logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

*ಸಮ ಸಮಾಜ ನಿರ್ಮಾಣಕ್ಕೆ ನಾರಾಯಣ ಗುರು ಗಳ ಆದರ್ಶ ಪಾಲನೆ ಅಗತ್ಯ ಬಿ.ಪಿ. ಪ್ರಕಾಶ್* ಮಂಡ್ಯ- ಸಮ ಸಮಾಜ ನಿರ್ಮಾಣಕ್ಕೆ ಪಣತೊಟ್ಟ ಮಹನೀಯರಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸಾಧನೆ ಅಪಾರವಾಗಿದೆ. ಅವರ ಆದರ್ಶ, ತತ್ವ ಹಾಗೂ ಸಮಾಜ ಸುಧಾರಣೆಯ ಚಿಂತನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಪಿ. ಪ್ರಕಾಶ್ ರವರು ಹೇಳಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಆರ್ಯ ಈಡಿಗರ ಸಂಘದ ವತಿಯಿಂದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಹಾಗೂ ನಾರಾಯಣಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಸಮಾನತೆ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ನಾರಾಯಣಗುರುಗಳು ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಸಮಾಜ ಸುಧಾರಣೆಯ ಆಶಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಕರ್ನಾಟಕ ರಾಜ್ಯ ಪ್ರದೇಶ ಆರ್ಯ ಈಡಿಗರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಸೌಮ್ಯ ಶ್ರೀನಿವಾಸ್ ಉಪನ್ಯಾಸ ನೀಡಿ, ಬ್ರಹ್ಮಶ್ರೀ ನಾರಾಯಣಗುರುಗಳ ಜೀವನ, ಜನನ ಹಾಗೂ ಸಮಾಜ ಸುಧಾರಣಾ ಕಾರ್ಯಗಳ ಕುರಿತು ವಿವರಿಸಿದರು. ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಅಪ್ಪಾಜಿಗೌಡ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ಸಂಘದ ವತಿಯಿಂದ ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಂಗವಾಗಿ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿದ ಗಣ್ಯರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ವಿ. ನಂದೀಶ್, ನಗರಸಭೆ ಮಾಜಿ ಉಪಾಧ್ಯಕ್ಷರಾದ ಎಂ.ಪಿ. ಅರುಣ್ ಕುಮಾರ್, ಜಿಲ್ಲಾ ಆರ್ಯ ಈಡಿಗರ ಸಂಘದ ಉಪಾಧ್ಯಕ್ಷರಾದ ದಾಸೇಗೌಡ, ರಾಜಕುಮಾರ, ಅಮ್ಜದ್ ಪಾಶ, ಮಹದೇವು, ಶ್ರೀನಿವಾಸ್, ಸತ್ಯರಾಜು ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

3 hrs ago
user_Arunprasad G B
Arunprasad G B
Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
3 hrs ago

*ಸಮ ಸಮಾಜ ನಿರ್ಮಾಣಕ್ಕೆ ನಾರಾಯಣ ಗುರು ಗಳ ಆದರ್ಶ ಪಾಲನೆ ಅಗತ್ಯ ಬಿ.ಪಿ. ಪ್ರಕಾಶ್* ಮಂಡ್ಯ- ಸಮ ಸಮಾಜ ನಿರ್ಮಾಣಕ್ಕೆ ಪಣತೊಟ್ಟ ಮಹನೀಯರಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸಾಧನೆ ಅಪಾರವಾಗಿದೆ. ಅವರ ಆದರ್ಶ, ತತ್ವ ಹಾಗೂ ಸಮಾಜ ಸುಧಾರಣೆಯ ಚಿಂತನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಪಿ. ಪ್ರಕಾಶ್ ರವರು ಹೇಳಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಆರ್ಯ ಈಡಿಗರ ಸಂಘದ ವತಿಯಿಂದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಹಾಗೂ ನಾರಾಯಣಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಸಮಾನತೆ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ನಾರಾಯಣಗುರುಗಳು ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಸಮಾಜ ಸುಧಾರಣೆಯ ಆಶಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಕರ್ನಾಟಕ ರಾಜ್ಯ ಪ್ರದೇಶ ಆರ್ಯ ಈಡಿಗರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಸೌಮ್ಯ ಶ್ರೀನಿವಾಸ್ ಉಪನ್ಯಾಸ ನೀಡಿ, ಬ್ರಹ್ಮಶ್ರೀ ನಾರಾಯಣಗುರುಗಳ ಜೀವನ, ಜನನ ಹಾಗೂ ಸಮಾಜ ಸುಧಾರಣಾ ಕಾರ್ಯಗಳ ಕುರಿತು ವಿವರಿಸಿದರು. ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಅಪ್ಪಾಜಿಗೌಡ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ಸಂಘದ ವತಿಯಿಂದ ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಂಗವಾಗಿ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿದ ಗಣ್ಯರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ವಿ. ನಂದೀಶ್, ನಗರಸಭೆ ಮಾಜಿ ಉಪಾಧ್ಯಕ್ಷರಾದ ಎಂ.ಪಿ. ಅರುಣ್ ಕುಮಾರ್, ಜಿಲ್ಲಾ ಆರ್ಯ ಈಡಿಗರ ಸಂಘದ ಉಪಾಧ್ಯಕ್ಷರಾದ ದಾಸೇಗೌಡ, ರಾಜಕುಮಾರ, ಅಮ್ಜದ್ ಪಾಶ, ಮಹದೇವು, ಶ್ರೀನಿವಾಸ್, ಸತ್ಯರಾಜು ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • *"ನೀರಾವರಿ ಯೋಜನೆಗಳಿಗೆ ವೇಗ ನೀಡಿ - ಭೂಸ್ವಾಧೀನ ವ್ಯಾಜ್ಯ ಇತ್ಯರ್ಥಕ್ಕೆ ಮಧ್ಯಸ್ಥಿಕೆ ಮೊರೆ"* *"ಕೆರೆಗಳಿಗೆ ನೀರು ತುಂಬಿಸಿ, ಅಂತರಜಲ ಹೆಚ್ಚಿಸಿ: ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಖಡಕ್ ಸೂಚನೆ"* *ಬೆಂಗಳೂರು, ಆ, 28:* ರಾಜ್ಯದ ಜಲಸಂಪನ್ಮೂಲ ಯೋಜನೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ *ಎನ್. ಚಲುವರಾಯಸ್ವಾಮಿ* ಇಂದು ವಿಧಾನಸೌಧದ 3ನೇ ಮಹಡಿಯಲ್ಲಿ *ನಾಲ್ಕು ನಿಗಮಗಳ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆ* ನಡೆಸಿದರು. ಕೃಷ್ಣಾ, ಕಾವೇರಿ, ವಿಶ್ವೇಶ್ವರಯ್ಯ ಹಾಗೂ ಕರ್ನಾಟಕ ನೀರಾವರಿ ನಿಗಮಗಳ ಭೌತಿಕ ಮತ್ತು ಆರ್ಥಿಕ ಪ್ರಗತಿಯನ್ನು ಸುದೀರ್ಘವಾಗಿ ಪರಾಮರ್ಶಿಸಿದ ಸಚಿವರು, ಬಾಕಿ ಯೋಜನೆಗಳಿಗೆ ವೇಗ ನೀಡಲು ಕಟ್ಟುನಿಟ್ಟಿನ ಸೂಚನೆ ನೀಡಿದರು. *ಕೆರೆಗಳ ಭರ್ತಿಗೆ ಆದ್ಯತೆ:* ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೀರನ್ನು ಪಂಪ್ ಮಾಡಿ ಕೆರೆ-ಕಟ್ಟೆಗಳನ್ನು ತುಂಬಿಸಬೇಕು. ಅಂತರಜಲ ಹೆಚ್ಚಳಕ್ಕೆ ಸಾಂಪ್ರದಾಯಿಕ ವಿಧಾನದ ಜೊತೆಗೆ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು. ಯುಕೆಪಿ-3 ವಿವಾದಗಳಿಗೆ 'ಮಧ್ಯಸ್ಥಿಕೆ' ಮದ್ದು:* ಕೃಷ್ಣಾ ಮೇಲ್ದಂಡೆ ಯೋಜನೆ (UKP-3) ಹಂತ 1 ಮತ್ತು 2ರಲ್ಲಿ 20 ವರ್ಷಗಳ ಹಿಂದಿನ ಸುಮಾರು *1500 ಭೂಸ್ವಾಧೀನ ಪ್ರಕರಣಗಳು* ನ್ಯಾಯಾಲಯದಲ್ಲಿ ಬಾಕಿ ಇವೆ. ಇವುಗಳನ್ನು *'ಮಧ್ಯಸ್ಥಿಕೆ' (Mediation) ಮೂಲಕ* ತ್ವರಿತವಾಗಿ ಇತ್ಯರ್ಥಪಡಿಸಿ 9 ಉಪ-ಯೋಜನೆಗಳ ಭೂಸ್ವಾಧೀನ ಚುರುಕುಗೊಳಿಸುವಂತೆ ತಾಕೀತು ಮಾಡಿದರು. ಇತ್ತೀಚೆಗೆ ಸಚಿವ ಸಂಪುಟ ಘೋಷಿಸಿರುವ ಪರಿಹಾರದ ಹಣ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ದೇಶಿಸಿದರು. *ಮೇಕೆದಾಟು ಯೋಜನೆ:* 67 ಟಿಎಂಸಿ ಸಾಮರ್ಥ್ಯದ ಪರಿಷ್ಕೃತ ಡಿಪಿಆರ್ ಅನ್ನು ಆಗಸ್ಟ್ 13ರಂದು ಕೇಂದ್ರಕ್ಕೆ ಕಳುಹಿಸಲಾಗಿದೆ. ಡ್ಯಾಂ ಸುತ್ತಲೂ ನೀರಾವರಿ ಪ್ರದೇಶವಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ತಮಿಳುನಾಡಿನ ಅನುಮಾನಗಳಿಗೆ ತಾರ್ಕಿಕ ಅಂತ್ಯ ಹಾಡಲಾಗಿದೆ. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಲು ಸೂಚನೆ. *ಮಹದಾಯಿ (ಕಳಸಾ-ಬಂಡೂರಿ):* ಜಲವಿವಾದ ನ್ಯಾಯಾಧಿಕರಣ ಅಂತಿಮ ತೀರ್ಪು ನೀಡಿದ್ದು, ಕೇಂದ್ರ ಜಲ ಆಯೋಗ (CWC) ಪರಿಷ್ಕೃತ ಡಿಪಿಆರ್‌ಗೆ ಅನುಮತಿ ನೀಡಿದೆ. ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ಪ್ರಕರಣ ಇಲ್ಲದಿದ್ದರೂ ಅರಣ್ಯ ಇಲಾಖೆ ಪ್ರಕರಣದ ಬಗ್ಗೆ ಪ್ರಸ್ತಾಪಿಸುತ್ತಿದೆ. ಹೀಗಾಗಿ ಅರಣ್ಯ ಇಲಾಖೆಗೆ ಪತ್ರ ಬರೆದು ವಾಸ್ತವ ತಿಳಿಸಿ, *ನ್ಯಾಷನಲ್ ಬೋರ್ಡ್ ಫಾರ್ ವೈಲ್ಡ್ ಲೈಫ್ (NBWL) ಕ್ಲಿಯರೆನ್ಸ್* ಚುರುಕುಗೊಳಿಸಲು ಸೂಚನೆ. *ಎತ್ತಿನಹೊಳೆ ಯೋಜನೆ:* 256 ಕಿ.