ಕಾರಣವಿಲ್ಲದೆ ಆಯವ್ಯಯ ಸಭೆ ರದ್ದುಪಡಿಸಿದ ಪೌರಾಯುಕ್ತರ ನಿಯೋಜನೆಯನ್ನು ರದ್ದುಪಡಿಸಿ- ಎ.ಬಿ. ವೆಂಕಟೇಶ ಯಾದಗಿರಿ ಜಿಲ್ಲೆಯ ಸುರಪುರ ನಗರಸಭೆಯ 2026-27ನೇ ಸಾಲಿನ ಆಯ-ವ್ಯಯ (ಬಜೆಟ್) ರಚನೆ ಬಗ್ಗೆ ದಿನಾಂಕ 09.03.2026 ರಂದು ಮಧ್ಯಾಹ್ನ 03 ಗಂಟೆಗೆ ನಗರಸಭೆ ಕಾರ್ಯಾಲಯದಲ್ಲಿ ಎರಡನೇ ಸುತ್ತಿನ ಸಭೆ ಕರೆಯಲಾಗಿದ್ದು, ಉದ್ದೇಶಪೂರಕವಾಗಿ ಪೌರಾಯುಕ್ತರು ಸಭೆಯನ್ನು ರದ್ದುಪಡಿಸಿರುತ್ತಾರೆ ಎಂದು ಸ್ಥಳೀಯ ಸಂಸ್ಥೆಗಳ ಹಿತರಕ್ಷಣೆ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಎ.ಬಿ ವೆಂಕಟೇಶ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರಸಭೆ ಸುರಪುರ ವ್ಯಾಪ್ತಿಯಲ್ಲಿ ಹಲವಾರು ಸಮಸ್ಯೆಗಳಿದ್ದು, ನಗರದ ಎಲ್ಲಾ ವಾರ್ಡುಗಳಲ್ಲಿ ಸ್ವಚ್ಚತೆ ಕಣ್ಮರೆಯಾಗಿದೆ, ಸ್ವಚ್ಚತಾ ಸಿಬ್ಬಂದಿಗಳಿಗೆ ಯಾರು ಹೇಳುವರು ಇಲ್ಲಾ ಕೇಳುವರು ಇಲ್ಲದಂತಾಗಿದೆ, ನಗರದ ಎಲ್ಲೆಂದರಲ್ಲಿ ಕಸ ಸುಡುತ್ತಿರುವುದು ಬಹಿರಂಗವಾಗಿದೆ. ಕಸದ ವಾಹನಗಳು ಕೆಟ್ಟು ಮೂಲೆಯಲ್ಲಿ ನಿಂತಿವೆ. ಆದಾಗ್ಯೂ ಸಹ ಪ್ರತಿ ತಿಂಗಳು ಲಕ್ಷಾನುಗಟ್ಟಲೆ ವಾಹನಗಳಿಗೆ ಡಿಸೆಲ್/ಪೆಟ್ರೋಲ್ ಬಿಲ್ ಪಾವತಿಯಾಗುತ್ತೀದೆ ಎಂಬ ಸುದ್ದಿ ನಗರಸಭೆಯಲ್ಲಿ ಹರಿದಾಡುತ್ತೀದೆ. ನಗರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ನಗರಸಭೆಯಲ್ಲಿ ಆಡಳಿತ ವ್ಯವಸ್ಥೆ ತುಂಬಾ ಹದಗೆಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ನಗರದ ಸಾರ್ವಜನಿಕರು ಸದರಿ ಸಭೆಗೆ ಹಾಜರಾಗಿ ತಮ್ಮ ಅಳಲನ್ನು ತೊಡಿಕೊಳ್ಳಲು ಬಂದಾಗ ಏಕಾ ಏಕಿ ಯಾವುದೇ ಕಾರಣವಿಲ್ಲದೆ. ಸಭೆಯನ್ನು ರದ್ದುಪಡಿಸಲಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದರು. ಇದರಿಂದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧಿಸದ ಪೌರಾಯುಕ್ತರ ನಿಯೋಜನೆಯನ್ನು ಕೂಡಲೇ ರದ್ದುಪಡಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲು ತಿರ್ಮಾನಿಸಿದರು ಎಂದು ತಿಳಿಸಿದರು.

- ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಇಂದು ರಾಯಚೂರಿನಲ್ಲಿ ಬಂದ್‌ಗೆ ಕರೆ ನೀಡಲಾಗಿತ್ತು. ಈ ವೇಳೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ 1 ಗಂಟೆಗೆ ಪ್ರತಿಭಟನೆ ನಡೆಯುವ ಸಂದರ್ಭದಲ್ಲಿ ಜಹರಾಬಾದ್ ನಿವಾಸಿ ಭರತ್ ಎಂಬ ಯುವಕ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಯತ್ನಕ್ಕೆ ಮುಂದಾದನು. ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಅಲ್ಲಿದ್ದ ಹೋರಾಟಗಾರರು ತಕ್ಷಣವೇ ಅವನನ್ನು ಹಿಡಿದು ತಡೆದರು. ನಂತರ ಗಾಯಗೊಂಡ ಯುವಕನನ್ನು ತಕ್ಷಣ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.1
- Post by Nava karnataka News channel1
- ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಮಾರ್ಚ ೧೫ ರವಿವಾರದಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಹಿನ್ನಲೆ ಬೃಹತ್ ಶೋಭಾಯಾತ್ರೆ ನಡೆಯಲಿದ್ದು. ಈ ಕಾರ್ಯಕ್ರಮದಲ್ಲಿ ಶಾಸಕ ಸಿ.ಟಿ.ರವಿ ಪಾಲ್ಗೊಳ್ಳಲಿದ್ದು. ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಯಲಿದ್ದು. ಸಾಯಂಕಾಲ ಎಸ್.ಆರ್.ಕಂಠಿ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮ ಇದ್ದು, ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಹಿಂದೂ ಸಮಾಜದ ಮುಖಂಡರು ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮನವಿ ಮಾಡಿದ್ದಾರೆ. ವರದಿ ಭೀಮಣ್ಣ ಗಾಣಿಗೇರ ಇಳಕಲ್ಲ1
- Post by Welding Nizam Welding Nizam5
- 📱 ಪೊಲೀಸರು ನಿಮ್ಮ WhatsApp ಚಾಟ್‌ಗಳನ್ನು ನೋಡಬಹುದಾ? ಸಾಮಾನ್ಯವಾಗಿ: ❌ ಪೊಲೀಸರು ನಿಮ್ಮ WhatsApp ಚಾಟ್‌ಗಳನ್ನು ನೇರವಾಗಿ ನೋಡಲು ಸಾಧ್ಯವಿಲ್ಲ. ⚖️ ಯಾವಾಗ ನೋಡಬಹುದು? ನ್ಯಾಯಾಲಯದ ಆದೇಶ (Court Order) ಇದ್ದರೆ ತನಿಖೆ ನಡೆಯುತ್ತಿರುವ ಕ್ರಿಮಿನಲ್ ಪ್ರಕರಣದಲ್ಲಿ 📜 ಸಂಬಂಧಿತ ಕಾನೂನು Bharatiya Nagarik Suraksha Sanhita (BNSS) Section 94 ಪ್ರಕಾರ: ಪೊಲೀಸ್ ಅಧಿಕಾರಿಗಳು ತನಿಖೆಗೆ ಸಂಬಂಧಿಸಿದ ದಾಖಲೆಗಳು / ಡಿಜಿಟಲ್ ಸಾಧನಗಳನ್ನು (ಮೊಬೈಲ್, ಲ್ಯಾಪ್‌ಟಾಪ್ ಇತ್ಯಾದಿ) ಜಪ್ತಿ (Seize) ಮಾಡಬಹುದು. 