logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಸ್ವಚ್ಛ ವಾಹಿನಿ ಮೂಲಕ ಯುವ ಮತದಾರ ನೊಂದಣಿಗೆ ಜಾಗೃತಿ ಮೂಡಿಸಲಾಯಿತು ಗುರುಮಠಕಲ್: ಇಂದು ಬೆಳಗ್ಗೆ ಚಂಡ್ರಿಕಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಕೇಶ್ವಾರ ಗ್ರಾಮದಲ್ಲಿ ಸ್ವಚ್ಛ ವಾಹಿನಿ ಮೂಲಕ ಹೊಸದಾಗಿ ಯುವಕರ ಮತದಾರ ನೋಂದಣಿ ಮಾಡಲು ಜಾಗೃತಿ ಮೂಡಿಸಲಾಯಿತು.

3 hrs ago
user_Raghu
Raghu
ಯಾದಗಿರಿ, ಯಾದಗಿರಿ, ಕರ್ನಾಟಕ•
3 hrs ago

ಸ್ವಚ್ಛ ವಾಹಿನಿ ಮೂಲಕ ಯುವ ಮತದಾರ ನೊಂದಣಿಗೆ ಜಾಗೃತಿ ಮೂಡಿಸಲಾಯಿತು ಗುರುಮಠಕಲ್: ಇಂದು ಬೆಳಗ್ಗೆ ಚಂಡ್ರಿಕಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಕೇಶ್ವಾರ ಗ್ರಾಮದಲ್ಲಿ ಸ್ವಚ್ಛ ವಾಹಿನಿ ಮೂಲಕ ಹೊಸದಾಗಿ ಯುವಕರ ಮತದಾರ ನೋಂದಣಿ ಮಾಡಲು ಜಾಗೃತಿ ಮೂಡಿಸಲಾಯಿತು.

More news from ಕರ್ನಾಟಕ and nearby areas
  • ಯಾದಗಿರಿ ತಾಲೂಕಿನ ತಹಸಿಲ್ ಕಚೇರಿಯಲ್ಲಿ ಆಧಾರ್ ಕಾರ್ಡ್ ಅಪ್ಲೋಡ್ ಮತ್ತು ರೇಷನ್ ಕಾರ್ಡ್ ಕೆವೈಸಿ ಮಾಡಲು ಬೆಂಗಳೂರಿನಿಂದ ಆಗಮಿಸಿ ಒಳಗಡೆ ಕರ್ನಾಟಕ 1 ನಲ್ಲಿ ಬೆಳಗ್ಗೆ 3:00 ಯಿಂದ ಯಾದಗಿರಿಯ ತಾಲೂಕಿನ ಕಚೇರಿಯ ಒಳಗಡೆ ಜನ ಜಾತ್ರೆ ಆಗಿದೆ ಬೆಂಗಳೂರಿನಲ್ಲಿ ಬಂದು ಲೈನ್ ಅಲ್ಲಿ ನಿಂತುಕೊಂಡು ಆದರೂ ಕೂಡ ಸರಿಯಾಗಿ ನೆಟ್ವರ್ಕ್ ಇಲ್ಲ ಮತ್ತು ಜನರು ಕಿತ್ತಿ ಹಾಡುತ್ತಿದ್ದರೆ ಜಿಲ್ಲೆಯ 16 ವರ್ಷ ಆದರೂ ಕೂಡ ಜಿಲ್ಲಾ ಆಡಳಿತ ಇದನ್ನು ಗಮನಿಸಿ ಸರಿಪಡಿಸಬೇಕು ಈಗಾಗಲೇ ಯಾತಗಿರಿ ಜಿಲ್ಲೆಯ ಬರಗಲ ಆಗಿದೆ ಬೆಳೆ ಇಲ್ಲದ ಕಾರಣ ರೈತರು ಸಾಲ ಮಾಡಿ ಬೆಂಗಳೂರಿನಲ್ಲಿ ದುಡಿ ದುಡಿಯುತ್ತಾ ಇದ್ದರೂ ಕೂಡ ಈ ಕೆವೈಸಿ ರೇಷನ್ ಕಾರ್ಡ್ ಸಲುವಾಗಿ ಜಿಲ್ಲೆಗೆ ಆಗಮಿಸಿ ತಿದ್ದು ಇದನ್ನು ಬಹಳ ರೈತರು ಕೂಲಿ ಕಾರ್ಮಿಕರು ಕೆಲಸ ಬಿಟ್ಟು ಬೆಳಗ್ಗೆ ಮೂರು ಗಂಟೆಯಿಂದ ಸಾಲಗಿ ನಿಲ್ಲುತ್ತದೆ ಇದು ಯಾವ ಶಾಪ ರೈತರ ಗೋಳು ವರು ಯಾರು ಇಲ್ಲ ಸರ್ಕಾರವೇ ಕಣ್ಣು ಮುಚ್ಚಿ ಕುಂತಿದೆ ಜನ ಆಕ್ರೋಶ
    1
    ಯಾದಗಿರಿ ತಾಲೂಕಿನ ತಹಸಿಲ್ ಕಚೇರಿಯಲ್ಲಿ ಆಧಾರ್ ಕಾರ್ಡ್ ಅಪ್ಲೋಡ್ ಮತ್ತು ರೇಷನ್ ಕಾರ್ಡ್ ಕೆವೈಸಿ ಮಾಡಲು ಬೆಂಗಳೂರಿನಿಂದ ಆಗಮಿಸಿ ಒಳಗಡೆ ಕರ್ನಾಟಕ 1 ನಲ್ಲಿ ಬೆಳಗ್ಗೆ 3:00 ಯಿಂದ ಯಾದಗಿರಿಯ ತಾಲೂಕಿನ ಕಚೇರಿಯ ಒಳಗಡೆ ಜನ ಜಾತ್ರೆ ಆಗಿದೆ ಬೆಂಗಳೂರಿನಲ್ಲಿ ಬಂದು ಲೈನ್ ಅಲ್ಲಿ ನಿಂತುಕೊಂಡು ಆದರೂ ಕೂಡ ಸರಿಯಾಗಿ ನೆಟ್ವರ್ಕ್ ಇಲ್ಲ ಮತ್ತು ಜನರು ಕಿತ್ತಿ ಹಾಡುತ್ತಿದ್ದರೆ ಜಿಲ್ಲೆಯ 16 ವರ್ಷ ಆದರೂ ಕೂಡ ಜಿಲ್ಲಾ ಆಡಳಿತ ಇದನ್ನು ಗಮನಿಸಿ ಸರಿಪಡಿಸಬೇಕು ಈಗಾಗಲೇ ಯಾತಗಿರಿ ಜಿಲ್ಲೆಯ ಬರಗಲ ಆಗಿದೆ ಬೆಳೆ ಇಲ್ಲದ ಕಾರಣ ರೈತರು ಸಾಲ ಮಾಡಿ ಬೆಂಗಳೂರಿನಲ್ಲಿ ದುಡಿ ದುಡಿಯುತ್ತಾ ಇದ್ದರೂ ಕೂಡ ಈ ಕೆವೈಸಿ ರೇಷನ್ ಕಾರ್ಡ್ ಸಲುವಾಗಿ ಜಿಲ್ಲೆಗೆ ಆಗಮಿಸಿ ತಿದ್ದು ಇದನ್ನು ಬಹಳ ರೈತರು ಕೂಲಿ ಕಾರ್ಮಿಕರು ಕೆಲಸ ಬಿಟ್ಟು ಬೆಳಗ್ಗೆ ಮೂರು ಗಂಟೆಯಿಂದ ಸಾಲಗಿ ನಿಲ್ಲುತ್ತದೆ ಇದು ಯಾವ ಶಾಪ ರೈತರ ಗೋಳು ವರು ಯಾರು ಇಲ್ಲ ಸರ್ಕಾರವೇ ಕಣ್ಣು ಮುಚ್ಚಿ ಕುಂತಿದೆ ಜನ ಆಕ್ರೋಶ
    user_Ramesh Vishwakarma
    Ramesh Vishwakarma
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    17 hrs ago
  • ಯಾದಗೀರ್ ರಾಜಕಾರಣದಲ್ಲಿ ಹೊಸ ಹೆಜ್ಜೆ: ಕೆಆರ್‌ಎಸ್‌ಗೆ ಯಾದ್ಗೀರ್ ನ್ಯೂಸ್ ಸಂಪಾದಕ ರಫಿಕ್ ಪಟೇಲ್ ಸೇರ್ಪಡೆ! ಯಾದಗಿರಿ: ಯಾದ್ಗೀರ್ ನ್ಯೂಸ್ ಸಂಪಾದಕರಾದ ಮೊಮ್ಮದ್ ರಫಿಕ್ ಪಟೇಲ್ ಅವರು ಇಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಅಖಾಡಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ. ಕೆಆರ್‌ಎಸ್ ಪಕ್ಷದ ರಾಜ್ಯ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ಸಮ್ಮುಖದಲ್ಲಿ ರಫಿಕ್ ಪಟೇಲ್ ಅವರು ಪಕ್ಷದ ಸದಸ್ಯತ್ವ ಸ್ವೀಕರಿಸಿದರು. “ಜನರ ಸಮಸ್ಯೆಗಳನ್ನು ಪ್ರಶ್ನಿಸುವ ಧ್ವನಿ ಇನ್ನು ಮುಂದೆ ರಾಜಕೀಯ ವೇದಿಕೆಯಲ್ಲೂ ಮೊಳಗಲಿದೆ” ಎಂಬ ಸಂದೇಶದೊಂದಿಗೆ ಅವರ ರಾಜಕೀಯ ಪ್ರವೇಶ ಕುತೂಹಲ ಮೂಡಿಸಿದೆ. ಯಾದಗಿರಿ ಜಿಲ್ಲೆಯ ಅಭಿವೃದ್ಧಿ, ಜನರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ವೇದಿಕೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಕೆಆರ್‌ಎಸ್ ಪಕ್ಷ ಸೇರಿರುವುದಾಗಿ ರಫಿಕ್ ಪಟೇಲ್ ತಿಳಿಸಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಜನರ ಧ್ವನಿಯಾಗಿ ಗುರುತಿಸಿಕೊಂಡಿರುವ ರಫಿಕ್ ಪಟೇಲ್ ಅವರ ರಾಜಕೀಯ ಪ್ರವೇಶವು ಯಾದಗಿರಿ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆಯೇ? ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಯಾದಗೀರ್ ರಾಜಕಾರಣದಲ್ಲಿ ಹೊಸ ಹೆಜ್ಜೆ: ಕೆಆರ್‌ಎಸ್‌ಗೆ ಯಾದ್ಗೀರ್ ನ್ಯೂಸ್ ಸಂಪಾದಕ ರಫಿಕ್ ಪಟೇಲ್ ಸೇರ್ಪಡೆ! ಯಾದಗಿರಿ: ಯಾದ್ಗೀರ್ ನ್ಯೂಸ್ ಸಂಪಾದಕರಾದ ಮೊಮ್ಮದ್ ರಫಿಕ್ ಪಟೇಲ್ ಅವರು ಇಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಅಖಾಡಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ. ಕೆಆರ್‌ಎಸ್ ಪಕ್ಷದ ರಾಜ್ಯ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ಸಮ್ಮುಖದಲ್ಲಿ ರಫಿಕ್ ಪಟೇಲ್ ಅವರು ಪಕ್ಷದ ಸದಸ್ಯತ್ವ ಸ್ವೀಕರಿಸಿದರು. “ಜನರ ಸಮಸ್ಯೆಗಳನ್ನು ಪ್ರಶ್ನಿಸುವ ಧ್ವನಿ ಇನ್ನು ಮುಂದೆ ರಾಜಕೀಯ ವೇದಿಕೆಯಲ್ಲೂ ಮೊಳಗಲಿದೆ” ಎಂಬ ಸಂದೇಶದೊಂದಿಗೆ ಅವರ ರಾಜಕೀಯ ಪ್ರವೇಶ ಕುತೂಹಲ ಮೂಡಿಸಿದೆ. ಯಾದಗಿರಿ ಜಿಲ್ಲೆಯ ಅಭಿವೃದ್ಧಿ, ಜನರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ವೇದಿಕೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಕೆಆರ್‌ಎಸ್ ಪಕ್ಷ ಸೇರಿರುವುದಾಗಿ ರಫಿಕ್ ಪಟೇಲ್ ತಿಳಿಸಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಜನರ ಧ್ವನಿಯಾಗಿ ಗುರುತಿಸಿಕೊಂಡಿರುವ ರಫಿಕ್ ಪಟೇಲ್ ಅವರ ರಾಜಕೀಯ ಪ್ರವೇಶವು ಯಾದಗಿರಿ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆಯೇ? ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
    1
    ಯಾದಗೀರ್ ರಾಜಕಾರಣದಲ್ಲಿ ಹೊಸ ಹೆಜ್ಜೆ: ಕೆಆರ್‌ಎಸ್‌ಗೆ ಯಾದ್ಗೀರ್ ನ್ಯೂಸ್ ಸಂಪಾದಕ ರಫಿಕ್ ಪಟೇಲ್ ಸೇರ್ಪಡೆ!

ಯಾದಗಿರಿ: ಯಾದ್ಗೀರ್ ನ್ಯೂಸ್ ಸಂಪಾದಕರಾದ ಮೊಮ್ಮದ್ ರಫಿಕ್ ಪಟೇಲ್ ಅವರು ಇಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಅಖಾಡಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ.

ಕೆಆರ್‌ಎಸ್ ಪಕ್ಷದ ರಾಜ್ಯ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ಸಮ್ಮುಖದಲ್ಲಿ ರಫಿಕ್ ಪಟೇಲ್ ಅವರು ಪಕ್ಷದ ಸದಸ್ಯತ್ವ ಸ್ವೀಕರಿಸಿದರು.

“ಜನರ ಸಮಸ್ಯೆಗಳನ್ನು ಪ್ರಶ್ನಿಸುವ ಧ್ವನಿ ಇನ್ನು ಮುಂದೆ ರಾಜಕೀಯ ವೇದಿಕೆಯಲ್ಲೂ ಮೊಳಗಲಿದೆ” ಎಂಬ ಸಂದೇಶದೊಂದಿಗೆ ಅವರ ರಾಜಕೀಯ ಪ್ರವೇಶ ಕುತೂಹಲ ಮೂಡಿಸಿದೆ.

ಯಾದಗಿರಿ ಜಿಲ್ಲೆಯ ಅಭಿವೃದ್ಧಿ, ಜನರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ವೇದಿಕೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಕೆಆರ್‌ಎಸ್ ಪಕ್ಷ ಸೇರಿರುವುದಾಗಿ ರಫಿಕ್ ಪಟೇಲ್ ತಿಳಿಸಿದ್ದಾರೆ.

ಮಾಧ್ಯಮ ಕ್ಷೇತ್ರದಲ್ಲಿ ಜನರ ಧ್ವನಿಯಾಗಿ ಗುರುತಿಸಿಕೊಂಡಿರುವ ರಫಿಕ್ ಪಟೇಲ್ ಅವರ ರಾಜಕೀಯ ಪ್ರವೇಶವು ಯಾದಗಿರಿ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆಯೇ? ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಯಾದಗೀರ್ ರಾಜಕಾರಣದಲ್ಲಿ ಹೊಸ ಹೆಜ್ಜೆ: ಕೆಆರ್‌ಎಸ್‌ಗೆ ಯಾದ್ಗೀರ್ ನ್ಯೂಸ್ ಸಂಪಾದಕ ರಫಿಕ್ ಪಟೇಲ್ ಸೇರ್ಪಡೆ!
ಯಾದಗಿರಿ: ಯಾದ್ಗೀರ್ ನ್ಯೂಸ್ ಸಂಪಾದಕರಾದ ಮೊಮ್ಮದ್ ರಫಿಕ್ ಪಟೇಲ್ ಅವರು ಇಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಅಖಾಡಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ.
ಕೆಆರ್‌ಎಸ್ ಪಕ್ಷದ ರಾಜ್ಯ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ಸಮ್ಮುಖದಲ್ಲಿ ರಫಿಕ್ ಪಟೇಲ್ ಅವರು ಪಕ್ಷದ ಸದಸ್ಯತ್ವ ಸ್ವೀಕರಿಸಿದರು.
“ಜನರ ಸಮಸ್ಯೆಗಳನ್ನು ಪ್ರಶ್ನಿಸುವ ಧ್ವನಿ ಇನ್ನು ಮುಂದೆ ರಾಜಕೀಯ ವೇದಿಕೆಯಲ್ಲೂ ಮೊಳಗಲಿದೆ” ಎಂಬ ಸಂದೇಶದೊಂದಿಗೆ ಅವರ ರಾಜಕೀಯ ಪ್ರವೇಶ ಕುತೂಹಲ ಮೂಡಿಸಿದೆ.
ಯಾದಗಿರಿ ಜಿಲ್ಲೆಯ ಅಭಿವೃದ್ಧಿ, ಜನರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ವೇದಿಕೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಕೆಆರ್‌ಎಸ್ ಪಕ್ಷ ಸೇರಿರುವುದಾಗಿ ರಫಿಕ್ ಪಟೇಲ್ ತಿಳಿಸಿದ್ದಾರೆ.
