logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಹಿಂಬಾಲಿಕೆ ವಿರೋಧಿಸಿದ ಯುವತಿಗೆ ಹಲ್ಲೆ ಮನೆಗೆ ನುಗ್ಗಿದ ಕಿಡಿಗೇಡಿಗಳ ದಾಳಿ ಪಶ್ಚಿಮ ಬಂಗಾಳ ಮೂಲದ 20 ವರ್ಷದ ಯುವತಿಯೊಬ್ಬಳನ್ನು ಹಿಂಬಾಲಿಸುತ್ತಿದ್ದ ಕಿಡಿಗೇಡಿಗಳ ತಂಡದ ವಿರುದ್ಧ ಎಚ್ಚರಿಕೆ ನೀಡಿದ್ದಕ್ಕೆ ಆಕೆಯ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಏಪ್ರಿಲ್ 3ರ ಮಧ್ಯರಾತ್ರಿ ನಡೆದ ಈ ಘಟನೆ ತಡವಾಗಿ ಬಹಿರಂಗವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ವರ್ತೂರು ಸಮೀಪದ ಶೆಡ್‌ನಲ್ಲಿ ವಾಸವಿದ್ದ ಯುವತಿ ಕೆಲಸಕ್ಕೆ ಹೋಗಿ ಬರುತ್ತಿದ್ದ ವೇಳೆ ಕೆಲ ದಿನಗಳಿಂದ ಅದೇ ಭಾಗದ ಕೆಲವರು ಹಿಂಬಾಲಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಕುರಿತು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಕಿಡಿಗೇಡಿಗಳು ಮನೆಗೆ ನುಗ್ಗಿ ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

2 hrs ago
user_Veega News Kannada
Veega News Kannada
Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
2 hrs ago

ಹಿಂಬಾಲಿಕೆ ವಿರೋಧಿಸಿದ ಯುವತಿಗೆ ಹಲ್ಲೆ ಮನೆಗೆ ನುಗ್ಗಿದ ಕಿಡಿಗೇಡಿಗಳ ದಾಳಿ ಪಶ್ಚಿಮ ಬಂಗಾಳ ಮೂಲದ 20 ವರ್ಷದ ಯುವತಿಯೊಬ್ಬಳನ್ನು ಹಿಂಬಾಲಿಸುತ್ತಿದ್ದ ಕಿಡಿಗೇಡಿಗಳ ತಂಡದ ವಿರುದ್ಧ ಎಚ್ಚರಿಕೆ ನೀಡಿದ್ದಕ್ಕೆ ಆಕೆಯ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಏಪ್ರಿಲ್ 3ರ ಮಧ್ಯರಾತ್ರಿ ನಡೆದ ಈ ಘಟನೆ ತಡವಾಗಿ ಬಹಿರಂಗವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ವರ್ತೂರು ಸಮೀಪದ ಶೆಡ್‌ನಲ್ಲಿ ವಾಸವಿದ್ದ ಯುವತಿ ಕೆಲಸಕ್ಕೆ ಹೋಗಿ ಬರುತ್ತಿದ್ದ ವೇಳೆ ಕೆಲ ದಿನಗಳಿಂದ ಅದೇ ಭಾಗದ ಕೆಲವರು ಹಿಂಬಾಲಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಕುರಿತು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಕಿಡಿಗೇಡಿಗಳು ಮನೆಗೆ ನುಗ್ಗಿ ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

More news from ಕರ್ನಾಟಕ and nearby areas
  • full dirty please clean this one full y dirty and this honor is not an agree in to clean not anyone cleaning this one. full dirty please clean this one full y dirty and this honor is not an agree in to clean not anyone cleaning this one.
    1
    full dirty please clean this one full y dirty and this honor is not an agree in to clean not anyone cleaning this one.   full dirty please clean this one full y dirty and this honor is not an agree in to clean not anyone cleaning this one.
    user_Ahmed Rasool
    Ahmed Rasool
    ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    11 hrs ago
  • ​ ಮಾಗಡಿ : ಡಾ.