logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕಲಬುರಗಿ ಜಿಲ್ಲೆ, ಜೇವರ್ಗಿಯ ಜನರ, ನನ್ನ ತಂದೆ-ತಾಯಿ ಮತ್ತು ಕುಟುಂಬದ ಹಿರಿಯರ ಹಾಗೂ ದೇವರ ಆಶೀರ್ವಾದದಿಂದ ರಾಜಭವನದಲ್ಲಿ ದೇವರ ಹೆಸರಿನಲ್ಲಿ, ಕಾಯಾ-ವಾಚಾ-ಮನಸಾ ರಾಜ್ಯ ಸರ್ಕಾರದ ಸಂಪುಟ ಸಚಿವನಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಈ ಮಹತ್ವದ ಕ್ಷಣದಲ್ಲಿ ನನ್ನನ್ನು ಮೂರು ಬಾರಿ ಕೈ ಹಿಡಿದು ವಿಧಾನಸಭೆಗೆ ಕಳುಹಿಸಿ, ನನ್ನನ್ನು ಬೆಳೆಸಿದ ಜೇವರ್ಗಿಯ ಪ್ರತಿಯೊಬ್ಬ ಮತದಾರರ, ಪ್ರತಿಯೊಂದು ಮನೆಯ, ಪ್ರತಿಯೊಂದು ಹೃದಯದ ಆಶೀರ್ವಾದದ ಫಲವೇ ಇಂದಿನ ಈ ಯಶಸ್ಸು. ನಿಮ್ಮ ಈ ಅಪಾರ ಪ್ರೀತಿಯ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ, ಪ್ರಾಮಾಣಿಕ ಸೇವೆಯ ಮೂಲಕ ನಿಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸಬಯಸುತ್ತೇನೆ. ಈ ಯಶಸ್ಸಿನ ಹಾದಿಯಲ್ಲಿ ನನ್ನನ್ನು ಇಲ್ಲಿಯವರೆಗೆ ಕೈಹಿಡಿದು ನಡೆಸಿದ ರಾಷ್ಟ್ರೀಯ ನಾಯಕರಿಗೆ, ಕಾಂಗ್ರೆಸ್ ಪಕ್ಷದ ಸಂಘಟನಾ ಚೇತನರಿಗೆ, ನನ್ನ ಶ್ರದ್ಧೆಯ ನಮನಗಳು. ನಮ್ಮ ಕುಟುಂಬದ ಹಿರಿಯರಾದ, ಎಐಸಿಸಿ ಅಧ್ಯಕ್ಷರು, ಪೂಜ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನ ಮತ್ತು ಆಶೀರ್ವಾದವೇ ನನಗೆ ಶ್ರೀರಕ್ಷೆ, ನಮ್ಮ ಹೈಕಮಾಂಡ್ ನಾಯಕರಿಗೆ ಮತ್ತು ರಾಜ್ಯದ ಮುಖಂಡರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ಈ ಶುಭ ಸಂದರ್ಭದಲ್ಲಿ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ನನ್ನ ಪೂಜ್ಯ ತಂದೆಯವರಾದ ದಿವಂಗತ ಶ್ರೀ ಎನ್. ಧರ್ಮಸಿಂಗ್ ಅವರ ನೆನಪು ನನ್ನನ್ನು ಭಾವನಾತ್ಮಕಗೊಳಿಸುತ್ತಿದೆ. ಅವರ ಆದರ್ಶಗಳೇ ನನ್ನ ಬದುಕಿನ ದಾರಿದೀಪ. ನನ್ನ ತಾಯಿಯವರ ಆಶೀರ್ವಾದ ಮತ್ತು ನನ್ನ ಕುಟುಂಬದ ಹಿರಿಯರ ಪ್ರೋತ್ಸಾಹವೇ ನನ್ನ ಯಶಸ್ಸಿನ ಅಡಿಪಾಯ. ಹಗಲಿರುಳು ನನಗಾಗಿ ಶ್ರಮಿಸಿದ ಪಕ್ಷದ ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತನೇ ನನ್ನ ನಿಜವಾದ ಶಕ್ತಿ. ನಿಮ್ಮ ನಂಬಿಕೆಗೆ ಎಂದಿಗೂ ಚ್ಯುತಿ ಬಾರದಂತೆ, ನಿಮ್ಮ ಧ್ವನಿಯಾಗಿ, ಈ ನಾಡಿನ ನಿಸ್ವಾರ್ಥ ಸೇವಕನಾಗಿ ಸದಾ ಶ್ರಮಿಸುತ್ತೇನೆ. ಎಂದೆಂದಿಗೂ ನಿಮ್ಮವನಾಗಿರುತ್ತೇನೆ.

