logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಸದಸ್ಯ ಕಾರ್ಯದರ್ಶಿ ಹಿರಿಯ ನ್ಯಾಯಾಧೀಶ ಎಂ. ಆನಂದ್ ರವರು ಸಸಿಗೆ ನೀರು ಹಾಕುವ ಮುಖಾಂತರ ಉದ್ಘಾಟಿಸಿದರು.

11 hrs ago
user_Shivraj
Shivraj
Singer ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಕರ್ನಾಟಕ•
11 hrs ago

ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಸದಸ್ಯ ಕಾರ್ಯದರ್ಶಿ ಹಿರಿಯ ನ್ಯಾಯಾಧೀಶ ಎಂ. ಆನಂದ್ ರವರು ಸಸಿಗೆ ನೀರು ಹಾಕುವ ಮುಖಾಂತರ ಉದ್ಘಾಟಿಸಿದರು.

More news from ಕರ್ನಾಟಕ and nearby areas
  • ಸರಕಾರಕ್ಕೆ ಬಿಸಿ ಮುಟ್ಟಿಸಲು ಕಾರ್ಯತಂತ್ರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಗಳೂರು: ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಹ ಕೆಲಸವನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟುಗೂಡಿ ಮಾಡಬೇಕು ಎಂಬ ನಿರ್ಧಾರ ಇವತ್ತು ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಅವರು ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಎಲ್ಲ ಪ್ರಮುಖರ ಸಭೆ ಇಂದು ನಡೆದಿದೆ. ನಾನು ನಮ್ಮ ವಿಪಕ್ಷ ನಾಯಕರು, ಪಕ್ಷದ ಇತರ ಮುಖಂಡರು, ಜೆಡಿಎಸ್ ವತಿಯಿಂದ ಮಾನ್ಯ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಬೋಜೇಗೌಡರು, ಎರಡು ಪಕ್ಷದ ಪ್ರಮುಖ ಶಾಸಕರು ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು ಎಂದು ವಿವರಿಸಿದರು. ಬೆಳಗಾವಿಯಲ್ಲಿ ಎರಡನೇ ತಾರೀಕಿನಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಯಾವ ಯಾವ ವಿಚಾರಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ. ಬರಗಾಲ ತೀವ್ರವಾಗಿದ್ದು, ರಾಜ್ಯ ಸರ್ಕಾರದಿಂದ ಯಾವುದೇ ರೀತಿ ತಯಾರಿ ಇಲ್ಲ ಎಂದು ಟೀಕಿಸಿದರು. ₹5,000 ಕೊಡುತ್ತೇವೆ ಅಂತ ಹೇಳಿ ಘೋಷಣೆ ಮಾಡಿ, ನಾಮಕಾವಾಸ್ತೆಗೆ 45,000 ರೈತರಿಗೆ ಹಣ ಅಧರ್ಂಬರ್ಧ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಚಾಳಿಯನ್ನು ಮುಂದುವರಿಸಿದ್ದಾರೆ. ರೈತರಿಗೆ ಪರಿಹಾರ ಕೊಡುವುದಕ್ಕೂ ಸಾಧ್ಯ ಆಗಿಲ್ಲ. ಕುಡಿಯುವ ನೀರಿನ ಹಾಹಾಕಾರ ಇದೆ, ರಾಜ್ಯ ಸರ್ಕಾರದಿಂದ ಯಾವುದೇ ರೀತಿ ತಯಾರಿ ಕೂಡ ಇಲ್ಲ ಎಂದು ಟೀಕಿಸಿದರು. ಮತ್ತೊಂದು ಕಡೆ ಬೆಲೆ ಏರಿಕೆಯಿಂದ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ, ಕಾಂಗ್ರೆಸ್ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಆಶಾ ಕಾರ್ಯಕರ್ತರ ಬವಣೆ- ಇವೆಲ್ಲವನ್ನು ಸದನದಲ್ಲಿ ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಳ್ಳಬೇಕು. ಈ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಹ ಕೆಲಸವನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಿಗೆ ಮಾಡಬೇಕು ಅನ್ನುವ ನಿರ್ಧಾರ ಇವತ್ತು ಆಗಿದೆ ಎಂದು ವಿವರ ನೀಡಿದರು.
