Shuru
Apke Nagar Ki App…
ಸಾರ್ವಜನಿಕರಿಗೆ ಒಂದು ಮನವಿ ನೋಡಿ. ಸ್ಪ್ರಿಂಗ್ ಯಾವ ರೀತಿ ತಯಾರು ಮಾಡ್ತಾರೆ ನೋಡಿ ಸಣ್ಣ ಮಕ್ಕಳು ಎಲ್ಲಾ ಅದನ್ನೇ ಕುಡೀತಾರೆ ತಂದೆ ತಾಯಿ ಹೇಳಬೇಕಾದದ್ದ ಕರ್ತವ್ಯ ಇದೇ ರೀತಿ ಕುಡಿದರೆ ಮಕ್ಕಳು ಆರೋಗ್ಯ ಹಾಳಾಗುತ್ತದೆ ಆದಷ್ಟು ಮಕ್ಕಳಿಗೆ ದುಡ್ಡು ಕೊಡೋದು ಕಡಿಮೆ ಮಾಡಿ ಹಣ್ಣು ಹಂಪಲ್ಲ ಜ್ಯೂಸ್ ಕುಡಿಸಿ ಒಳ್ಳೆಯದು.
Sharanugouda Patil
ಸಾರ್ವಜನಿಕರಿಗೆ ಒಂದು ಮನವಿ ನೋಡಿ. ಸ್ಪ್ರಿಂಗ್ ಯಾವ ರೀತಿ ತಯಾರು ಮಾಡ್ತಾರೆ ನೋಡಿ ಸಣ್ಣ ಮಕ್ಕಳು ಎಲ್ಲಾ ಅದನ್ನೇ ಕುಡೀತಾರೆ ತಂದೆ ತಾಯಿ ಹೇಳಬೇಕಾದದ್ದ ಕರ್ತವ್ಯ ಇದೇ ರೀತಿ ಕುಡಿದರೆ ಮಕ್ಕಳು ಆರೋಗ್ಯ ಹಾಳಾಗುತ್ತದೆ ಆದಷ್ಟು ಮಕ್ಕಳಿಗೆ ದುಡ್ಡು ಕೊಡೋದು ಕಡಿಮೆ ಮಾಡಿ ಹಣ್ಣು ಹಂಪಲ್ಲ ಜ್ಯೂಸ್ ಕುಡಿಸಿ ಒಳ್ಳೆಯದು.
More news from ಕರ್ನಾಟಕ and nearby areas
- ಬಾಗಲಕೋಟೆ: ದೇಶದಾದ್ಯಂತ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮಜಯಂತಿಯನ್ನು ಅತ್ಯಂತ ಗೌರವಪೂರ್ವಕವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತಿರುವ ಸಂದರ್ಭದಲ್ಲಿ, ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗರಡದಿನ್ನಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜಯಂತಿಯನ್ನು ನಿರ್ಲಕ್ಷ್ಯದಿಂದ ಆಚರಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮದ ಸಾರ್ವಜನಿಕರು ಹಾಗೂ ಅಂಬೇಡ್ಕರ್ ಸಂಘದ ಸದಸ್ಯರು ನೀಡಿದ ಮಾಹಿತಿಯ ಪ್ರಕಾರ, ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ಯಾವುದೇ ಸಮರ್ಪಕ ಸಿದ್ಧತೆಗಳನ್ನು ಕೈಗೊಳ್ಳದೇ, ಕೇವಲ ರೂಢಿಪರವಾಗಿ ಕಾರ್ಯಕ್ರಮ ನಡೆಸಲಾಗಿದೆ. ಮಹಾನ್ ನಾಯಕನ ಭಾವಚಿತ್ರಕ್ಕೆ ಒಂದು ಹೂವಿನ ಹಾರವನ್ನೂ ತರದೇ, ಪೂಜೆ ಮಾಡಿದಂತೆ ತೋರಿಸಿಕೊಂಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಏಪ್ರಿಲ್ ತಿಂಗಳು ದಲಿತ ಸಮುದಾಯದವರಿಗೆ ವಿಶೇಷ ಮಹತ್ವ ಹೊಂದಿದ್ದು, ಈ ಅವಧಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಗಾಗಿ ತಿಂಗಳುಗಟ್ಟಲೆ ಸಿದ್ಧತೆ ನಡೆಸಿ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಸಮಾಜಮುಖಿ ಚಟುವಟಿಕೆಗಳ ಮೂಲಕ ಆಚರಣೆ ನಡೆಸುವುದು ಸಾಮಾನ್ಯವಾಗಿದೆ. ಆದರೆ, ಈ ಶಾಲೆಯಲ್ಲಿ ನಡೆದಿರುವ ಆಚರಣೆ ಅದಕ್ಕೆ ಸಂಪೂರ್ಣ ವಿರುದ್ಧವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಸಂಬಂಧಿಸಿದ ಶಾಲೆಯ ಮುಖ್ಯ ಶಿಕ್ಷಕ ಹೆಚ್.ಎಸ್. ಕಾಳಿ ಹಾಗೂ ಶಿಕ್ಷಕಿ ಎ.ಎಸ್. ಜಹಾಂಗೀರದಾರ ಅವರು ಸುಮಾರು 30ರಿಂದ 35 ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಂಡು ಸರಳವಾಗಿ ಕಾರ್ಯಕ್ರಮವನ್ನು ಮುಗಿಸಿರುವುದಾಗಿ ತಿಳಿದುಬಂದಿದೆ. ಮಕ್ಕಳಲ್ಲಿ ಅಂಬೇಡ್ಕರ್ ಅವರ ಚಿಂತನೆಗಳು, ಸಂವಿಧಾನ ಮೌಲ್ಯಗಳು ಹಾಗೂ ಸಾಮಾಜಿಕ ಸಮಾನತೆಯ ಅರಿವು ಮೂಡಿಸಬೇಕಾದ ಶಿಕ್ಷಕರೇ ಈ ರೀತಿಯಾಗಿ ನಡೆದುಕೊಂಡಿರುವುದು ಆತಂಕಕಾರಿ ಬೆಳವಣಿಗೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಪ್ರಶ್ನೆ ಮಾಡಿದ ಸ್ಥಳೀಯ ಅಂಬೇಡ್ಕರ್ ಸಂಘದ ಯುವಕರಿಗೆ ಶಿಕ್ಷಕಿ ಜಹಾಂಗೀರದಾರ ಅವರು, “ಶಾಲೆಗೆ ಅನುದಾನವೇ ಬರುವುದಿಲ್ಲ, ನಾವು ಕೈಯಿಂದ ಏನು ಮಾಡಬೇಕು? ನಾವು ಪೂಜೆ ಮಾಡುವುದೇ ಹೀಗೆ” ಎಂದು ಪ್ರತಿಕ್ರಿಯೆ ನೀಡಿದರೆಂದು ಆರೋಪಿಸಲಾಗಿದೆ. ಈ ಉತ್ತರ ಸ್ಥಳೀಯರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನು ಮುಖ್ಯ ಶಿಕ್ಷಕ ಹೆಚ್.