ಮೀ ಉದ್ದದ ಗುರುತ್ವಾಕರ್ಷಣಾ ಕಾಲುವೆಯಲ್ಲಿ ಈಗಾಗಲೇ 40 ಕಿ.ಮೀ ವರೆಗೆ ನೀರು ಹರಿದಿದೆ. ಮೊದಲ ಹಂತದಲ್ಲಿ 111 ಹೆಕ್ಟೇರ್ ಅರಣ್ಯ ಬಳಕೆಗೆ ಕೇಂದ್ರದ ಒಪ್ಪಿಗೆ ಸಿಕ್ಕಿದ್ದು, ಸಣ್ಣಪುಟ್ಟ ಸಮಸ್ಯೆ ಬಗೆಹರಿಸಲು ಹಾಸನ ಜಿಲ್ಲಾಧಿಕಾರಿಗೆ ಸೂಚನೆ. *ಭದ್ರಾ ಮೇಲ್ದಂಡೆ:* 2023-24ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ *5,300 ಕೋಟಿ ರೂ. ನೆರವು* ಇನ್ನೂ ಬಿಡುಗಡೆಯಾಗದ ಬಗ್ಗೆ ಸಭೆಯಲ್ಲಿ ಕಳವಳ ವ್ಯಕ್ತ. *ತುಂಗಭದ್ರಾ ಡ್ಯಾಂ:* ಎಲ್ಲಾ ಗೇಟ್‌ಗಳನ್ನು ಹೊಸದಾಗಿ ಅಳವಡಿಸಲಾಗಿದ್ದು, ನವಲಿ ಸಮತೋಲನಾ ಜಲಾಶಯ ನಿರ್ಮಾಣದ ಬಗ್ಗೆಯೂ ಪ್ರಸ್ತಾಪ. *ಆರ್ಥಿಕ ಸಮಸ್ಯೆಗಳಿಗೆ ಸಿಎಂ ಜೊತೆ ಚರ್ಚೆ:* ಇಲಾಖೆಯ ಬಾಕಿ ಬಿಲ್‌ಗಳ ಪಾವತಿ ಮತ್ತು ಆರ್ಥಿಕ ಸಮಸ್ಯೆಗಳ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಪ್ರತ್ಯೇಕ ಸಭೆಯಲ್ಲಿ ಪರಿಹಾರ ಕಂಡುಕೊಳ್ಳುವುದಾಗಿ ಸಚಿವರು ಭರವಸೆ ನೀಡಿದರು. ಪ್ರಸ್ತುತ ಇಲಾಖೆಯಲ್ಲಿ *16,000 ಕೋಟಿ ರೂ. ಮೊತ್ತದ ಹೊಸ ಯೋಜನೆಗಳು* ಪ್ರಗತಿಯಲ್ಲಿವೆ. ವಿಶ್ವಬ್ಯಾಂಕ್ ನೆರವಿನ DRIP ಮತ್ತು ಜಲಶಕ್ತಿ ಸಚಿವಾಲಯದ M-CADWM ಯೋಜನೆಗಳ ಕುರಿತೂ ಪರಾಮರ್ಶೆ ನಡೆಯಿತು. ರಾಜ್ಯದಲ್ಲಿ 140.60 ಲಕ್ಷ ಹೆಕ್ಟೇರ್ ಬೇಸಾಯ ಯೋಗ್ಯ ಭೂಮಿ ಇದ್ದು, 107 ಲಕ್ಷ ಹೆಕ್ಟೇರ್ ಬಿತ್ತನೆ ಕ್ಷೇತ್ರದಲ್ಲಿ ಬೃಹತ್ ನೀರಾವರಿ ಯೋಜನೆಯಡಿ 42 ಲಕ್ಷ ಹೆಕ್ಟೇರ್ ಪ್ರದೇಶವನ್ನು ತರಲಾಗಿದೆ. ಸಭೆಯಲ್ಲಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ *ಗೌರವ್ ಗುಪ್ತ* ಸೇರಿದಂತೆ ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
    1
    *"ನೀರಾವರಿ ಯೋಜನೆಗಳಿಗೆ ವೇಗ ನೀಡಿ - ಭೂಸ್ವಾಧೀನ ವ್ಯಾಜ್ಯ ಇತ್ಯರ್ಥಕ್ಕೆ ಮಧ್ಯಸ್ಥಿಕೆ ಮೊರೆ"*
*"ಕೆರೆಗಳಿಗೆ ನೀರು ತುಂಬಿಸಿ, ಅಂತರಜಲ ಹೆಚ್ಚಿಸಿ: ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಖಡಕ್ ಸೂಚನೆ"*
*ಬೆಂಗಳೂರು, ಆ, 28:*
ರಾಜ್ಯದ ಜಲಸಂಪನ್ಮೂಲ ಯೋಜನೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ *ಎನ್. ಚಲುವರಾಯಸ್ವಾಮಿ* ಇಂದು ವಿಧಾನಸೌಧದ 3ನೇ ಮಹಡಿಯಲ್ಲಿ *ನಾಲ್ಕು ನಿಗಮಗಳ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆ* ನಡೆಸಿದರು.
ಕೃಷ್ಣಾ, ಕಾವೇರಿ, ವಿಶ್ವೇಶ್ವರಯ್ಯ ಹಾಗೂ ಕರ್ನಾಟಕ ನೀರಾವರಿ ನಿಗಮಗಳ ಭೌತಿಕ ಮತ್ತು ಆರ್ಥಿಕ ಪ್ರಗತಿಯನ್ನು ಸುದೀರ್ಘವಾಗಿ ಪರಾಮರ್ಶಿಸಿದ ಸಚಿವರು, ಬಾಕಿ ಯೋಜನೆಗಳಿಗೆ ವೇಗ ನೀಡಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
*ಕೆರೆಗಳ ಭರ್ತಿಗೆ ಆದ್ಯತೆ:*
ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೀರನ್ನು ಪಂಪ್ ಮಾಡಿ ಕೆರೆ-ಕಟ್ಟೆಗಳನ್ನು ತುಂಬಿಸಬೇಕು. ಅಂತರಜಲ ಹೆಚ್ಚಳಕ್ಕೆ ಸಾಂಪ್ರದಾಯಿಕ ವಿಧಾನದ ಜೊತೆಗೆ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.
ಯುಕೆಪಿ-3 ವಿವಾದಗಳಿಗೆ 'ಮಧ್ಯಸ್ಥಿಕೆ' ಮದ್ದು:*
ಕೃಷ್ಣಾ ಮೇಲ್ದಂಡೆ ಯೋಜನೆ (UKP-3) ಹಂತ 1 ಮತ್ತು 2ರಲ್ಲಿ 20 ವರ್ಷಗಳ ಹಿಂದಿನ ಸುಮಾರು *1500 ಭೂಸ್ವಾಧೀನ ಪ್ರಕರಣಗಳು* ನ್ಯಾಯಾಲಯದಲ್ಲಿ ಬಾಕಿ ಇವೆ. ಇವುಗಳನ್ನು *'ಮಧ್ಯಸ್ಥಿಕೆ' (Mediation) ಮೂಲಕ* ತ್ವರಿತವಾಗಿ ಇತ್ಯರ್ಥಪಡಿಸಿ 9 ಉಪ-ಯೋಜನೆಗಳ ಭೂಸ್ವಾಧೀನ ಚುರುಕುಗೊಳಿಸುವಂತೆ ತಾಕೀತು ಮಾಡಿದರು. ಇತ್ತೀಚೆಗೆ ಸಚಿವ ಸಂಪುಟ ಘೋಷಿಸಿರುವ ಪರಿಹಾರದ ಹಣ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ದೇಶಿಸಿದರು.
*ಮೇಕೆದಾಟು ಯೋಜನೆ:* 67 ಟಿಎಂಸಿ ಸಾಮರ್ಥ್ಯದ ಪರಿಷ್ಕೃತ ಡಿಪಿಆರ್ ಅನ್ನು ಆಗಸ್ಟ್ 13ರಂದು ಕೇಂದ್ರಕ್ಕೆ ಕಳುಹಿಸಲಾಗಿದೆ. ಡ್ಯಾಂ ಸುತ್ತಲೂ ನೀರಾವರಿ ಪ್ರದೇಶವಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ತಮಿಳುನಾಡಿನ ಅನುಮಾನಗಳಿಗೆ ತಾರ್ಕಿಕ ಅಂತ್ಯ ಹಾಡಲಾಗಿದೆ. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಲು ಸೂಚನೆ.
*ಮಹದಾಯಿ (ಕಳಸಾ-ಬಂಡೂರಿ):* ಜಲವಿವಾದ ನ್ಯಾಯಾಧಿಕರಣ ಅಂತಿಮ ತೀರ್ಪು ನೀಡಿದ್ದು, ಕೇಂದ್ರ ಜಲ ಆಯೋಗ (CWC) ಪರಿಷ್ಕೃತ ಡಿಪಿಆರ್‌ಗೆ ಅನುಮತಿ ನೀಡಿದೆ. ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ಪ್ರಕರಣ ಇಲ್ಲದಿದ್ದರೂ ಅರಣ್ಯ ಇಲಾಖೆ ಪ್ರಕರಣದ ಬಗ್ಗೆ ಪ್ರಸ್ತಾಪಿಸುತ್ತಿದೆ. ಹೀಗಾಗಿ ಅರಣ್ಯ ಇಲಾಖೆಗೆ ಪತ್ರ ಬರೆದು ವಾಸ್ತವ ತಿಳಿಸಿ, *ನ್ಯಾಷನಲ್ ಬೋರ್ಡ್ ಫಾರ್ ವೈಲ್ಡ್ ಲೈಫ್ (NBWL) ಕ್ಲಿಯರೆನ್ಸ್* ಚುರುಕುಗೊಳಿಸಲು ಸೂಚನೆ.
*ಎತ್ತಿನಹೊಳೆ ಯೋಜನೆ:* 256 ಕಿ.ಮೀ ಉದ್ದದ ಗುರುತ್ವಾಕರ್ಷಣಾ ಕಾಲುವೆಯಲ್ಲಿ ಈಗಾಗಲೇ 40 ಕಿ.ಮೀ ವರೆಗೆ ನೀರು ಹರಿದಿದೆ. ಮೊದಲ ಹಂತದಲ್ಲಿ 111 ಹೆಕ್ಟೇರ್ ಅರಣ್ಯ ಬಳಕೆಗೆ ಕೇಂದ್ರದ ಒಪ್ಪಿಗೆ ಸಿಕ್ಕಿದ್ದು, ಸಣ್ಣಪುಟ್ಟ ಸಮಸ್ಯೆ ಬಗೆಹರಿಸಲು ಹಾಸನ ಜಿಲ್ಲಾಧಿಕಾರಿಗೆ ಸೂಚನೆ.
*ಭದ್ರಾ ಮೇಲ್ದಂಡೆ:* 2023-24ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ *5,300 ಕೋಟಿ ರೂ. ನೆರವು* ಇನ್ನೂ ಬಿಡುಗಡೆಯಾಗದ ಬಗ್ಗೆ ಸಭೆಯಲ್ಲಿ ಕಳವಳ ವ್ಯಕ್ತ.
*ತುಂಗಭದ್ರಾ ಡ್ಯಾಂ:* ಎಲ್ಲಾ ಗೇಟ್‌ಗಳನ್ನು ಹೊಸದಾಗಿ ಅಳವಡಿಸಲಾಗಿದ್ದು, ನವಲಿ ಸಮತೋಲನಾ ಜಲಾಶಯ ನಿರ್ಮಾಣದ ಬಗ್ಗೆಯೂ ಪ್ರಸ್ತಾಪ.
*ಆರ್ಥಿಕ ಸಮಸ್ಯೆಗಳಿಗೆ ಸಿಎಂ ಜೊತೆ ಚರ್ಚೆ:*
ಇಲಾಖೆಯ ಬಾಕಿ ಬಿಲ್‌ಗಳ ಪಾವತಿ ಮತ್ತು ಆರ್ಥಿಕ ಸಮಸ್ಯೆಗಳ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಪ್ರತ್ಯೇಕ ಸಭೆಯಲ್ಲಿ ಪರಿಹಾರ ಕಂಡುಕೊಳ್ಳುವುದಾಗಿ ಸಚಿವರು ಭರವಸೆ ನೀಡಿದರು. ಪ್ರಸ್ತುತ ಇಲಾಖೆಯಲ್ಲಿ *16,000 ಕೋಟಿ ರೂ. ಮೊತ್ತದ ಹೊಸ ಯೋಜನೆಗಳು* ಪ್ರಗತಿಯಲ್ಲಿವೆ. ವಿಶ್ವಬ್ಯಾಂಕ್ ನೆರವಿನ DRIP ಮತ್ತು ಜಲಶಕ್ತಿ ಸಚಿವಾಲಯದ M-CADWM ಯೋಜನೆಗಳ ಕುರಿತೂ ಪರಾಮರ್ಶೆ ನಡೆಯಿತು.
ರಾಜ್ಯದಲ್ಲಿ 140.60 ಲಕ್ಷ ಹೆಕ್ಟೇರ್ ಬೇಸಾಯ ಯೋಗ್ಯ ಭೂಮಿ ಇದ್ದು, 107 ಲಕ್ಷ ಹೆಕ್ಟೇರ್ ಬಿತ್ತನೆ ಕ್ಷೇತ್ರದಲ್ಲಿ ಬೃಹತ್ ನೀರಾವರಿ ಯೋಜನೆಯಡಿ 42 ಲಕ್ಷ ಹೆಕ್ಟೇರ್ ಪ್ರದೇಶವನ್ನು ತರಲಾಗಿದೆ.
