logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಸಾಲೂರು ಶ್ರೀಗಳಿಗೆ ರಾಜ್ಯಪಾಲರಿಂದ ಪಿಎಚ್‌ಡಿ ಪದವಿ ಗೌರವ ಹನೂರು : ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ವಿದ್ಯಾವಾರಾದಿ ರವರಿಗೆ ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ರಾಜ್ಯಪಾಲರಾದ ಥಾವರ್ ಚಂದ್ ಗೇಹ್ಲೋಟ್ ರವರು ಪಿ ಎಚ್ ಡಿ ಪದವಿ ಪ್ರಧಾನ ಮಾಡಿದರು. ಏಪ್ರಿಲ್ ಏಳ ರಂದು ಬೆಂಗಳೂರು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 12 ಮತ್ತು 13ನೇ ಘಟಿಕೋತ್ಸವದ ಸಮಾರಂಭದಲ್ಲಿ ವಿತರಿಸಿದ್ದಾರೆ. ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ರವರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಕುಂದೂರು ಮಠದ ಮಠಾಧಿಪತಿಗಳಾದ ಶ್ರೀ ಶರತ್ ಚಂದ್ರ ಸ್ವಾಮಿಗಳ ಮಾರ್ಗದರ್ಶನದಲ್ಲಿ ವೇದಾಂತ ವಿಭಾಗದಲ್ಲಿ ಅಂಶುಮದಾಗಮಮ್ ಸಂಪದನಾತ್ಮಕ ಅಧ್ಯಯನಮ್ ಎಂಬ ವಿಷಯದಲ್ಲಿ ಹಸ್ತಪ್ರತಿ ಅಧ್ಯಯನ ಮಾಡಿ ಸಂಶೋಧನಾ ಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಮಂಡಿಸಿದ್ದರು. ಘಟಿಕೋತ್ಸವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಸಭಾ ಸದಸ್ಯರಾದ ಡಾ. ಸಿ.ಎನ್. ಮಂಜುನಾಥ್ ಅವರು ಘಟಿಕೋತ್ಸವ ಭಾಷಣ ಮಾಡಿದರು, ಉಪಕುಲಪತಿ ಶ್ರೀಮತಿ ಅಹಲ್ಯ ಕುಲಸಚಿವರಾದ ಪ್ರೊ. ಗಿರೀಶ್ ಚಂದ್ರ ಉಪಸ್ಥಿತರಿದ್ದರು. ಸಾಲೂರು ಶ್ರೀಗಳ ಸಾಧನೆ: ಗ್ರಂಥಕ್ಕೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು 2024ನೇ ಸಾಲಿನ 'ಸಂಸ್ಕೃತ ಗ್ರಂಥ ಪುರಸ್ಕಾರವು ಲಭಿಸಿದೆ. ಪರಮಪೂಜ್ಯ ಲಿಂ. ಶ್ರೀ ಗುರುಸ್ವಾಮೀಜಿ ಆಶೀರ್ವಾದ, ಪ್ರೇರಣೆ ನೀಡಿದ ಕುಂದೂರು ಮಠದ ಡಾ.ಶರತ್‌ಚಂದ್ರ ಸ್ವಾಮೀಜಿ, ಸುತ್ತೂರು ದೇಗುಲಮಠದ ಶ್ರೀಗಳ ಮಾರ್ಗದರ್ಶನದಲ್ಲಿ ಶ್ರೀಮಠದ ಅಭ್ಯುದಯಕ್ಕಾಗಿ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ಭಾರತ ಸರ್ಕಾರ ಭಾರತೀಯ ಭಾಷಾ ಸಂಸ್ಥಾನದಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿ, ಅನಂತರ 8 ಆಗಸ್ಟ್ 2020 ರಂದು ಶ್ರೀ ಸಾಲೂರು ಬೃಹನ್ಮಠಕ್ಕೆ ಪಟ್ಟಾಭಿಷೇಕವಾಯಿತು. ಇಂದು ಶ್ರೀ ಕ್ಷೇತ್ರದ ಶ್ರೀ ಸಾಲೂರು ಬೃಹನ್ಮಠದಲ್ಲಿ ಪೂಜ್ಯ ಲಿಂ. ಪಟ್ಟದ ಗುರುಸ್ವಾಮಿಗಳವರು ಮತ್ತು ಭಕ್ತರ ಆಶಯದಂತೆ ಶ್ರೀಮಠದ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರೌಢಪ್ರಬಂಧದಲ್ಲಿ ಶ್ರೀಗಳು ಸಂಪಾದಿಸಿರುವ ಪ್ರೌಢಪ್ರಬಂಧದಲ್ಲಿ ಅಂಕುಮದಾಗಮದಲ್ಲಿ 84 ಅಧ್ಯಾಯಗಳಿವೆ. 