ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಬಾರಕೋಲು ಚಳವಳಿ ಇಂದು ಮಾನ್ವಿ ಪಟ್ಣಣದ ಬಸವ ವೃತ್ತದಲ್ಲಿ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಬಾರಕೋಲು ಚಳವಳಿ ಮೂಲಕ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಹೊಳೆಯಪ್ಪ ಉಟಕನೂರು ಮಾತನಾಡಿ, 'ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಬರಗಾಲದ ಪರಿಸ್ಥಿತಿ ಇದ್ದರೂ ಕೂಡ ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳ ಘೋಷಣೆ ಮಾಡಿಲ್ಲ' ಎಂದು ದೂರಿದರು. 'ರೈತರಿಗೆ ಪ್ರತಿ ಎಕರೆಗೆ ಕನಿಷ್ಠ ₹40 ಸಾವಿರ ಬರ ಪರಿಹಾರವನ್ನು ನೀಡಬೇಕು. ತುಂಗಭದ್ರಾ ಜಲಾಶಯದಲ್ಲಿ 28 ಟಿಎಂಸಿ ಅಡಿ ನೀರು ಸಂಗ್ರ-ಹವಾಗಿದ್ದು, ಈ ಬಾರಿ ಕಾರ್ಖಾನೆಗಳಿಗೆ ನೀರು ಕೊಡದೇ ರೈತರಿಗೆ ಕಾಲುವೆ ಮೂಲಕ ನೀರನ್ನು ನಿರಂತರವಾಗಿ ಹರಿಸಬೇಕು' ಎಂದು ಒತ್ತಾಯಿಸಿದರು. ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವೈ.ಬಸವರಾಜ ನಾಯಕ ಮಾತನಾಡಿ, 'ತಾಲ್ಲೂಕಿನಲ್ಲಿ ಸರ್ಕಾರಕ್ಕೆ ಜೋಳವನ್ನು ಮಾರಾಟ ಮಾಡಿದ ರೈತರಿಗೆ ಐದು ತಿಂಗಳು ಕಳೆದರೂ ಹಣ ಜಮಾ ಆಗಿಲ್ಲ. ಮಳೆ ಇಲ್ಲದೆ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ತಾ.ಪಂ. ವತಿಯಿಂದ ತಾಲ್ಲೂಕಿನ 17 ಗ್ರಾಮ ಪಂಚಾಯಿತಿಗಳಲ್ಲಿ ಕೂಡಲೇ ವಿಬಿ- ಜಿ ರಾಮ್ ಜಿ ಯೋಜನೆಯಡಿ ಕಾರ್ಮಿಕರಿಗೆ ಕೂಲಿ ಕೆಲಸ ನೀಡಬೇಕು' ಎಂದು ಒತ್ತಾಯಿಸಿದರು.ರೈತ ಸಂಘದ ಪದಾಧಿಕಾರಿಗಳಾದ ಶ್ಯಾಮ ಸಿಂಗ್ ರಜಪೂತ್, ವೀರೇಶ ನಾಯಕ, ಶ್ರೀಧರ ಕೋಟೆಕಲ್, ಉರುಕುಂದ ನಾಯಕ ಬಜಾರ, ಬುಜ್ಜಿಗೌಡ, ವೆಂಕಟೇಶ ಕರಡಿಗುಡ್ಡ ಉಪಸ್ಥಿತರಿದ್ದರು. .
ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಬಾರಕೋಲು ಚಳವಳಿ ಇಂದು ಮಾನ್ವಿ ಪಟ್ಣಣದ ಬಸವ ವೃತ್ತದಲ್ಲಿ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಬಾರಕೋಲು ಚಳವಳಿ ಮೂಲಕ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಹೊಳೆಯಪ್ಪ ಉಟಕನೂರು