ಶಿವಕುಮಾರಸ್ವಾಮೀಜಿ ಅವರು ಕ್ರೀಷಿಯನ್ ಧರ್ಮದಲ್ಲಿ ಜನಿಸಿದಿದ್ರೆ ನೋಬೇಲ್ ಪಾರಿದೋಷಕ ಸಿಗುತ್ತಿತ್ತು ಎಂದು ಮೇಲಣಗವಿ ಮಠದ ಶ್ರೀಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ಗುಡೇಮಾರನಹಳ್ಳಿ ಗ್ರಾಮದಲ್ಲಿ ಗ್ರಾಮಾಂತರ ಬಸವ ಜಯಂತಿ, ಶ್ರೀಪಾರ್ವತಿ ಪರಮೇಶ್ವರ, ಶ್ರೀ ಬಸವೇಶ್ವರ ಸ್ವಾಮಿ ಉತ್ಸವ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಶ್ರೀಶಿವಕುಮಾರಸ್ವಾಮೀಜಿ ಸಮುದಾಯದ ಭವನದ 5 ನೇವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮದರ್ ಥೆರೆಸಾ ಏಗೆ ಪ್ರಶಸ್ತಿ ಲಭಿಸಿತ್ತೊ ಅದಕ್ಕಿಂತ ದೊಡ್ಡ ಕಾಂತ್ರಿ ಮಾಡಿದ ಶ್ರೀಗಳಿಗೆ ಇಡೀ ವಿಶ್ವವೇ ಮೆಚ್ಚುವ ಪಾರಿದೋಷಕ ಸಿಗುತ್ತಿತ್ತು ಆದರೆ ಪ್ರಾದೇಶಿಕವಾಗಿ ಉಳಿದ ಕಾರಣ ಅವರನ್ನು ಗುರುತಿಸಲಿಲ್ಲ ಪಾರಿದೋಷಕದಿಂದ ಅವರಿಗೇ ಏನು ಆಗಬೇಕಿಲ್ಲ. ಪಾರಿದೋಷಕ ಲಭಿಸಿದಿದ್ರೆ ಅದಕ್ಕೆ ಮತಷ್ಟು ಗೌರವಸಿಗುತಿತ್ತು ಭಗವಂತ ಮೆಚ್ಚುವಂತೆ ಸೇವೆ ಮಾಡಬೇಕು ಒರತು ಜನ ಮೆಚ್ಚಿಗೆಗೆ ಮಾಡಬಾರದು ಎಂದು ಶ್ರೀಗಳು ತೋರಿಸಿಕೊಟ್ಟಿದ್ದಾರೆ ಅವರ ತತ್ವ,ಆದರ್ಶಗಳನ್ನು ನಮ್ಮ ಜೀವನದಲ್ಲಿ ಆಳವಡಿಸಕೊಂಡಾಗ ಸಾರ್ಥಕ ಜೀವನ ಸಾಗಿಸಬಹುದು ಎಂದರು. ಬಸವ ಜಯಂತಿಯನ್ನು ಗ್ರಾಮಾಂತರ ಬಸವ ಜಯಂತಿ ಎಂದು ಆಚರಿಸುವ ಮೂಲಕ ಹೆಚ್ಚು ಮೆರಗು ನೀಡಿದ್ದರು. ಧಾರ್ಮಿಕ ಕಾರ್ಯಕ್ರಮದಲ್ಲಿ ಎಲ್ಲರಲ್ಲೂ ಅಭಿರುಚಿ ಇರಲಿ, ಪ್ರತಿ ಅಮಾವಾಸ್ಯೆ, ಪೋಣಾಮಿ ಯಂದು ಜಗಣ್ಣಯ್ಯನ ಮಠದ ಶ್ರೀಗಳ ನೇತೃತ್ವದಲ್ಲಿ ಈ ಸ್ಥಳದಲ್ಲಿ ಶಿವಾನುಭವ ಗೋಷ್ಠಿ ನಡೆಯುವ ಮೂಲಕ ಈ ಜಾಗಕ್ಕೆ ಜ್ಞಾನ ಸಂಪತ್ತು ಜ್ಞಾನ ದಾಸೋಹ ಹೆಚ್ಚಲಿದೆ ಇದರಿಂದ ಈ ಭವನ ಸಾರ್ಥಕವಾಗುತ್ತದೆ ಎಂದರು. ಅಕ್ಷಯ ತೃತಿಯದಂದು ಬಸವಣ್ಣ ಅವರನ್ನು ನೆನೆಪಿಸಿಕೊಳ್ಳದೆ ಪ್ರತಿ ಕ್ಷಣ ನೆನಪಿಸಿಕೊಂಡರೆ ಮನುಷ್ಯನಲ್ಲಿ ಜ್ಞಾನ ಸಂಪತ್ತು, ಆಚಾರ,ವಿಚಾರ ಬೆಳಕಿನಂತೆ ಉದಯಿಸಲಿದೆ ಇದರಿಂದ ಮನುಷ್ಯ ಹುಟ್ಟಿದಕ್ಕೂ ಸಾರ್ಥಕತೆಹೊಂದುತ್ತಾನೆ ಎಂದರು. ಗುಡೇಮಾರನಹಳ್ಳಿ ಜಗ್ಗಣ್ಣಯ್ಯನ ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ಜಾತಿ –ಮತದ ಭೇಧವಿಲ್ಲದ ಸಮ ಸಮಾಜದ ಕನಸು ಕಂಡಿದ್ದ ವಿಶ್ವಗುರು ಬಸವಣ್ಣನವರ ತತ್ವಗಳನ್ನು ಸ್ಮರಿಸಿಕೊಳ್ಳಬೇಕು. ಈ ಭವನಕ್ಕೆ ಸಿದ್ದಗಂಗಾಶ್ರೀಗಳು ಅಡಿಪಾಯ ಹಾಕಿದರಿಂದ ಸಾವಿರಾರು ಮಂದಿಗೆ ಅನುಕೂಲವಾಗಿದೆ ಎಂದರು. ಸಿದ್ದಲಿಂಗೇಶ್ವರ ನಾಟಕ ಮಂಡಳಿ ಕಲಾವಿದರಿಂದ ಜಗಜ್ಯೋತಿ ಬಸವೇಶ್ವರ ಐತಿಹಾಸಿಕ ನಾಟಕ ಪ್ರದರ್ಶನ ನಡೆಯಿತು. ಶಾಸಕ ಶ್ರೀನಿವಾಸ್, ತಮ್ಮಡಿಹಳ್ಳಿ ಮಠದ ಸಿದ್ದಲಿಂಗಸ್ವಾಮೀಜಿ, ಕೆಪಿ. ಬೃಂಗೇಶ್, ನಾಗರುದ್ರ ಶರ್ಮ, ವೀರಶೈವ ಲಿಂಗಾಯಿತ ಸೇವಾಟ್ರಸ್ಟ್ ಅಧ್ಯಕ್ಷ ಶಾಂತರಾಜು, ಕಾರ್ಯದರ್ಶಿ ಜಿ.ಎಂ.ರೇಣುಕಾರಾಧ್ಯ, ತಾ.ಪಂ. ಮಾಜಿ ಸದಸ್ಯರಾದ ಶಂಕರಪ್ಪ, ಅನಸೂಯ ಕಾಂತರಾಜು, ಗೀತಾ ಗಂಗರಂಗಯ್ಯ, ಶಿಕ್ಷಕ ಆರಾಧ್ಯ, ರೇಣುಕಪ್ಪ, ಚಂದ್ರಶೇಖರ್, ಎಸ್‍ಸಿಬಿಎಸ್ ಮಂಜುನಾಥ್ ಇತರರು ಇದ್ದರು.
    1
    ​ ಮಾಗಡಿ :  ಡಾ.ಶಿವಕುಮಾರಸ್ವಾಮೀಜಿ ಅವರು ಕ್ರೀಷಿಯನ್ ಧರ್ಮದಲ್ಲಿ  ಜನಿಸಿದಿದ್ರೆ ನೋಬೇಲ್ ಪಾರಿದೋಷಕ ಸಿಗುತ್ತಿತ್ತು ಎಂದು  ಮೇಲಣಗವಿ ಮಠದ ಶ್ರೀಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಗುಡೇಮಾರನಹಳ್ಳಿ ಗ್ರಾಮದಲ್ಲಿ ಗ್ರಾಮಾಂತರ ಬಸವ ಜಯಂತಿ, ಶ್ರೀಪಾರ್ವತಿ ಪರಮೇಶ್ವರ, ಶ್ರೀ ಬಸವೇಶ್ವರ ಸ್ವಾಮಿ ಉತ್ಸವ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಶ್ರೀಶಿವಕುಮಾರಸ್ವಾಮೀಜಿ ಸಮುದಾಯದ ಭವನದ 5 ನೇವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮದರ್ ಥೆರೆಸಾ ಏಗೆ ಪ್ರಶಸ್ತಿ ಲಭಿಸಿತ್ತೊ ಅದಕ್ಕಿಂತ ದೊಡ್ಡ ಕಾಂತ್ರಿ ಮಾಡಿದ ಶ್ರೀಗಳಿಗೆ ಇಡೀ ವಿಶ್ವವೇ ಮೆಚ್ಚುವ  ಪಾರಿದೋಷಕ ಸಿಗುತ್ತಿತ್ತು ಆದರೆ ಪ್ರಾದೇಶಿಕವಾಗಿ ಉಳಿದ ಕಾರಣ ಅವರನ್ನು ಗುರುತಿಸಲಿಲ್ಲ  ಪಾರಿದೋಷಕದಿಂದ ಅವರಿಗೇ ಏನು ಆಗಬೇಕಿಲ್ಲ. ಪಾರಿದೋಷಕ ಲಭಿಸಿದಿದ್ರೆ ಅದಕ್ಕೆ ಮತಷ್ಟು ಗೌರವಸಿಗುತಿತ್ತು  ಭಗವಂತ ಮೆಚ್ಚುವಂತೆ ಸೇವೆ ಮಾಡಬೇಕು ಒರತು ಜನ ಮೆಚ್ಚಿಗೆಗೆ ಮಾಡಬಾರದು ಎಂದು ಶ್ರೀಗಳು ತೋರಿಸಿಕೊಟ್ಟಿದ್ದಾರೆ ಅವರ ತತ್ವ,ಆದರ್ಶಗಳನ್ನು ನಮ್ಮ ಜೀವನದಲ್ಲಿ ಆಳವಡಿಸಕೊಂಡಾಗ ಸಾರ್ಥಕ ಜೀವನ ಸಾಗಿಸಬಹುದು ಎಂದರು.