ಸಭೆಯಲ್ಲಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ *ಗೌರವ್ ಗುಪ್ತ* ಸೇರಿದಂತೆ ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    48 min ago
  • ಮಳವಳ್ಳಿ ತಾಲೂಕು ನಲ್ಲಿ ಅಕ್ರಮ ಮಣ್ಣು ದಂದೆ ಮಳವಳ್ಳಿ : ಮಳವಳ್ಳಿ ತಾಲೂಕಿನಲ್ಲಿ ಮಣ್ಣಿನ ದಂಧೆ ಅಕ್ರಮವಾಗಿ ನಡೆಯುತ್ತಿದ್ದು ಕೆಲ ಗ್ರಾಮಗಳಲ್ಲಿ ಅವೇರಳ್ಳಿ ಹೆಬ್ಬಣಿ ಮುಂತಾದ ಗ್ರಾಮಗಳಲ್ಲಿ ಮಣ್ಣಿನ ದಂಧೆ ಸಾಗುತ್ತಿದೆ ಇದಕ್ಕೆ ಗ್ರಾಮಸ್ಥರ ಆಕ್ರೋಶ ಹಾಗೂ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿ ಇದಕ್ಕೆ ಸೂಕ್ತವಾದ ಕಾನೂನಿ ಕ್ರಮವನ್ನು ಜರಗಿಸಬೇಕು ಎಂದು ತಹಸಿಲ್ದಾರ್ ಜಿಲ್ಲಾ ಕಚೇರಿ ನಲ್ಲಿ ಮನವಿ ಮಾಡಲು ತೀರ್ಮಾನಿಸಿದ್ದಾರೆ
    1
    ಮಳವಳ್ಳಿ ತಾಲೂಕು ನಲ್ಲಿ ಅಕ್ರಮ ಮಣ್ಣು ದಂದೆ 
ಮಳವಳ್ಳಿ : ಮಳವಳ್ಳಿ ತಾಲೂಕಿನಲ್ಲಿ ಮಣ್ಣಿನ ದಂಧೆ ಅಕ್ರಮವಾಗಿ ನಡೆಯುತ್ತಿದ್ದು ಕೆಲ ಗ್ರಾಮಗಳಲ್ಲಿ ಅವೇರಳ್ಳಿ ಹೆಬ್ಬಣಿ ಮುಂತಾದ ಗ್ರಾಮಗಳಲ್ಲಿ ಮಣ್ಣಿನ ದಂಧೆ ಸಾಗುತ್ತಿದೆ ಇದಕ್ಕೆ ಗ್ರಾಮಸ್ಥರ ಆಕ್ರೋಶ ಹಾಗೂ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿ ಇದಕ್ಕೆ ಸೂಕ್ತವಾದ ಕಾನೂನಿ ಕ್ರಮವನ್ನು ಜರಗಿಸಬೇಕು ಎಂದು ತಹಸಿಲ್ದಾರ್ ಜಿಲ್ಲಾ ಕಚೇರಿ ನಲ್ಲಿ ಮನವಿ ಮಾಡಲು ತೀರ್ಮಾನಿಸಿದ್ದಾರೆ
    user_ಎ.ಏನ್.ಎಸ್ ನ್ಯೂಸ್
    ಎ.ಏನ್.ಎಸ್ ನ್ಯೂಸ್
    ರಾಜಕೀಯ ಪಕ್ಷದ ಕಚೇರಿ ಮಳವಳ್ಳಿ, ಮಂಡ್ಯ, ಕರ್ನಾಟಕ•
    9 min ago
  • ಯೋಗಾಭ್ಯಾಸ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ: ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ ಮಳವಳ್ಳಿ: ಬೆಳದಿಂಗಳಲ್ಲಿ ಶರಣರ ಚಿಂತನ‌ಮಂಥನ ಸಮಿತಿ ವತಿಯಿಂದ ಹುಣ್ಣಿಮೆ ಪ್ರಯುಕ್ತ 142 ನೇ ಚಿಂತನ ಮಂಥನ ಕಾರ್ಯಕ್ರಮ ಮಳವಳ್ಳಿ ಪಟ್ಟಣದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಪೂರಿಗಾಲಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ ಉದ್ಘಾಟಿಸಿ ಮಾತನಾಡಿ,ಪ್ರತಿ ದಿನ ಮನೆಯಲ್ಲಿ ಯೋಗಾಭ್ಯಾಸದಿಂದ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ ಎಂದರು. ಇದೇ ವೇಳೆ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಯೋಗಾಸನ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕಿ ಶಶಿಕಲಾ, ಯೋಗ ಶಿಕ್ಷಕ ಶ್ರೀನಿಧಿ, ಚಿಂತನ ಮಂಥನ ಸಮಿತಿ ಮಲ್ಲೇಶ್, ನಾಗರಾಜು, ಪರಶಿವಮೂರ್ತಿ,ನಟರಾಜಮೂರ್ತಿ ಸೇರಿದಂತೆ ಹಲವರು ಇದ್ದರು.
    1
    ಯೋಗಾಭ್ಯಾಸ ಮಾಡಿ  ಆರೋಗ್ಯ ಕಾಪಾಡಿಕೊಳ್ಳಿ: ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ
ಮಳವಳ್ಳಿ:  ಬೆಳದಿಂಗಳಲ್ಲಿ  ಶರಣರ ಚಿಂತನ‌ಮಂಥನ ಸಮಿತಿ ವತಿಯಿಂದ ಹುಣ್ಣಿಮೆ ಪ್ರಯುಕ್ತ  142 ನೇ ಚಿಂತನ ಮಂಥನ ಕಾರ್ಯಕ್ರಮ ಮಳವಳ್ಳಿ ಪಟ್ಟಣದ ಶ್ರೀ ಬಸವೇಶ್ವರ  ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು  ಪೂರಿಗಾಲಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ ಉದ್ಘಾಟಿಸಿ ಮಾತನಾಡಿ,ಪ್ರತಿ ದಿನ  ಮನೆಯಲ್ಲಿ ಯೋಗಾಭ್ಯಾಸದಿಂದ ಮಾಡಿ  ಆರೋಗ್ಯ ಕಾಪಾಡಿಕೊಳ್ಳಿ ಎಂದರು.
ಇದೇ ವೇಳೆ  ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಯೋಗಾಸನ  ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ  ಯೋಗ ಶಿಕ್ಷಕಿ ಶಶಿಕಲಾ, ಯೋಗ ಶಿಕ್ಷಕ ಶ್ರೀನಿಧಿ, ಚಿಂತನ ಮಂಥನ ಸಮಿತಿ ಮಲ್ಲೇಶ್, ನಾಗರಾಜು, ಪರಶಿವಮೂರ್ತಿ,ನಟರಾಜಮೂರ್ತಿ  ಸೇರಿದಂತೆ ಹಲವರು ಇದ್ದರು.
