Shuru
Apke Nagar Ki App…
ಧರ್ಮಸ್ಥಳ ಸಂಘದಿಂದ ಸ್ವಚ್ಛತಾ ಕಾರ್ಯ ಕೂಡ್ಲಿಗಿ : ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿಯಾಗಿದೆ ಎಂದು ಮುಖಂಡ ರೇವಣ್ಣ ಹೇಳಿದರು. ತಾಲೂಕಿನ ಕಾನಹೊಸಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದಿ ಸಂಸ್ಥೆಯಿಂದ ಸಂಕ್ರಾಂತಿ ಹಬ್ಬದ ಅಂಗವಾಗಿ ಮಂಗಳವಾರ ಶ್ರೀ ಬಸವೇಶ್ವರ ದೇವಸ್ಥಾನ ಸೇರಿ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನಮ್ಮ ಪ್ರದೇಶದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಈ ಯೋಜನೆಯ ಮೂಲಕ ಮಹಿಳೆಯರು ಸ್ವಸಹಾಯ ಸಂಘಗಳನ್ನು ರಚಿಸಿಕೊಂಡು ತಮ್ಮದೇ ಆದ ಉದ್ಯೋಗಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ನಾಗರಾಜ, ಸೇವಾ ಪ್ರತಿನಿಧಿ ರೇಣುಕಮ್ಮ, ಒಕ್ಕೂಟದ ಕಾರ್ಯದರ್ಶಿ ಗಾಯತ್ರಿ, ಗ್ರಾಮ ಪಂಚಾಯ್ತಿ ಸದಸ್ಯೆ ಗೌರಮ್ಮ, ಮುಖಂಡರಾದ ಬಸವರಾಜ ಇತರರಿದ್ದರು.
Ajay Reporter
ಧರ್ಮಸ್ಥಳ ಸಂಘದಿಂದ ಸ್ವಚ್ಛತಾ ಕಾರ್ಯ ಕೂಡ್ಲಿಗಿ : ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿಯಾಗಿದೆ ಎಂದು ಮುಖಂಡ ರೇವಣ್ಣ ಹೇಳಿದರು. ತಾಲೂಕಿನ ಕಾನಹೊಸಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದಿ ಸಂಸ್ಥೆಯಿಂದ ಸಂಕ್ರಾಂತಿ ಹಬ್ಬದ ಅಂಗವಾಗಿ ಮಂಗಳವಾರ ಶ್ರೀ ಬಸವೇಶ್ವರ ದೇವಸ್ಥಾನ ಸೇರಿ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನಮ್ಮ ಪ್ರದೇಶದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಈ ಯೋಜನೆಯ ಮೂಲಕ ಮಹಿಳೆಯರು ಸ್ವಸಹಾಯ ಸಂಘಗಳನ್ನು ರಚಿಸಿಕೊಂಡು ತಮ್ಮದೇ ಆದ ಉದ್ಯೋಗಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ನಾಗರಾಜ, ಸೇವಾ ಪ್ರತಿನಿಧಿ ರೇಣುಕಮ್ಮ, ಒಕ್ಕೂಟದ ಕಾರ್ಯದರ್ಶಿ ಗಾಯತ್ರಿ, ಗ್ರಾಮ ಪಂಚಾಯ್ತಿ ಸದಸ್ಯೆ ಗೌರಮ್ಮ, ಮುಖಂಡರಾದ ಬಸವರಾಜ ಇತರರಿದ್ದರು.