84 ಅಧ್ಯಾಯಗಳು ಇವುಗಳೆಲ್ಲ ಪರಿಪೂರ್ಣವಾಗಿ ದೇವಾಲಯಗಳು ಮತ್ತು ಅವುಗಳ ಪೂಜಾದಿ ಆರಂಭಿಸಿ, ಸಕಳ ಸ್ಥಾಪನ, ಅತ್ಯಾರ್ಥಯಜನ ಪವಿತ್ರ ವಿಧಿ, ಪಂಚಾಮೃತ ವಿಧಿ, ಚೂರ್ಣೋತ್ಸವ ವಿಧಿ, ಪರಸುಪ್ರತ್ತಯ ವಿಧಿ, ಪಾದ್ಯಾದಿವಿಧಿಗಳನ್ನು ಇಲ್ಲಿ ಅತ್ಯಂತ ಸುವಿಸ್ತಾರವಾಗಿ ವರ್ಣಿತವಾಗಿವೆ. ವಿವಿಧ ದೇವತೆಗಳಿಗೆ ಸಂಬಂಧಿಸಿದ ಅರ್ಚನಾ ಕ್ರಮಗಳ ವಿವರಗಳೂ ಇವೆ. ಉದಾಹರಣೆಗೆ ವಿನಾಯಕ ವ್ರತ, ಮುಖಲಿಂಗಾರ್ಚನ, ಗೌರೀಪವಿತ್ರ ವಿಧಿ, ನಕ್ಷತ್ರ ಪೂಜಾ ವಿಧಿ. ಅರ್ಧನಾರೀಶ್ವರ ಪೂಜಾ ವಿಧಿ. ಚಂದೇಕಾರ್ಚನ ವಿಧಿ ಮಹಾಶಾಂತಿ ವಿಧಿ, ದೇವೀಪೂಜಾ ವಿಧಿ. ಈ ಆಗಮದ ಅತ್ಯಂತ ಮಹತ್ವದ ಮತ್ತೊಂದು ಸಂಗತಿ ಏನೆಂದರೆ, ಇಲ್ಲಿ ದೇವಾಲಯಗಳ ನಿರ್ಮಾಣ, ಮೂರ್ತಿ ನಿರ್ಮಾಣದ ವಿಧಾನಗಳೂ ಸೇನಾಸ್ಥಂಭ, ಅಶ್ವಸ್ತಂಭಗಳ ಸ್ಥಾಪನೆ ಇತ್ಯಾದಿ ವಿವರಗಳಿವೆ. ಇವುಗಳ ಜತೆಗೆ, ರುದ್ರಾಕ್ರ ಭಸ್ಮಾದಿ ವಿಧಿಗಳು, ಕೃತ್ತಿಕಾದೀಪ ವಿಧಿ, ವಿವಿಧ ಪ್ರಾಯಶ್ಚಿತ್ರಗಳು, ಪ್ರದೋಷ ಪೂಜಾದಿ ವಿಧಿಗಳೆಲ್ಲವೂ ವಿಸ್ತಾರವಾಗಿ ವಿವರಣೆಗೊಂಡಿವೆ. ಇದು ದೇವಾಲಯಗಳ ವಿವಿಧ ಕರ್ಮ ವಿಧಾನಗಳಿಗೆ ಸಹಕಾರಿಯಾಗಲಿವೆ. ಶೈವ ದೇವಾಲಯಗಳ ವಿಧಿವಿಧಾನಗಳ ಬಗ್ಗೆ ಅಧ್ಯಯನ ಮಾಡುವ ಸಂಶೋಧಕರಿಗೆ ಇದು ಅನುಕೂಲವಾಗುತ್ತದೆ. ಸಾಲೂರು ಶ್ರೀಗಳನ್ನು ಪಿಎಚ್. ಡಿವರೆಗೂ ಕೈ ಹಿಡಿದು ಮುನ್ನಡೆಸಿರುವವರು ಮತ್ತೊಬ್ಬ ಶ್ರೀಗಳು. ಕುಂದೂರು ಮಠದ ಮಠಾಧೀಫತಿಗಳು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ ಆಗಿರುವ ಖ್ಯಾತ ವಿದ್ವಾಂಸರಾದ ಡಾ.ಶರತ್‌ ಚಂದ್ರ ಸ್ವಾಮೀಜಿ ಮಾರ್ಗದರ್ಶನ ಗುರಿ ತಲುಪಿಸಿದೆ. ಅಂದು ಸೋತು ಬಂದ ಶಿಷ್ಯನನ್ನು ಇಂದು ಗೆಲ್ಲಿಸಿದ್ದಾರೆ. ಶ್ರೀಗಳು ಪಿಯುಸಿ ಫೇಲ್ ಆದ ಸಂದರ್ಭದಲ್ಲಿ ಡಾ.ಶರತ್ ಚಂದ್ರ ಸ್ವಾಮೀಜಿ ಆತ್ಮಸ್ಥೆರ್ಯ ತುಂಬಿದರು. ಸಂಸ್ಕೃತ ಅಧ್ಯಯನ ಮಾಡಿಸಿದರು. ಎಂ.ಎ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಾಗ ಮತ್ತೆ ಪರೀಕ್ಷೆ ಬರೆಯಲು ಸಲಹೆ ನೀಡಿ ಪೂಜ್ಯರು ಎಂ.ಫೀಲ್ ಮತ್ತು ಪಿ.ಎಚ್ಡಿ ಗೆ ಮಾರ್ಗದರ್ಶನ ನೀಡಿದನ್ನು ಸಾಲೂರು ಶ್ರೀಗಳು ಸ್ಮರಿಸಿಕೊಂಡಿದ್ದಾರೆ.

