ತಮ ಶಿಕ್ಷಕ ಮತ್ತು ಶಿಕ್ಷಕಿ ಎಂದು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಇದೆ ಸಂದರ್ಭದಲ್ಲಿ ನಮ್ಮ ಮಾನವಿ ಶಾಸಕರು ಮತ್ತು ಮಾಜಿ ಸಚಿವರ ಹಾಗೂ ಮಾಜಿ ಶಾಸಕರು ಮತ್ತು ಇನ್ನಿತರ ಪ್ರಮುಖ ಶಾಲೆಗಳು ಮುಖ್ಯಸ್ಥರು ಶಿಕ್ಷಕರು ಭಾಗವಹಿಸಿದರು
More news from ಕರ್ನಾಟಕ and nearby areas
- ಮಸ್ಕಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಯುವ ಸಂಪತ್ತು ಸಭೆಗೆ ಚಾಲನೆ ಮಸ್ಕಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಯುವ ಸಂಪತ್ತು ಸಭೆಗೆ ಚಾಲನೆ ಮಸ್ಕಿ: ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಯುವ ಸಂಪತ್ತು ಸಭೆಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮಸ್ಕಿ ಶಾಸಕ **ಆರ್. ಬಸನಗೌಡ ತುರುವಿಹಾಳ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನದ ಆಶಯಗಳನ್ನು ಯುವಜನರಿಗೆ ಪರಿಚಯಿಸುವುದು ಅಗತ್ಯವಾಗಿದ್ದು, ಯುವಕರು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು. ಯುವಜನರಲ್ಲಿ ನಾಯಕತ್ವ ಗುಣ, ಸಾಮಾಜಿಕ ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಯುವಕರು ಹಾಗೂ ಸಾರ್ವಜನಿಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.1
- ಲಿಂಗಸುಗೂರು ಪಟ್ಟಣದ ವಾರ್ಡ್ ನಂಬರ್ 7ರ ಏಕದಂತ ಗಜಾನನ ಮಂಡಳಿ ವತಿಯಿಂದ 8ನೇ ವರ್ಷದ ಮಹೋತ್ಸವ: ಅದ್ಧೂರಿ ಗಣೇಶೋತ್ಸವಕ್ಕೆ ಚಾಲನೆ ಲಿಂಗಸುಗೂರು: ಪಟ್ಟಣದ ವಾಡಿ–7ರ ಏಕದಂತ ಗಣೇಶನ ಮಂಟಪದಲ್ಲಿ 8ನೇ ವರ್ಷದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಲಿಂಗಸುಗೂರು ಪಟ್ಟಣದ ವಾಡಿ–7ರ ಏಕದಂತ ಗಜಾನನ ಮಂಡಳಿ ವತಿಯಿಂದ 8ನೇ ವರ್ಷದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಸಂಭ್ರಮದಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ಗಳು ಹಾಗೂ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ನಡೆಸಲಾಯಿತು. ನಂತರ ವಿಜೇತರಾದ ಕ್ರೀಡಾಪಟುಗಳಿಗೆ ಏಕದಂತ ಗಜಾನನ ಮಂಡಳಿ ವತಿಯಿಂದ ಬಹುಮಾನ ವಿತರಣೆ ಮಾಡಲಾಯಿತು. ಹಾಗೂ ಮೂರನೆ ದಿನ ಸಂಜೆ ಬಾಜಾ ಬಜಂತ್ರಿ ಯೊಂದಿಗೆ ನೃತ್ಯದೊಂದಿಗೆ ಅದ್ದೂರಿಯಾಗಿ ವಿಸರ್ಜನೆ ಕೈಗೊಳ್ಳಲಾಯಿತು.4
