ಭದ್ರಾ ನೀರಿಗಾಗಿ ದಾವಣಗೆರೆಯಲ್ಲಿ ಜಲಸಂಘರ್ಷ ಹೆದ್ದಾರಿ ತಡೆ; ರೈತ–ಪೊಲೀಸರ ನಡುವೆ ನೂಕಾಟ, ಇಬ್ಬರಿಗೂ ಗಾಯ ದಾವಣಗೆರೆ: ಭದ್ರಾ ಬಲದಂಡೆ ನಾಲೆಗೆ ನೀರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ರೈತರು ನಡೆಸಿದ ಪ್ರತಿಭಟನೆ ಮಂಗಳವಾರ ದಾವಣಗೆರೆ ಹೊರವಲಯದ ಬಾಡಾ ಕ್ರಾಸ್ ಬಳಿ ತೀವ್ರ ಸ್ವರೂಪ ಪಡೆದುಕೊಂಡಿತು. ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ-48ಕ್ಕೆ ನುಗ್ಗಿ ರಸ್ತೆ ತಡೆ ನಡೆಸಿದ ಪರಿಣಾಮ ಪುಣೆ–ಬೆಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು, ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಾಡಾ ಕ್ರಾಸ್‌ನ ಅಪೂರ್ವ ರೆಸಾರ್ಟ್ ಎದುರಿನ ಸರ್ವೀಸ್ ರಸ್ತೆಯಲ್ಲಿ ರೈತರು ಒಲೆ, ಪಾತ್ರೆಗಳನ್ನು ತಂದು ಅಡುಗೆ ಮಾಡಲು ಮುಂದಾದಾಗ ಪೊಲೀಸರು ಆಕ್ಷೇಪಿಸಿದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಮಾಜಿ ಸಚಿವ ರೇಣುಕಾಚಾರ್ಯ ಹಾಗೂ ಪೊಲೀಸರ ನಡುವೆ ಕೂಡ ವಾಗ್ವಾದ ನಡೆಯಿತು. ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದ ರೈತರು ಸರ್ವೀಸ್ ರಸ್ತೆಯಲ್ಲೇ ಅಡುಗೆ ಮಾಡುವುದಾಗಿ ಘೋಷಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವ ವೇಳೆ ನೂಕಾಟ, ತಳ್ಳಾಟ ಸಂಭವಿಸಿದ್ದು, ಮುಕ್ತೇನಹಳ್ಳಿ ಗ್ರಾಮದ ರೈತ ಶಿವಯೋಗಿ ಅವರ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದೆ. ಅವರಿಗೆ ಪ್ರಥಮ ಚಿಕಿತ್ಸೆ ನೀಡದೆ ಬಸ್‌ನಲ್ಲಿ ಕರೆದೊಯ್ಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮತ್ತೊಂದೆಡೆ ಹರಿಹರ ಸಿಟಿ ಸಿಪಿಐ ಸುರೇಶ್ ಸಗರಿ ಅವರ ಮೊಣಕೈ ಹಾಗೂ ಹಣೆಗೆ ಗಾಯವಾಗಿದೆ. ಮಾಜಿ ಸಚಿವ ರೇಣುಕಾಚಾರ್ಯ ಸೇರಿದಂತೆ 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಭದ್ರಾ ನೀರಿನ ಬೇಡಿಕೆ ಈಡೇರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ವರದಿ: ದೇವರಾಜ್ ಕೆ. ನೆಲ್ಲಿಹಂಕಲು, ದಾವಣಗೆರೆ
ಭದ್ರಾ ನೀರಿಗಾಗಿ ದಾವಣಗೆರೆಯಲ್ಲಿ ಜಲಸಂಘರ್ಷ ಹೆದ್ದಾರಿ ತಡೆ; ರೈತ–ಪೊಲೀಸರ ನಡುವೆ ನೂಕಾಟ, ಇಬ್ಬರಿಗೂ ಗಾಯ ದಾವಣಗೆರೆ: ಭದ್ರಾ ಬಲದಂಡೆ ನಾಲೆಗೆ ನೀರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ರೈತರು ನಡೆಸಿದ ಪ್ರತಿಭಟನೆ ಮಂಗಳವಾರ ದಾವಣಗೆರೆ ಹೊರವಲಯದ ಬಾಡಾ ಕ್ರಾಸ್ ಬಳಿ ತೀವ್ರ ಸ್ವರೂಪ ಪಡೆದುಕೊಂಡಿತು. ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ-48ಕ್ಕೆ ನುಗ್ಗಿ ರಸ್ತೆ