    user_ಸುಮಿತ್ರ‌ ಹೆಚ್‌ ಪಿ
    ಸುಮಿತ್ರ‌ ಹೆಚ್‌ ಪಿ
    ವರದಿಗಾರರು ಮಳವಳ್ಳಿ, ಮಂಡ್ಯ, ಕರ್ನಾಟಕ•
    14 min ago
  • ದೇಶದ ನಂಬರ್ ಒನ್ ವಿಐ Vi ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ ದೇಶದ ನಂಬರ್ ಒನ್ ಬಿ ಐ ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ ರೂ 325 ರಿಚಾರ್ಜ್ ಮಾಡಿಸಿದರೆ ಅನ್ಲಿಮಿಟೆಡ್ ಡಾಟಾ ಅನ್ಲಿಮಿಟೆಡ್ ಕರೆ 100 ಎಸ್ ಎಮ್ ಎಸ್ ಇಂದೇ ವಿಐ ಗ್ರಹಕರಾಗಿ ಕೊಡುಗೆ ತಮ್ಮದಾಗಿಸಿಕೊಳ್ಳಿ ವಿತರಕರ ವಿಶೇಷ ಪ್ರಕಟಣೆ
    1
    ದೇಶದ ನಂಬರ್ ಒನ್ ವಿಐ Vi ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ
ದೇಶದ ನಂಬರ್ ಒನ್ ಬಿ ಐ ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ ರೂ 325 ರಿಚಾರ್ಜ್ ಮಾಡಿಸಿದರೆ ಅನ್ಲಿಮಿಟೆಡ್ ಡಾಟಾ ಅನ್ಲಿಮಿಟೆಡ್ ಕರೆ 100 ಎಸ್ ಎಮ್ ಎಸ್ ಇಂದೇ ವಿಐ ಗ್ರಹಕರಾಗಿ ಕೊಡುಗೆ ತಮ್ಮದಾಗಿಸಿಕೊಳ್ಳಿ ವಿತರಕರ ವಿಶೇಷ ಪ್ರಕಟಣೆ
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    21 hrs ago
  • ಮೈಸೂರು : ಅರಣ್ಯ ಭವನದಲ್ಲಿ ನಮ್ಮ ದಸರಾ‌ ಗಜಪಡೆ ಭರ್ಜರಿ ರಿಲ್ಯಾಕ್ಸ್ ನಾಡಹಬ್ಬ ದಸರಾ 2026 ಹಿನ್ನಲೆ ಮೈಸೂರಿಗೆ ಆಗಮಿಸಿದ ಗಜಪಡೆ ಅರಣ್ಯ ಭವನದಲ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿದೆ.ಮೊದಲ ಹಂತದಲ್ಲಿ ಬಂದಿರುವ 9 ಆನೆಗಳ ತಂಡ ಅರಣ್ಯ ಭವನದಲ್ಲಿ ಬೀಡು ಬಿಟ್ಟಿವೆ. ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ವತಿಯಿಂದ ಆನೆಗಳನ್ನ ಸಂಪ್ರದಾಯವಾಗಿ ಸ್ವಾಗತಿಸಲಾಗುತ್ತದೆ. ಅಕ್ಟೋಬರ್ 21 ರಂದು ನಡೆಯಲಿರುವ ಜಂಬೂಸವಾರಿಗೆ ಗಜಪಡೆ ಸಜ್ಜಾಗಲಿದೆ...
    1
    ಮೈಸೂರು : ಅರಣ್ಯ ಭವನದಲ್ಲಿ ನಮ್ಮ  ದಸರಾ‌ ಗಜಪಡೆ ಭರ್ಜರಿ  ರಿಲ್ಯಾಕ್ಸ್
ನಾಡಹಬ್ಬ ದಸರಾ 2026 ಹಿನ್ನಲೆ ಮೈಸೂರಿಗೆ ಆಗಮಿಸಿದ ಗಜಪಡೆ ಅರಣ್ಯ ಭವನದಲ್ಲಿ ರಿಲ್ಯಾಕ್ಸ್  ಮೂಡ್ ನಲ್ಲಿದೆ.ಮೊದಲ ಹಂತದಲ್ಲಿ ಬಂದಿರುವ 9 ಆನೆಗಳ ತಂಡ ಅರಣ್ಯ ಭವನದಲ್ಲಿ ಬೀಡು ಬಿಟ್ಟಿವೆ. ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ವತಿಯಿಂದ ಆನೆಗಳನ್ನ ಸಂಪ್ರದಾಯವಾಗಿ ಸ್ವಾಗತಿಸಲಾಗುತ್ತದೆ. ಅಕ್ಟೋಬರ್ 21 ರಂದು ನಡೆಯಲಿರುವ ಜಂಬೂಸವಾರಿಗೆ ಗಜಪಡೆ ಸಜ್ಜಾಗಲಿದೆ...
    user_Ashwini
    Ashwini
    ಮೈಸೂರು, ಮೈಸೂರು, ಕರ್ನಾಟಕ•
    5 hrs ago
  • News by dailynews ಶಹೀನ್ ಷಾ ಅಹಮ್ಮದ್ ಬಹಿರಂಗ ಸವಾಲು: ಪೊಲೀಸರಿಗೆ ಬೆದರಿಕೆ ಹಾಕಿದ ಆಡಿಯೋ ಬಿಡುಗಡೆ ಮಾಡಿ ತೋರಿಸಿ! ಸಾಕ್ಷಿ ಎಲ್ಲಿದೆ?: ಪ್ರತಿಯೊಂದನ್ನೂ ರೆಕಾರ್ಡ್ ಮಾಡುವವರು, ಪೊಲೀಸರಿಗೆ ಧಮಕಿ ಹಾಕಿದ ವೀಡಿಯೊ ಅಥವಾ ಆಡಿಯೋ ಸಾಬೀತುಪಡಿಸಲಿ. #tanveersait #viral #mysuru #cmdkshivakumar #viralnews News by dailynews ಶಹೀನ್ ಷಾ ಅಹಮ್ಮದ್ ಬಹಿರಂಗ ಸವಾಲು: ಪೊಲೀಸರಿಗೆ ಬೆದರಿಕೆ ಹಾಕಿದ ಆಡಿಯೋ ಬಿಡುಗಡೆ ಮಾಡಿ ತೋರಿಸಿ! ಸಾಕ್ಷಿ ಎಲ್ಲಿದೆ?: ಪ್ರತಿಯೊಂದನ್ನೂ ರೆಕಾರ್ಡ್ ಮಾಡುವವರು, ಪೊಲೀಸರಿಗೆ ಧಮಕಿ ಹಾಕಿದ ವೀಡಿಯೊ ಅಥವಾ ಆಡಿಯೋ ಸಾಬೀತುಪಡಿಸಲಿ. #tanveersait #viral #mysuru #cmdkshivakumar #viralnews
    1
    News by dailynews 
ಶಹೀನ್ ಷಾ ಅಹಮ್ಮದ್ ಬಹಿರಂಗ ಸವಾಲು: ಪೊಲೀಸರಿಗೆ ಬೆದರಿಕೆ ಹಾಕಿದ ಆಡಿಯೋ ಬಿಡುಗಡೆ ಮಾಡಿ ತೋರಿಸಿ!