    1
    ಸರಕಾರಕ್ಕೆ ಬಿಸಿ ಮುಟ್ಟಿಸಲು ಕಾರ್ಯತಂತ್ರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
ಬೆಂಗಳೂರು: ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಹ ಕೆಲಸವನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟುಗೂಡಿ ಮಾಡಬೇಕು ಎಂಬ ನಿರ್ಧಾರ ಇವತ್ತು ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಅವರು ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಎಲ್ಲ ಪ್ರಮುಖರ ಸಭೆ ಇಂದು ನಡೆದಿದೆ. ನಾನು ನಮ್ಮ ವಿಪಕ್ಷ ನಾಯಕರು, ಪಕ್ಷದ ಇತರ ಮುಖಂಡರು, ಜೆಡಿಎಸ್ ವತಿಯಿಂದ ಮಾನ್ಯ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಬೋಜೇಗೌಡರು, ಎರಡು ಪಕ್ಷದ ಪ್ರಮುಖ ಶಾಸಕರು ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು ಎಂದು ವಿವರಿಸಿದರು.
ಬೆಳಗಾವಿಯಲ್ಲಿ ಎರಡನೇ ತಾರೀಕಿನಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಯಾವ ಯಾವ ವಿಚಾರಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ. ಬರಗಾಲ ತೀವ್ರವಾಗಿದ್ದು, ರಾಜ್ಯ ಸರ್ಕಾರದಿಂದ ಯಾವುದೇ ರೀತಿ ತಯಾರಿ ಇಲ್ಲ ಎಂದು ಟೀಕಿಸಿದರು.
₹5,000 ಕೊಡುತ್ತೇವೆ ಅಂತ ಹೇಳಿ ಘೋಷಣೆ ಮಾಡಿ, ನಾಮಕಾವಾಸ್ತೆಗೆ 45,000 ರೈತರಿಗೆ ಹಣ ಅಧರ್ಂಬರ್ಧ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಚಾಳಿಯನ್ನು ಮುಂದುವರಿಸಿದ್ದಾರೆ. ರೈತರಿಗೆ ಪರಿಹಾರ ಕೊಡುವುದಕ್ಕೂ ಸಾಧ್ಯ ಆಗಿಲ್ಲ. ಕುಡಿಯುವ ನೀರಿನ ಹಾಹಾಕಾರ ಇದೆ, ರಾಜ್ಯ ಸರ್ಕಾರದಿಂದ ಯಾವುದೇ ರೀತಿ ತಯಾರಿ ಕೂಡ ಇಲ್ಲ ಎಂದು ಟೀಕಿಸಿದರು.
ಮತ್ತೊಂದು ಕಡೆ ಬೆಲೆ ಏರಿಕೆಯಿಂದ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ, ಕಾಂಗ್ರೆಸ್ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಆಶಾ ಕಾರ್ಯಕರ್ತರ ಬವಣೆ- ಇವೆಲ್ಲವನ್ನು ಸದನದಲ್ಲಿ ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಳ್ಳಬೇಕು. ಈ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಹ ಕೆಲಸವನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಿಗೆ ಮಾಡಬೇಕು ಅನ್ನುವ ನಿರ್ಧಾರ ಇವತ್ತು ಆಗಿದೆ ಎಂದು ವಿವರ ನೀಡಿದರು.