ತಡೆ ನಡೆಸಿದ ಪರಿಣಾಮ ಪುಣೆ–ಬೆಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು, ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಾಡಾ ಕ್ರಾಸ್‌ನ ಅಪೂರ್ವ ರೆಸಾರ್ಟ್ ಎದುರಿನ ಸರ್ವೀಸ್ ರಸ್ತೆಯಲ್ಲಿ ರೈತರು ಒಲೆ, ಪಾತ್ರೆಗಳನ್ನು ತಂದು ಅಡುಗೆ ಮಾಡಲು ಮುಂದಾದಾಗ ಪೊಲೀಸರು ಆಕ್ಷೇಪಿಸಿದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಮಾಜಿ ಸಚಿವ
ರೇಣುಕಾಚಾರ್ಯ ಹಾಗೂ ಪೊಲೀಸರ ನಡುವೆ ಕೂಡ ವಾಗ್ವಾದ ನಡೆಯಿತು. ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದ ರೈತರು ಸರ್ವೀಸ್ ರಸ್ತೆಯಲ್ಲೇ ಅಡುಗೆ ಮಾಡುವುದಾಗಿ ಘೋಷಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವ ವೇಳೆ ನೂಕಾಟ, ತಳ್ಳಾಟ ಸಂಭವಿಸಿದ್ದು, ಮುಕ್ತೇನಹಳ್ಳಿ ಗ್ರಾಮದ ರೈತ ಶಿವಯೋಗಿ ಅವರ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದೆ. ಅವರಿಗೆ ಪ್ರಥಮ ಚಿಕಿತ್ಸೆ
ನೀಡದೆ ಬಸ್‌ನಲ್ಲಿ ಕರೆದೊಯ್ಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮತ್ತೊಂದೆಡೆ ಹರಿಹರ ಸಿಟಿ ಸಿಪಿಐ ಸುರೇಶ್ ಸಗರಿ ಅವರ ಮೊಣಕೈ ಹಾಗೂ ಹಣೆಗೆ ಗಾಯವಾಗಿದೆ. ಮಾಜಿ ಸಚಿವ ರೇಣುಕಾಚಾರ್ಯ ಸೇರಿದಂತೆ 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಭದ್ರಾ ನೀರಿನ ಬೇಡಿಕೆ ಈಡೇರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ವರದಿ: ದೇವರಾಜ್ ಕೆ. ನೆಲ್ಲಿಹಂಕಲು, ದಾವಣಗೆರೆ
- ಭದ್ರಾ ನಾಲೆಗಳಲ್ಲಿ ತಕ್ಷಣ ನೀರು ಹರಿಸಲು ಆಗ್ರಹಿಸಿ ರೈತರಿಂದ ಶಾಸಕರ ಗೃಹ ಕಛೇರಿಯಲ್ಲಿ ಪ್ರತಿಭಟನೆ ಭದ್ರಾವತಿ ತಾಲೂಕಿನ ರೈತರ ಬೆಳೆಗಳಿಗೆ ತಕ್ಷಣ ನೀರು ಹರಿಸಬೇಕೆಂದು ರೈತರು ಮಂಗಳವಾರ ಶಾಸಕರ ಗೃಹ ಕಛೇರಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಆಗ್ರಹಿಸಿದರು. ಭದ್ರಾವತಿ: ತಾಲೂಕಿನ ರೈತರ ಬೆಳೆಗಳಿಗೆ ತಕ್ಷಣ ನೀರು ಹರಿಸಬೇಕೆಂದು ರೈತರು ಮಂಗಳವಾರ ಶಾಸಕರ ಗೃಹ ಕಛೇರಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಶಾಸಕರಿಗೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಕಲ್ಲಹಳ್ಳಿ ಶೇಖರ್ ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕವಾಗಿ ನೀರು ಹರಿಸುವುದನ್ನು ಸರ್ಕಾರ ತಕ್ಷಣ ನಿಲ್ಲಿಸಬೇಕು. ಪ್ರಸ್ತುತ ಮಳೆ ಕೊರೆತೆಯಿಂದಾಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇದ್ದು, ಅಲ್ಲದೆ ಇದೀಗ ತಾಲೂಕಿನ ರೈತರ ಬೆಳೆಗಳಿಗೆ ನೀರಿನ ಅಗತ್ಯವಿದೆ. ತಕ್ಷಣ ಕಾಲುವೆಗಳಲ್ಲಿ ನೀರು ಹರಿಸುವ ಮೂಲಕ ರೈತರ ಹಿತಕಾಪಾಡುವಂತೆ ಆಗ್ರಹಿಸಿದರು. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ತಾಲೂಕಿನಲ್ಲಿ ಈ ಬಾರಿ ಮಳೆ ಕೊರತೆಯಾಗಿದೆ. ಇದರಿಂದಾಗಿ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮಗಳಲ್ಲಿ ಜನರಿಗೆ ಹಾಗು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಈ ಹಿನ್ನಲೆಯಲ್ಲಿ ಜಲಸಂಪನ್ಮೂಲ ಖಾತೆ ಸಚಿವರಾದ ಚಲುವರಾಯಸ್ವಾಮಿಯವರಿಗೆ ಪತ್ರ ಬರೆಯಲಾಗಿದ್ದು, ತಕ್ಷಣ ಎಡ ಮತ್ತು ಬಲದಂಡೆ ನಾಲೆ ಹಾಗು ಗೊಂದಿ ಜಲಾಶಯದ ನಾಲೆಗಳಿಗೆ ನೀರು ಹರಿಸುವಂತೆ ಕೋರಲಾಗಿದೆ. ಇದಕ್ಕೆ ಸಚಿವರು ಪೂರಕವಾಗಿ ಸ್ಪಂದಿಸುವ ವಿಶ್ವಾಸವಿದೆ. ಸಚಿವರು ಕೈಗೊಳ್ಳುವ ತೀರ್ಮಾನದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಅಲ್ಲದೆ ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ(ಕಾಡಾ)ದ ಅಧ್ಯಕ್ಷರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಈ ಸಂಬಂಧ ೨-೩ ದಿನಗಳಲ್ಲಿ ಸಭೆ ನಡೆಯಲಿದ್ದು, ನೀರು ಬಿಡುವ ತೀರ್ಮಾನ ಕೈಗೊಳ್ಳಲಿದ್ದಾರೆ. ಈ ಹಿನ್ನಲೆಯಲ್ಲಿ ರೈತರು, ಗ್ರಾಮಸ್ಥರು ಆತಂಕಕ್ಕೆ ಒಳಗಾಗದಂತೆ ಮನವಿ ಮಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಮಾಜಿ ಸದಸ್ಯರಾದ ಎಸ್. ಕುಮಾರ್, ಎಚ್.ಎಲ್ ಷಡಾಕ್ಷರಿ, ಕಣ್ಣಪ್ಪ, ಶಾಂತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.1
- ಶಿವಮೊಗ್ಗದಲ್ಲಿ ಸಂಭ್ರಮದ ಗಣೇಶೋತ್ಸವ; 30ನೇ ವರ್ಷದ ಗಣೇಶ ಪ್ರತಿಷ್ಠಾಪನೆ ಮತ್ತೂರು ರಸ್ತೆಯಲ್ಲಿ ಭಕ್ತಿ ಸಂಭ್ರಮ; 30ನೇ ವರ್ಷದ ಗಣೇಶ ಪ್ರತಿಷ್ಠಾಪನೆ1
- ಶಿವಮೊಗ್ಗ-ಭದ್ರಾ ನದಿಯ ನೀರು ಎಡ, ಬಲ ಹಾಗೂ ಗೋಂದಿ ನಾಲೆ ಹರಿಸಲು ಬದ್ದ ಶಿವಮೊಗ್ಗ: ಭದ್ರಾ ಎಡನಾಲೆ ಮತ್ತು ಬಲನಾಲೆ ಮತ್ತು ಗೋಂದಿ ನಾಲೆ ನೀರನ್ನು ಆದಷ್ಟು ಬೇಗನೆ ಡ್ಯಾಮ್ ನಿಂದ ನೀರನ್ನು ಬಿಡಲಾಗುವುದು ಈ ವಿಚಾರವಾಗಿ ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತುಕತೆ ನಡೆಸಿದ್ದು ರೈತರು ಆತಂಕ ಪಡುವುದು ಬೇಡ ಎಂದು ಭದ್ರಾವತಿ ಶಾಸಕ ಬಿಕೆ. ಸಂಗಮೇಶ್ವರ್ ತಿಳಿಸಿದ್ದಾರೆ. ಅವರಿಂದು ತಮ್ಮ ಗೃಹಕಚೇರಿಯಲ್ಲಿ ನೆರೆದಿದ್ದ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ರೈತರ ಸಭೆಯಲ್ಲಿ ಮಾತನಾಡಿದರು. ಕುಡಿಯುವ ಹಾಗೂ ದನಕರುಗಳಿಗೆ ನೀರು ಅವಶ್ಯಕತೆ ಇದೆ ಎಂಬ ವಿಚಾರ ನನಗೂ ತಿಳಿದಿದೆ. ಆದ್ದರಿಂದ ರೈತರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡವೆಂದು ತಿಳಿಯಪಡಿಸುತ್ತೇನೆ. ಈ ವಿಚಾರವಾಗಿ ಆದಷ್ಟು ಬೇಗನೆ ನಿರ್ಧಾರ ತೆಗೆದುಕೊಳ್ಳುತ್ತೇವೆಂದು ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿರುತ್ತಾರೆಂದರು.1
- ಗೌರಸಮುದ್ರ ಮಾರಮ್ಮ ಜಾತ್ರೆ ಕುರಿತು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಎಂ .ಓಬಣ್ಣ ಏನ್ ಹೇಳಿದ್ರು ಗೊತ್ತೇ.1
- ಗೌರಸಮುದ್ರ ಮಾರಮ್ಮ ದೇವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು ಐತಿಹಾಸಿಕ ಶ್ರೀ ಗೌರಸಮುದ್ರ ಮಾರಮ್ಮ ದೇವರ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರು ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿದೆ. ಗೌರಸಮುದ್ರ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಬುಡಕಟ್ಟು ಸಂಸ್ಕೃತಿ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರವಾದ ಈ ದೇವಸ್ಥಾನ ಐತಿಹಾಸಿಕ ಪರಂಪರೆಗೆ ಸಾಕ್ಷಿಯಾಗಿದೆ. ಭಕ್ತರ ಕಠಿಣ ವ್ರತ ಮತ್ತು ಭಕ್ತಿಯ ನಂಬಿಕೆ ಮುಗಿಲು ಮುಟ್ಟಿದೆ ಇಂತಹ ಪವಿತ್ರ ದೇವಸ್ಥಾನಕ್ಕೆ ಇಲ್ಲಿ ಬರುವಂತ ಭಕ್ತಾದಿಗಳಿಗೆ ಜಿಲ್ಲಾಡಳಿತ ಮೂಲಭೂತ ಸೌಕರ್ಯವನ್ನು ಒದಗಿಸಬೇಕೆಂಬುದು ಭಕ್ತಾದಿಗಳ ಒತ್ತಾಸೆಯಾಗಿದೆ. ಸರಿ ಸುಮಾರು ನಾಲ್ಕರಿಂದ ಐದು ಲಕ್ಷ ಬಕ್ತಾದಿಗಳು ಬರುವಂತಹ ಈ ಶ್ರದ್ದಾ ಕೇಂದ್ರಕ್ಕೆ ಮುಂದಿನ ದಿನಗಳಲ್ಲಿ ಅಗತ್ಯ ಸೌಲಭ್ಯವನ್ನು ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.1
- ಶಿವಮೊಗ್ಗ,: ತನು ಜ್ಯೂಸ್ ಸೆಂಟರ್ ಬೇಟಿ ನೀಡಿದ ಅಧಿಕಾರಿಗಳ ತಂಡ ಜ್ಯೂಸ್ ಮಾಲಿಕನ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳಲಾಗಿದೆ. ಶಿವಮೊಗ್ಗ ತನು ಜ್ಯೂಸ್ ಸೆಂಟರ್ ಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದಾಗ ಕೊಳೆತ ಹಣ್ಣುಗಳನ್ನು ಶೇಖರಿಸಿಟ್ಟಿದ್ದ ಬ್ರಿಡ್ಜ್ ತಪಾಸಣೆ ಮಾಡಿದಾಗ ಸೇಬು, ಮೂಸಂಬಿ, ಕಲ್ಲಂಗಡಿ, ಅವಕೊಡ,ದ್ರಾಕ್ಷಿ, ಬಾಳೆಹಣ್ಣು, ಮಾವಿನಹಣ್ಣು , ಬೆಣ್ಣೆ ಹಣ್ಣು,ಹೀಗೆ ಹಲವಾರು ಹಣ್ಣುಗಳಿಂದ ಜ್ಯೂಸ್ ತಯಾರಿಸಿ ಸಾರ್ವಜನಿಕರಿಗೆ ಕೊಡುತ್ತಿರುವುದು ಕಂಡುಬಂದಿದ್ದು ಹಾಗೂ ಕೆಲವರು ಆಸ್ಪತ್ರೆಯ ರೋಗಿಗಳಿಗೂ ಸಹ ಇದೇ ಕೊಳೆತ ಹಣ್ಣಿನಿಂದ ಜ್ಯೂಸ್ ತೆಗೆದುಕೊಂಡು ಹೋಗಿರುವುದು ಕೂಡ ಗಮನಕ್ಕೆ ಬಂದಿರುವುದು ಕಂಡು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ ಕೂಡಲೇ ಇದನ್ನು ಸೀಜ್ ಮಾಡಲಾಗಿದೆ. ಜ್ಯೂಸ್ ಮಾಲಿಕನ ಮೇಲೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.1
