ನಿಜಶರಣ ಅಂಬಿಗರ ಚೌಡಯ್ಯನವರ ತತ್ವ ಆದರ್ಶ ಪ್ರತಿಯೊಬ್ಬರು ಪಾಲಿಸಬೇಕು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಕರೆ ! ಬಾಡಿಯಾಲ ಶ್ರಾವಣ ಮಾಸ್ ನಿಮಿತ್ತ ನಿಜಶರಣ ಅಂಬಿಗರ ಚೌಡಯ್ಯನವರ ಮೂತಿಗೆ ವಿಶೇಷ ಪೂಜೆ ಕಾರ್ಯಕ್ಕೆ ಉಮೇಶ ಕೆ. ಮುದ್ನಾಳ್ ಹರ್ಷ ! ಶ್ರೀ ನಿಜಶರಣ ಶರಣ ಅಂಬಿಗರ ಚೌಡಯ್ಯ ನವರು ಕೋಲಿ ಸಮಾಜಕ್ಕೆ ಸೀಮಿತವಲ್ಲ. ಸÀರ್ವ ಸಮಾಜದ ಶರಣರು ಅದಕ್ಕಾಗಿ ಅವರ ತತ್ವ ಆದರ್ಶಗಳು ಮತ್ತು ವಚನಗಳು ನಾವೆಲ್ಲರೂ ದಿನನಿತ್ಯ ಪಾಲಿಸಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ ಮುದ್ನಾಳ ಹೇಳಿದರು. ಯಾದಗಿರಿ ತಾಲೂಕಿನ ಸೈದಾಪೂರ ಸಮೀಪ ಇರುವ ಬಾಡಿಯಾಲ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ಸೋಮವಾರ ಬೆಳಿಗ್ಗೆ ನಿಜಶರಣ ಅಂಬಿಗರ ಚೌಡಯ್ಯನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು ೧೨ನೇ ಮಾಸದಲ್ಲಿ ಶ್ರಾವಣ ಮಾಸ ಶ್ರೇಷ್ಠ. ಹಾಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರಾವಣ ಮಾಸದಲ್ಲಿ ಒಂದು ತಿಂಗಳವರೆಗೆ ನಿರಂತರವಾಗಿ ವಿಶೇಷ ಪೂಜೆ ಅಭಿಯಾನ ಕಾರ್ಯಕ್ರಮ ನಡೆಯುತ್ತಿದ್ದು, ಸಮಾಜದ ಬಾಂಧವರು ಈ ಅಭಿಯಾನದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಈ ಕಾರ್ಯಕ್ರಮ ಯಶಸ್ವಿಗೆ ಪಾತ್ರರಾಗಬೇಕೆಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ವಿಶ್ವನಾಥ್ ಗಂಟೆ. ತಿಪ್ಪಣ್ಣ ಗಡದ್. ಮಲ್ಲೇಶಿ, ಜಗದೀಶ, ಮಲ್ಲಪ್ಪ, ಗೋವಿಂದ ತಿಮೋಜಿ. ಸೂಗರಪ್ಪ ಬೋಯಿನ್ . ಚಂದ್ರು ಮರಿಯಪ್ಪ ಮತ್ತಲ್ ಗಣಪುರ್. ಶಿವು ಬೋಯಿನ್ ಬಸವರಾಜ್ ಕವಲಿ. ಬಸವರಾಜ್ ಕೊತ್ತಪಲ್ಲಿ. ಭೀಮು ತಿಮೋಜಿ. ಚನ್ನು ಕವಳೂರ್. ನಿಂಗಪ್ಪ ಕಡೆಚೂರ್. ದೇವಪ್ಪ ಗಟ್ಟಿಗೂರ್. ಯಂಕಪ್ಪ ಚಂದಾಪುರ್. ರಾಮಣ್ಣ ಅಂಗಡಿ. ಬಸವರಾಜ ಕಾವಲಿ. ಮಲ್ಲು ಕವಲೂರ್. ಬನ್ನಪ್ಪ ತಿಮೋಜಿ. ಕರಿಯಪ್ಪ ಘಂಟಿ. ಮಹದೇವ ಗಾಡದ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಿಜಶರಣ ಅಂಬಿಗರ ಚೌಡಯ್ಯನವರ ತತ್ವ ಆದರ್ಶ ಪ್ರತಿಯೊಬ್ಬರು ಪಾಲಿಸಬೇಕು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಕರೆ ! ಬಾಡಿಯಾಲ ಶ್ರಾವಣ ಮಾಸ್ ನಿಮಿತ್ತ ನಿಜಶರಣ ಅಂಬಿಗರ ಚೌಡಯ್ಯನವರ ಮೂತಿಗೆ ವಿಶೇಷ ಪೂಜೆ ಕಾರ್ಯಕ್ಕೆ ಉಮೇಶ ಕೆ. ಮುದ್ನಾಳ್ ಹರ್ಷ ! ಶ್ರೀ ನಿಜಶರಣ ಶರಣ ಅಂಬಿಗರ ಚೌಡಯ್ಯ ನವರು ಕೋಲಿ ಸಮಾಜಕ್ಕೆ ಸೀಮಿತವಲ್ಲ. ಸÀರ್ವ ಸಮಾಜದ ಶರಣರು ಅದಕ್ಕಾಗಿ ಅವರ ತತ್ವ ಆದರ್ಶಗಳು ಮತ್ತು ವಚನಗಳು ನಾವೆಲ್ಲರೂ ದಿನನಿತ್ಯ ಪಾಲಿಸಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ
ಕಾರ್ಯದರ್ಶಿ ಉಮೇಶ ಕೆ ಮುದ್ನಾಳ ಹೇಳಿದರು. ಯಾದಗಿರಿ ತಾಲೂಕಿನ ಸೈದಾಪೂರ ಸಮೀಪ ಇರುವ ಬಾಡಿಯಾಲ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ಸೋಮವಾರ ಬೆಳಿಗ್ಗೆ ನಿಜಶರಣ ಅಂಬಿಗರ ಚೌಡಯ್ಯನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು ೧೨ನೇ ಮಾಸದಲ್ಲಿ ಶ್ರಾವಣ ಮಾಸ ಶ್ರೇಷ್ಠ. ಹಾಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರಾವಣ ಮಾಸದಲ್ಲಿ ಒಂದು ತಿಂಗಳವರೆಗೆ ನಿರಂತರವಾಗಿ ವಿಶೇಷ ಪೂಜೆ ಅಭಿಯಾನ ಕಾರ್ಯಕ್ರಮ ನಡೆಯುತ್ತಿದ್ದು, ಸಮಾಜದ ಬಾಂಧವರು ಈ ಅಭಿಯಾನದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಈ ಕಾರ್ಯಕ್ರಮ ಯಶಸ್ವಿಗೆ
ಪಾತ್ರರಾಗಬೇಕೆಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ವಿಶ್ವನಾಥ್ ಗಂಟೆ. ತಿಪ್ಪಣ್ಣ ಗಡದ್. ಮಲ್ಲೇಶಿ, ಜಗದೀಶ, ಮಲ್ಲಪ್ಪ, ಗೋವಿಂದ ತಿಮೋಜಿ. ಸೂಗರಪ್ಪ ಬೋಯಿನ್ . ಚಂದ್ರು ಮರಿಯಪ್ಪ ಮತ್ತಲ್ ಗಣಪುರ್. ಶಿವು ಬೋಯಿನ್ ಬಸವರಾಜ್ ಕವಲಿ. ಬಸವರಾಜ್ ಕೊತ್ತಪಲ್ಲಿ. ಭೀಮು ತಿಮೋಜಿ. ಚನ್ನು ಕವಳೂರ್. ನಿಂಗಪ್ಪ ಕಡೆಚೂರ್. ದೇವಪ್ಪ ಗಟ್ಟಿಗೂರ್. ಯಂಕಪ್ಪ ಚಂದಾಪುರ್. ರಾಮಣ್ಣ ಅಂಗಡಿ. ಬಸವರಾಜ ಕಾವಲಿ. ಮಲ್ಲು ಕವಲೂರ್. ಬನ್ನಪ್ಪ ತಿಮೋಜಿ. ಕರಿಯಪ್ಪ ಘಂಟಿ. ಮಹದೇವ ಗಾಡದ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
- [02/09, 1:27 pm] At Work: ಕಲಬುರಗಿಯಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ! ಟಯರ್‌ಗೆ ಬೆಂಕಿ ಹಚ್ಚಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ! ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಪ್ರದೇಶದ ಪಟ್ಟಿಯಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿಯಿಂದ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.