ಇಂದು ಮುಂಜಾನೆ ಬೆಂಗಳೂರಿಗೆ ಆಗಮಿಸಿದ ಮಾನ್ಯ ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ K.C. Venugopal ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿದ ಶಾಸಕ ಎನ್ ಎಚ್ ಕೋನರಡ್ಡಿಯವರು .... ನಂತರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಎಸ್ಐಆರ್ ಮಾನಿಟರಿಂಗ್ ಕಮಿಟಿ ಸಭೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ Randeep Singh Surjewala ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀ B K Hariprasad ಅವರೊಂದಿಗೆ ಭಾಗವಹಿಸಿದ ಶಾಸಕರು .... ಈ ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ಶ್ರೀ ಗೋಪಿನಾಥ್ ಪಳನಿಯಪ್ಪನ್ ಸೇರಿದಂತೆ ಮುಂತಾದ ನಾಯಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ನವಲಗುಂದ ವಿಧಾನಸಭಾ ಮತಕ್ಷೇತ್ರ-69 ಇಂದು ಮುಂಜಾನೆ ಬೆಂಗಳೂರಿಗೆ ಆಗಮಿಸಿದ ಮಾನ್ಯ ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ K.C. Venugopal ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿದ ಶಾಸಕ ಎನ್ ಎಚ್ ಕೋನರಡ್ಡಿಯವರು .... ನಂತರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಎಸ್ಐಆರ್ ಮಾನಿಟರಿಂಗ್ ಕಮಿಟಿ ಸಭೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ Randeep Singh Surjewala ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀ B K Hariprasad ಅವರೊಂದಿಗೆ ಭಾಗವಹಿಸಿದ ಶಾಸಕರು .... ಈ ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ಶ್ರೀ ಗೋಪಿನಾಥ್ ಪಳನಿಯಪ್ಪನ್ ಸೇರಿದಂತೆ ಮುಂತಾದ ನಾಯಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ನವಲಗುಂದ ವಿಧಾನಸಭಾ ಮತಕ್ಷೇತ್ರ-69
ಇಂದು ಮುಂಜಾನೆ ಬೆಂಗಳೂರಿಗೆ ಆಗಮಿಸಿದ ಮಾನ್ಯ ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ K.C. Venugopal ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿದ ಶಾಸಕ ಎನ್ ಎಚ್ ಕೋನರಡ್ಡಿಯವರು .... ನಂತರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಎಸ್ಐಆರ್ ಮಾನಿಟರಿಂಗ್ ಕಮಿಟಿ ಸಭೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ Randeep Singh Surjewala ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀ B K Hariprasad ಅವರೊಂದಿಗೆ ಭಾಗವಹಿಸಿದ ಶಾಸಕರು .... ಈ ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ಶ್ರೀ ಗೋಪಿನಾಥ್ ಪಳನಿಯಪ್ಪನ್ ಸೇರಿದಂತೆ ಮುಂತಾದ ನಾಯಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ನವಲಗುಂದ ವಿಧಾನಸಭಾ ಮತಕ್ಷೇತ್ರ-69 ಇಂದು ಮುಂಜಾನೆ ಬೆಂಗಳೂರಿಗೆ ಆಗಮಿಸಿದ ಮಾನ್ಯ ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ K.C. Venugopal ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿದ ಶಾಸಕ ಎನ್ ಎಚ್ ಕೋನರಡ್ಡಿಯವರು .... ನಂತರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಎಸ್ಐಆರ್ ಮಾನಿಟರಿಂಗ್ ಕಮಿಟಿ ಸಭೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ Randeep Singh Surjewala ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀ B K Hariprasad ಅವರೊಂದಿಗೆ ಭಾಗವಹಿಸಿದ ಶಾಸಕರು .... ಈ ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ಶ್ರೀ ಗೋಪಿನಾಥ್ ಪಳನಿಯಪ್ಪನ್ ಸೇರಿದಂತೆ ಮುಂತಾದ ನಾಯಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ನವಲಗುಂದ ವಿಧಾನಸಭಾ ಮತಕ್ಷೇತ್ರ-69
- ಮುಂಬರುವ ಸರ್ಕಾರಕ್ಕೆ ಒಳ್ಳೆಯ ಭವಿಷ್ಯವಿಲ್ಲ ಶಾಸಕ ಸಿ ಸಿ ಪಾಟೀಲ. ಬಿಜೆಪಿ ಅವಧಿಯಲ್ಲಿ 25 ಸಾವಿರ ಕೋಟಿ ಜಮಾ ಕೊಟ್ಟಿತ್ತು,ಪ್ರಸ್ತುತ ಸರ್ಕಾರದ್ದು 9 ಲಕ್ಷ ಕೋಟಿ ಮಾಡಿದೆ. ಮುಂಬರುವ ಸರ್ಕಾರಕ್ಕೆ ಒಳ್ಳೆಯ ಭವಿಷ್ಯವಿಲ್ಲ ಶಾಸಕ ಸಿ ಸಿ ಪಾಟೀಲ. ಪ್ರಸ್ತುತ ಸರ್ಕಾರದ್ದು 9 ಲಕ್ಷ ಕೋಟಿ ಸಾಲವಿದೆ,ಬಿಜೆಪಿ ಅವಧಿಯಲ್ಲಿ 25 ಸಾವಿರ ಕೋಟಿ ಜಮಾ ಇತ್ತು. ಗದಗ : ಪಂಚ ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಆರ್ಥಿಕ ಸ್ಥಿತಿ ಸರಿಯಾಗಿ ಉಳಿದಿಲ್ಲ, ಅಧಿಕಾರದ ದುರಾಸೆಗೆ ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿದು ಆರ್ಥಿಕವಾಗಿ ದುರ್ಬಲವಾಗಿದೆ ಇದರಿಂದ ಮುಂಬರುವ ಸರ್ಕಾರಕ್ಕೆ ಒಳ್ಳೆಯ ಭವಿಷ್ಯವಿಲ್ಲ ಎಂದು ಶಾಸಕ ಸಿ ಸಿ ಪಾಟೀಲ ಹೇಳಿದರು. ತಾಲೂಕಿನ ಕದಡಿ ಗ್ರಾಮದಲ್ಲಿ ನೀಲಾಂಬಿಕಾ ದೇವಸ್ಥಾನದ ಬಯಲು ಜಾಗೆಯಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಐದು ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಿ ಅದರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು. ಸರ್ಕಾರದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಸಮರ್ಪಕ ಅನುದಾನವಿರುವದಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಯಾರು ಏನೇ ಅಭಿವೃದ್ಧಿ ಕೆಲಸಕ್ಕೆ ಬೇಡಿಕೆ ಇಟ್ಟರೆ ಇಲ್ಲಾ ಎಂದ ಉದಾಹರಣೆ ಸಿಗುತ್ತಿರಲಿಲ್ಲ,ಆದರೆ ಪ್ರಸಕ್ತ ನಮ್ಮ ಪರಿಸ್ಥಿತಿ ಮನೆಗೆ ಯಾರಾದರೂ ಕಾರ್ಯಕರ್ತರು ಬಂದರೆ ಎಲ್ಲಿ ಏನ ಕೇಳುವರೋ ಎಂಬ ಹೆದರಿಕೆ ಪಡುವಂತಾಗಿದೆ,ಆದರೂ ಕೂಡಾ ಇವತ್ತು ಎರಡು ಕೋಟಿ ಐವತ್ತು ಲಕ್ಷರೂ ಕದಡಿ ಹೊನ್ನಾಪುರ ಸಂಪರ್ಕ ರಸ್ತೆಯ 1300 ಮೀಟರ್ ರಸ್ತೆ ದುರಸ್ಥಿಗೆ ಹಾಗೂ ಸಮುದಾಯ ಭವನದ ಕಟ್ಟಡ ನಿರ್ಮಾಣಕ್ಕೆ ಐದು ಲಕ್ಷ ಬಿಡುಗಡೆ ಮಾಡಿದ್ದೇನೆ ಅಲ್ಲದೇ ಮುಂಬರುವ ಶಾಸಕರ ನಿಧಿಯಲ್ಲಿ ಇನ್ನೂ ಐದು ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ಹಾಗೂ ನೂತನ ಗಡ್ಡಿ ತೇರಿನ ನಿರ್ಮಾಣಕ್ಕೆ ವೈಯಕ್ತಿಕ ಒಂದು ಲಕ್ಷ ನೀಡುವುದಾಗಿ ಭರವಸೆ ನೀಡುವೆ ಎಂದರು. ನಮಗೆ ಶಾಸಕ ನಿಧಿಗೆ ಸರ್ಕಾರ ಬರೀ ಐವತ್ತು ಲಕ್ಷ ಮಾತ್ರ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುತ್ತದೆ ಅದರಲ್ಲಿ ಬರೀ ಹತ್ತು ಲಕ್ಷ ಮಾತ್ರ ನೀಡಿದೆ ಅದರಲ್ಲಿ ನಮ್ಮ ಕ್ಷೇತ್ರದ 105 ಹಳ್ಳಿಗಳಿಗೂ ಹಂಚಲು ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರದ ಅಸಹಾಯಕತೆ ಎತ್ತಿ ತೋರಿಸುವ ಕೆಲಸ ಮಾಡಿದರು. ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾದ ಸಮಯದಲ್ಲಿ ಅಧಿಕಾರಿಗಳ ಮೇಲೆ ಹಿಡಿತವಿದ್ದಿಲ್ಲ, ಪ್ರಸ್ತುತ ಮುಖ್ಯ ಮಂತ್ರಿ ಡಿ ಕೆ ಶಿವಕುಮಾರವರು ಸ್ವಲ್ಪ ಹಿಡಿತ ಸಾಧಿಸುತ್ತಿದ್ದಾರೆ ಎಂದರು. ನಾನು ಆರು ಭಾರೀ ಸಚಿವನಾಗಿ ವಿವಿಧ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ ಸಮಯದಲ್ಲಿ ಅಧಿಕಾರಿಗಳೊಂದಿಗೆ ಹೊಂದಿದ್ದ ಉತ್ತಮ ಭಾಂದವ್ಯವೇ ಹಿಂದಿನ ಈ ಅನುದಾನ ತರುವಲ್ಲಿ ಸಾಧ್ಯವಾಗಿದೆ ಇಲ್ಲವಾದರೆ ಇವತ್ತು ಈ ಅನುದಾನ ತರಲು ಸಾಧ್ಯವಾಗುತ್ತಿರಲಿಲ್ಲ ಎಂದು ಸರ್ಕಾರದ ವಿರುದ್ದ ಆರ್ಥಿಕ ದುರ್ಬಲತೆ ಎತ್ತಿ ತೋರಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಾನಿಧ್ಯ ವೇದಮೂರ್ತಿ ಮಹಾದೇವಯ್ಯ ಸ್ವಾಮಿಗಳು ವಹಿಸಿದ್ದರು, ವಸಂತಗೌಡ ಪೊಲೀಸಪಾಟೀಲ, ವಿರೂಪಾಕ್ಷಪ್ಪ ಗೊಜನೂರು,ಶೇಕಣ್ಣ ಹುಲಗೂರು,ವಸಂತ ಮೇಟಿ, ಗ್ರಾಮ ಪಂಚಾಯ್ತಿ ಪಿ ಡಿ ಓ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು,ಹಾಗೂ ಗ್ರಾಮದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.2
