logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಈಶ್ವರ ಖಂಡ್ರೆ ಕನಸು ನನಸು: ಇಂಚೂರು ವೃಕ್ಷೋದ್ಯಾನದ ನೋಟವೇ ಸೊಗಸು ಬೀದರ್: ಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ಡಾ. ಚನ್ನಬಸವ ಪಟ್ಟದ್ದೇವರ ಹೆಸರಿನಲ್ಲಿ ನಿರ್ಮಾಣವಾಗಿ, ಇಂದು ಲೋಕಾರ್ಪಣೆಯಾದ ಇಂಚೂರು ವೃಕ್ಷೋದ್ಯಾನ ಜ್ವಲಂತ ನಿದರ್ಶನ. ಬೃಹತ್ ಕಲ್ಲುಬಂಡೆಗಳ ವಿನ್ಯಾಸದ ನಡುವೆ ಆಧುನಿಕ ಸ್ಪರ್ಶದ ಪ್ರವೇಶದ್ವಾರ ಗೇಟುಗಳ ಮೇಲೆ ಮತ್ತು ಬಂಡೆಯ ಮುಂದೆ ಖಗ, ಮೃಗಗಳ ಪ್ರತಿಕೃತಿಗಳು, ಕಣ್ಣು ಹಾಯಿಸಿದಷ್ಟೂ ದೂರದವರೆಗೆ ಕಾಣುವ ಹಚ್ಚ ಹಸಿರಿನ ನಡುವೆ ಕಾಲ್ನಡಿಗೆ ಪಥ. ನಡೆದು ದಣಿದಾಗ ಕೂರಲು ತಂಗುದಾಣ, ಮುಕ್ತ ಬಯಲು ರಂಗಮಂದಿರ, ಚಿಟ್ಟೆಗಳ ಉದ್ಯಾನ, ಮಕ್ಕಳಿಗೆ ಆಟವಾಡಲೆಂದೇ ಇರುವ ಪ್ರತ್ಯೇಕ ತಾಣ, ಸುಂದರ ರಮಣೀಯ ಪರಿಸರವನ್ನು ಕಣ್ತುಂಬಿಕೊಳ್ಳಲು ವೀಕ್ಷಣಾ ಗೋಪುರ, ಜಲಧಾರೆಯ ನಡುವೆ ಮಲಗಿರುವಂತೆ ಕಾಣುವ ಮೊಸಳೆ, ಗರಿಬಿಚ್ಚಿ ನರ್ತಿಸುತ್ತಿರುವ ನವಿಲು, ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿರುವ ನವಿಲು, ಬಕಪಕ್ಷಿ, ಕಲ್ಲುಬಂಡೆಯ ಮೇಲೆ ನಿಂತ ಕೃಷ್ಣಮೃಗ, ಆರ್ಭಟಿಸುತ್ತಾ ನಿಂತ ಹುಲಿ, ವಿಶ್ರಾಂತಿ ಪಡೆಯುತ್ತಿರುವ ಚಿರತೆಯ ಪ್ರತಿಕೃತಿಗಳು... ಇದು ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಇಂಚೂರಿನಲ್ಲಿ ಇಂದು ಲೋಕಾರ್ಪಣೆಯಾದ ಡಾ. ಚನ್ನಬಸವಪಟ್ಟದ್ದೇವರು ವೃಕ್ಷೋದ್ಯಾನದ ಚಿತ್ರಣ. ಐದು ಕೋಟಿ ರೂ. ವೆಚ್ಚದಲ್ಲಿ ಸಾಕಾರವಾಗಿರುವ ಈ ಸುಂದರ ಉದ್ಯಾನ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಅವರ ಇಚ್ಛಾಶಕ್ತಿ ಮತ್ತು ಕಲ್ಪನೆಯಿಂದ. ಬೀದರ್ ಭಾಗದಲ್ಲಿ ಪರಿಸರ ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿಪಡಿಸಿ, ಜಿಲ್ಲೆಯ ಮತ್ತು ನೆರೆಯ ಜಿಲ್ಲೆಯ ಜನರೂ ಇಲ್ಲಿಗೆ ಬರುವಂತೆ ಆಕರ್ಷಿಸಲು ಅವರು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾಗಿದ್ದಾಗ ರೂಪಿಸಿದ ಈ ಯೋಜನೆ ಇಂದು ಮೂರ್ತರೂಪ ಪಡೆದಿದೆ. ಭಾಲ್ಕಿ-ಲಾತೂರ್ ಹೆದ್ದಾರಿಗೆ ಹೊಂದಿಕೊಂಡಿರುವ ಹಾಗೂ ಭಾಲ್ಕಿ ಪಟ್ಟಣಕ್ಕೆ ಕೇವಲ 10 ಕಿ.ಮೀ. ದೂರದಲ್ಲಿರುವ ಇಂಚೂರಿನಲ್ಲಿ 13.34 ಎಕರೆ ಪ್ರದೇಶದಲ್ಲಿ ಈ ಉದ್ಯಾನ ನಿರ್ಮಾಣವಾಗಿದ್ದು, ಇದರಲ್ಲಿ 10 ಎಕರೆಯಲ್ಲಿ ವೃಕ್ಷೋದ್ಯಾನವಿದೆ. ಈಶ್ವರ ಖಂಡ್ರೆ ಅವರು ಯೋಜನೆಯ ಕಲ್ಪನೆಯಿಂದ ಕಾಮಗಾರಿ ಮತ್ತು ಒಟ್ಟಾರೆ ಉದ್ಯಾನ ಸಾಕಾರವಾಗುವವರೆಗೆ ಸತತ ಮೇಲ್ವಿಚಾರಣೆ ನಡೆಸಿದ ಈ ವೃಕ್ಷೋದ್ಯಾನ ನೋಡುಗರ ಮನಗೆಲ್ಲುತ್ತದೆ. ಸಂಗೀತ ಕಾರಂಜಿಯ ಚಿಂತನೆ: ಮಂಡ್ಯ ಜಿಲ್ಲೆ ಕೆ.