1 day ago
user_Anand Kumar
Anand Kumar
Fitness Trainer ಯಾದಗಿರಿ, ಯಾದಗಿರಿ, ಕರ್ನಾಟಕ•
1 day ago

ಕಲಬುರಗಿ ಜಿಲ್ಲೆ, ಜೇವರ್ಗಿಯ ಜನರ, ನನ್ನ ತಂದೆ-ತಾಯಿ ಮತ್ತು ಕುಟುಂಬದ ಹಿರಿಯರ ಹಾಗೂ ದೇವರ ಆಶೀರ್ವಾದದಿಂದ ರಾಜಭವನದಲ್ಲಿ ದೇವರ ಹೆಸರಿನಲ್ಲಿ, ಕಾಯಾ-ವಾಚಾ-ಮನಸಾ ರಾಜ್ಯ ಸರ್ಕಾರದ ಸಂಪುಟ ಸಚಿವನಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಈ ಮಹತ್ವದ ಕ್ಷಣದಲ್ಲಿ ನನ್ನನ್ನು ಮೂರು ಬಾರಿ ಕೈ ಹಿಡಿದು ವಿಧಾನಸಭೆಗೆ ಕಳುಹಿಸಿ, ನನ್ನನ್ನು ಬೆಳೆಸಿದ ಜೇವರ್ಗಿಯ ಪ್ರತಿಯೊಬ್ಬ ಮತದಾರರ, ಪ್ರತಿಯೊಂದು ಮನೆಯ, ಪ್ರತಿಯೊಂದು ಹೃದಯದ ಆಶೀರ್ವಾದದ ಫಲವೇ ಇಂದಿನ ಈ ಯಶಸ್ಸು. ನಿಮ್ಮ ಈ ಅಪಾರ ಪ್ರೀತಿಯ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ, ಪ್ರಾಮಾಣಿಕ ಸೇವೆಯ ಮೂಲಕ ನಿಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸಬಯಸುತ್ತೇನೆ. ಈ ಯಶಸ್ಸಿನ ಹಾದಿಯಲ್ಲಿ ನನ್ನನ್ನು ಇಲ್ಲಿಯವರೆಗೆ ಕೈಹಿಡಿದು ನಡೆಸಿದ ರಾಷ್ಟ್ರೀಯ ನಾಯಕರಿಗೆ, ಕಾಂಗ್ರೆಸ್ ಪಕ್ಷದ ಸಂಘಟನಾ ಚೇತನರಿಗೆ, ನನ್ನ ಶ್ರದ್ಧೆಯ ನಮನಗಳು. ನಮ್ಮ ಕುಟುಂಬದ ಹಿರಿಯರಾದ, ಎಐಸಿಸಿ ಅಧ್ಯಕ್ಷರು, ಪೂಜ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನ ಮತ್ತು ಆಶೀರ್ವಾದವೇ ನನಗೆ ಶ್ರೀರಕ್ಷೆ, ನಮ್ಮ ಹೈಕಮಾಂಡ್ ನಾಯಕರಿಗೆ ಮತ್ತು ರಾಜ್ಯದ ಮುಖಂಡರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ಈ ಶುಭ ಸಂದರ್ಭದಲ್ಲಿ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ನನ್ನ ಪೂಜ್ಯ ತಂದೆಯವರಾದ ದಿವಂಗತ ಶ್ರೀ ಎನ್. ಧರ್ಮಸಿಂಗ್ ಅವರ ನೆನಪು ನನ್ನನ್ನು ಭಾವನಾತ್ಮಕಗೊಳಿಸುತ್ತಿದೆ. ಅವರ ಆದರ್ಶಗಳೇ ನನ್ನ ಬದುಕಿನ ದಾರಿದೀಪ. ನನ್ನ ತಾಯಿಯವರ ಆಶೀರ್ವಾದ ಮತ್ತು ನನ್ನ ಕುಟುಂಬದ ಹಿರಿಯರ ಪ್ರೋತ್ಸಾಹವೇ ನನ್ನ ಯಶಸ್ಸಿನ ಅಡಿಪಾಯ. ಹಗಲಿರುಳು ನನಗಾಗಿ ಶ್ರಮಿಸಿದ ಪಕ್ಷದ ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತನೇ ನನ್ನ ನಿಜವಾದ ಶಕ್ತಿ. ನಿಮ್ಮ ನಂಬಿಕೆಗೆ ಎಂದಿಗೂ ಚ್ಯುತಿ ಬಾರದಂತೆ, ನಿಮ್ಮ ಧ್ವನಿಯಾಗಿ, ಈ ನಾಡಿನ ನಿಸ್ವಾರ್ಥ ಸೇವಕನಾಗಿ ಸದಾ ಶ್ರಮಿಸುತ್ತೇನೆ. ಎಂದೆಂದಿಗೂ ನಿಮ್ಮವನಾಗಿರುತ್ತೇನೆ.