🔍 ಆದರೆ ಮುಖ್ಯ ವಿಷಯ ಮೊಬೈಲ್ ಜಪ್ತಿ ಮಾಡಿದರೂ ಚಾಟ್ ಓದಲು ಕಾನೂನು ಪ್ರಕ್ರಿಯೆ ಅಗತ್ಯ. ಕೋರ್ಟ್ ಆದೇಶ ಅಥವಾ ಕಾನೂನುಬದ್ಧ ತನಿಖೆ ಇದ್ದಾಗ ಮಾತ್ರ ಪರಿಶೀಲಿಸಬಹುದು. ⚖️ ನಿಮ್ಮ ಹಕ್ಕು ನಿಮ್ಮ ಖಾಸಗಿ ಮಾಹಿತಿಗೆ (Privacy) ಕಾನೂನು ರಕ್ಷಣೆ ಇದೆ. ಪೊಲೀಸರು ಯಾವುದೇ ಕಾರಣವಿಲ್ಲದೆ ನಿಮ್ಮ ಫೋನ್ ಅಥವಾ ಚಾಟ್ ಪರಿಶೀಲಿಸಲು ಸಾಧ್ಯವಿಲ್ಲ.1
- ವಿಜಯಪುರ: ಕಾಂಗ್ರೆಸ ವಿರುದ್ಧ ಕಿಡಿಕಾರಿದ ಬಿಜೆಪಿವಕ್ತಾರ ಎನ. ಚಂದ್ರಶೇಖರ ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ರಾಜ್ಯ ವಕ್ತಾರ ಎಚ್.ಎನ್. ಚಂದ್ರಶೇಖರ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸ್ವಯಂಘೋಷಿತ ಆರ್ಥಿಕ ತಜ್ಞ ಸಿದ್ದರಾಮಯ್ಯ ಅವರು ರಾಜ್ಯವನ್ನು ಸಾಲದ ಸುಳಿಯಲ್ಲಿ ತಳ್ಳಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕರೇ ಆಕ್ರೋಶಗೊಂಡಿದ್ದಾರೆ ಎಂದರು. ಪಂಚ ಗ್ಯಾರಂಟಿ ಯೋಜನೆಯಲ್ಲಿ ಯುವನಿಧಿ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ ಮತ್ತು ರಾಜ್ಯದಲ್ಲಿ ನಿರುದ್ಯೋಗ ಹೆಚ್ಚಾಗಿದೆ ಎಂದು ಅವರು ಕಿಡಿ ಕಾರಿದರು.1
- ಸಂತಪೂರ ಪೊಲೀಸರ ದಾಳಿ: ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ 38 ಕೆ.ಜಿ ಗಾಂಜಾ ವಶ. #JB_News_Kannada1
- ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ನೀಡಿದ್ದ ರಾಯಚೂರು ಬಂದ್ ಕರೆ ಬಹುತೇಕ ಯಶಸ್ವಿಯಾಗಿದೆ. ನಗರದ ತೀನ್ ಕಂದಿಲ್ ಬಳಿ ಹೋರಾಟಗಾರರು ಬುಧವಾರ 12 ಗಂಟೆಗೆ ಟಯರ್‌ಗೆ ಬೆಂಕಿ ಹಚ್ಚಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಒಳ ಮೀಸಲಾತಿ ಐಕ್ಯ ಹೋರಾಟ ಸಮಿತಿ ಜಿಲ್ಲಾ ಘಟಕ ಬಂದ್‌ಗೆ ಕರೆ ನೀಡಿತ್ತು. ನಗರದಾದ್ಯಂತ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು ರಸ್ತೆಗಳು ಬಹುತೇಕ ಖಾಲಿಯಾಗಿದ್ದವು. ಕೆಲ ಖಾಸಗಿ ಶಾಲೆಗಳು ರಜೆ ಘೋಷಿಸಿವೆ. ರಾಯಚೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲೂ ಪ್ರತಿಭಟನೆ ನಡೆಯುತ್ತಿದೆ.1