ಬಸವ ಜಯಂತಿಯನ್ನು   ಗ್ರಾಮಾಂತರ ಬಸವ ಜಯಂತಿ ಎಂದು ಆಚರಿಸುವ ಮೂಲಕ ಹೆಚ್ಚು ಮೆರಗು ನೀಡಿದ್ದರು. ಧಾರ್ಮಿಕ ಕಾರ್ಯಕ್ರಮದಲ್ಲಿ ಎಲ್ಲರಲ್ಲೂ ಅಭಿರುಚಿ ಇರಲಿ,  ಪ್ರತಿ ಅಮಾವಾಸ್ಯೆ, ಪೋಣಾಮಿ ಯಂದು ಜಗಣ್ಣಯ್ಯನ  ಮಠದ ಶ್ರೀಗಳ ನೇತೃತ್ವದಲ್ಲಿ ಈ ಸ್ಥಳದಲ್ಲಿ ಶಿವಾನುಭವ ಗೋಷ್ಠಿ ನಡೆಯುವ ಮೂಲಕ  ಈ ಜಾಗಕ್ಕೆ  ಜ್ಞಾನ ಸಂಪತ್ತು ಜ್ಞಾನ ದಾಸೋಹ ಹೆಚ್ಚಲಿದೆ ಇದರಿಂದ  ಈ  ಭವನ ಸಾರ್ಥಕವಾಗುತ್ತದೆ ಎಂದರು.
ಅಕ್ಷಯ ತೃತಿಯದಂದು ಬಸವಣ್ಣ ಅವರನ್ನು ನೆನೆಪಿಸಿಕೊಳ್ಳದೆ ಪ್ರತಿ ಕ್ಷಣ ನೆನಪಿಸಿಕೊಂಡರೆ ಮನುಷ್ಯನಲ್ಲಿ ಜ್ಞಾನ ಸಂಪತ್ತು, ಆಚಾರ,ವಿಚಾರ ಬೆಳಕಿನಂತೆ ಉದಯಿಸಲಿದೆ ಇದರಿಂದ ಮನುಷ್ಯ ಹುಟ್ಟಿದಕ್ಕೂ ಸಾರ್ಥಕತೆಹೊಂದುತ್ತಾನೆ ಎಂದರು.
ಗುಡೇಮಾರನಹಳ್ಳಿ ಜಗ್ಗಣ್ಣಯ್ಯನ ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ,   ಜಾತಿ –ಮತದ ಭೇಧವಿಲ್ಲದ ಸಮ ಸಮಾಜದ ಕನಸು ಕಂಡಿದ್ದ ವಿಶ್ವಗುರು ಬಸವಣ್ಣನವರ ತತ್ವಗಳನ್ನು ಸ್ಮರಿಸಿಕೊಳ್ಳಬೇಕು.  ಈ ಭವನಕ್ಕೆ ಸಿದ್ದಗಂಗಾಶ್ರೀಗಳು ಅಡಿಪಾಯ ಹಾಕಿದರಿಂದ ಸಾವಿರಾರು ಮಂದಿಗೆ ಅನುಕೂಲವಾಗಿದೆ ಎಂದರು.
ಸಿದ್ದಲಿಂಗೇಶ್ವರ ನಾಟಕ ಮಂಡಳಿ ಕಲಾವಿದರಿಂದ ಜಗಜ್ಯೋತಿ ಬಸವೇಶ್ವರ ಐತಿಹಾಸಿಕ ನಾಟಕ ಪ್ರದರ್ಶನ ನಡೆಯಿತು.
ಶಾಸಕ ಶ್ರೀನಿವಾಸ್, ತಮ್ಮಡಿಹಳ್ಳಿ ಮಠದ ಸಿದ್ದಲಿಂಗಸ್ವಾಮೀಜಿ, ಕೆಪಿ. ಬೃಂಗೇಶ್,  ನಾಗರುದ್ರ ಶರ್ಮ, ವೀರಶೈವ ಲಿಂಗಾಯಿತ ಸೇವಾಟ್ರಸ್ಟ್ ಅಧ್ಯಕ್ಷ ಶಾಂತರಾಜು, ಕಾರ್ಯದರ್ಶಿ ಜಿ.ಎಂ.ರೇಣುಕಾರಾಧ್ಯ, ತಾ.ಪಂ. ಮಾಜಿ ಸದಸ್ಯರಾದ ಶಂಕರಪ್ಪ, ಅನಸೂಯ ಕಾಂತರಾಜು, ಗೀತಾ ಗಂಗರಂಗಯ್ಯ,  ಶಿಕ್ಷಕ ಆರಾಧ್ಯ,  ರೇಣುಕಪ್ಪ, ಚಂದ್ರಶೇಖರ್, ಎಸ್‍ಸಿಬಿಎಸ್ ಮಂಜುನಾಥ್  ಇತರರು ಇದ್ದರು.
    user_Siddalinga siddalinga
    Siddalinga siddalinga
    ಮಾಗಡಿ, ರಾಮನಗರ, ಕರ್ನಾಟಕ•
    23 hrs ago
  • Post by Rownak Ali khan
    1
    Post by Rownak Ali khan
    user_Rownak Ali khan
    Rownak Ali khan
    Local News Reporter ಕೋಲಾರ, ಕೋಲಾರ, ಕರ್ನಾಟಕ•
    8 hrs ago
  • KOLAR KI.AWAAZ KOUSAR
    1
    KOLAR KI.AWAAZ KOUSAR
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    11 hrs ago
  • ​ಕೋಲಾರ: ತಾಲೂಕಿನ ಹೋಳೂರು ಗ್ರಾಮದಲ್ಲಿ ಕುಡಿಯುವ ನೀರು ಹಿಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ದಲಿತ ಮಹಿಳೆಯರದ ಅಶ್ವಿನಿ ಮತ್ತು ಲಕ್ಷ್ಮೀದೇವಿ ಮೇಲೆ ಅಂಗಡಿ ಮಂಜಮ್ಮ ಎಂಬ ಸವರ್ಣೀಯ ಮಹಿಳೆ ಹಲ್ಲೆ ನಡೆಸಿರುವ ಘಟನೆ ಭಾನುವಾರ (ಏಪ್ರಿಲ್ 5, 2026) ಬೆಳಿಗ್ಗೆ 08 ಗಂಟ್ಟೆಗೆ ನಡೆದಿದೆ. ಜಾತಿ ಹೆಸರಿನಲ್ಲಿ ನಿಂದಿಸಿ, ಮಚ್ಚಿನಿಂದ ಹಲ್ಲೆಗೆ ಯತ್ನಿಸಿ, ಗಂಭೀರವಾಗಿ ಬಾಯಿಂದ ಕಚ್ಚಿ  ಗಾಯಗೊಳಿಸಿರುವ ಆರೋಪ ಕೇಳಿಬಂದಿದೆ. ​ಘಟನೆಯ ವಿವರ: ​ಹೋಳೂರು ಗ್ರಾಮದ ನಿವಾಸಿಗಳು ಅಶ್ವಿನಿ ಹಾಗೂ ಲಕ್ಷ್ಮೀದೇವಿ ಎಂಬುವರು ಭಾನುವಾರ ನೀರು ಹಿಡಿಯಲು ಟ್ಯಾಂಕ್ ಬಳಿ ಹೋದಾಗ, ಅದೇ ಗ್ರಾಮದ ಅಂಗಡಿ ಮಂಜಮ್ಮ ಎಂಬ ಮಹಿಳೆ ತಕರಾರು ತೆಗೆದಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭಿಸಿದ ಮಂಜಮ್ಮ, ಅಶ್ವಿನಿ ಹಾಗೂ ಲಕ್ಷ್ಮೀದೇವಿ ರವರನ್ನು ಜಾತಿ ಹೆಸರಿನಲ್ಲಿ ಕೆಟ್ಟದಾಗಿ ನಿಂದಿಸಿದ್ದಲ್ಲದೆ, ಬಾಯಿಂದ ಕಚ್ಚಿ ಗಾಯಮಾಡಿ ಮಚ್ಚು ಹಿಡಿದು ಜೀವ ಬೆದರಿಕೆ ಹಾಕಿದ್ದಾರೆ. ​ಸ್ಥಳೀಯರು ಮಧ್ಯಪ್ರವೇಶಿಸಿ ಮಚ್ಚನ್ನು ಕಸಿದುಕೊಂಡಾಗ, ಆಕ್ರೋಶಗೊಂಡ ಮಂಜಮ್ಮ ಅಶ್ವಿನಿ ರವರ ಕೈಯನ್ನು ಎರಡು ಬಾರಿ ಬಲವಾಗಿ ಕಚ್ಚಿ ಗಾಯಗೊಳಿಸಿದ್ದಾರೆ. ತಕ್ಷಣವೇ ಗಾಯಾಳುವನ್ನು ಆಂಬುಲೆನ್ಸ್ ಮೂಲಕ ಕೋಲಾರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ​ಮತ್ತೊಂದು ಸುತ್ತಿನ ಹಲ್ಲೆ: ​ಇದಾದ ಕೆಲವೇ ಸಮಯದಲ್ಲಿ,ಅಶ್ವಿನಿ ರವರ ತಂಗಿ ಆದ ಲಕ್ಷ್ಮಿ ದೇವಮ್ಮ ಎಂಬ  ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆಗೆ ಮುಳ್ಳು ಹಾಕಿ ತಡೆದು ಮಂಜಮ್ಮ ಮತ್ತು ತಂಡದವರು ಮತ್ತೆ ಗಲಾಟೆ ಆರಂಭಿಸಿದ್ದಾರೆ. ಲಕ್ಷ್ಮಿ ದೇವಮ್ಮ ಅವರಿಗೆ ಈ ಹಿಂದೆ ಶಸ್ತ್ರಚಿಕಿತ್ಸೆಯಾಗಿದ್ದರೂ ಸಹ, ಕಿಂಚಿತ್ತೂ ದಯೆಯಿಲ್ಲದೆ ಅವರ ಹೊಟ್ಟೆಗೆ ಕಾಲಿನಿಂದ ಒದ್ದು ದೌರ್ಜನ್ಯ ಎಸಗಲಾಗಿದೆ ಎನ್ನಲಾಗಿದೆ. ಅವರ ಕೊರಳಲ್ಲಿದ್ದ ತಾಳಿ ಸರವನ್ನು ಕಿತ್ತು ಎಸೆದಿದ್ದು, ಹಲ್ಲೆಯ ತೀವ್ರತೆಗೆ ಲಕ್ಷ್ಮಿ ದೇವಮ್ಮ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ​ಅಮಾನವೀಯ ನಡವಳಿಕೆ: ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದ ಆಟೋ ಚಾಲಕನಿಗೂ ಮಂಜಮ್ಮನಮಗ ಅರ್ಜುನ್ ರೆಡ್ಡಿ ಎಂಬ ವೆಕ್ತಿ ಆಟೋ ಚಾಲಕನನ್ನು ರಸ್ತೆಯಲ್ಲಿ ತಡೆದು . "ನಿನಗೆ ಇವರು ಏನು ಸಂಬಂಧ?" ಎಂದು ಪ್ರಶ್ನಿಸಿ ಆತನ ಮೇಲೆಯೂ ಹಲ್ಲೆ ಮಾಡಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ​ನ್ಯಾಯಕ್ಕಾಗಿ ಆಗ್ರಹ: ​ಸದ್ಯ ಇಬ್ಬರೂ ಮಹಿಳೆಯರು ಕೋಲಾರದ ಎಸ್.ಎನ್ .ಆರ್ (SNR) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಅಂಗಡಿ ಮಂಜಮ್ಮ ಎಂಬುವವರನ್ನು ಕೂಡಲೇ ಬಂಧಿಸಬೇಕು ಮತ್ತು ದಲಿತ ಮಹಿಳೆಯರಿಗೆ ಸೂಕ್ತ ನ್ಯಾಯ ಹಾಗೂ ರಕ್ಷಣೆ ಒದಗಿಸಬೇಕು ಎಂದು  ದಲಿತ ಮುಖಂಡರು ಮತ್ತು ಸಂತ್ರಸ್ತ ಕುಟುಂಬದವರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ. ​ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
    1
    ​ಕೋಲಾರ: ತಾಲೂಕಿನ ಹೋಳೂರು ಗ್ರಾಮದಲ್ಲಿ ಕುಡಿಯುವ ನೀರು ಹಿಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ದಲಿತ ಮಹಿಳೆಯರದ ಅಶ್ವಿನಿ ಮತ್ತು ಲಕ್ಷ್ಮೀದೇವಿ ಮೇಲೆ ಅಂಗಡಿ ಮಂಜಮ್ಮ ಎಂಬ ಸವರ್ಣೀಯ ಮಹಿಳೆ ಹಲ್ಲೆ ನಡೆಸಿರುವ ಘಟನೆ ಭಾನುವಾರ (ಏಪ್ರಿಲ್ 5, 2026) ಬೆಳಿಗ್ಗೆ 08 ಗಂಟ್ಟೆಗೆ ನಡೆದಿದೆ. ಜಾತಿ ಹೆಸರಿನಲ್ಲಿ ನಿಂದಿಸಿ, ಮಚ್ಚಿನಿಂದ ಹಲ್ಲೆಗೆ ಯತ್ನಿಸಿ, ಗಂಭೀರವಾಗಿ ಬಾಯಿಂದ ಕಚ್ಚಿ  ಗಾಯಗೊಳಿಸಿರುವ ಆರೋಪ ಕೇಳಿಬಂದಿದೆ.
​ಘಟನೆಯ ವಿವರ:
​ಹೋಳೂರು ಗ್ರಾಮದ ನಿವಾಸಿಗಳು ಅಶ್ವಿನಿ ಹಾಗೂ ಲಕ್ಷ್ಮೀದೇವಿ ಎಂಬುವರು ಭಾನುವಾರ ನೀರು ಹಿಡಿಯಲು ಟ್ಯಾಂಕ್ ಬಳಿ ಹೋದಾಗ, ಅದೇ ಗ್ರಾಮದ ಅಂಗಡಿ ಮಂಜಮ್ಮ ಎಂಬ ಮಹಿಳೆ ತಕರಾರು ತೆಗೆದಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭಿಸಿದ ಮಂಜಮ್ಮ, ಅಶ್ವಿನಿ ಹಾಗೂ ಲಕ್ಷ್ಮೀದೇವಿ ರವರನ್ನು ಜಾತಿ ಹೆಸರಿನಲ್ಲಿ ಕೆಟ್ಟದಾಗಿ ನಿಂದಿಸಿದ್ದಲ್ಲದೆ, ಬಾಯಿಂದ ಕಚ್ಚಿ ಗಾಯಮಾಡಿ ಮಚ್ಚು ಹಿಡಿದು ಜೀವ ಬೆದರಿಕೆ ಹಾಕಿದ್ದಾರೆ.
