logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಯುಪಿಐ ಶುಲ್ಕ: ಡಿಜಿಟಲ್ ಭಾರತಕ್ಕೆ ಹಿನ್ನಡೆ, ನಗದು ವಹಿವಾಟು ಹೆಚ್ಚಳವಾಗಬಹುದು, ಜನರು ಗೊಂದಲಕ್ಕೆ ಈಡಾಗುತ್ತಾರೆ : ಪದ್ಮರಾಜ್ ಪೂಜಾರಿ ಮಂಗಳೂರು: ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸುವ ಸರ್ಕಾರದ ನಿಲುವು ‘ಡಿಜಿಟಲ್ ಇಂಡಿಯಾ’ ಆಶಯಕ್ಕೆ ಹಿನ್ನಡೆಯಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ. ಆರಂಭದಲ್ಲಿ ‘ಉಚಿತ ಮತ್ತು ಸರಳ’ ವ್ಯವಸ್ಥೆಯ ಮೂಲಕ ದೇಶದ ಜನರನ್ನು ಡಿಜಿಟಲ್ ವಹಿವಾಟಿನತ್ತ ಸೆಳೆದ ಬಳಿಕ, ಇದೀಗ ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸಲು ಮುಂದಾಗಿರುವುದು ಸರ್ಕಾರದ ನೀತಿಯಲ್ಲಿನ ಹಿಮ್ಮುಖ ಚಲನೆಯ ಸಂಕೇತವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶುಲ್ಕವನ್ನು ಗ್ರಾಹಕರ ಬದಲು ವ್ಯಾಪಾರಿಗಳ ಮೇಲೆ (MDR) ವಿಧಿಸಲಾಗುತ್ತದೆ ಎಂಬ ವಾದದಿಂದ ಸಾಮಾನ್ಯ ಜನರಿಗೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ವ್ಯಾಪಾರಿಗಳು ಈ ಹೆಚ್ಚುವರಿ ಹೊರೆಯನ್ನು ದಿನಸಿ, ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳ ಮೂಲಕ ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಯುಪಿಐ ವಹಿವಾಟಿಗೆ ಸಂಬಂಧಿಸಿದ ಶುಲ್ಕ ಮತ್ತು ತೆರಿಗೆ ನಿಯಮಗಳು ಸಣ್ಣ ವ್ಯಾಪಾರಿಗಳಲ್ಲಿ ಗೊಂದಲಕ್ಕೆ ಕಾರಣವಾಗಬಹುದು. ಇದರಿಂದ ಕೆಲವು ವ್ಯಾಪಾರಿಗಳು ಡಿಜಿಟಲ್ ಪಾವತಿಗಿಂತ ನಗದು ವಹಿವಾಟಿಗೆ ಆದ್ಯತೆ ನೀಡುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ. ನಗದು ವಹಿವಾಟು ಹೆಚ್ಚುವುದರಿಂದ ಪಾರದರ್ಶಕ ಆರ್ಥಿಕ ವ್ಯವಸ್ಥೆಯ ಗುರಿಗೂ ಹಿನ್ನಡೆಯಾಗಬಹುದು. ದೇಶದಲ್ಲಿ ಡಿಜಿಟಲ್ ಪಾವತಿಯನ್ನು ಮತ್ತಷ್ಟು ಉತ್ತೇಜಿಸುವ ಬದಲು ಅದನ್ನು ಹೆಚ್ಚುವರಿ ವೆಚ್ಚದ ವ್ಯವಸ್ಥೆಯನ್ನಾಗಿ ಮಾಡುವುದು ಸೂಕ್ತವಲ್ಲ ಎಂದು ಪದ್ಮರಾಜ್ ಪೂಜಾರಿ ತಿಳಿಸಿದ್ದಾರೆ. ಡಿಜಿಟಲ್ ವಹಿವಾಟು ಸಾಮಾನ್ಯ ಜನರ ದೈನಂದಿನ ಜೀವನದ ಭಾಗವಾಗಿರುವ ಸಂದರ್ಭದಲ್ಲಿ, ಯುಪಿಐ ವ್ಯವಸ್ಥೆಯನ್ನು ಜನಸ್ನೇಹಿ ಹಾಗೂ ಸುಲಭವಾಗಿ ಮುಂದುವರಿಸುವ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ.