ಆರ್.ಎಸ್. ಅಣೆಕಟ್ಟೆಯ ಬಳಿ ಇರುವ ಬೃಂದಾವನ ಗಾರ್ಡನ್ ಮಾದರಿಯಲ್ಲಿ ಈ ಉದ್ಯಾನದಲ್ಲೂ ಸಂಗೀತ ಕಾರಂಜಿ ಅಳವಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ಈಶ್ವರ ಖಂಡ್ರೆ ಯೋಜನೆ ರೂಪಿಸಿದ್ದಾರೆ. ಸಂಗೀತದ ಲಯಕ್ಕೆ ತಕ್ಕಂತೆ ಬಣ್ಣ ಬಣ್ಣದ ನೀರಿನ ಚಿಲುಮೆಗಳು ನರ್ತಿಸುವ ಸಂಗೀತ ಕಾರಂಜಿ, ಈ ಭಾಗದ ಜನರಿಗೆ ಪ್ರಧಾನ ಆಕರ್ಷಣೆ ಆಗುತ್ತದೆ ಎಂಬುದು ಅವರ ಅಚಲ ವಿಶ್ವಾಸ. ಪ್ರತಿ ಮನುಷ್ಯ ನೆಮ್ಮದಿಯಿಂದ ಉಸಿರಾಡಲು ಕನಿಷ್ಠ 7 ಮರ ಇರಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಅರಣ್ಯ ಇರುವುದೇ ಅತ್ಯಂತ ಕಡಿಮೆ. ಮರಗಿಡಗಳೂ ಕಡಿಮೆ. ಹೀಗಾಗಿ ವೃಕ್ಷೋದ್ಯಾನದ ಮೂಲಕ ಬೀದರ್ ಜಿಲ್ಲೆಯಲ್ಲಿ ಹಸಿರು ಹಚ್ಚಿಸಿ, ತಾಪಮಾನ ತಗ್ಗಿಸಲು ಈಶ್ವರ ಖಂಡ್ರೆ ಕ್ರಮ ವಹಿಸಿದ್ದಾರೆ. ಪರಿಸರ ಪಾಠ: ಮರಗಳು ಇಂಗಾಲ ಸೇವಿಸಿ, ಶುದ್ಧವಾದ ಪ್ರಾಣವಾಯು ಆಮ್ಲಜನಕ ನೀಡುತ್ತವೆ. ಕೋವಿಡ್ ಕಾಲದಲ್ಲಿ ಆಕ್ಸಿಜನ್ ಲಭಿಸದೆ ಸಾವಿರಾರು ಜನರು ಮೃತಪಟ್ಟಿದ್ದನ್ನು ನಾವು ನೋಡಿದ್ದೇವೆ. ಹೀಗಾಗಿ ನಿತ್ಯ ಲಕ್ಷಾಂತರ ಲೀಟರ್ ಆಮ್ಲಜನಕ ಪೂರೈಸುವ ಗಿಡ, ಮರಗಳನ್ನು ಸಂರಕ್ಷಿಸುವ ಬಗ್ಗೆ ಜನರಿಗೆ ಈ ಉದ್ಯಾನ ಪರಿಸರ ಪಾಠ ಕಲಿಸುತ್ತದೆ ಎಂಬುದು ಅವರ ನಿಲುವು. ಇದರಿಂದ ಈ ವೃಕ್ಷೋದ್ಯಾನಕ್ಕೆ ಬರುವ ಪ್ರವಾಸಿಗರಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಗಿಡ, ಮರಗಳ ಮಾಹಿತಿ ತಿಳಿಯುತ್ತದೆ. ವೃಕ್ಷಪ್ರೇಮ ಹೆಚ್ಚುತ್ತದೆ. ಪರಿಸರದ ಕಾಳಜಿ ಮೂಡಿಸುತ್ತದೆ. ಜೊತೆಗೆ ಇಂದಿನ ಮಕ್ಕಳು ಕನಿಷ್ಠ 50 ಪ್ರಭೇದದ ವೃಕ್ಷಗಳನ್ನು ಗುರುತಿಸಲು ಸಹಕಾರಿ ಆಗುತ್ತದೆ. ಹೀಗಾಗಿಯೇ ಇಂಚೂರು ವೃಕ್ಷೋದ್ಯಾನವನ್ನು ಪರಿಸರ ಶಿಕ್ಷಣ, ಜೀವವೈವಿಧ್ಯ ಸಂರಕ್ಷಣೆ, ಪ್ರಕೃತಿ ಅರಿವು, ಸಾರ್ವಜನಿಕ ಮನರಂಜನೆ ಹಾಗೂ ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿದೆ. ಇಷ್ಟು ದಿನ ಮಹಾರಾಷ್ಟ್ರದ ಚಾಕೂರ್, ನೆರೆಯ ಹೈದ್ರಾಬಾದ್ ಗೆ ವಾರಾಂತ್ಯದಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದವರಿಗೆ ಭಾಲ್ಕಿಯ ಬಳಿಯೇ ಸುಂದರ ಪ್ರವಾಸಿ ತಾಣ ಸಿಕ್ಕಂತಾಗಿದೆ. ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ಚಿಟ್ಟೆಯ ಆಕಾರದಲ್ಲಿ ಚಿಟ್ಟೆ ಉದ್ಯಾನವನ್ನೂ ಅಭಿವೃದ್ಧಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಜೀವಂತ ಚಿಟ್ಟೆಗಳು ಹಾರಾಡುವ ಚಿಟ್ಟೆ ಪಾರ್ಕ್ ಮಾಡುವ ಉದ್ದೇಶವೂ ಇದೆ. ಹೀಗಾಗಿ ಉದ್ಯಾನದಲ್ಲಿ ಸುಮಾರು 2,500 ಸಸಿಗಳನ್ನು 50 