1 hr ago
user_ಹನೂರು ನ್ಯೂಸ್ ಅಡ್ಡ
ಹನೂರು ನ್ಯೂಸ್ ಅಡ್ಡ
Farmer ಹನೂರು, ಚಾಮರಾಜನಗರ, ಕರ್ನಾಟಕ•

More news from ಕರ್ನಾಟಕ and nearby areas
  • ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿಯಲ್ಲಿ ನಡೆದ ಶ್ರೀ ಮಾಸ್ತೆಮ್ಮ ದೇವಿ ಜಾತ್ರೆಯಲ್ಲಿ 62 ವರ್ಷದ ಶರಣಪ್ಪ ಗೊಲ್ಲರ ಅಸಾಮಾನ್ಯ ಸಾಹಸ ಮೆರೆದಿದ್ದಾರೆ. ಸುಮಾರು 120 ಅಡಿ ಎತ್ತರದ ಎಣ್ಣೆ ಸವರಿದ ಹಾಲುಗಂಭವನ್ನು ಅವರು ಲೀಲಾಜಾಲವಾಗಿ ಏರಿ ಭಕ್ತರಲ್ಲಿ ಆಶ್ಚರ್ಯ ಮೂಡಿಸಿದ್ದಾರೆ. ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಯಾದವ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ವಿಶೇಷ. ಕಂಬದ ಮೇಲೆ ಕಟ್ಟಲಾಗಿದ್ದ ಕೊಬ್ಬರಿಯನ್ನು ತಲುಪುವ ಸಾಹಸ ಭಕ್ತಿ ಮತ್ತು ದೈಹಿಕ ಸಾಮರ್ಥ್ಯದ ಸಂಕೇತವಾಗಿ ಕಂಡುಬಂದಿದೆ. ಎಣ್ಣೆ ಸುರಿಯುತ್ತಿದ್ದರೂ ಲೆಕ್ಕಿಸದೇ ಶರಣಪ್ಪ ಅವರ ಸಾಹಸವನ್ನು ಸಾವಿರಾರು ಭಕ್ತರು ಚಪ್ಪಾಳೆ ತಟ್ಟಿ ಶ್ಲಾಘಿಸಿದ್ದಾರೆ.
    1
    ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿಯಲ್ಲಿ ನಡೆದ ಶ್ರೀ ಮಾಸ್ತೆಮ್ಮ ದೇವಿ ಜಾತ್ರೆಯಲ್ಲಿ 62 ವರ್ಷದ ಶರಣಪ್ಪ ಗೊಲ್ಲರ ಅಸಾಮಾನ್ಯ ಸಾಹಸ ಮೆರೆದಿದ್ದಾರೆ. ಸುಮಾರು 120 ಅಡಿ ಎತ್ತರದ ಎಣ್ಣೆ ಸವರಿದ ಹಾಲುಗಂಭವನ್ನು ಅವರು ಲೀಲಾಜಾಲವಾಗಿ ಏರಿ ಭಕ್ತರಲ್ಲಿ ಆಶ್ಚರ್ಯ ಮೂಡಿಸಿದ್ದಾರೆ. ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಯಾದವ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ವಿಶೇಷ. ಕಂಬದ ಮೇಲೆ ಕಟ್ಟಲಾಗಿದ್ದ ಕೊಬ್ಬರಿಯನ್ನು ತಲುಪುವ ಸಾಹಸ ಭಕ್ತಿ ಮತ್ತು ದೈಹಿಕ ಸಾಮರ್ಥ್ಯದ ಸಂಕೇತವಾಗಿ ಕಂಡುಬಂದಿದೆ. ಎಣ್ಣೆ ಸುರಿಯುತ್ತಿದ್ದರೂ ಲೆಕ್ಕಿಸದೇ ಶರಣಪ್ಪ ಅವರ ಸಾಹಸವನ್ನು ಸಾವಿರಾರು ಭಕ್ತರು ಚಪ್ಪಾಳೆ ತಟ್ಟಿ ಶ್ಲಾಘಿಸಿದ್ದಾರೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    5 hrs ago
  • full dirty please clean this one full y dirty and this honor is not an agree in to clean not anyone cleaning this one. full dirty please clean this one full y dirty and this honor is not an agree in to clean not anyone cleaning this one.
    1
    full dirty please clean this one full y dirty and this honor is not an agree in to clean not anyone cleaning this one.   full dirty please clean this one full y dirty and this honor is not an agree in to clean not anyone cleaning this one.
    user_Ahmed Rasool
    Ahmed Rasool
    ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    9 hrs ago
  • ದೇವನಹಳ್ಳಿ ಹೆಚ್ಚಾದ ಎಲ್ಪಿಜಿ ಸಮಸ್ಯೆ...ರಾಜ್ಯ ಸರ್ಕಾರ ವಿರುದ್ದ ಸಂಸದ ಡಾ.ಕೆ.ಸುಧಾಕರ್ ಕಿಡಿ. ಇದು ವಿಶ್ವದ ಸಮಸ್ಯೆ, ಇದರಲ್ಲಿ ರಾಜಕಾರಣ ಮಾಡಿದ್ರೆ ಅವರಿಗೆ ಡೆಪಾಸಿಟ್ ಸಿಗಲ್ಲ. ಕಾಂಗ್ರೆಸಿನವರಿಗೆ ಸರ್ಕಾರ ನಡೆಸಲು ಯೋಗ್ಯತೆ ಇಲ್ಲ. ಯುದ್ಧದ ನಡುವೆಯೂ ಮೋದಿಯವರ ರಾಜತಾಂತ್ರಿಕತೆಯಿಂದಾಗಿ ಮೂರೊತ್ತು ಊಟ ಮಾಡ್ತಿದ್ದೀವಿ. ಮೋದಿಯವರಿಂದ ದೇಶದ ಜನತೆಗೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಗ್ತಿದೆ. ಕಾಂಗ್ರೆಸಿಗರಿಗೆ ಏನಾದ್ರೂ ನಾಚಿಕೆ ಇದ್ಯಾ..? ಇದರಲ್ಲಾ ರಾಜಕಾರಣ ಮಾಡೋದು..?, ಕೋವಿಡ್ ನಲ್ಲಿ ರಾಜಕಾರಣ ಮಾಡಿದ್ರು, ಮೋದಿ ಇಂಜಕ್ಷನ್ ಅಂದ್ರು, ಯುದ್ಧ ರಾಷ್ಟಗಳಿಗೆ ವಿಮಾನ ಹೋಗ್ತಿಲ್ಲ, ಅಲ್ಲಿನ ಜನ ಸಾಯ್ತಿದ್ದಾರೆ. ಪಾಕಿಸ್ತಾನದಲ್ಲಿ ಪೆಟ್ರೋಲ್ ರೇಟ್ 300ರೂ ನಿಂದ 400ರೂ ಹೆಚ್ಚಾಗಿ ಶೇ.50ರಷ್ಟು ಏರಿಕೆ ಮಾಡಿದ್ದಾರೆ. ಇತಹ ಸಂದರ್ಭದಲ್ಲಿ ದೇಶ ಒಂದಾಗಿ ವಿಚಾರ ಮಾಡಬೇಕು. ರಾಜಕಾರಣ ಮಾಡದೇ ದೇಶದ ಜನರನ್ನ ಉಳಿಸಿಕೊಳ್ಳಬೇಕು ಎಂದು ಯೋಚನೆ ಮಾಡಬೇಕು. ಸಮಸ್ಯೆ ಬಗೆಹರಿಸೋದು ಬಿಟ್ಟು ರಾಜಕಾರಣ ಮಾಡಿದ್ರೆ ಖಂಡಿತವಾಗಿಯೂ ಡೆಪಾಸಿಟ್ ಬರಲ್ಲ. ದೇವನಹಳ್ಳಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ ಡಾ.ಕೆ.ಸುಧಾಕರ್ ಹೇಳಿಕೆ.
    1
    ದೇವನಹಳ್ಳಿ
ಹೆಚ್ಚಾದ ಎಲ್ಪಿಜಿ ಸಮಸ್ಯೆ...ರಾಜ್ಯ ಸರ್ಕಾರ ವಿರುದ್ದ ಸಂಸದ ಡಾ.ಕೆ.ಸುಧಾಕರ್ ಕಿಡಿ.
ಇದು ವಿಶ್ವದ ಸಮಸ್ಯೆ, ಇದರಲ್ಲಿ ರಾಜಕಾರಣ ಮಾಡಿದ್ರೆ ಅವರಿಗೆ ಡೆಪಾಸಿಟ್ ಸಿಗಲ್ಲ.
ಕಾಂಗ್ರೆಸಿನವರಿಗೆ ಸರ್ಕಾರ ನಡೆಸಲು ಯೋಗ್ಯತೆ ಇಲ್ಲ.
ಯುದ್ಧದ ನಡುವೆಯೂ ಮೋದಿಯವರ ರಾಜತಾಂತ್ರಿಕತೆಯಿಂದಾಗಿ ಮೂರೊತ್ತು ಊಟ ಮಾಡ್ತಿದ್ದೀವಿ.
ಮೋದಿಯವರಿಂದ ದೇಶದ ಜನತೆಗೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಗ್ತಿದೆ.
ಕಾಂಗ್ರೆಸಿಗರಿಗೆ ಏನಾದ್ರೂ ನಾಚಿಕೆ ಇದ್ಯಾ..? ಇದರಲ್ಲಾ ರಾಜಕಾರಣ ಮಾಡೋದು..?,
ಕೋವಿಡ್ ನಲ್ಲಿ ರಾಜಕಾರಣ ಮಾಡಿದ್ರು, ಮೋದಿ ಇಂಜಕ್ಷನ್ ಅಂದ್ರು,
ಯುದ್ಧ ರಾಷ್ಟಗಳಿಗೆ ವಿಮಾನ ಹೋಗ್ತಿಲ್ಲ, ಅಲ್ಲಿನ ಜನ ಸಾಯ್ತಿದ್ದಾರೆ.
ಪಾಕಿಸ್ತಾನದಲ್ಲಿ ಪೆಟ್ರೋಲ್ ರೇಟ್ 300ರೂ ನಿಂದ 400ರೂ ಹೆಚ್ಚಾಗಿ ಶೇ.50ರಷ್ಟು  ಏರಿಕೆ ಮಾಡಿದ್ದಾರೆ.
ಇತಹ ಸಂದರ್ಭದಲ್ಲಿ ದೇಶ ಒಂದಾಗಿ ವಿಚಾರ ಮಾಡಬೇಕು.
ರಾಜಕಾರಣ ಮಾಡದೇ ದೇಶದ ಜನರನ್ನ ಉಳಿಸಿಕೊಳ್ಳಬೇಕು ಎಂದು ಯೋಚನೆ ಮಾಡಬೇಕು.
ಸಮಸ್ಯೆ ಬಗೆಹರಿಸೋದು ಬಿಟ್ಟು ರಾಜಕಾರಣ ಮಾಡಿದ್ರೆ ಖಂಡಿತವಾಗಿಯೂ ಡೆಪಾಸಿಟ್ ಬರಲ್ಲ.
ದೇವನಹಳ್ಳಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ ಡಾ.ಕೆ.ಸುಧಾಕರ್ ಹೇಳಿಕೆ.
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    22 hrs ago
  • Post by Rownak Ali khan
    1
    Post by Rownak Ali khan
    user_Rownak Ali khan
    Rownak Ali khan
    Local News Reporter ಕೋಲಾರ, ಕೋಲಾರ, ಕರ್ನಾಟಕ•
    5 hrs ago
  • KOLAR KI.AWAAZ KOUSAR
    1
    KOLAR KI.AWAAZ KOUSAR
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    10 hrs ago
  • ​ಕೋಲಾರ: ತಾಲೂಕಿನ ಹೋಳೂರು ಗ್ರಾಮದಲ್ಲಿ ಕುಡಿಯುವ ನೀರು ಹಿಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ದಲಿತ ಮಹಿಳೆಯರದ ಅಶ್ವಿನಿ ಮತ್ತು ಲಕ್ಷ್ಮೀದೇವಿ ಮೇಲೆ ಅಂಗಡಿ ಮಂಜಮ್ಮ ಎಂಬ ಸವರ್ಣೀಯ ಮಹಿಳೆ ಹಲ್ಲೆ ನಡೆಸಿರುವ ಘಟನೆ ಭಾನುವಾರ (ಏಪ್ರಿಲ್ 5, 2026) ಬೆಳಿಗ್ಗೆ 08 ಗಂಟ್ಟೆಗೆ ನಡೆದಿದೆ. ಜಾತಿ ಹೆಸರಿನಲ್ಲಿ ನಿಂದಿಸಿ, ಮಚ್ಚಿನಿಂದ ಹಲ್ಲೆಗೆ ಯತ್ನಿಸಿ, ಗಂಭೀರವಾಗಿ ಬಾಯಿಂದ ಕಚ್ಚಿ  ಗಾಯಗೊಳಿಸಿರುವ ಆರೋಪ ಕೇಳಿಬಂದಿದೆ. ​ಘಟನೆಯ ವಿವರ: ​ಹೋಳೂರು ಗ್ರಾಮದ ನಿವಾಸಿಗಳು ಅಶ್ವಿನಿ ಹಾಗೂ ಲಕ್ಷ್ಮೀದೇವಿ ಎಂಬುವರು ಭಾನುವಾರ ನೀರು ಹಿಡಿಯಲು ಟ್ಯಾಂಕ್ ಬಳಿ ಹೋದಾಗ, ಅದೇ ಗ್ರಾಮದ ಅಂಗಡಿ ಮಂಜಮ್ಮ ಎಂಬ ಮಹಿಳೆ ತಕರಾರು ತೆಗೆದಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭಿಸಿದ ಮಂಜಮ್ಮ, ಅಶ್ವಿನಿ ಹಾಗೂ ಲಕ್ಷ್ಮೀದೇವಿ ರವರನ್ನು ಜಾತಿ ಹೆಸರಿನಲ್ಲಿ ಕೆಟ್ಟದಾಗಿ ನಿಂದಿಸಿದ್ದಲ್ಲದೆ, ಬಾಯಿಂದ ಕಚ್ಚಿ ಗಾಯಮಾಡಿ ಮಚ್ಚು ಹಿಡಿದು ಜೀವ ಬೆದರಿಕೆ ಹಾಕಿದ್ದಾರೆ. ​ಸ್ಥಳೀಯರು ಮಧ್ಯಪ್ರವೇಶಿಸಿ ಮಚ್ಚನ್ನು ಕಸಿದುಕೊಂಡಾಗ, ಆಕ್ರೋಶಗೊಂಡ ಮಂಜಮ್ಮ ಅಶ್ವಿನಿ ರವರ ಕೈಯನ್ನು ಎರಡು ಬಾರಿ ಬಲವಾಗಿ ಕಚ್ಚಿ ಗಾಯಗೊಳಿಸಿದ್ದಾರೆ. ತಕ್ಷಣವೇ ಗಾಯಾಳುವನ್ನು ಆಂಬುಲೆನ್ಸ್ ಮೂಲಕ ಕೋಲಾರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ​ಮತ್ತೊಂದು ಸುತ್ತಿನ ಹಲ್ಲೆ: ​ಇದಾದ ಕೆಲವೇ ಸಮಯದಲ್ಲಿ,ಅಶ್ವಿನಿ ರವರ ತಂಗಿ ಆದ ಲಕ್ಷ್ಮಿ ದೇವಮ್ಮ ಎಂಬ  ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆಗೆ ಮುಳ್ಳು ಹಾಕಿ ತಡೆದು ಮಂಜಮ್ಮ ಮತ್ತು ತಂಡದವರು ಮತ್ತೆ ಗಲಾಟೆ ಆರಂಭಿಸಿದ್ದಾರೆ. ಲಕ್ಷ್ಮಿ ದೇವಮ್ಮ ಅವರಿಗೆ ಈ ಹಿಂದೆ ಶಸ್ತ್ರಚಿಕಿತ್ಸೆಯಾಗಿದ್ದರೂ ಸಹ, ಕಿಂಚಿತ್ತೂ ದಯೆಯಿಲ್ಲದೆ ಅವರ ಹೊಟ್ಟೆಗೆ ಕಾಲಿನಿಂದ ಒದ್ದು ದೌರ್ಜನ್ಯ ಎಸಗಲಾಗಿದೆ ಎನ್ನಲಾಗಿದೆ. ಅವರ ಕೊರಳಲ್ಲಿದ್ದ ತಾಳಿ ಸರವನ್ನು ಕಿತ್ತು ಎಸೆದಿದ್ದು, ಹಲ್ಲೆಯ ತೀವ್ರತೆಗೆ ಲಕ್ಷ್ಮಿ ದೇವಮ್ಮ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ​ಅಮಾನವೀಯ ನಡವಳಿಕೆ: ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದ ಆಟೋ ಚಾಲಕನಿಗೂ ಮಂಜಮ್ಮನಮಗ ಅರ್ಜುನ್ ರೆಡ್ಡಿ ಎಂಬ ವೆಕ್ತಿ ಆಟೋ ಚಾಲಕನನ್ನು ರಸ್ತೆಯಲ್ಲಿ ತಡೆದು . "ನಿನಗೆ ಇವರು ಏನು ಸಂಬಂಧ?" ಎಂದು ಪ್ರಶ್ನಿಸಿ ಆತನ ಮೇಲೆಯೂ ಹಲ್ಲೆ ಮಾಡಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ​ನ್ಯಾಯಕ್ಕಾಗಿ ಆಗ್ರಹ: ​ಸದ್ಯ ಇಬ್ಬರೂ ಮಹಿಳೆಯರು ಕೋಲಾರದ ಎಸ್.ಎನ್ .ಆರ್ (SNR) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಅಂಗಡಿ ಮಂಜಮ್ಮ ಎಂಬುವವರನ್ನು ಕೂಡಲೇ ಬಂಧಿಸಬೇಕು ಮತ್ತು ದಲಿತ ಮಹಿಳೆಯರಿಗೆ ಸೂಕ್ತ ನ್ಯಾಯ ಹಾಗೂ ರಕ್ಷಣೆ ಒದಗಿಸಬೇಕು ಎಂದು  ದಲಿತ ಮುಖಂಡರು ಮತ್ತು ಸಂತ್ರಸ್ತ ಕುಟುಂಬದವರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ. ​ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
    1
    ​ಕೋಲಾರ: ತಾಲೂಕಿನ ಹೋಳೂರು ಗ್ರಾಮದಲ್ಲಿ ಕುಡಿಯುವ ನೀರು ಹಿಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ದಲಿತ ಮಹಿಳೆಯರದ ಅಶ್ವಿನಿ ಮತ್ತು ಲಕ್ಷ್ಮೀದೇವಿ ಮೇಲೆ ಅಂಗಡಿ ಮಂಜಮ್ಮ ಎಂಬ ಸವರ್ಣೀಯ ಮಹಿಳೆ ಹಲ್ಲೆ ನಡೆಸಿರುವ ಘಟನೆ ಭಾನುವಾರ (ಏಪ್ರಿಲ್ 5, 2026) ಬೆಳಿಗ್ಗೆ 08 ಗಂಟ್ಟೆಗೆ ನಡೆದಿದೆ. ಜಾತಿ ಹೆಸರಿನಲ್ಲಿ ನಿಂದಿಸಿ, ಮಚ್ಚಿನಿಂದ ಹಲ್ಲೆಗೆ ಯತ್ನಿಸಿ, ಗಂಭೀರವಾಗಿ ಬಾಯಿಂದ ಕಚ್ಚಿ  ಗಾಯಗೊಳಿಸಿರುವ ಆರೋಪ ಕೇಳಿಬಂದಿದೆ.