- ಕಾಗಿನೆಲೆ ಶ್ರೀ ಕನಕ ಗಿರುಪೀಠ ಹೊಸಕೋಟೆಯ ಶ್ರೀ ಈಶ್ವರನಂದಪುರಿ ಸ್ವಾಮಿಜಿಗಳು ಗಣೇಶ ವಿಗ್ರಹಕ್ಕೆ ಆರತಿ ಮಾಡಿದರು. ಲಿಂಗಸುಗೂರು : ಕಾಗಿನೆಲೆ ಶ್ರೀ ಕನಕ ಗಿರುಪೀಠ ಹೊಸಕೋಟೆಯ ಪರಮ ಪೂಜ್ಯ ಶ್ರೀ ಈಶ್ವರನಂದಪುರಿ ಸ್ವಾಮಿಜಿಗಳು ಗಣೇಶ ಚತುರ್ಥಿ ದಿನದ ಹಂಗವಾಗಿ ವಿಘ್ನವಿನಾಶಕ ಶ್ರೀ ವಿನಾಯಕನ ವಿಗ್ರಹಕ್ಕೆ ಸಾಂಪ್ರದಾಯಕ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿದರು.1
- ಯಾದಗಿರಿ-ರಾಯಚೂರು ಹೆದ್ದಾರಿಯ ಅವೈಜ್ಞಾನಿಕ ಟೋಲ್ ತೆರವಿಗೆ ಉಮೇಶ್ ಕೆ. ಮುನ್ನಾಳ್ ಖಡಕ್ ಆಗ್ರಹ ಯಾದಗಿರಿ-ರಾಯಚೂರು ಹೆದ್ದಾರಿಯ ಆರ್. ಹೊಸಳ್ಳಿ-ನಾಗಲಾಪುರ ಮಧ್ಯದಲ್ಲಿರುವ ಟೋಲ್ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು, ಸಮರ್ಪಕ ವಿದ್ಯುತ್ ದೀಪಗಳು ಹಾಗೂ ಸುರಕ್ಷತಾ ಸೂಚನೆಗಳ ಕೊರತೆಯಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುನ್ನಾಳ್ ಆರೋಪಿಸಿದರು. ಸ್ಥಳಕ್ಕೆ ಭೇಟಿ ನೀಡಿ ರೈತರು ಹಾಗೂ ವಾಹನ ಸವಾರರೊಂದಿಗೆ ಚರ್ಚಿಸಿದ ಅವರು, ಟೋಲ್ ಅನ್ನು ತಕ್ಷಣ ತೆರವುಗೊಳಿಸಿ ಮುಂದಿನ ಅವಘಡಗಳನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈಗಾಗಲೇ ಹಲವು ಜೀವಗಳು ಬಲಿಯಾಗಿವೆ ಎಂದು ಹೇಳಿದ ಅವರು, ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ ಇದೇ ಸ್ಥಳದಲ್ಲಿ ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.1
- ಗಣೇಶ ಚತುರ್ಥಿ ಅಂಗವಾಗಿ ಕಾರಟಗಿಯಲ್ಲಿ ಸ್ಥಳೀಯ ಕಲಾವಿದರಿಂದ ತತ್ವಪದಗಳು2
- ಯಾದಗಿರಿ ತಾಲೂಕಿನ ತಹಸಿಲ್ ಕಚೇರಿಯಲ್ಲಿ ಆಧಾರ್ ಕಾರ್ಡ್ ಅಪ್ಲೋಡ್ ಮತ್ತು ರೇಷನ್ ಕಾರ್ಡ್ ಕೆವೈಸಿ ಮಾಡಲು ಬೆಂಗಳೂರಿನಿಂದ ಆಗಮಿಸಿ ಒಳಗಡೆ ಕರ್ನಾಟಕ 1 ನಲ್ಲಿ ಬೆಳಗ್ಗೆ 3:00 ಯಿಂದ ಯಾದಗಿರಿಯ ತಾಲೂಕಿನ ಕಚೇರಿಯ ಒಳಗಡೆ ಜನ ಜಾತ್ರೆ ಆಗಿದೆ ಬೆಂಗಳೂರಿನಲ್ಲಿ ಬಂದು ಲೈನ್ ಅಲ್ಲಿ ನಿಂತುಕೊಂಡು ಆದರೂ ಕೂಡ ಸರಿಯಾಗಿ ನೆಟ್ವರ್ಕ್ ಇಲ್ಲ ಮತ್ತು ಜನರು ಕಿತ್ತಿ ಹಾಡುತ್ತಿದ್ದರೆ ಜಿಲ್ಲೆಯ 16 ವರ್ಷ ಆದರೂ ಕೂಡ ಜಿಲ್ಲಾ ಆಡಳಿತ ಇದನ್ನು ಗಮನಿಸಿ ಸರಿಪಡಿಸಬೇಕು ಈಗಾಗಲೇ ಯಾತಗಿರಿ ಜಿಲ್ಲೆಯ ಬರಗಲ ಆಗಿದೆ ಬೆಳೆ ಇಲ್ಲದ ಕಾರಣ ರೈತರು ಸಾಲ ಮಾಡಿ ಬೆಂಗಳೂರಿನಲ್ಲಿ ದುಡಿ ದುಡಿಯುತ್ತಾ ಇದ್ದರೂ ಕೂಡ ಈ ಕೆವೈಸಿ ರೇಷನ್ ಕಾರ್ಡ್ ಸಲುವಾಗಿ ಜಿಲ್ಲೆಗೆ ಆಗಮಿಸಿ ತಿದ್ದು ಇದನ್ನು ಬಹಳ ರೈತರು ಕೂಲಿ ಕಾರ್ಮಿಕರು ಕೆಲಸ ಬಿಟ್ಟು ಬೆಳಗ್ಗೆ ಮೂರು ಗಂಟೆಯಿಂದ ಸಾಲಗಿ ನಿಲ್ಲುತ್ತದೆ ಇದು ಯಾವ ಶಾಪ ರೈತರ ಗೋಳು ವರು ಯಾರು ಇಲ್ಲ ಸರ್ಕಾರವೇ ಕಣ್ಣು ಮುಚ್ಚಿ ಕುಂತಿದೆ ಜನ ಆಕ್ರೋಶ1
