ಅಳ್ನಾವರದಲ್ಲಿ ಈದ್ ಮಿಲಾದ್ ಪ್ರಯುಕ್ತ ಇಸ್ಲಾಂ ಧ್ವಜಾರೋಹಣ ನೇರವೇರಿಸಿದಲು ಗಣ್ಯರು ನೆರೆದಿದ್ದರು. ಅಳ್ನಾವರದಲ್ಲಿ ಸಂಭ್ರಮದ ಈದ್ ಮಿಲಾದ್ ಮೆರವಣಿಗೆ " ಭಕ್ತಿ, ಶ್ರದ್ಧೆಯಿಂದ ಪಾಲ್ಗೊಂಡ ಮುಸ್ಲಿಂ ಬಾಂಧವರು" ಅಳ್ನಾವರ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ಪ್ರಯುಕ್ತ ಪಟ್ಟಣದಲ್ಲಿ ಬುಧವಾರ ಈದ್ ಮಿಲಾದ್ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಇದರ ಅಂಗವಾಗಿ ಅಂಜುಮನ್-ಎ-ಇಸ್ಲಾA ಸಂಸ್ಥೆಯ ಶಾದಿ ಮಹಲ್ ಹಾಲ್‌ನಿಂದ ಬೆಳಿಗ್ಗೆ ಮೆರವಣಿಗೆ ಆರಂಬವಾಯಿತು. ಬಿಳಿ ಶುಭ್ರ ವಸ್ತ್ರಗಳನ್ನು ಧರಿಸಿದ್ದ ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಸಂದೇಶಗಳನ್ನು ಸ್ಮರಿಸುತ್ತಾ, ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಯುವಕರು ಕೈಯಲ್ಲಿ ಇಸ್ಲಾಂ ಧ್ವಜಗಳನ್ನು ಹಿಡಿದು ಧಾರ್ಮಿಕ ಪಠಣ ಹಾಗೂ ನಾತ್‌ಗಳನ್ನು ಪಠಿಸುತ್ತಾ ಮೆರವಣಿಗೆಗೆ ಮೆರುಗು ತಂದರು. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ಸಾಗುವ ಮಾರ್ಗವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಸ್ವಾಗತ ಕಮಾನುಗಳು, ಇಸ್ಲಾಂ ಧ್ವಜಗಳು, ಬಣ್ಣಬಣ್ಣದ ಪರಪರಿಗಳು ಹಾಗೂ ವಿದ್ಯುತ್ ದೀಪಗಳ ಅಲಂಕಾರ ಗಮನ ಸೆಳೆಯಿತು. ಅನೇಕ ಮುಸ್ಲಿಂ ಬಾಂಧವರು ತಮ್ಮ ಮನೆಗಳ ಎದುರು ಇಸ್ಲಾಂ ಧ್ವಜಗಳನ್ನು ಹಾರಿಸಿ ಹಬ್ಬದ ಸಂಭ್ರಮವನ್ನು ವ್ಯಕ್ತಪಡಿಸಿದರು. ಮೆರವಣಿಗೆಯು ವಿವಿಧ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಿಲ್ಲತ್ ಶಾಲಾ ಮೈದಾನ ತಲುಪಿತು. ಅಲ್ಲಿ ಗಣ್ಯರು ಇಸ್ಲಾಂ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜೀವನ, ಆದರ್ಶ, ಸರಳತೆ, ಮಾನವೀಯತೆ ಹಾಗೂ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಬೆಳೆಸುವ ಸಂದೇಶಗಳ ಕುರಿತು ಮಾತನಾಡಲಾಯಿತು. ನಂತರ ಮೆರವಣಿಗೆ ಶಾದಿ ಮಹಲ್ ಹಾಲ್‌ಗೆ ಆಗಮಿಸಿ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಪರಸ್ಪರ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಿಹಿ ಹಂಚಿ ಸಂಭ್ರಮಿಸಿದರು. ಈದ್ ಮಿಲಾದ್ ಅಂಗವಾಗಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜೀವನ ಚರಿತ್ರೆ ಮತ್ತು ಆದರ್ಶಗಳನ್ನು ಆಧರಿಸಿ ನಾತ್ ಹಾಗೂ ತಕರಿರ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿವಿಧ ವಯೋಮಾನದ ಮಕ್ಕಳು ಹಾಗೂ ಯುವಕರು ಉತ್ಸಾಹದಿಂದ ಪಾಲ್ಗೊಂಡರು. ಉತ್ತಮವಾಗಿ ಪ್ರದರ್ಶನ ನೀಡಿದರು. ಸ್ಪರ್ಧಾಳುಗಳಿಗೆ ಗಣ್ಯರ ಸಮ್ಮುಖದಲ್ಲಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರು, ಸಮಾಜದ ಹಿರಿಯರು, ಯುವಕರು ಸೇರಿದಂತೆ ಅಪಾರ ಸಂಖ್ಯೆಯ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು. ಹಬ್ಬದ ಸಂದರ್ಭದಲ್ಲಿ ಪಟ್ಟಣದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವದ ವಾತಾವರಣ ಕಂಡುಬAದಿತು. ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಶಾಂತಿ, ಪ್ರೀತಿ, ಮಾನವೀಯತೆ ಹಾಗೂ ಸಹಬಾಳ್ವೆಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದೊAದಿಗೆ ಕಾರ್ಯಕ್ರಮ ಸಂಪನ್ನಗೊAಡಿತು.

- ಧಾರವಾಡ ಮಾಳಾಪುರದ ಜಾಮಿಯಾ ಮಸೀದಿಯಲ್ಲಿ ಈದ್ ಮಿಲಾದ್ ವಿಶೇಷ ಕಾರ್ಯಕ್ರಮ ಈದ್ ಮಿಲಾದ್ ಹಬ್ಬದ ಅಂಗವಾಗಿ ಧಾರವಾಡ ಮಾಳಾಪುರದ ಜಾಮಿಯಾ ಮಸೀದಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಮಾಳಾಪುರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಸಂದೇಶ ಹಾಗೂ ಆದರ್ಶಗಳ ಕುರಿತು ಜಾಗೃತಿ ಮೂಡಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಧರ್ಮಗುರುಗಳು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜೀವನ, ಆದರ್ಶ ಮತ್ತು ಸಮಾಜಕ್ಕೆ ನೀಡಿದ ಸಂದೇಶಗಳ ಕುರಿತು ಉಪನ್ಯಾಸ ನೀಡಿದರು.1
- ರಾಯಬಾಗ ತಾಲೂಕಿನ ಕಂಕನವಾಡಿಯಲ್ಲಿ ಸ್ಟೋನ್ ರಾಖಿಗಳು ಲಭ್ಯ ಶ್ರೀರಂಗನಾಥ ಪಾನ್ ಶಾಪ್ ರಾಯಬಾಗ ತಾಲೂಕಿನ ಕಂಕನವಾಡಿ ಪಟ್ಟಣದ ಪ್ರತಿಷ್ಠಿತ ಪಾಂಡ್ ಶಾಪ್ ಆದಂತಹ ಶ್ರೀರಂಗನಾಥ ಪಾಂಡ್ ಶಾಪ್ ಮತ್ತು ಜನರಲ್ ಸ್ಟೋರ್ ಈ ಅಂಗಡಿಯಲ್ಲಿ ಎಲ್ಲ ರೀತಿಯ ರಾಖಿಗಳು ಒಳ್ಳೆಯ ಗುಣಮಟ್ಟದ ಸ್ಟೋನ್ ಹಾಗೂ ಡಿಸೈನ್ ರಾಕಿಗಳು ಎಲ್ಲ ರೀತಿಯ ರಾಖಿಗಳು ಇಲ್ಲಿ ಲಭ್ಯ ಇರುತ್ತವೆ4
- ಹುಡುಗಿ ಕೊಟ್ಟ ಮುತ್ತಿಗೆ ಬಿತ್ತು 5000 ಫೈನ್ ಹುಡುಗಿ ಕೊಟ್ಟ ಮುತ್ತಿಗೆ ಬಿತ್ತು 5000 ಫೈನ್1
- ಕೆಸ್ರೇಕರ್ ದಂಪತಿಗೆ ನ್ಯಾಯ ಸಿಗಬೇಕು. ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಾನೂನುಬದ್ಧವಾಗಿ ಕಠಿಣ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ನಡೆಯುವ ಮೆರವಣಿಗೆಗೆ ಎಲ್ಲರೂ ಶಾಂತಿಯುತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಅವರು ಕರೆ ನೀಡಿದ್ದಾರೆ. [: 📍ಸಾಂಗ್ಲಿಯಲ್ಲಿ ನಡೆದ ಖಾನಾಪುರ ತಾಲ್ಲೂಕಿನ ಹೆಬ್ಬಾಳ ಗ್ರಾಮದ ಕೇಸರೆಕರ ದಂಪತಿ ಹತ್ಯಾಕಾಂಡ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಮೃತರ ಕುಟುಂಬಕ್ಕೆ ನ್ಯಾಯ ದೊರಕಬೇಕು ಎಂಬ ಆಗ್ರಹದೊಂದಿಗೆ ನಾಳೆ ಬೆಳಿಗ್ಗೆ ಸರಿಯಾಗಿ 10 ಗಂಟೆಗೆ ಸಮಸ್ತ ಖಾನಾಪುರ ತಾಲ್ಲೂಕಿನ ಹಿಂದೂ ಬಾಂಧವರ ವತಿಯಿಂದ ಭವ್ಯ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಈ ಮೆರವಣಿಗೆಯು ಖಾನಾಪುರದ ಲಕ್ಷ್ಮೀ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೆ ನಡೆಯಲಿದೆ. ಈ ಪ್ರತಿಭಟನಾ ಮೆರವಣಿಗೆಯಲ್ಲಿ ತಾಲ್ಲೂಕಿನ ಎಲ್ಲಾ ನಾಗರಿಕರು, ವಿಶೇಷವಾಗಿ ಸಮಸ್ತ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಾಸಕರಾದ ವಿಠ್ಠಲರಾವ್ ಹಲಗೇಕರ ಅವರು ಮನವಿ ಮಾಡಿದ್ದಾರೆ. 📍 ಮೆರವಣಿಗೆಯ ಸಮಯ: ನಾಳೆ ಬೆಳಿಗ್ಗೆ ಸರಿಯಾಗಿ 10:00 ಗಂಟೆಗೆ 📍 ಮಾರ್ಗ: ಲಕ್ಷ್ಮೀ ದೇವಸ್ಥಾನ → ತಹಶೀಲ್ದಾರ್ ಕಚೇರಿ ಹತ್ಯೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂಬ ಬೇಡಿಕೆಯೊಂದಿಗೆ ನಡೆಯಲಿರುವ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣ. 🙏 [26/08, 5:21 pm] +91 97433 40230: ಕೆಸ್ರೇಕರ್ ದಂಪತಿ ಕೊಲೆ ಪ್ರಕರಣ: ನ್ಯಾಯಕ್ಕಾಗಿ ಮೆರವಣಿಗೆ ಖಾನಾಪುರ: ಕೆಸ್ರೇಕರ್ ದಂಪತಿ ಕೊಲೆ ಪ್ರಕರಣವನ್ನು ಖಂಡಿಸಿ ಹಾಗೂ ಪ್ರಕರಣದ ಸತ್ಯಾಸತ್ಯತೆ ಹೊರಬಂದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹದೊಂದಿಗೆ ನಾಳೆ ಖಾನಾಪುರದಲ್ಲಿ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನ್ಯಾಯದ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಖಾನಾಪುರ ಬಿಜೆಪಿ ಹಿರಿಯ ನಾಯಕ ಪ್ರಮೋದ್ ಕೊಚೇರಿ ಅವರು ಮನವಿ ಮಾಡಿದ್ದಾರೆ. “ಕೆಸ್ರೇಕರ್ ದಂಪತಿಗೆ ನ್ಯಾಯ ಸಿಗಬೇಕು. ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಾನೂನುಬದ್ಧವಾಗಿ ಕಠಿಣ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ನಡೆಯುವ ಮೆರವಣಿಗೆಗೆ ಎಲ್ಲರೂ ಶಾಂತಿಯುತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಅವರು ಕರೆ ನೀಡಿದ್ದಾರೆ.1
