Shuru
Apke Nagar Ki App…
ವ್ಯಕ್ತಿ ನಾಪತ್ತೆ: ಕಾಣೆಯಾದವರ ಪತ್ತೆಗೆ ಮನವಿ; ಪೊಲೀಸ್ ದೂರಲ್ಲಿ ಏನಿದೆ? ಮಂಗಳೂರು ಚಿತ್ರಾಪು ಗ್ರಾಮದ ಸರ್ಫ್ ಬ್ರದರ್ಸ್ ಸರ್ಪಿಂಗ್ ಎಂಬಲ್ಲಿ ಕೆಲಸ ಮಾಡುತ್ತಿದ್ದ ಸಚಿನ್ ಅಂಚನ್ (38) ಎಂಬವರು ಮಾ.2ರಂದು ಎಂದಿನಂತೆ ಕೆಲಸಕ್ಕೆಂದು ಹೋದವರು ಕಾಣೆಯಾಗಿರುವ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದವರ ಚಹರೆ : 5.10 ಅಡಿ ಎತ್ತರ, ಗೋದಿ ಮೈ ಬಣ್ಣ, ಸಾಧಾರಣ ಶರೀರ ಹೋದಿದ್ದು, ಎಡಗಣ್ಣಿನ ಬಳಿ ಹಾಗೂ ಕುತ್ತಿಗೆಯ ಬದಿ ಕಪ್ಪು ಎಳ್ಳು ಮಚ್ಚೆ ಇದೆ. ನೀಲಿ ಬಣ್ಣದ ಬರ್ಮುಡಾ, ಹಸಿರು ಬಣ್ಣದ ಟೀ ಶರ್ಟ್ ಧರಿಸಿದ್ದರು. ಕನ್ನಡ, ತುಳು ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಕಾಣೆಯಾದವರ ಮಾಹಿತಿ ಪತ್ತೆಯಾದಲ್ಲಿ ಮುಲ್ಕಿ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Shamsheer Budoli
ವ್ಯಕ್ತಿ ನಾಪತ್ತೆ: ಕಾಣೆಯಾದವರ ಪತ್ತೆಗೆ ಮನವಿ; ಪೊಲೀಸ್ ದೂರಲ್ಲಿ ಏನಿದೆ? ಮಂಗಳೂರು ಚಿತ್ರಾಪು ಗ್ರಾಮದ ಸರ್ಫ್ ಬ್ರದರ್ಸ್ ಸರ್ಪಿಂಗ್ ಎಂಬಲ್ಲಿ ಕೆಲಸ ಮಾಡುತ್ತಿದ್ದ ಸಚಿನ್ ಅಂಚನ್ (38) ಎಂಬವರು ಮಾ.2ರಂದು ಎಂದಿನಂತೆ ಕೆಲಸಕ್ಕೆಂದು ಹೋದವರು ಕಾಣೆಯಾಗಿರುವ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದವರ ಚಹರೆ : 5.10 ಅಡಿ ಎತ್ತರ, ಗೋದಿ ಮೈ ಬಣ್ಣ, ಸಾಧಾರಣ ಶರೀರ ಹೋದಿದ್ದು, ಎಡಗಣ್ಣಿನ ಬಳಿ ಹಾಗೂ ಕುತ್ತಿಗೆಯ ಬದಿ ಕಪ್ಪು ಎಳ್ಳು ಮಚ್ಚೆ ಇದೆ. ನೀಲಿ ಬಣ್ಣದ ಬರ್ಮುಡಾ, ಹಸಿರು ಬಣ್ಣದ ಟೀ ಶರ್ಟ್ ಧರಿಸಿದ್ದರು. ಕನ್ನಡ, ತುಳು ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಕಾಣೆಯಾದವರ ಮಾಹಿತಿ ಪತ್ತೆಯಾದಲ್ಲಿ ಮುಲ್ಕಿ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
More news from Chikkamagaluru and nearby areas
- ಕಡೂರು: ವಿಧಾನ ಸೌಧದಲ್ಲಿ ನಡೆಯುತ್ತಿರುವ ಕರ್ನಾಟಕ ಸರ್ಕಾರದ ಬಜೆಟ್ ಅಧಿವೇಶನದಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಬೆಂಕಿ ಅವಘಡದಲ್ಲಿ ಸುಟ್ಟು ಹೋದ ಮನೆಗಳಿಗೆ ಪರಿಹಾರವನ್ನು ನೀಡಲಾಗುತ್ತಿದೆ. ಆದರೆ ಅಗ್ನಿ ಅವಘಡ ಯಾಕೆ ಆಯಿತು ಎಂಬ ಕಾರಣ ತಿಳಿಯದೆ ಮನೆಗಳು