ಸಾಕ್ಷಿ ಎಲ್ಲಿದೆ?: ಪ್ರತಿಯೊಂದನ್ನೂ ರೆಕಾರ್ಡ್ ಮಾಡುವವರು, ಪೊಲೀಸರಿಗೆ ಧಮಕಿ ಹಾಕಿದ ವೀಡಿಯೊ ಅಥವಾ ಆಡಿಯೋ ಸಾಬೀತುಪಡಿಸಲಿ.
#tanveersait #viral #mysuru #cmdkshivakumar #viralnews
News by dailynews 
ಶಹೀನ್ ಷಾ ಅಹಮ್ಮದ್ ಬಹಿರಂಗ ಸವಾಲು: ಪೊಲೀಸರಿಗೆ ಬೆದರಿಕೆ ಹಾಕಿದ ಆಡಿಯೋ ಬಿಡುಗಡೆ ಮಾಡಿ ತೋರಿಸಿ!
ಸಾಕ್ಷಿ ಎಲ್ಲಿದೆ?: ಪ್ರತಿಯೊಂದನ್ನೂ ರೆಕಾರ್ಡ್ ಮಾಡುವವರು, ಪೊಲೀಸರಿಗೆ ಧಮಕಿ ಹಾಕಿದ ವೀಡಿಯೊ ಅಥವಾ ಆಡಿಯೋ ಸಾಬೀತುಪಡಿಸಲಿ.
#tanveersait #viral #mysuru #cmdkshivakumar #viralnews
    user_ಸೈಯದ್ ಅತೀಕ್
    ಸೈಯದ್ ಅತೀಕ್
    Furniture Manufacturer ಮೈಸೂರು, ಮೈಸೂರು, ಕರ್ನಾಟಕ•
    10 hrs ago
  • ಹೆಬ್ಬಾಲೆಯಲ್ಲಿ 25 ಲಕ್ಷದಲ್ಲಿ ಪ್ರೇಕ್ಷಕ ಗ್ಯಾಲರಿ ಬನಶಂಕರಿ ಅಮ್ಮನವರ ರಂಗ ಮಂದಿರ ಉದ್ಘಾಟನಾ ಸಮಾರಂಭ. ಕೊಡಗು: ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮದ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮಾರಂಭದಲ್ಲಿ ಇನ್ನುಳಿಕೆ ಆಗಿರುವ ಪ್ರೇಕ್ಷಕ ಗ್ಯಾಲರಿಯನ್ನು 15 ಲಕ್ಷ ರೂ ವೆಚ್ಚದಲ್ಲಿ ಮುಂದಿನ ದಿನಗಳಲ್ಲಿ ವಿಸ್ತರಿಸಿಕೊಡುವುದಾಗಿ ಮಡಿಕೇರಿ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾಕ್ಟರ್ ಮಂತರ್ ಗೌಡ ಭರವಸೆ ನೀಡಿದರು. ತಾಲೂಕಿನ ಹೆಬ್ಬಾಲೆ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಸಕರ ಅನುದಾನದಿಂದ 20 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರೇಕ್ಷಕರ ಗ್ಯಾಲರಿ ಮತ್ತು 5 ಲಕ್ಷದಲ್ಲಿ ಬನಶಂಕರಿ ಅಮ್ಮನವರ ಬಯಲು ರಂಗಮಂದಿರವನ್ನು ಉದ್ಘಾಟಿಸಿ ಮಾತನಾಡಿ ಈ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ಉದ್ಘಾಟನಾ ಸಮಾರಂಭದಲ್ಲಿ ಭರವಸೇನು ನೀಡಿದರು. ಸಮಾರಂಭದಲ್ಲಿ ಗ್ಯಾರಂಟಿ ಯೋಜನಾ ಅಧ್ಯಕ್ಷರಾದ ವಿಪಿ ಶಶಿಧರ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಚಂದ್ರಕಲಾ, ಶಾಲಾ ಅಭಿವೃದ್ಧಿ ಅಧ್ಯಕ್ಷರಾದ ಪ್ರದೀಪ್ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅರುಣ್ ಕುಮಾರಿ, ದಿನೇಶ್, ರಾಜಶೇಖರ್ ಮುಖ್ಯ ಶಿಕ್ಷಕರಾದ ವೆಂಕಟೇಶ್ ಮುಂತಾದ ನಾಯಕರು ಹಾಜರಿದ್ದರು.
    4
    ಹೆಬ್ಬಾಲೆಯಲ್ಲಿ 25 ಲಕ್ಷದಲ್ಲಿ  ಪ್ರೇಕ್ಷಕ ಗ್ಯಾಲರಿ ಬನಶಂಕರಿ ಅಮ್ಮನವರ ರಂಗ ಮಂದಿರ ಉದ್ಘಾಟನಾ ಸಮಾರಂಭ.
ಕೊಡಗು: ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮದ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮಾರಂಭದಲ್ಲಿ ಇನ್ನುಳಿಕೆ ಆಗಿರುವ ಪ್ರೇಕ್ಷಕ ಗ್ಯಾಲರಿಯನ್ನು 15 ಲಕ್ಷ ರೂ ವೆಚ್ಚದಲ್ಲಿ ಮುಂದಿನ ದಿನಗಳಲ್ಲಿ ವಿಸ್ತರಿಸಿಕೊಡುವುದಾಗಿ ಮಡಿಕೇರಿ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾಕ್ಟರ್ ಮಂತರ್ ಗೌಡ ಭರವಸೆ ನೀಡಿದರು. ತಾಲೂಕಿನ ಹೆಬ್ಬಾಲೆ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಸಕರ ಅನುದಾನದಿಂದ 20 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರೇಕ್ಷಕರ ಗ್ಯಾಲರಿ ಮತ್ತು 5 ಲಕ್ಷದಲ್ಲಿ ಬನಶಂಕರಿ ಅಮ್ಮನವರ ಬಯಲು ರಂಗಮಂದಿರವನ್ನು ಉದ್ಘಾಟಿಸಿ ಮಾತನಾಡಿ ಈ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ಉದ್ಘಾಟನಾ ಸಮಾರಂಭದಲ್ಲಿ ಭರವಸೇನು ನೀಡಿದರು. ಸಮಾರಂಭದಲ್ಲಿ ಗ್ಯಾರಂಟಿ ಯೋಜನಾ ಅಧ್ಯಕ್ಷರಾದ ವಿಪಿ ಶಶಿಧರ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಚಂದ್ರಕಲಾ, ಶಾಲಾ ಅಭಿವೃದ್ಧಿ  ಅಧ್ಯಕ್ಷರಾದ ಪ್ರದೀಪ್  ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅರುಣ್ ಕುಮಾರಿ, ದಿನೇಶ್, ರಾಜಶೇಖರ್ ಮುಖ್ಯ ಶಿಕ್ಷಕರಾದ ವೆಂಕಟೇಶ್ ಮುಂತಾದ ನಾಯಕರು ಹಾಜರಿದ್ದರು.
    user_ಹೆಚ ಟಿ ಸತ್ಯನಾರಾಯಣ ಪ್ರಸಾದ್
    ಹೆಚ ಟಿ ಸತ್ಯನಾರಾಯಣ ಪ್ರಸಾದ್
    Teacher ನಂಜನಗೂಡು, ಮೈಸೂರು, ಕರ್ನಾಟಕ•
    1 hr ago
  • *ಸಮ ಸಮಾಜ ನಿರ್ಮಾಣಕ್ಕೆ ನಾರಾಯಣ ಗುರು ಗಳ ಆದರ್ಶ ಪಾಲನೆ ಅಗತ್ಯ ಬಿ.ಪಿ. ಪ್ರಕಾಶ್* ಮಂಡ್ಯ- ಸಮ ಸಮಾಜ ನಿರ್ಮಾಣಕ್ಕೆ ಪಣತೊಟ್ಟ ಮಹನೀಯರಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸಾಧನೆ ಅಪಾರವಾಗಿದೆ. ಅವರ ಆದರ್ಶ, ತತ್ವ ಹಾಗೂ ಸಮಾಜ ಸುಧಾರಣೆಯ ಚಿಂತನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಪಿ. ಪ್ರಕಾಶ್ ರವರು ಹೇಳಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಆರ್ಯ ಈಡಿಗರ ಸಂಘದ ವತಿಯಿಂದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಹಾಗೂ ನಾರಾಯಣಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಸಮಾನತೆ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ನಾರಾಯಣಗುರುಗಳು ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಸಮಾಜ ಸುಧಾರಣೆಯ ಆಶಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಕರ್ನಾಟಕ ರಾಜ್ಯ ಪ್ರದೇಶ ಆರ್ಯ ಈಡಿಗರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಸೌಮ್ಯ ಶ್ರೀನಿವಾಸ್ ಉಪನ್ಯಾಸ ನೀಡಿ, ಬ್ರಹ್ಮಶ್ರೀ ನಾರಾಯಣಗುರುಗಳ ಜೀವನ, ಜನನ ಹಾಗೂ ಸಮಾಜ ಸುಧಾರಣಾ ಕಾರ್ಯಗಳ ಕುರಿತು ವಿವರಿಸಿದರು. ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಅಪ್ಪಾಜಿಗೌಡ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ಸಂಘದ ವತಿಯಿಂದ ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಂಗವಾಗಿ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿದ ಗಣ್ಯರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ವಿ. ನಂದೀಶ್, ನಗರಸಭೆ ಮಾಜಿ ಉಪಾಧ್ಯಕ್ಷರಾದ ಎಂ.ಪಿ. ಅರುಣ್ ಕುಮಾರ್, ಜಿಲ್ಲಾ ಆರ್ಯ ಈಡಿಗರ ಸಂಘದ ಉಪಾಧ್ಯಕ್ಷರಾದ ದಾಸೇಗೌಡ, ರಾಜಕುಮಾರ, ಅಮ್ಜದ್ ಪಾಶ, ಮಹದೇವು, ಶ್ರೀನಿವಾಸ್, ಸತ್ಯರಾಜು ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
    1
    *ಸಮ ಸಮಾಜ ನಿರ್ಮಾಣಕ್ಕೆ ನಾರಾಯಣ ಗುರು ಗಳ ಆದರ್ಶ ಪಾಲನೆ ಅಗತ್ಯ ಬಿ.ಪಿ. ಪ್ರಕಾಶ್*
ಮಂಡ್ಯ- ಸಮ ಸಮಾಜ ನಿರ್ಮಾಣಕ್ಕೆ ಪಣತೊಟ್ಟ ಮಹನೀಯರಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸಾಧನೆ ಅಪಾರವಾಗಿದೆ. ಅವರ ಆದರ್ಶ, ತತ್ವ ಹಾಗೂ ಸಮಾಜ ಸುಧಾರಣೆಯ ಚಿಂತನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಪಿ. ಪ್ರಕಾಶ್ ರವರು ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಆರ್ಯ ಈಡಿಗರ ಸಂಘದ ವತಿಯಿಂದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಹಾಗೂ ನಾರಾಯಣಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಸಮಾನತೆ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ನಾರಾಯಣಗುರುಗಳು ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಸಮಾಜ ಸುಧಾರಣೆಯ ಆಶಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಪ್ರದೇಶ ಆರ್ಯ ಈಡಿಗರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಸೌಮ್ಯ ಶ್ರೀನಿವಾಸ್ ಉಪನ್ಯಾಸ ನೀಡಿ, ಬ್ರಹ್ಮಶ್ರೀ ನಾರಾಯಣಗುರುಗಳ ಜೀವನ, ಜನನ ಹಾಗೂ ಸಮಾಜ ಸುಧಾರಣಾ ಕಾರ್ಯಗಳ ಕುರಿತು ವಿವರಿಸಿದರು.
ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಅಪ್ಪಾಜಿಗೌಡ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ಸಂಘದ ವತಿಯಿಂದ ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿದ ಗಣ್ಯರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ವಿ. ನಂದೀಶ್, ನಗರಸಭೆ ಮಾಜಿ ಉಪಾಧ್ಯಕ್ಷರಾದ ಎಂ.ಪಿ. ಅರುಣ್ ಕುಮಾರ್, ಜಿಲ್ಲಾ ಆರ್ಯ ಈಡಿಗರ ಸಂಘದ ಉಪಾಧ್ಯಕ್ಷರಾದ ದಾಸೇಗೌಡ, ರಾಜಕುಮಾರ, ಅಮ್ಜದ್ ಪಾಶ, ಮಹದೇವು, ಶ್ರೀನಿವಾಸ್, ಸತ್ಯರಾಜು ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.