More news from ಕರ್ನಾಟಕ and nearby areas
  • ಸಮಯ ಪ್ರಜ್ಞೆಯಿಂದಲೇ ಗುರಿ ಸಾಧನೆ – ರಾಯಚೂರಿನಲ್ಲಿ ಡಾ. ಜಿ. ಎಸ್. ಬಿರಾದಾರ ಹೇಳಿಕೆ ರಾಯಚೂರು : ಎಲ್‌ವಿಡಿ ಮಹಾವಿದ್ಯಾಲಯದಲ್ಲಿ 2025–26ನೇ ಶೈಕ್ಷಣಿಕ ಸಾಲಿನ ಬಿಎ, ಬಿಎಸ್‌ಸಿ ಹಾಗೂ ಬಿಸಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಅಭಿವಿನ್ಯಾಸ ಕಾರ್ಯಕ್ರಮವನ್ನು ಕಾಲೇಜು ಸಭಾಂಗಣದಲ್ಲಿ ಮಂಗಳವಾರ 11 ಗಂಟೆಗೆ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಉಪಕುಲಸಚಿವರಾದ ಡಾ. ಜಿ. ಎಸ್. ಬಿರಾದಾರ ಉದ್ಘಾಟಿಸಿ ಮಾತನಾಡಿ, "ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಬೆಳೆಸಿಕೊಂಡಾಗ ಮಾತ್ರ ತಮ್ಮ ಗುರಿಯನ್ನು ಯಶಸ್ವಿಯಾಗಿ ತಲುಪಲು ಸಾಧ್ಯ. ಯಾವುದೇ ಕ್ಷೇತ್ರದಲ್ಲಿದ್ದರೂ ಪರಿಶ್ರಮ, ಶಿಸ್ತು ಮತ್ತು ಸಕಾರಾತ್ಮಕ ಮನೋಭಾವದಿಂದ ವಿದ್ಯಾಭ್ಯಾಸ ಮಾಡಿದರೆ ಯಶಸ್ಸು ಖಚಿತ. ನಿಮ್ಮ ಸಾಧನೆಯೇ ನಿಮ್ಮ ವ್ಯಕ್ತಿತ್ವವನ್ನು ಗುರುತಿಸುತ್ತದೆ," ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಾರಾನಾಥ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಬಾಪತಿ ಪಾಟೀಲ್ (ವಕೀಲರು) ಮಾತನಾಡಿ, ಕಾಲೇಜಿನಲ್ಲಿ ಲಭ್ಯವಿರುವ ಎಲ್ಲಾ ಶೈಕ್ಷಣಿಕ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬೇಕೆಂದು ಕರೆ ನೀಡಿದರು. ತಾರಾನಾಥ ಶಿಕ್ಷಣ ಸಂಸ್ಥೆ ಹಾಗೂ ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ವೀರಹನುಮಾನ ಮಾತನಾಡಿ, ಕಾಲೇಜಿನ ಶಿಸ್ತು ಮತ್ತು ಉತ್ತಮ ಫಲಿತಾಂಶಗಳು ಸಂಸ್ಥೆಯ ಹೆಮ್ಮೆ ಹೆಚ್ಚಿಸುತ್ತವೆ. ವಿದ್ಯಾರ್ಥಿಗಳು ಸಮಯಪಾಲನೆ, ಪರಿಶ್ರಮ ಹಾಗೂ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಶರಣಗೌಡ ಬಿ. ಎಚ್. ಮಾತನಾಡಿ, ಕಾಲೇಜಿನಲ್ಲಿ ಉತ್ತಮ ಬೋಧಕ ವೃಂದ, ಸುಸಜ್ಜಿತ ಗ್ರಂಥಾಲಯ, ವಿಶಾಲ ಕ್ರೀಡಾಂಗಣ, ಜಿಮ್ ಸೇರಿದಂತೆ ಅಗತ್ಯ ಸೌಲಭ್ಯಗಳಿದ್ದು, ವಿದ್ಯಾರ್ಥಿಗಳು