logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಭ್ರಷ್ಟ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು (ಏಪ್ರಿಲ್ 7) ಬೆಳ್ಳಂಬೆಳಗ್ಗೆ ರಾಜ್ಯದ ನಾಲ್ಕು ಪ್ರಮುಖ ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬಳ್ಳಾರಿ, ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದ ವಿವಿಧ ಸ್ಥಳಗಳಲ್ಲಿ ಅಧಿಕಾರಿಗಳು ಬೀಡುಬಿಟ್ಟಿದ್ದು, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ (DA Case) ಆರೋಪದ ಮೇಲೆ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಚಿತ್ರದುರ್ಗದ ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಸುಶೀಲಮ್ಮ ಅವರ ಮನೆ ಮೇಲೆ ದಾಳಿ ನಡೆದಿದೆ. ಸುಶೀಲಮ್ಮ ಅವರು ಒಂದು ವರ್ಷದ ಹಿಂದೆಯೇ ಸ್ವಯಂ ನಿವೃತ್ತಿ (VRS) ಪಡೆದಿದ್ದರು. ಆದರೆ ಅವರು ಸೇವೆಯಲ್ಲಿದ್ದಾಗ ಅಧಿಕಾರ ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ಎಸಗಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಚಿತ್ರದುರ್ಗದ ಮೇದೇಹಳ್ಳಿ ಬಡಾವಣೆಯ ನಿವಾಸ ಮತ್ತು ಹಿರಿಯೂರು ತಾಲೂಕಿನ ಯಾದಲಘಟ್ಟ ಗ್ರಾಮದ ತೋಟದ ಮನೆಯಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ.

2 hrs ago
user_Suresh Belagere
Suresh Belagere
Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
2 hrs ago

ಭ್ರಷ್ಟ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು (ಏಪ್ರಿಲ್ 7) ಬೆಳ್ಳಂಬೆಳಗ್ಗೆ ರಾಜ್ಯದ ನಾಲ್ಕು ಪ್ರಮುಖ ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬಳ್ಳಾರಿ, ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದ ವಿವಿಧ ಸ್ಥಳಗಳಲ್ಲಿ ಅಧಿಕಾರಿಗಳು ಬೀಡುಬಿಟ್ಟಿದ್ದು, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ (DA Case) ಆರೋಪದ ಮೇಲೆ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಚಿತ್ರದುರ್ಗದ ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಸುಶೀಲಮ್ಮ ಅವರ ಮನೆ ಮೇಲೆ ದಾಳಿ ನಡೆದಿದೆ. ಸುಶೀಲಮ್ಮ ಅವರು ಒಂದು ವರ್ಷದ ಹಿಂದೆಯೇ ಸ್ವಯಂ ನಿವೃತ್ತಿ (VRS) ಪಡೆದಿದ್ದರು. ಆದರೆ ಅವರು ಸೇವೆಯಲ್ಲಿದ್ದಾಗ ಅಧಿಕಾರ ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ಎಸಗಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಚಿತ್ರದುರ್ಗದ ಮೇದೇಹಳ್ಳಿ ಬಡಾವಣೆಯ ನಿವಾಸ ಮತ್ತು ಹಿರಿಯೂರು ತಾಲೂಕಿನ ಯಾದಲಘಟ್ಟ ಗ್ರಾಮದ ತೋಟದ ಮನೆಯಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ.