ಮಾಧ್ಯಮ ಕ್ಷೇತ್ರದಲ್ಲಿ ಜನರ ಧ್ವನಿಯಾಗಿ ಗುರುತಿಸಿಕೊಂಡಿರುವ ರಫಿಕ್ ಪಟೇಲ್ ಅವರ ರಾಜಕೀಯ ಪ್ರವೇಶವು ಯಾದಗಿರಿ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆಯೇ? ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    20 hrs ago
  • ಗುರುಮಠಕಲ್ ಮತಕ್ಷೇತ್ರ ಸೈದಾಪುರ ಎಪಿಎಂಸಿ ಆವರಣದಲ್ಲಿ ಜಾನುವಾರು ಸಂತೆ ಆರಂಭಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಸ್ಥಳ ಪರಿಶೀಲನೆ ನಡೆಸಿದರು. ಸೈದಾಪುರದಲ್ಲಿ ಜಾನುವಾರು ಸಂತೆ ಆರಂಭಿಸಿ ಮೂಲಸೌಕರ್ಯ ಕಲ್ಪಿಸಲು ಜಿಲ್ಲಾಡಳಿತಕ್ಕೆ ಉಮೇಶ್ ಮುದ್ನಾಳ ವಾರದ ಗಡುವು; ನಿರ್ಲಕ್ಷ್ಯ ವಹಿಸಿದರೆ ರಸ್ತೆ ಬಂದ್ ಹೋರಾಟದ ಎಚ್ಚರಿಕೆ ಗುರುಮಠಕಲ್ ಸೈದಾಪುರ ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಪ್ರತಿ ಗುರುವಾರ ನಡೆಯುವ ಸಂತೆಯಲ್ಲಿ ದನ-ಕರು, ಕುರಿ, ಆಡು ಹಾಗೂ ಕೋಳಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಅಖಿಲ ಭಾರತ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಜಿಲ್ಲಾಡಳಿತಕ್ಕೆ ಒಂದು ವಾರದ ಗಡುವು ನೀಡಿದ್ದಾರೆ. ಸಂತೆ ಆವರಣಕ್ಕೆ ಬುಧವಾರ ಬೆಳಗ್ಗೆ ಭೇಟಿ ನೀಡಿ ರೈತರೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಸೈದಾಪುರದಲ್ಲಿ ಜಾನುವಾರು ಸಂತೆ ಆರಂಭಿಸುವುದರ ಜತೆಗೆ ರೈತರು ಹಾಗೂ ಜಾನುವಾರುಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಲ್ಲಿ ಎಪಿಎಂಸಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು. ಅವ್ಯವಸ್ಥೆಯ ಆಗರವಾದ ಸಂತೆ ಆವರಣ ಸಂತೆ ಆವರಣದಲ್ಲಿ ಜಾಲಿಕಂಟಿಗಳು ಬೆಳೆದು ವಿಷಜಂತುಗಳು ಸೇರಿಕೊಳ್ಳುವಂತಾಗಿದೆ. ಚರಂಡಿಯಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಎಲ್ಲೆಡೆ ಅಸ್ವಚ್ಛತೆ ಕಂಡುಬರುತ್ತಿದ್ದು, ಕುಡುಕರ ಹಾವಳಿ ಹಾಗೂ ಅಕ್ರಮ ಚಟುವಟಿಕೆಗಳಿಗೂ ಅವಕಾಶವಾಗುತ್ತಿದೆ. ಕೆಲ ಭಾಗಗಳು ಭಿಕ್ಷುಕರು ಹಾಗೂ ಪುಂಡ-ಪೋಕರಿಗಳ ತಂಗುದಾಣದಂತಾಗಿವೆ. ಇದರಿಂದ ಸಂತೆಗಾಗಿ ಆಗಮಿಸುವ ರೈತರು ಹಾಗೂ ಸಾರ್ವಜನಿಕರು ಆತಂಕ ಎದುರಿಸುವಂತಾಗಿದೆ ಎಂದು ಮುದ್ನಾಳ ಹೇಳಿದರು. ಪ್ರತಿ ಗುರುವಾರ ಸಾವಿರಾರು ರೈತರು ಹಾಗೂ ವ್ಯಾಪಾರಿಗಳು ಆಗಮಿಸುವ ಸ್ಥಳದಲ್ಲಿ ಕನಿಷ್ಠ ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ, ನೆರಳು ಸೇರಿದಂತೆ ಅಗತ್ಯ ಸೌಲಭ್ಯಗಳಿಲ್ಲದಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ದೂರಿದರು. ಜಾನುವಾರುಗಳ ಆರೋಗ್ಯಕ್ಕೂ ಆದ್ಯತೆ ನೀಡಿ ಜಾನುವಾರು ಸಂತೆ ಆರಂಭಿಸಿದ ಬಳಿಕ ಪ್ರತಿ ವಾರ ಸಂತೆ ಆವರಣದಲ್ಲೇ ಪಶುವೈದ್ಯರನ್ನು ಕಡ್ಡಾಯವಾಗಿ ನಿಯೋಜಿಸಿ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಬೇಕು. ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜಾನುವಾರುಗಳನ್ನು ಕಟ್ಟಲು ಸಾಲುಸಾಲಾಗಿ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಬಿಸಿಲಿನ ತೀವ್ರತೆಯನ್ನು ಗಮನಿಸಿ ಜನರು ಹಾಗೂ ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನೆರಳಿಗಾಗಿ ಮರಗಳನ್ನು ಬೆಳೆಸುವುದರ ಜತೆಗೆ ಅಗತ್ಯವಿರುವ ಕಡೆ ಶೆಡ್ ನಿರ್ಮಿಸಬೇಕು. ಎಪಿಎಂಸಿ ಆವರಣದಲ್ಲಿ ಉದ್ಯಾನ ನಿರ್ಮಿಸಿ ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಕ್ರಮ ಕೈಗೊಳ್ಳಬೇಕು ಎಂದರು. ಶೆಡ್‌ಗಳ ಅಕ್ರಮ ಬಳಕೆಗೆ ಕಡಿವಾಣ ಎಪಿಎಂಸಿ ಆವರಣದಲ್ಲಿರುವ ಶೆಡ್‌ಗಳನ್ನು ಕೆಲವು ಖಾಸಗಿ ಅಂಗಡಿ ಮಾಲೀಕರು ಅಕ್ರಮವಾಗಿ ದಾಸ್ತಾನು ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ತಕ್ಷಣ ಕಡಿವಾಣ ಹಾಕಿ, ರೈತರ ಬಳಕೆಗೆ ಶೆಡ್‌ಗಳನ್ನು ಮುಕ್ತಗೊಳಿಸಬೇಕು ಎಂದು ಮುದ್ನಾಳ ಆಗ್ರಹಿಸಿದರು. ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಎಪಿಎಂಸಿ ಅಧಿಕಾರಿಗಳು ಕೂಡಲೇ ಸಂತೆ ಆವರಣಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಬೇಕು. ರೈತರು ಹಾಗೂ ಜಾನುವಾರುಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಒಂದು ವಾರದ ಗಡುವು ಜಿಲ್ಲಾಡಳಿತ ಹಾಗೂ ಎಪಿಎಂಸಿ ಅಧಿಕಾರಿಗಳು ಒಂದು ವಾರದೊಳಗೆ ಸಮಸ್ಯೆ ಪರಿಹರಿಸಿ ಜಾನುವಾರು ಸಂತೆ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಪ ಎಪಿಎಂಸಿ ಕಚೇರಿ ಮುಂಭಾಗದ ಯಾದಗಿರಿ–ರಾಯಚೂರು ಕರಿಬೆಟ್ಟ ಸರ್ಕಲ್ ಮುಖ್ಯರಸ್ತೆ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ಉಮೇಶ್ ಕೆ. ಮುದ್ನಾಳ ಎಚ್ಚರಿಕೆ ನೀಡಿದರು. ಜಿಲ್ಲೆಯ ಪ್ರಮುಖ ಜಾನುವಾರು ಸಂತೆಗಳಾದ ಶುಕ್ರವಾರ ಶಹಾಪುರ, ಮಂಗಳವಾರ ಯಾದಗಿರಿ, ಸೋಮವಾರ ಗುರುಮಠಕಲ್ ಹಾಗೂ ಗುರುವಾರ ಸೈದಾಪುರದಲ್ಲೂ ವ್ಯವಸ್ಥಿತವಾಗಿ ಜಾನುವಾರು ಸಂತೆ ನಡೆಸುವ ಮೂಲಕ ರೈತರು ಹಾಗೂ ಜಾನುವಾರು ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
    4
    ಗುರುಮಠಕಲ್ ಮತಕ್ಷೇತ್ರ ಸೈದಾಪುರ ಎಪಿಎಂಸಿ ಆವರಣದಲ್ಲಿ ಜಾನುವಾರು ಸಂತೆ ಆರಂಭಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಸ್ಥಳ ಪರಿಶೀಲನೆ ನಡೆಸಿದರು.
ಸೈದಾಪುರದಲ್ಲಿ ಜಾನುವಾರು ಸಂತೆ ಆರಂಭಿಸಿ
ಮೂಲಸೌಕರ್ಯ ಕಲ್ಪಿಸಲು ಜಿಲ್ಲಾಡಳಿತಕ್ಕೆ ಉಮೇಶ್ ಮುದ್ನಾಳ ವಾರದ ಗಡುವು; ನಿರ್ಲಕ್ಷ್ಯ ವಹಿಸಿದರೆ ರಸ್ತೆ ಬಂದ್ ಹೋರಾಟದ ಎಚ್ಚರಿಕೆ
ಗುರುಮಠಕಲ್ ಸೈದಾಪುರ ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಪ್ರತಿ ಗುರುವಾರ ನಡೆಯುವ ಸಂತೆಯಲ್ಲಿ ದನ-ಕರು, ಕುರಿ, ಆಡು ಹಾಗೂ ಕೋಳಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಅಖಿಲ ಭಾರತ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಜಿಲ್ಲಾಡಳಿತಕ್ಕೆ ಒಂದು ವಾರದ ಗಡುವು ನೀಡಿದ್ದಾರೆ.
ಸಂತೆ ಆವರಣಕ್ಕೆ ಬುಧವಾರ ಬೆಳಗ್ಗೆ ಭೇಟಿ ನೀಡಿ ರೈತರೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಸೈದಾಪುರದಲ್ಲಿ ಜಾನುವಾರು ಸಂತೆ ಆರಂಭಿಸುವುದರ ಜತೆಗೆ ರೈತರು ಹಾಗೂ ಜಾನುವಾರುಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಲ್ಲಿ ಎಪಿಎಂಸಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.