- ₹3,383 ಕೋಟಿ ಆಸ್ತಿ ಒಡೆಯ ಶಾಸಕ ಬೀದಿಯಲ್ಲಿ ಭಿಕ್ಷೆ ಬೇಡಿದ್ದೇಕೆ? ಕಾರಣ ವೈರಲ್! ಮುಂಬೈ ಬೀದಿಯಲ್ಲಿ ಭಿಕ್ಷುಕನಾದ ಕೋಟ್ಯಾಧೀಶ ಬಿಜೆಪಿ ಶಾಸಕ ಪರಾಗ್ ಶಾ!1
- ಭದ್ರಾ ನೀರಿಗಾಗಿ ದಾವಣಗೆರೆಯಲ್ಲಿ ಜಲಸಂಘರ್ಷ ಹೆದ್ದಾರಿ ತಡೆ; ರೈತ–ಪೊಲೀಸರ ನಡುವೆ ನೂಕಾಟ, ಇಬ್ಬರಿಗೂ ಗಾಯ ದಾವಣಗೆರೆ: ಭದ್ರಾ ಬಲದಂಡೆ ನಾಲೆಗೆ ನೀರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ರೈತರು ನಡೆಸಿದ ಪ್ರತಿಭಟನೆ ಮಂಗಳವಾರ ದಾವಣಗೆರೆ ಹೊರವಲಯದ ಬಾಡಾ ಕ್ರಾಸ್ ಬಳಿ ತೀವ್ರ ಸ್ವರೂಪ ಪಡೆದುಕೊಂಡಿತು. ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ-48ಕ್ಕೆ ನುಗ್ಗಿ ರಸ್ತೆ ತಡೆ ನಡೆಸಿದ ಪರಿಣಾಮ ಪುಣೆ–ಬೆಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು, ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಾಡಾ ಕ್ರಾಸ್‌ನ ಅಪೂರ್ವ ರೆಸಾರ್ಟ್ ಎದುರಿನ ಸರ್ವೀಸ್ ರಸ್ತೆಯಲ್ಲಿ ರೈತರು ಒಲೆ, ಪಾತ್ರೆಗಳನ್ನು ತಂದು ಅಡುಗೆ ಮಾಡಲು ಮುಂದಾದಾಗ ಪೊಲೀಸರು ಆಕ್ಷೇಪಿಸಿದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಮಾಜಿ ಸಚಿವ ರೇಣುಕಾಚಾರ್ಯ ಹಾಗೂ ಪೊಲೀಸರ ನಡುವೆ ಕೂಡ ವಾಗ್ವಾದ ನಡೆಯಿತು. ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದ ರೈತರು ಸರ್ವೀಸ್ ರಸ್ತೆಯಲ್ಲೇ ಅಡುಗೆ ಮಾಡುವುದಾಗಿ ಘೋಷಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವ ವೇಳೆ ನೂಕಾಟ, ತಳ್ಳಾಟ ಸಂಭವಿಸಿದ್ದು, ಮುಕ್ತೇನಹಳ್ಳಿ ಗ್ರಾಮದ ರೈತ ಶಿವಯೋಗಿ ಅವರ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದೆ. ಅವರಿಗೆ ಪ್ರಥಮ ಚಿಕಿತ್ಸೆ ನೀಡದೆ ಬಸ್‌ನಲ್ಲಿ ಕರೆದೊಯ್ಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮತ್ತೊಂದೆಡೆ ಹರಿಹರ ಸಿಟಿ ಸಿಪಿಐ ಸುರೇಶ್ ಸಗರಿ ಅವರ ಮೊಣಕೈ ಹಾಗೂ ಹಣೆಗೆ ಗಾಯವಾಗಿದೆ. ಮಾಜಿ ಸಚಿವ ರೇಣುಕಾಚಾರ್ಯ ಸೇರಿದಂತೆ 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಭದ್ರಾ ನೀರಿನ ಬೇಡಿಕೆ ಈಡೇರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ವರದಿ: ದೇವರಾಜ್ ಕೆ. ನೆಲ್ಲಿಹಂಕಲು, ದಾವಣಗೆರೆ4