More news from ಕರ್ನಾಟಕ and nearby areas
  • Post by H M ಹರಕುಣಿ
    1
    Post by H M ಹರಕುಣಿ
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    7 hrs ago
  • ದೇವನಹಳ್ಳಿ ಜಗಜ್ಯೋತಿ ಬಸವೇಶ್ವರ ಪ್ರತಿಮೆ ಅನಾವರಣ ಮಾಡಿದ ಸಚಿವರು ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಬಳಿಯ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ನಿರ್ಮಿಸಿರುವ ಪ್ರತಿಮೆ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದಿಂದ ಆಯೋಜಿಸಿರುವ ಕಾರ್ಯಕ್ರಮ ಅರಣ್ಯ ಸಚಿವ ಈಶ್ವರಖಂಡ್ರೇ ಸಚಿವ ಕೆ.ಎಚ್ ಮುನಿಯಪ್ಪ ಕಾರ್ಯಕ್ರಮದಲ್ಲಿ ಭಾಗಿ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಪಾಲನಹಳ್ಳಿ ಮಠದ ಸ್ವಾಮೀಜಿಗಳಿಂದ ಪ್ರತಿಮೆ ಅನಾವರಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಲಿಂಗಾಯುತ ಸಮುದಾಯದ ಮುಖಂಡರು ಭಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಡಿ.ಸಿ ಕಚೇರಿ
    4
    ದೇವನಹಳ್ಳಿ 
ಜಗಜ್ಯೋತಿ ಬಸವೇಶ್ವರ ಪ್ರತಿಮೆ ಅನಾವರಣ ಮಾಡಿದ ಸಚಿವರು
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಬಳಿಯ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ನಿರ್ಮಿಸಿರುವ ಪ್ರತಿಮೆ
ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದಿಂದ ಆಯೋಜಿಸಿರುವ ಕಾರ್ಯಕ್ರಮ
ಅರಣ್ಯ ಸಚಿವ ಈಶ್ವರಖಂಡ್ರೇ ಸಚಿವ ಕೆ.ಎಚ್ ಮುನಿಯಪ್ಪ ಕಾರ್ಯಕ್ರಮದಲ್ಲಿ ಭಾಗಿ
ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಪಾಲನಹಳ್ಳಿ ಮಠದ ಸ್ವಾಮೀಜಿಗಳಿಂದ ಪ್ರತಿಮೆ ಅನಾವರಣ
ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಲಿಂಗಾಯುತ ಸಮುದಾಯದ ಮುಖಂಡರು ಭಾಗಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಡಿ.ಸಿ ಕಚೇರಿ
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    20 hrs ago
  • hhhhhhhhhhhhhhhhhhhhhhhh
    1
    hhhhhhhhhhhhhhhhhhhhhhhh
    user_Ahmed Rasool
    Ahmed Rasool
    ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    2 hrs ago
  • ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿಯಲ್ಲಿ ನಡೆದ ಶ್ರೀ ಮಾಸ್ತೆಮ್ಮ ದೇವಿ ಜಾತ್ರೆಯಲ್ಲಿ 62 ವರ್ಷದ ಶರಣಪ್ಪ ಗೊಲ್ಲರ ಅಸಾಮಾನ್ಯ ಸಾಹಸ ಮೆರೆದಿದ್ದಾರೆ. ಸುಮಾರು 120 ಅಡಿ ಎತ್ತರದ ಎಣ್ಣೆ ಸವರಿದ ಹಾಲುಗಂಭವನ್ನು ಅವರು ಲೀಲಾಜಾಲವಾಗಿ ಏರಿ ಭಕ್ತರಲ್ಲಿ ಆಶ್ಚರ್ಯ ಮೂಡಿಸಿದ್ದಾರೆ. ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಯಾದವ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ವಿಶೇಷ. ಕಂಬದ ಮೇಲೆ ಕಟ್ಟಲಾಗಿದ್ದ ಕೊಬ್ಬರಿಯನ್ನು ತಲುಪುವ ಸಾಹಸ ಭಕ್ತಿ ಮತ್ತು ದೈಹಿಕ ಸಾಮರ್ಥ್ಯದ ಸಂಕೇತವಾಗಿ ಕಂಡುಬಂದಿದೆ. ಎಣ್ಣೆ ಸುರಿಯುತ್ತಿದ್ದರೂ ಲೆಕ್ಕಿಸದೇ ಶರಣಪ್ಪ ಅವರ ಸಾಹಸವನ್ನು ಸಾವಿರಾರು ಭಕ್ತರು ಚಪ್ಪಾಳೆ ತಟ್ಟಿ ಶ್ಲಾಘಿಸಿದ್ದಾರೆ.