- ಗದಗ ಜೀಮ್ಸ್‌ನಲ್ಲಿ ಬಿಸಿಲಲ್ಲೇ ನಿಂತು ಔಷಧಿ ಪಡೆಯುವ ದುಸ್ಥಿತಿ! ಗದಗ ಜಿಲ್ಲೆಯ ಪ್ರಮುಖ ಸರ್ಕಾರಿ ಆಸ್ಪತ್ರೆಯಾಗಿರುವ ಜೀಮ್ಸ್‌ಗೆ ಪ್ರತಿದಿನ ನೂರಾರು ರೋಗಿಗಳು ಹಾಗೂ ಅವರ ಸಂಬಂಧಿಕರು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಆದರೆ, ಇಲ್ಲಿ ಔಷಧಿ ಪಡೆಯಲು ರೋಗಿಗಳು ಬಿಸಿಲು, ಮಳೆ ಹಾಗೂ ಗಾಳಿಯ ನಡುವೆಯೇ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಗದಗ ಜೀಮ್ಸ್‌ನಲ್ಲಿ ಬಿಸಿಲಲ್ಲೇ ನಿಂತು ಔಷಧಿ ಪಡೆಯುವ ದುಸ್ಥಿತಿ! ಗದಗ ಜಿಲ್ಲೆಯ ಪ್ರಮುಖ ಸರ್ಕಾರಿ ಆಸ್ಪತ್ರೆಯಾಗಿರುವ ಜೀಮ್ಸ್‌ಗೆ ಪ್ರತಿದಿನ ನೂರಾರು ರೋಗಿಗಳು ಹಾಗೂ ಅವರ ಸಂಬಂಧಿಕರು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಆದರೆ, ಇಲ್ಲಿ ಔಷಧಿ ಪಡೆಯಲು ರೋಗಿಗಳು ಬಿಸಿಲು, ಮಳೆ ಹಾಗೂ ಗಾಳಿಯ ನಡುವೆಯೇ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ವೃದ್ಧರು, ಮಹಿಳೆಯರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೂ ಸಮರ್ಪಕ ನೆರಳಿನ ವ್ಯವಸ್ಥೆ ಇಲ್ಲದೆ ಹೊರಗಡೆ ಕಾಯುವಂತಾಗಿದೆ. ಆಸ್ಪತ್ರೆ ಆವರಣದಲ್ಲಿ ಆಸನಗಳಿದ್ದರೂ, ಔಷಧಿ ವಿತರಣಾ ಕೌಂಟರ್ ಬಳಿ ಸರಿಯಾದ ಸರತಿ ವ್ಯವಸ್ಥೆ ಮತ್ತು ರೋಗಿಗಳಿಗೆ ಅನುಕೂಲಕರ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಇದರ ಜೊತೆಗೆ, ಆಸ್ಪತ್ರೆಯಲ್ಲಿ ಔಷಧಿ ಲಭ್ಯವಿಲ್ಲದೆ ಹೊರಗಿನ ಖಾಸಗಿ ಔಷಧಿ ಅಂಗಡಿಗಳಿಂದ ಖರೀದಿಸುವಂತೆ ಚೀಟಿ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಹಾಗಾದರೆ ಜೀಮ್ಸ್‌ನಲ್ಲಿ ರೋಗಿಗಳ ಗೋಳು ಕೇಳುವವರು ಯಾರು? ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಔಷಧಿ ವಿತರಿಸುವ ಕೌಂಟರ್‌ಗೆ ನೆರಳು, ಕುಡಿಯುವ ನೀರು, ಆಸನ ಹಾಗೂ ಸಮರ್ಪಕ ಔಷಧಿ ವಿತರಣಾ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.1
- ಭಾರತ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ 76 ನೇಯ ಜನ್ಮದಿನದ ಅಂಗವಾಗಿ ದೇವಾಲಯಕ್ಕೆ ಭೇಟಿ ನೀಡಿದ. ಬೊಮ್ಮಾಯಿ. ಭಾರತ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ 76 ನೇಯ ಜನ್ಮದಿನದ ಅಂಗವಾಗಿ ಇಂದು ಹುಬ್ಬಳ್ಳಿಯ ಆದರ್ಶ ನಗರದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಶ್ರೀ ಗಣೇಶ ದೇವಸ್ಥಾನ ಹಾಗೂ ಶ್ರೀ ಸುಬ್ರಮಣ್ಯ ಸ್ವಾಮಿಯ ದರ್ಶನಾಶೀರ್ವಾದವನ್ನು ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ - ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಸವರಾಜ ಬೊಮ್ಮಾಯಿರವರು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದುಕೊಂಡರು.1
- ಪಟ್ಟಣದಲ್ಲಿ ರೈತ ಸಂಘಟನೆ ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಶಿಗ್ಗಾವಿ: ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರು ರೈತರು ಸೇರಿಕೊಂಡು ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ಪೊಸ್ಟ್ ಆಫೀಸನಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ವೀರ ರಾಣಿ ಚನ್ನಮ್ಮ ವೃತ್ತಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿ ಗ್ರೇಡ್ ೨ ತಹಶೀಲ್ದಾರ ದೇವಾನಂದ ವಾಲ್ಮೀಕಿ ಅವರ ಮೂಲಕ ಸಿ.ಎಂ. ಅವರಿಗೆ ಮನವಿ ಅರ್ಪಿಸಿದರು. ತಾಲೂಕಿನಲ್ಲಿ ಸಮರ್ಪಕ ಮಳೆಯಾಗದೆ ಬೆಳೆಗಳು ಒಣಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ರೈತರಿಗೆ ಬರ ಪರಿಹಾರ ಒದಗಿಸಬೇಕು. ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ರಸಗೊಬ್ಬರ ಹಾಗೂ ಇತರ ಪರಿಕರಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬತ್ತ, ಗೋವಿನಜೋಳ, ಸೇರಿದಂತೆ ವಿವಿಧ ಬೇಳೆಗಳು ತೀವ್ರ ಹಾನಿಯಾಗಿವೆ. ಅಲ್ಲದೆ, ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ೫.೫೦೦ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು. ರೈತರು ಬೆಳೆ ವಿಮೆ ಪಾವತಿಸಿದ್ದರೂ ಬರಗಾಲದ ಪರಿಸ್ಥಿತಿ ಎದುರಾಗಿರುವುದರಿಂದ, ಬೆಳೆ ವಿಮೆ ಕಂಪನಿಗಳಿAದ ರೈತರಿಗೆ ಮಧ್ಯಂತರ ಪರಿಹಾರ ಹಣ ಕೂಡಲೇ ಬಿಡುಗಡೆ ಮಾಡಿಸಲು ರಾಜ್ಯ ಸರ್ಕಾರಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ರೈತರ ಹಿತದೃಷ್ಟಿಯಿಂದ ಮೂರು ಬೇಡಿಕೆಗಳನ್ನು ಈಡೇರಿಸುವಂತ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಡಿ.ಕೆ. ಶಿವಕುಮಾರ್‌ಅವರಿಗೆ ಮನವಿ ಮೂಲಕ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಬಸಲಿಂಗಪ್ಪ ನರಗುಂದ, ಸಂತೋಷ ಪಾಟೀಲ, ಬಸವರಾಜ ಬೇಕಿನಕಟ್ಟಿ, ಮಂಜುನಾಥ ಕಂಕನವಾಡ, ಭಾರತೀಯ ಕ್ರಾಂತಿಕಾರಿ ಕಿಸಾನ ಸೇನಾ ರಾಷ್ಟ್ರೀಯ ಅಧ್ಯಕ್ಷ ಎಂ.