Shuru
Apke Nagar Ki App…
ಮಡಿಕೇರಿ ನಗರದಲ್ಲಿ ಅದ್ದೂರಿಯಾಗಿ ನಡೆದ ಸಾಮೂಹಿಕ ಗಣೇಶ ಮೆರವಣಿಗೆ ಮಡಿಕೇರಿ ನಗರದಲ್ಲಿ ಪ್ರತಿಷ್ಟಾಪಿಸಲಾಗಿದ್ದ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಇಂದು ನಡೆಯಿತು. ಸಂಜೆ ಅಲಂಕೃತ ವಾಹನಗಳಲ್ಲಿ ಗಣೇಶ ಮೂರ್ತಿಯನ್ನು ಇರಿಸಿ ವಾದ್ಯದೊಂದಿಗೆ ಮೆರವಣಿಗೆ ಮಾಡಿ ನಂತರ ವಿಸರ್ಜಿಸಲಾಯಿತು.
Kodagu Updates
ಮಡಿಕೇರಿ ನಗರದಲ್ಲಿ ಅದ್ದೂರಿಯಾಗಿ ನಡೆದ ಸಾಮೂಹಿಕ ಗಣೇಶ ಮೆರವಣಿಗೆ ಮಡಿಕೇರಿ ನಗರದಲ್ಲಿ ಪ್ರತಿಷ್ಟಾಪಿಸಲಾಗಿದ್ದ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಇಂದು ನಡೆಯಿತು. ಸಂಜೆ ಅಲಂಕೃತ ವಾಹನಗಳಲ್ಲಿ ಗಣೇಶ ಮೂರ್ತಿಯನ್ನು ಇರಿಸಿ ವಾದ್ಯದೊಂದಿಗೆ ಮೆರವಣಿಗೆ ಮಾಡಿ ನಂತರ ವಿಸರ್ಜಿಸಲಾಯಿತು.
More news from ಕರ್ನಾಟಕ and nearby areas
- ಮಡಿಕೇರಿ ನಗರದಲ್ಲಿ ಅದ್ದೂರಿಯಾಗಿ ನಡೆದ ಸಾಮೂಹಿಕ ಗಣೇಶ ಮೆರವಣಿಗೆ ಮಡಿಕೇರಿ ನಗರದಲ್ಲಿ ಪ್ರತಿಷ್ಟಾಪಿಸಲಾಗಿದ್ದ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಇಂದು ನಡೆಯಿತು. ಸಂಜೆ ಅಲಂಕೃತ ವಾಹನಗಳಲ್ಲಿ ಗಣೇಶ ಮೂರ್ತಿಯನ್ನು ಇರಿಸಿ ವಾದ್ಯದೊಂದಿಗೆ ಮೆರವಣಿಗೆ ಮಾಡಿ ನಂತರ ವಿಸರ್ಜಿಸಲಾಯಿತು.1
- All About,How the political Influencial are misuing #WaqfProperties #WaqfFunds to their advantage *ಭಾರತ ನಲ್ಲಿ ವೈರಲ್*1
- ಸಂಗಮೇಶ್ವರ ಪೇಟೆಯಿಂದ ಬಾಳೆಹೊನ್ನೂರುವರೆಗೂ ಬೃಹತ್ ಪಾದಯಾತ್ರೆ ಮೂಲಕ ತೆರಳಿ ಮನವಿ ಸಲ್ಲಿಸಲು ನಿರ್ಧಾರ. ಚಿಕ್ಕಮಗಳೂರು : ಮಲೆನಾಡಿಗೆ ಮಾರಕವಾಗಿರುವ ಕಸ್ತೂರಿರಂಗನ್ ವರದಿ ಜಾರಿಯನ್ನ ವಿರೋಧಿಸಿ ಮಲೆನಾಡಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಇದೇ 19 ರಂದು ಸಿಎಂ ಡಿ.ಕೆ ಶಿವಕುಮಾರ್ ಬಾಳೆಹೊನ್ನೂರು ಪಟ್ಟಣದಲ್ಲಿ ರೈತರು ಹಾಗೂ ವಿವಿಧ ಸಂಘಟನೆಗಳೊಂದಿಗೆ ಸಭೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಿರುವ ರೈತರು ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹಾಗೂ ಜಾಗರ ಹೋಬಳಿಯ ಎಲ್ಲ ನಾಗರೀಕರು ಹಾಗೂ ರೈತರು ಸಂಗಮೇಶ್ವರ ಪೇಟೆಯಿಂದ ಬೃಹತ್ ಪಾದಯಾತ್ರೆ ಮೂಲಕ ತೆರಳಿ ಸಿಎಂಗೆ ಮನವಿ ಸಲ್ಲಿಸಲು ಸಿರ್ಧರಿಸಿದ್ದಾರೆ. ಈ ಪಾದಯಾತ್ರೆಯಲ್ಲಿ ಸರ್ವ ಪಕ್ಷ ಹಾಗೂ ಎಲ್ಲ ಸಂಘಟನೆಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ.1
- ಮೈಸೂರಿನಲ್ಲಿ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ.. ‘ನಕಲಿ ಹಿಂದುತ್ವವಾದಿ’ ಎಂದು ಘೋಷಣೆ | ಗಡಿಪಾರು ಮಾಡುವಂತೆ ಆಗ್ರಹ ಮೈಸೂರು: ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಾಪ್ ಸಿಂಹ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ‘ನಕಲಿ ಹಿಂದುತ್ವವಾದಿ ಪ್ರತಾಪ್ ಸಿಂಹ’, ‘ಕೋಮುವಾದಿ ಬಿಜೆಪಿ, ಕೋಮುವಾದಿ ಪ್ರತಾಪ್ ಸಿಂಹ’ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಟಿ. ನರಸೀಪುರದಲ್ಲಿ ಕೋಮು ಪ್ರಚೋದನೆಗೆ ಕಾರಣವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಗಣೇಶ ಮೂರ್ತಿ ಹಿಡಿದು, ಪಾದರಕ್ಷೆ ಧರಿಸಿ ಪ್ರತಿಭಟನೆ ನಡೆಸಿರುವುದನ್ನು ಪ್ರಶ್ನಿಸಿದ ಕಾರ್ಯಕರ್ತರು, ಧಾರ್ಮಿಕ ಭಾವನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿಯ ನಡೆ ಸಮಾಜದಲ್ಲಿ ಅಶಾಂತಿ ಮೂಡಿಸುವುದಲ್ಲದೆ, ಯುವಕರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು. ಪ್ರತಾಪ್ ಸಿಂಹ ಅವರು ದಲಿತರು ಹಾಗೂ ಮುಸ್ಲಿಮರ ವಿರುದ್ಧ ದ್ವೇಷದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿ, ಅವರನ್ನು ಗಡಿಪಾರು ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಅವರ ಸೂಚನೆಗಳ ಕುರಿತು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರೆ, ಇದಕ್ಕೆ ಪ್ರತಿಯಾಗಿ ದಲಿತ ಸಂಘಟನೆಗಳು ಹಾಗೂ ಇತರ ಸಂಘಟನೆಗಳಿಂದಲೂ ಪ್ರತಿಭಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಪ್ರಕರಣ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.1
- 23ನೇ ವರ್ಷದ ಬಂಟ್ವಾಳ ಜಕ್ರಿಬೆಟ್ಟು ಶ್ರೀ ಗಣೇಶೋತ್ಸವದ ಮೂರನೇ ದಿನದ ಸಂಭ್ರಮ ಭಕ್ತಿ, ಸಡಗರ ಹಾಗೂ ಸಂಭ್ರಮ ಶ್ರೀ ಗಣೇಶನಿಗೆ ವಿಶೇಷ ಪೂಜೆ, ಅಲಂಕಾರ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆಯಿತು. ಈ ಸಂದರ್ಭದಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶನ ದರ್ಶನ ಪಡೆದು ಪುನೀತರಾದರು. ಕಾರ್ಯಕ್ರಮದ ಅಂಗವಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ನೂರಾರು ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು. ಭಕ್ತಿ, ಸೇವೆ ಮತ್ತು ಸೌಹಾರ್ದತೆಯೊಂದಿಗೆ ಜಕ್ರಿಬೆಟ್ಟಿನ ಗಣೇಶೋತ್ಸವದ ಮೂರನೇ ದಿನ.1
- ಜೆಸ್ಕಾಂ ಕಚೇರಿ ಮುಂದೆ ಕೃಷಿಕಂಸೆಟ್ಗಳಿಗೆ ಸಮರ್ಪಕ ವಿದ್ಯುತ್ ನೀಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ ಟಿ. ನರಸೀಪುರ ಅಸಮರ್ಪಕ ವಿದ್ಯುತ್ ಪೂರೈಕೆ: ರೈತರು ಸಂಕಷ್ಟದಲ್ಲಿ. ಟಿ. ನರಸೀಪುರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯುತ್ ಪೂರೈಕೆಯಲ್ಲಿ ಪದೇಪದೇ ವ್ಯತ್ಯಯ ಉಂಟಾಗುತ್ತಿರುವುದರಿಂದ ನೀರಾವರಿ ವ್ಯವಸ್ಥೆಗೆ ತೊಂದರೆಯಾಗಿದ್ದು, ಹೊಲಗಳಲ್ಲಿ ಬೆಳೆದಿರುವ ಬೆಳೆಗಳು ನೀರಿನ ಕೊರತೆಯಿಂದ ಒಣಗುವ ಆತಂಕ ಎದುರಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯದಲ್ಲಿ ಸಮರ್ಪಕ ವೋಲ್ಟೇಜ್‌ನೊಂದಿಗೆ ವಿದ್ಯುತ್ ಪೂರೈಕೆ ಮಾಡದಿರುವುದರಿಂದ ಮೋಟಾರ್‌ಗಳನ್ನು ಚಾಲನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಈಗಾಗಲೇ ಬೆಳೆಗಳಿಗೆ ಸಾಕಷ್ಟು ಖರ್ಚು ಮಾಡಿರುವ ರೈತರಿಗೆ ವಿದ್ಯುತ್ ಸಮಸ್ಯೆ ಮತ್ತಷ್ಟು ಆರ್ಥಿಕ ಹೊರೆ ತಂದಿದೆ. ವಿದ್ಯುತ್ ಸಮಸ್ಯೆಯಿಂದ ಬೆಳೆ ಹಾನಿಯಾದರೆ ರೈತರ ಪರಿಸ್ಥಿತಿ ಮತ್ತಷ್ಟು ದುಸ್ತರವಾಗಲಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯದಲ್ಲಿ ನಿರಂತರ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ವಿದ್ಯುತ್ ಲೈನ್‌ಗಳು, ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ಇತರೆ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣವೇ ಸರಿಪಡಿಸಿ ರೈತರ ಬೆಳೆಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಸಂಬಂಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳು ತುರ್ತಾಗಿ ಸಮಸ್ಯೆ ಪರಿಹರಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂಬುದು ರೈತರ ಆಗ್ರಹವಾಗಿದೆ. ರೈತರ ಬೆಳೆ ಉಳಿಸಲು ವಿದ್ಯುತ್ ಪೂರೈಕೆ ಸಮರ್ಪಕವಾಗಲಿಯಂದು ರೈತರ ಒತ್ತಾಯ . ಈ ಪ್ರತಿಭಟನೆಯಲ್ಲಿ ಕಿರಗುಸೂರು ಶಂಕರ್ ಕೆಜಿ ಗುರುಸ್ವಾಮಿ ಕುರುಬುರ್ ಗೌರಿಶಂಕರ್ ವಾಚ್ ಕುಮಾರ್ ಆದಿ ಬೆಟ್ಟಳ್ಳಿ ನಂಜುಂಡಸ್ವಾಮಿ ಅಪ್ಪಣ್ಣ ಕುರುಬೂರು ಸಿದ್ದೇಶ್, ಬಿಪಿ ಪರಶಿವಮೂರ್ತಿ, ಕರುವಟಿ ಉಮೇಶ್ ಕುರುಬೂರ ಪ್ರದೀಪ್ ಸೋಮಶೇಖರ್ ಬನ್ನಳ್ಳಿ ಹುಂಡಿ ರಾಜೇಂದ್ರ ನಿಲ್ಸೋಗೆ ಉಮೇಶ್ ಪ್ರತಾಪ್, ಕುಮಾರ್ ಕೆ ಎಂ, ವಾಟಾಳ್ ಪುರ ಸತೀಶ್ ಕುಮಾರ್ ಹೊಸಪುರ ನಾಗರಾಜು ಮಾದೇಶ್ ಮಾದೇವಮೂರ್ತಿ ಬಸವರಾಜು ಎಸ್ ಕೆಬ್ಬೆ ಹುಂಡಿ, ಮಾದೇವಸ್ವಾಮಿ ಮಾವ್ನಹಳ್ಳಿ, ತರಕಾರಿ ನಿಂಗರಾಜು ಬನ್ನಳ್ಳಿ ಶಾಂತರಾಜು ಆದಿ ಬೆಟ್ಟಳ್ಳಿ ಮಹೇಶ ಕನ್ನಳ್ಳಿ ಮೊಳೆ ಮಣಿಕಂಠ ಲೋಕೇಶ್ ರವೀಂದ್ರ ಮಾದೇಶ್ ನಿಲ್ಸೋಗೆ ನಾಗರಾಜು ಚಿನ್ನಸ್ವಾಮಿ ಕುರುಬೂರು ಶಿವಪ್ರಸಾದ್ ವೀರೇಶ್ ಎಲ್ ಐ ಸಿ ಪ್ರದೀಪ್ ಎಬಿ ಮಂಜುನಾಥ್ ನವೀನ ತೊಟ್ಟುವಾಡಿ ಇನ್ನು ಮುಂತಾದ ರೈತರು ಭಾಗವಹಿಸಿದ್ದರು1
- ‘ಮಾನವೀಯ ನೆರವಿಗೆ ಕೃತಜ್ಞತೆಯಾಗಿ ನಾವೇ ಜಿಪಿಎ ಕೊಟ್ಟಿದ್ದೇವೆ’: ಅಕ್ರಮ ಖಾತೆ ಆರೋಪ ತಳ್ಳಿಹಾಕಿದ ಕುಟುಂಬಸ್ಥರು, ದಾಖಲೆ ಸಮೇತ ರಮೇಶ್ ಸ್ಪಷ್ಟನೆ. ತುರುವೇಕೆರೆ: ರೈತ ಸಂಘ ತನ್ನ ವಿರುದ್ಧ ಮಾಡಿರುವ ಅಕ್ರಮ ಖಾತೆ ವರ್ಗಾವಣೆ ಆರೋಪ ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ಗ್ರಾಮ ಪಂಚಾಯಿತಿ ಮಟ್ಟದ ಹಳೆಯ ರಾಜಕೀಯ ದ್ವೇಷದಿಂದ ಸುಳ್ಳು ವಿವಾದ ಸೃಷ್ಟಿಸಲಾಗುತ್ತಿದೆ ಎಂದು ನಾಗೇಗೌಡನಪಾಳ್ಯದ ಮಾಜಿ ವಿಎಸ್‌ಎಸ್‌ಎನ್ ಅಧ್ಯಕ್ಷ ರಮೇಶ್ ಪಿ. ಸ್ಪಷ್ಟಪಡಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜಮೀನಿನ ಮೂಲ ದಾಖಲೆಗಳು ಹಾಗೂ ಆಸ್ಪತ್ರೆಯ ಚಿಕಿತ್ಸೆಯ ಫೋಟೋಗಳನ್ನು ಪ್ರದರ್ಶಿಸಿ ಅವರು ಮಾತನಾಡಿದರು. ಮಾನವೀಯ ನೆರವು ಮತ್ತು ಕಾನೂನುಬದ್ಧ ಒಪ್ಪಂದ: ಮುಹಮ್ಮದ್ ಗೌಸ್ ಎಂಬುವವರಿಗೆ ಸರ್ಕಾರದಿಂದ ಸುಮಾರು 3 ಎಕರೆ ದರಖಾಸ್ತು ಜಮೀನು ಮಂಜೂರಾಗಿತ್ತು. 1991–92ರಲ್ಲಿ ಅರ್ಜಿ ಸಲ್ಲಿಸಿ, 2008ರಲ್ಲಿ ಸಾಗುವಳಿ ಚೀಟಿ ಪಡೆದು, 2015ರಲ್ಲಿ ಖಾತೆ ಮಾಡಿಸಿಕೊಂಡು ಅವರೇ ಸಾಗುವಳಿ ಅನುಭವದಲ್ಲಿದ್ದರು. 