ಎಸ್. ಕಾಳಿ ಅವರನ್ನು ಸಂಪರ್ಕಿಸಿದಾಗ, “ನಾನು ಬೇರೆ ಮೀಟಿಂಗ್‌ಗೆ ಹೋಗಿದ್ದೆ. ಪೂಜೆ ಮಾಡಲು ಹೇಳಿದ್ದೆ” ಎಂಬ ಉತ್ತರ ನೀಡಿದ್ದಾರೆ ಎಂದು ಯುವಕರು ತಿಳಿಸಿದ್ದಾರೆ. ಈ ಪ್ರತಿಕ್ರಿಯೆ ಜವಾಬ್ದಾರಿಯ ಕೊರತೆಯನ್ನು ತೋರಿಸುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಘಟನೆಯ ಮಾಹಿತಿ ತಿಳಿದು, ಬೀಳಗಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಕೆಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ವಿಷಯವನ್ನು ಸಮಜಾಯಿಷಿಯಿಂದ ಮುಕ್ತಾಯಗೊಳಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. “ಇಷ್ಟಕ್ಕೆ ಮುಗಿಸಿ ಬಿಡಿ, ಏನೋ ತಪ್ಪಾಗಿದೆ” ಎಂದು ಅಧಿಕಾರಿಗಳು ಕೇಳಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಅಧಿಕಾರಿಗಳ ನಿರ್ಲಕ್ಷ್ಯವೂ ಸ್ಪಷ್ಟವಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ಅಭಿಪ್ರಾಯದಂತೆ, ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಸಂವಿಧಾನದ ಮೌಲ್ಯಗಳು, ಸಮಾನತೆ, ಮಾನವೀಯತೆ ಹಾಗೂ ಸಾಮಾಜಿಕ ನ್ಯಾಯದ ತತ್ವಗಳನ್ನು ಬೋಧಿಸುವ ಪ್ರಮುಖ ಕೇಂದ್ರಗಳಾಗಿವೆ. ಇಂತಹ ಸಂಸ್ಥೆಗಳಲ್ಲೇ ಅಂಬೇಡ್ಕರ್ ಅವರಂತಹ ಮಹಾನ್ ನಾಯಕರಿಗೆ ಅಗತ್ಯ ಗೌರವ ನೀಡದಿರುವುದು ದುರಂತಕರ ಸಂಗತಿಯಾಗಿದೆ. ಈ ಘಟನೆ ಕೇವಲ ಒಂದು ಶಾಲೆಯ ನಿರ್ಲಕ್ಷ್ಯವಲ್ಲ, ಸಮಾಜದ ಮೌಲ್ಯಗಳಿಗೆ ಸವಾಲು ಎಸೆದಂತಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಶಿಕ್ಷಕರ ವಿರುದ್ಧ ಹಾಗೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.1
- Post by ABU NEWS CHANNEL ಸಂಪಾದಕರು1
- ವಿಜಯಪುರ ಬಸ್ ನಿಲ್ದಾಣ ಹತ್ತಿರ ಘಟನೆಖಾಸಗಿ ಬಸ್ ಇಂದ ಪಾದಚಾರಿ ಸಾವು #viralpost #news #update #vijayapur ...1