ಎನ್. ಕುಕನೂರ, ಕನ್ನಡಪರ ಸಂಘಟನೆಯ ಅಧ್ಯಕ್ಷ ದುರ್ಗಪ್ಪ ವಡ್ಡರ ಸೇರಿದಂತೆ ಹಲವಾರು ಮುಖಂಡರುಗಳು ಮಾತನಾಡಿ ತಕ್ಷಣ ಬರಗಾಲ ಪ್ರದೇಶವೆಂದು ಸಾರಿ ಪರಿಹಾರ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಮಹಿಳಾ ರೈತಪರ ಹೊರಾಟಗಾರರಾದ ಶೋಭಾ ಲಕ್ಷ್ಮೀಶ್ವರ, ಸುಶೀಲಾ ಲಕ್ಷ್ಮೀಶ್ವರ, ಪುಷ್ಪಾ ಹುಡೇದ, ನೀಲಪ್ಪ ವಾಲ್ಮೀಕಿ, ನೇತ್ರಾ ಮರಿಗೌಡ್ರ, ಶೋಭಾ ಶಿರೂರ, ಮಂಜುಳಾ ಕಳಸದ, ಪಾರಪ್ಪ ಮರಿಗೌಡ್ರ, ಹಾವೇರಿ ಘಟಕದ ಪ್ರದಾನ ಕಾರ್ಯದರ್ಶಿ ನಿಂಗಪ್ಪ ವಾಲೀಕಾರ, ಕಲ್ಯಾಣ ಕರ್ನಾಟಕ ಅಧ್ಯಕ್ಷ ಶಬ್ಬಿರ ಎಚ್, ಕೆಆರ್.ಎಸ್ ಪಕ್ಷದ ಸರ್ವ ಸದಸ್ಯರುಗಳು, ಸೇರಿದಂತೆ ಹಲವಾರು ಸಂಘಟನೆಗಳ ಮುಖಂಡರುಗಳು ಇದ್ದರು1
- ಗುಳೇದಗುಡ್ಡ: ವಿಶ್ವಕರ್ಮರು ಸಾಂಸ್ಕೃತಿಕ ಕಲಾಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ: ಬಡಿಗೇರ ಗುಳೇದಗುಡ್ಡ : ದೇವಶಿಲ್ಪಿ ಎಂದು ಕರೆಯುವ ವಿಶ್ವಕರ್ಮರು ವಾಸ್ತುಶಿಲ್ಪದ ಮೂಲ ಕರ್ತರು. ಅವರ ಕಲಾಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವ ವಿಶ್ವಕರ್ಮರು ಈ ನಾಡಿನಲ್ಲಿ ಸುಂದರ ಶಿಲ್ಪಗಳನ್ನು, ದೇವಸ್ಥಾನಗಳನ್ನು ನಿರ್ಮಿಸುವ ಮೂಲಕ ಸಾಂಸ್ಕೃತಿಕ ಕಲಾಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ಪುಂಡಲೀಕ ಬಡಿಗೇರ ಹೇಳಿದರು. ಅವರು ಪಟ್ಟಣದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ದೇವ ಶಿಲ್ಪಿ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವದ ಅಂಗವಾಗಿ ಗುರುವಾರ ಪಟ್ಟಣದ ಮಳಿಯಪ್ಪಜ್ಜನ ದೇವಸ್ಥಾನದಲ್ಲಿ ಶ್ರೀ ವಿಶ್ವಕರ್ಮ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಿದ ಸಂದರ್ಭದಲ್ಲಿ ಮಾತನಾಡಿ, ಕಮ್ಮಾರರು, ಬಡಿಗರು, ಶಿಲ್ಪಿಗಳು, ಅಕ್ಕಸಾಲಿಗಳು ವಿಶ್ವಕರ್ಮರನ್ನು ಪೂಜಿಸುವ ಮೂಲಕ ಅವರ ಕಲಾಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಅಜಂತಾ ಎಲ್ಲೋರಾ, ಐಹೊಳೆ, ಪಟ್ಟದಕಲ್ಲು ಇವೆಲ್ಲವೂ ವಿಶ್ವಕರ್ಮ ಕಲೆಗಳ ಪ್ರತೀಕ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಮನೋಹರ ಪತ್ತಾರ, ಕಾರ್ಯದರ್ಶಿ ವಿಠ್ಠಲ ಪತ್ತಾರ, ಚನ್ನಪ್ಪ ಬಡಿಗೇರ, ಶೇಖಪ್ಪ ಪತ್ತಾರ, ಗಂಗಾಧರ ಪತ್ತಾರ, ಈರಣ್ಣ ಪತ್ತಾರ, ಶೇಖಪ್ಪ ಯಳ್ಳಿಗುತ್ತಿ, ಶಿವಾನಂದ ಬಡಿಗೇರ, ಮಾರುತಿ ಬಡಿಗೇರ, ಜಗದೀಶ ಬಡಿಗೇರ, ರಂಗನಾಥ ಬನ್ನಿಕೊಪ್ಪ, ರಾಜು ಪತ್ತಾರ, ಸಂತೋಷ ಬನ್ನಿಕೊಪ್ಪ, ಹನಮೇಶ ಪತ್ತಾರ, ಲೋಕೇಶ ಕಮ್ಮಾರ, ಮಂಜುಳಾ ಬಡಿಗೇರ, ವಿಜಯಲಕ್ಷ್ಮಿ ಪತ್ತಾರ, ಶೃತಿ ಪತ್ತಾರ, ರೇಖಾ ಬಡಿಗೇರ, ನಾಗರತ್ನಾ ಪತ್ತಾರ ಸೇರಿದಂತೆ ಸಮಾಜಬಾಂಧವರು ಇದ್ದರು.1