ಅವ್ಯವಸ್ಥೆಯ ಆಗರವಾದ ಸಂತೆ ಆವರಣ
ಸಂತೆ ಆವರಣದಲ್ಲಿ ಜಾಲಿಕಂಟಿಗಳು ಬೆಳೆದು ವಿಷಜಂತುಗಳು ಸೇರಿಕೊಳ್ಳುವಂತಾಗಿದೆ. ಚರಂಡಿಯಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಎಲ್ಲೆಡೆ ಅಸ್ವಚ್ಛತೆ ಕಂಡುಬರುತ್ತಿದ್ದು, ಕುಡುಕರ ಹಾವಳಿ ಹಾಗೂ ಅಕ್ರಮ ಚಟುವಟಿಕೆಗಳಿಗೂ ಅವಕಾಶವಾಗುತ್ತಿದೆ. ಕೆಲ ಭಾಗಗಳು ಭಿಕ್ಷುಕರು ಹಾಗೂ ಪುಂಡ-ಪೋಕರಿಗಳ ತಂಗುದಾಣದಂತಾಗಿವೆ. ಇದರಿಂದ ಸಂತೆಗಾಗಿ ಆಗಮಿಸುವ ರೈತರು ಹಾಗೂ ಸಾರ್ವಜನಿಕರು ಆತಂಕ ಎದುರಿಸುವಂತಾಗಿದೆ ಎಂದು ಮುದ್ನಾಳ ಹೇಳಿದರು.
ಪ್ರತಿ ಗುರುವಾರ ಸಾವಿರಾರು ರೈತರು ಹಾಗೂ ವ್ಯಾಪಾರಿಗಳು ಆಗಮಿಸುವ ಸ್ಥಳದಲ್ಲಿ ಕನಿಷ್ಠ ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ, ನೆರಳು ಸೇರಿದಂತೆ ಅಗತ್ಯ ಸೌಲಭ್ಯಗಳಿಲ್ಲದಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ದೂರಿದರು.
ಜಾನುವಾರುಗಳ ಆರೋಗ್ಯಕ್ಕೂ ಆದ್ಯತೆ ನೀಡಿ
ಜಾನುವಾರು ಸಂತೆ ಆರಂಭಿಸಿದ ಬಳಿಕ ಪ್ರತಿ ವಾರ ಸಂತೆ ಆವರಣದಲ್ಲೇ ಪಶುವೈದ್ಯರನ್ನು ಕಡ್ಡಾಯವಾಗಿ ನಿಯೋಜಿಸಿ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಬೇಕು. ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜಾನುವಾರುಗಳನ್ನು ಕಟ್ಟಲು ಸಾಲುಸಾಲಾಗಿ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಬಿಸಿಲಿನ ತೀವ್ರತೆಯನ್ನು ಗಮನಿಸಿ ಜನರು ಹಾಗೂ ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನೆರಳಿಗಾಗಿ ಮರಗಳನ್ನು ಬೆಳೆಸುವುದರ ಜತೆಗೆ ಅಗತ್ಯವಿರುವ ಕಡೆ ಶೆಡ್ ನಿರ್ಮಿಸಬೇಕು. ಎಪಿಎಂಸಿ ಆವರಣದಲ್ಲಿ ಉದ್ಯಾನ ನಿರ್ಮಿಸಿ ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಕ್ರಮ ಕೈಗೊಳ್ಳಬೇಕು ಎಂದರು.
ಶೆಡ್‌ಗಳ ಅಕ್ರಮ ಬಳಕೆಗೆ ಕಡಿವಾಣ
ಎಪಿಎಂಸಿ ಆವರಣದಲ್ಲಿರುವ ಶೆಡ್‌ಗಳನ್ನು ಕೆಲವು ಖಾಸಗಿ ಅಂಗಡಿ ಮಾಲೀಕರು ಅಕ್ರಮವಾಗಿ ದಾಸ್ತಾನು ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ತಕ್ಷಣ ಕಡಿವಾಣ ಹಾಕಿ, ರೈತರ ಬಳಕೆಗೆ ಶೆಡ್‌ಗಳನ್ನು ಮುಕ್ತಗೊಳಿಸಬೇಕು ಎಂದು ಮುದ್ನಾಳ ಆಗ್ರಹಿಸಿದರು.
ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಎಪಿಎಂಸಿ ಅಧಿಕಾರಿಗಳು ಕೂಡಲೇ ಸಂತೆ ಆವರಣಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಬೇಕು. ರೈತರು ಹಾಗೂ ಜಾನುವಾರುಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಒಂದು ವಾರದ ಗಡುವು
ಜಿಲ್ಲಾಡಳಿತ ಹಾಗೂ ಎಪಿಎಂಸಿ ಅಧಿಕಾರಿಗಳು ಒಂದು ವಾರದೊಳಗೆ ಸಮಸ್ಯೆ ಪರಿಹರಿಸಿ ಜಾನುವಾರು ಸಂತೆ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಪ ಎಪಿಎಂಸಿ ಕಚೇರಿ ಮುಂಭಾಗದ ಯಾದಗಿರಿ–ರಾಯಚೂರು ಕರಿಬೆಟ್ಟ ಸರ್ಕಲ್ ಮುಖ್ಯರಸ್ತೆ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ಉಮೇಶ್ ಕೆ. ಮುದ್ನಾಳ ಎಚ್ಚರಿಕೆ ನೀಡಿದರು.
ಜಿಲ್ಲೆಯ ಪ್ರಮುಖ ಜಾನುವಾರು ಸಂತೆಗಳಾದ ಶುಕ್ರವಾರ ಶಹಾಪುರ, ಮಂಗಳವಾರ ಯಾದಗಿರಿ, ಸೋಮವಾರ ಗುರುಮಠಕಲ್ ಹಾಗೂ ಗುರುವಾರ ಸೈದಾಪುರದಲ್ಲೂ ವ್ಯವಸ್ಥಿತವಾಗಿ ಜಾನುವಾರು ಸಂತೆ ನಡೆಸುವ ಮೂಲಕ ರೈತರು ಹಾಗೂ ಜಾನುವಾರು ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
    user_N S Patange
    N S Patange
    Local News Reporter ಗುರುಮಿಟ್ಕಲ್, ಯಾದಗಿರಿ, ಕರ್ನಾಟಕ•
    23 hrs ago
  • ಯಾದಗಿರಿ-ರಾಯಚೂರು ಹೆದ್ದಾರಿಯ ಅವೈಜ್ಞಾನಿಕ ಟೋಲ್‌ ತೆರವಿಗೆ ಉಮೇಶ್ ಕೆ. ಮುನ್ನಾಳ್ ಖಡಕ್ ಆಗ್ರಹ ಯಾದಗಿರಿ-ರಾಯಚೂರು ಹೆದ್ದಾರಿಯ ಆರ್. ಹೊಸಳ್ಳಿ-ನಾಗಲಾಪುರ ಮಧ್ಯದಲ್ಲಿರುವ ಟೋಲ್‌ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು, ಸಮರ್ಪಕ ವಿದ್ಯುತ್ ದೀಪಗಳು ಹಾಗೂ ಸುರಕ್ಷತಾ ಸೂಚನೆಗಳ ಕೊರತೆಯಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುನ್ನಾಳ್‌ ಆರೋಪಿಸಿದರು. ಸ್ಥಳಕ್ಕೆ ಭೇಟಿ ನೀಡಿ ರೈತರು ಹಾಗೂ ವಾಹನ ಸವಾರರೊಂದಿಗೆ ಚರ್ಚಿಸಿದ ಅವರು, ಟೋಲ್ ಅನ್ನು ತಕ್ಷಣ ತೆರವುಗೊಳಿಸಿ ಮುಂದಿನ ಅವಘಡಗಳನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈಗಾಗಲೇ ಹಲವು ಜೀವಗಳು ಬಲಿಯಾಗಿವೆ ಎಂದು ಹೇಳಿದ ಅವರು, ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ ಇದೇ ಸ್ಥಳದಲ್ಲಿ ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
    1
    ಯಾದಗಿರಿ-ರಾಯಚೂರು ಹೆದ್ದಾರಿಯ ಅವೈಜ್ಞಾನಿಕ ಟೋಲ್‌ ತೆರವಿಗೆ ಉಮೇಶ್ ಕೆ. ಮುನ್ನಾಳ್ ಖಡಕ್ ಆಗ್ರಹ
ಯಾದಗಿರಿ-ರಾಯಚೂರು ಹೆದ್ದಾರಿಯ ಆರ್.