    1
    ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿಯಲ್ಲಿ ನಡೆದ ಶ್ರೀ ಮಾಸ್ತೆಮ್ಮ ದೇವಿ ಜಾತ್ರೆಯಲ್ಲಿ 62 ವರ್ಷದ ಶರಣಪ್ಪ ಗೊಲ್ಲರ ಅಸಾಮಾನ್ಯ ಸಾಹಸ ಮೆರೆದಿದ್ದಾರೆ. ಸುಮಾರು 120 ಅಡಿ ಎತ್ತರದ ಎಣ್ಣೆ ಸವರಿದ ಹಾಲುಗಂಭವನ್ನು ಅವರು ಲೀಲಾಜಾಲವಾಗಿ ಏರಿ ಭಕ್ತರಲ್ಲಿ ಆಶ್ಚರ್ಯ ಮೂಡಿಸಿದ್ದಾರೆ. ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಯಾದವ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ವಿಶೇಷ. ಕಂಬದ ಮೇಲೆ ಕಟ್ಟಲಾಗಿದ್ದ ಕೊಬ್ಬರಿಯನ್ನು ತಲುಪುವ ಸಾಹಸ ಭಕ್ತಿ ಮತ್ತು ದೈಹಿಕ ಸಾಮರ್ಥ್ಯದ ಸಂಕೇತವಾಗಿ ಕಂಡುಬಂದಿದೆ. ಎಣ್ಣೆ ಸುರಿಯುತ್ತಿದ್ದರೂ ಲೆಕ್ಕಿಸದೇ ಶರಣಪ್ಪ ಅವರ ಸಾಹಸವನ್ನು ಸಾವಿರಾರು ಭಕ್ತರು ಚಪ್ಪಾಳೆ ತಟ್ಟಿ ಶ್ಲಾಘಿಸಿದ್ದಾರೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    3 hrs ago
  • Post by Venu Gopal
    1
    Post by Venu Gopal
    user_Venu Gopal
    Venu Gopal
    Local News Reporter ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    4 hrs ago
  • ಬಾಗಲಕೋಟ ಜಿಲ್ಲೆಯ ಇಲಕಲ್ಲ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮಾರ್ಗದರ್ಶನ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ಮಾರ್ಗದರ್ಶನ ಕಾಲೇಜ್ ಆಫ್ ನರ್ಸಿಂಗ್, ಮಾರ್ಗದರ್ಶನ ಕಾಲೇಜ್ ಆಫ್ ಫಾರ್ಮಾಸಿ, ಮಾರ್ಗದರ್ಶನ ಪ್ಯಾರಾಮೆಡಿಕಲ್ ಕಾಲೇಜ್, ಮಾರ್ಗದರ್ಶನ ಸ್ಕೂಲ್ ಆಫ್ ನರ್ಸಿಂಗ್ ವತಿಯಿಂದ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾ ಮಂಗಳವಾರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನವೀನ ಬಿರಾದಾರ ಚಾಲನೆ ನೀಡಿದರು. ಬಸವೇಶ್ವರ ವೃತ್ತದಿಂದ ಆರಂಭವಾಗಿ ಪ್ರವಾಸಿ ಮಂದಿರ, ಮಹಾಂತ ಗಂಗೋತ್ರಿ, ಬಸ್ ನಿಲ್ದಾಣ ಮಾರ್ಗವಾಗಿ ಕಂಠಿ ವೃತ್ತದ ವರೆಗೆ ಆಗಮಿಸಿ ಅಲ್ಲಿ ಆರೋಗ್ಯದ ಕುರಿತು ವಿದ್ಯಾರ್ಥಿಗಳು ಮಾತನಾಡಿದರು. ಮಾರ್ಗದರ್ಶನ ಸಂಸ್ಥೆಯ ಚೇರ್‌ಮನ್‌ರಾದ ವಿರೇಶ ಕೂಡಲಗಿಮಠ ಇವರ ಸಹಕಾರದೊಂದಿಗೆ ಮಾರ್ಗದರ್ಶನ ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಡಾ. ಕೆ.ವಿ.ರಾಮನಾಥ, ಸವೀತಾ ಕೋರಿಶೆಟ್ಟಿ, ರಾಹುಲ್ ಮಂಗಳೂರ ಹಾಗೂ ಡಾ. ನವೀನ್ ಹಿರೇಮಠ ಸೇರಿದಂತೆ ಮತ್ತಿತರರು ಮಾತನಾಡಿದರು.