​ಸ್ಥಳೀಯರು ಮಧ್ಯಪ್ರವೇಶಿಸಿ ಮಚ್ಚನ್ನು ಕಸಿದುಕೊಂಡಾಗ, ಆಕ್ರೋಶಗೊಂಡ ಮಂಜಮ್ಮ ಅಶ್ವಿನಿ ರವರ ಕೈಯನ್ನು ಎರಡು ಬಾರಿ ಬಲವಾಗಿ ಕಚ್ಚಿ ಗಾಯಗೊಳಿಸಿದ್ದಾರೆ. ತಕ್ಷಣವೇ ಗಾಯಾಳುವನ್ನು ಆಂಬುಲೆನ್ಸ್ ಮೂಲಕ ಕೋಲಾರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
​ಮತ್ತೊಂದು ಸುತ್ತಿನ ಹಲ್ಲೆ:
​ಇದಾದ ಕೆಲವೇ ಸಮಯದಲ್ಲಿ,ಅಶ್ವಿನಿ ರವರ ತಂಗಿ ಆದ ಲಕ್ಷ್ಮಿ ದೇವಮ್ಮ ಎಂಬ  ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆಗೆ ಮುಳ್ಳು ಹಾಕಿ ತಡೆದು ಮಂಜಮ್ಮ ಮತ್ತು ತಂಡದವರು ಮತ್ತೆ ಗಲಾಟೆ ಆರಂಭಿಸಿದ್ದಾರೆ. ಲಕ್ಷ್ಮಿ ದೇವಮ್ಮ ಅವರಿಗೆ ಈ ಹಿಂದೆ ಶಸ್ತ್ರಚಿಕಿತ್ಸೆಯಾಗಿದ್ದರೂ ಸಹ, ಕಿಂಚಿತ್ತೂ ದಯೆಯಿಲ್ಲದೆ ಅವರ ಹೊಟ್ಟೆಗೆ ಕಾಲಿನಿಂದ ಒದ್ದು ದೌರ್ಜನ್ಯ ಎಸಗಲಾಗಿದೆ ಎನ್ನಲಾಗಿದೆ. ಅವರ ಕೊರಳಲ್ಲಿದ್ದ ತಾಳಿ ಸರವನ್ನು ಕಿತ್ತು ಎಸೆದಿದ್ದು, ಹಲ್ಲೆಯ ತೀವ್ರತೆಗೆ ಲಕ್ಷ್ಮಿ ದೇವಮ್ಮ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
​ಅಮಾನವೀಯ ನಡವಳಿಕೆ:
ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದ ಆಟೋ ಚಾಲಕನಿಗೂ ಮಂಜಮ್ಮನಮಗ ಅರ್ಜುನ್ ರೆಡ್ಡಿ ಎಂಬ ವೆಕ್ತಿ ಆಟೋ ಚಾಲಕನನ್ನು ರಸ್ತೆಯಲ್ಲಿ ತಡೆದು . "ನಿನಗೆ ಇವರು ಏನು ಸಂಬಂಧ?" ಎಂದು ಪ್ರಶ್ನಿಸಿ ಆತನ ಮೇಲೆಯೂ ಹಲ್ಲೆ ಮಾಡಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
​ನ್ಯಾಯಕ್ಕಾಗಿ ಆಗ್ರಹ:
​ಸದ್ಯ ಇಬ್ಬರೂ ಮಹಿಳೆಯರು ಕೋಲಾರದ ಎಸ್.ಎನ್ .ಆರ್ (SNR) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಅಂಗಡಿ ಮಂಜಮ್ಮ ಎಂಬುವವರನ್ನು ಕೂಡಲೇ ಬಂಧಿಸಬೇಕು ಮತ್ತು ದಲಿತ ಮಹಿಳೆಯರಿಗೆ ಸೂಕ್ತ ನ್ಯಾಯ ಹಾಗೂ ರಕ್ಷಣೆ ಒದಗಿಸಬೇಕು ಎಂದು  ದಲಿತ ಮುಖಂಡರು ಮತ್ತು ಸಂತ್ರಸ್ತ ಕುಟುಂಬದವರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
​ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
    user_SSK ಜನಪರ ಸುದ್ದಿ 91
    SSK ಜನಪರ ಸುದ್ದಿ 91
    Singer ಕೋಲಾರ, ಕೋಲಾರ, ಕರ್ನಾಟಕ•
    20 hrs ago
  • ಸೋಮಯಾಜಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಸೋಮಯಾಜಲಹಳ್ಳಿ ಗ್ರಾಮದ ಕೆರೆಯಲ್ಲಿ ಹಾಡಹಗಲೇ ಮಣ್ಣು ತೆಗೆಯುವ ಮೂಲಕ ಅಕ್ರಮವಾಗಿ ಸಾಗಾಟ ನಡೆಸುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ…
    1
    ಸೋಮಯಾಜಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಸೋಮಯಾಜಲಹಳ್ಳಿ ಗ್ರಾಮದ ಕೆರೆಯಲ್ಲಿ ಹಾಡಹಗಲೇ ಮಣ್ಣು ತೆಗೆಯುವ ಮೂಲಕ ಅಕ್ರಮವಾಗಿ ಸಾಗಾಟ ನಡೆಸುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ…
    user_Arunkumar H M
    Arunkumar H M
    ಶ್ರೀನಿವಾಸಪುರ, ಕೋಲಾರ, ಕರ್ನಾಟಕ•
    9 hrs ago
  • ಬುಧವಾರ ಸಂಜೆ ಮತ್ತು ರಾತ್ರಿ ಕುಷ್ಟಗಿ ಸೇರಿದಂತೆ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಸುಮಾರು ಅರ್ಧ ಗಂಟೆಗಳ ಕಾಲ ಗುಡುಗು, ಸಿಡಿಲು ಹಾಗೂ ಬಿರುಗಾಳಿಯೊಂದಿಗೆ ರಭಸವಾಗಿ ಮಳೆ ಸುರಿದಿದ್ದು, ಬಿಸಿಲಿನ ತೀವ್ರತೆಯಿಂದ ಕಂಗೆಟ್ಟಿದ್ದ ಜನರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಮಧ್ಯಾಹ್ನದ ಬಳಿಕ ಆಕಾಶದಲ್ಲಿ ಮೋಡ ಕವಿದು ಗಾಳಿ ಜೋರಾಗಿ ಬೀಸತೊಡಗಿದ ಬಳಿಕ ಕೆಲವೇ ಕ್ಷಣಗಳಲ್ಲಿ ಮಳೆ ಆರಂಭವಾಯಿತು. ಗುಡುಗು ಮತ್ತು ಮಿಂಚಿನ ಅಬ್ಬರದಿಂದ ಕೆಲಕಾಲ ಜನರಲ್ಲಿ ಆತಂಕವೂ ಉಂಟಾಯಿತು. ಬಿಸಿಲಿನ ಉಷ್ಣತೆ ಕಡಿಮೆಯಾಗಿದ್ದರೂ ಕೆಲವು ಕಡೆ ಗಾಳಿಯಿಂದ ಸಣ್ಣಪುಟ್ಟ ಹಾನಿ ಸಂಭವಿಸಿರುವ ವರದಿಗಳೂ ಕೇಳಿಬಂದಿವೆ