- ಕುಡಚಿ ಪಟ್ಟಣದಲ್ಲಿ ಇರಾನ್ ದೇಶದ ಧ್ವಜ ಹಾರಾಟ ರಾಯಬಾಗ ತಾಲೂಕಿನಲ್ಲಿ ನಡೆದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲುಕಿನ ಕುಡಚಿ ಪಟ್ಟಣದಲ್ಲಿ ಇರಾನ್ ದೇಶದ ಧ್ವಜ ಹಾರಾಡುತ್ತಿರುವ ದೃಶ್ಯವಳಿಗಳು ಸಾಮಾಜಿಕ್ ಜಾಲತಾಣದಲ್ಲಿ virle ಆಗಿದೆ1
- ಸಂಸ್ಥಾಪಕ ಅಧ್ಯಕ್ಷರು ಯೋಧರ ಮಡಿಲು ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅನಾಥಾಶ್ರಮ ಮತ್ತು ವೃದ್ಧಾಶ್ರಮ ಮತ್ತು ಜೆಎಂ ಸ್ಪೋರ್ಟ್ಸ್ ಕ್ಲಬ್ ಮುಗಳಕೋಡ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮುಗಳಖೋಡ ಗ್ರಾಮದಲ್ಲಿ, ವಿದ್ಯಾರ್ಥಿಗಳ ಬಸ್ ಸೌಲಭ್ಯದ ಕೊರತೆಯಿಂದ ಉಂಟಾಗುತ್ತಿರುವ ತೊಂದರೆಗಳಿಗೆ ಶಾಶ್ವತ ಪರಿಹಾರ ದೊರಕಬೇಕು ಎಂಬ ಸದುದ್ದೇಶದಿಂದ ಧ್ವನಿ ಎತ್ತಿ ಹೋರಾಟ ನಡೆಸಲಾಯಿತು ವಿದ್ಯಾರ್ಥಿಗಳ ಹಿತಕ್ಕಾಗಿ ಸ್ಪಂದಿಸಿ ಅಗತ್ಯ ಸಹಕಾರ ನೀಡಿದ KSRTC ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ವಿದ್ಯಾರ್ಥಿಗಳ ಶಿಕ್ಷಣದ ಹಾದಿ ಸುಗಮವಾಗಲಿ ಎಂಬ ಆಶಯದೊಂದಿಗೆ ಕೈಗೊಂಡ ಈ ಸಮಾಜಮುಖಿ ಪ್ರಯತ್ನವು ಜನಸೇವೆಯ ನಿಜವಾದ ಕಾಳಜಿಗೆ ಸಾಕ್ಷಿಯಾಗಿದೆ.” 🙏🚌✊1
- ಗೋಕಾಕದಲ್ಲಿ ಜನಪರ ಕಾರ್ಯಕ್ರಮಗಳಿಗೆ Dcc ಬ್ಯಾಂಕ ನಿರ್ದೇಶಕ ಅಮರನಾಥ ಜಾರಕಿಹೊಳಿ ಚಾಲನೆ ಹಾಗೂ ಉದ್ಘಾಟನೆ. ಗೋಕಾಕ ನಗರದಲ್ಲಿ ಮೂರು ಮಹತ್ವದ ಜನಪರ ಕಾರ್ಯಕ್ರಮಗಳಿಗೆ Dcc ಬ್ಯಾಂಕ ನಿರ್ದೇಶಕ ಅಮರನಾಥ ಜಾರಕಿಹೊಳಿ ಚಾಲನೆ ಹಾಗೂ ಉದ್ಘಾಟನೆ. ಶಾಸಕರಾದ ರಮೇಶ್ ಜಾರಕಿಹೊಳಿ ಅವರ ಪುತ್ರ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅಮರನಾಥ್ ಜಾರಕಿಹೊಳಿ ಅವರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಚಾಲನೆ ನೀಡಿದರು. ಮೊದಲನೆಯದಾಗಿ, ಬುದ್ಧನಗರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಮರನಾಥ್ ಜಾರಕಿಹೊಳಿ ಅವರು ಚಾಲನೆ ನೀಡಿದರು. ಈ ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರಿಗೆ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಇದೇ ಸಂದರ್ಭದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಲಾಗಿರುವ ಬಾಲಕಿಯರ ವಸತಿ ನಿಲಯವನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿನಿಯರಿಗೆ ಉತ್ತಮ ವಸತಿ ಹಾಗೂ ಶೈಕ್ಷಣಿಕ ವಾತಾವರಣ ಕಲ್ಪಿಸುವ ಉದ್ದೇಶದಿಂದ ಈ ಸೌಲಭ್ಯವನ್ನು ನಿರ್ಮಿಸಲಾಗಿದೆ. ಇದರ ಜೊತೆಗೆ ಗೋಕಾಕ ನಗರದಲ್ಲಿ ವಿದ್ಯುತ್ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಎಬಿ ಕೇಬಲ್ ಅಳವಡಿಸುವ ಕಾಮಗಾರಿಗೂ ಚಾಲನೆ ನೀಡಲಾಯಿತು. ಸುಮಾರು 3.128 ಕಿಲೋಮೀಟರ್ ವ್ಯಾಪ್ತಿಯಲ್ಲಿ, 41.48 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಒಟ್ಟಾರೆ ಬುದ್ಧನಗರದ ರಸ್ತೆ ಅಭಿವೃದ್ಧಿ, ಬಾಲಕಿಯರ ವಸತಿ ನಿಲಯ ಉದ್ಘಾಟನೆ ಹಾಗೂ ವಿದ್ಯುತ್ ವ್ಯವಸ್ಥೆ ಸುಧಾರಣೆ — ಹೀಗೆ ಮೂರು ಮಹತ್ವದ ಕಾರ್ಯಕ್ರಮಗಳು ಒಂದೇ ಸಂದರ್ಭದಲ್ಲಿ ನಡೆದಿದ್ದು, ಗೋಕಾಕದ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ. ಅಮರನಾಥ್ ಜಾರಕಿಹೊಳಿ ಅವರಿಂದ ನಡೆದ ಈ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ4
- ಧಾರವಾಡ ಉತ್ತರಾದಿಮಠದ ಹಯಗ್ರೀವದೇವರ ಭಾವಚಿತ್ರದ ಭವ್ಯ ಶೋಭಾಯಾತ್ರೆ ಧಾರವಾಡ ಉತ್ತರಾದಿಮಠದ ಶ್ರೀ ಹಯಗ್ರೀವದೇವರ ಸಪ್ತರಾತ್ರೋತ್ಸವದ ಅಂಗವಾಗಿ ಬುಧವಾರ ಸಂಜೆ ಎಮ್ಮಿಕೇರಿಯಿಂದ ಶ್ರೀಮಠದವರೆಗೆ ಹಯಗ್ರೀವದೇವರ ಭಾವಚಿತ್ರದ ಭವ್ಯ ಶೋಭಾಯಾತ್ರೆ ನಡೆಯಿತು. ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಶೋಭಾಯಾತ್ರೆಗೆ ಚಾಲನೆ ನೀಡಿದರು. ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಭಜನಾ ಮಂಡಳಿ ಸದಸ್ಯೆಯರು ದೇವರ ನಾಮಸ್ಮರಣೆ ಹಾಗೂ ಭಜನೆಗಳನ್ನು ಹಾಡುತ್ತ ಸಾಗಿದರು. ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಪಂ. ಪ್ರಹ್ಲಾದಾಚಾರ್ಯ ಗಲಗಲಿ, ಆರ್.ಎಂ. ಕುಲಕರ್ಣಿ, ಪಂ. ಕೇಶವಾಚಾರ್ಯ ಕೆರೂರ, ಜಯತೀರ್ಥಾಚಾರ್ಯ ಗಲಗಲಿ, ಹನುಮಂತ ಕೊಟಬಾಗಿ, ಶ್ರೀಹರಿ ಕೊಪ್ಪರ, ರವೀಂದ್ರ ದೇಶಪಾಂಡೆ, ಅಶೋಕ ಚಚಡಿ, ಸುರೇಶಾಚಾರ್ಯ ರಾಯಚೂರ, ದೇಶಮುಖ ಸೇರಿದಂತೆ ಹಲವರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.1