    user_Anil
    Anil
    ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    11 hrs ago
  • ಲೋಕಾಯುಕ್ತಕ್ಕೆ ದೂರು ಕೆರೆ ಅಭಿವೃದ್ಧಿ ಸಭೆಯಲ್ಲಿ ಶಾಸಕರ ಸಿಟ್ಟು ಲೋಕಾಯುಕ್ತಕ್ಕೆ ದೂರು ಕೆರೆ ಅಭಿವೃದ್ಧಿ ಸಭೆಯಲ್ಲಿ ಶಾಸಕರ ಸಿಟ್ಟು ಕೆರೆ ಎಂದರೆ ಕೇವಲ ನೀರಿನ ತಾಣವಲ್ಲ. ಅದು ಜನರ ಭಾವನೆ, ನೆನಪು, ಬದುಕು. ಅಂತಹ ಕೆರೆಯ ವಿಚಾರದಲ್ಲಿ ಪದೇಪದೇ ಆರೋಪ, ದೂರು, ನೋಟಿಸ್ ಬರುತ್ತಿದ್ದರೆ ಜನಪ್ರತಿನಿಧಿಗೆ ಸಿಟ್ಟು ಬರದೇ ಇರುತ್ತದೆಯೇ? ಎಂದು ಶಾಸಕ ಎಸ್.ಟಿ. ಸೋಮಶೇಖರ್ ಅಧಿಕಾರಿಗಳ ಮುಂದೆಯೇ ತಮ್ಮ ಅಸಮಾಧಾನವನ್ನು ಮುಚ್ಚುಮರೆ ಇಲ್ಲದೆ ಹೊರಹಾಕಿದರು. ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಗಲ್ ಹನುಮಂತಯ್ಯ ವಾರ್ಡ್ ವ್ಯಾಪ್ತಿಯ ಗಾಂಧಿನಗರ ಹೊಸಕೆರೆ ಅಭಿವೃದ್ಧಿ ಕುರಿತು ಕರೆದಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ರೋಲ್ ಕಾಲ್ ಗಿರಾಕಿಗಳು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಕೆರೆಯ ಅಭಿವೃದ್ಧಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಅಧಿಕಾರಿಗಳು ಆತನ ವಿರುದ್ಧ ಲೋಕಾಯುಕ್ತಕ್ಕೆ ಮರು ದೂರು ನೀಡಿ, ಯಾರೂ ಹೆದರಬೇಕಾದ ಅಗತ್ಯವಿಲ್ಲ ಎಂದು ಶಾಸಕರು ಖಡಕ್ ಆಗಿ ಹೇಳಿದರು. ಕೆರೆಯ ವಿಚಾರ ಸ್ಥಳೀಯ ಜನರ ಭಾವನಾತ್ಮಕ ಸಂಬಂಧ ಹೊಂದಿದೆ. ಅದರ ಲಾಭ ಪಡೆಯಲು ಪದೇಪದೇ ಆ ವ್ಯಕ್ತಿ ಕೆರೆಯ ಸುತ್ತಮುತ್ತ ಮನೆ ಕಟ್ಟಿಕೊಂಡಿರುವ ಕುಟುಂಬಗಳಿಗೆ ಅಧಿಕಾರಿಗಳ ಜೊತೆ ಶಾಮೀಲಾಗಿ ನೋಟಿಸ್ ಕೊಡಿಸುತ್ತಿದ್ದಾನೆ ಎಂದು ಆರೋಪಗಳ ಸುರಿಮಳೆಗೈದರು. 2008ಕ್ಕೂ ಮುನ್ನ ಗೆದ್ದಿದ್ದ ಅಭ್ಯರ್ಥಿಯೊಬ್ಬರು ಕೆರೆಯಲ್ಲಿ ಬೋಟ್ ವ್ಯವಸ್ಥೆ ಮಾಡಿಸಿ ಪ್ರವಾಸಿ ತಾಣವಾಗಿಸುವುದಾಗಿ ಭರವಸೆ ನೀಡಿದ್ದರು. ಅದು ಇನ್ನೂ ಈಡೇರಿಲ್ಲ. ನಾನು ಈವರೆಗೆ ಯಾವೊಬ್ಬ ಅಧಿಕಾರಿಗೂ ಏರು ಧ್ವನಿಯಲ್ಲಿ ಮಾತನಾಡಿಲ್ಲ, ಗೌರವಯುತವಾಗಿ ನಡೆಸಿಕೊಂಡಿದ್ದೇನೆ. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಎಚ್ಚರಿಕೆ ನೀಡಿದರು. ₹8.4 ಕೋಟಿ ಅನುದಾನದಲ್ಲಿ ಕೆರೆಗೆ ತಂತಿಬೇಲಿ, ತಡೆಏರಿ ನಿರ್ಮಾಣ, ಒಳಹರಿವು ಹಾಗೂ ಹೊರಹರಿವು, ಯುಜಿಡಿ ನೀರಿನ ಹರಿವು ತಡೆ, ರಾಜಕಾಲುವೆ ವ್ಯವಸ್ಥೆ ಸುಧಾರಣೆ ಸೇರಿದಂತೆ ಕೆರೆಯ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆದ ಆದರೆ ಕೆರೆಯ ದೊಡ್ಡ ಸಮಸ್ಯೆ ಈಗಲೂ ಸುತ್ತಮುತ್ತಲಿನ ಪ್ರದೇಶಗಳಿಂದ ಹರಿದುಬರುವ ಕೊಳಚೆ ನೀರಿನ ಸಮಸ್ಯೆ ಗಂಭೀರವಾಗಿದೆ. ಯಾವ ಯಾವ ಭಾಗಗಳಿಂದ ಯುಜಿಡಿ ನೀರು ಕೆರೆಗೆ ಸೇರುತ್ತಿದೆ ಎಂಬುದನ್ನು ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಸೂಚಿಸಿದರು. ಶ್ರೀಗಂಧ ಕಾವಲ್ ಭಾಗದಿಂದ ಹೇರೋಹಳ್ಳಿ ಕೆರೆ ಮೂಲಕ ಗಾಂಧಿನಗರ ಕೆರೆಗೆ ನೀರು ಹರಿದುಬರುತ್ತಿದೆ. ವಿವಿಧ ಪ್ರದೇಶಗಳಿಂದ ಸೇರುತ್ತಿರುವ ಯುಜಿಡಿ ನೀರನ್ನು ಗುರುತಿಸಿ ಡೈವರ್ಷನ್ ಚಾನಲ್‌ಗೆ ಹರಿಸುವ ಯೋಜನೆ ರೂಪಿಸಬೇಕು. ಮಳೆಗಾಲದಲ್ಲಿ ಹೆಚ್ಚಿನ ನೀರು ಕೆರೆಗೆ ಹರಿದು ಬರುತ್ತಿರುವುದರಿಂದ ಕಲುಷಿತ ನೀರನ್ನು ಬೇರ್ಪಡಿಸಿ ಡೈವರ್ಷನ್ ಚಾನಲ್ ಮೂಲಕ ಬೇರೆಡೆಗೆ ಹರಿಸುವ ವ್ಯವಸ್ಥೆ ಮಾಡಬೇಕು.ಸ್ಥಳೀಯವಾಗಿ ಕೆಎಚ್‌ಬಿ ಅಪಾರ್ಟ್‌ಮೆಂಟ್ ಸೇರಿದಂತೆ ಕೆಲವು ವಸತಿ ಪ್ರದೇಶಗಳಿಂದ ಕೊಳಚೆ ನೀರು ಕೆರೆಗೆ ಸೇರುತ್ತಿರುವ ಆರೋಪ ಕೇಳಿಬಂದಿದೆ ಎಂದರು. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂಬ ಅಸಮಾಧಾನವನ್ನೂ ವ್ಯಕ್ತಪಡಿಸಿದ ಶಾಸಕರು, ಗಾಂಧಿನಗರ ಕೆರೆಯ ಸಂರಕ್ಷಣೆ ಹಾಗೂ ಕಲುಷಿತ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಜಲಮಂಡಳಿ ಕಾರ್ಯಪಾಲಕ ಅಭಿಯಂತರರಾದ ಚಂದ್ರಶೇಖರ್ ಪ್ರಸಾದ್, ಚಂದ್ರಶೇಖರ್, ಎಇಇಗಳಾದ ದೀಪಕ್, ಯಶಾಂತ್, ಗೀತಾ, ಎಇ ಚಂದನ್, ಜಿಬಿಎ ಎಇಇ ನಟರಾಜ್, ಎಇ ಧನಂಜಯ್, ಘನತ್ಯಾಜ್ಯ ವಿಭಾಗದ ಎಇಇ ಸಿದ್ದರಾಜೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.
    1
    ಲೋಕಾಯುಕ್ತಕ್ಕೆ ದೂರು ಕೆರೆ ಅಭಿವೃದ್ಧಿ ಸಭೆಯಲ್ಲಿ ಶಾಸಕರ ಸಿಟ್ಟು
ಲೋಕಾಯುಕ್ತಕ್ಕೆ ದೂರು ಕೆರೆ ಅಭಿವೃದ್ಧಿ ಸಭೆಯಲ್ಲಿ ಶಾಸಕರ ಸಿಟ್ಟು
ಕೆರೆ ಎಂದರೆ ಕೇವಲ ನೀರಿನ ತಾಣವಲ್ಲ. ಅದು ಜನರ ಭಾವನೆ, ನೆನಪು, ಬದುಕು. ಅಂತಹ ಕೆರೆಯ ವಿಚಾರದಲ್ಲಿ ಪದೇಪದೇ ಆರೋಪ, ದೂರು, ನೋಟಿಸ್ ಬರುತ್ತಿದ್ದರೆ ಜನಪ್ರತಿನಿಧಿಗೆ ಸಿಟ್ಟು ಬರದೇ ಇರುತ್ತದೆಯೇ? ಎಂದು ಶಾಸಕ ಎಸ್.ಟಿ. ಸೋಮಶೇಖರ್  ಅಧಿಕಾರಿಗಳ ಮುಂದೆಯೇ ತಮ್ಮ ಅಸಮಾಧಾನವನ್ನು ಮುಚ್ಚುಮರೆ ಇಲ್ಲದೆ ಹೊರಹಾಕಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಗಲ್ ಹನುಮಂತಯ್ಯ ವಾರ್ಡ್ ವ್ಯಾಪ್ತಿಯ ಗಾಂಧಿನಗರ ಹೊಸಕೆರೆ ಅಭಿವೃದ್ಧಿ ಕುರಿತು ಕರೆದಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು 
ರೋಲ್ ಕಾಲ್ ಗಿರಾಕಿಗಳು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಕೆರೆಯ ಅಭಿವೃದ್ಧಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಅಧಿಕಾರಿಗಳು ಆತನ ವಿರುದ್ಧ ಲೋಕಾಯುಕ್ತಕ್ಕೆ ಮರು ದೂರು ನೀಡಿ, ಯಾರೂ ಹೆದರಬೇಕಾದ ಅಗತ್ಯವಿಲ್ಲ ಎಂದು ಶಾಸಕರು ಖಡಕ್ ಆಗಿ ಹೇಳಿದರು.
ಕೆರೆಯ ವಿಚಾರ ಸ್ಥಳೀಯ ಜನರ ಭಾವನಾತ್ಮಕ ಸಂಬಂಧ ಹೊಂದಿದೆ. ಅದರ ಲಾಭ ಪಡೆಯಲು ಪದೇಪದೇ ಆ ವ್ಯಕ್ತಿ ಕೆರೆಯ ಸುತ್ತಮುತ್ತ ಮನೆ ಕಟ್ಟಿಕೊಂಡಿರುವ ಕುಟುಂಬಗಳಿಗೆ ಅಧಿಕಾರಿಗಳ ಜೊತೆ ಶಾಮೀಲಾಗಿ ನೋಟಿಸ್ ಕೊಡಿಸುತ್ತಿದ್ದಾನೆ ಎಂದು ಆರೋಪಗಳ ಸುರಿಮಳೆಗೈದರು.