ಮಾತನಾಡಿ, 'ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಬರಗಾಲದ ಪರಿಸ್ಥಿತಿ ಇದ್ದರೂ ಕೂಡ ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳ ಘೋಷಣೆ ಮಾಡಿಲ್ಲ' ಎಂದು ದೂರಿದರು. 'ರೈತರಿಗೆ ಪ್ರತಿ ಎಕರೆಗೆ ಕನಿಷ್ಠ ₹40 ಸಾವಿರ ಬರ ಪರಿಹಾರವನ್ನು ನೀಡಬೇಕು. ತುಂಗಭದ್ರಾ ಜಲಾಶಯದಲ್ಲಿ 28 ಟಿಎಂಸಿ ಅಡಿ ನೀರು ಸಂಗ್ರ-ಹವಾಗಿದ್ದು, ಈ ಬಾರಿ ಕಾರ್ಖಾನೆಗಳಿಗೆ ನೀರು ಕೊಡದೇ ರೈತರಿಗೆ ಕಾಲುವೆ ಮೂಲಕ ನೀರನ್ನು ನಿರಂತರವಾಗಿ ಹರಿಸಬೇಕು' ಎಂದು ಒತ್ತಾಯಿಸಿದರು. ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವೈ.ಬಸವರಾಜ ನಾಯಕ ಮಾತನಾಡಿ,
'ತಾಲ್ಲೂಕಿನಲ್ಲಿ ಸರ್ಕಾರಕ್ಕೆ ಜೋಳವನ್ನು ಮಾರಾಟ ಮಾಡಿದ ರೈತರಿಗೆ ಐದು ತಿಂಗಳು ಕಳೆದರೂ ಹಣ ಜಮಾ ಆಗಿಲ್ಲ. ಮಳೆ ಇಲ್ಲದೆ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ತಾ.ಪಂ. ವತಿಯಿಂದ ತಾಲ್ಲೂಕಿನ 17 ಗ್ರಾಮ ಪಂಚಾಯಿತಿಗಳಲ್ಲಿ ಕೂಡಲೇ ವಿಬಿ- ಜಿ ರಾಮ್ ಜಿ ಯೋಜನೆಯಡಿ ಕಾರ್ಮಿಕರಿಗೆ ಕೂಲಿ ಕೆಲಸ ನೀಡಬೇಕು' ಎಂದು ಒತ್ತಾಯಿಸಿದರು.ರೈತ ಸಂಘದ ಪದಾಧಿಕಾರಿಗಳಾದ ಶ್ಯಾಮ ಸಿಂಗ್ ರಜಪೂತ್, ವೀರೇಶ ನಾಯಕ, ಶ್ರೀಧರ ಕೋಟೆಕಲ್, ಉರುಕುಂದ ನಾಯಕ ಬಜಾರ, ಬುಜ್ಜಿಗೌಡ, ವೆಂಕಟೇಶ ಕರಡಿಗುಡ್ಡ ಉಪಸ್ಥಿತರಿದ್ದರು. .
- ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಬಾರಕೋಲು ಚಳವಳಿ ಇಂದು ಮಾನ್ವಿ ಪಟ್ಣಣದ ಬಸವ ವೃತ್ತದಲ್ಲಿ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಬಾರಕೋಲು ಚಳವಳಿ ಮೂಲಕ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಹೊಳೆಯಪ್ಪ ಉಟಕನೂರು ಮಾತನಾಡಿ, 'ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಬರಗಾಲದ ಪರಿಸ್ಥಿತಿ ಇದ್ದರೂ ಕೂಡ ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳ ಘೋಷಣೆ ಮಾಡಿಲ್ಲ' ಎಂದು ದೂರಿದರು. 'ರೈತರಿಗೆ ಪ್ರತಿ ಎಕರೆಗೆ ಕನಿಷ್ಠ ₹40 ಸಾವಿರ ಬರ ಪರಿಹಾರವನ್ನು ನೀಡಬೇಕು. ತುಂಗಭದ್ರಾ ಜಲಾಶಯದಲ್ಲಿ 28 ಟಿಎಂಸಿ ಅಡಿ ನೀರು ಸಂಗ್ರ-ಹವಾಗಿದ್ದು, ಈ ಬಾರಿ ಕಾರ್ಖಾನೆಗಳಿಗೆ ನೀರು ಕೊಡದೇ ರೈತರಿಗೆ ಕಾಲುವೆ ಮೂಲಕ ನೀರನ್ನು ನಿರಂತರವಾಗಿ ಹರಿಸಬೇಕು' ಎಂದು ಒತ್ತಾಯಿಸಿದರು. ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವೈ.ಬಸವರಾಜ ನಾಯಕ ಮಾತನಾಡಿ, 'ತಾಲ್ಲೂಕಿನಲ್ಲಿ ಸರ್ಕಾರಕ್ಕೆ ಜೋಳವನ್ನು ಮಾರಾಟ ಮಾಡಿದ ರೈತರಿಗೆ ಐದು ತಿಂಗಳು ಕಳೆದರೂ ಹಣ ಜಮಾ ಆಗಿಲ್ಲ. ಮಳೆ ಇಲ್ಲದೆ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ತಾ.ಪಂ. ವತಿಯಿಂದ ತಾಲ್ಲೂಕಿನ 17 ಗ್ರಾಮ ಪಂಚಾಯಿತಿಗಳಲ್ಲಿ ಕೂಡಲೇ ವಿಬಿ- ಜಿ ರಾಮ್ ಜಿ ಯೋಜನೆಯಡಿ ಕಾರ್ಮಿಕರಿಗೆ ಕೂಲಿ ಕೆಲಸ ನೀಡಬೇಕು' ಎಂದು ಒತ್ತಾಯಿಸಿದರು.ರೈತ ಸಂಘದ ಪದಾಧಿಕಾರಿಗಳಾದ ಶ್ಯಾಮ ಸಿಂಗ್ ರಜಪೂತ್, ವೀರೇಶ ನಾಯಕ, ಶ್ರೀಧರ ಕೋಟೆಕಲ್, ಉರುಕುಂದ ನಾಯಕ ಬಜಾರ, ಬುಜ್ಜಿಗೌಡ, ವೆಂಕಟೇಶ ಕರಡಿಗುಡ್ಡ ಉಪಸ್ಥಿತರಿದ್ದರು. .3