1 hr ago
user_Mooladhwani
Mooladhwani
ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
1 hr ago
9d29ea67-a37c-410b-9500-42a2bb711ff9

ಯುಪಿಐ ಶುಲ್ಕ: ಡಿಜಿಟಲ್ ಭಾರತಕ್ಕೆ ಹಿನ್ನಡೆ, ನಗದು ವಹಿವಾಟು ಹೆಚ್ಚಳವಾಗಬಹುದು, ಜನರು ಗೊಂದಲಕ್ಕೆ ಈಡಾಗುತ್ತಾರೆ : ಪದ್ಮರಾಜ್ ಪೂಜಾರಿ ಮಂಗಳೂರು: ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸುವ ಸರ್ಕಾರದ ನಿಲುವು ‘ಡಿಜಿಟಲ್ ಇಂಡಿಯಾ’ ಆಶಯಕ್ಕೆ ಹಿನ್ನಡೆಯಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ. ಆರಂಭದಲ್ಲಿ ‘ಉಚಿತ ಮತ್ತು ಸರಳ’ ವ್ಯವಸ್ಥೆಯ ಮೂಲಕ ದೇಶದ ಜನರನ್ನು ಡಿಜಿಟಲ್ ವಹಿವಾಟಿನತ್ತ ಸೆಳೆದ ಬಳಿಕ, ಇದೀಗ ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸಲು ಮುಂದಾಗಿರುವುದು ಸರ್ಕಾರದ ನೀತಿಯಲ್ಲಿನ ಹಿಮ್ಮುಖ ಚಲನೆಯ ಸಂಕೇತವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶುಲ್ಕವನ್ನು ಗ್ರಾಹಕರ ಬದಲು ವ್ಯಾಪಾರಿಗಳ ಮೇಲೆ (MDR) ವಿಧಿಸಲಾಗುತ್ತದೆ ಎಂಬ ವಾದದಿಂದ ಸಾಮಾನ್ಯ ಜನರಿಗೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ವ್ಯಾಪಾರಿಗಳು ಈ ಹೆಚ್ಚುವರಿ ಹೊರೆಯನ್ನು ದಿನಸಿ, ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳ ಮೂಲಕ ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಯುಪಿಐ ವಹಿವಾಟಿಗೆ ಸಂಬಂಧಿಸಿದ ಶುಲ್ಕ ಮತ್ತು ತೆರಿಗೆ ನಿಯಮಗಳು ಸಣ್ಣ ವ್ಯಾಪಾರಿಗಳಲ್ಲಿ ಗೊಂದಲಕ್ಕೆ ಕಾರಣವಾಗಬಹುದು. ಇದರಿಂದ ಕೆಲವು ವ್ಯಾಪಾರಿಗಳು ಡಿಜಿಟಲ್ ಪಾವತಿಗಿಂತ ನಗದು ವಹಿವಾಟಿಗೆ ಆದ್ಯತೆ ನೀಡುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ. ನಗದು ವಹಿವಾಟು ಹೆಚ್ಚುವುದರಿಂದ ಪಾರದರ್ಶಕ ಆರ್ಥಿಕ ವ್ಯವಸ್ಥೆಯ ಗುರಿಗೂ ಹಿನ್ನಡೆಯಾಗಬಹುದು. ದೇಶದಲ್ಲಿ ಡಿಜಿಟಲ್ ಪಾವತಿಯನ್ನು ಮತ್ತಷ್ಟು ಉತ್ತೇಜಿಸುವ ಬದಲು ಅದನ್ನು ಹೆಚ್ಚುವರಿ ವೆಚ್ಚದ ವ್ಯವಸ್ಥೆಯನ್ನಾಗಿ ಮಾಡುವುದು ಸೂಕ್ತವಲ್ಲ ಎಂದು ಪದ್ಮರಾಜ್ ಪೂಜಾರಿ ತಿಳಿಸಿದ್ದಾರೆ. ಡಿಜಿಟಲ್ ವಹಿವಾಟು ಸಾಮಾನ್ಯ ಜನರ ದೈನಂದಿನ ಜೀವನದ ಭಾಗವಾಗಿರುವ ಸಂದರ್ಭದಲ್ಲಿ, ಯುಪಿಐ ವ್ಯವಸ್ಥೆಯನ್ನು ಜನಸ್ನೇಹಿ ಹಾಗೂ ಸುಲಭವಾಗಿ ಮುಂದುವರಿಸುವ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ.

More news from ಕರ್ನಾಟಕ and nearby areas
  • ವಿವಿಧೆಡೆ ಅದ್ದೂರಿ ಗಣೇಶೋತ್ಸವ, ಭವ್ಯ ಶೋಭಾಯಾತ್ರೆ ಮೆರವಣಿಗೆ... ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ನಗರದ ಉಳ್ಳಾಲ ವಿದ್ಯಾವಿನಾಯಕ ಉತ್ಸವ ಸಮಿತಿ ವತಿಯಿಂದ 43 ನೇ ವರ್ಷದ ಗಣೇಶೋತ್ಸವ ಅಚರಣೆ ನಡೆದಿದೆ.ಹಾಗೂ ಬಗಂಬಿಲ ಸತ್ಯನಾರಾಯಣ ಮಂದಿರದಲ್ಲಿ 19 ವರ್ಷದ ಗಣೇಶೋತ್ಸವದ ಶೋಭಾಯಾತ್ರೆ ಮೆರವಣಿಗೆ ಅದ್ದೂರಿಯಾಗಿ ಜರುಗಿತು.ಇನ್ನೂ ಮೆರವಣಿಗೆಯಲ್ಲಿ ಕುಣಿತ ಭಜನಾ ತಂಡ, ಚೆಂಡೆ, ಸ್ತಬ್ಧ ಚಿತ್ರಗಳು ಭಾಗ ವಹಿಸಿದ್ದವು,
    1
    ವಿವಿಧೆಡೆ ಅದ್ದೂರಿ ಗಣೇಶೋತ್ಸವ, ಭವ್ಯ ಶೋಭಾಯಾತ್ರೆ ಮೆರವಣಿಗೆ...
ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ನಗರದ ಉಳ್ಳಾಲ ವಿದ್ಯಾವಿನಾಯಕ  ಉತ್ಸವ  ಸಮಿತಿ ವತಿಯಿಂದ 43 ನೇ ವರ್ಷದ ಗಣೇಶೋತ್ಸವ ಅಚರಣೆ ನಡೆದಿದೆ.ಹಾಗೂ ಬಗಂಬಿಲ ಸತ್ಯನಾರಾಯಣ ಮಂದಿರದಲ್ಲಿ 19 ವರ್ಷದ ಗಣೇಶೋತ್ಸವದ ಶೋಭಾಯಾತ್ರೆ ಮೆರವಣಿಗೆ ಅದ್ದೂರಿಯಾಗಿ ಜರುಗಿತು.ಇನ್ನೂ ಮೆರವಣಿಗೆಯಲ್ಲಿ ಕುಣಿತ ಭಜನಾ ತಂಡ, ಚೆಂಡೆ, ಸ್ತಬ್ಧ ಚಿತ್ರಗಳು ಭಾಗ ವಹಿಸಿದ್ದವು,
    user_UMAPRASAD
    UMAPRASAD
    ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    14 hrs ago
  • ಸುಂಟಿಕೊಪ್ಪದಲ್ಲಿ ಸಂಭ್ರಮದ ಶ್ರೀ ಗೌರಿ- ಗಣೇಶೋತ್ಸವ ಮೆರವಣಿಗೆ ಸುಂಟಿಕೊಪ್ಪ ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿಯ ವತಿಯಿಂದ 62ನೇ ವರ್ಷದ ಗೌರಿ ಮೆರವಣಿಗೆ ಮತ್ತು ಪ್ರತಿಷ್ಠಾಪನೆಯು ಶ್ರದ್ಧಾಭಕ್ತಿಯಿಂದ ಸೋಮವಾರ ನಡೆಯಿತು. ಕೋದಂಡ ರಾಮ ದೇವಾಲಯದಲ್ಲಿ ವಿಶೇಷ ಪೂಜೆಯ ನಂತರ ಬೆಳಿಗ್ಗೆ 9.30 ಗಂಟೆಗೆ ದೇವಾಲಯದಿಂದ ಹೊರಟು ಗದ್ದೆಹಳ್ಳ ಪಟ್ಟೆಮನೆ ಗೌರಮ್ಮನ ಬಾವಿಯಿಂದ‌ ಗಂಗಾ ಜಲ ತಂದು ಗೌರಮ್ಮನಿಗೆ ಹೂವಿನ ಪೂಜೆ, ಗಂಗಾಪೂಜೆಯೊಂದಿಗೆ ಆಕರ್ಷಕ ಮಂಟಪದಲ್ಲಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ನಾದಸ್ವರ, ಯುವತಿಯರು ಕಳಸ ಹೊತ್ತು, ಭಜನೆಯೊಂದಿಗೆ ನೂರಾರು ಭಕ್ತರೊಂದಿಗೆ ಮೆರವಣಿಗೆ ಮೂಲಕ ಸಾಗಿ ಬೆಳಿಗ್ಗೆ 11ರ ಸಲ್ಲುವ ತುಲಾ ಲಗ್ನದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಬೆಳಿಗ್ಗೆ 11.45ಗಂಟೆಗೆ ತುಲಾ ಲಗ್ನದಲ್ಲಿ ಗಣಪತಿ ಮೂರ್ತಿಯ ಪ್ರತಿಷ್ಠಾಪನೆ ನಡೆಯಿತು. ಅರ್ಚಕರಾದ ಮಂಜುನಾಥ್ ಭಟ್, ಹಾ.ಮ.ಗಣೇಶ್ ಶರ್ಮ ಅವರ ನೇತೃತ್ವದಲ್ಲಿ ಮಹಾಪೂಜೆ,ಮಹಾಮಂಗಳಾತಿ, ಪ್ರಸಾದ ವಿನಿಯೋಗ ನೆರವೇರಿತು.
    1
    ಸುಂಟಿಕೊಪ್ಪದಲ್ಲಿ ಸಂಭ್ರಮದ ಶ್ರೀ ಗೌರಿ-  ಗಣೇಶೋತ್ಸವ ಮೆರವಣಿಗೆ
ಸುಂಟಿಕೊಪ್ಪ ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿಯ ವತಿಯಿಂದ 62ನೇ ವರ್ಷದ ಗೌರಿ ಮೆರವಣಿಗೆ ಮತ್ತು ಪ್ರತಿಷ್ಠಾಪನೆಯು  ಶ್ರದ್ಧಾಭಕ್ತಿಯಿಂದ ಸೋಮವಾರ ನಡೆಯಿತು. ಕೋದಂಡ ರಾಮ ದೇವಾಲಯದಲ್ಲಿ ವಿಶೇಷ ಪೂಜೆಯ ನಂತರ ಬೆಳಿಗ್ಗೆ 9.30 ಗಂಟೆಗೆ ದೇವಾಲಯದಿಂದ ಹೊರಟು ಗದ್ದೆಹಳ್ಳ ಪಟ್ಟೆಮನೆ ಗೌರಮ್ಮನ ಬಾವಿಯಿಂದ‌ ಗಂಗಾ ಜಲ ತಂದು ಗೌರಮ್ಮನಿಗೆ ಹೂವಿನ ಪೂಜೆ, ಗಂಗಾಪೂಜೆಯೊಂದಿಗೆ ಆಕರ್ಷಕ ಮಂಟಪದಲ್ಲಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ನಾದಸ್ವರ, ಯುವತಿಯರು ಕಳಸ ಹೊತ್ತು, ಭಜನೆಯೊಂದಿಗೆ ನೂರಾರು ಭಕ್ತರೊಂದಿಗೆ ಮೆರವಣಿಗೆ ಮೂಲಕ ಸಾಗಿ ಬೆಳಿಗ್ಗೆ 11ರ ಸಲ್ಲುವ ತುಲಾ ಲಗ್ನದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಬೆಳಿಗ್ಗೆ 11.45ಗಂಟೆಗೆ  ತುಲಾ ಲಗ್ನದಲ್ಲಿ ಗಣಪತಿ ಮೂರ್ತಿಯ ಪ್ರತಿಷ್ಠಾಪನೆ ನಡೆಯಿತು.