ಅವುಗಳನ್ನು ಸದುಪಯೋಗಪಡಿಸಿಕೊಂಡು ಶಿಸ್ತುಬದ್ಧವಾಗಿ ವಿದ್ಯಾಭ್ಯಾಸ ಮಾಡಬೇಕೆಂದರು. ಉಪಪ್ರಾಚಾರ್ಯ ಡಾ. ಆಂಜನೇಯ ಅವರು ಹೊಸ ಕಾಲೇಜು ವಾತಾವರಣಕ್ಕೆ ವಿದ್ಯಾರ್ಥಿಗಳು ಹೊಂದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಕಾಲೇಜಿನ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳ ಕುರಿತು ವಿವಿಧ ವಿಭಾಗಗಳ ಪ್ರಾಧ್ಯಾಪಕರು ಮಾಹಿತಿ ನೀಡಿದರು. ಕಾರ್ಯಕ್ರಮದ ಸಂಯೋಜಕಿ ಡಾ. ಅರುಣಾ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾರೋಪದಲ್ಲಿ ವರದಿ ಮಂಡಿಸಿದರು. ವೇದಿಕೆಯಲ್ಲಿ ತಾರಾನಾಥ ಶಿಕ್ಷಣ ಸಂಸ್ಥೆಯ ಖಜಾಂಚಿ ಪುರುಷೋತ್ತಮ ದಾಸ್ ಇನ್ನಾಣಿ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಿಎ, ಬಿಎಸ್‌ಸಿ ಹಾಗೂ ಬಿಸಿಎ ಪ್ರಥಮ ವರ್ಷದ ಒಟ್ಟು 350 ವಿದ್ಯಾರ್ಥಿಗಳು ಭಾಗವಹಿಸಿ ಅಭಿವಿನ್ಯಾಸ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಬಿಎಸ್‌ಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ಕು. ಹರ್ಷಿತಾ ಪ್ರಾರ್ಥನಾ ಗೀತೆ ಹಾಡಿದರು. ಹುಸೇನಪ್ಪ ಉದ್ಘಾಟಕರ ಪರಿಚಯ ಮಾಡಿಕೊಟ್ಟರೆ, ಶ್ರೀಮತಿ ಹೇಮಲತಾ ಹಾಗೂ ಮಾಲತೇಶ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ವೆಂಕಟೇಶ ಮತ್ತು ಡಾ. ಮಂಜುನಾಥ ಸ್ವಾಗತಿಸಿದರು. ಶ್ರೀಮತಿ ಸ್ವಾತಿ ದೀಕ್ಷಿತ್ ಹಾಗೂ ಡಾ. ಹನುಮಂತ ನಾಯಕ ವಂದಿಸಿದರು.
    1
    ಸಮಯ ಪ್ರಜ್ಞೆಯಿಂದಲೇ ಗುರಿ ಸಾಧನೆ – ರಾಯಚೂರಿನಲ್ಲಿ ಡಾ. ಜಿ. ಎಸ್. ಬಿರಾದಾರ ಹೇಳಿಕೆ 
ರಾಯಚೂರು : ಎಲ್‌ವಿಡಿ ಮಹಾವಿದ್ಯಾಲಯದಲ್ಲಿ 2025–26ನೇ ಶೈಕ್ಷಣಿಕ ಸಾಲಿನ ಬಿಎ, ಬಿಎಸ್‌ಸಿ ಹಾಗೂ ಬಿಸಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಅಭಿವಿನ್ಯಾಸ ಕಾರ್ಯಕ್ರಮವನ್ನು ಕಾಲೇಜು ಸಭಾಂಗಣದಲ್ಲಿ ಮಂಗಳವಾರ 11 ಗಂಟೆಗೆ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಉಪಕುಲಸಚಿವರಾದ ಡಾ. ಜಿ. ಎಸ್. ಬಿರಾದಾರ ಉದ್ಘಾಟಿಸಿ ಮಾತನಾಡಿ, "ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಬೆಳೆಸಿಕೊಂಡಾಗ ಮಾತ್ರ ತಮ್ಮ ಗುರಿಯನ್ನು ಯಶಸ್ವಿಯಾಗಿ ತಲುಪಲು ಸಾಧ್ಯ. ಯಾವುದೇ ಕ್ಷೇತ್ರದಲ್ಲಿದ್ದರೂ ಪರಿಶ್ರಮ, ಶಿಸ್ತು ಮತ್ತು ಸಕಾರಾತ್ಮಕ ಮನೋಭಾವದಿಂದ ವಿದ್ಯಾಭ್ಯಾಸ ಮಾಡಿದರೆ ಯಶಸ್ಸು ಖಚಿತ. ನಿಮ್ಮ ಸಾಧನೆಯೇ ನಿಮ್ಮ ವ್ಯಕ್ತಿತ್ವವನ್ನು ಗುರುತಿಸುತ್ತದೆ," ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಾರಾನಾಥ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಬಾಪತಿ ಪಾಟೀಲ್ (ವಕೀಲರು) ಮಾತನಾಡಿ, ಕಾಲೇಜಿನಲ್ಲಿ ಲಭ್ಯವಿರುವ ಎಲ್ಲಾ ಶೈಕ್ಷಣಿಕ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ತಾರಾನಾಥ ಶಿಕ್ಷಣ ಸಂಸ್ಥೆ ಹಾಗೂ ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ವೀರಹನುಮಾನ ಮಾತನಾಡಿ, ಕಾಲೇಜಿನ ಶಿಸ್ತು ಮತ್ತು ಉತ್ತಮ ಫಲಿತಾಂಶಗಳು ಸಂಸ್ಥೆಯ ಹೆಮ್ಮೆ ಹೆಚ್ಚಿಸುತ್ತವೆ. ವಿದ್ಯಾರ್ಥಿಗಳು ಸಮಯಪಾಲನೆ, ಪರಿಶ್ರಮ ಹಾಗೂ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಶರಣಗೌಡ ಬಿ. ಎಚ್. ಮಾತನಾಡಿ, ಕಾಲೇಜಿನಲ್ಲಿ ಉತ್ತಮ ಬೋಧಕ ವೃಂದ, ಸುಸಜ್ಜಿತ ಗ್ರಂಥಾಲಯ, ವಿಶಾಲ ಕ್ರೀಡಾಂಗಣ, ಜಿಮ್ ಸೇರಿದಂತೆ ಅಗತ್ಯ ಸೌಲಭ್ಯಗಳಿದ್ದು, ವಿದ್ಯಾರ್ಥಿಗಳು ಅವುಗಳನ್ನು ಸದುಪಯೋಗಪಡಿಸಿಕೊಂಡು ಶಿಸ್ತುಬದ್ಧವಾಗಿ ವಿದ್ಯಾಭ್ಯಾಸ ಮಾಡಬೇಕೆಂದರು.
ಉಪಪ್ರಾಚಾರ್ಯ ಡಾ. ಆಂಜನೇಯ ಅವರು ಹೊಸ ಕಾಲೇಜು ವಾತಾವರಣಕ್ಕೆ ವಿದ್ಯಾರ್ಥಿಗಳು ಹೊಂದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಕಾಲೇಜಿನ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳ ಕುರಿತು ವಿವಿಧ ವಿಭಾಗಗಳ ಪ್ರಾಧ್ಯಾಪಕರು ಮಾಹಿತಿ ನೀಡಿದರು. ಕಾರ್ಯಕ್ರಮದ ಸಂಯೋಜಕಿ ಡಾ. ಅರುಣಾ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾರೋಪದಲ್ಲಿ ವರದಿ ಮಂಡಿಸಿದರು.