ಎಸ್‌ವಿಪಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಮಾನವ ಸರಪಳಿ ನಿರ್ಮಿಸಿ ಹೋರಾಟ ನಡೆಸಿದರು. ಟಯರ್‌ಗೆ ಬೆಂಕಿ ಹಚ್ಚಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ ಮೂವರು ಸಚಿವರಿದ್ದರೂ ಬರಗಾಲ ಘೋಷಣೆ ಮಾಡಲು ವಿಫಲರಾಗಿದ್ದಾರೆ. ಕೂಡಲೇ ಕಲಬುರಗಿಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ, ರೈತರಿಗೆ ತಲಾ 50 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಲಬುರಗಿ ಬಂದ್ ಮಾಡಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.1
- ಕಲಬುರಗಿ- ಸಾರ್ವಜನಿಕರಿಗೆ ಹಿಂಸೆ ನೀಡಿದ ಬಿಜೆಪಿ ಪ್ರತಿಭಟನಾಕಾರರು ಕಲಬುರಗಿ- ರಾಜ್ಯದಾದ್ಯಂತ ಮುಂಗಾರು ಮಳೆ ಕೈ ಕೊಟ್ಟಿದ ರಿಂದ ಮಳೆಯಿಲ್ಲದೆ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗಿದ್ದು, ರಾಜ್ಯ ಸರ್ಕಾರದಿಂದ ಬರ ಪಟ್ಟಿಯಿಂದ ಕಲಬುರಗಿ ಕೈ ಬಿಟ್ಟ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು. ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತದಿಂದ ಜಿಲ್ಲಾಧಿಕಾರಿ ಕಛೇರಿ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ರಸ್ತೆ ಬಂದ್ ಮಾಡಿ ಟೈರ್ ಗೆ ಬೆಂಕಿ ಹಚ್ಚಿ ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಲಾಯಿತು. ಇನ್ನೂ ರಸ್ತೆಯಲ್ಲಿ ನಿಂತಿದ ಸಿಟಿ ಬಸ್ ಗೆ ನೀರಿನ ಬಾಟಲ್ ನಿಂದ ಹೊಡೆದ ಮಾಜಿಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಕೆಲ ವಾಹನ ಸವಾರರ ಮೇಲೆ ಮುಗಿ ಬಿದ್ದಿದ್ದರು. ಇದರಿಂದ ಕೆಲಕಾಲ ಮಿನಿ ವಿಧಾನಸೌಧದ ಬಳಿ ಉದ್ವಿಗ್ನದ ಪರಿಸ್ಥಿತಿ ಉಂಟಾಗಿತ್ತು . ಪ್ರತಿಭಟನಾಕಾರರು ಶಾಂತಿಯುತ ಪ್ರತಿಭಟನೆ ಮಾಡದೆ ಸಾರ್ವಜನಿಕರ ಮೇಲೆ ಮೃಗಗಳಂತೆ ಮುಗಿಬಿದ್ದಿದ್ದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದರು. ಈ ಜಟಾಪಟಿಯಲ್ಲಿ. ಪೊಲೀಸರ ಮಸ್ಯಸ್ಥಿಕೆಯಲ್ಲಿ ವಾಹನಗಳಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು1
- ಮಾನ್ವಿ, ಸಿರವಾರ ಬರಪೀಡಿತ ತಾಲೂಕುಗಳೆಂದು ಘೋಷಿಸದಿದ್ದರೆ ಉಗ್ರ ಹೋರಾಟ: ಜಯ ಕರ್ನಾಟಕ ರಕ್ಷಣಾ ಸೇನೆ ಎಚ್ಚರಿಕೆ ಮಾನ್ವಿ, ಸಿರವಾರ ಬರಪೀಡಿತ ತಾಲೂಕುಗಳೆಂದು ಘೋಷಿಸದಿದ್ದರೆ ಉಗ್ರ ಹೋರಾಟ: ಜಯ ಕರ್ನಾಟಕ ರಕ್ಷಣಾ ಸೇನೆ ಎಚ್ಚರಿಕೆ1
- ಬಡ ಜನರ ಮೇಲೆ ದರ್ಪ ತೋರಿದ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ವಿರುದ್ಧ ರಾಜು ಲೇಂಗಟಿ ಆಕ್ರೋಶ: ಬಿಜೆಪಿ ಪ್ರತಿಭಟನೆ ವೇಳೆ ವಾಹನ ಸವಾರನ ಹೆಲ್ಮೆಟ್ ನೆಲಕ್ಕೆ ಬಿಸಾಡಿ ದರ್ಪ. ಕಲಬುರಗಿ: ಬಡ ಜನರ ಮೇಲೆ ದರ್ಪ ತೋರಿದ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ವಿರುದ್ಧ ರಾಜು ಲೇಂಗಟಿ ಆಕ್ರೋಶ: ಬಿಜೆಪಿ ಪ್ರತಿಭಟನೆ ವೇಳೆ ವಾಹನ ಸವಾರನ ಹೆಲ್ಮೆಟ್ ನೆಲಕ್ಕೆ ಬಿಸಾಡಿ ದರ್ಪ.1