    3
    ಬಾಗಲಕೋಟ ಜಿಲ್ಲೆಯ ಇಲಕಲ್ಲ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮಾರ್ಗದರ್ಶನ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ಮಾರ್ಗದರ್ಶನ ಕಾಲೇಜ್ ಆಫ್ ನರ್ಸಿಂಗ್, ಮಾರ್ಗದರ್ಶನ ಕಾಲೇಜ್ ಆಫ್ ಫಾರ್ಮಾಸಿ, ಮಾರ್ಗದರ್ಶನ ಪ್ಯಾರಾಮೆಡಿಕಲ್ ಕಾಲೇಜ್, ಮಾರ್ಗದರ್ಶನ ಸ್ಕೂಲ್ ಆಫ್ ನರ್ಸಿಂಗ್ ವತಿಯಿಂದ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾ ಮಂಗಳವಾರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನವೀನ ಬಿರಾದಾರ ಚಾಲನೆ ನೀಡಿದರು. 
ಬಸವೇಶ್ವರ ವೃತ್ತದಿಂದ ಆರಂಭವಾಗಿ ಪ್ರವಾಸಿ ಮಂದಿರ, ಮಹಾಂತ ಗಂಗೋತ್ರಿ, ಬಸ್ ನಿಲ್ದಾಣ ಮಾರ್ಗವಾಗಿ ಕಂಠಿ ವೃತ್ತದ ವರೆಗೆ ಆಗಮಿಸಿ ಅಲ್ಲಿ ಆರೋಗ್ಯದ  ಕುರಿತು ವಿದ್ಯಾರ್ಥಿಗಳು ಮಾತನಾಡಿದರು. 
ಮಾರ್ಗದರ್ಶನ ಸಂಸ್ಥೆಯ ಚೇರ್‌ಮನ್‌ರಾದ ವಿರೇಶ ಕೂಡಲಗಿಮಠ ಇವರ ಸಹಕಾರದೊಂದಿಗೆ ಮಾರ್ಗದರ್ಶನ ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಡಾ. ಕೆ.ವಿ.ರಾಮನಾಥ,  ಸವೀತಾ ಕೋರಿಶೆಟ್ಟಿ, ರಾಹುಲ್ ಮಂಗಳೂರ ಹಾಗೂ ಡಾ. ನವೀನ್ ಹಿರೇಮಠ ಸೇರಿದಂತೆ ಮತ್ತಿತರರು ಮಾತನಾಡಿದರು.
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    1 hr ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    22 hrs ago
  • ದೇವನಹಳ್ಳಿ ಹೆಚ್ಚಾದ ಎಲ್ಪಿಜಿ ಸಮಸ್ಯೆ...ರಾಜ್ಯ ಸರ್ಕಾರ ವಿರುದ್ದ ಸಂಸದ ಡಾ.ಕೆ.ಸುಧಾಕರ್ ಕಿಡಿ. ಇದು ವಿಶ್ವದ ಸಮಸ್ಯೆ, ಇದರಲ್ಲಿ ರಾಜಕಾರಣ ಮಾಡಿದ್ರೆ ಅವರಿಗೆ ಡೆಪಾಸಿಟ್ ಸಿಗಲ್ಲ. ಕಾಂಗ್ರೆಸಿನವರಿಗೆ ಸರ್ಕಾರ ನಡೆಸಲು ಯೋಗ್ಯತೆ ಇಲ್ಲ. ಯುದ್ಧದ ನಡುವೆಯೂ ಮೋದಿಯವರ ರಾಜತಾಂತ್ರಿಕತೆಯಿಂದಾಗಿ ಮೂರೊತ್ತು ಊಟ ಮಾಡ್ತಿದ್ದೀವಿ. ಮೋದಿಯವರಿಂದ ದೇಶದ ಜನತೆಗೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಗ್ತಿದೆ. ಕಾಂಗ್ರೆಸಿಗರಿಗೆ ಏನಾದ್ರೂ ನಾಚಿಕೆ ಇದ್ಯಾ..? ಇದರಲ್ಲಾ ರಾಜಕಾರಣ ಮಾಡೋದು..?, ಕೋವಿಡ್ ನಲ್ಲಿ ರಾಜಕಾರಣ ಮಾಡಿದ್ರು, ಮೋದಿ ಇಂಜಕ್ಷನ್ ಅಂದ್ರು, ಯುದ್ಧ ರಾಷ್ಟಗಳಿಗೆ ವಿಮಾನ ಹೋಗ್ತಿಲ್ಲ, ಅಲ್ಲಿನ ಜನ ಸಾಯ್ತಿದ್ದಾರೆ. ಪಾಕಿಸ್ತಾನದಲ್ಲಿ ಪೆಟ್ರೋಲ್ ರೇಟ್ 300ರೂ ನಿಂದ 400ರೂ ಹೆಚ್ಚಾಗಿ ಶೇ.50ರಷ್ಟು ಏರಿಕೆ ಮಾಡಿದ್ದಾರೆ. ಇತಹ ಸಂದರ್ಭದಲ್ಲಿ ದೇಶ ಒಂದಾಗಿ ವಿಚಾರ ಮಾಡಬೇಕು. ರಾಜಕಾರಣ ಮಾಡದೇ ದೇಶದ ಜನರನ್ನ ಉಳಿಸಿಕೊಳ್ಳಬೇಕು ಎಂದು ಯೋಚನೆ ಮಾಡಬೇಕು. ಸಮಸ್ಯೆ ಬಗೆಹರಿಸೋದು ಬಿಟ್ಟು ರಾಜಕಾರಣ ಮಾಡಿದ್ರೆ ಖಂಡಿತವಾಗಿಯೂ ಡೆಪಾಸಿಟ್ ಬರಲ್ಲ. ದೇವನಹಳ್ಳಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ ಡಾ.ಕೆ.ಸುಧಾಕರ್ ಹೇಳಿಕೆ.
    1
    ದೇವನಹಳ್ಳಿ
ಹೆಚ್ಚಾದ ಎಲ್ಪಿಜಿ ಸಮಸ್ಯೆ...ರಾಜ್ಯ ಸರ್ಕಾರ ವಿರುದ್ದ ಸಂಸದ ಡಾ.ಕೆ.ಸುಧಾಕರ್ ಕಿಡಿ.
ಇದು ವಿಶ್ವದ ಸಮಸ್ಯೆ, ಇದರಲ್ಲಿ ರಾಜಕಾರಣ ಮಾಡಿದ್ರೆ ಅವರಿಗೆ ಡೆಪಾಸಿಟ್ ಸಿಗಲ್ಲ.
ಕಾಂಗ್ರೆಸಿನವರಿಗೆ ಸರ್ಕಾರ ನಡೆಸಲು ಯೋಗ್ಯತೆ ಇಲ್ಲ.
ಯುದ್ಧದ ನಡುವೆಯೂ ಮೋದಿಯವರ ರಾಜತಾಂತ್ರಿಕತೆಯಿಂದಾಗಿ ಮೂರೊತ್ತು ಊಟ ಮಾಡ್ತಿದ್ದೀವಿ.
ಮೋದಿಯವರಿಂದ ದೇಶದ ಜನತೆಗೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಗ್ತಿದೆ.
ಕಾಂಗ್ರೆಸಿಗರಿಗೆ ಏನಾದ್ರೂ ನಾಚಿಕೆ ಇದ್ಯಾ..? ಇದರಲ್ಲಾ ರಾಜಕಾರಣ ಮಾಡೋದು..?,
ಕೋವಿಡ್ ನಲ್ಲಿ ರಾಜಕಾರಣ ಮಾಡಿದ್ರು, ಮೋದಿ ಇಂಜಕ್ಷನ್ ಅಂದ್ರು,
ಯುದ್ಧ ರಾಷ್ಟಗಳಿಗೆ ವಿಮಾನ ಹೋಗ್ತಿಲ್ಲ, ಅಲ್ಲಿನ ಜನ ಸಾಯ್ತಿದ್ದಾರೆ.
ಪಾಕಿಸ್ತಾನದಲ್ಲಿ ಪೆಟ್ರೋಲ್ ರೇಟ್ 300ರೂ ನಿಂದ 400ರೂ ಹೆಚ್ಚಾಗಿ ಶೇ.50ರಷ್ಟು  ಏರಿಕೆ ಮಾಡಿದ್ದಾರೆ.
ಇತಹ ಸಂದರ್ಭದಲ್ಲಿ ದೇಶ ಒಂದಾಗಿ ವಿಚಾರ ಮಾಡಬೇಕು.
ರಾಜಕಾರಣ ಮಾಡದೇ ದೇಶದ ಜನರನ್ನ ಉಳಿಸಿಕೊಳ್ಳಬೇಕು ಎಂದು ಯೋಚನೆ ಮಾಡಬೇಕು.