- YADGIR NEWS||ನೀರು ಬೇಕಾಗಿದೆ, ನೀರು ಬಿಡಿ||ಅನ್ನದಾತರ ಭಜನೆ ಮುಖಾಂತರ|| ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಹೋರಾಟ..! ಯಾದಗಿರಿ: ರಾಜ್ಯದಲ್ಲಿ ಆವರಿಸಿರುವ ಭೀಕರ ಬರದ ಹಿನ್ನೆಲೆಯಲ್ಲಿ ಬತ್ತಿಹೋದ ಕೆರೆಗಳಿಗೆ ನೀರು ಹರಿಸಿ ಭರ್ತಿ ಮಾಡುವಂತೆ ಆಗ್ರಹಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಹೋರಾಟ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಬಲದೊಂದಿಗೆ ನಡೆದ ಪ್ರತಿಭಟನೆಯಲ್ಲಿ ರೈತರು ಭಜನೆ ಮಾಡುವ ಮೂಲಕ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಿದರು. ಬದ್ದೆಪಲ್ಲಿ ಹಾಗೂ ಮಲ್ಕಪನಳ್ಳಿ ಕೆರೆಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿಸಿ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು. ಕೆಬಿಜೆಎನ್‌ಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆಗಳು ಸಮರ್ಪಕವಾಗಿ ತುಂಬಿಲ್ಲ ಎಂದು ಆರೋಪಿಸಿದರು. ಮಳೆ ಕೈಕೊಟ್ಟ ಪರಿಣಾಮ ಕೆರೆಗಳು ಸಂಪೂರ್ಣ ಬತ್ತಿಹೋಗಿದ್ದು, ಕೆರೆ ನೀರನ್ನು ನಂಬಿ ಬೆಳೆ ಹಾಕಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಹಾಗೂ ಜಾನುವಾರುಗಳಿಗಾಗಿ ತಕ್ಷಣ ನೀರು ಹರಿಸಬೇಕು ಎಂದು ಆಗ್ರಹಿಸಿದ ರೈತರು, “ನೀರು ಬೇಕಾಗಿದೆ, ನೀರು ಬಿಡಿ” ಎಂದು ಭಜನೆ ಮಾಡಿ ಪ್ರತಿಭಟಿಸಿದರು. ಕೆರೆಗಳು ತುಂಬುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.1
- ಬಸವೇಶ್ವರನಗರದಲ್ಲಿ ಗೌರಿ ಗಣೇಶ ಹಬ್ಬ: ಶಾಸಕ ಆರ್. ಬಸನಗೌಡ ತುರುವಿಹಾಳರಿಂದ ಗಣೇಶ ದರ್ಶನ ಬಸವೇಶ್ವರನಗರದಲ್ಲಿ ಗೌರಿ ಗಣೇಶ ಹಬ್ಬ: ಶಾಸಕ ಆರ್. ಬಸನಗೌಡ ತುರುವಿಹಾಳರಿಂದ ಗಣೇಶ ದರ್ಶನ ಮಸ್ಕಿ: ಪಟ್ಟಣದ ಬಸವೇಶ್ವರನಗರದಲ್ಲಿ ಗೌರಿ ಗಣೇಶ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಸ್ಕಿ ಶಾಸಕ ಆರ್. ಬಸನಗೌಡ ತುರುವಿಹಾಳ ಅವರು ಗಣೇಶ ಮೂರ್ತಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಶಾಸಕ ಆರ್. ಬಸನಗೌಡ ತುರುವಿಹಾಳ ಅವರು, ಗೌರಿ ಗಣೇಶ ಹಬ್ಬವು ಜನರಲ್ಲಿ ಭಕ್ತಿ, ಸೌಹಾರ್ದತೆ ಹಾಗೂ ಒಗ್ಗಟ್ಟಿನ ಭಾವನೆ ಮೂಡಿಸುವ ಪ್ರಮುಖ ಹಬ್ಬವಾಗಿದೆ. ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕು ಎಂದು ಹೇಳಿದರು. ಬಸವೇಶ್ವರನಗರದ ಗಣೇಶೋತ್ಸವ ಸಮಿತಿ ವತಿಯಿಂದ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶನ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಸ್ಥಳೀಯ ಮುಖಂಡರು, ಸಾರ್ವಜನಿಕರು ಹಾಗೂ ಭಕ್ತರು ಉಪಸ್ಥಿತರಿದ್ದರು.1