ವಿವಿಧ ಜಾತಿಗಳಲ್ಲಿ, ಚಿಟ್ಟೆಗಳಿಗೆ ಅಗತ್ಯವಿರುವ ನೆಕ್ಟರ್ ಮತ್ತು ಹೋಸ್ಟ್ ಸಸ್ಯಗಳೊಂದಿಗೆ ನೆಡಲಾಗಿದೆ. ಚಿಟ್ಟೆಗಳ ಸಂರಕ್ಷಣೆ ಹಾಗೂ ವೈವಿಧ್ಯತೆಯ ಹೆಚ್ಚಳ, ಪರಿಸರ ಶಿಕ್ಷಣ ಮತ್ತು ವಿಶೇಷವಾಗಿ ಯುವಜನರಲ್ಲಿ ಚಿಟ್ಟೆಗಳು ಹಾಗೂ ಜೀವವೈವಿಧ್ಯದ ಬಗ್ಗೆ ಆಸಕ್ತಿ ಮೂಡಿಸುವುದು ಚಿಟ್ಟೆ ಉದ್ಯಾನದ ಉದ್ದೇಶವಾಗಿದೆ. ಜೆನ್ ಜಿ ಆಕರ್ಷಣೆ: ಇಂದು ಎಲ್ಲರೂ ಪ್ರವಾಸಿ ತಾಣಕ್ಕೆ ಹೋದಾಗ ತಮ್ಮ ಮೊಬೈಲ್ ನಲ್ಲಿ ಸೆಲ್ಫಿ ಚಿತ್ರ ತಗೆದುಕೊಂಡು ಸಾಮಾಜಿಕ ತಾಣಗಳಲ್ಲಿ ಹಾಕುತ್ತಾರೆ. ಹೀಗಾಗಿಯೇ ಚಿಟ್ಟೆ ಸೆಲ್ಫಿ ಪಾಯಿಂಟ್ ಕೂಡ ನಿರ್ಮಿಸಲಾಗಿದೆ. ಉದ್ಯಾನದ ಸುಮಾರು 1 ಎಕರೆ ಪ್ರದೇಶದಲ್ಲಿ 40 ವಿವಿಧ ಜಾತಿಗಳ ಸುಮಾರು 10,000 ಸಸಿಗಳನ್ನು ನೆಟ್ಟು ಮಿಯಾವಾಕಿ ಅರಣ್ಯವನ್ನೂ ಬೆಳೆಸಲಾಗಿದೆ. ಬಿದಿರಿನ ಸಂರಕ್ಷಣೆಗೂ ಒತ್ತು ನೀಡಲಾಗಿದೆ. ಒಟ್ಟಾರೆ ಕಡಿಮೆ ಪ್ರದೇಶದಲ್ಲಿ, ಕಡಿಮೆ ವೆಚ್ಚದಲ್ಲಿ ಸುಂದರ ಸಸ್ಯೋದ್ಯಾನ ಮಾಡುವುದು ಹೇಗೆ ಎಂಬುದಕ್ಕೆ ಇಂಚೂರು ವೃಕ್ಷೋದ್ಯಾನ ಮಾದರಿಯಾಗಿದೆ. ಡಾ. ಚನ್ನಬಸವ ಪಟ್ಟದ್ದೇವರು ವೃಕ್ಷೋದ್ಯಾನದಲ್ಲಿ ನೆಟ್ಟು ಪೋಷಿಸಲಾಗಿರುವ ವಿವಿಧ ಜಾತಿಯ ಮರಗಳ ಬಳಿ ಆ ಸಸ್ಯ ಪ್ರಭೇದದ ಹೆಸರು, ಅದರ ವೈಜ್ಞಾನಿಕ ಹೆಸರು (Botanical Name), ಆ ಮರದ ಎಲೆ ಹೇಗಿರುತ್ತದೆ, ಅದರ ಪ್ರಯೋಜನ ಏನು, ಎಷ್ಟು ಎತ್ತರ ಬೆಳೆಯುತ್ತದೆ. ಎಷ್ಟು ವರ್ಷ ಬದುಕಿರುತ್ತದೆ, ಅದರಲ್ಲಿರುವ ಔಷಧೀಯ ಗುಣವೇನು ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಫಲಕ ಹಾಕಲು ಆದೇಶ ನೀಡಲಾಗಿದೆ. ಇಲ್ಲಿ ಸಂಗೀತ ಕಾರಂಜಿ ಮಾಡುವ ಚಿಂತನೆಯೂ ಇದೆ. -ಈಶ್ವರ ಬಿ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವರು.

22 hrs ago
user_Binita
Binita
ಚಿತ್ತಾಪುರ, ಕಲಬುರಗಿ, ಕರ್ನಾಟಕ•
22 hrs ago
f40be9fc-8508-440b-98e2-c2c90f6a25c0

More news from ಕರ್ನಾಟಕ and nearby areas
  • ಶ್ರೀ ದತ್ತ ಮಹಾರಾಜರ ದರ್ಶನಕ್ಕೆ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ ಅವರು ಬಂದ ಹಿನ್ನೆಲೆಯಲ್ಲಿ ಮಾತನಾಡಿದ ಅರುಕುಮಾರ ಎಂ. ವೈ. ಪಾಟೀಲ್. ಶ್ರೀ ದತ್ತ ಮಹಾರಾಜರ ದರ್ಶನಕ್ಕೆ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ ಅವರು ಬಂದ ಹಿನ್ನೆಲೆಯಲ್ಲಿ ಮಾತನಾಡಿದ ಅರುಕುಮಾರ ಎಂ. ವೈ. ಪಾಟೀಲ್.
    1
    ಶ್ರೀ ದತ್ತ ಮಹಾರಾಜರ ದರ್ಶನಕ್ಕೆ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ ಅವರು ಬಂದ ಹಿನ್ನೆಲೆಯಲ್ಲಿ ಮಾತನಾಡಿದ ಅರುಕುಮಾರ ಎಂ. ವೈ. ಪಾಟೀಲ್.