80 ವರ್ಷ ದಾಟಿದ್ದ ಮುಹಮ್ಮದ್ ಗೌಸ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟ ಸಂದರ್ಭದಲ್ಲಿ ಕುಟುಂಬದ ಕೋರಿಕೆಯಂತೆ ಮಾನವೀಯ ನೆಲೆಯಲ್ಲಿ ಸಂಪೂರ್ಣ ವೈದ್ಯಕೀಯ ವೆಚ್ಚ ಹಾಗೂ ಆರ್ಥಿಕ ನೆರವು ನೀಡಲಾಗಿತ್ತು. ಆ ಸಮಯದಲ್ಲಿ ನಿಯಮಾನುಸಾರ ಒಪ್ಪಂದ (ಅಗ್ರಿಮೆಂಟ್) ಮಾಡಿಕೊಳ್ಳಲಾಗಿತ್ತು ಎಂದು ರಮೇಶ್ ವಿವರಿಸಿದರು. ಮುಹಮ್ಮದ್ ಗೌಸ್ ಅವರ ನಿಧನದ ಬಳಿಕ, ತಮಗೆ ಯಾವುದೇ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಅವರ ಪತ್ನಿ ಮುಮ್ತಾಜ್ ಹಾಗೂ ಐವರು ಮಕ್ಕಳು ಸ್ವಇಚ್ಛೆಯಿಂದ ಕಾನೂನುಬದ್ಧವಾಗಿ ತಮ್ಮ ಹೆಸರಿಗೆ ಜನರಲ್ ಪವರ್ ಆಫ್ ಅಟಾರ್ನಿ (GPA) ನೋಂದಣಿ ಮಾಡಿಕೊಟ್ಟಿದ್ದಾರೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಕಣ್ಣೀರಿಟ್ಟ ಮುಹಮ್ಮದ್ ಗೌಸ್ ಕುಟುಂಬಸ್ಥರು: ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮುಹಮ್ಮದ್ ಗೌಸ್ ಅವರ ಪತ್ನಿ ಮುಮ್ತಾಜ್ ಭಾವುಕರಾಗಿ ಕಣ್ಣೀರು ಹಾಕುತ್ತಾ ಮಾತನಾಡಿ, "ಸುಮಾರು 20 ವರ್ಷಗಳಿಂದ ನಾವೇ ಜಮೀನಿನ ಸ್ವಾಧೀನ ಅನುಭವದಲ್ಲಿದ್ದೇವೆ. ಸರ್ಕಾರದ ಸಾಗುವಳಿ ಚೀಟಿ, ಖಾತೆ ಸೇರಿದಂತೆ ಎಲ್ಲಾ ಸಕ್ರಮ ದಾಖಲೆಗಳು ನಮ್ಮ ಬಳಿಯೇ ಇವೆ. ನಮ್ಮ ಸಂಕಷ್ಟದ ಪರಿಸ್ಥಿತಿಯಲ್ಲಿ ರಮೇಶ್ ಅವರು ಚಿಕಿತ್ಸೆಗೆ ನೆರವಾಗಿ ಜೀವ ಉಳಿಸಲು ಪ್ರಯತ್ನಿಸಿದರು. ಅವರಿಗೆ ಮೋಸವಾಗಬಾರದೆಂದು ಇಡೀ ಕುಟುಂಬ ಒಟ್ಟಾಗಿ ಜಿಪಿಎ ಮಾಡಿಕೊಟ್ಟಿದ್ದೇವೆ. ಇದರಲ್ಲಿ ಯಾರ ಒತ್ತಾಯವೂ ಇಲ್ಲ, ಯಾವುದೇ ಅಕ್ರಮವೂ ನಡೆದಿಲ್ಲ" ಎಂದು ತಿಳಿಸಿದರು. ಎಲ್ಲವೂ ಕಾನೂನುಬದ್ಧ, ತನಿಖೆಗೆ ಸಿದ್ಧ: ತಹಶೀಲ್ದಾರ್ ಅವರ ಆದೇಶದಂತೆ ತಾಲೂಕು ಸರ್ವೆ ಇಲಾಖೆಯಿಂದ ಜಾಗದ ಅಧಿಕೃತ ನಕ್ಷೆ (ಸ್ಕೆಚ್) ಮಾಡಿಸಲಾಗಿದೆ. ಜಮೀನು ನೀಡಿದ ಕುಟುಂಬಕ್ಕಾಗಲಿ ಅಥವಾ ಅಕ್ಕಪಕ್ಕದ ರೈತರಿಗಾಗಲಿ ಯಾವುದೇ ತಕರಾರಿಲ್ಲದಿರುವಾಗ, ಕೆಲವರು ರೈತ ಸಂಘದ ಹೆಸರನ್ನು ಮುಂದಿಟ್ಟುಕೊಂಡು ರಾಜಕೀಯ ದುರುದ್ದೇಶದಿಂದ ತೇಜೋವಧೆ ಮಾಡುತ್ತಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವ ತಾನು ಸರ್ಕಾರಕ್ಕಾಗಲಿ, ಜನರಿಗಾಗಲಿ ನಯಾಪೈಸೆ ಮೋಸ ಮಾಡಿಲ್ಲ. ಈ ವಿಚಾರದಲ್ಲಿ ಎಂತಹ ತನಿಖೆ ಎದುರಿಸಲೂ ಸಿದ್ಧ ಎಂದು ರಮೇಶ್ ಸವಾಲು ಹಾಕಿದರು. ಪತ್ರಿಕಾಗೋಷ್ಠಿಯಲ್ಲಿ ಮುಹಮ್ಮದ್ ಗೌಸ್ ಅವರ ಪತ್ನಿ ಮುಮ್ತಾಜ್ ಬೀ ಹಾಗೂ ಪುತ್ರ ನೂರುಲ್ಲಾ ಉಪಸ್ಥಿತರಿದ್ದರು.4
- All About,Requesting our Hon'ble Minister for #Waqf to hand#AnwarManipaddy and #UpaLokayuta report to #CBI for fair review *ಭಾರತ ನಲ್ಲಿ ವೈರಲ್*1