ಸುಟ್ಟು ಹೋದಾಗ ಜನರಿಗೆ ಪರಿಹಾರ ದೊರೆಯದೇ ಅತ್ಯಂತ ಕಷ್ಟವಾಗುತ್ತಿದ್ದು ಮನೆ ಸುಟ್ಟು ಹೋಗಲು ಸ್ಪಷ್ಟ ಕಾರಣ ತಿಳಿಯದೇ ಹೋದಾಗ ಕೂಡಾ ಆ ಮನೆಗಳಿಗೆ ಎಸ್ಡಿಆರ್ ಎಫ್ ಹಾಗೂ ಎನ್ ಡಿ ಆರ್ ಎಫ್ ಮೂಲಕ ಪರಿಹಾರ ನೀಡಬೇಕಾಗಿ ಸದನದಲ್ಲಿ ಮನವಿ ಮಾಡಿದರು. ಕಳೆದ ಆರು ತಿಂಗಳಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತಗಳಿಗೆ ಸುಮಾರು 7 ಮನೆಗಳು ಸುಟ್ಟು ಹೋಗಿದ್ದು ಈ ರೀತಿ ಬೆಂಕಿ ಅವಘಡಗಳಿಗೆ ಸುಟ್ಟು ಹೋದ ಮನೆಗಳಿಗೆ ಸರ್ಕಾರ ಹೆಚ್ಚಿನ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಬೇಕಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಲ್ಲಿ ಒತ್ತಾಯಿಸಿದರು.1
- ಕಂಬದಾಳ್ ಹೊಸೂರು ಕ್ಯಾಂಪ್ ಆಟದ ಮೈದಾನ ಆವರಣದಲ್ಲಿ ನಡೆದ ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ಮತ್ತು ತಾವರಗಟ್ಟ ಗ್ರಾಮ ಪಂಚಾಯಿತಿಯ ಗೋಡಿಬೀಡು ಮತ್ತು ಮಲ್ಲಿಗೆನಹಳ್ಳಿ ಗ್ರಾಮಗಳ ವ್ಯಾಪ್ತಿಯ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರನ್ನು ಕಂಡು ಮನತುಂಬಿ ಬಂತು, ಈ ಕಾರ್ಯಕ್ರಮಕ್ಕೆ ಇಡೀ ಗ್ರಾಮವನ್ನೇ ಹಬ್ಬದ ರೀತಿಯಲ್ಲಿ ಸಿಂಗರಿಸಿ ಹಗಲಿರುಳು ಶ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿಯ ಮತ್ತು ತಾವರಗಟ್ಟ ಗ್ರಾಮ ಪಂಚಾಯಿತಿಯ ಗೋಡಿಬೀಡು ಮತ್ತು ಮಲ್ಲಿಗೆನಹಳ್ಳಿ ಗ್ರಾಮಗಳ ಮಾಜಿ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು, ಮಾಜಿ ಸದಸ್ಯರುಗಳು, ಸರ್ಕಾರಿ ಅಧಿಕಾರಿಗಳು ಮತ್ತು ಆರಕ್ಷಕ ಅಧಿಕಾರಿಗಳಿಗೂ ವಿಶೇಷ ಧನ್ಯವಾದಗಳು. ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಒಂದೇಡೆ ಸೇರಿಸಿ ಜನರ ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲೆ ಪರಿಹಾರ ಮಾಡುವಲ್ಲಿ ಯಶಸ್ವಿಗೊಳ್ಳಲಾಯಿತು.ನಿಮ್ಮ ಈ ಪ್ರೀತಿ ಅಭಿಮಾನ ಚಿರಕಾಲ ನಮ್ಮ ಕುಟುಂಬದ ಮೇಲೆ ಇರಲಿ ಎಂದು ಬಯಸುತ್ತೆನೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಟ್ಟ ಪ್ರತಿಯೊಬ್ಬ ಕಾರ್ಯಕರ್ತರಿಗೂ ಮತ್ತು ನಮ್ಮ ಕುಟುಂಬದ ಅಭಿಮಾನಿಗಳಿಗೂ ನನ್ನ ಸಾಷ್ಟಂಗ ನಮಸ್ಕಾರ1