ಅರ್ಚಕರಾದ ಮಂಜುನಾಥ್ ಭಟ್, ಹಾ.ಮ.ಗಣೇಶ್ ಶರ್ಮ ಅವರ ನೇತೃತ್ವದಲ್ಲಿ ಮಹಾಪೂಜೆ,ಮಹಾಮಂಗಳಾತಿ, ಪ್ರಸಾದ ವಿನಿಯೋಗ ನೆರವೇರಿತು.
    user_Kodagu Updates
    Kodagu Updates
    ಮಡಿಕೇರಿ, ಕೊಡಗು, ಕರ್ನಾಟಕ•
    20 hrs ago
  • ಶಿವಮೊಗ್ಗದಲ್ಲಿ ಸಂಭ್ರಮದ ಗಣೇಶೋತ್ಸವ; 30ನೇ ವರ್ಷದ ಗಣೇಶ ಪ್ರತಿಷ್ಠಾಪನೆ ಮತ್ತೂರು ರಸ್ತೆಯಲ್ಲಿ ಭಕ್ತಿ ಸಂಭ್ರಮ; 30ನೇ ವರ್ಷದ ಗಣೇಶ ಪ್ರತಿಷ್ಠಾಪನೆ
    1
    ಶಿವಮೊಗ್ಗದಲ್ಲಿ ಸಂಭ್ರಮದ ಗಣೇಶೋತ್ಸವ; 30ನೇ ವರ್ಷದ ಗಣೇಶ ಪ್ರತಿಷ್ಠಾಪನೆ
ಮತ್ತೂರು ರಸ್ತೆಯಲ್ಲಿ ಭಕ್ತಿ ಸಂಭ್ರಮ; 30ನೇ ವರ್ಷದ ಗಣೇಶ ಪ್ರತಿಷ್ಠಾಪನೆ
    user_ಸಿಹಿಮೋಗ್ಗೆ ಸುದ್ಧಿ ಕನ್ನಡ
    ಸಿಹಿಮೋಗ್ಗೆ ಸುದ್ಧಿ ಕನ್ನಡ
    Video Creator ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    13 hrs ago
  • ಭದ್ರಾ ನಾಲೆಗಳಲ್ಲಿ ತಕ್ಷಣ ನೀರು ಹರಿಸಲು ಆಗ್ರಹಿಸಿ ರೈತರಿಂದ ಶಾಸಕರ ಗೃಹ ಕಛೇರಿಯಲ್ಲಿ ಪ್ರತಿಭಟನೆ ಭದ್ರಾವತಿ ತಾಲೂಕಿನ ರೈತರ ಬೆಳೆಗಳಿಗೆ ತಕ್ಷಣ ನೀರು ಹರಿಸಬೇಕೆಂದು ರೈತರು ಮಂಗಳವಾರ ಶಾಸಕರ ಗೃಹ ಕಛೇರಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಆಗ್ರಹಿಸಿದರು.  ಭದ್ರಾವತಿ: ತಾಲೂಕಿನ ರೈತರ ಬೆಳೆಗಳಿಗೆ ತಕ್ಷಣ ನೀರು ಹರಿಸಬೇಕೆಂದು ರೈತರು ಮಂಗಳವಾರ ಶಾಸಕರ ಗೃಹ ಕಛೇರಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಶಾಸಕರಿಗೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಕಲ್ಲಹಳ್ಳಿ ಶೇಖರ್ ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕವಾಗಿ ನೀರು ಹರಿಸುವುದನ್ನು ಸರ್ಕಾರ ತಕ್ಷಣ ನಿಲ್ಲಿಸಬೇಕು. ಪ್ರಸ್ತುತ ಮಳೆ ಕೊರೆತೆಯಿಂದಾಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇದ್ದು, ಅಲ್ಲದೆ ಇದೀಗ ತಾಲೂಕಿನ ರೈತರ ಬೆಳೆಗಳಿಗೆ ನೀರಿನ ಅಗತ್ಯವಿದೆ. ತಕ್ಷಣ ಕಾಲುವೆಗಳಲ್ಲಿ ನೀರು ಹರಿಸುವ ಮೂಲಕ ರೈತರ ಹಿತಕಾಪಾಡುವಂತೆ ಆಗ್ರಹಿಸಿದರು. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ತಾಲೂಕಿನಲ್ಲಿ ಈ ಬಾರಿ ಮಳೆ ಕೊರತೆಯಾಗಿದೆ. ಇದರಿಂದಾಗಿ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮಗಳಲ್ಲಿ ಜನರಿಗೆ ಹಾಗು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಈ ಹಿನ್ನಲೆಯಲ್ಲಿ ಜಲಸಂಪನ್ಮೂಲ ಖಾತೆ ಸಚಿವರಾದ ಚಲುವರಾಯಸ್ವಾಮಿಯವರಿಗೆ ಪತ್ರ ಬರೆಯಲಾಗಿದ್ದು, ತಕ್ಷಣ ಎಡ ಮತ್ತು ಬಲದಂಡೆ ನಾಲೆ ಹಾಗು ಗೊಂದಿ ಜಲಾಶಯದ ನಾಲೆಗಳಿಗೆ ನೀರು ಹರಿಸುವಂತೆ ಕೋರಲಾಗಿದೆ. ಇದಕ್ಕೆ ಸಚಿವರು ಪೂರಕವಾಗಿ ಸ್ಪಂದಿಸುವ ವಿಶ್ವಾಸವಿದೆ. ಸಚಿವರು ಕೈಗೊಳ್ಳುವ ತೀರ್ಮಾನದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಅಲ್ಲದೆ ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ(ಕಾಡಾ)ದ ಅಧ್ಯಕ್ಷರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಈ ಸಂಬಂಧ ೨-೩ ದಿನಗಳಲ್ಲಿ ಸಭೆ ನಡೆಯಲಿದ್ದು, ನೀರು ಬಿಡುವ ತೀರ್ಮಾನ ಕೈಗೊಳ್ಳಲಿದ್ದಾರೆ. ಈ ಹಿನ್ನಲೆಯಲ್ಲಿ ರೈತರು, ಗ್ರಾಮಸ್ಥರು ಆತಂಕಕ್ಕೆ ಒಳಗಾಗದಂತೆ ಮನವಿ ಮಾಡಿದರು.  ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಮಾಜಿ ಸದಸ್ಯರಾದ ಎಸ್. ಕುಮಾರ್, ಎಚ್.ಎಲ್ ಷಡಾಕ್ಷರಿ, ಕಣ್ಣಪ್ಪ, ಶಾಂತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    1
    ಭದ್ರಾ ನಾಲೆಗಳಲ್ಲಿ ತಕ್ಷಣ ನೀರು ಹರಿಸಲು ಆಗ್ರಹಿಸಿ ರೈತರಿಂದ ಶಾಸಕರ ಗೃಹ ಕಛೇರಿಯಲ್ಲಿ ಪ್ರತಿಭಟನೆ

ಭದ್ರಾವತಿ ತಾಲೂಕಿನ ರೈತರ ಬೆಳೆಗಳಿಗೆ ತಕ್ಷಣ ನೀರು ಹರಿಸಬೇಕೆಂದು ರೈತರು ಮಂಗಳವಾರ ಶಾಸಕರ ಗೃಹ ಕಛೇರಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಆಗ್ರಹಿಸಿದರು. 