- ತಾಳಿಕೋಟಿ ತಾಲೂಕಿನ ಬಾವೂರ ಗ್ರಾಮದ ಶ್ರೀ ವೀರಭದ್ರೇಶ್ವರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲಾ ಶಿಕ್ಷಣ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾವೂರ ಇವರ ಸಂಯುಕ್ತ ಆಶ್ರಯದಲ್ಲಿ 2026-27ನೇಯ ಸಾಲಿನ ಮಡಿಕೇಶ್ವರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಬುಧವಾರ ಅದ್ದೂರಿಯಾಗಿ ಜರುಗಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬಾವೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಿದ್ದು ಸಜ್ಜನ ಅವರು ವಹಿಸಿದ್ದರು. ಮುದ್ದೇಬಿಹಾಳ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಆರ್. ಬಿ.ದಮ್ಮೂರಮಠ ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿದರು. ತಾಳಿಕೋಟಿ ವರದಿ ಬಾವೂರ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ. ತಾಳಿಕೋಟಿ ಎಸ್. ಎಸ್.ವಿದ್ಯಾಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ಎಚ್ ಎಸ್ ಪಾಟೀಲ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು. ದೈಹಿಕ ಶಿಕ್ಷಕ ರಮೇಶ ಮಠಪತಿ ಪ್ರತಿಜ್ಞಾವಿಧಿ ಬೋಧಿಸಿದರು. ಬಾವೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಗುರುಗಳಾದ ಬಿ.ಎಸ್. ಬಸರಕೋಡ ಸ್ವಾಗತಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎಸ್ ಎಸ್ ಬಾಬಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ಶ್ರೀಮತಿ ವಿಜಯಲಕ್ಷ್ಮಿ ವಣರೊಟ್ಟಿ ಹಾಗೂ ಶ್ರೀಮತಿ ಮಂಜುಳಾ ಕೆ. ಅವರು ಕಾರ್ಯಕ್ರಮವನ್ನು ಸುಂದರವಾಗಿ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಟಿ.ವಜ್ಜಲ್, ಸಂಘದ ಪ್ರಧಾನ ಕಾರ್ಯದರ್ಶಿ ಎಸ್ ಬಿ ಬೀರಗೊಂಡ, ಬಾವೂರು ಗ್ರಾಮ ಪಂಚಾಯತ್ ಪಿಡಿಓ ಬಸನಗೌಡ ಚೌಧರಿ, ಗಣ್ಯರಾದ ಶ್ರೀಶೈಲ್ ಸಜ್ಜನ, ವರ್ತಕರಾದ ಶಶಿಧರ ಪತ್ತಾರ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಿದ್ದನಗೌಡ ಪಾಟೀಲ, ಎಸ್ ಡಿ ಎಂ ಸಿ ಸದಸ್ಯರು, ಗ್ರಾಮದ ಗಣ್ಯರು, ಎಲ್ಲಾ ಶಾಲೆಗಳ ಮುಖ್ಯ ಗುರುಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಕ್ರೀಡಾಕೂಟದಲ್ಲಿ ಮಡಿಕೇಶ್ವರ್ ಕ್ಲಸ್ಟರ್ ವ್ಯಾಪ್ತಿಯ ಹದಿಮೂರು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕ್ರೀಡಾಕೂಟದಲ್ಲಿ ಕೋಕೋ, ಕಬಡ್ಡಿ, ವಾಲಿಬಾಲ್ ತ್ರೋಬಾಲ್,ಓಟ, ಗುಂಡು ಎಸೆತ ಉದ್ದ ಜಿಗಿತ, ಚಕ್ರ ಎಸೆತ ಮುಂತಾದ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅಂತಿಮವಾಗಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಸಲಾಯಿತು.1
- ನುಡಿದಂತೆ ನಡೆದ ನಮ್ಮ ಕಾಂಗ್ರೆಸ್ ಸರ್ಕಾರ! ಗೃಹಲಕ್ಷ್ಮಿಯರ ಜೈಕಾರ! ₹76,500 ಬಿಡುಗಡೆ! 1.2 ಕೋಟಿ ಫಲಾನುಭವಿಗಳು! ಆರ್ಥಿಕ ಸಬಲೀಕರಣ, ಸಶಕ್ತ ಜೀವನ! ಮಹಿಳೆಯರಿಗೆ ವರವಾದ ಗೃಹಲಕ್ಷ್ಮಿ!1
- ಬಾಗೇವಾಡಿ: ತಾಲೂಕಿನ ಮುತ್ತಿಗೆ ಗ್ರಾಮದ ಪರಿಶಿಷ್ಟ ಪಂಗಡದ ಬಾಲಕಿ ರಕ್ಷಿತಾ ಕೋಲ್ಯಾರ ಮನೆಗೆ ಕೋಲಿ, ಕಬ್ಬಲಿಗ ಎಸ್ ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಲಕ್ಷಪ್ಪ ಜಮಾದಾರ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯುಕ್ತಿಕವಾಗಿ 50 ಸಾವಿರ ರೂಪಾಯಿ ಧನಸಹಾಯ ಮಾಡಿದ್ದಾರೆ.1
- Chittapur: Mother and 3-Month-Old Baby Kill@d as Truck Collides Head-On with Auto-Rickshaw1
- ಕಳಪೆ ಉಪಹಾರ ಸೇವಿಸಿ 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ.ಮಾನ್ವಿ ಮುರಾರ್ಜಿ ವಸತಿ ನಿಲಯದಲ್ಲಿ ಘಟನೆ : ಪ್ರಾಚಾರ್ಯ, ವಾರ್ಡ್ ನಿರ್ಲಕ್ಷ್ಯದ ವಿರುದ್ದ ಪೋಷಕರ ಆಕ್ರೋಶ ಪಟ್ಟಣದ ಅಲ್ಪಸಂಖ್ಯಾತ ಮುರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಕಳಪೆ ಗುಣಮಟ್ಟದ ಉಪಹಾರ ಸೇವಿಸಿದ ಪರಿಣಾಮ 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಅಸ್ವಸ್ಥರಾದ ವಿದ್ಯಾರ್ಥಿಗಳನ್ನು ತಕ್ಷಣ ಮಾನ್ವಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಎಲ್ಲ ವಿದ್ಯಾರ್ಥಿಗಳ ಆರೋಗ್ಯ ರವಾಗಿದೆ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ನೀಡಲಾ ಗುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ಹಲವು ಬಾರಿ ದೂರುಗಳು ಕೇಳಿಬಂದಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿರುವುದೇ ಇಂತಹ ಘಟನೆಗೆ ಕಾರಣವಾಗಿದೆ ಎಂದು ಪೋಷಕರು ಹಾಗೂ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.1