- ‘ಅಕ್ಕ ಪಡೆ’ ಯೋಜನೆಯ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪೊಲೀಸ್ ಇಲಾಖೆಗೆ ನೀಡಿರುವ ವಾಹನಕ್ಕೆ ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ಸೋಮವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಹಾಗೂ ಜಾಗೃತಿ ಮೂಡಿಸಲು ಈ ವಾಹನವನ್ನು ಬಳಸಲಾಗುತ್ತದೆ ಎಂದರು. ಈ ವಾಹನದಲ್ಲಿ ನಾಲ್ವರು ಮಹಿಳಾ ಸಿಬ್ಬಂದಿ ಹಾಗೂ ಹೋಂ ಗಾರ್ಡ್‌ಗಳನ್ನು ನಿಯೋಜಿಸಲಾಗಿದ್ದು, ಎರಡು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಜೊತೆಗೆ 112 ಹಾಗೂ ಚಾಮುಂಡಿ ಪಡೆ ವಾಹನಗಳೂ ತಮ್ಮ ಕರ್ತವ್ಯ ಮುಂದುವರಿಸಲಿವೆ ಎಂದು ಹೇಳಿದರು.1
- *ಭಾರತ ನಲ್ಲಿ ವೈರಲ್*1
- ದಾವಣಗೆರೆ : ದಾವಣಗೆರೆ ದಕ್ಷಿಣ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಬಿಟ್ಟ ವಿಚಾರ. ಯುಗಾದಿ ಹಬ್ಬದ ನಂತರ ನೋಡೋಣ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು. ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಎಸ್ . ಮಲ್ಲಿಕಾರ್ಜುನ್ ಅವರು ರೂ.1061 ಲಕ್ಷಗಳ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿ ಪೂಜೆ ಸಮಾರಂಭದಲ್ಲಿ ಭಾಗವಹಿಸಿ ನಂತರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.1
- ತೋಡ್ಲರಹಟ್ಟಿ ಗ್ರಾಮದಲ್ಲಿ ಮಕ್ಕಳ ಕಳ್ಳಿಯೆಂದು ಅನುಮಾನಗೊಂಡು ಮಹಿಳೆಗೆ ಧರ್ಮದೇಟು ಕೊಟ್ಟ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ತೋಡ್ಲರಹಟ್ಟಿ ಗ್ರಾಮದಲ್ಲಿ ಸೋಮವಾರ ಘಟನೆ ನಡೆದಿದ್ದು ಪ್ರಖರಣ ತಡವಾಗಿ ಬೆಳಕಿಗೆ ಬಂದಿದೆ. ಮಕ್ಕಳು ಕಳ್ಳಿಯೆಂದು ಅನುಮಾನಗೊಂಡ ಗ್ರಾಮದ ಮಹಿಳೆಯರು ಮಹಿಳೆಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲ್ಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ತೋಡ್ಲರಹಟ್ಟಿಯಲ್ಲಿ ನಡೆದಿದೆ1
- ಇತ್ತೀಚಿನ ದಿನಗಳಲ್ಲಿ ಮಣ್ಣಿನ ಮನೆಗಳ ನಿರ್ಮಾಣ ಇಲ್ಲದ ಕಾರಣ ಸಿಮೆಂಟು ಮನೆಗಳ ನಿರ್ಮಾಣದಿಂದಾಗಿ ಮನೆಗಳಿಗೆ ಸುಣ್ಣ ಬದಲು ಬಣ್ಣಗಳ ಮರೆ ಹೋಗುತ್ತಿರುವುದರಿಂದ ಸುಣ್ಣಗಾರರ ಬದುಕು ಬಣ್ಣ ಕಳೆದುಕೊಳ್ಳುತ್ತಿದೆ... ಸುಣ್ಣಗಾರರ ಬದಕು ಕುರಿತು ಒಂದು ವರದಿ . ಸುರೇಶ ಬೆಳಗೆರೆ 97398757291
- *ಭಾರತ ನಲ್ಲಿ ವೈರಲ್*1