ವೇದಿಕೆಯಲ್ಲಿ ತಾರಾನಾಥ ಶಿಕ್ಷಣ ಸಂಸ್ಥೆಯ ಖಜಾಂಚಿ ಪುರುಷೋತ್ತಮ ದಾಸ್ ಇನ್ನಾಣಿ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಿಎ, ಬಿಎಸ್‌ಸಿ ಹಾಗೂ ಬಿಸಿಎ ಪ್ರಥಮ ವರ್ಷದ ಒಟ್ಟು 350 ವಿದ್ಯಾರ್ಥಿಗಳು ಭಾಗವಹಿಸಿ ಅಭಿವಿನ್ಯಾಸ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಬಿಎಸ್‌ಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ಕು. ಹರ್ಷಿತಾ ಪ್ರಾರ್ಥನಾ ಗೀತೆ ಹಾಡಿದರು. ಹುಸೇನಪ್ಪ ಉದ್ಘಾಟಕರ ಪರಿಚಯ ಮಾಡಿಕೊಟ್ಟರೆ, ಶ್ರೀಮತಿ ಹೇಮಲತಾ ಹಾಗೂ ಮಾಲತೇಶ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ವೆಂಕಟೇಶ ಮತ್ತು ಡಾ. ಮಂಜುನಾಥ ಸ್ವಾಗತಿಸಿದರು. ಶ್ರೀಮತಿ ಸ್ವಾತಿ ದೀಕ್ಷಿತ್ ಹಾಗೂ ಡಾ. ಹನುಮಂತ ನಾಯಕ ವಂದಿಸಿದರು.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    18 hrs ago
  • ಕಲಬುರಗಿ:ಎರಡನೇ ಸಚಿವ ಸಂಪುಟ ವಿಸ್ತರಣೆ- ಶಾಸಕ ಬಸವರಾಜ್ ಮತ್ತಿಮೂಡ್ ಲೇವಡಿ ಡಿಕೆ ಶಿವಕುಮಾರ್ ಅವರ ಮಂತ್ರಿ ಮಂಡಲದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಗ್ರಾಮೀಣ ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ್ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.ಡಿಕೆ ಸಂಪುಟ ವಿಸ್ತರಣೆಯನ್ನು ಪೇಮೆಂಟ್ ಸಿಟ್ ಎಂದ ಬಿಜೆಪಿ ಶಾಸಕ ಕೆಲವರು ಹೇಳ್ತಿದ್ದಾರೆ ಪೇಮೆಂಟ್ ಸಿಟ್, ಪೇಮೆಂಟ್ ಸಿಟ್ ಅಂತಾ ಸಹಜವಾಗಿ ನೋಡಿದ್ರೆ ಅನಿಸುತ್ತದೆ,ಕೆಲವರು ಮಾತಾಡ್ತಿದ್ದಾರೆ ಮಂತ್ರಿಗಳದು ಪೇಮೆಂಟ್ ಸಿಟ್ ಅಂತಾ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು. ಅವರ ಹೈ ಕಮಾಂಡ್ ಅವರ ಸಚಿವ ಸಂಪುಟ ಅವರಿಗೆ ಬಿಟ್ಟಿದ್ದು ಎಂದು ಹೇಳಿದರು
    1
    ಕಲಬುರಗಿ:ಎರಡನೇ ಸಚಿವ ಸಂಪುಟ ವಿಸ್ತರಣೆ- ಶಾಸಕ ಬಸವರಾಜ್ ಮತ್ತಿಮೂಡ್ ಲೇವಡಿ
ಡಿಕೆ ಶಿವಕುಮಾರ್ ಅವರ ಮಂತ್ರಿ ಮಂಡಲದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಗ್ರಾಮೀಣ ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ್ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.ಡಿಕೆ ಸಂಪುಟ ವಿಸ್ತರಣೆಯನ್ನು  ಪೇಮೆಂಟ್ ಸಿಟ್ ಎಂದ ಬಿಜೆಪಿ ಶಾಸಕ ಕೆಲವರು ಹೇಳ್ತಿದ್ದಾರೆ ಪೇಮೆಂಟ್ ಸಿಟ್, ಪೇಮೆಂಟ್ ಸಿಟ್ ಅಂತಾ ಸಹಜವಾಗಿ ನೋಡಿದ್ರೆ ಅನಿಸುತ್ತದೆ,ಕೆಲವರು ಮಾತಾಡ್ತಿದ್ದಾರೆ ಮಂತ್ರಿಗಳದು ಪೇಮೆಂಟ್ ಸಿಟ್ ಅಂತಾ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು. ಅವರ ಹೈ ಕಮಾಂಡ್ ಅವರ ಸಚಿವ ಸಂಪುಟ ಅವರಿಗೆ ಬಿಟ್ಟಿದ್ದು ಎಂದು ಹೇಳಿದರು