ಹೊಸಳ್ಳಿ-ನಾಗಲಾಪುರ ಮಧ್ಯದಲ್ಲಿರುವ ಟೋಲ್‌ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು, ಸಮರ್ಪಕ ವಿದ್ಯುತ್ ದೀಪಗಳು ಹಾಗೂ ಸುರಕ್ಷತಾ ಸೂಚನೆಗಳ ಕೊರತೆಯಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುನ್ನಾಳ್‌ ಆರೋಪಿಸಿದರು. ಸ್ಥಳಕ್ಕೆ ಭೇಟಿ ನೀಡಿ ರೈತರು ಹಾಗೂ ವಾಹನ ಸವಾರರೊಂದಿಗೆ ಚರ್ಚಿಸಿದ ಅವರು, ಟೋಲ್ ಅನ್ನು ತಕ್ಷಣ ತೆರವುಗೊಳಿಸಿ ಮುಂದಿನ ಅವಘಡಗಳನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈಗಾಗಲೇ ಹಲವು ಜೀವಗಳು ಬಲಿಯಾಗಿವೆ ಎಂದು ಹೇಳಿದ ಅವರು, ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ ಇದೇ ಸ್ಥಳದಲ್ಲಿ ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    21 hrs ago
  • ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ- ಸಿಎಂ ಡಿಕೆಶಿ ಯಿಂದ ಧ್ವಜಾರೋಹಣ ಕಲಬುರಗಿ-ಕಲ್ಯಾಣ ಕರ್ನಾಟಕ 79 ನೇ ಉತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಿಂದ ಧ್ವಜಾರೋಹಣ ನೆರವೇರಿಸಲಾಯಿತು. ಕಲಬುರಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರೀಯ ಧ್ವಜಾರೋಹಣ‌ ಮಾಡಲಾಯಿತು. ಸಚಿವ ಪ್ರೀಯಾಂಕ್ ಖರ್ಗೆ ಸೇರಿ ಶಾಸಕರು,ಪರಿಷತ್ ಸದಸ್ಯರು, ಅಧಿಕಾರಿಗಳು ಸಾಥ್ ನೀಡಲಾಗಿತು. ಧ್ವಜಾರೋಹಣ ಬಳಿಕ ತೆರೆದ ವಾಹನದಲ್ಲಿ ಪೊಲೀಸ್ ಪೆರೇಡ್ ವೀಕ್ಷಿಸಿದರು
    1
    ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ- ಸಿಎಂ ಡಿಕೆಶಿ ಯಿಂದ ಧ್ವಜಾರೋಹಣ
ಕಲಬುರಗಿ-ಕಲ್ಯಾಣ ಕರ್ನಾಟಕ 79 ನೇ ಉತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಿಂದ ಧ್ವಜಾರೋಹಣ ನೆರವೇರಿಸಲಾಯಿತು. ಕಲಬುರಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರೀಯ ಧ್ವಜಾರೋಹಣ‌ ಮಾಡಲಾಯಿತು. ಸಚಿವ ಪ್ರೀಯಾಂಕ್ ಖರ್ಗೆ ಸೇರಿ ಶಾಸಕರು,ಪರಿಷತ್ ಸದಸ್ಯರು, ಅಧಿಕಾರಿಗಳು ಸಾಥ್ ನೀಡಲಾಗಿತು. ಧ್ವಜಾರೋಹಣ ಬಳಿಕ ತೆರೆದ ವಾಹನದಲ್ಲಿ ಪೊಲೀಸ್ ಪೆರೇಡ್ ವೀಕ್ಷಿಸಿದರು
    user_MAHESH
    MAHESH
    ಚಿತ್ತಾಪುರ, ಕಲಬುರಗಿ, ಕರ್ನಾಟಕ•
    7 hrs ago
  • ಚನ್ನಮ್ಮ ಗುಣಾರಿ ಸಾಧನೆಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ: ಅಫಜಲಪುರ ತಾಲೂಕಿನ ಹೆಮ್ಮೆ – ಅಕ್ಷಯ ಸಲಗರ ಅಫಜಲಪುರ: ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಉತ್ತಮ ಸೇವೆ, ಕರ್ತವ್ಯನಿಷ್ಠೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಶ್ರೀಮತಿ ಚನ್ನಮ್ಮ ಗುಣಾರಿ ಅವರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿರುವುದು ಅಫಜಲಪುರ ತಾಲೂಕಿನ ಹೆಮ್ಮೆಯ ಸಂಗತಿಯಾಗಿದೆ ಎಂದು ಯುವ ಮುಖಂಡ ಅಕ್ಷಯ ಸಲಗರ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು. ಈ ಕುರಿತು ಮಾತನಾಡಿದ ಅಕ್ಷಯ ಸಲಗರ , “ಶಿಕ್ಷಕ ವೃತ್ತಿ ಅತ್ಯಂತ ಜವಾಬ್ದಾರಿಯುತ ಹಾಗೂ ಗೌರವಯುತ ವೃತ್ತಿಯಾಗಿದೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಚನ್ನಮ್ಮ ಗುಣಾರಿ ಅವರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಾ, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸಿದ್ದಾರೆ. ಅವರ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ” ಎಂದರು. “ಚನ್ನಮ್ಮ ಗುಣಾರಿ ಅವರ ಈ ಸಾಧನೆ ಅಫಜಲಪುರ ತಾಲೂಕಿನ ಇತರ ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿದೆ. ಪ್ರಶಸ್ತಿ ಅವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ, ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಲು ಪ್ರೋತ್ಸಾಹ ನೀಡಲಿ. ಮುಂದಿನ ದಿನಗಳಲ್ಲಿಯೂ ಅವರು ಇದೇ ರೀತಿಯ ನಿಷ್ಠೆ ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸಿ ಇನ್ನಷ್ಟು ಪ್ರಶಸ್ತಿಗಳನ್ನು ಪಡೆಯಲಿ ಎಂದು ಹಾರೈಸುತ್ತೇನೆ” ಎಂದು ಅಕ್ಷಯ ಸಲಗರ ಶುಭ ಹಾರೈಸಿದರು. ಚನ್ನಮ್ಮ ಗುಣಾರಿ ಅವರಿಗೆ ದೊರೆತಿರುವ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಅಫಜಲಪುರ ತಾಲೂಕಿನ, ಶಿಕ್ಷಕರು ಹಾಗೂ ವಿವಿಧ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ವಿಶ್ವನಾಥ ಮಠಪತಿ ಸಂಗುಗೌಡ ಬಿರಾದಾರ ಹಾಗೂ ಅಭಿಷೇಕ ಪಾಟೀಲ ಸಂಜು ಕಡ್ಲಾಜಿ ಸೇರಿದಂತೆ ಹಲವರು ಚನ್ನಮ್ಮ ಗುಣಾರಿ ಅವರಿಗೆ ಅಭಿನಂದಿಸಿ ಶುಭ ಹಾರೈಸಿದರು.
    1
    ಚನ್ನಮ್ಮ ಗುಣಾರಿ ಸಾಧನೆಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ: ಅಫಜಲಪುರ ತಾಲೂಕಿನ ಹೆಮ್ಮೆ – ಅಕ್ಷಯ ಸಲಗರ 
ಅಫಜಲಪುರ: ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಉತ್ತಮ ಸೇವೆ, ಕರ್ತವ್ಯನಿಷ್ಠೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಶ್ರೀಮತಿ ಚನ್ನಮ್ಮ ಗುಣಾರಿ ಅವರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿರುವುದು ಅಫಜಲಪುರ ತಾಲೂಕಿನ ಹೆಮ್ಮೆಯ ಸಂಗತಿಯಾಗಿದೆ ಎಂದು  ಯುವ ಮುಖಂಡ ಅಕ್ಷಯ ಸಲಗರ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಅಕ್ಷಯ ಸಲಗರ , “ಶಿಕ್ಷಕ ವೃತ್ತಿ ಅತ್ಯಂತ ಜವಾಬ್ದಾರಿಯುತ ಹಾಗೂ ಗೌರವಯುತ ವೃತ್ತಿಯಾಗಿದೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಚನ್ನಮ್ಮ ಗುಣಾರಿ ಅವರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಾ, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸಿದ್ದಾರೆ. ಅವರ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ” ಎಂದರು.
“ಚನ್ನಮ್ಮ ಗುಣಾರಿ ಅವರ ಈ ಸಾಧನೆ ಅಫಜಲಪುರ ತಾಲೂಕಿನ ಇತರ ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿದೆ. ಪ್ರಶಸ್ತಿ ಅವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ, ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಲು ಪ್ರೋತ್ಸಾಹ ನೀಡಲಿ. ಮುಂದಿನ ದಿನಗಳಲ್ಲಿಯೂ ಅವರು ಇದೇ ರೀತಿಯ ನಿಷ್ಠೆ ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸಿ ಇನ್ನಷ್ಟು ಪ್ರಶಸ್ತಿಗಳನ್ನು ಪಡೆಯಲಿ ಎಂದು ಹಾರೈಸುತ್ತೇನೆ” ಎಂದು ಅಕ್ಷಯ ಸಲಗರ  ಶುಭ ಹಾರೈಸಿದರು.
ಚನ್ನಮ್ಮ ಗುಣಾರಿ ಅವರಿಗೆ ದೊರೆತಿರುವ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಅಫಜಲಪುರ ತಾಲೂಕಿನ, ಶಿಕ್ಷಕರು ಹಾಗೂ ವಿವಿಧ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ವಿಶ್ವನಾಥ ಮಠಪತಿ ಸಂಗುಗೌಡ ಬಿರಾದಾರ ಹಾಗೂ ಅಭಿಷೇಕ ಪಾಟೀಲ ಸಂಜು ಕಡ್ಲಾಜಿ ಸೇರಿದಂತೆ ಹಲವರು ಚನ್ನಮ್ಮ ಗುಣಾರಿ ಅವರಿಗೆ ಅಭಿನಂದಿಸಿ ಶುಭ ಹಾರೈಸಿದರು.
    user_TV21NEWS Kannada
    TV21NEWS Kannada
    Local News Reporter ಚಿತ್ತಾಪುರ, ಕಲಬುರಗಿ, ಕರ್ನಾಟಕ•
    22 hrs ago
  • ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯಾವಾಗ? ಸಾಮಾಜಿಕ ಹೋರಾಟಗಾರ ವಿರುಪಾಕ್ಷಿ ಮಾಲಿಪಾಟೀಲ್ ಯಾದಗಿರಿ: ಸೆಪ್ಟೆಂಬರ್ 17 "ಕಲ್ಯಾಣ ಕರ್ನಾಟಕ ವಿಮೋಚನ ದಿನ" ಇದು ಕೇವಲ ಒಂದು ದಿನಾಂಕವಲ್ಲ. ನಮ್ಮ ನೆಲದ ನೋವು, ನಮ್ಮ ಜನರ ಹೋರಾಟ, ನಮ್ಮ ಹಿರಿಯರ ತ್ಯಾಗ ಮತ್ತು ನಮ್ಮ ಸ್ವಾಭಿಮಾನದ ವಿಜಯಗಾಥೆಯನ್ನು ನೆನಪಿಸುವ ಪವಿತ್ರ ದಿನವಾಗಿದೆ. ತಲೆಮಾರುಗಳ ಸಂಕಷ್ಟವನ್ನು ಹೊತ್ತುಕೊಂಡು, ಅನ್ಯಾಯದ ವಿರುದ್ಧ ಧ್ವನಿ ಎತ್ತಿ, ತಮ್ಮ ಬದುಕನ್ನೇ ಹೋರಾಟಕ್ಕೆ ಸಮರ್ಪಿಸಿದ ಅಸಂಖ್ಯಾತ ಹೋರಾಟಗಾರರ ತ್ಯಾಗದ ಫಲವೇ ನಮ್ಮ ಈ ವಿಮೋಚನೆ. ಅವರ ತ್ಯಾಗವನ್ನು ನೆನಪಿಸಿಕೊಂಡಾಗ ಕಣ್ಣುಗಳು ತೇವವಾಗುತ್ತವೆ. ಆದರೆ, ಅದೇ ಕ್ಷಣದಲ್ಲಿ ಹೃದಯದಲ್ಲಿ ಒಂದು ಪ್ರಶ್ನೆಯೂ? ಮೂಡುತ್ತದೆ. ಅವರು ಕಂಡ ಕನಸಿನ ಕಲ್ಯಾಣ ಕರ್ನಾಟಕವನ್ನು ನಾವು ನಿರ್ಮಿಸಿದ್ದೇವೆಯೇ? ಇದು ಕೇವಲ ಪ್ರಶ್ನೆಯಲ್ಲ; ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ನಮ್ಮ ಮಣ್ಣಿನ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ನಮ್ಮ ಯುವಕರ ಕೈಗಳಿಗೆ ಉದ್ಯೋಗ ಸಿಗಬೇಕು. ನಮ್ಮ ರೈತರ ಹೊಲಗಳಿಗೆ ನೀರು ಹರಿಯಬೇಕು. ನಮ್ಮ ತಾಯಂದಿರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಬೇಕು. ನಮ್ಮ ಗ್ರಾಮಗಳು ಅಭಿವೃದ್ಧಿಯ ಬೆಳಕಿನಲ್ಲಿ ನಗಬೇಕು. ನಮ್ಮ ಪ್ರತಿಭೆಗಳಿಗೆ ನಮ್ಮ ನೆಲದಲ್ಲಿಯೇ ಅವಕಾಶಗಳು ಸಿಗಬೇಕು. ವಿಮೋಚನೆ ನಮಗೆ ಇತಿಹಾಸವನ್ನು ಕೊಟ್ಟಿದೆ; ಅಭಿವೃದ್ಧಿ ನಮ್ಮ ಮುಂದಿನ ತಲೆಮಾರಿಗೆ ಭವಿಷ್ಯವನ್ನು ಕೊಡಬೇಕು. ನಮ್ಮ ಹಿರಿಯರು ನಮಗೆ ಸ್ವಾಭಿಮಾನದ ನೆಲವನ್ನು ಕೊಟ್ಟರು. ನಾವು ನಮ್ಮ ಮಕ್ಕಳಿಗೆ ಸಮೃದ್ಧಿಯ ನೆಲವನ್ನು ಕೊಡುವ ಸಂಕಲ್ಪ ಮಾಡೋಣ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಯಾವುದೋ ಒಂದು ಸರ್ಕಾರದ, ಒಂದು ವ್ಯಕ್ತಿಯ ಅಥವಾ ಒಂದು ಕಾಲಘಟ್ಟದ ಜವಾಬ್ದಾರಿಯಲ್ಲ. ಇದು ನಮ್ಮೆಲ್ಲರ ಕನಸು, ನಮ್ಮೆಲ್ಲರ ಕರ್ತವ್ಯ. ಈ ಮಣ್ಣಿನ ಪ್ರತಿಯೊಂದು ಕಣ್ಣೀರಿಗೂ ಬೆಲೆ ಸಿಗಲಿ, ಪ್ರತಿಯೊಂದು ಬೆವರಿನ ಹನಿಗೂ ಫಲ ಸಿಗಲಿ, ಪ್ರತಿಯೊಂದು ಯುವ ಕನಸಿಗೂ ರೆಕ್ಕೆಗಳು ಮೂಡಲಿ ಎಂದು ಆಶಿಸುತ್ತೇನೆ. ಪ್ರತಿಯೊಂದು ಮನೆಯಲ್ಲೂ ಅಭಿವೃದ್ಧಿಯ ನಗು ಅರಳಲಿ, ವಿಮೋಚನೆಗಾಗಿ ಹೋರಾಡಿದ ಮಹನೀಯರಿಗೆ ಶತ ಶತ ನಮನಗಳು. ಅವರ ತ್ಯಾಗದ ಜ್ಯೋತಿ ಎಂದಿಗೂ ಆರದಿರಲಿ, ಅವರ ಕನಸುಗಳ ಕಲ್ಯಾಣ ಕರ್ನಾಟಕ ನಿರ್ಮಾಣವಾಗಲಿ, ಅಭಿವೃದ್ಧಿಯ ಪರ್ವ ನಿಲ್ಲದೆ, ಇನ್ನಷ್ಟು ವೇಗವಾಗಿ, ಇನ್ನಷ್ಟು ದೂರವಾಗಿ ಮುಂದುವರಿಯಲಿ, ಇದೇ ನನ್ನ ಹೃದಯದಾಳದ ಆಶಯ. ವಿಮೋಚನೆಯ ಹೆಮ್ಮೆ ನಮ್ಮದಾಗಲಿ, ಅಭಿವೃದ್ಧಿಯ ಭವಿಷ್ಯವೂ ನಮ್ಮದಾಗಲಿ, ಸಮೃದ್ಧ ಕಲ್ಯಾಣ ಕರ್ನಾಟಕ ನಮ್ಮೆಲ್ಲರ ಸಂಕಲ್ಪವಾಗಲಿ. ಜೈ ಕಲ್ಯಾಣ ಕರ್ನಾಟಕ 🙏 ಜೈ ಕರ್ನಾಟಕ ಇಂತಿ ನಿಮ್ಮ ವಿಶ್ವಾಸಿ ಸಾಮಾಜಿಕ ಹೋರಾಟಗಾರ ವಿರುಪಾಕ್ಷಿ ಮಾಲಿಪಾಟೀಲ್ ಗುರುಮಠಕಲ್
    1
    ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯಾವಾಗ?
ಸಾಮಾಜಿಕ ಹೋರಾಟಗಾರ ವಿರುಪಾಕ್ಷಿ ಮಾಲಿಪಾಟೀಲ್
ಯಾದಗಿರಿ: ಸೆಪ್ಟೆಂಬರ್ 17  "ಕಲ್ಯಾಣ ಕರ್ನಾಟಕ ವಿಮೋಚನ ದಿನ"
ಇದು ಕೇವಲ ಒಂದು ದಿನಾಂಕವಲ್ಲ.
ನಮ್ಮ ನೆಲದ ನೋವು, ನಮ್ಮ ಜನರ ಹೋರಾಟ, ನಮ್ಮ ಹಿರಿಯರ ತ್ಯಾಗ ಮತ್ತು  ನಮ್ಮ ಸ್ವಾಭಿಮಾನದ ವಿಜಯಗಾಥೆಯನ್ನು ನೆನಪಿಸುವ ಪವಿತ್ರ ದಿನವಾಗಿದೆ.
ತಲೆಮಾರುಗಳ ಸಂಕಷ್ಟವನ್ನು ಹೊತ್ತುಕೊಂಡು, ಅನ್ಯಾಯದ ವಿರುದ್ಧ ಧ್ವನಿ ಎತ್ತಿ, ತಮ್ಮ ಬದುಕನ್ನೇ ಹೋರಾಟಕ್ಕೆ ಸಮರ್ಪಿಸಿದ ಅಸಂಖ್ಯಾತ ಹೋರಾಟಗಾರರ ತ್ಯಾಗದ ಫಲವೇ ನಮ್ಮ ಈ ವಿಮೋಚನೆ.
ಅವರ ತ್ಯಾಗವನ್ನು ನೆನಪಿಸಿಕೊಂಡಾಗ ಕಣ್ಣುಗಳು ತೇವವಾಗುತ್ತವೆ. ಆದರೆ, ಅದೇ ಕ್ಷಣದಲ್ಲಿ ಹೃದಯದಲ್ಲಿ ಒಂದು ಪ್ರಶ್ನೆಯೂ? ಮೂಡುತ್ತದೆ.
ಅವರು ಕಂಡ ಕನಸಿನ ಕಲ್ಯಾಣ ಕರ್ನಾಟಕವನ್ನು ನಾವು ನಿರ್ಮಿಸಿದ್ದೇವೆಯೇ?