    1
    ಬುಧವಾರ ಸಂಜೆ ಮತ್ತು ರಾತ್ರಿ ಕುಷ್ಟಗಿ ಸೇರಿದಂತೆ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಸುಮಾರು ಅರ್ಧ ಗಂಟೆಗಳ ಕಾಲ ಗುಡುಗು, ಸಿಡಿಲು ಹಾಗೂ ಬಿರುಗಾಳಿಯೊಂದಿಗೆ ರಭಸವಾಗಿ ಮಳೆ ಸುರಿದಿದ್ದು, ಬಿಸಿಲಿನ ತೀವ್ರತೆಯಿಂದ ಕಂಗೆಟ್ಟಿದ್ದ ಜನರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಮಧ್ಯಾಹ್ನದ ಬಳಿಕ ಆಕಾಶದಲ್ಲಿ ಮೋಡ ಕವಿದು ಗಾಳಿ ಜೋರಾಗಿ ಬೀಸತೊಡಗಿದ ಬಳಿಕ ಕೆಲವೇ ಕ್ಷಣಗಳಲ್ಲಿ ಮಳೆ ಆರಂಭವಾಯಿತು. ಗುಡುಗು ಮತ್ತು ಮಿಂಚಿನ ಅಬ್ಬರದಿಂದ ಕೆಲಕಾಲ ಜನರಲ್ಲಿ ಆತಂಕವೂ ಉಂಟಾಯಿತು. ಬಿಸಿಲಿನ ಉಷ್ಣತೆ ಕಡಿಮೆಯಾಗಿದ್ದರೂ ಕೆಲವು ಕಡೆ ಗಾಳಿಯಿಂದ ಸಣ್ಣಪುಟ್ಟ ಹಾನಿ ಸಂಭವಿಸಿರುವ ವರದಿಗಳೂ ಕೇಳಿಬಂದಿವೆ
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    8 hrs ago
  • ಹನೂರು : ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ವಿದ್ಯಾವಾರಾದಿ ರವರಿಗೆ ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ರಾಜ್ಯಪಾಲರಾದ ಥಾವರ್ ಚಂದ್ ಗೇಹ್ಲೋಟ್ ರವರು ಪಿ ಎಚ್ ಡಿ ಪದವಿ ಪ್ರಧಾನ ಮಾಡಿದರು. ಏಪ್ರಿಲ್ ಏಳ ರಂದು ಬೆಂಗಳೂರು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 12 ಮತ್ತು 13ನೇ ಘಟಿಕೋತ್ಸವದ ಸಮಾರಂಭದಲ್ಲಿ ವಿತರಿಸಿದ್ದಾರೆ. ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ರವರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಕುಂದೂರು ಮಠದ ಮಠಾಧಿಪತಿಗಳಾದ ಶ್ರೀ ಶರತ್ ಚಂದ್ರ ಸ್ವಾಮಿಗಳ ಮಾರ್ಗದರ್ಶನದಲ್ಲಿ ವೇದಾಂತ ವಿಭಾಗದಲ್ಲಿ ಅಂಶುಮದಾಗಮಮ್ ಸಂಪದನಾತ್ಮಕ ಅಧ್ಯಯನಮ್ ಎಂಬ ವಿಷಯದಲ್ಲಿ ಹಸ್ತಪ್ರತಿ ಅಧ್ಯಯನ ಮಾಡಿ ಸಂಶೋಧನಾ ಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಮಂಡಿಸಿದ್ದರು. ಘಟಿಕೋತ್ಸವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಸಭಾ ಸದಸ್ಯರಾದ ಡಾ. ಸಿ.ಎನ್. ಮಂಜುನಾಥ್ ಅವರು ಘಟಿಕೋತ್ಸವ ಭಾಷಣ ಮಾಡಿದರು, ಉಪಕುಲಪತಿ ಶ್ರೀಮತಿ ಅಹಲ್ಯ ಕುಲಸಚಿವರಾದ ಪ್ರೊ. ಗಿರೀಶ್ ಚಂದ್ರ ಉಪಸ್ಥಿತರಿದ್ದರು. ಸಾಲೂರು ಶ್ರೀಗಳ ಸಾಧನೆ: ಗ್ರಂಥಕ್ಕೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು 2024ನೇ ಸಾಲಿನ 'ಸಂಸ್ಕೃತ ಗ್ರಂಥ ಪುರಸ್ಕಾರವು ಲಭಿಸಿದೆ. ಪರಮಪೂಜ್ಯ ಲಿಂ. ಶ್ರೀ ಗುರುಸ್ವಾಮೀಜಿ ಆಶೀರ್ವಾದ, ಪ್ರೇರಣೆ ನೀಡಿದ ಕುಂದೂರು ಮಠದ ಡಾ.ಶರತ್‌ಚಂದ್ರ ಸ್ವಾಮೀಜಿ, ಸುತ್ತೂರು ದೇಗುಲಮಠದ ಶ್ರೀಗಳ ಮಾರ್ಗದರ್ಶನದಲ್ಲಿ ಶ್ರೀಮಠದ ಅಭ್ಯುದಯಕ್ಕಾಗಿ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ಭಾರತ ಸರ್ಕಾರ ಭಾರತೀಯ ಭಾಷಾ ಸಂಸ್ಥಾನದಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿ, ಅನಂತರ 8 ಆಗಸ್ಟ್ 2020 ರಂದು ಶ್ರೀ ಸಾಲೂರು ಬೃಹನ್ಮಠಕ್ಕೆ ಪಟ್ಟಾಭಿಷೇಕವಾಯಿತು. ಇಂದು ಶ್ರೀ ಕ್ಷೇತ್ರದ ಶ್ರೀ ಸಾಲೂರು ಬೃಹನ್ಮಠದಲ್ಲಿ ಪೂಜ್ಯ ಲಿಂ. ಪಟ್ಟದ ಗುರುಸ್ವಾಮಿಗಳವರು ಮತ್ತು ಭಕ್ತರ ಆಶಯದಂತೆ ಶ್ರೀಮಠದ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರೌಢಪ್ರಬಂಧದಲ್ಲಿ ಶ್ರೀಗಳು ಸಂಪಾದಿಸಿರುವ ಪ್ರೌಢಪ್ರಬಂಧದಲ್ಲಿ ಅಂಕುಮದಾಗಮದಲ್ಲಿ 84 ಅಧ್ಯಾಯಗಳಿವೆ. 