Shuru
Apke Nagar Ki App…
ಶಿಡ್ಲಘಟ್ಟ ತಾಲೂಕಿನ ಕೊತ್ತನೂರು ಪಂಚಾಕ್ಷರೆಡ್ಡಿ ರವರು ಡೇರಿ ಚುನಾವಣೆ ಸೋಲಿನ ರಹಸ್ಯ ತಿಳಿಸಿದ ವೀಡಿಯೋ
Venu Gopal
ಶಿಡ್ಲಘಟ್ಟ ತಾಲೂಕಿನ ಕೊತ್ತನೂರು ಪಂಚಾಕ್ಷರೆಡ್ಡಿ ರವರು ಡೇರಿ ಚುನಾವಣೆ ಸೋಲಿನ ರಹಸ್ಯ ತಿಳಿಸಿದ ವೀಡಿಯೋ
More news from ಕರ್ನಾಟಕ and nearby areas
- Post by Rownak Ali khan1
- ಕೋಲಾರ: ಭಾರತದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿಯನ್ನು ಜಿಲ್ಲಾ ಕೇಂದ್ರವಾದ ಕೋಲಾರದಲ್ಲಿ ಇಂದು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಸಮುದಾಯದ ಬಂಧುಗಳು ಹಾಗೂ ನೂರಾರು ಪಲ್ಲಕ್ಕಿಗಳ ಮೆರವಣಿಗೆಯ ಮೂಲಕ ನಗರವು ಸಂಪೂರ್ಣವಾಗಿ ಬಾಬುಜೀಮಯವಾಗಿತ್ತು. ನಗರದಾದ್ಯಂತ ಭವ್ಯ ಮೆರವಣಿಗೆ ಕಾರ್ಯಕ್ರಮದ ವಿಶೇಷವಾಗಿ, ನಗರದ ಪ್ರಮುಖ ರಸ್ತೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರವಿರುವ 100ಕ್ಕೂ ಹೆಚ್ಚು ಪಲ್ಲಕ್ಕಿಗಳ ಮೆರವಣಿಗೆ ನಡೆಯಿತು. ವಿವಿಧ ಬಡಾವಣೆಗಳಿಂದ ಆಗಮಿಸಿದ ಈ ಪಲ್ಲಕ್ಕಿಗಳಿಗೆ ಮಂಗಳವಾದ್ಯ, ಡೊಳ್ಳು ಕುಣಿತ ಹಾಗೂ ಕಲಾತಂಡಗಳ ಮೆರುಗು ನೀಡಲಾಯಿತು. ರಸ್ತೆಯುದ್ದಕ್ಕೂ ಸಮುದಾಯದ ಯುವಕರು ಘೋಷಣೆಗಳನ್ನು ಕೂಗುತ್ತಾ, ಬಾಬುಜೀ ಅವರ ದೇಶಪ್ರೇಮ ಮತ್ತು ಸಮಾನತೆಯ ಸಂದೇಶಗಳನ್ನು ಸ್ಮರಿಸಿದರು. ಜಿಲ್ಲಾಡಳಿತದಿಂದ ಅರ್ಥಪೂರ್ಣ ಕಾರ್ಯಕ್ರಮ ಮೆರವಣಿಗೆಯ ನಂತರ ನಗರದ ಚೆನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಗಣ್ಯರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿ ಬಾಬುಜೀ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದ ಪ್ರಮುಖ ಅಂಶಗಳು: ಗಣ್ಯರ ನಮನ: ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, "ದೇಶದ ಆಹಾರ ಭದ್ರತೆ ಮತ್ತು ದಲಿತ ವರ್ಗದ ಏಳಿಗೆಗಾಗಿ ಬಾಬು ಜಗಜೀವನ್ ರಾಮ್ ಅವರು ನೀಡಿದ ಕೊಡುಗೆ ಅನನ್ಯ. ಅವರ ಬದುಕು ಇಂದಿನ ಯುವ ಪೀಳಿಗೆಗೆ ಮಾದರಿ," ಎಂದು ಬಣ್ಣಿಸಿದರು. ಜನಸಾಗರ: ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಮುದಾಯದ ಬಂಧುಗಳು ಪಾಲ್ಗೊಂಡಿದ್ದರು, ಇದರಿಂದಾಗಿ ರಂಗಮಂದಿರವು ಭರ್ತಿಯಾಗಿ ಕಿಕ್ಕಿರಿದು ತುಂಬಿತ್ತು. ಸಾಂಸ್ಕೃತಿಕ ಕಾರ್ಯಕ್ರಮ: ಬಾಬುಜೀ ಅವರ ಜೀವನ ಚರಿತ್ರೆಯನ್ನು ಸಾರುವ ಗೀತೆಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ನೆರೆದಿದ್ದವರ ಗಮನ ಸೆಳೆದವು. ಜಿಲ್ಲಾಡಳಿತ ಮತ್ತು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ನಡೆದ ಈ ಜಯಂತಿ ಆಚರಣೆಯು ಜಿಲ್ಲೆಯಲ್ಲಿ ಭಾವೈಕ್ಯತೆ ಮತ್ತು ಬಾಬುಜೀ ಅವರ ತತ್ವಗಳ ಪುನರುತ್ಥಾನಕ್ಕೆ ಸಾಕ್ಷಿಯಾಯಿತು.1
- ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿಯಲ್ಲಿ ನಡೆದ ಶ್ರೀ ಮಾಸ್ತೆಮ್ಮ ದೇವಿ ಜಾತ್ರೆಯಲ್ಲಿ 62 ವರ್ಷದ ಶರಣಪ್ಪ ಗೊಲ್ಲರ ಅಸಾಮಾನ್ಯ ಸಾಹಸ ಮೆರೆದಿದ್ದಾರೆ. ಸುಮಾರು 120 ಅಡಿ ಎತ್ತರದ ಎಣ್ಣೆ ಸವರಿದ ಹಾಲುಗಂಭವನ್ನು ಅವರು ಲೀಲಾಜಾಲವಾಗಿ ಏರಿ ಭಕ್ತರಲ್ಲಿ ಆಶ್ಚರ್ಯ ಮೂಡಿಸಿದ್ದಾರೆ. ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಯಾದವ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ವಿಶೇಷ. ಕಂಬದ ಮೇಲೆ ಕಟ್ಟಲಾಗಿದ್ದ ಕೊಬ್ಬರಿಯನ್ನು ತಲುಪುವ ಸಾಹಸ ಭಕ್ತಿ ಮತ್ತು ದೈಹಿಕ ಸಾಮರ್ಥ್ಯದ ಸಂಕೇತವಾಗಿ ಕಂಡುಬಂದಿದೆ. ಎಣ್ಣೆ ಸುರಿಯುತ್ತಿದ್ದರೂ ಲೆಕ್ಕಿಸದೇ ಶರಣಪ್ಪ ಅವರ ಸಾಹಸವನ್ನು ಸಾವಿರಾರು ಭಕ್ತರು ಚಪ್ಪಾಳೆ ತಟ್ಟಿ ಶ್ಲಾಘಿಸಿದ್ದಾರೆ.1
- full dirty please clean this one full y dirty and this honor is not an agree in to clean not anyone cleaning this one. full dirty please clean this one full y dirty and this honor is not an agree in to clean not anyone cleaning this one.1
- ಮಾಗಡಿ : ಡಾ.ಶಿವಕುಮಾರಸ್ವಾಮೀಜಿ ಅವರು ಕ್ರೀಷಿಯನ್ ಧರ್ಮದಲ್ಲಿ ಜನಿಸಿದಿದ್ರೆ ನೋಬೇಲ್ ಪಾರಿದೋಷಕ ಸಿಗುತ್ತಿತ್ತು ಎಂದು ಮೇಲಣಗವಿ ಮಠದ ಶ್ರೀಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ಗುಡೇಮಾರನಹಳ್ಳಿ ಗ್ರಾಮದಲ್ಲಿ ಗ್ರಾಮಾಂತರ ಬಸವ ಜಯಂತಿ, ಶ್ರೀಪಾರ್ವತಿ ಪರಮೇಶ್ವರ, ಶ್ರೀ ಬಸವೇಶ್ವರ ಸ್ವಾಮಿ ಉತ್ಸವ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಶ್ರೀಶಿವಕುಮಾರಸ್ವಾಮೀಜಿ ಸಮುದಾಯದ ಭವನದ 5 ನೇವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮದರ್ ಥೆರೆಸಾ ಏಗೆ ಪ್ರಶಸ್ತಿ ಲಭಿಸಿತ್ತೊ ಅದಕ್ಕಿಂತ ದೊಡ್ಡ ಕಾಂತ್ರಿ ಮಾಡಿದ ಶ್ರೀಗಳಿಗೆ ಇಡೀ ವಿಶ್ವವೇ ಮೆಚ್ಚುವ ಪಾರಿದೋಷಕ ಸಿಗುತ್ತಿತ್ತು ಆದರೆ ಪ್ರಾದೇಶಿಕವಾಗಿ ಉಳಿದ ಕಾರಣ ಅವರನ್ನು ಗುರುತಿಸಲಿಲ್ಲ ಪಾರಿದೋಷಕದಿಂದ ಅವರಿಗೇ ಏನು ಆಗಬೇಕಿಲ್ಲ. ಪಾರಿದೋಷಕ ಲಭಿಸಿದಿದ್ರೆ ಅದಕ್ಕೆ ಮತಷ್ಟು ಗೌರವಸಿಗುತಿತ್ತು ಭಗವಂತ ಮೆಚ್ಚುವಂತೆ ಸೇವೆ ಮಾಡಬೇಕು ಒರತು ಜನ ಮೆಚ್ಚಿಗೆಗೆ ಮಾಡಬಾರದು ಎಂದು ಶ್ರೀಗಳು ತೋರಿಸಿಕೊಟ್ಟಿದ್ದಾರೆ ಅವರ ತತ್ವ,ಆದರ್ಶಗಳನ್ನು ನಮ್ಮ ಜೀವನದಲ್ಲಿ ಆಳವಡಿಸಕೊಂಡಾಗ ಸಾರ್ಥಕ ಜೀವನ ಸಾಗಿಸಬಹುದು ಎಂದರು. ಬಸವ ಜಯಂತಿಯನ್ನು ಗ್ರಾಮಾಂತರ ಬಸವ ಜಯಂತಿ ಎಂದು ಆಚರಿಸುವ ಮೂಲಕ ಹೆಚ್ಚು ಮೆರಗು ನೀಡಿದ್ದರು. ಧಾರ್ಮಿಕ ಕಾರ್ಯಕ್ರಮದಲ್ಲಿ ಎಲ್ಲರಲ್ಲೂ ಅಭಿರುಚಿ ಇರಲಿ, ಪ್ರತಿ ಅಮಾವಾಸ್ಯೆ, ಪೋಣಾಮಿ ಯಂದು ಜಗಣ್ಣಯ್ಯನ ಮಠದ ಶ್ರೀಗಳ ನೇತೃತ್ವದಲ್ಲಿ ಈ ಸ್ಥಳದಲ್ಲಿ ಶಿವಾನುಭವ ಗೋಷ್ಠಿ ನಡೆಯುವ ಮೂಲಕ ಈ ಜಾಗಕ್ಕೆ ಜ್ಞಾನ ಸಂಪತ್ತು ಜ್ಞಾನ ದಾಸೋಹ ಹೆಚ್ಚಲಿದೆ ಇದರಿಂದ ಈ ಭವನ ಸಾರ್ಥಕವಾಗುತ್ತದೆ ಎಂದರು. ಅಕ್ಷಯ ತೃತಿಯದಂದು ಬಸವಣ್ಣ ಅವರನ್ನು ನೆನೆಪಿಸಿಕೊಳ್ಳದೆ ಪ್ರತಿ ಕ್ಷಣ ನೆನಪಿಸಿಕೊಂಡರೆ ಮನುಷ್ಯನಲ್ಲಿ ಜ್ಞಾನ ಸಂಪತ್ತು, ಆಚಾರ,ವಿಚಾರ ಬೆಳಕಿನಂತೆ ಉದಯಿಸಲಿದೆ ಇದರಿಂದ ಮನುಷ್ಯ ಹುಟ್ಟಿದಕ್ಕೂ ಸಾರ್ಥಕತೆಹೊಂದುತ್ತಾನೆ ಎಂದರು. ಗುಡೇಮಾರನಹಳ್ಳಿ ಜಗ್ಗಣ್ಣಯ್ಯನ ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ಜಾತಿ –ಮತದ ಭೇಧವಿಲ್ಲದ ಸಮ ಸಮಾಜದ ಕನಸು ಕಂಡಿದ್ದ ವಿಶ್ವಗುರು ಬಸವಣ್ಣನವರ ತತ್ವಗಳನ್ನು ಸ್ಮರಿಸಿಕೊಳ್ಳಬೇಕು. ಈ ಭವನಕ್ಕೆ ಸಿದ್ದಗಂಗಾಶ್ರೀಗಳು ಅಡಿಪಾಯ ಹಾಕಿದರಿಂದ ಸಾವಿರಾರು ಮಂದಿಗೆ ಅನುಕೂಲವಾಗಿದೆ ಎಂದರು. ಸಿದ್ದಲಿಂಗೇಶ್ವರ ನಾಟಕ ಮಂಡಳಿ ಕಲಾವಿದರಿಂದ ಜಗಜ್ಯೋತಿ ಬಸವೇಶ್ವರ ಐತಿಹಾಸಿಕ ನಾಟಕ ಪ್ರದರ್ಶನ ನಡೆಯಿತು. ಶಾಸಕ ಶ್ರೀನಿವಾಸ್, ತಮ್ಮಡಿಹಳ್ಳಿ ಮಠದ ಸಿದ್ದಲಿಂಗಸ್ವಾಮೀಜಿ, ಕೆಪಿ. ಬೃಂಗೇಶ್, ನಾಗರುದ್ರ ಶರ್ಮ, ವೀರಶೈವ ಲಿಂಗಾಯಿತ ಸೇವಾಟ್ರಸ್ಟ್ ಅಧ್ಯಕ್ಷ ಶಾಂತರಾಜು, ಕಾರ್ಯದರ್ಶಿ ಜಿ.ಎಂ.ರೇಣುಕಾರಾಧ್ಯ, ತಾ.ಪಂ. ಮಾಜಿ ಸದಸ್ಯರಾದ ಶಂಕರಪ್ಪ, ಅನಸೂಯ ಕಾಂತರಾಜು, ಗೀತಾ ಗಂಗರಂಗಯ್ಯ, ಶಿಕ್ಷಕ ಆರಾಧ್ಯ, ರೇಣುಕಪ್ಪ, ಚಂದ್ರಶೇಖರ್, ಎಸ್‍ಸಿಬಿಎಸ್ ಮಂಜುನಾಥ್ ಇತರರು ಇದ್ದರು.1
- Sir ramdev granite and tiles showroom hiriyur karnataka1
- ಬುಧವಾರ ಸಂಜೆ ಮತ್ತು ರಾತ್ರಿ ಕುಷ್ಟಗಿ ಸೇರಿದಂತೆ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಸುಮಾರು ಅರ್ಧ ಗಂಟೆಗಳ ಕಾಲ ಗುಡುಗು, ಸಿಡಿಲು ಹಾಗೂ ಬಿರುಗಾಳಿಯೊಂದಿಗೆ ರಭಸವಾಗಿ ಮಳೆ ಸುರಿದಿದ್ದು, ಬಿಸಿಲಿನ ತೀವ್ರತೆಯಿಂದ ಕಂಗೆಟ್ಟಿದ್ದ ಜನರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಮಧ್ಯಾಹ್ನದ ಬಳಿಕ ಆಕಾಶದಲ್ಲಿ ಮೋಡ ಕವಿದು ಗಾಳಿ ಜೋರಾಗಿ ಬೀಸತೊಡಗಿದ ಬಳಿಕ ಕೆಲವೇ ಕ್ಷಣಗಳಲ್ಲಿ ಮಳೆ ಆರಂಭವಾಯಿತು. ಗುಡುಗು ಮತ್ತು ಮಿಂಚಿನ ಅಬ್ಬರದಿಂದ ಕೆಲಕಾಲ ಜನರಲ್ಲಿ ಆತಂಕವೂ ಉಂಟಾಯಿತು. ಬಿಸಿಲಿನ ಉಷ್ಣತೆ ಕಡಿಮೆಯಾಗಿದ್ದರೂ ಕೆಲವು ಕಡೆ ಗಾಳಿಯಿಂದ ಸಣ್ಣಪುಟ್ಟ ಹಾನಿ ಸಂಭವಿಸಿರುವ ವರದಿಗಳೂ ಕೇಳಿಬಂದಿವೆ1
- ಹನೂರು ತಾಲ್ಲೂಕಿನ ಮಾರ್ಟಳ್ಳಿ ಸಮೀಪ, ಸ್ಥಳೀಯ ರೈತ ಸಂಘದ ಜಾಗೃತಿಯಿಂದ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮದ್ಯವನ್ನು ಪೊಲೀಸರ ವಶಕ್ಕೆ ಘಟನೆ ನೆಡೆದಿದೆ ರೈತ ಸಂಘದ ಮುಖಂಡ ವೆಂಕಟಚಲ ಹಾಗೂ ಸದಸ್ಯರು ವೈನ್ ಸ್ಟೋರ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಅನುಮಾನಾಸ್ಪದವಾಗಿ ಹೊರಗೆ ಸಂಗ್ರಹಿಸಿದ್ದ 97 ಪೌಚ್ ‘ಒರಿಜಿನಲ್ ಚಾಯ್ಸ್ ವಿಸ್ಕಿ’ ಪತ್ತೆಯಾಗಿದ್ದು, ಯಾವುದೇ ವಾರಸುದಾರರಿಲ್ಲದೆ ಇರುವುದು ದೃಢಪಟ್ಟಿದೆ. ಅಬಕಾರಿ ಇಲಾಖೆಗೆ ಕೂಡ ಮಾಹಿತಿ ನೀಡಿದರೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದ ಹಿನ್ನೆಲೆಯಲ್ಲಿ, ರೈತ ಸಂಘದವರು ತುರ್ತು 112 ಸೇವೆಗೆ ಕರೆ ಮಾಡಿ ಪೊಲೀಸರಿಗೆ ತಿಳಿಸಿದರು. ನಂತರ ರಾಮಾಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಶಕ್ಕೆ ಪಡೆದ ಮದ್ಯವನ್ನು ಪೊಲೀಸ್ ಠಾಣೆಗೆ ಹಸ್ತಾಂತರಿಸಲು ರೈತ ಸಂಘದವರು ಒಪ್ಪಿದ್ದಾರೆ.1
- ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು (ಏಪ್ರಿಲ್ 7) ಬೆಳ್ಳಂಬೆಳಗ್ಗೆ ರಾಜ್ಯದ ನಾಲ್ಕು ಪ್ರಮುಖ ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬಳ್ಳಾರಿ, ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದ ವಿವಿಧ ಸ್ಥಳಗಳಲ್ಲಿ ಅಧಿಕಾರಿಗಳು ಬೀಡುಬಿಟ್ಟಿದ್ದು, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ (DA Case) ಆರೋಪದ ಮೇಲೆ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಚಿತ್ರದುರ್ಗದ ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಸುಶೀಲಮ್ಮ ಅವರ ಮನೆ ಮೇಲೆ ದಾಳಿ ನಡೆದಿದೆ. ಸುಶೀಲಮ್ಮ ಅವರು ಒಂದು ವರ್ಷದ ಹಿಂದೆಯೇ ಸ್ವಯಂ ನಿವೃತ್ತಿ (VRS) ಪಡೆದಿದ್ದರು. ಆದರೆ ಅವರು ಸೇವೆಯಲ್ಲಿದ್ದಾಗ ಅಧಿಕಾರ ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ಎಸಗಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಚಿತ್ರದುರ್ಗದ ಮೇದೇಹಳ್ಳಿ ಬಡಾವಣೆಯ ನಿವಾಸ ಮತ್ತು ಹಿರಿಯೂರು ತಾಲೂಕಿನ ಯಾದಲಘಟ್ಟ ಗ್ರಾಮದ ತೋಟದ ಮನೆಯಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ.1