More news from Bagalkote and nearby areas
- ಬಾಗಲಕೋಟೆ ಜಿಲ್ಲೆಯಲ್ಲಿ ಉಪಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಅಮೀನಗಡದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಬೆಂಬಲವಾಗಿ ಶಾಸಕ ವಿಜಯಾನಂದ ಕಾಶಪ್ಪನವರ್ ಭರ್ಜರಿ ಪ್ರಚಾರ ನಡೆಸಿದ ಅವರು, ಮತದಾರರನ್ನು ಭೇಟಿ ಮಾಡಿ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ವಿವರಿಸಿದರು. ಈ ವೇಳೆ ಮಾತನಾಡಿದ ಶಾಸಕ ಕಾಶಪ್ಪನವರ್, “ರಾಜ್ಯದ ಅಭಿವೃದ್ಧಿಗೆ ಹಾಗೂ ಜನರ ಹಿತಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಮತ ನೀಡಿ ಗೆಲ್ಲಿಸಿ” ಎಂದು ಮನವಿ ಮಾಡಿದರು.1
- ಹನುಮ ಜಯಂತಿಯ ಪ್ರಯುಕ್ತ ಇಳಕಲ್ಲ ತಾಲೂಕಿನ ಹೊಸೂರು ಗ್ರಾಮದ ಹನುಮಂತ ದೇವಸ್ಥಾನ ಹಾಗೂ ದರ್ಗಾ ಹತ್ತಿರದ ಆಂಜನೇಯನ ದೇವಸ್ಥಾನಕ್ಕೆ ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಗುರುವಾರ ಭೇಟಿ ನೀಡಿ ದರ್ಶನವನ್ನು ಪಡೆದುಕೊಂಡರು. ಈ ಸಮಯದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವನಗೌಡ ಅಗಸಿಮುಂದಿನ, ಬಿಜೆಪಿ ಹಿರಿಯ ಮುಖಂಡ ವಿಜಯಕುಮಾರ ಜಾಲಗಾರ ಮತ್ತಿತರರು ಇದ್ದರು.2
- ಬಂಡಾಯ ಅಭ್ಯರ್ಥಿಗಳಿಗೆ ಪಠಾಣ್ ಶಾಕ್? ಸಮರ್ಥ್ ಶಾಮನೂರು ಗೆಲುವು ಫಿಕ್ಸ್? | Yasir Khan Pathan Speech in DavanagereKeywords (ಟ್ಯಾಗ್‌ಗಳು / ಕೀವರ್ಡ್‌ಗಳು) ಈ ಕೀವರ್ಡ್‌ಗಳನ್ನು ನಿಮ್ಮ ವೀಡಿಯೋ ಡಿಸ್ಕ್ರಿಪ್ಶನ್ ಮತ್ತು ಟ್ಯಾಗ್ ಸೆಕ್ಷನ್‌ನಲ್ಲಿ ಬಳಸಿ: ಪ್ರಮುಖ ವ್ಯಕ್ತಿಗಳು: Yasir Khan Pathan, Samarth Shamanur, Shamanur Shivashankarapur, SS Mallikarjun, Basavaraj Bommai. ಸ್ಥಳ ಮತ್ತು ಚುನಾವಣೆ: Davanagere South Byelection 2026, Davanagere Politics, Karnataka Byelection 2026, ದಾವಣಗೆರೆ ಉಪಚುನಾವಣೆ. ಪಕ್ಷಗಳು: Congress Campaign Davanagere, INC Karnataka, BJP vs Congress Davanagere. ವಿಷಯಗಳು: Yasir Pathan Speech, Muslim Votes in Davanagere, Samarth Shamanur Campaign, ಬಂಡಾಯ ಅಭ್ಯರ್ಥಿಗಳ ಮನವೊಲಿಕೆ. Video Description (ಸಣ್ಣ ವಿವರಣೆ) "ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ರಂಗೇರಿದೆ. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್ ಪರವಾಗಿ ಶಿಗ್ಗಾಂವಿ ಶಾಸಕ ಯಾಸೀರ್ ಖಾನ್ ಪಠಾಣ್ ಅವರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಬಂಡಾಯ ಅಭ್ಯರ್ಥಿಗಳ ಮನವೊಲಿಕೆ ಮತ್ತು ಅಲ್ಪಸಂಖ್ಯಾತ ಮತಗಳ ಕ್ರೋಡೀಕರಣದ ಬಗ್ಗೆ ಅವರು ನೀಡಿದ ರೋಚಕ ಹೇಳಿಕೆಗಳು ಇಲ್ಲಿವೆ." Hashtags: #DavanagereByelection #YasirKhanPathan #SamarthShamanur #CongressKarnataka #DavanagerePolitics #KarnatakaNews #ByElection20262
- ಗುಳೇದಗುಡ್ಡದ ಸರಾಫ್ ಬಜಾರದಲ್ಲಿನ ಮಾರುತೇಶ್ವರ ದೇವಸ್ಥಾನದಲ್ಲಿ ಗುರುವಾರ ಹನುಮ ಜಯಂತಿ ಅಂಗವಾಗಿ ಹನುಮಂತ ದೇವರಿಗೆ ವಿಶೇಷ ಹೂವಿನ ಅಲಂಕರ, ಎಲೆಪೂಜೆ ಮಾಡಲಾಗಿತ್ತು. ಬಳಿಕ ಮಹಿಳೆಯರಿಂದ ಮಾರುತೇಶ್ವರನ ತೊಟ್ಟಿಲೋತ್ಸವ ನಡೆಸಲಾಯಿತು. ಅರ್ಚಕರಾದ ಪ್ರಭಾಕರಭಟ್ ಜೋಶಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.1
- Post by Nitin 9071795156 press reporte2
- ವೀಕ್ಷಕರೇ, ಸಮಾಜದ ಕನ್ನಡಿಯಂತೆ ಕೆಲಸ ಮಾಡುತ್ತಿರುವ ಪ್ರಮುಖ ಸಂಸ್ಥೆಗಳಲ್ಲಿ ಆಸ್ಪತ್ರೆ ಕೂಡ ಒಂದು. ಕೊರೋನಾ ಎಂಬ ಮಹಾಮಾರಿ ಸಮಯದಲ್ಲಿ ನಮಗೆ ಮೊದಲಿಗೆ ನೆನಪಾಗಿದ್ದು ಆಸ್ಪತ್ರೆಯೇ. ಆ ಸಮಯದಲ್ಲಿ ನಮಗೆ ಬೇಕಾಗಿದ್ದು ಒಂದು ಮಾತ್ರ — ಚಿಕಿತ್ಸೆ… ಡಾಕ್ಟರ್ ಯಾರು? ಆಸ್ಪತ್ರೆ ಯಾವುದು? ಎನ್ನುವುದು ಮುಖ್ಯವಾಗಿರಲಿಲ್ಲ. ಆದರೆ ವೀಕ್ಷಕರೇ, ಇಂತಹ ಪವಿತ್ರ ಸೇವಾ ಕ್ಷೇತ್ರದಲ್ಲೇ ಕೆಲವು ಪ್ರಶ್ನೆಗಳು ಉದ್ಭವವಾಗುತ್ತಿವೆ… ಜನ ಸೇವೆ ಮಾಡಲಾಗುತ್ತಿದೆಯಾ? ಅಥವಾ ಹಣದ ಲಾಭಕ್ಕಾಗಿ ಕೆಲಸ ಮಾಡಲಾಗುತ್ತಿದೆಯಾ? ಹೌದು ವೀಕ್ಷಕರೇ, ನಾವು ಈಗ ಮಾತನಾಡುತ್ತಿರುವುದು ಬೀಳಗಿ ತಾಲೂಕಿನ ಅನಗವಾಡಿ ಗ್ರಾಮದ ಅಕ್ಕಿಮರಡಿ ಆಸ್ಪತ್ರೆ ಕುರಿತು. ಈ ಪ್ರಕರಣದಲ್ಲಿ ಮುಖ್ಯವಾಗಿ ಕೇಳಿಬರುತ್ತಿರುವ ಆರೋಪ ಏನೆಂದರೆ — ಸರ್ಕಾರಕ್ಕೆ ಮೋಸ ಮಾಡಿರುವುದು. ವೀಕ್ಷಕರೇ, ಒಂದು ಕಟ್ಟಡ ನಿರ್ಮಾಣ ಮಾಡಲು ಗ್ರಾಮ ಪಂಚಾಯಿತಿ ಅಥವಾ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಪಡೆಯುವುದು ಕಡ್ಡಾಯ. ಅದರ ಜೊತೆಗೆ, ಕೃಷಿ ಜಮೀನನ್ನು ಬಳಸಬೇಕಾದರೆ ಅದನ್ನು “ಬಿನ್ ಶೆಥ್ಕಿ” ಮಾಡಿ ನಂತರವೇ ಕಟ್ಟಡ ನಿರ್ಮಾಣ ಮಾಡಬೇಕು. ಆದರೆ ಇಲ್ಲಿ ನಡೆದಿರುವುದು ಏನು? ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿದೆಯೇ? — ಸ್ಪಷ್ಟ ಮಾಹಿತಿ ಇಲ್ಲ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದರೂ ಉತ್ತರ ಸಿಗಲಿಲ್ಲ ಇನ್ನೂ ಗಂಭೀರ ವಿಷಯ ಏನೆಂದರೆ — ಸರ್ವೆ ನಂ. 135/7ರಲ್ಲಿ 1 ಎಕರೆ ಜಮೀನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಆಗಿದೆ ಆದರೆ ಅಲ್ಲಿ ಕಟ್ಟಡ ಇಲ್ಲ, ಕೃಷಿಯೇ ನಡೆಯುತ್ತಿದೆ ಆದರೆ... ಸರ್ವೆ ನಂ. 133/1+2A/4ರಲ್ಲಿ 15 ಗುಂಟೆ ಕೃಷಿ ಜಮೀನಿನಲ್ಲಿ ಭೂ ಪರಿವರ್ತನೆ ಮಾಡದೇ ಆಸ್ಪತ್ರೆ ಕಟ್ಟಲಾಗಿದೆ ಈ ಕುರಿತು ಸ್ಥಳೀಯ ಪತ್ರಕರ್ತರು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆ, ಬೀಳಗಿ ತಹಶೀಲ್ದಾರರಿಂದ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗಿದೆ. ಈಗ ಪ್ರಶ್ನೆ ಏನೆಂದರೆ ವೀಕ್ಷಕರೇ... ಇದು ಕಾನೂನು ಪ್ರಕಾರ ಸರಿಯೇ? ತಪ್ಪೇ? ಒಬ್ಬ ಬಡವನು ತಾತ್ಕಾಲಿಕ ಗುಡಿಸಲು ಹಾಕಿದರೆ ಕೂಡ ಪ್ರಕರಣ ದಾಖಲಿಸಿ ತೆರವು ಮಾಡಲಾಗುತ್ತದೆ ಆದರೆ ಇಲ್ಲಿ — ಸ್ಪಷ್ಟವಾಗಿ ಉಲ್ಲಂಘನೆ ಇದ್ದರೂ ಜಿಲ್ಲಾಡಳಿತ ಮೌನವಾಗಿರುವುದು ಯಾಕೆ? ಇದು ನಿರ್ಲಕ್ಷ್ಯವೇ? ಅಥವಾ ಇನ್ನಾವುದೋ ಪ್ರಭಾವವೇ? ಇದೀಗ ಎಲ್ಲರ ಗಮನ ಒಂದೇ ಕಡೆ — ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ? ಇದಿಷ್ಟು ಇವತ್ತಿನ ವಿಶೇಷ ವರದಿ… ಇನ್ನಷ್ಟು ಸುದ್ದಿಗಳಿಗೆ ನಮ್ಮ ಜೊತೆ ಇರಿ… ಭೀಮ ಹೆಜ್ಜೆ ನ್ಯೂಸ್ – ನೇರ ನ್ಯಾಯ, ನಿರಂತರ ಸುದ್ದಿ1