84 ಅಧ್ಯಾಯಗಳು ಇವುಗಳೆಲ್ಲ ಪರಿಪೂರ್ಣವಾಗಿ ದೇವಾಲಯಗಳು ಮತ್ತು ಅವುಗಳ ಪೂಜಾದಿ ಆರಂಭಿಸಿ, ಸಕಳ ಸ್ಥಾಪನ, ಅತ್ಯಾರ್ಥಯಜನ ಪವಿತ್ರ ವಿಧಿ, ಪಂಚಾಮೃತ ವಿಧಿ, ಚೂರ್ಣೋತ್ಸವ ವಿಧಿ, ಪರಸುಪ್ರತ್ತಯ ವಿಧಿ, ಪಾದ್ಯಾದಿವಿಧಿಗಳನ್ನು ಇಲ್ಲಿ ಅತ್ಯಂತ ಸುವಿಸ್ತಾರವಾಗಿ ವರ್ಣಿತವಾಗಿವೆ. ವಿವಿಧ ದೇವತೆಗಳಿಗೆ ಸಂಬಂಧಿಸಿದ ಅರ್ಚನಾ ಕ್ರಮಗಳ ವಿವರಗಳೂ ಇವೆ. ಉದಾಹರಣೆಗೆ ವಿನಾಯಕ ವ್ರತ, ಮುಖಲಿಂಗಾರ್ಚನ, ಗೌರೀಪವಿತ್ರ ವಿಧಿ, ನಕ್ಷತ್ರ ಪೂಜಾ ವಿಧಿ. ಅರ್ಧನಾರೀಶ್ವರ ಪೂಜಾ ವಿಧಿ. ಚಂದೇಕಾರ್ಚನ ವಿಧಿ ಮಹಾಶಾಂತಿ ವಿಧಿ, ದೇವೀಪೂಜಾ ವಿಧಿ. ಈ ಆಗಮದ ಅತ್ಯಂತ ಮಹತ್ವದ ಮತ್ತೊಂದು ಸಂಗತಿ ಏನೆಂದರೆ, ಇಲ್ಲಿ ದೇವಾಲಯಗಳ ನಿರ್ಮಾಣ, ಮೂರ್ತಿ ನಿರ್ಮಾಣದ ವಿಧಾನಗಳೂ ಸೇನಾಸ್ಥಂಭ, ಅಶ್ವಸ್ತಂಭಗಳ ಸ್ಥಾಪನೆ ಇತ್ಯಾದಿ ವಿವರಗಳಿವೆ. ಇವುಗಳ ಜತೆಗೆ, ರುದ್ರಾಕ್ರ ಭಸ್ಮಾದಿ ವಿಧಿಗಳು, ಕೃತ್ತಿಕಾದೀಪ ವಿಧಿ, ವಿವಿಧ ಪ್ರಾಯಶ್ಚಿತ್ರಗಳು, ಪ್ರದೋಷ ಪೂಜಾದಿ ವಿಧಿಗಳೆಲ್ಲವೂ ವಿಸ್ತಾರವಾಗಿ ವಿವರಣೆಗೊಂಡಿವೆ. ಇದು ದೇವಾಲಯಗಳ ವಿವಿಧ ಕರ್ಮ ವಿಧಾನಗಳಿಗೆ ಸಹಕಾರಿಯಾಗಲಿವೆ. ಶೈವ ದೇವಾಲಯಗಳ ವಿಧಿವಿಧಾನಗಳ ಬಗ್ಗೆ ಅಧ್ಯಯನ ಮಾಡುವ ಸಂಶೋಧಕರಿಗೆ ಇದು ಅನುಕೂಲವಾಗುತ್ತದೆ. ಸಾಲೂರು ಶ್ರೀಗಳನ್ನು ಪಿಎಚ್. ಡಿವರೆಗೂ ಕೈ ಹಿಡಿದು ಮುನ್ನಡೆಸಿರುವವರು ಮತ್ತೊಬ್ಬ ಶ್ರೀಗಳು. ಕುಂದೂರು ಮಠದ ಮಠಾಧೀಫತಿಗಳು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ ಆಗಿರುವ ಖ್ಯಾತ ವಿದ್ವಾಂಸರಾದ ಡಾ.ಶರತ್‌ ಚಂದ್ರ ಸ್ವಾಮೀಜಿ ಮಾರ್ಗದರ್ಶನ ಗುರಿ ತಲುಪಿಸಿದೆ. ಅಂದು ಸೋತು ಬಂದ ಶಿಷ್ಯನನ್ನು ಇಂದು ಗೆಲ್ಲಿಸಿದ್ದಾರೆ. ಶ್ರೀಗಳು ಪಿಯುಸಿ ಫೇಲ್ ಆದ ಸಂದರ್ಭದಲ್ಲಿ ಡಾ.ಶರತ್ ಚಂದ್ರ ಸ್ವಾಮೀಜಿ ಆತ್ಮಸ್ಥೆರ್ಯ ತುಂಬಿದರು. ಸಂಸ್ಕೃತ ಅಧ್ಯಯನ ಮಾಡಿಸಿದರು. ಎಂ.ಎ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಾಗ ಮತ್ತೆ ಪರೀಕ್ಷೆ ಬರೆಯಲು ಸಲಹೆ ನೀಡಿ ಪೂಜ್ಯರು ಎಂ.ಫೀಲ್ ಮತ್ತು ಪಿ.ಎಚ್ಡಿ ಗೆ ಮಾರ್ಗದರ್ಶನ ನೀಡಿದನ್ನು ಸಾಲೂರು ಶ್ರೀಗಳು ಸ್ಮರಿಸಿಕೊಂಡಿದ್ದಾರೆ.
    1
    ಹನೂರು : ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ವಿದ್ಯಾವಾರಾದಿ ರವರಿಗೆ ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ರಾಜ್ಯಪಾಲರಾದ ಥಾವರ್ ಚಂದ್ ಗೇಹ್ಲೋಟ್ ರವರು ಪಿ ಎಚ್ ಡಿ ಪದವಿ ಪ್ರಧಾನ ಮಾಡಿದರು. 
ಏಪ್ರಿಲ್ ಏಳ ರಂದು ಬೆಂಗಳೂರು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 12 ಮತ್ತು 13ನೇ ಘಟಿಕೋತ್ಸವದ ಸಮಾರಂಭದಲ್ಲಿ ವಿತರಿಸಿದ್ದಾರೆ.
ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ರವರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಕುಂದೂರು ಮಠದ ಮಠಾಧಿಪತಿಗಳಾದ ಶ್ರೀ ಶರತ್ ಚಂದ್ರ ಸ್ವಾಮಿಗಳ ಮಾರ್ಗದರ್ಶನದಲ್ಲಿ ವೇದಾಂತ ವಿಭಾಗದಲ್ಲಿ ಅಂಶುಮದಾಗಮಮ್ ಸಂಪದನಾತ್ಮಕ ಅಧ್ಯಯನಮ್ ಎಂಬ ವಿಷಯದಲ್ಲಿ ಹಸ್ತಪ್ರತಿ ಅಧ್ಯಯನ ಮಾಡಿ ಸಂಶೋಧನಾ ಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಮಂಡಿಸಿದ್ದರು.
ಘಟಿಕೋತ್ಸವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಸಭಾ ಸದಸ್ಯರಾದ ಡಾ. ಸಿ.ಎನ್. ಮಂಜುನಾಥ್ ಅವರು ಘಟಿಕೋತ್ಸವ ಭಾಷಣ ಮಾಡಿದರು, ಉಪಕುಲಪತಿ ಶ್ರೀಮತಿ ಅಹಲ್ಯ ಕುಲಸಚಿವರಾದ ಪ್ರೊ. ಗಿರೀಶ್ ಚಂದ್ರ ಉಪಸ್ಥಿತರಿದ್ದರು.
ಸಾಲೂರು ಶ್ರೀಗಳ ಸಾಧನೆ: 
ಗ್ರಂಥಕ್ಕೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು 2024ನೇ ಸಾಲಿನ 'ಸಂಸ್ಕೃತ ಗ್ರಂಥ ಪುರಸ್ಕಾರವು ಲಭಿಸಿದೆ.