    user_MAHESH
    MAHESH
    ಚಿತ್ತಾಪುರ, ಕಲಬುರಗಿ, ಕರ್ನಾಟಕ•
    5 hrs ago
  • ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಬಾರಕೋಲು ಚಳವಳಿ ಇಂದು ಮಾನ್ವಿ ಪಟ್ಣಣದ ಬಸವ ವೃತ್ತದಲ್ಲಿ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಬಾರಕೋಲು ಚಳವಳಿ ಮೂಲಕ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಹೊಳೆಯಪ್ಪ ಉಟಕನೂರು ಮಾತನಾಡಿ, 'ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಬರಗಾಲದ ಪರಿಸ್ಥಿತಿ ಇದ್ದರೂ ಕೂಡ ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳ ಘೋಷಣೆ ಮಾಡಿಲ್ಲ' ಎಂದು ದೂರಿದರು. 'ರೈತರಿಗೆ ಪ್ರತಿ ಎಕರೆಗೆ ಕನಿಷ್ಠ ₹40 ಸಾವಿರ ಬರ ಪರಿಹಾರವನ್ನು ನೀಡಬೇಕು. ತುಂಗಭದ್ರಾ ಜಲಾಶಯದಲ್ಲಿ 28 ಟಿಎಂಸಿ ಅಡಿ ನೀರು ಸಂಗ್ರ-ಹವಾಗಿದ್ದು, ಈ ಬಾರಿ ಕಾರ್ಖಾನೆಗಳಿಗೆ ನೀರು ಕೊಡದೇ ರೈತರಿಗೆ ಕಾಲುವೆ ಮೂಲಕ ನೀರನ್ನು ನಿರಂತರವಾಗಿ ಹರಿಸಬೇಕು' ಎಂದು ಒತ್ತಾಯಿಸಿದರು. ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವೈ.ಬಸವರಾಜ ನಾಯಕ ಮಾತನಾಡಿ, 'ತಾಲ್ಲೂಕಿನಲ್ಲಿ ಸರ್ಕಾರಕ್ಕೆ ಜೋಳವನ್ನು ಮಾರಾಟ ಮಾಡಿದ ರೈತರಿಗೆ ಐದು ತಿಂಗಳು ಕಳೆದರೂ ಹಣ ಜಮಾ ಆಗಿಲ್ಲ. ಮಳೆ ಇಲ್ಲದೆ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ತಾ.ಪಂ. ವತಿಯಿಂದ ತಾಲ್ಲೂಕಿನ 17 ಗ್ರಾಮ ಪಂಚಾಯಿತಿಗಳಲ್ಲಿ ಕೂಡಲೇ ವಿಬಿ- ಜಿ ರಾಮ್ ಜಿ ಯೋಜನೆಯಡಿ ಕಾರ್ಮಿಕರಿಗೆ ಕೂಲಿ ಕೆಲಸ ನೀಡಬೇಕು' ಎಂದು ಒತ್ತಾಯಿಸಿದರು.ರೈತ ಸಂಘದ ಪದಾಧಿಕಾರಿಗಳಾದ ಶ್ಯಾಮ ಸಿಂಗ್ ರಜಪೂತ್, ವೀರೇಶ ನಾಯಕ, ಶ್ರೀಧರ ಕೋಟೆಕಲ್, ಉರುಕುಂದ ನಾಯಕ ಬಜಾರ, ಬುಜ್ಜಿಗೌಡ, ವೆಂಕಟೇಶ ಕರಡಿಗುಡ್ಡ ಉಪಸ್ಥಿತರಿದ್ದರು. .
    3
    ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಬಾರಕೋಲು ಚಳವಳಿ
ಇಂದು ಮಾನ್ವಿ ಪಟ್ಣಣದ ಬಸವ ವೃತ್ತದಲ್ಲಿ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಬಾರಕೋಲು ಚಳವಳಿ  ಮೂಲಕ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಹೊಳೆಯಪ್ಪ ಉಟಕನೂರು ಮಾತನಾಡಿ, 'ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಬರಗಾಲದ ಪರಿಸ್ಥಿತಿ ಇದ್ದರೂ ಕೂಡ ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳ ಘೋಷಣೆ ಮಾಡಿಲ್ಲ' ಎಂದು ದೂರಿದರು.