- ಹನುಮ ಜಯಂತಿ ಅಂಗವಾಗಿ ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿನ ಹನುಮ ದೇವಸ್ಥಾನದಲ್ಲಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ. ನಗರದಲ್ಲಿನ ಹನುಮ ದೇವಸ್ಥಾನಗಳನ್ನು ತಳಿರೋ ತೋರಣ,ಹೂವುಗಳಿಂದ ಶೃಂಗರಿಸಿ ಆಂಜನೇಯ್ಯನಿಗೆ ವಿಶೇಷ ಪೂಜೆ, ಅಭಿಷೇಕವನ್ನು ನೆರವೇರಿಸಿದರು. ದೇವಸ್ಥಾನಗಳಿಗೆ ಭಕ್ತರು ದಂಡು ಆಗಮಿಸಿ ದರ್ಶನ ಪಡೆದುಕೊಂಡು ಪ್ರಸಾದ ಸ್ವೀಕರಿಸುತ್ತಿದ್ದಾರೆ. ಜೋಶಿಗಲ್ಲಿಯಲ್ಲಿನ ಹನುಮ ಮಂದಿರ, ಬಸ್ ನಿಲ್ದಾಣ ಹತ್ತಿರದ ಆಂಜನೇಯ್ಯಸ್ವಾಮಿ ದೇವಸ್ಥಾನ, ಬಸವನಗರದ ಹನುಮ ದೇವಸ್ಥಾನ, ದರ್ಗಾ ಹತ್ತಿರದ ಹನುಮ ದೇವಸ್ಥಾನ, ಜುಂಜಾ ಮನೆಯ ಹತ್ತಿರದ ಹನುಮ ದೇವಸ್ಥಾನದಲ್ಲಿ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಮಾಡಿದ್ದರು.1
- ಗುಳೇದಗುಡ್ಡ: ಪಟ್ಟಣದ ಅಕ್ಕಲಕೋಟೆಯ ರಾಜಯೋಗಿ ಶ್ರೀ ರೇವಣಸಿದ್ದ ಶಿವಶರಣರ ಮಠದ ಜಾತ್ರಾಮಹೋತ್ಸವ ನಿಮಿತ್ತ ಅಪಾರ ಭಕ್ತರ ನಡುವೆ ಅದ್ಧೂರಿಯಾಗಿ ರಥೋತ್ಸವ ಗುರುವಾರ ನಡೆಯಿತು. ಬೆಳಿಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಮಧ್ಯಾಹ್ನ ಶ್ರೀಗಳ ಅಡ್ಡಪಲ್ಲಕ್ಕಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಗೊಂಬೆ ಕುಣಿತ, ಡೊಳ್ಳು, ಕರಡಿಮಜಲಿನ ಮೇಳಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ನಂತರ ಸಂಜೆ 6.30ಗಂಟೆಗೆ ರೇವಣಸಿದ್ಧ ಶಿವಶರಣರ ರಥೋತ್ಸವ ಜರುಗಿತು. ನಂತರ ಕೈಲಾಸ ಮಂಟಪ ಪೂಜೆ ನಡೆಯಿತು. ಜಾತ್ರಾಮಹೋತ್ಸವದಲ್ಲಿ ಆಳಂದದ ಶಿವಶರಣಮಠದ ಚನ್ನಬಸವ ಪಟ್ಟದೇವರು, ಮೈಂದರಗಿಯ ಅಭಿನವ ರೇವಣಸಿದ್ದ ಶಿವಶರಣರು, ನೀರಲಕೇರಿಯ ಘನಲಿಂಗ ಮಹಾಸ್ವಾಮಿಗಳು, ಸೋಮಯ್ಯ ಶಾಸ್ತ್ರೀಗಳು, ಗುರಪ್ಪಗೌಡ ಪಾಟೀಲ, ಲಕ್ಷ್ಮಣ ದಡ್ಡಿ, ಬಿ.ಬಿ.ವಜ್ರಬಂಡಿ, ಮಲ್ಲಿಕಾರ್ಜುನ ಮುದೆನೂರ, ರಾಮಸ್ವಾಮಿ, ಮಲ್ಲಿಕಾರ್ಜುನ ಸೂಡಿ, ನಾಗೇಶ ಸಿದ್ದಣ್ಣವರ, ಪುರುಷೋತ್ತಮ ಗಂಡಿ,ನಾರಾಯಣಪ್ಪ ಚಿತ್ರಗಾರ, ಬಸವಂತಪ್ಪ, ಶರಣಪ್ಪ ದಿಂಡಿ, ಬಸಪ್ಪ ದಿಂಡಿ, ಸಂಗಪ್ಪ ರಕ್ಕಸಗಿ,ಮೇಟಿ ಸೇರಿದಂತೆ ಗುಳೇದಗುಡ್ಡ ಕೋಟೆಕಲ್, ಪರ್ವತಿ, ಚೌಡಾಪುರ, ಶಿರೂರು, ಹಳ್ಳೂರು, ಆಚನೂರ, ಸೀತಿಮನಿ, ಹುಲಸಗೇರಿ, ಜಮ್ಮನಕಟ್ಟಿ ಲಕ್ಕಸಕೊಪ್ಪ, ಸುರಳಿಕಲ್ಲ, ಸಂಗಾಪೂರ, ಮಂಗಳಗುಡ್ಡ, ಯಂಕಂಚಿ ಮಣಿನಾಗರ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.1
- Post by Nitin 9071795156 press reporte1