​ಘಟನೆಯ ವಿವರ:
​ಹೋಳೂರು ಗ್ರಾಮದ ನಿವಾಸಿಗಳು ಅಶ್ವಿನಿ ಹಾಗೂ ಲಕ್ಷ್ಮೀದೇವಿ ಎಂಬುವರು ಭಾನುವಾರ ನೀರು ಹಿಡಿಯಲು ಟ್ಯಾಂಕ್ ಬಳಿ ಹೋದಾಗ, ಅದೇ ಗ್ರಾಮದ ಅಂಗಡಿ ಮಂಜಮ್ಮ ಎಂಬ ಮಹಿಳೆ ತಕರಾರು ತೆಗೆದಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭಿಸಿದ ಮಂಜಮ್ಮ, ಅಶ್ವಿನಿ ಹಾಗೂ ಲಕ್ಷ್ಮೀದೇವಿ ರವರನ್ನು ಜಾತಿ ಹೆಸರಿನಲ್ಲಿ ಕೆಟ್ಟದಾಗಿ ನಿಂದಿಸಿದ್ದಲ್ಲದೆ, ಬಾಯಿಂದ ಕಚ್ಚಿ ಗಾಯಮಾಡಿ ಮಚ್ಚು ಹಿಡಿದು ಜೀವ ಬೆದರಿಕೆ ಹಾಕಿದ್ದಾರೆ.
​ಸ್ಥಳೀಯರು ಮಧ್ಯಪ್ರವೇಶಿಸಿ ಮಚ್ಚನ್ನು ಕಸಿದುಕೊಂಡಾಗ, ಆಕ್ರೋಶಗೊಂಡ ಮಂಜಮ್ಮ ಅಶ್ವಿನಿ ರವರ ಕೈಯನ್ನು ಎರಡು ಬಾರಿ ಬಲವಾಗಿ ಕಚ್ಚಿ ಗಾಯಗೊಳಿಸಿದ್ದಾರೆ. ತಕ್ಷಣವೇ ಗಾಯಾಳುವನ್ನು ಆಂಬುಲೆನ್ಸ್ ಮೂಲಕ ಕೋಲಾರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
​ಮತ್ತೊಂದು ಸುತ್ತಿನ ಹಲ್ಲೆ:
​ಇದಾದ ಕೆಲವೇ ಸಮಯದಲ್ಲಿ,ಅಶ್ವಿನಿ ರವರ ತಂಗಿ ಆದ ಲಕ್ಷ್ಮಿ ದೇವಮ್ಮ ಎಂಬ  ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆಗೆ ಮುಳ್ಳು ಹಾಕಿ ತಡೆದು ಮಂಜಮ್ಮ ಮತ್ತು ತಂಡದವರು ಮತ್ತೆ ಗಲಾಟೆ ಆರಂಭಿಸಿದ್ದಾರೆ. ಲಕ್ಷ್ಮಿ ದೇವಮ್ಮ ಅವರಿಗೆ ಈ ಹಿಂದೆ ಶಸ್ತ್ರಚಿಕಿತ್ಸೆಯಾಗಿದ್ದರೂ ಸಹ, ಕಿಂಚಿತ್ತೂ ದಯೆಯಿಲ್ಲದೆ ಅವರ ಹೊಟ್ಟೆಗೆ ಕಾಲಿನಿಂದ ಒದ್ದು ದೌರ್ಜನ್ಯ ಎಸಗಲಾಗಿದೆ ಎನ್ನಲಾಗಿದೆ. ಅವರ ಕೊರಳಲ್ಲಿದ್ದ ತಾಳಿ ಸರವನ್ನು ಕಿತ್ತು ಎಸೆದಿದ್ದು, ಹಲ್ಲೆಯ ತೀವ್ರತೆಗೆ ಲಕ್ಷ್ಮಿ ದೇವಮ್ಮ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
​ಅಮಾನವೀಯ ನಡವಳಿಕೆ:
ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದ ಆಟೋ ಚಾಲಕನಿಗೂ ಮಂಜಮ್ಮನಮಗ ಅರ್ಜುನ್ ರೆಡ್ಡಿ ಎಂಬ ವೆಕ್ತಿ ಆಟೋ ಚಾಲಕನನ್ನು ರಸ್ತೆಯಲ್ಲಿ ತಡೆದು . "ನಿನಗೆ ಇವರು ಏನು ಸಂಬಂಧ?" ಎಂದು ಪ್ರಶ್ನಿಸಿ ಆತನ ಮೇಲೆಯೂ ಹಲ್ಲೆ ಮಾಡಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
​ನ್ಯಾಯಕ್ಕಾಗಿ ಆಗ್ರಹ:
​ಸದ್ಯ ಇಬ್ಬರೂ ಮಹಿಳೆಯರು ಕೋಲಾರದ ಎಸ್.ಎನ್ .ಆರ್ (SNR) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಅಂಗಡಿ ಮಂಜಮ್ಮ ಎಂಬುವವರನ್ನು ಕೂಡಲೇ ಬಂಧಿಸಬೇಕು ಮತ್ತು ದಲಿತ ಮಹಿಳೆಯರಿಗೆ ಸೂಕ್ತ ನ್ಯಾಯ ಹಾಗೂ ರಕ್ಷಣೆ ಒದಗಿಸಬೇಕು ಎಂದು  ದಲಿತ ಮುಖಂಡರು ಮತ್ತು ಸಂತ್ರಸ್ತ ಕುಟುಂಬದವರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
​ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
    user_SSK ಜನಪರ ಸುದ್ದಿ 91
    SSK ಜನಪರ ಸುದ್ದಿ 91
    Singer ಕೋಲಾರ, ಕೋಲಾರ, ಕರ್ನಾಟಕ•
    19 hrs ago
  • ಬುಧವಾರ ಸಂಜೆ ಮತ್ತು ರಾತ್ರಿ ಕುಷ್ಟಗಿ ಸೇರಿದಂತೆ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಸುಮಾರು ಅರ್ಧ ಗಂಟೆಗಳ ಕಾಲ ಗುಡುಗು, ಸಿಡಿಲು ಹಾಗೂ ಬಿರುಗಾಳಿಯೊಂದಿಗೆ ರಭಸವಾಗಿ ಮಳೆ ಸುರಿದಿದ್ದು, ಬಿಸಿಲಿನ ತೀವ್ರತೆಯಿಂದ ಕಂಗೆಟ್ಟಿದ್ದ ಜನರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಮಧ್ಯಾಹ್ನದ ಬಳಿಕ ಆಕಾಶದಲ್ಲಿ ಮೋಡ ಕವಿದು ಗಾಳಿ ಜೋರಾಗಿ ಬೀಸತೊಡಗಿದ ಬಳಿಕ ಕೆಲವೇ ಕ್ಷಣಗಳಲ್ಲಿ ಮಳೆ ಆರಂಭವಾಯಿತು. ಗುಡುಗು ಮತ್ತು ಮಿಂಚಿನ ಅಬ್ಬರದಿಂದ ಕೆಲಕಾಲ ಜನರಲ್ಲಿ ಆತಂಕವೂ ಉಂಟಾಯಿತು. ಬಿಸಿಲಿನ ಉಷ್ಣತೆ ಕಡಿಮೆಯಾಗಿದ್ದರೂ ಕೆಲವು ಕಡೆ ಗಾಳಿಯಿಂದ ಸಣ್ಣಪುಟ್ಟ ಹಾನಿ ಸಂಭವಿಸಿರುವ ವರದಿಗಳೂ ಕೇಳಿಬಂದಿವೆ
    1
    ಬುಧವಾರ ಸಂಜೆ ಮತ್ತು ರಾತ್ರಿ ಕುಷ್ಟಗಿ ಸೇರಿದಂತೆ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಸುಮಾರು ಅರ್ಧ ಗಂಟೆಗಳ ಕಾಲ ಗುಡುಗು, ಸಿಡಿಲು ಹಾಗೂ ಬಿರುಗಾಳಿಯೊಂದಿಗೆ ರಭಸವಾಗಿ ಮಳೆ ಸುರಿದಿದ್ದು, ಬಿಸಿಲಿನ ತೀವ್ರತೆಯಿಂದ ಕಂಗೆಟ್ಟಿದ್ದ ಜನರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಮಧ್ಯಾಹ್ನದ ಬಳಿಕ ಆಕಾಶದಲ್ಲಿ ಮೋಡ ಕವಿದು ಗಾಳಿ ಜೋರಾಗಿ ಬೀಸತೊಡಗಿದ ಬಳಿಕ ಕೆಲವೇ ಕ್ಷಣಗಳಲ್ಲಿ ಮಳೆ ಆರಂಭವಾಯಿತು. ಗುಡುಗು ಮತ್ತು ಮಿಂಚಿನ ಅಬ್ಬರದಿಂದ ಕೆಲಕಾಲ ಜನರಲ್ಲಿ ಆತಂಕವೂ ಉಂಟಾಯಿತು. ಬಿಸಿಲಿನ ಉಷ್ಣತೆ ಕಡಿಮೆಯಾಗಿದ್ದರೂ ಕೆಲವು ಕಡೆ ಗಾಳಿಯಿಂದ ಸಣ್ಣಪುಟ್ಟ ಹಾನಿ ಸಂಭವಿಸಿರುವ ವರದಿಗಳೂ ಕೇಳಿಬಂದಿವೆ
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    6 hrs ago
  • Post by Rownak Ali khan
    1
    Post by Rownak Ali khan
    user_Rownak Ali khan
    Rownak Ali khan
    Local News Reporter ಕೋಲಾರ, ಕೋಲಾರ, ಕರ್ನಾಟಕ•
    6 hrs ago
  • Post by Venu Gopal
    1
    Post by Venu Gopal
    user_Venu Gopal
    Venu Gopal
    Local News Reporter ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.