ಇದು ಕೇವಲ ಪ್ರಶ್ನೆಯಲ್ಲ; ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ.
ನಮ್ಮ ಮಣ್ಣಿನ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು.
ನಮ್ಮ ಯುವಕರ ಕೈಗಳಿಗೆ ಉದ್ಯೋಗ ಸಿಗಬೇಕು. ನಮ್ಮ ರೈತರ ಹೊಲಗಳಿಗೆ ನೀರು ಹರಿಯಬೇಕು. ನಮ್ಮ ತಾಯಂದಿರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಬೇಕು.
ನಮ್ಮ ಗ್ರಾಮಗಳು ಅಭಿವೃದ್ಧಿಯ ಬೆಳಕಿನಲ್ಲಿ ನಗಬೇಕು. ನಮ್ಮ ಪ್ರತಿಭೆಗಳಿಗೆ ನಮ್ಮ ನೆಲದಲ್ಲಿಯೇ ಅವಕಾಶಗಳು ಸಿಗಬೇಕು.
ವಿಮೋಚನೆ ನಮಗೆ ಇತಿಹಾಸವನ್ನು ಕೊಟ್ಟಿದೆ; ಅಭಿವೃದ್ಧಿ ನಮ್ಮ ಮುಂದಿನ ತಲೆಮಾರಿಗೆ ಭವಿಷ್ಯವನ್ನು ಕೊಡಬೇಕು.
ನಮ್ಮ ಹಿರಿಯರು ನಮಗೆ ಸ್ವಾಭಿಮಾನದ ನೆಲವನ್ನು ಕೊಟ್ಟರು.
ನಾವು ನಮ್ಮ ಮಕ್ಕಳಿಗೆ ಸಮೃದ್ಧಿಯ ನೆಲವನ್ನು ಕೊಡುವ ಸಂಕಲ್ಪ ಮಾಡೋಣ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಯಾವುದೋ ಒಂದು ಸರ್ಕಾರದ, ಒಂದು ವ್ಯಕ್ತಿಯ ಅಥವಾ ಒಂದು ಕಾಲಘಟ್ಟದ ಜವಾಬ್ದಾರಿಯಲ್ಲ.
ಇದು ನಮ್ಮೆಲ್ಲರ ಕನಸು, ನಮ್ಮೆಲ್ಲರ ಕರ್ತವ್ಯ.
ಈ ಮಣ್ಣಿನ ಪ್ರತಿಯೊಂದು ಕಣ್ಣೀರಿಗೂ ಬೆಲೆ ಸಿಗಲಿ, ಪ್ರತಿಯೊಂದು ಬೆವರಿನ ಹನಿಗೂ ಫಲ ಸಿಗಲಿ, ಪ್ರತಿಯೊಂದು ಯುವ ಕನಸಿಗೂ ರೆಕ್ಕೆಗಳು ಮೂಡಲಿ ಎಂದು ಆಶಿಸುತ್ತೇನೆ.
ಪ್ರತಿಯೊಂದು ಮನೆಯಲ್ಲೂ ಅಭಿವೃದ್ಧಿಯ ನಗು ಅರಳಲಿ, ವಿಮೋಚನೆಗಾಗಿ ಹೋರಾಡಿದ ಮಹನೀಯರಿಗೆ ಶತ ಶತ ನಮನಗಳು.
ಅವರ ತ್ಯಾಗದ ಜ್ಯೋತಿ ಎಂದಿಗೂ ಆರದಿರಲಿ, ಅವರ ಕನಸುಗಳ ಕಲ್ಯಾಣ ಕರ್ನಾಟಕ ನಿರ್ಮಾಣವಾಗಲಿ, ಅಭಿವೃದ್ಧಿಯ ಪರ್ವ ನಿಲ್ಲದೆ, ಇನ್ನಷ್ಟು ವೇಗವಾಗಿ, ಇನ್ನಷ್ಟು ದೂರವಾಗಿ ಮುಂದುವರಿಯಲಿ, ಇದೇ ನನ್ನ ಹೃದಯದಾಳದ ಆಶಯ.
ವಿಮೋಚನೆಯ ಹೆಮ್ಮೆ ನಮ್ಮದಾಗಲಿ,
ಅಭಿವೃದ್ಧಿಯ ಭವಿಷ್ಯವೂ ನಮ್ಮದಾಗಲಿ,
ಸಮೃದ್ಧ ಕಲ್ಯಾಣ ಕರ್ನಾಟಕ ನಮ್ಮೆಲ್ಲರ ಸಂಕಲ್ಪವಾಗಲಿ.
ಜೈ ಕಲ್ಯಾಣ ಕರ್ನಾಟಕ 🙏
ಜೈ ಕರ್ನಾಟಕ
ಇಂತಿ ನಿಮ್ಮ ವಿಶ್ವಾಸಿ 
ಸಾಮಾಜಿಕ ಹೋರಾಟಗಾರ ವಿರುಪಾಕ್ಷಿ ಮಾಲಿಪಾಟೀಲ್ ಗುರುಮಠಕಲ್
    user_Raghu
    Raghu
    ಯಾದಗಿರಿ, ಯಾದಗಿರಿ, ಕರ್ನಾಟಕ•
    3 hrs ago
  • ಯಾದಗಿರಿ ನಾಳೆ ಸೆಪ್ಟೆಂಬರ್ 17 ರಂದು ಸೃಷ್ಟಿಕರ್ತ ಭಗವಾನ್ ವಿಶ್ವಕರ್ಮ ಜಯಂತಿಯ ಶುಭಾಶಯಗಳು ಸನ್ಮಾನ್ಯ ಶ್ರೀ ಕೆ ಪಿ ನಂಜುಂಡಿ ವಿಶ್ವಕರ್ಮ ಇವರ ಶ್ರಮ ದಿಂದ ವಿಶ್ವಕರ್ಮ ಜಯಂತಿಯ ಆಚರಿಸುವಂತೆ ಅದು ಸೆಪ್ಟೆಂಬರ್ 17 ರಂದು ವಿಶ್ವಕರ್ಮರ ಹಬ್ಬ ಅಂತೆ ಮನೆ ಮನೆಯಲ್ಲಿ ವಿಶ್ವಕರ್ಮರು ಭಾವಚಿತ್ರಕ್ಕೆ ಪೂಜ್ಯ ಮಾಡಲು ಸೃಷ್ಟಿಕರ್ತನಾದ ಪ್ರೀತಿ ನಂಜುಂಡಿ ಇವರ ಶ್ರಮ
    1
    ಯಾದಗಿರಿ ನಾಳೆ ಸೆಪ್ಟೆಂಬರ್ 17 ರಂದು ಸೃಷ್ಟಿಕರ್ತ ಭಗವಾನ್ ವಿಶ್ವಕರ್ಮ ಜಯಂತಿಯ ಶುಭಾಶಯಗಳು ಸನ್ಮಾನ್ಯ ಶ್ರೀ ಕೆ ಪಿ ನಂಜುಂಡಿ ವಿಶ್ವಕರ್ಮ ಇವರ ಶ್ರಮ ದಿಂದ ವಿಶ್ವಕರ್ಮ ಜಯಂತಿಯ ಆಚರಿಸುವಂತೆ ಅದು ಸೆಪ್ಟೆಂಬರ್ 17 ರಂದು ವಿಶ್ವಕರ್ಮರ ಹಬ್ಬ ಅಂತೆ ಮನೆ ಮನೆಯಲ್ಲಿ ವಿಶ್ವಕರ್ಮರು ಭಾವಚಿತ್ರಕ್ಕೆ ಪೂಜ್ಯ ಮಾಡಲು ಸೃಷ್ಟಿಕರ್ತನಾದ ಪ್ರೀತಿ ನಂಜುಂಡಿ ಇವರ ಶ್ರಮ
    user_Ramesh Vishwakarma
    Ramesh Vishwakarma
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    18 hrs ago
  • ಶಾರ್ಟ್ ಸರ್ಕ್ಯೂಟ್‌ಗೆ 7.5 ಎಕರೆ ಕಬ್ಬು ಬೆಂಕಿಗಾಹುತಿ; ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ಬೆಣ್ಣೂರ (ಬಿ) ಗ್ರಾಮದಲ್ಲಿ ಟ್ರಾನ್ಸ್‌ಫಾರ್ಮರ್‌ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನ ಪರಿಣಾಮ ಸುಮಾರು 7.5 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿಯಾಗಿದೆ. ಘಟನೆಯಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಗ್ರಾಮದ ಜಗದೇವಿ ಈಶ್ವರಪ್ಪ ಬೆನಕನಹಳ್ಳಿ ಹಾಗೂ ಸಿದ್ಧಲಿಂಗ ಬೆನಕನಹಳ್ಳಿ ಅವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಕವಾಗಿ ಹರಡಿ ಬೆಳೆ ಸಂಪೂರ್ಣ ಸುಟ್ಟುಹೋಗಿದೆ. ಟ್ರಾನ್ಸ್‌ಫಾರ್ಮರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮವೇ ಅವಘಡ ಸಂಭವಿಸಿದೆ ಎಂದು ರೈತರು ಆರೋಪಿಸಿದ್ದು, ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ದೂರಿದ್ದಾರೆ. ಘಟನೆಯ ಮಾಹಿತಿ ತಿಳಿದು ಕಾಳಗಿ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಗೊಳಗಾದ ಜಮೀನು ಹಾಗೂ ನಾಶವಾದ ಬೆಳೆಯ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸಿದರು. ಈ ಕುರಿತು ಆಲ್ ಇಂಡಿಯಾ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ ಮಾತನಾಡಿ, ಬೆಂಕಿ ಅವಘಡದಿಂದ ನಷ್ಟ ಅನುಭವಿಸಿದ ರೈತರಿಗೆ ತಲಾ ₹10 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಜೆಸ್ಕಾಂ ಇಲಾಖೆ ಸಮಗ್ರ ತನಿಖೆ ನಡೆಸಿ ವಿಶೇಷ ಪರಿಹಾರ ಘೋಷಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ವಿದ್ಯುತ್ ಮಾರ್ಗಗಳ ಸುರಕ್ಷತಾ ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. #Kalaburagi #ಕಲಬುರಗಿ #ಕಾಳಗಿ #Bennur #ಕಬ್ಬುಬೆಳೆ #ರೈತರು #ಶಾರ್ಟ್ಸರ್ಕ್ಯೂಟ್ #ಜೆಸ್ಕಾಂ #ಬೆಂಕಿಅವಘಡ #ರೈತನಷ್ಟ #ಪರಿಹಾರ #YadgirNews ಶಾರ್ಟ್ ಸರ್ಕ್ಯೂಟ್‌ಗೆ 7.5 ಎಕರೆ ಕಬ್ಬು ಬೆಂಕಿಗಾಹುತಿ; ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ಬೆಣ್ಣೂರ (ಬಿ) ಗ್ರಾಮದಲ್ಲಿ ಟ್ರಾನ್ಸ್‌ಫಾರ್ಮರ್‌ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನ ಪರಿಣಾಮ ಸುಮಾರು 7.5 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿಯಾಗಿದೆ. ಘಟನೆಯಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಗ್ರಾಮದ ಜಗದೇವಿ ಈಶ್ವರಪ್ಪ ಬೆನಕನಹಳ್ಳಿ ಹಾಗೂ ಸಿದ್ಧಲಿಂಗ ಬೆನಕನಹಳ್ಳಿ ಅವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಕವಾಗಿ ಹರಡಿ ಬೆಳೆ ಸಂಪೂರ್ಣ ಸುಟ್ಟುಹೋಗಿದೆ. ಟ್ರಾನ್ಸ್‌ಫಾರ್ಮರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮವೇ ಅವಘಡ ಸಂಭವಿಸಿದೆ ಎಂದು ರೈತರು ಆರೋಪಿಸಿದ್ದು, ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ದೂರಿದ್ದಾರೆ. ಘಟನೆಯ ಮಾಹಿತಿ ತಿಳಿದು ಕಾಳಗಿ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಗೊಳಗಾದ ಜಮೀನು ಹಾಗೂ ನಾಶವಾದ ಬೆಳೆಯ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸಿದರು. ಈ ಕುರಿತು ಆಲ್ ಇಂಡಿಯಾ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ ಮಾತನಾಡಿ, ಬೆಂಕಿ ಅವಘಡದಿಂದ ನಷ್ಟ ಅನುಭವಿಸಿದ ರೈತರಿಗೆ ತಲಾ ₹10 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಜೆಸ್ಕಾಂ ಇಲಾಖೆ ಸಮಗ್ರ ತನಿಖೆ ನಡೆಸಿ ವಿಶೇಷ ಪರಿಹಾರ ಘೋಷಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ವಿದ್ಯುತ್ ಮಾರ್ಗಗಳ ಸುರಕ್ಷತಾ ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. #Kalaburagi #ಕಲಬುರಗಿ #ಕಾಳಗಿ #Bennur #ಕಬ್ಬುಬೆಳೆ #ರೈತರು #ಶಾರ್ಟ್ಸರ್ಕ್ಯೂಟ್ #ಜೆಸ್ಕಾಂ #ಬೆಂಕಿಅವಘಡ #ರೈತನಷ್ಟ #ಪರಿಹಾರ #YadgirNews
    1
    ಶಾರ್ಟ್ ಸರ್ಕ್ಯೂಟ್‌ಗೆ 7.5 ಎಕರೆ ಕಬ್ಬು ಬೆಂಕಿಗಾಹುತಿ; ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ

ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ಬೆಣ್ಣೂರ (ಬಿ) ಗ್ರಾಮದಲ್ಲಿ ಟ್ರಾನ್ಸ್‌ಫಾರ್ಮರ್‌ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನ ಪರಿಣಾಮ ಸುಮಾರು 7.5 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿಯಾಗಿದೆ. ಘಟನೆಯಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಗ್ರಾಮದ ಜಗದೇವಿ ಈಶ್ವರಪ್ಪ ಬೆನಕನಹಳ್ಳಿ ಹಾಗೂ ಸಿದ್ಧಲಿಂಗ ಬೆನಕನಹಳ್ಳಿ ಅವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಕವಾಗಿ ಹರಡಿ ಬೆಳೆ ಸಂಪೂರ್ಣ ಸುಟ್ಟುಹೋಗಿದೆ.
ಟ್ರಾನ್ಸ್‌ಫಾರ್ಮರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮವೇ ಅವಘಡ ಸಂಭವಿಸಿದೆ ಎಂದು ರೈತರು ಆರೋಪಿಸಿದ್ದು, ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ದೂರಿದ್ದಾರೆ.
ಘಟನೆಯ ಮಾಹಿತಿ ತಿಳಿದು ಕಾಳಗಿ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಗೊಳಗಾದ ಜಮೀನು ಹಾಗೂ ನಾಶವಾದ ಬೆಳೆಯ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸಿದರು.
ಈ ಕುರಿತು ಆಲ್ ಇಂಡಿಯಾ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ ಮಾತನಾಡಿ, ಬೆಂಕಿ ಅವಘಡದಿಂದ ನಷ್ಟ ಅನುಭವಿಸಿದ ರೈತರಿಗೆ ತಲಾ ₹10 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಜೆಸ್ಕಾಂ ಇಲಾಖೆ ಸಮಗ್ರ ತನಿಖೆ ನಡೆಸಿ ವಿಶೇಷ ಪರಿಹಾರ ಘೋಷಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ವಿದ್ಯುತ್ ಮಾರ್ಗಗಳ ಸುರಕ್ಷತಾ ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
#Kalaburagi #ಕಲಬುರಗಿ #ಕಾಳಗಿ #Bennur #ಕಬ್ಬುಬೆಳೆ #ರೈತರು #ಶಾರ್ಟ್ಸರ್ಕ್ಯೂಟ್ #ಜೆಸ್ಕಾಂ #ಬೆಂಕಿಅವಘಡ #ರೈತನಷ್ಟ #ಪರಿಹಾರ #YadgirNews
ಶಾರ್ಟ್ ಸರ್ಕ್ಯೂಟ್‌ಗೆ 7.5 ಎಕರೆ ಕಬ್ಬು ಬೆಂಕಿಗಾಹುತಿ; ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ
ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ಬೆಣ್ಣೂರ (ಬಿ) ಗ್ರಾಮದಲ್ಲಿ ಟ್ರಾನ್ಸ್‌ಫಾರ್ಮರ್‌ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನ ಪರಿಣಾಮ ಸುಮಾರು 7.5 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿಯಾಗಿದೆ. ಘಟನೆಯಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಗ್ರಾಮದ ಜಗದೇವಿ ಈಶ್ವರಪ್ಪ ಬೆನಕನಹಳ್ಳಿ ಹಾಗೂ ಸಿದ್ಧಲಿಂಗ ಬೆನಕನಹಳ್ಳಿ ಅವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಕವಾಗಿ ಹರಡಿ ಬೆಳೆ ಸಂಪೂರ್ಣ ಸುಟ್ಟುಹೋಗಿದೆ.
ಟ್ರಾನ್ಸ್‌ಫಾರ್ಮರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮವೇ ಅವಘಡ ಸಂಭವಿಸಿದೆ ಎಂದು ರೈತರು ಆರೋಪಿಸಿದ್ದು, ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ದೂರಿದ್ದಾರೆ.
ಘಟನೆಯ ಮಾಹಿತಿ ತಿಳಿದು ಕಾಳಗಿ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಗೊಳಗಾದ ಜಮೀನು ಹಾಗೂ ನಾಶವಾದ ಬೆಳೆಯ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸಿದರು.
ಈ ಕುರಿತು ಆಲ್ ಇಂಡಿಯಾ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ ಮಾತನಾಡಿ, ಬೆಂಕಿ ಅವಘಡದಿಂದ ನಷ್ಟ ಅನುಭವಿಸಿದ ರೈತರಿಗೆ ತಲಾ ₹10 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಜೆಸ್ಕಾಂ ಇಲಾಖೆ ಸಮಗ್ರ ತನಿಖೆ ನಡೆಸಿ ವಿಶೇಷ ಪರಿಹಾರ ಘೋಷಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ವಿದ್ಯುತ್ ಮಾರ್ಗಗಳ ಸುರಕ್ಷತಾ ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
#Kalaburagi #ಕಲಬುರಗಿ #ಕಾಳಗಿ #Bennur #ಕಬ್ಬುಬೆಳೆ #ರೈತರು #ಶಾರ್ಟ್ಸರ್ಕ್ಯೂಟ್ #ಜೆಸ್ಕಾಂ #ಬೆಂಕಿಅವಘಡ #ರೈತನಷ್ಟ #ಪರಿಹಾರ #YadgirNews
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    22 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.