'ರೈತರಿಗೆ ಪ್ರತಿ ಎಕರೆಗೆ ಕನಿಷ್ಠ ₹40 ಸಾವಿರ ಬರ ಪರಿಹಾರವನ್ನು ನೀಡಬೇಕು. ತುಂಗಭದ್ರಾ ಜಲಾಶಯದಲ್ಲಿ 28 ಟಿಎಂಸಿ ಅಡಿ ನೀರು ಸಂಗ್ರ-ಹವಾಗಿದ್ದು, ಈ ಬಾರಿ ಕಾರ್ಖಾನೆಗಳಿಗೆ ನೀರು ಕೊಡದೇ ರೈತರಿಗೆ ಕಾಲುವೆ ಮೂಲಕ ನೀರನ್ನು ನಿರಂತರವಾಗಿ ಹರಿಸಬೇಕು' ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವೈ.ಬಸವರಾಜ ನಾಯಕ ಮಾತನಾಡಿ, 'ತಾಲ್ಲೂಕಿನಲ್ಲಿ ಸರ್ಕಾರಕ್ಕೆ ಜೋಳವನ್ನು ಮಾರಾಟ ಮಾಡಿದ ರೈತರಿಗೆ ಐದು ತಿಂಗಳು ಕಳೆದರೂ ಹಣ ಜಮಾ ಆಗಿಲ್ಲ. ಮಳೆ ಇಲ್ಲದೆ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ತಾ.ಪಂ. ವತಿಯಿಂದ ತಾಲ್ಲೂಕಿನ 17 ಗ್ರಾಮ ಪಂಚಾಯಿತಿಗಳಲ್ಲಿ ಕೂಡಲೇ ವಿಬಿ- ಜಿ ರಾಮ್ ಜಿ ಯೋಜನೆಯಡಿ ಕಾರ್ಮಿಕರಿಗೆ ಕೂಲಿ ಕೆಲಸ ನೀಡಬೇಕು' ಎಂದು ಒತ್ತಾಯಿಸಿದರು.ರೈತ ಸಂಘದ ಪದಾಧಿಕಾರಿಗಳಾದ ಶ್ಯಾಮ ಸಿಂಗ್ ರಜಪೂತ್, ವೀರೇಶ ನಾಯಕ, ಶ್ರೀಧರ ಕೋಟೆಕಲ್, ಉರುಕುಂದ ನಾಯಕ ಬಜಾರ, ಬುಜ್ಜಿಗೌಡ, ವೆಂಕಟೇಶ ಕರಡಿಗುಡ್ಡ ಉಪಸ್ಥಿತರಿದ್ದರು.
.
    user_ಬಸವರಾಜ ಭೋಗಾವತಿ
    ಬಸವರಾಜ ಭೋಗಾವತಿ
    Local News Reporter ಮಾನ್ವಿ, ರಾಯಚೂರು, ಕರ್ನಾಟಕ•
    4 hrs ago
  • ಚಿಂಚೋಳಿ ತಹಸೀಲ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆ ಚಿಂಚೋಳಿ: ಆಗಸ್ಟ್ 15ರಂದು ನಡೆಯಲಿರುವ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಚಿಂಚೋಳಿ ತಹಸೀಲ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಚರ್ಚಿಸಿದರು.
    3
    ಚಿಂಚೋಳಿ ತಹಸೀಲ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆ
ಚಿಂಚೋಳಿ: ಆಗಸ್ಟ್ 15ರಂದು ನಡೆಯಲಿರುವ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಚಿಂಚೋಳಿ ತಹಸೀಲ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಚರ್ಚಿಸಿದರು.
    user_VISION NEWS KALABURAGI
    VISION NEWS KALABURAGI
    Local News Reporter ಚಿಂಚೋಳಿ, ಕಲಬುರಗಿ, ಕರ್ನಾಟಕ•
    7 hrs ago
  • ಯಾದಗಿರಿ || ಗ್ಯಾಸ್ ಸೋರಿಕೆ ದುರಂತ: ಮೂವರು ಕಾರ್ಮಿಕರ ದುರ್ಮರಣ ಕಡೇಚೂರ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯಲ್ಲಿ ವಿಷಾನಿಲ ಸೋರಿಕೆ; ಯಾದಗಿರಿ || ಗ್ಯಾಸ್ ಸೋರಿಕೆ ದುರಂತ: ಮೂವರು ಕಾರ್ಮಿಕರ ದುರ್ಮರಣ ಕಡೇಚೂರ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯಲ್ಲಿ ವಿಷಾನಿಲ ಸೋರಿಕೆ;
    1
    ಯಾದಗಿರಿ || ಗ್ಯಾಸ್ ಸೋರಿಕೆ ದುರಂತ: ಮೂವರು ಕಾರ್ಮಿಕರ ದುರ್ಮರಣ
ಕಡೇಚೂರ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯಲ್ಲಿ ವಿಷಾನಿಲ ಸೋರಿಕೆ;
ಯಾದಗಿರಿ || ಗ್ಯಾಸ್ ಸೋರಿಕೆ ದುರಂತ: ಮೂವರು ಕಾರ್ಮಿಕರ ದುರ್ಮರಣ
ಕಡೇಚೂರ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯಲ್ಲಿ ವಿಷಾನಿಲ ಸೋರಿಕೆ;
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.