- ಸಮಯ ಪ್ರಜ್ಞೆಯಿಂದಲೇ ಗುರಿ ಸಾಧನೆ – ರಾಯಚೂರಿನಲ್ಲಿ ಡಾ. ಜಿ. ಎಸ್. ಬಿರಾದಾರ ಹೇಳಿಕೆ ರಾಯಚೂರು : ಎಲ್‌ವಿಡಿ ಮಹಾವಿದ್ಯಾಲಯದಲ್ಲಿ 2025–26ನೇ ಶೈಕ್ಷಣಿಕ ಸಾಲಿನ ಬಿಎ, ಬಿಎಸ್‌ಸಿ ಹಾಗೂ ಬಿಸಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಅಭಿವಿನ್ಯಾಸ ಕಾರ್ಯಕ್ರಮವನ್ನು ಕಾಲೇಜು ಸಭಾಂಗಣದಲ್ಲಿ ಮಂಗಳವಾರ 11 ಗಂಟೆಗೆ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಉಪಕುಲಸಚಿವರಾದ ಡಾ. ಜಿ. ಎಸ್. ಬಿರಾದಾರ ಉದ್ಘಾಟಿಸಿ ಮಾತನಾಡಿ, "ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಬೆಳೆಸಿಕೊಂಡಾಗ ಮಾತ್ರ ತಮ್ಮ ಗುರಿಯನ್ನು ಯಶಸ್ವಿಯಾಗಿ ತಲುಪಲು ಸಾಧ್ಯ. ಯಾವುದೇ ಕ್ಷೇತ್ರದಲ್ಲಿದ್ದರೂ ಪರಿಶ್ರಮ, ಶಿಸ್ತು ಮತ್ತು ಸಕಾರಾತ್ಮಕ ಮನೋಭಾವದಿಂದ ವಿದ್ಯಾಭ್ಯಾಸ ಮಾಡಿದರೆ ಯಶಸ್ಸು ಖಚಿತ. ನಿಮ್ಮ ಸಾಧನೆಯೇ ನಿಮ್ಮ ವ್ಯಕ್ತಿತ್ವವನ್ನು ಗುರುತಿಸುತ್ತದೆ," ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಾರಾನಾಥ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಬಾಪತಿ ಪಾಟೀಲ್ (ವಕೀಲರು) ಮಾತನಾಡಿ, ಕಾಲೇಜಿನಲ್ಲಿ ಲಭ್ಯವಿರುವ ಎಲ್ಲಾ ಶೈಕ್ಷಣಿಕ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬೇಕೆಂದು ಕರೆ ನೀಡಿದರು. ತಾರಾನಾಥ ಶಿಕ್ಷಣ ಸಂಸ್ಥೆ ಹಾಗೂ ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ವೀರಹನುಮಾನ ಮಾತನಾಡಿ, ಕಾಲೇಜಿನ ಶಿಸ್ತು ಮತ್ತು ಉತ್ತಮ ಫಲಿತಾಂಶಗಳು ಸಂಸ್ಥೆಯ ಹೆಮ್ಮೆ ಹೆಚ್ಚಿಸುತ್ತವೆ. ವಿದ್ಯಾರ್ಥಿಗಳು ಸಮಯಪಾಲನೆ, ಪರಿಶ್ರಮ ಹಾಗೂ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಶರಣಗೌಡ ಬಿ. ಎಚ್. ಮಾತನಾಡಿ, ಕಾಲೇಜಿನಲ್ಲಿ ಉತ್ತಮ ಬೋಧಕ ವೃಂದ, ಸುಸಜ್ಜಿತ ಗ್ರಂಥಾಲಯ, ವಿಶಾಲ ಕ್ರೀಡಾಂಗಣ, ಜಿಮ್ ಸೇರಿದಂತೆ ಅಗತ್ಯ ಸೌಲಭ್ಯಗಳಿದ್ದು, ವಿದ್ಯಾರ್ಥಿಗಳು ಅವುಗಳನ್ನು ಸದುಪಯೋಗಪಡಿಸಿಕೊಂಡು ಶಿಸ್ತುಬದ್ಧವಾಗಿ ವಿದ್ಯಾಭ್ಯಾಸ ಮಾಡಬೇಕೆಂದರು. ಉಪಪ್ರಾಚಾರ್ಯ ಡಾ. ಆಂಜನೇಯ ಅವರು ಹೊಸ ಕಾಲೇಜು ವಾತಾವರಣಕ್ಕೆ ವಿದ್ಯಾರ್ಥಿಗಳು ಹೊಂದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಕಾಲೇಜಿನ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳ ಕುರಿತು ವಿವಿಧ ವಿಭಾಗಗಳ ಪ್ರಾಧ್ಯಾಪಕರು ಮಾಹಿತಿ ನೀಡಿದರು. ಕಾರ್ಯಕ್ರಮದ ಸಂಯೋಜಕಿ ಡಾ. ಅರುಣಾ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾರೋಪದಲ್ಲಿ ವರದಿ ಮಂಡಿಸಿದರು. ವೇದಿಕೆಯಲ್ಲಿ ತಾರಾನಾಥ ಶಿಕ್ಷಣ ಸಂಸ್ಥೆಯ ಖಜಾಂಚಿ ಪುರುಷೋತ್ತಮ ದಾಸ್ ಇನ್ನಾಣಿ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಿಎ, ಬಿಎಸ್‌ಸಿ ಹಾಗೂ ಬಿಸಿಎ ಪ್ರಥಮ ವರ್ಷದ ಒಟ್ಟು 350 ವಿದ್ಯಾರ್ಥಿಗಳು ಭಾಗವಹಿಸಿ ಅಭಿವಿನ್ಯಾಸ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಬಿಎಸ್‌ಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ಕು. ಹರ್ಷಿತಾ ಪ್ರಾರ್ಥನಾ ಗೀತೆ ಹಾಡಿದರು. ಹುಸೇನಪ್ಪ ಉದ್ಘಾಟಕರ ಪರಿಚಯ ಮಾಡಿಕೊಟ್ಟರೆ, ಶ್ರೀಮತಿ ಹೇಮಲತಾ ಹಾಗೂ ಮಾಲತೇಶ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ವೆಂಕಟೇಶ ಮತ್ತು ಡಾ. ಮಂಜುನಾಥ ಸ್ವಾಗತಿಸಿದರು. ಶ್ರೀಮತಿ ಸ್ವಾತಿ ದೀಕ್ಷಿತ್ ಹಾಗೂ ಡಾ. ಹನುಮಂತ ನಾಯಕ ವಂದಿಸಿದರು.1
- ಕೂಡ್ಲಿಗಿ : ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ತಾಯಿ ಮಕ್ಕಳ ಆಸ್ಪತ್ರೆ , ಅನಿರ್ಯ ಹಾಗೂ ತುರ್ತಾಗಿ ನಿರ್ಮಾಣವಾಗಬೇಕಿದೆ _ ಸಾರ್ವಜನಿಕರ ಹೋರಾಟಗಾರರ ಅಭಿಮತ *ಕೂಡ್ಲಿಗಿ : ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ತಾಯಿ ಮಕ್ಕಳ ಆಸ್ಪತ್ರೆ , ಅನಿರ್ಯ ಹಾಗೂ ತುರ್ತಾಗಿ ನಿರ್ಮಾಣವಾಗಬೇಕಿದೆ _ ಸಾರ್ವಜನಿಕರ ಹೋರಾಟಗಾರರ ಅಭಿಮತ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದಲ್ಲಿನ 100ಹಾಸಿಗೆ ಆಸ್ಪತ್ರೆಯನ್ನು , 150 ಹಾಸಿಗೆ ಆಸ್ಪತ್ರೆಯಾಗಿ ಉನ್ನತೀಕರಿಸಿ. ತಾಯಿ ಮಕ್ಕಳ ಆಸ್ಪತ್ರೆಯನ್ನು , ಹಾಲಿ ಇರುವ ಆಸ್ಪತ್ರೆಗೆ ಹೊಂದಿಕೊಂಡಂತೆ ನಿರ್ಮಿಸಿ. ಆಸ್ಪತ್ರೆಯನ್ನು ವಿಭಾಗಿಯ ಆಸ್ಪತ್ರೆಯನ್ನಾಗಿಸುವ ನಿಟ್ಟಿನಲ್ಲಿ , ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರ ಅಭಿವೃದ್ಧಿಯ ದಿಟ್ಟ ಹೆಜ್ಜೆಗೆ. ಸಾರ್ವಜನಿಕ ವಲಯದಲ್ಲಿ ಕೂಡ ಉತ್ತಮ ಪ್ರತಿಕ್ರಿಯೆ ದೊರಕಿದೆ , ಸಾರ್ವಜನಿಕರು ಕೂಡ ಶಾಸಕರಿಗೆ ನಡೆಗೆ ಪೂರಕ ಅಭಿಮತ ನೀಡೊ ಮೂಲಕ ಸಾಥ್ ನೀಡಿದ್ದಾರೆ. ಸಂಬಂಧಿಸಿದಂತೆ ಸಾರ್ವಜನಿಕ ವಲಯದ ಅಭಿಪ್ರಾಯ ಸಂಗ್ರಹಿಸಿದಾಗ , ಬಹುತೇಕ ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ತುರ್ತುಸೇವಾ ಸಿಬ್ಬಂದಿಯವರು , ಮುಖಂಡರು , ಸಾರ್ವಜನಿಕರು ಶಾಸಕರ ಈ ನಡೆಯನ್ನು ಶ್ಲಾಘಿಸಿದ್ದಾರೆ. ತಾಯಿ ಮಕ್ಕಳ ಮರಣ ಪ್ರಮಾಣ ತಗ್ಗಿಸಲು , ತಾಯಿ ಮಕ್ಕಳಿಗೆ ಅಗತ್ಯ ತುರ್ತು ಚಿಕಿತ್ಸೆ ಒದಗಿಸಲು. ತಾಯಿ ಮಕ್ಕಳ ಆಸ್ಪತ್ರೆಯು , ಹಾಲಿ ಇರುವ ಆಸ್ಪತ್ರೆಗೆ ಹೊಂದಿಕೊಂಡಿರುವುದು. ಎಲ್ಲಾ ರೀತಿಯಿಂದ ತುಂಬಾ ಅನುಕೂಲವಾಗಲಿದ್ದು , ಅದು ಅತ್ಯಅಗತ್ಯವಿದೆ ಎಂದು ಸ್ತ್ರೀರೋಗ ತಜ್ಞ ವೈದ್ಯರಾದ ನಾಗರಾಜರವರು ತಿಳಿಸಿದ್ದಾರೆ. ಸಂಘಟನೆಗಳ ಮುಖಂಡರು ಮಾತನಾಡಿ , ತಾಯಿ ಮಕ್ಕಳ ಆಸ್ಪತ್ರೆ ಕೂಡ್ಲಿಗಿ ಗೆ ಮಾತ್ರ ಸೀಮಿತವಾಗಲ್ಲ. ನೆರೆ ಹೊರೆ ತಾಲೂಕುಗಳಿಗೂ ಸಹಕಾರಿಯಾಗಲಿದೆ , ಸಹೃದಯವಂತ ಶಾಸಕರನ್ನು ಜನಾನುರಾಗಿ ಶಾಸಕರನ್ನು ಪಡೆದಿರುವುದು ನಮ್ಮ ಭಾಗ್ಯ ಎಂದಿದ್ದಾರೆ. ಆಶಕಾರ್ಯಕರ್ತರು ಮಾತನಾಡಿ , ಕೆಲ ಅನಿವಾರ್ಯ ಕಾರಣಗಳಿಗೆ ಹೆರಿಗೆ ಪ್ರಕಣಗಳನ್ನು. ಕೂಡ್ಲಗಿಯಿಂದ ಹೊಸಪೇಟೆ , ಬಳ್ಳಾರಿ , ಕೊಪ್ಪಳ , ದಾವಣಗೆರೆ ಆಸ್ಪತ್ರೆಗೆ ಶಿಪಾರಸ್ಸು ಮಾಡೋದು ಸಹಜವಾಗಿದೆ. ಅದರಿಂದಾಗಿ ಎಲ್ಲಾ ರೀತಿಯ ನಷ್ಟಗಳನ್ನು ಸಂಕಷ್ಟಗಳನ್ನು ಅನುಭವಿಸುವಂತಾಗಿತ್ತು , ಅದೆಲ್ಲಾ ತಪ್ಪಲಿದೆ ಹಾಗೂ ತಾಯಿ ಮಕ್ಕಳು ಸುರಕ್ಷಿತವಾಗಿರಲು ಆಸ್ಪತ್ರೆ ಹತ್ತಿರದಲ್ಲಿಯೇ ಆಗಬೇಕಿದೆ ಎಂದಿದ್ದಾರೆ. ದಲಿತ ಮುಖಂಡರು ಹೋರಾಟಗಾರರು ಮಾತನಾಡಿ , ಮಾಜಿ ಶಾಸಕರಾದ ದಿವಂತ ಎನ್ ಟಿ ಬೊಮ್ಮಣ್ಣರವರು. ಅಂದರೆ ಶಾಸಕರ ತಂದೆಯವರು ಶಾಸಕರಾದಾಗ , 100ಹಾಸಿಗೆ ಆಸ್ಪತ್ರೆ ನಿರ್ಮಿಸಿ ದಾಖಲು ಮಾಡಿದ್ದಾರೆ. ಅಂತೆಯೆ ಅವರ ಪುತ್ರರಾದ ಶಾಸಕರಾದ , ಡಾ ॥ ಎನ್ ಟಿ ಶ್ರೀನಿವಾಸ್ ರವರು 150 ಹಾಸಿಗೆ ಆಸ್ಪತ್ರೆಯಾಗಿ ಉನ್ನತೀಕರಿಸಿದ್ದಾರೆ. ಅದು ವಿಭಾಗ ಮಟ್ಟದ ಸುಸಜ್ಜಿತ ತಾಯಿ ಮಕ್ಕಳ ಆಸ್ಪತ್ರೆಯಾಗಿ , ಉನ್ನತೀಕರಿಸಿ ಅಭಿವೃದ್ಧಿ ಪಡಿಸುತ್ತಿರುವುದು ಶ್ಲಾಘನೀಯವಾದದ್ದು. ಈ ಮೂಲಕ ಅಸಂಖ್ಯಾತ ತಾಯಿ ಮಕ್ಕಳ , ಆರೈಕೆಗೆ ಹಾಗೂ ತುರ್ತು ಚಿಕಿತ್ಸೆಗೆ ಅಗತ್ಯ ವಾತಾವರಣ ನಿರ್ಮಿಸುತ್ತಿದ್ದಾರೆ. ತಾಯಿ ಮಕ್ಕಳ ಆಸ್ಪತ್ರೆ ಪಟ್ಟಣ ತಾಲೂಕು ಮಾತ್ರವಲ್ಲ , ವಿಜಯನಗರ ಜಿಲ್ಲೆಗೆ ಮಾದರಿ ಆಸ್ಪತ್ರೆಯಾಗಲಿದೆ. ಅದು ವಿಜಯನಗರ ಜಿಲ್ಲೆಯ ನವಜಾತ ಶಿಶು ಹಾಗೂ ತಾಯಿಯರಿಗೆ ಸಂಜೀವಿನಯಾಗಲಿದೆಎಂದು ಹಿರಿಯ ನಾಗರೀಕರು ಬಣ್ಣಿಸಿದ್ದಾರೆ. ಅದುದರಿಂದಾಗಿ ಈ ಆಸ್ಪತ್ರೆಯು , ಹಾಲಿ ನಿಗದಿಪಡಿಸಿರುವ ಸಾರ್ವಜನಿಕ ಆಸ್ಪತ್ರೆಗೆ ಹೊಂದಿಕೊಂಡ ಜಾಗದಲ್ಲಿಯೇ ನಿರ್ಮಾಣವಾಗಬೇಕಿದೆ ಎಂದು ಅಭಿಮತ ವ್ಯೆಕ್ತಪಡಿಸಿದ್ದಾರೆ. ಪಟ್ಟಣ ತಾಲೂಕು ನೆರೆ ಹೊರೆ ತಾಲೂಕುಗಳಿಂದ ತಿಂಗಳೊಂದಕ್ಕೆ 50 - 75 ಹೆರಿಗೆ ಪ್ರಕರಣಗಳು , ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆ ಅರಸಿ ಬರಲಿದ್ದು. ಇದು ಎಲ್ಲರಿಗೂ ತುಂಬಾ ಅನುಕೂಲವಾಗಲಿದೆ , ಶಾಸಕರ ದೂರ ದೃಷ್ಟಿ ಹಾಗೂ ಜನಪರ ಕಾಳಜಿಯನ್ನು ಸಾಬೀತುಪಡಿಸಿದೆ ಎಂದಿದ್ದಾರೆ. ಶಾಸಕರ ಜನಪರ ಕಾಳಜಿ ಮಕ್ಕಳ ಮಹಿಳೆಯರ ಪರ ಇರುವ ನಿಲುವಿಗೆ ನಿದರ್ಶನವಾಗಿದ್ದು , ಈ ಮೂಲಕ ಅವರು ತಾಯಿಯ ಮಮತೆಯ ಸಹೃದಯವಂತಿಕೆ ತೋರಿದ್ದಾರೆ. ತಾಯಿ ಮಕ್ಕಳ ಆಸ್ಪತ್ರೆ ಹಾಲಿ ಇರುವ ಆಸ್ಪತ್ರೆಗೆ ಹೊಂದಿಕೊಂಡಿದ್ದಲ್ಲಿ , ಎಲ್ಲರಿಗೂ ಎಲ್ಲಾ ರೀತಿಯಲ್ಲಿ ಸಾಕಷ್ಟು ಅನುಕೂಕವಾಗಲಿದೆ. ಶಾಸಕರ ಕಾಳಜಿ ಹಾಗೂ ಅಂತಃಕರಣ ಪೂರ್ವಕ ಹೃದಯ ಶ್ರೀಮಂತಿಕೆಗೆ , ತಾಯಿ ಮಕ್ಕಳ ಆಸ್ಪತ್ರೆಯೇ ಸಾಕ್ಷಿಯಾಗಿದೆ. ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರ , ಈ ಮಹಾ ಕಾರ್ಯಕ್ಕೆ ಅವರೊಂದಿಗೆ ತಾವು ಸದಾ ಇರುತ್ತೇವೆಂದು. ಕೂಡ್ಲಿಗಿ ಪಟ್ಟಣದ ನಾಗರೀಕರು , ಸಾರ್ವಜನಿಕರು , ಹೋರಾಟಗಾರರು , ವಿವಿದ ಸಂಘಟನೆಗಳ ಪದಾಧಿಕಾರಿಗಳು. ಮಹಿಳಾ ಸಂಘ ,ರೈತ ಸಂಘ , ಕಾರ್ಮಿಕರ ಸಂಘ , ಕನ್ನಡ ಪರ ಸಂಘಟನೆಗಳು , ದಲಿತಪರ ಸಂಘಟನೆಗಳು , ತಾಲೂಕಿನ ಬಹುತೇಕ ಸಂಘಟನೆಗಳ ಪದಾಧಿಕಾರಿಗಳು ಅಭಿಮತ ವ್ಯಕ್ತಪಡಿಸಿದ್ದಾರೆ.✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಕಾಲೇಜಿನ ಕೊನೆಯ ದಿನ ಸೆಕ್ಯೂರಿಟಿ ಗಾರ್ಡ್‌ನ ಆಶೀರ್ವಾದ ಪಡೆದ ವಿದ್ಯಾರ್ಥಿ ಕಾಲೇಜಿನ ಕೊನೆಯ ದಿನ ಸೆಕ್ಯೂರಿಟಿ ಗಾರ್ಡ್‌ನ ಆಶೀರ್ವಾದ ಪಡೆದ ವಿದ್ಯಾರ್ಥಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ದೃಶ್ಯಗಳು ಮನಸ್ಸಿಗೆ ಹತ್ತಿರವಾಗುತ್ತವೆ. ಇದೀಗ ವಿದ್ಯಾರ್ಥಿಯೊಬ್ಬ ಕಾಲೇಜಿನ ಕೊನೆಯ ದಿನದಂದು ಪ್ರತಿದಿನ ಗೇಟ್ ಮುಂದೆ ನಿಂತು ತನ್ನನ್ನು ನಗುತ್ತಾ ಸ್ವಾಗತಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ನ ಆಶೀರ್ವಾದ ಪಡೆದುಕೊಂಡಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ. ಕಾಲೇಜ್ ಲೈಫ್ (College life) ಇಸ್ ಗೋಲ್ಡನ್ ಲೈಫ್ ಅಂತಾರೆ. ಕಾಲೇಜಿನ ಕೊನೆಯ ದಿನದಂದು ಪ್ರತಿಯೊಬ್ಬ ವಿದ್ಯಾರ್ಥಿಯೂ ಜತೆಯಾಗಿ ಕಳೆದ ಸುಂದರ ಕ್ಷಣಗಳನ್ನು ಮೆಲುಕು ಹಾಕುವುದು ಸಹಜ. ಇನ್ನ ತನ್ನ ಪ್ರೀತಿಯ ಶಿಕ್ಷಕರಿಗೆ, ಸ್ನೇಹಿತರೊಂದಿಗೆ ಫೋಟೋ ಕ್ಲಿಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಪದವಿ ವಿದ್ಯಾರ್ಥಿ ಸೆಕ್ಯೂರಿಟಿ ಗಾರ್ಡ್‌ಗೆ ಕೃತಜ್ಞತೆ ಸಲ್ಲಿಸಿದ್ದಾನೆ. ಹೌದು, ಕಾಲೇಜ್ ಗೇಟ್ ಹತ್ತಿರ ಬರುತ್ತಿದ್ದಂತೆ ನಗುತ್ತಾ ಸ್ವಾಗತಿಸುತ್ತಿದ್ದ ಮಹಿಳಾ ಭದ್ರತಾ ಸಿಬ್ಬಂದಿಯ ಆಶೀರ್ವಾದ ಪಡೆದ ಕ್ಷಣದ ವಿಡಿಯೋ ವೈರಲ್ ಆಗಿದೆ. ಈ ಹೃದಯ ಸ್ಪರ್ಶಿ ದೃಶ್ಯ ಈ ವಿದ್ಯಾರ್ಥಿಯ ಸಂಸ್ಕಾರಯುತ ನಡವಳಿಕೆಯನ್ನು ಎತ್ತಿ ತೋರಿಸಿದೆ.ರೋಸಿ (Rosy) ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಕಾಲೇಜಿನ ಕೊನೆಯ ದಿನದಂದು ಮಹಿಳಾ ಭದ್ರತಾ ಸಿಬ್ಬಂದಿ ಕಾಲು ಮುಟ್ಟಿ ಆಶೀರ್ವಾದ ಪಡೆದುಕೊಳ್ಳುತ್ತಿರುವುದನ್ನು ನೋಡಬಹುದು. ಈ ವಿದ್ಯಾರ್ಥಿ ಕಾಲು ಮುಟ್ಟುತ್ತಿದ್ದಂತೆ ಸಿಬ್ಬಂದಿ ಭಾವುಕರಾಗಿದ್ದಾಳೆ. ಕೊನೆಗೆ ಈ ವಿದ್ಯಾರ್ಥಿ ತಬ್ಬಿಕೊಂಡು ಸೆಕ್ಯೂರಿಟಿ ಗಾರ್ಡ್‌ನನ್ನು ಸಮಾಧಾನ ಪಡಿಸುತ್ತಿರುವುದನ್ನು ನೀವು ಇಲ್ಲಿ ನೋಡಬಹುದು.ಆಗಸ್ಟ್ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇದುವರೆಗೆ ಆರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಭಾರತೀಯ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಜವಾದ ಜೆನ್ ಝೆಡ್ ಎಂದಿದ್ದಾರೆ. ಮತ್ತೊಬ್ಬರು, ಈ ವಿದ್ಯಾರ್ಥಿಯ ಗುಣ ನಡತೆ ಹೃದಯ ಹತ್ತಿರವಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ.1
- ರಾಯಚೂರಿನಲ್ಲಿ ಸಚಿವ ಸ್ಥಾನಕ್ಕೆ ಆಗ್ರಹಿಸಿ ಆ.15ರಂದು ಪ್ರತಿಭಟನೆಗೆ ದಲಿತ ಪರ ಸಂಘಟನೆಗಳ ಕರೆ ರಾಯಚೂರು : ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿಂದುಳಿದ ಜಿಲ್ಲೆಗಳಾದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡದೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿ, ಆಗಸ್ಟ್ 15ರಂದು ಮಹಾತ್ಮ ಗಾಂಧಿ ಕ್ರೀಡಾಂಗಣದ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಪರ ಸಂಘಟನೆಗಳ ಒಕ್ಕೂಟದ ಮುಖಂಡ ಎಸ್. ಮಾರೆಪ್ಪ 10 ಗಂಟೆಗೆ ತಿಳಿಸಿದರು. ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಸಚಿವ ಸ್ಥಾನ ಹಾಗೂ ಉಸ್ತುವಾರಿ ಸಚಿವರ ಜವಾಬ್ದಾರಿಯನ್ನು ಜಿಲ್ಲೆಯ ಜನಪ್ರತಿನಿಧಿಗಳಿಗೆ ನೀಡಬೇಕು. ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮಕ್ಕೆ ಬೇರೆ ಜಿಲ್ಲೆಯ ಸಚಿವರು ಬಂದರೆ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಎಚ್ಚರಿಸಿದರು. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ರಾಜಕೀಯವಾಗಿ ಕಡೆಗಣನೆಗೆ ಒಳಗಾಗಿವೆ. ಈ ಭಾಗದ ಅಭಿವೃದ್ಧಿ ವಿಚಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಸಮರ್ಪಕವಾಗಿ ಧ್ವನಿ ಎತ್ತುತ್ತಿಲ್ಲ. ಬೇರೆ ಜಿಲ್ಲೆಗಳ ರಾಜಕಾರಣಿಗಳು ತಮ್ಮ ಜಿಲ್ಲೆಯ ಹಿತಾಸಕ್ತಿಗಾಗಿ ಒಗ್ಗಟ್ಟಿನಿಂದ ಹೋರಾಡುತ್ತಾರೆ. ಆದರೆ ರಾಯಚೂರು ಜಿಲ್ಲೆಯ ರಾಜಕಾರಣಿಗಳಲ್ಲಿ ಅಂತಹ ಬದ್ಧತೆ ಕಾಣುತ್ತಿಲ್ಲ ಎಂದು ಆರೋಪಿಸಿದರು. ಜಿಲ್ಲೆಯ ಅಭಿವೃದ್ಧಿಗಿಂತ ವೈಯಕ್ತಿಕ ಹಿತಾಸಕ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದಲೇ ಸಚಿವ ಸ್ಥಾನ ಕೈತಪ್ಪಿದೆ. ಪಕ್ಕದ ಕಲಬುರಗಿ ಹಾಗೂ ಕೊಪ್ಪಳ ಜಿಲ್ಲೆಗಳಿಂದ ಇಬ್ಬರು–ಮೂರು ಜನ ಶಾಸಕರು ಸಚಿವರಾಗಿದ್ದು, ಅವರೇ ನಮ್ಮ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಬರುತ್ತಿದ್ದಾರೆ. ಆದರೂ ಜಿಲ್ಲೆಯ ಪರವಾಗಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ನಾಯಕರು ಯಾವುದೇ ಒಗ್ಗಟ್ಟಿನ ಧ್ವನಿ ಎತ್ತುತ್ತಿಲ್ಲ ಎಂದು ಟೀಕಿಸಿದರು. ಜಿಲ್ಲೆಗೆ ಸೂಕ್ತ ಸಚಿವ ಸ್ಥಾನ ಹಾಗೂ ಪ್ರಾತಿನಿಧ್ಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ. ಆಗಸ್ಟ್ 15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬೇರೆ ಜಿಲ್ಲೆಯ ಸಚಿವರು ಧ್ವಜಾರೋಹಣಕ್ಕೆ ಬಂದರೆ ಪ್ರತಿಭಟನೆ ಮೂಲಕ ವಿರೋಧಿಸಲಾಗುವುದು ಎಂದು ಎಸ್. ಮಾರೆಪ್ಪ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ದಲಿತ ಪರ ಸಂಘಟನೆಗಳ ಮುಖಂಡರಾದ ಹೇಮರಾಜ ಅಸ್ಕಿಹಾಳ, ಶ್ರೀನಿವಾಸ್, ಲಕ್ಷ್ಮಣ್, ತಾಯಪ್ಪ, ರವಿ, ನರಸಿಂಹಲು ಸೇರಿದಂತೆ ಹಲವರು ಉಪಸ್ಥಿತರಿದ್ದರು.1
- ಯಾದಗಿರಿ || ಗ್ಯಾಸ್ ಸೋರಿಕೆ ದುರಂತ: ಮೂವರು ಕಾರ್ಮಿಕರ ದುರ್ಮರಣ ಕಡೇಚೂರ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯಲ್ಲಿ ವಿಷಾನಿಲ ಸೋರಿಕೆ; ಯಾದಗಿರಿ || ಗ್ಯಾಸ್ ಸೋರಿಕೆ ದುರಂತ: ಮೂವರು ಕಾರ್ಮಿಕರ ದುರ್ಮರಣ ಕಡೇಚೂರ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯಲ್ಲಿ ವಿಷಾನಿಲ ಸೋರಿಕೆ;1