ಶ್ರೀ ದತ್ತ ಮಹಾರಾಜರ ದರ್ಶನಕ್ಕೆ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ ಅವರು ಬಂದ ಹಿನ್ನೆಲೆಯಲ್ಲಿ ಮಾತನಾಡಿದ ಅರುಕುಮಾರ ಎಂ. ವೈ. ಪಾಟೀಲ್.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    3 hrs ago
  • BSSK ಬಚಾವ್ ಹೋರಾಟದಲ್ಲಿ ಮಾಜಿ ಕೇಂದ್ರ ಸಚಿವ ಭಗವಂತ ಖುಬಾ ಭಾಷಣ ಖಂಡ್ರೆ ವಿರುದ್ಧ ತೀವ್ರ ವಾಗ್ದಾಳಿ
    1
    BSSK ಬಚಾವ್ ಹೋರಾಟದಲ್ಲಿ ಮಾಜಿ ಕೇಂದ್ರ ಸಚಿವ ಭಗವಂತ ಖುಬಾ ಭಾಷಣ ಖಂಡ್ರೆ ವಿರುದ್ಧ ತೀವ್ರ ವಾಗ್ದಾಳಿ
    user_Jk ಕನ್ನಡ news
    Jk ಕನ್ನಡ news
    Media company ಹೋಮ್ನಾಬಾದ್, ಬೀದರ್, ಕರ್ನಾಟಕ•
    7 hrs ago
  • ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಹುಲಸೂರ: ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲಾಯಿತು.
    1
    ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ
ಹುಲಸೂರ: ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲಾಯಿತು.
    user_Udayakumar Mule
    Udayakumar Mule
    ವರದಿಗಾರ Basavakalyan, Bidar•
    3 hrs ago
  • ಸ್ವಚ್ಛ ವಾಹಿನಿ ಮೂಲಕ ಯುವ ಮತದಾರ ನೊಂದಣಿಗೆ ಜಾಗೃತಿ ಮೂಡಿಸಲಾಯಿತು ಗುರುಮಠಕಲ್: ಇಂದು ಬೆಳಗ್ಗೆ ಚಂಡ್ರಿಕಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಕೇಶ್ವಾರ ಗ್ರಾಮದಲ್ಲಿ ಸ್ವಚ್ಛ ವಾಹಿನಿ ಮೂಲಕ ಹೊಸದಾಗಿ ಯುವಕರ ಮತದಾರ ನೋಂದಣಿ ಮಾಡಲು ಜಾಗೃತಿ ಮೂಡಿಸಲಾಯಿತು.
    1
    ಸ್ವಚ್ಛ ವಾಹಿನಿ ಮೂಲಕ ಯುವ ಮತದಾರ ನೊಂದಣಿಗೆ ಜಾಗೃತಿ ಮೂಡಿಸಲಾಯಿತು
ಗುರುಮಠಕಲ್: ಇಂದು ಬೆಳಗ್ಗೆ ಚಂಡ್ರಿಕಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಕೇಶ್ವಾರ ಗ್ರಾಮದಲ್ಲಿ ಸ್ವಚ್ಛ ವಾಹಿನಿ ಮೂಲಕ ಹೊಸದಾಗಿ ಯುವಕರ ಮತದಾರ ನೋಂದಣಿ ಮಾಡಲು ಜಾಗೃತಿ ಮೂಡಿಸಲಾಯಿತು.
    user_Raghu
    Raghu
    ಯಾದಗಿರಿ, ಯಾದಗಿರಿ, ಕರ್ನಾಟಕ•
    6 hrs ago
  • ಗುರುಮಠಕಲ್: ಯಾದಗಿರಿ–ರಾಯಚೂರು ಹೆದ್ದಾರಿಯ ಆರ್‌.ಹೊಸಳ್ಳಿ–ನಾಗಲಾಪುರ ಮಧ್ಯದ ಅವೈಜ್ಞಾನಿಕ ಟೋಲ್‌ ತೆರವಿಗೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ ಅವೈಜ್ಞಾನಿಕ ಟೋಲ್ ತೆರವುಗೊಳಿಸಿ; ಅನಾಹುತ ತಪ್ಪಿಸಿ ಈಗಾಗಲೇ ಹಲವು ಜೀವ ಬಲಿ; ಇನ್ನೆಷ್ಟು ಜೀವ ಬೇಕು? ಸರ್ಕಾರಕ್ಕೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಪ್ರಶ್ನೆ ಯಾದಗಿರಿ: ಯಾದಗಿರಿ–ರಾಯಚೂರು ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಟೋಲ್‌ನ್ನು ತುರ್ತಾಗಿ ತೆರವುಗೊಳಿಸಿ, ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸಲು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆಗ್ರಹಿಸಿದರು. ಯಾದಗಿರಿ ತಾಲೂಕಿನ ಆರ್‌.ಹೊಸಳ್ಳಿ ಹಾಗೂ ನಾಗಲಾಪುರ ಮಧ್ಯೆ ಯಾದಗಿರಿ–ರಾಯಚೂರು ಹೆದ್ದಾರಿಯಲ್ಲಿ ನಿರ್ಮಿಸಿರುವ ಟೋಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ರೈತರು ಹಾಗೂ ವಾಹನ ಸವಾರರೊಂದಿಗೆ ಚರ್ಚಿಸಿದರು. ಬಳಿಕ ಸ್ಥಳದಲ್ಲಿಯೇ ದಿಢೀರ್ ಪ್ರತಿಭಟನೆ ನಡೆಸಿ ಮಾತನಾಡಿದರು. ಟೋಲ್‌ನಲ್ಲಿ ಸಮರ್ಪಕ ವಿದ್ಯುತ್ ದೀಪಗಳು ಹಾಗೂ ಅಗತ್ಯ ಸ್ಟಿಕ್ಕರ್‌ಗಳನ್ನು ಸರಿಯಾಗಿ ಅಳವಡಿಸದೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಈಗಾಗಲೇ ಸಾಕಷ್ಟು ಜೀವಗಳು ಬಲಿಯಾಗಿವೆ ಎಂದು ಆರೋಪಿಸಿದರು. ದಿನನಿತ್ಯ ಈ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಇಂತಹ ಪ್ರಮುಖ ರಸ್ತೆಯಲ್ಲಿ ಟೋಲ್ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ರೂಪಿಸಬೇಕಾಗಿದ್ದರೂ, ಮೂಲಸೌಕರ್ಯಗಳ ಕೊರತೆ ಕಂಡುಬರುತ್ತಿದೆ. ಈ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ ಎಂದು ಹೇಳಿದರು. ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದು, ಮತ್ತಷ್ಟು ಅನಾಹುತ ಸಂಭವಿಸುವವರೆಗೆ ಕಾಯುತ್ತಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು. ವಾಹನ ಸವಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಟೋಲ್ ವ್ಯವಸ್ಥೆಯನ್ನು ಪರಿಶೀಲಿಸಿ, ಅಪಾಯಕಾರಿ ಅಂಶಗಳನ್ನು ತಕ್ಷಣ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ರಸ್ತೆ ತಡೆಗೆ ಎಚ್ಚರಿಕೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಟೋಲ್‌ನ್ನು ತಕ್ಷಣ ತೆರವುಗೊಳಿಸಿ, ಮುಂದಾಗಬಹುದಾದ ಅಪಘಾತಗಳನ್ನು ತಡೆಯಲು ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇದೇ ಟೋಲ್ ಸ್ಥಳದಲ್ಲಿ ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಉಮೇಶ ಕೆ. ಮುದ್ನಾಳ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಸ್ಥಳೀಯರ ಆತಂಕ ಟೋಲ್‌ ವ್ಯವಸ್ಥೆ ಸುರಕ್ಷಿತವಾಗಿರಲಿ: ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಸ್ಥಳೀಯರ ಸುರಕ್ಷತೆಗೆ ಆದ್ಯತೆ ನೀಡಿ, ಟೋಲ್ ಸ್ಥಳದಲ್ಲಿರುವ ಮೂಲಸೌಕರ್ಯಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿದೆ. ಈ ಸಂಧರ್ಭದಲ್ಲಿ ಮಲ್ಲೇಶಿ, ಪವನ, ತಿಪ್ಪಣ್ಣ, ಬಸಲಿಂಗಪ್ಪ, ಹಣಮಂತ, ಮರಲಿಂಗಪ್ಪ, ಮಹಾದೇವಪ್ಪ, ಮೋನಪ್ಪ, ಮಲ್ಲಪ್ಪ, ಚಂದ್ರು, ಸಿದ್ದು, ತಿಮ್ಮಪ್ಪ, ಆನಂದ, ಭೀಮಪ್ಪ, ಸಾಬು ಮಲ್ಲಪ್ಪ ಸೇರಿದಂತೆ ಹಲವರು ಇದ್ದರು. ಕೋಟ್: ೦೧ ಅವೈಜ್ಞಾನಿಕ ಟೋಲ್‌ನಿಂದ ಬಡ ವಾಹನ ಚಾಲಕರ ಜೀವಕ್ಕೆ ಅಪಾಯ ಎದುರಾಗಿದೆ. ಇನ್ನೆಷ್ಟು ಬಡಜೀವಿಗಳು ಬಲಿಯಾಗಬೇಕು? — ಉಮೇಶ ಕೆ. ಮುದ್ನಾಳ, ಸಾಮಾಜಿಕ ಹೋರಾಟಗಾರ
    4
    ಗುರುಮಠಕಲ್: ಯಾದಗಿರಿ–ರಾಯಚೂರು ಹೆದ್ದಾರಿಯ ಆರ್‌.ಹೊಸಳ್ಳಿ–ನಾಗಲಾಪುರ ಮಧ್ಯದ ಅವೈಜ್ಞಾನಿಕ ಟೋಲ್‌ ತೆರವಿಗೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ 
ಅವೈಜ್ಞಾನಿಕ ಟೋಲ್ ತೆರವುಗೊಳಿಸಿ; ಅನಾಹುತ ತಪ್ಪಿಸಿ
ಈಗಾಗಲೇ ಹಲವು ಜೀವ ಬಲಿ; ಇನ್ನೆಷ್ಟು ಜೀವ ಬೇಕು? ಸರ್ಕಾರಕ್ಕೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಪ್ರಶ್ನೆ
ಯಾದಗಿರಿ: ಯಾದಗಿರಿ–ರಾಯಚೂರು ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಟೋಲ್‌ನ್ನು ತುರ್ತಾಗಿ ತೆರವುಗೊಳಿಸಿ, ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸಲು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆಗ್ರಹಿಸಿದರು.
ಯಾದಗಿರಿ ತಾಲೂಕಿನ ಆರ್‌.ಹೊಸಳ್ಳಿ ಹಾಗೂ ನಾಗಲಾಪುರ ಮಧ್ಯೆ ಯಾದಗಿರಿ–ರಾಯಚೂರು ಹೆದ್ದಾರಿಯಲ್ಲಿ ನಿರ್ಮಿಸಿರುವ ಟೋಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ರೈತರು ಹಾಗೂ ವಾಹನ ಸವಾರರೊಂದಿಗೆ ಚರ್ಚಿಸಿದರು. ಬಳಿಕ ಸ್ಥಳದಲ್ಲಿಯೇ ದಿಢೀರ್ ಪ್ರತಿಭಟನೆ ನಡೆಸಿ ಮಾತನಾಡಿದರು.
ಟೋಲ್‌ನಲ್ಲಿ ಸಮರ್ಪಕ ವಿದ್ಯುತ್ ದೀಪಗಳು ಹಾಗೂ ಅಗತ್ಯ ಸ್ಟಿಕ್ಕರ್‌ಗಳನ್ನು ಸರಿಯಾಗಿ ಅಳವಡಿಸದೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಈಗಾಗಲೇ ಸಾಕಷ್ಟು ಜೀವಗಳು ಬಲಿಯಾಗಿವೆ ಎಂದು ಆರೋಪಿಸಿದರು.
ದಿನನಿತ್ಯ ಈ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಇಂತಹ ಪ್ರಮುಖ ರಸ್ತೆಯಲ್ಲಿ ಟೋಲ್ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ರೂಪಿಸಬೇಕಾಗಿದ್ದರೂ, ಮೂಲಸೌಕರ್ಯಗಳ ಕೊರತೆ ಕಂಡುಬರುತ್ತಿದೆ. ಈ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ ಎಂದು ಹೇಳಿದರು.
ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದು, ಮತ್ತಷ್ಟು ಅನಾಹುತ ಸಂಭವಿಸುವವರೆಗೆ ಕಾಯುತ್ತಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು. ವಾಹನ ಸವಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಟೋಲ್ ವ್ಯವಸ್ಥೆಯನ್ನು ಪರಿಶೀಲಿಸಿ, ಅಪಾಯಕಾರಿ ಅಂಶಗಳನ್ನು ತಕ್ಷಣ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ರಸ್ತೆ ತಡೆಗೆ ಎಚ್ಚರಿಕೆ
ಅವೈಜ್ಞಾನಿಕವಾಗಿ ನಿರ್ಮಿಸಿರುವ ಟೋಲ್‌ನ್ನು ತಕ್ಷಣ ತೆರವುಗೊಳಿಸಿ, ಮುಂದಾಗಬಹುದಾದ ಅಪಘಾತಗಳನ್ನು ತಡೆಯಲು ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇದೇ ಟೋಲ್ ಸ್ಥಳದಲ್ಲಿ ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಉಮೇಶ ಕೆ. ಮುದ್ನಾಳ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸ್ಥಳೀಯರ ಆತಂಕ ಟೋಲ್‌ ವ್ಯವಸ್ಥೆ ಸುರಕ್ಷಿತವಾಗಿರಲಿ: ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಸ್ಥಳೀಯರ ಸುರಕ್ಷತೆಗೆ ಆದ್ಯತೆ ನೀಡಿ, ಟೋಲ್ ಸ್ಥಳದಲ್ಲಿರುವ ಮೂಲಸೌಕರ್ಯಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿದೆ.
ಈ ಸಂಧರ್ಭದಲ್ಲಿ  ಮಲ್ಲೇಶಿ, ಪವನ, ತಿಪ್ಪಣ್ಣ, ಬಸಲಿಂಗಪ್ಪ, ಹಣಮಂತ, ಮರಲಿಂಗಪ್ಪ, ಮಹಾದೇವಪ್ಪ, ಮೋನಪ್ಪ, ಮಲ್ಲಪ್ಪ, ಚಂದ್ರು, ಸಿದ್ದು, ತಿಮ್ಮಪ್ಪ, ಆನಂದ, ಭೀಮಪ್ಪ, ಸಾಬು ಮಲ್ಲಪ್ಪ ಸೇರಿದಂತೆ ಹಲವರು ಇದ್ದರು.
ಕೋಟ್: ೦೧
ಅವೈಜ್ಞಾನಿಕ ಟೋಲ್‌ನಿಂದ ಬಡ ವಾಹನ ಚಾಲಕರ ಜೀವಕ್ಕೆ ಅಪಾಯ ಎದುರಾಗಿದೆ. ಇನ್ನೆಷ್ಟು ಬಡಜೀವಿಗಳು ಬಲಿಯಾಗಬೇಕು?
— ಉಮೇಶ ಕೆ. ಮುದ್ನಾಳ, ಸಾಮಾಜಿಕ ಹೋರಾಟಗಾರ
    user_N S Patange
    N S Patange
    Local News Reporter ಗುರುಮಿಟ್ಕಲ್, ಯಾದಗಿರಿ, ಕರ್ನಾಟಕ•
    8 hrs ago
  • ಹೋಟೆಲ್‌ಗಳ ಮೇಲೆ ಎಸಿ ದಿಢೀರ್ ದಾಳಿ: ತನು ಜ್ಯೂಸ್ ಸೆಂಟರ್ ಸೀಜ್ ಶಿವಮೊಗ್ಗ: ನಗರದ ವಿವಿಧ ಹೋಟೆಲ್‌ಗಳು ಹಾಗೂ ಜ್ಯೂಸ್‌ ಸೆಂಟರ್‌ಗಳ ಮೇಲೆ ಶಿವಮೊಗ್ಗ ಉಪವಿಭಾಗಾಧಿಕಾರಿ (ಎಸಿ) ಡಾ. ಮೈತ್ರಿ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿತು. ನಗರದ ದರ್ಗಾ ಕಾಂಪ್ಲೆಕ್ಸ್ ಸೇರಿದಂತೆ ಹಲವು ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ನಡೆದ ತಪಾಸಣೆಯಲ್ಲಿ ಹೋಟೆಲ್‌ಗಳಲ್ಲಿನ ಆಹಾರದ ಗುಣಮಟ್ಟ, ನೈರ್ಮಲ್ಯ ವ್ಯವಸ್ಥೆ ಹಾಗೂ ಆಹಾರ ತಯಾರಿಕಾ ಸ್ಥಳಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಅಲ್ಲದೆ, ವ್ಯಾಪಾರ ನಡೆಸಲು ಅಗತ್ಯವಿರುವ ಶಾಸನಬದ್ಧ ಪರವಾನಗಿಗಳ ಬಗ್ಗೆಯೂ ದಾಖಲೆಗಳನ್ನು ಪರಿಶೀಲಿಸಲಾಯಿತು. ತಪಾಸಣೆ ವೇಳೆ ಗಂಭೀರ ನಿಯಮ ಉಲ್ಲಂಘನೆ ಹಾಗೂ ನೈರ್ಮಲ್ಯದ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ನಗರದ ತನು ಜ್ಯೂಸ್ ಸೆಂಟರ್‌ನ್ನು ಅಧಿಕಾರಿಗಳು ಸ್ಥಳದಲ್ಲೇ ಸೀಜ್ ಮಾಡಿದ್ದಾರೆ. ನಿಯಮ ಉಲ್ಲಂಘನೆ ಹಾಗೂ ನೈರ್ಮಲ್ಯ ಕಾಪಾಡದ ಹೋಟೆಲ್‌ ಮಾಲೀಕರಿಗೆ ಎಸಿ ಡಾ. ಮೈತ್ರಿ ಅವರು ಸ್ಥಳದಲ್ಲೇ ಎಚ್ಚರಿಕೆ ನೀಡಿದ್ದು, ಸಾರ್ವಜನಿಕರ ಆರೋಗ್ಯದೊಂದಿಗೆ ನಿರ್ಲಕ್ಷ್ಯ ತೋರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಶಿವಮೊಗ್ಗ ನಗರದಲ್ಲಿ ಮುಂದಿನ ದಿನಗಳಲ್ಲಿಯೂ ಹೋಟೆಲ್‌ಗಳು, ಜ್ಯೂಸ್‌ ಸೆಂಟರ್‌ಗಳು ಸೇರಿದಂತೆ ಆಹಾರ ಮಾರಾಟ ಮಳಿಗೆಗಳ ಮೇಲೆ ದಿಢೀರ್ ತಪಾಸಣೆ ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. #Shivamogga #Shimoga #ACRaid #HotelInspection #TanuJuiceCenter #FoodSafety #FoodHygiene #HealthSafety #ShivamoggaNews #KarnatakaNews #BreakingNews #KannadaNews #yadgirnewslive ಹೋಟೆಲ್‌ಗಳ ಮೇಲೆ ಎಸಿ ದಿಢೀರ್ ದಾಳಿ: ತನು ಜ್ಯೂಸ್ ಸೆಂಟರ್ ಸೀಜ್ ಶಿವಮೊಗ್ಗ: ನಗರದ ವಿವಿಧ ಹೋಟೆಲ್‌ಗಳು ಹಾಗೂ ಜ್ಯೂಸ್‌ ಸೆಂಟರ್‌ಗಳ ಮೇಲೆ ಶಿವಮೊಗ್ಗ ಉಪವಿಭಾಗಾಧಿಕಾರಿ (ಎಸಿ) ಡಾ. ಮೈತ್ರಿ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿತು. ನಗರದ ದರ್ಗಾ ಕಾಂಪ್ಲೆಕ್ಸ್ ಸೇರಿದಂತೆ ಹಲವು ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ನಡೆದ ತಪಾಸಣೆಯಲ್ಲಿ ಹೋಟೆಲ್‌ಗಳಲ್ಲಿನ ಆಹಾರದ ಗುಣಮಟ್ಟ, ನೈರ್ಮಲ್ಯ ವ್ಯವಸ್ಥೆ ಹಾಗೂ ಆಹಾರ ತಯಾರಿಕಾ ಸ್ಥಳಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಅಲ್ಲದೆ, ವ್ಯಾಪಾರ ನಡೆಸಲು ಅಗತ್ಯವಿರುವ ಶಾಸನಬದ್ಧ ಪರವಾನಗಿಗಳ ಬಗ್ಗೆಯೂ ದಾಖಲೆಗಳನ್ನು ಪರಿಶೀಲಿಸಲಾಯಿತು. ತಪಾಸಣೆ ವೇಳೆ ಗಂಭೀರ ನಿಯಮ ಉಲ್ಲಂಘನೆ ಹಾಗೂ ನೈರ್ಮಲ್ಯದ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ನಗರದ ತನು ಜ್ಯೂಸ್ ಸೆಂಟರ್‌ನ್ನು ಅಧಿಕಾರಿಗಳು ಸ್ಥಳದಲ್ಲೇ ಸೀಜ್ ಮಾಡಿದ್ದಾರೆ. ನಿಯಮ ಉಲ್ಲಂಘನೆ ಹಾಗೂ ನೈರ್ಮಲ್ಯ ಕಾಪಾಡದ ಹೋಟೆಲ್‌ ಮಾಲೀಕರಿಗೆ ಎಸಿ ಡಾ. ಮೈತ್ರಿ ಅವರು ಸ್ಥಳದಲ್ಲೇ ಎಚ್ಚರಿಕೆ ನೀಡಿದ್ದು, ಸಾರ್ವಜನಿಕರ ಆರೋಗ್ಯದೊಂದಿಗೆ ನಿರ್ಲಕ್ಷ್ಯ ತೋರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಶಿವಮೊಗ್ಗ ನಗರದಲ್ಲಿ ಮುಂದಿನ ದಿನಗಳಲ್ಲಿಯೂ ಹೋಟೆಲ್‌ಗಳು, ಜ್ಯೂಸ್‌ ಸೆಂಟರ್‌ಗಳು ಸೇರಿದಂತೆ ಆಹಾರ ಮಾರಾಟ ಮಳಿಗೆಗಳ ಮೇಲೆ ದಿಢೀರ್ ತಪಾಸಣೆ ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. #Shivamogga #Shimoga #ACRaid #HotelInspection #TanuJuiceCenter #FoodSafety #FoodHygiene #HealthSafety #ShivamoggaNews #KarnatakaNews #BreakingNews #KannadaNews #yadgirnewslive
    1
    ಹೋಟೆಲ್‌ಗಳ ಮೇಲೆ ಎಸಿ ದಿಢೀರ್ ದಾಳಿ: ತನು ಜ್ಯೂಸ್ ಸೆಂಟರ್ ಸೀಜ್

ಶಿವಮೊಗ್ಗ: ನಗರದ ವಿವಿಧ ಹೋಟೆಲ್‌ಗಳು ಹಾಗೂ ಜ್ಯೂಸ್‌ ಸೆಂಟರ್‌ಗಳ ಮೇಲೆ ಶಿವಮೊಗ್ಗ ಉಪವಿಭಾಗಾಧಿಕಾರಿ (ಎಸಿ) ಡಾ. ಮೈತ್ರಿ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿತು.

ನಗರದ ದರ್ಗಾ ಕಾಂಪ್ಲೆಕ್ಸ್ ಸೇರಿದಂತೆ ಹಲವು ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ನಡೆದ ತಪಾಸಣೆಯಲ್ಲಿ ಹೋಟೆಲ್‌ಗಳಲ್ಲಿನ ಆಹಾರದ ಗುಣಮಟ್ಟ, ನೈರ್ಮಲ್ಯ ವ್ಯವಸ್ಥೆ ಹಾಗೂ ಆಹಾರ ತಯಾರಿಕಾ ಸ್ಥಳಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಅಲ್ಲದೆ, ವ್ಯಾಪಾರ ನಡೆಸಲು ಅಗತ್ಯವಿರುವ ಶಾಸನಬದ್ಧ ಪರವಾನಗಿಗಳ ಬಗ್ಗೆಯೂ ದಾಖಲೆಗಳನ್ನು ಪರಿಶೀಲಿಸಲಾಯಿತು.