- ಕುಷ್ಟಗಿ:- ಪಟ್ಟಣದ ಶಾಖಾಪೂರ ರಸ್ತೆಯ ಗಿಡ್ಡ ಹನಮಂತಪ್ಪ ಚೂರಿ ಇವರ ಲೇಹೌಟ್ ಶ್ರೀ ಅಡಿರಾಯ ದೇವಸ್ಥಾನ ಹತ್ತಿರದ ಕಲಾವಿದ ಹಾಗೂ ಜನಾಪದ ಕಲಾವಿದ ಮತ್ತು ಡಾ. ಜೀವನಸಾಬ ಬಿನ್ನಾಳ ಇವರ ಮನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ , ಕನ್ನಡ ಪುಸ್ತಕ ಪ್ರಾಧಿಕಾರ ರಾಜ್ಯಾಧ್ಯಕ್ಷ ಡಾ. ಮಾನಸ ಬೇಡಿ ನೀಡಿ ಮನೆಗೊಂದು ಪುಸ್ತಕ ಗ್ರಂಥಾಲಯ ರಾಜ್ಯದ ಒಂದು ಲಕ್ಷ ಗ್ರಂಥಾಲಯಗಳ ಯೋಜನೆ ಬಗ್ಗೆ ಜನ ಜಾಗೃತಿ ಮೂಡಿಸುವ ಮೂಲಕ ಮಾತನಾಡಿದರು. ನಂತರ ಡಾ. ಜೀವನಸಾಬ ಬಿನ್ನಾಳ ಮಾತನಾಡಿ ಈ ಕಾರ್ಯಕ್ರಮ ನೆಡೆಸುವಂತದ್ದು ಅತ್ಯಂತ ಒಳ್ಳೆಯ ಕಾರ್ಯವಾಗಿದೆ ಈ ಕಾರ್ಯಕ್ರಮ ಈಗ ಪ್ರತಿ ಜಿಲ್ಲೆ, ತಾಲೂಕಿನಲ್ಲಿ ಮಾತ್ರ ನೆಡೆಯುತ್ತಿದೆ. ಆದರೆ ಪ್ರತಿ ಮನೆ ಮನೆಗೆ ಮತ್ತು ಪ್ರತಿ ಗ್ರಾಮ ಪಂಚಾಯತ ಹಾಗೂ ಪ್ರತಿ ಹಳ್ಳಿಯಲ್ಲಿ ನೆಡೆದಾಗ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸು ನನಸಾಗುತ್ತದೆ. ಆದರೆ ಪುಸ್ತಕ ಓದುವ ಅಭ್ಯಾಸವನ್ನು ಪ್ರತಿಯೊಬ್ಬರು ಕೂಡ ಬೆಳೆಸಿಕೊಂಡಾಗ ಒಳ್ಳೆಯ ಜ್ಞಾನ ಮೂಡುತ್ತದೆ ಈ ಒಂದು ಕಾರ್ಯಕ್ರಮ ಯಶಸ್ವಿಗೊಳ್ಳಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಜ್ಯೋತ್ಸವ ಪುರಸ್ಕೃತರಾದ ಶೇಖರಗೌಡ ಮಾಲಿಪಾಟೀಲ, ಪುಸ್ತಕ ಪ್ರಾಧಿಕಾರದ ಸದಸ್ಯರು ಹಾಗೂ ಸಂಶೋಧಕರಾದ ಡಾ.ಶರಣಬಸಪ್ಪ ಕೋಲಕಾರ, ರಾಜ್ಯ ಚಲನಚಿತ್ರ ಅಕಾಡೆಮಿಯ ಸದಸ್ಯರು ಮತ್ತು ಲೇಖಕಿ ಸಾವಿತ್ರಿ ಮುಜಮದಾರ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಗ್ರಂಥಾಲಯ ಜಾಗೃತಿ ಅಭಿಯಾನದ ಸಂಚಾಲಕರು ಹಾಗೂ ಸಾಹಿತಿಗಳಾದ ಜಿ ಎಸ್ ಗೋನಾಳ, ರವೀಂದ್ರ ಬಾಕಳೆ, ಕರಿಸಿದ್ದನಗೌಡ ಮಾಲಿಪಾಟೀಲ, ಸಾಹಿತಿಗಳಾದ ಹನುಮಂತಪ್ಪ ಈಟಿ, ಡಾ.ನಾಗರಾಜ ಹೀರಾ, ಕನ್ನಡಪರ ಹೋರಾಟಗಾರರಾದ ಸ.ಶರಣಪ್ಪ ಪಾಟೀಲ, ಪತ್ರಕರ್ತರಾದ ರವೀಂದ್ರ ಬಾಕಳೆ, ಹನುಮೇಶ ಗುಮಗೇರಿ, ಪವಾಡೆಪ್ಪ ಚೌಡ್ಕಿ, ಪರಶಿವಮೂರ್ತಿ, ಉಮೇಶ ಹಿರೇಮಠ ಹಾಗೂ ಇತರರು ಇದ್ದರು. ಜಾನಪದ ಅಕಾಡೆಮಿಯ ಸದಸ್ಯರು ಹಾಗೂ ಸಾಹಿತಿಗಳಾದ ಜೀವನಸಾಬ ವಾಲೀಕಾರ ಅವರು ನಿರೂಪಿಸಿದರು. *4
- ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್ ಗ್ರಾಮದಲ್ಲಿ ಯುದ್ಧದ ಭೀತಿಯಲ್ಲಿರುವ ಇರಾನಿ ಮತ್ತು ಇಸ್ರೇಲ್ ಯುದ್ಧದ ಕಾಲದಲ್ಲಿ ನಮ್ಮ ಕರ್ನಾಟಕದಲ್ಲಿ ಕೂಡ ಎಲ್ಪಿಜಿ ಗ್ಯಾಸ್ ಏಜೆನ್ಸಿ ತುಂಬಾ ತೊಂದರೆಯಾಗುತ್ತಿದೆ ಮೂರು ದಿನಗಳ ಕಾಲ ಕ್ಯೂ ಅಲ್ಲಿ ನಿಂತು ಜನರು ತೊಂದರೆ ಅನುಭವಿಸುತ್ತಿದ್ದಾರೆ1
- ಅಫಜಲಪುರ ತಾಲೂಕಿನಲ್ಲಿ ಅಭಿವೃದ್ಧಿ ಹೆಸರಲ್ಲಿ ಹಗರಣ...ಶಾಸಕರು ಉತ್ತರಿಸಬೇಕು. *.ಜೆಸ್ಕಾಂ ಇಲಾಖೆಯಲ್ಲಿ ರೈತರಿಂದ ಲಂಚ ವಸುಲಿ, ಎಚ್ಚರಿಕೆ ನೀಡಿದ ನಿತಿನ್ ಗುತ್ತೇದಾರ.1
- ಸಾರ್ವಜನಿಕರಿಗೆ ಒಂದು ಮನವಿ ನೋಡಿ. ಸ್ಪ್ರಿಂಗ್ ಯಾವ ರೀತಿ ತಯಾರು ಮಾಡ್ತಾರೆ ನೋಡಿ ಸಣ್ಣ ಮಕ್ಕಳು ಎಲ್ಲಾ ಅದನ್ನೇ ಕುಡೀತಾರೆ ತಂದೆ ತಾಯಿ ಹೇಳಬೇಕಾದದ್ದ ಕರ್ತವ್ಯ ಇದೇ ರೀತಿ ಕುಡಿದರೆ ಮಕ್ಕಳು ಆರೋಗ್ಯ ಹಾಳಾಗುತ್ತದೆ ಆದಷ್ಟು ಮಕ್ಕಳಿಗೆ ದುಡ್ಡು ಕೊಡೋದು ಕಡಿಮೆ ಮಾಡಿ ಹಣ್ಣು ಹಂಪಲ್ಲ ಜ್ಯೂಸ್ ಕುಡಿಸಿ ಒಳ್ಳೆಯದು.1
- Post by ABU NEWS CHANNEL ಸಂಪಾದಕರು1
- ವಿಜಯಪುರ: ಉಪಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ಗೆಲುವು ನಿಶ್ಚಿತ ವಿಜಯಪುರದಲ್ಲಿ ಶನಿವಾರದಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಇಬ್ಬರು ಅಭ್ಯರ್ಥಿಗಳು ಗೆಲ್ಲುವುದು ಶತಸಿದ್ದ ಎಂದರು. ಈಗಾಗಲೇ ಕಾಂಗ್ರೆಸ್ ನವರು ಹತಾಶರಾಗಿ ಅವರ ಪಕ್ಷದ ನಾಯಕರ ಮೇಲೆ ಆರೋಪ ಮಾಡಲು ಮುಂದಾಗಿದ್ದಾರೆ. ನಮ್ಮ ಅಭ್ಯರ್ಥಿಗಳು ಗೆಲ್ಲುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಅವರು ಹೇಳಿದರು. ಈ ಗೆಲವು ನಮ್ಮ ಪಕ್ಷದ ಗೆಲುವಾಗಿರುತ್ತದೆ ಎಂದು ಅವರು ತಿಳಿಸಿದರು.1