ಭದ್ರಾವತಿ: ತಾಲೂಕಿನ ರೈತರ ಬೆಳೆಗಳಿಗೆ ತಕ್ಷಣ ನೀರು ಹರಿಸಬೇಕೆಂದು ರೈತರು ಮಂಗಳವಾರ ಶಾಸಕರ ಗೃಹ ಕಛೇರಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಶಾಸಕರಿಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಕಲ್ಲಹಳ್ಳಿ ಶೇಖರ್ ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕವಾಗಿ ನೀರು ಹರಿಸುವುದನ್ನು ಸರ್ಕಾರ ತಕ್ಷಣ ನಿಲ್ಲಿಸಬೇಕು. ಪ್ರಸ್ತುತ ಮಳೆ ಕೊರೆತೆಯಿಂದಾಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇದ್ದು, ಅಲ್ಲದೆ ಇದೀಗ ತಾಲೂಕಿನ ರೈತರ ಬೆಳೆಗಳಿಗೆ ನೀರಿನ ಅಗತ್ಯವಿದೆ. ತಕ್ಷಣ ಕಾಲುವೆಗಳಲ್ಲಿ ನೀರು ಹರಿಸುವ ಮೂಲಕ ರೈತರ ಹಿತಕಾಪಾಡುವಂತೆ ಆಗ್ರಹಿಸಿದರು.
ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ತಾಲೂಕಿನಲ್ಲಿ ಈ ಬಾರಿ ಮಳೆ ಕೊರತೆಯಾಗಿದೆ. ಇದರಿಂದಾಗಿ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮಗಳಲ್ಲಿ ಜನರಿಗೆ ಹಾಗು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಈ ಹಿನ್ನಲೆಯಲ್ಲಿ ಜಲಸಂಪನ್ಮೂಲ ಖಾತೆ ಸಚಿವರಾದ ಚಲುವರಾಯಸ್ವಾಮಿಯವರಿಗೆ ಪತ್ರ ಬರೆಯಲಾಗಿದ್ದು, ತಕ್ಷಣ ಎಡ ಮತ್ತು ಬಲದಂಡೆ ನಾಲೆ ಹಾಗು ಗೊಂದಿ ಜಲಾಶಯದ ನಾಲೆಗಳಿಗೆ ನೀರು ಹರಿಸುವಂತೆ ಕೋರಲಾಗಿದೆ. ಇದಕ್ಕೆ ಸಚಿವರು ಪೂರಕವಾಗಿ ಸ್ಪಂದಿಸುವ ವಿಶ್ವಾಸವಿದೆ. ಸಚಿವರು ಕೈಗೊಳ್ಳುವ ತೀರ್ಮಾನದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಅಲ್ಲದೆ ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ(ಕಾಡಾ)ದ ಅಧ್ಯಕ್ಷರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಈ ಸಂಬಂಧ ೨-೩ ದಿನಗಳಲ್ಲಿ ಸಭೆ ನಡೆಯಲಿದ್ದು, ನೀರು ಬಿಡುವ ತೀರ್ಮಾನ ಕೈಗೊಳ್ಳಲಿದ್ದಾರೆ. ಈ ಹಿನ್ನಲೆಯಲ್ಲಿ ರೈತರು, ಗ್ರಾಮಸ್ಥರು ಆತಂಕಕ್ಕೆ ಒಳಗಾಗದಂತೆ ಮನವಿ ಮಾಡಿದರು. 