ತಪಾಸಣೆ ವೇಳೆ ಗಂಭೀರ ನಿಯಮ ಉಲ್ಲಂಘನೆ ಹಾಗೂ ನೈರ್ಮಲ್ಯದ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ನಗರದ ತನು ಜ್ಯೂಸ್ ಸೆಂಟರ್‌ನ್ನು ಅಧಿಕಾರಿಗಳು ಸ್ಥಳದಲ್ಲೇ ಸೀಜ್ ಮಾಡಿದ್ದಾರೆ.

ನಿಯಮ ಉಲ್ಲಂಘನೆ ಹಾಗೂ ನೈರ್ಮಲ್ಯ ಕಾಪಾಡದ ಹೋಟೆಲ್‌ ಮಾಲೀಕರಿಗೆ ಎಸಿ ಡಾ. ಮೈತ್ರಿ ಅವರು ಸ್ಥಳದಲ್ಲೇ ಎಚ್ಚರಿಕೆ ನೀಡಿದ್ದು, ಸಾರ್ವಜನಿಕರ ಆರೋಗ್ಯದೊಂದಿಗೆ ನಿರ್ಲಕ್ಷ್ಯ ತೋರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಶಿವಮೊಗ್ಗ ನಗರದಲ್ಲಿ ಮುಂದಿನ ದಿನಗಳಲ್ಲಿಯೂ ಹೋಟೆಲ್‌ಗಳು, ಜ್ಯೂಸ್‌ ಸೆಂಟರ್‌ಗಳು ಸೇರಿದಂತೆ ಆಹಾರ ಮಾರಾಟ ಮಳಿಗೆಗಳ ಮೇಲೆ ದಿಢೀರ್ ತಪಾಸಣೆ ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

#Shivamogga #Shimoga #ACRaid #HotelInspection #TanuJuiceCenter #FoodSafety #FoodHygiene #HealthSafety #ShivamoggaNews #KarnatakaNews #BreakingNews #KannadaNews #yadgirnewslive

    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    9 hrs ago
  • #ಚೌಡಾಪೂರದಲ್ಲಿ ಬಿಸಿಲನ್ನು ಲೆಕ್ಕಿಸದೆ ಸಿಎಂ ಬೇಟಿಗೆ ಕಾದು ನಿಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು: ಕಾರ್ಯಕರ್ತರಿಗೆ ಭೇಟಿ ನೀಡದೆ ನೇರವಾಗಿ ಶ್ರೀ ದತ್ತನ ದರ್ಶನಕ್ಕೆ ತೆರಳಿದ ಮುಖ್ಯಮಂತ್ರಿಗಳು. #ಚೌಡಾಪೂರದಲ್ಲಿ ಬಿಸಿಲನ್ನು ಲೆಕ್ಕಿಸದೆ ಸಿಎಂ ಬೇಟಿಗೆ ಕಾದು ನಿಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು: ಕಾರ್ಯಕರ್ತರಿಗೆ ಭೇಟಿ ನೀಡದೆ ನೇರವಾಗಿ ಶ್ರೀ ದತ್ತನ ದರ್ಶನಕ್ಕೆ ತೆರಳಿದ ಮುಖ್ಯಮಂತ್ರಿಗಳು.
    1
    #ಚೌಡಾಪೂರದಲ್ಲಿ ಬಿಸಿಲನ್ನು ಲೆಕ್ಕಿಸದೆ ಸಿಎಂ ಬೇಟಿಗೆ ಕಾದು ನಿಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು: ಕಾರ್ಯಕರ್ತರಿಗೆ ಭೇಟಿ ನೀಡದೆ ನೇರವಾಗಿ ಶ್ರೀ ದತ್ತನ ದರ್ಶನಕ್ಕೆ ತೆರಳಿದ ಮುಖ್ಯಮಂತ್ರಿಗಳು.
#ಚೌಡಾಪೂರದಲ್ಲಿ ಬಿಸಿಲನ್ನು ಲೆಕ್ಕಿಸದೆ ಸಿಎಂ ಬೇಟಿಗೆ ಕಾದು ನಿಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು: ಕಾರ್ಯಕರ್ತರಿಗೆ ಭೇಟಿ ನೀಡದೆ ನೇರವಾಗಿ ಶ್ರೀ ದತ್ತನ ದರ್ಶನಕ್ಕೆ ತೆರಳಿದ ಮುಖ್ಯಮಂತ್ರಿಗಳು.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    4 hrs ago
  • ಜಿಲ್ಲಾ ಉಪವಿಭಾಗ ಆಸ್ಪತ್ರೆ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ಶಾಸಕ ಶರಣು ಸಲಗರ್ ಭಾಷಣ
    1
    ಜಿಲ್ಲಾ ಉಪವಿಭಾಗ ಆಸ್ಪತ್ರೆ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ಶಾಸಕ ಶರಣು ಸಲಗರ್ ಭಾಷಣ
    user_Jk ಕನ್ನಡ news
    Jk ಕನ್ನಡ news
    Media company ಹೋಮ್ನಾಬಾದ್, ಬೀದರ್, ಕರ್ನಾಟಕ•
    12 hrs ago
  • ಇಂಚೂರ ಬಳಿ ಡಾ: ಚನ್ನಬಸವ ಪಟ್ಟದ್ದೆವರು ಟ್ರೀ ಪಾರ್ಕ್ ಲೋಕಾರ್ಪಣೆ ಭಾಲ್ಕಿ: ಇಂಚೂರ ಬಳಿ ಡಾ: ಚನ್ನಬಸವ ಪಟ್ಟದ್ದೆವರು ಟ್ರೀ ಪಾರ್ಕ್ ಲೋಕಾರ್ಪಣೆ
    1
    ಇಂಚೂರ ಬಳಿ ಡಾ: ಚನ್ನಬಸವ ಪಟ್ಟದ್ದೆವರು ಟ್ರೀ ಪಾರ್ಕ್ ಲೋಕಾರ್ಪಣೆ
ಭಾಲ್ಕಿ: ಇಂಚೂರ ಬಳಿ ಡಾ: ಚನ್ನಬಸವ ಪಟ್ಟದ್ದೆವರು ಟ್ರೀ ಪಾರ್ಕ್ ಲೋಕಾರ್ಪಣೆ
    user_Udayakumar Mule
    Udayakumar Mule
    ವರದಿಗಾರ Basavakalyan, Bidar•
    20 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.