ಪರಮಪೂಜ್ಯ ಲಿಂ. ಶ್ರೀ ಗುರುಸ್ವಾಮೀಜಿ ಆಶೀರ್ವಾದ, ಪ್ರೇರಣೆ ನೀಡಿದ ಕುಂದೂರು ಮಠದ ಡಾ.ಶರತ್‌ಚಂದ್ರ ಸ್ವಾಮೀಜಿ, ಸುತ್ತೂರು ದೇಗುಲಮಠದ ಶ್ರೀಗಳ ಮಾರ್ಗದರ್ಶನದಲ್ಲಿ ಶ್ರೀಮಠದ ಅಭ್ಯುದಯಕ್ಕಾಗಿ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.
ಭಾರತ ಸರ್ಕಾರ ಭಾರತೀಯ ಭಾಷಾ ಸಂಸ್ಥಾನದಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿ, ಅನಂತರ 8 ಆಗಸ್ಟ್ 2020 ರಂದು ಶ್ರೀ ಸಾಲೂರು ಬೃಹನ್ಮಠಕ್ಕೆ ಪಟ್ಟಾಭಿಷೇಕವಾಯಿತು.
ಇಂದು ಶ್ರೀ ಕ್ಷೇತ್ರದ ಶ್ರೀ ಸಾಲೂರು ಬೃಹನ್ಮಠದಲ್ಲಿ ಪೂಜ್ಯ ಲಿಂ. ಪಟ್ಟದ ಗುರುಸ್ವಾಮಿಗಳವರು ಮತ್ತು ಭಕ್ತರ ಆಶಯದಂತೆ ಶ್ರೀಮಠದ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರೌಢಪ್ರಬಂಧದಲ್ಲಿ ಶ್ರೀಗಳು ಸಂಪಾದಿಸಿರುವ ಪ್ರೌಢಪ್ರಬಂಧದಲ್ಲಿ ಅಂಕುಮದಾಗಮದಲ್ಲಿ 84 ಅಧ್ಯಾಯಗಳಿವೆ. 84 ಅಧ್ಯಾಯಗಳು ಇವುಗಳೆಲ್ಲ ಪರಿಪೂರ್ಣವಾಗಿ ದೇವಾಲಯಗಳು ಮತ್ತು ಅವುಗಳ ಪೂಜಾದಿ ಆರಂಭಿಸಿ, ಸಕಳ ಸ್ಥಾಪನ, ಅತ್ಯಾರ್ಥಯಜನ ಪವಿತ್ರ ವಿಧಿ, ಪಂಚಾಮೃತ ವಿಧಿ, ಚೂರ್ಣೋತ್ಸವ ವಿಧಿ, ಪರಸುಪ್ರತ್ತಯ ವಿಧಿ, ಪಾದ್ಯಾದಿವಿಧಿಗಳನ್ನು ಇಲ್ಲಿ ಅತ್ಯಂತ ಸುವಿಸ್ತಾರವಾಗಿ ವರ್ಣಿತವಾಗಿವೆ. ವಿವಿಧ ದೇವತೆಗಳಿಗೆ ಸಂಬಂಧಿಸಿದ ಅರ್ಚನಾ ಕ್ರಮಗಳ ವಿವರಗಳೂ ಇವೆ. ಉದಾಹರಣೆಗೆ ವಿನಾಯಕ ವ್ರತ, ಮುಖಲಿಂಗಾರ್ಚನ, ಗೌರೀಪವಿತ್ರ ವಿಧಿ, ನಕ್ಷತ್ರ ಪೂಜಾ ವಿಧಿ. ಅರ್ಧನಾರೀಶ್ವರ ಪೂಜಾ ವಿಧಿ. ಚಂದೇಕಾರ್ಚನ ವಿಧಿ ಮಹಾಶಾಂತಿ ವಿಧಿ, ದೇವೀಪೂಜಾ ವಿಧಿ. ಈ ಆಗಮದ ಅತ್ಯಂತ ಮಹತ್ವದ ಮತ್ತೊಂದು ಸಂಗತಿ ಏನೆಂದರೆ, ಇಲ್ಲಿ ದೇವಾಲಯಗಳ ನಿರ್ಮಾಣ, ಮೂರ್ತಿ ನಿರ್ಮಾಣದ ವಿಧಾನಗಳೂ ಸೇನಾಸ್ಥಂಭ, ಅಶ್ವಸ್ತಂಭಗಳ ಸ್ಥಾಪನೆ ಇತ್ಯಾದಿ ವಿವರಗಳಿವೆ. ಇವುಗಳ ಜತೆಗೆ, ರುದ್ರಾಕ್ರ ಭಸ್ಮಾದಿ ವಿಧಿಗಳು, ಕೃತ್ತಿಕಾದೀಪ ವಿಧಿ, ವಿವಿಧ ಪ್ರಾಯಶ್ಚಿತ್ರಗಳು, ಪ್ರದೋಷ ಪೂಜಾದಿ ವಿಧಿಗಳೆಲ್ಲವೂ ವಿಸ್ತಾರವಾಗಿ ವಿವರಣೆಗೊಂಡಿವೆ. ಇದು ದೇವಾಲಯಗಳ ವಿವಿಧ ಕರ್ಮ ವಿಧಾನಗಳಿಗೆ ಸಹಕಾರಿಯಾಗಲಿವೆ. ಶೈವ ದೇವಾಲಯಗಳ ವಿಧಿವಿಧಾನಗಳ ಬಗ್ಗೆ ಅಧ್ಯಯನ ಮಾಡುವ ಸಂಶೋಧಕರಿಗೆ ಇದು ಅನುಕೂಲವಾಗುತ್ತದೆ.
ಸಾಲೂರು ಶ್ರೀಗಳನ್ನು ಪಿಎಚ್. ಡಿವರೆಗೂ ಕೈ ಹಿಡಿದು ಮುನ್ನಡೆಸಿರುವವರು ಮತ್ತೊಬ್ಬ ಶ್ರೀಗಳು. ಕುಂದೂರು ಮಠದ ಮಠಾಧೀಫತಿಗಳು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ ಆಗಿರುವ ಖ್ಯಾತ ವಿದ್ವಾಂಸರಾದ ಡಾ.ಶರತ್‌ ಚಂದ್ರ ಸ್ವಾಮೀಜಿ ಮಾರ್ಗದರ್ಶನ ಗುರಿ ತಲುಪಿಸಿದೆ. ಅಂದು ಸೋತು ಬಂದ ಶಿಷ್ಯನನ್ನು ಇಂದು ಗೆಲ್ಲಿಸಿದ್ದಾರೆ.
ಶ್ರೀಗಳು ಪಿಯುಸಿ ಫೇಲ್ ಆದ ಸಂದರ್ಭದಲ್ಲಿ ಡಾ.ಶರತ್ ಚಂದ್ರ ಸ್ವಾಮೀಜಿ ಆತ್ಮಸ್ಥೆರ್ಯ ತುಂಬಿದರು. ಸಂಸ್ಕೃತ ಅಧ್ಯಯನ ಮಾಡಿಸಿದರು. ಎಂ.ಎ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಾಗ ಮತ್ತೆ ಪರೀಕ್ಷೆ ಬರೆಯಲು ಸಲಹೆ ನೀಡಿ ಪೂಜ್ಯರು ಎಂ.ಫೀಲ್ ಮತ್ತು ಪಿ.ಎಚ್ಡಿ ಗೆ ಮಾರ್ಗದರ್ಶನ ನೀಡಿದನ್ನು ಸಾಲೂರು ಶ್ರೀಗಳು ಸ್ಮರಿಸಿಕೊಂಡಿದ್ದಾರೆ.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    3 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    34 min ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.