- ದೇವರ ಅನುಗ್ರಹ ಪಡೆಯಲು ಸುಲಭ ಮಾರ್ಗ ಭಜನೆ ಡಾ : ಶಿವಕುಮಾರ ಮಹಾಸ್ವಾಮಿಜಿ. ಶ್ರೀ ಮಾರುತೇಶ್ವರ ಭಜನಾ ಮಹಾ ಮಂಗಲ ಕಾರ್ಯಕ್ರಮದಲ್ಲಿ ಶ್ರೀ ಗಳ ಆಶೀರ್ವಚನ. ದೇವರ ಅನುಗ್ರಹ ಪಡೆಯಲು ಸುಲಭ ಮಾರ್ಗ ಭಜನೆ ಡಾ : ಶಿವಕುಮಾರ ಮಹಾಸ್ವಾಮಿಜಿ. ಗದಗ : ಭಾರತೀಯ ಸಂಸ್ಕೃತಿಯಲ್ಲಿ ಪಾವಿತ್ರತೆ ಪಡೆದ ತಿಂಗಳು ಈ ಶ್ರಾವಣ ಮಾಸ,ಮಾಸ ಪರ್ಯಂತ ಭಗವಂತನ ನಾಮಸ್ಮರಣೆಯಿಂದ ಅನುಗ್ರಹ ಪಡೆಯಲು ಸುಲಭವಾದ ಮಾರ್ಗ ಭಜನೆ ಎಂದು ಶ್ರೀ ಡಾ ಶಿವಕುಮಾರ ಮಾಹಾಸ್ವಾಮಿಗಳು ನುಡಿದರು. ತಾಲೂಕಿನ ಕದಡಿ ಗ್ರಾಮದ ಶ್ರೀ ಮಾರುತೇಶ್ವರ ಭಜನಾ ಮಂಡಳಿಯ ಆಯೋಜಿಸಲಾದ ಭಜನಾ ಮಹಾ ಮಂಗಲ ಕಾರ್ಯಕ್ರಮದ ಸಮಾರೋಪ ಸಮಾರಂಭದ saದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ನೆರದಿದ್ದ ಭಕ್ತರಿಗೆ ಆಶೀರ್ವಚನದಲ್ಲಿ ಮಾತನಾಡಿದ ಅವರು. ಭಜನೆ ಎಂದರೆ ಭಜ್ ಎಂಬುವ ಧಾತುವಿನಿಂದ ಬಂದಿರುವ ಪದ ಅಂದರೆ ಭಜನೆ ಅಂದರೆ ಭಗವಂತನ ನಾಮಸ್ಮರಣೆ, ಆ ಭಗವಂತನ ಕೃಪೆಗೆ ಪಾತ್ರರಾಗಲು ಭಜನೆ ಅತೀ ಶ್ರೇಷ್ಠ ಮಾರ್ಗ ಎಂದರು. ಯಾರಿಗೂ ನಮ್ಮಿಂದ ನೋವಾಗದ ರೀತಿಯ ಬದುಕುವದು ಅಸಾಧ್ಯ ಆದರೂ ಉದ್ದೇಶ ಪೂರ್ವಕವಾಗಿ ಯಾರಿಗೂ ನೋವುಂಟು ಮಾಡಬಾರದು ಏಕೆಂದರೆ ಈ ಪ್ರಪಂಚದಲ್ಲಿ ನಕಾರಾತ್ಮಕ ಹಾಗೂ ಸಕರಾತ್ಮಕ ಚಿಂತನೆಗಳು ಒಂದಕ್ಕೊಂದು ಅಂಟಿಕೊಂಡೆ ಬಂದಿರುತ್ತವೆ, ಹೇಗೆ ರಾತ್ರಿಯ ಜೊತೆಗೆ ಹಗಲು,ಸುಖದ ಜೊತೆಗೆ ದುಃಖ,ಜನನದ ಜೊತೆಗೆ ಮರಣ ಇದೆಯೋ ಹಾಗೇ ಅದಕ್ಕಾಗಿ ಯಾವುದೇ ವ್ಯಕ್ತಿಗೂ ಬರೀ ಸುಖವೇ ಸಿಗುವದಿಲ್ಲ ಆದರೆ ಜೊತೆಗೆ ದುಃಖ ಬೆನ್ನ ಹತ್ತಿರುತ್ತದೆ ಕಾರಣ ಇಷ್ಟೇ ಪ್ರತಿ ಜೀವಿಗೂ ಹುಟ್ಟು ಅನಿಶ್ಚಿತ ಸಾವು ಖಚಿತ ಅಂತೆಯೇ ತಾವೆಲ್ಲರೂ ಪವಿತ್ರ ಶ್ರಾವಣ ಮಾಸದಲ್ಲಿ ನೀವಷ್ಟೇ ಭಜನೆ ಮಾಡದೇ ಇಡೀ ಗ್ರಾಮದ ಜನರ ಮನ ತಲುಪುವಂತೆ ಭಜನೆಯೊಂದಿಗೆ ಭಕ್ತಿಯ ಗೀತೆಗಳನ್ನು ಹಾಡುತ್ತಾ ವಠಾರಗಳಲ್ಲಿ ಸಂಚರಿಸಿ ಭಕ್ತಿಯ ಪರಾಕಷ್ಠೆ ಮೆರೆದು ಕೊನೆಯ ಹಂತ ಭಜನಾ ಮುಕ್ತಾಯ ಸಮಾರೋಪ ಸಮಾರಂಭ ಹಮ್ಮಿಕೊಂಡಿರುವುದು ತುಂಬಾ ಸಂತೋಷದ ಸಂಭ್ರಮ ವಿಚಾರ ಎಂದರು. ರಾತ್ರಿಯಿಡೀ ಸಪ್ತಾಹ ಮಾಡಿ ಬೆಳಿಗ್ಗೆ ಗ್ರಾಮದ ತುಂಬೆಲ್ಲಾ ಭಜನೆಯೊಂದಿಗೆ ಮಾರುತೇಶ್ವರನ ಎಂಟು ಅಡಿ ಹಾಗೂ ಬಸವೇಶ್ವರನ ಭಾವಚಿತ್ರ ಮೆರವಣಿಗೆ ನೆರವೇರಿಸಿ ನಮ್ಮ ಪ್ರವಚನಕ್ಕಾಗಿ ಶಾಂತಿ ಸಹನೆಯಿಂದ ಕುಳಿತಿದ್ದು ನೋಡಿದರೆ ಆ ಮಾರುತೇಶ್ವರನ ಕೃಪೆಗೆ ತಾವೆಲ್ಲರೂ ಪಾತ್ರರಾಗಿದ್ದಿರಿ ಎನ್ನಬಹುದು. ನಮ್ಮ ರಾಜ್ಯದಲ್ಲಿ ನಿರಂತರ ಸಪ್ತಾಹ ಮಾಡುವ ಏಕೈಕ ಮಠ ಹುಬ್ಬಳ್ಳಿ ಸಿದ್ದಾರೂಢರ ಮಠ ಸುಮಾರು 94 ವರ್ಷಗಳ ಕಾಲ ಪ್ರತಿ ನಿತ್ಯ ಸಪ್ತಾಹ ಮಾಡುತ್ತಿರುವುದು ಇಂದಿಗೂ ಕಾಣಬಹುದು ಎಂದರು. ದಿವ್ಯ ಸಾನಿಧ್ಯವಹಿಸಿದ್ದ ಶ್ರೀ ಮ ನಿ ಪ್ರ ಮುಪ್ಪಿನ ಬಸವಲಿಂಗ ನಿರಂಜನ ಮಹಾಸ್ವಾಮಿಗಳು ಭಜನಾ ಸಮಾರೋಪ ಕುರಿತು ಆಶೀರ್ವಚನ ನೀಡಿದರು ಕಾರ್ಯಕ್ರಮದಲ್ಲಿ ಶ್ರೀ ವೇದ ಮೂರ್ತಿ ಮಹಾದೇವಯ್ಯನವರು ಸಾನಿಧ್ಯ ವಹಿಸಿಕೊಂಡು ಅವರೂ ಕೂಡ ಆಶೀರ್ವಚನ ನೀಡಿದರು. ಕಾರ್ಯಕ್ರಮದ ನಿರೂಪಣೆ ವೀರಭದ್ರಯ್ಯ ಸಾಲಿಮಠ ನೆಡೆಸಿದರೆ ಎಸ್ ಎಸ್ ಅಂಗಡಿ ಶಿಕ್ಷಕರು ಸ್ವಾಗತಿಸಿದರು. ಶಿವಕುಮಾರಗೌಡ ಚಿಕ್ಕನಗೌಡರ ವಂದಿಸಿದರು. ಡಾ ಅಂಬೇಡ್ಕರ್ ಭಜನಾ ಸಂಘದ ಸದಸ್ಯರು, ಶ್ರೀ ದುರ್ಗಾದೇವಿ ಭಜನಾ ಮಂಡಳಿಯವರು ಹಾಗೂ ಹೊನ್ನಾಪುರ ಗ್ರಾಮದ ಶ್ರೀ ಮಲ್ಲಜ್ಜೇಶ್ವರ ಭಜನಾ ಮಂಡಳಿಯವರು,ಗ್ರಾಮದ ಹಿರಿಯರಾದ ವಿ ಎನ್ ಗೊಜನೂರು,ಅಶೋಕ ಗೊಜನೂರು, ಮಹೇಶಗೌಡ ಚಿಕ್ಕನಗೌಡರ ಶೇಕಪ್ಪ ಹುಲಗೂರು, (ಕೆಮ್ಮಣ್ಣವರ )ಭಜನಾ ಮಂಡಳಿ ಅಧ್ಯಕ್ಷ ಸಿದ್ದು ದುಂಡಪ್ಪನವರ, ವಿನೋದ ಗೊಜನೂರು ಪರಪ್ಪ ಬರಡ್ವಾದ ಕುರಗೋಡೆಪ್ಪ ಮುಕ್ಕಣ್ಣವರ ಸಿ ಬಿ ಮುಕ್ಕಣ್ಣವರ, ಬಸವರಾಜ ಹಡಪದ, ವೀರಪ್ಪ ದೇಸಾಯಿ ಸೇರಿದಂತೆ ಇನ್ನುಳಿದ ಸರ್ವ ಸದಸ್ಯರು, ಮಹಿಳೆಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.2
- ಅಣ್ಣಿಗೇರಿ ಹುಬ್ಬಳ್ಳಿ ರಸ್ತೆ ಕಾರಿನ ಟೈರ ಬ್ಲಾಸ್ಟ್ ಆಗ್ಗಿ ಕಾರ್ ಪಾಲ್ಟಿ ಆಗಿ ಒಬ್ಬ ಸಾವು ಇಬ್ಬರೂ ಗಾಯಾಳುಗಳ ಅಣ್ಣಿಗೇರಿ ಹುಬ್ಬಳ್ಳಿ ರಸ್ತೆ ಕಾರಿನ ಟೈರ ಬ್ಲಾಸ್ಟ್ ಆಗ್ಗಿ ಕಾರ್ ಪಾಲ್ಟಿ ಆಗಿ ಒಬ್ಬ ಸಾವು ಇಬ್ಬರೂ ಗಾಯಾಳುಗಳ1
- ಬೆಳಗಾವಿ: ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ನಿವೃತ್ತ ಯೋಧ, ಪುತ್ರಿ ಹ... ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಿವೃತ್ತ ಯೋಧ ಹಾಗೂ ಅವರ ಪುತ್ರಿ ಹತ್ಯೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಮೃತರನ್ನು ನಿವೃತ್ತ ಯೋಧ ರುದ್ರಪ್ಪ ಕುಂದರಗಿ (67) ಹಾಗೂ ಅವರ ಪುತ್ರಿ ಶಶಿಕಲಾ ಕುಂದರಗಿ (26) ಎಂದು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ. ಆಸ್ತಿ ಹಾಗೂ ಜಮೀನು ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಹತ್ಯೆಗೆ ನಿಖರ ಕಾರಣವೇನು ಮತ್ತು ಕೃತ್ಯದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಬೇಕಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಪ್ರಕರಣದ ವಿವಿಧ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ. ಆರೋಪಿಗಳ ಪತ್ತೆ ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. **ಪೊಲೀಸರ ಅಧಿಕೃತ ಮಾಹಿತಿ ಹೊರಬಂದ ಬಳಿಕವಷ್ಟೇ ಹತ್ಯೆಯ ನಿಖರ ಕಾರಣ ಮತ್ತು ಆರೋಪಿಗಳ ಕುರಿತು ಸ್ಪಷ್ಟತೆ ಸಿಗಲಿದೆ.**1