ಸಮಸ್ಯೆ ಬಗೆಹರಿಸೋದು ಬಿಟ್ಟು ರಾಜಕಾರಣ ಮಾಡಿದ್ರೆ ಖಂಡಿತವಾಗಿಯೂ ಡೆಪಾಸಿಟ್ ಬರಲ್ಲ.
ದೇವನಹಳ್ಳಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ ಡಾ.ಕೆ.ಸುಧಾಕರ್ ಹೇಳಿಕೆ.
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    21 hrs ago
  • ಬುಧವಾರ ಸಂಜೆ ಮತ್ತು ರಾತ್ರಿ ಕುಷ್ಟಗಿ ಸೇರಿದಂತೆ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಸುಮಾರು ಅರ್ಧ ಗಂಟೆಗಳ ಕಾಲ ಗುಡುಗು, ಸಿಡಿಲು ಹಾಗೂ ಬಿರುಗಾಳಿಯೊಂದಿಗೆ ರಭಸವಾಗಿ ಮಳೆ ಸುರಿದಿದ್ದು, ಬಿಸಿಲಿನ ತೀವ್ರತೆಯಿಂದ ಕಂಗೆಟ್ಟಿದ್ದ ಜನರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಮಧ್ಯಾಹ್ನದ ಬಳಿಕ ಆಕಾಶದಲ್ಲಿ ಮೋಡ ಕವಿದು ಗಾಳಿ ಜೋರಾಗಿ ಬೀಸತೊಡಗಿದ ಬಳಿಕ ಕೆಲವೇ ಕ್ಷಣಗಳಲ್ಲಿ ಮಳೆ ಆರಂಭವಾಯಿತು. ಗುಡುಗು ಮತ್ತು ಮಿಂಚಿನ ಅಬ್ಬರದಿಂದ ಕೆಲಕಾಲ ಜನರಲ್ಲಿ ಆತಂಕವೂ ಉಂಟಾಯಿತು. ಬಿಸಿಲಿನ ಉಷ್ಣತೆ ಕಡಿಮೆಯಾಗಿದ್ದರೂ ಕೆಲವು ಕಡೆ ಗಾಳಿಯಿಂದ ಸಣ್ಣಪುಟ್ಟ ಹಾನಿ ಸಂಭವಿಸಿರುವ ವರದಿಗಳೂ ಕೇಳಿಬಂದಿವೆ
    1
    ಬುಧವಾರ ಸಂಜೆ ಮತ್ತು ರಾತ್ರಿ ಕುಷ್ಟಗಿ ಸೇರಿದಂತೆ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಸುಮಾರು ಅರ್ಧ ಗಂಟೆಗಳ ಕಾಲ ಗುಡುಗು, ಸಿಡಿಲು ಹಾಗೂ ಬಿರುಗಾಳಿಯೊಂದಿಗೆ ರಭಸವಾಗಿ ಮಳೆ ಸುರಿದಿದ್ದು, ಬಿಸಿಲಿನ ತೀವ್ರತೆಯಿಂದ ಕಂಗೆಟ್ಟಿದ್ದ ಜನರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಮಧ್ಯಾಹ್ನದ ಬಳಿಕ ಆಕಾಶದಲ್ಲಿ ಮೋಡ ಕವಿದು ಗಾಳಿ ಜೋರಾಗಿ ಬೀಸತೊಡಗಿದ ಬಳಿಕ ಕೆಲವೇ ಕ್ಷಣಗಳಲ್ಲಿ ಮಳೆ ಆರಂಭವಾಯಿತು. ಗುಡುಗು ಮತ್ತು ಮಿಂಚಿನ ಅಬ್ಬರದಿಂದ ಕೆಲಕಾಲ ಜನರಲ್ಲಿ ಆತಂಕವೂ ಉಂಟಾಯಿತು. ಬಿಸಿಲಿನ ಉಷ್ಣತೆ ಕಡಿಮೆಯಾಗಿದ್ದರೂ ಕೆಲವು ಕಡೆ ಗಾಳಿಯಿಂದ ಸಣ್ಣಪುಟ್ಟ ಹಾನಿ ಸಂಭವಿಸಿರುವ ವರದಿಗಳೂ ಕೇಳಿಬಂದಿವೆ
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.