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಮಾಜಿ ಸದಸ್ಯರಾದ ಎಸ್. ಕುಮಾರ್, ಎಚ್.ಎಲ್ ಷಡಾಕ್ಷರಿ, ಕಣ್ಣಪ್ಪ, ಶಾಂತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    user_ಪ್ರವೀಣ್ ಅಧ್ಯಕ್ಷ NAYAKA
    ಪ್ರವೀಣ್ ಅಧ್ಯಕ್ಷ NAYAKA
    Local News Reporter Bhadravati, Shivamogga•
    19 hrs ago
  • ಶಿವಮೊಗ್ಗ-ಭದ್ರಾ ನದಿಯ ನೀರು ಎಡ, ಬಲ ಹಾಗೂ ಗೋಂದಿ ನಾಲೆ ಹರಿಸಲು ಬದ್ದ ಶಿವಮೊಗ್ಗ: ಭದ್ರಾ ಎಡನಾಲೆ ಮತ್ತು ಬಲನಾಲೆ ಮತ್ತು ಗೋಂದಿ ನಾಲೆ ನೀರನ್ನು ಆದಷ್ಟು ಬೇಗನೆ ಡ್ಯಾಮ್ ನಿಂದ ನೀರನ್ನು ಬಿಡಲಾಗುವುದು ಈ ವಿಚಾರವಾಗಿ ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತುಕತೆ ನಡೆಸಿದ್ದು ರೈತರು ಆತಂಕ ಪಡುವುದು ಬೇಡ ಎಂದು ಭದ್ರಾವತಿ ಶಾಸಕ ಬಿಕೆ. ಸಂಗಮೇಶ್ವರ್ ತಿಳಿಸಿದ್ದಾರೆ. ಅವರಿಂದು ತಮ್ಮ ಗೃಹಕಚೇರಿಯಲ್ಲಿ ನೆರೆದಿದ್ದ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ರೈತರ ಸಭೆಯಲ್ಲಿ ಮಾತನಾಡಿದರು. ಕುಡಿಯುವ ಹಾಗೂ ದನಕರುಗಳಿಗೆ ನೀರು ಅವಶ್ಯಕತೆ ಇದೆ ಎಂಬ ವಿಚಾರ ನನಗೂ ತಿಳಿದಿದೆ. ಆದ್ದರಿಂದ ರೈತರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡವೆಂದು ತಿಳಿಯಪಡಿಸುತ್ತೇನೆ. ಈ ವಿಚಾರವಾಗಿ ಆದಷ್ಟು ಬೇಗನೆ ನಿರ್ಧಾರ ತೆಗೆದುಕೊಳ್ಳುತ್ತೇವೆಂದು ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿರುತ್ತಾರೆಂದರು.
    1
    ಶಿವಮೊಗ್ಗ-ಭದ್ರಾ ನದಿಯ ನೀರು ಎಡ, ಬಲ ಹಾಗೂ ಗೋಂದಿ ನಾಲೆ ಹರಿಸಲು ಬದ್ದ 
ಶಿವಮೊಗ್ಗ: ಭದ್ರಾ ಎಡನಾಲೆ ಮತ್ತು ಬಲನಾಲೆ ಮತ್ತು ಗೋಂದಿ ನಾಲೆ ನೀರನ್ನು ಆದಷ್ಟು ಬೇಗನೆ ಡ್ಯಾಮ್ ನಿಂದ ನೀರನ್ನು ಬಿಡಲಾಗುವುದು ಈ ವಿಚಾರವಾಗಿ  ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತುಕತೆ ನಡೆಸಿದ್ದು ರೈತರು ಆತಂಕ ಪಡುವುದು ಬೇಡ  
ಎಂದು ಭದ್ರಾವತಿ ಶಾಸಕ ಬಿಕೆ. ಸಂಗಮೇಶ್ವರ್ ತಿಳಿಸಿದ್ದಾರೆ.
ಅವರಿಂದು ತಮ್ಮ ಗೃಹಕಚೇರಿಯಲ್ಲಿ ನೆರೆದಿದ್ದ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ರೈತರ ಸಭೆಯಲ್ಲಿ ಮಾತನಾಡಿದರು.
ಕುಡಿಯುವ ಹಾಗೂ ದನಕರುಗಳಿಗೆ ನೀರು ಅವಶ್ಯಕತೆ ಇದೆ ಎಂಬ ವಿಚಾರ ನನಗೂ ತಿಳಿದಿದೆ. ಆದ್ದರಿಂದ ರೈತರು ಯಾವುದೇ ಆತಂಕಕ್ಕೆ  ಒಳಗಾಗುವುದು ಬೇಡವೆಂದು ತಿಳಿಯಪಡಿಸುತ್ತೇನೆ. ಈ ವಿಚಾರವಾಗಿ ಆದಷ್ಟು ಬೇಗನೆ ನಿರ್ಧಾರ ತೆಗೆದುಕೊಳ್ಳುತ್ತೇವೆಂದು ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿರುತ್ತಾರೆಂದರು.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    22 hrs ago
  • ಶಿವಮೊಗ್ಗ,: ತನು ಜ್ಯೂಸ್ ಸೆಂಟರ್ ಬೇಟಿ ನೀಡಿದ ಅಧಿಕಾರಿಗಳ ತಂಡ ಜ್ಯೂಸ್ ಮಾಲಿಕನ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳಲಾಗಿದೆ. ಶಿವಮೊಗ್ಗ ತನು ಜ್ಯೂಸ್ ಸೆಂಟರ್ ಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದಾಗ ಕೊಳೆತ ಹಣ್ಣುಗಳನ್ನು ಶೇಖರಿಸಿಟ್ಟಿದ್ದ ಬ್ರಿಡ್ಜ್ ತಪಾಸಣೆ ಮಾಡಿದಾಗ ಸೇಬು, ಮೂಸಂಬಿ, ಕಲ್ಲಂಗಡಿ, ಅವಕೊಡ,ದ್ರಾಕ್ಷಿ, ಬಾಳೆಹಣ್ಣು, ಮಾವಿನಹಣ್ಣು , ಬೆಣ್ಣೆ ಹಣ್ಣು,ಹೀಗೆ ಹಲವಾರು ಹಣ್ಣುಗಳಿಂದ ಜ್ಯೂಸ್ ತಯಾರಿಸಿ ಸಾರ್ವಜನಿಕರಿಗೆ ಕೊಡುತ್ತಿರುವುದು ಕಂಡುಬಂದಿದ್ದು ಹಾಗೂ ಕೆಲವರು ಆಸ್ಪತ್ರೆಯ ರೋಗಿಗಳಿಗೂ ಸಹ ಇದೇ ಕೊಳೆತ ಹಣ್ಣಿನಿಂದ ಜ್ಯೂಸ್ ತೆಗೆದುಕೊಂಡು ಹೋಗಿರುವುದು ಕೂಡ ಗಮನಕ್ಕೆ ಬಂದಿರುವುದು ಕಂಡು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ ಕೂಡಲೇ ಇದನ್ನು ಸೀಜ್ ಮಾಡಲಾಗಿದೆ. ಜ್ಯೂಸ್ ಮಾಲಿಕನ ಮೇಲೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
    1
    ಶಿವಮೊಗ್ಗ,: ತನು ಜ್ಯೂಸ್ ಸೆಂಟರ್ ಬೇಟಿ ನೀಡಿದ ಅಧಿಕಾರಿಗಳ ತಂಡ ಜ್ಯೂಸ್ ಮಾಲಿಕನ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳಲಾಗಿದೆ.
ಶಿವಮೊಗ್ಗ ತನು ಜ್ಯೂಸ್ ಸೆಂಟರ್ ಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದಾಗ ಕೊಳೆತ ಹಣ್ಣುಗಳನ್ನು  ಶೇಖರಿಸಿಟ್ಟಿದ್ದ ಬ್ರಿಡ್ಜ್ ತಪಾಸಣೆ ಮಾಡಿದಾಗ ಸೇಬು, ಮೂಸಂಬಿ, ಕಲ್ಲಂಗಡಿ, ಅವಕೊಡ,ದ್ರಾಕ್ಷಿ, ಬಾಳೆಹಣ್ಣು, ಮಾವಿನಹಣ್ಣು , ಬೆಣ್ಣೆ ಹಣ್ಣು,ಹೀಗೆ ಹಲವಾರು ಹಣ್ಣುಗಳಿಂದ  ಜ್ಯೂಸ್ ತಯಾರಿಸಿ ಸಾರ್ವಜನಿಕರಿಗೆ ಕೊಡುತ್ತಿರುವುದು ಕಂಡುಬಂದಿದ್ದು ಹಾಗೂ ಕೆಲವರು ಆಸ್ಪತ್ರೆಯ ರೋಗಿಗಳಿಗೂ ಸಹ ಇದೇ ಕೊಳೆತ ಹಣ್ಣಿನಿಂದ ಜ್ಯೂಸ್ ತೆಗೆದುಕೊಂಡು ಹೋಗಿರುವುದು ಕೂಡ ಗಮನಕ್ಕೆ ಬಂದಿರುವುದು ಕಂಡು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ ಕೂಡಲೇ ಇದನ್ನು  ಸೀಜ್ ಮಾಡಲಾಗಿದೆ. ಜ್ಯೂಸ್ ಮಾಲಿಕನ ಮೇಲೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
    user_Press Narashimha swamy SN
    Press Narashimha swamy SN
    Newspaper publisher ಶಿಕಾರಿಪುರ, ಶಿವಮೊಗ್ಗ, ಕರ್ನಾಟಕ•
    2 hrs ago
  • ₹3,383 ಕೋಟಿ ಆಸ್ತಿ ಒಡೆಯ ಶಾಸಕ ಬೀದಿಯಲ್ಲಿ ಭಿಕ್ಷೆ ಬೇಡಿದ್ದೇಕೆ? ಕಾರಣ ವೈರಲ್! ಮುಂಬೈ ಬೀದಿಯಲ್ಲಿ ಭಿಕ್ಷುಕನಾದ ಕೋಟ್ಯಾಧೀಶ ಬಿಜೆಪಿ ಶಾಸಕ ಪರಾಗ್ ಶಾ!
    1
    ₹3,383 ಕೋಟಿ ಆಸ್ತಿ ಒಡೆಯ ಶಾಸಕ ಬೀದಿಯಲ್ಲಿ ಭಿಕ್ಷೆ ಬೇಡಿದ್ದೇಕೆ? ಕಾರಣ ವೈರಲ್!
ಮುಂಬೈ ಬೀದಿಯಲ್ಲಿ ಭಿಕ್ಷುಕನಾದ ಕೋಟ್ಯಾಧೀಶ ಬಿಜೆಪಿ ಶಾಸಕ ಪರಾಗ್ ಶಾ!
    user_ಸಿಹಿಮೋಗ್ಗೆ ಸುದ್ಧಿ ಕನ್ನಡ
    ಸಿಹಿಮೋಗ್ಗೆ ಸುದ್ಧಿ ಕನ್ನಡ
    Video Creator ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    13 hrs ago
  • ಭದ್ರಾ ನೀರಿಗಾಗಿ ದಾವಣಗೆರೆಯಲ್ಲಿ ಜಲಸಂಘರ್ಷ ಹೆದ್ದಾರಿ ತಡೆ; ರೈತ–ಪೊಲೀಸರ ನಡುವೆ ನೂಕಾಟ, ಇಬ್ಬರಿಗೂ ಗಾಯ ದಾವಣಗೆರೆ: ಭದ್ರಾ ಬಲದಂಡೆ ನಾಲೆಗೆ ನೀರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ರೈತರು ನಡೆಸಿದ ಪ್ರತಿಭಟನೆ ಮಂಗಳವಾರ ದಾವಣಗೆರೆ ಹೊರವಲಯದ ಬಾಡಾ ಕ್ರಾಸ್ ಬಳಿ ತೀವ್ರ ಸ್ವರೂಪ ಪಡೆದುಕೊಂಡಿತು. ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ-48ಕ್ಕೆ ನುಗ್ಗಿ ರಸ್ತೆ ತಡೆ ನಡೆಸಿದ ಪರಿಣಾಮ ಪುಣೆ–ಬೆಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು, ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಾಡಾ ಕ್ರಾಸ್‌ನ ಅಪೂರ್ವ ರೆಸಾರ್ಟ್ ಎದುರಿನ ಸರ್ವೀಸ್ ರಸ್ತೆಯಲ್ಲಿ ರೈತರು ಒಲೆ, ಪಾತ್ರೆಗಳನ್ನು ತಂದು ಅಡುಗೆ ಮಾಡಲು ಮುಂದಾದಾಗ ಪೊಲೀಸರು ಆಕ್ಷೇಪಿಸಿದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಮಾಜಿ ಸಚಿವ ರೇಣುಕಾಚಾರ್ಯ ಹಾಗೂ ಪೊಲೀಸರ ನಡುವೆ ಕೂಡ ವಾಗ್ವಾದ ನಡೆಯಿತು. ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದ ರೈತರು ಸರ್ವೀಸ್ ರಸ್ತೆಯಲ್ಲೇ ಅಡುಗೆ ಮಾಡುವುದಾಗಿ ಘೋಷಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವ ವೇಳೆ ನೂಕಾಟ, ತಳ್ಳಾಟ ಸಂಭವಿಸಿದ್ದು, ಮುಕ್ತೇನಹಳ್ಳಿ ಗ್ರಾಮದ ರೈತ ಶಿವಯೋಗಿ ಅವರ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದೆ. ಅವರಿಗೆ ಪ್ರಥಮ ಚಿಕಿತ್ಸೆ ನೀಡದೆ ಬಸ್‌ನಲ್ಲಿ ಕರೆದೊಯ್ಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮತ್ತೊಂದೆಡೆ ಹರಿಹರ ಸಿಟಿ ಸಿಪಿಐ ಸುರೇಶ್ ಸಗರಿ ಅವರ ಮೊಣಕೈ ಹಾಗೂ ಹಣೆಗೆ ಗಾಯವಾಗಿದೆ. ಮಾಜಿ ಸಚಿವ ರೇಣುಕಾಚಾರ್ಯ ಸೇರಿದಂತೆ 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಭದ್ರಾ ನೀರಿನ ಬೇಡಿಕೆ ಈಡೇರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ವರದಿ: ದೇವರಾಜ್ ಕೆ. ನೆಲ್ಲಿಹಂಕಲು, ದಾವಣಗೆರೆ
    4
    ಭದ್ರಾ ನೀರಿಗಾಗಿ ದಾವಣಗೆರೆಯಲ್ಲಿ ಜಲಸಂಘರ್ಷ

ಹೆದ್ದಾರಿ ತಡೆ; ರೈತ–ಪೊಲೀಸರ ನಡುವೆ ನೂಕಾಟ, ಇಬ್ಬರಿಗೂ ಗಾಯ
ದಾವಣಗೆರೆ: ಭದ್ರಾ ಬಲದಂಡೆ ನಾಲೆಗೆ ನೀರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ರೈತರು ನಡೆಸಿದ ಪ್ರತಿಭಟನೆ ಮಂಗಳವಾರ ದಾವಣಗೆರೆ ಹೊರವಲಯದ ಬಾಡಾ ಕ್ರಾಸ್ ಬಳಿ ತೀವ್ರ ಸ್ವರೂಪ ಪಡೆದುಕೊಂಡಿತು. ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ-48ಕ್ಕೆ ನುಗ್ಗಿ ರಸ್ತೆ ತಡೆ ನಡೆಸಿದ ಪರಿಣಾಮ ಪುಣೆ–ಬೆಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು, ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಬಾಡಾ ಕ್ರಾಸ್‌ನ ಅಪೂರ್ವ ರೆಸಾರ್ಟ್ ಎದುರಿನ ಸರ್ವೀಸ್ ರಸ್ತೆಯಲ್ಲಿ ರೈತರು ಒಲೆ, ಪಾತ್ರೆಗಳನ್ನು ತಂದು ಅಡುಗೆ ಮಾಡಲು ಮುಂದಾದಾಗ ಪೊಲೀಸರು ಆಕ್ಷೇಪಿಸಿದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಮಾಜಿ ಸಚಿವ ರೇಣುಕಾಚಾರ್ಯ ಹಾಗೂ ಪೊಲೀಸರ ನಡುವೆ ಕೂಡ ವಾಗ್ವಾದ ನಡೆಯಿತು. ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದ ರೈತರು ಸರ್ವೀಸ್ ರಸ್ತೆಯಲ್ಲೇ ಅಡುಗೆ ಮಾಡುವುದಾಗಿ ಘೋಷಿಸಿದರು.
ಪರಿಸ್ಥಿತಿ ನಿಯಂತ್ರಿಸಲು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವ ವೇಳೆ ನೂಕಾಟ, ತಳ್ಳಾಟ ಸಂಭವಿಸಿದ್ದು, ಮುಕ್ತೇನಹಳ್ಳಿ ಗ್ರಾಮದ ರೈತ ಶಿವಯೋಗಿ ಅವರ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದೆ. ಅವರಿಗೆ ಪ್ರಥಮ ಚಿಕಿತ್ಸೆ ನೀಡದೆ ಬಸ್‌ನಲ್ಲಿ ಕರೆದೊಯ್ಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮತ್ತೊಂದೆಡೆ ಹರಿಹರ ಸಿಟಿ ಸಿಪಿಐ ಸುರೇಶ್ ಸಗರಿ ಅವರ ಮೊಣಕೈ ಹಾಗೂ ಹಣೆಗೆ ಗಾಯವಾಗಿದೆ.
ಮಾಜಿ ಸಚಿವ ರೇಣುಕಾಚಾರ್ಯ ಸೇರಿದಂತೆ 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಭದ್ರಾ ನೀರಿನ ಬೇಡಿಕೆ ಈಡೇರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ವರದಿ: ದೇವರಾಜ್ ಕೆ. ನೆಲ್ಲಿಹಂಕಲು, ದಾವಣಗೆರೆ
    user_ದೇವರಾಜ್ ಕೆ ನೆಲ್ಲಿಹಂಕಲು
    ದೇವರಾಜ್ ಕೆ ನೆಲ್ಲಿಹಂಕಲು
    Local News Reporter ಚನ್ನಗಿರಿ, ದಾವಣಗೆರೆ, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.