2008ಕ್ಕೂ ಮುನ್ನ ಗೆದ್ದಿದ್ದ ಅಭ್ಯರ್ಥಿಯೊಬ್ಬರು ಕೆರೆಯಲ್ಲಿ ಬೋಟ್ ವ್ಯವಸ್ಥೆ ಮಾಡಿಸಿ ಪ್ರವಾಸಿ ತಾಣವಾಗಿಸುವುದಾಗಿ ಭರವಸೆ ನೀಡಿದ್ದರು. ಅದು ಇನ್ನೂ ಈಡೇರಿಲ್ಲ. ನಾನು ಈವರೆಗೆ ಯಾವೊಬ್ಬ ಅಧಿಕಾರಿಗೂ ಏರು ಧ್ವನಿಯಲ್ಲಿ ಮಾತನಾಡಿಲ್ಲ, ಗೌರವಯುತವಾಗಿ ನಡೆಸಿಕೊಂಡಿದ್ದೇನೆ. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.
₹8.4 ಕೋಟಿ ಅನುದಾನದಲ್ಲಿ ಕೆರೆಗೆ ತಂತಿಬೇಲಿ, ತಡೆಏರಿ ನಿರ್ಮಾಣ, ಒಳಹರಿವು ಹಾಗೂ ಹೊರಹರಿವು, ಯುಜಿಡಿ ನೀರಿನ ಹರಿವು ತಡೆ, ರಾಜಕಾಲುವೆ ವ್ಯವಸ್ಥೆ ಸುಧಾರಣೆ ಸೇರಿದಂತೆ ಕೆರೆಯ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆದ ಆದರೆ ಕೆರೆಯ ದೊಡ್ಡ ಸಮಸ್ಯೆ ಈಗಲೂ ಸುತ್ತಮುತ್ತಲಿನ ಪ್ರದೇಶಗಳಿಂದ ಹರಿದುಬರುವ ಕೊಳಚೆ ನೀರಿನ ಸಮಸ್ಯೆ ಗಂಭೀರವಾಗಿದೆ. ಯಾವ ಯಾವ ಭಾಗಗಳಿಂದ ಯುಜಿಡಿ ನೀರು ಕೆರೆಗೆ ಸೇರುತ್ತಿದೆ ಎಂಬುದನ್ನು ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಸೂಚಿಸಿದರು.
ಶ್ರೀಗಂಧ ಕಾವಲ್ ಭಾಗದಿಂದ ಹೇರೋಹಳ್ಳಿ ಕೆರೆ ಮೂಲಕ ಗಾಂಧಿನಗರ ಕೆರೆಗೆ ನೀರು ಹರಿದುಬರುತ್ತಿದೆ. ವಿವಿಧ ಪ್ರದೇಶಗಳಿಂದ ಸೇರುತ್ತಿರುವ ಯುಜಿಡಿ ನೀರನ್ನು ಗುರುತಿಸಿ ಡೈವರ್ಷನ್ ಚಾನಲ್‌ಗೆ ಹರಿಸುವ ಯೋಜನೆ ರೂಪಿಸಬೇಕು. ಮಳೆಗಾಲದಲ್ಲಿ ಹೆಚ್ಚಿನ ನೀರು ಕೆರೆಗೆ ಹರಿದು ಬರುತ್ತಿರುವುದರಿಂದ ಕಲುಷಿತ ನೀರನ್ನು ಬೇರ್ಪಡಿಸಿ ಡೈವರ್ಷನ್ ಚಾನಲ್ ಮೂಲಕ ಬೇರೆಡೆಗೆ ಹರಿಸುವ ವ್ಯವಸ್ಥೆ ಮಾಡಬೇಕು.ಸ್ಥಳೀಯವಾಗಿ ಕೆಎಚ್‌ಬಿ ಅಪಾರ್ಟ್‌ಮೆಂಟ್ ಸೇರಿದಂತೆ ಕೆಲವು ವಸತಿ ಪ್ರದೇಶಗಳಿಂದ ಕೊಳಚೆ ನೀರು ಕೆರೆಗೆ ಸೇರುತ್ತಿರುವ ಆರೋಪ ಕೇಳಿಬಂದಿದೆ ಎಂದರು.
ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂಬ ಅಸಮಾಧಾನವನ್ನೂ ವ್ಯಕ್ತಪಡಿಸಿದ ಶಾಸಕರು, ಗಾಂಧಿನಗರ ಕೆರೆಯ ಸಂರಕ್ಷಣೆ ಹಾಗೂ ಕಲುಷಿತ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಜಲಮಂಡಳಿ ಕಾರ್ಯಪಾಲಕ ಅಭಿಯಂತರರಾದ ಚಂದ್ರಶೇಖರ್ ಪ್ರಸಾದ್, ಚಂದ್ರಶೇಖರ್, ಎಇಇಗಳಾದ ದೀಪಕ್, ಯಶಾಂತ್, ಗೀತಾ, ಎಇ ಚಂದನ್, ಜಿಬಿಎ ಎಇಇ ನಟರಾಜ್, ಎಇ ಧನಂಜಯ್, ಘನತ್ಯಾಜ್ಯ ವಿಭಾಗದ ಎಇಇ ಸಿದ್ದರಾಜೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.
    user_Asha N
    Asha N
    Bengaluru Urban, Karnataka•
    11 hrs ago
  • ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಸದಸ್ಯ ಕಾರ್ಯದರ್ಶಿ ಹಿರಿಯ ನ್ಯಾಯಾಧೀಶ ಎಂ. ಆನಂದ್ ರವರು ಸಸಿಗೆ ನೀರು ಹಾಕುವ ಮುಖಾಂತರ ಉದ್ಘಾಟಿಸಿದರು.
    4
    ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಸದಸ್ಯ ಕಾರ್ಯದರ್ಶಿ ಹಿರಿಯ ನ್ಯಾಯಾಧೀಶ ಎಂ. ಆನಂದ್ ರವರು ಸಸಿಗೆ ನೀರು ಹಾಕುವ ಮುಖಾಂತರ ಉದ್ಘಾಟಿಸಿದರು.
    user_Shivraj
    Shivraj
    Singer ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಕರ್ನಾಟಕ•
    11 hrs ago
  • ಕೆ ಆರ್ ಪುರ ಪೊಲೀಸರ ಕಾರ್ಯಚರಣೆ ,ಒಂಟಿ ಮಹಿಳೆಯನ್ನ ಸುಲಿಗೆ ಮಾಡಿದ್ದ ಆರೋಪಿ ಬಂಧನ ಮೊಬೈಲ್ ಕಳ್ಳತನ ವೇಳೆ ಮಹಿಳೆ ಕಿರುಚಿಕೊಂಡಿದ್ದ ಹಿನ್ನಲೆ ಆರೋಪಿ ಕಲ್ಲಿನಿಂದ ಮಹಿಳೆಯನ್ನ ಹಲ್ಲೆ ಮಾಡಿದ್ದ ಬಾಬು ಬಂಧಿತ ಆರೋಪಿ ಓಲ್ಡ್ ಮದ್ರಾಸ್ ರಸ್ತೆಯ ಮೇಡಹಳ್ಳಿ ಬಿಡ್ಜ್ ಬಳಿ ಸ್ಕೈವಾಕ್ ಹತ್ತಿರ ಮೊಬೈಲ್ ಕಳ್ಳತನಕ್ಕೆ ಯತ್ನ ಮಹಿಳೆ ಕಿರುಚಿಕೊಂಡ ಹಿನ್ನಲೆ ಇಬ್ಬರು ಮಹಿಳೆಯ ಸಹಾಯಕ್ಕೆ ಬಂದು ಮಹಿಳೆಗೆ ಸಹಾಯ ಮಾಡಿದ್ದ ಯುವಕರು ಕೆ ಆರ್ ಪುರ ಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ
    1
    ಕೆ ಆರ್ ಪುರ ಪೊಲೀಸರ ಕಾರ್ಯಚರಣೆ ,ಒಂಟಿ ಮಹಿಳೆಯನ್ನ ಸುಲಿಗೆ ಮಾಡಿದ್ದ ಆರೋಪಿ ಬಂಧನ
ಮೊಬೈಲ್ ಕಳ್ಳತನ ವೇಳೆ ಮಹಿಳೆ ಕಿರುಚಿಕೊಂಡಿದ್ದ ಹಿನ್ನಲೆ 
ಆರೋಪಿ ಕಲ್ಲಿನಿಂದ ಮಹಿಳೆಯನ್ನ ಹಲ್ಲೆ ಮಾಡಿದ್ದ
ಬಾಬು ಬಂಧಿತ ಆರೋಪಿ 
ಓಲ್ಡ್ ಮದ್ರಾಸ್ ರಸ್ತೆಯ ಮೇಡಹಳ್ಳಿ ಬಿಡ್ಜ್  ಬಳಿ ಸ್ಕೈವಾಕ್ ಹತ್ತಿರ ಮೊಬೈಲ್ ಕಳ್ಳತನಕ್ಕೆ ಯತ್ನ
ಮಹಿಳೆ ಕಿರುಚಿಕೊಂಡ ಹಿನ್ನಲೆ ಇಬ್ಬರು ಮಹಿಳೆಯ ಸಹಾಯಕ್ಕೆ ಬಂದು ಮಹಿಳೆಗೆ ಸಹಾಯ ಮಾಡಿದ್ದ ಯುವಕರು
ಕೆ ಆರ್ ಪುರ ಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ
    user_The Reporter
    The Reporter
    Local News Reporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    18 hrs ago
  • ಇಂದು ನಮ್ಮ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ನಮ್ಮ ಭಾರತಕ್ಕೆ ಸಂವಿಧಾನ ಕೊಟ್ಟು ದಿನ ಪ್ರತಿಯೊಬ್ಬರಿಗೆ ಹಕ್ಕು ನಮ್ಮ ನಮ್ಮ ಹಕ್ಕನ್ನು ಕಟ್ಟುವ ದಿನ ಇಂದು ನಮ್ಮ ಸವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ನಮ್ಮ ಭಾರತಕ್ಕೆ ಸಂವಿಧಾನ ಬರದ ಕೊಟ್ಟುವ ಕಟ್ಟಿದ ದಿನ ಪ್ರತಿ ಒಬ್ಬ ಭಾರತಿಗೆ ಹಕ್ಕನ್ನು ನಮ್ಮ ಹಕ್ಕನ್ನು ಹೇಗೆ ಪಡೆಯದೊಂದು ನಮ್ಮ ಸಂವಿಧಾನ ಕೊಟ್ಟು ಕೊಟ್ಟ ಮಹಾ ನಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ 💐❤️💐👍
    1
    ಇಂದು ನಮ್ಮ ಸಂವಿಧಾನ ಶಿಲ್ಪಿ 
 ಡಾಕ್ಟರ್ ಬಿ ಆರ್ ಅಂಬೇಡ್ಕರ್ 
 ನಮ್ಮ ಭಾರತಕ್ಕೆ ಸಂವಿಧಾನ ಕೊಟ್ಟು ದಿನ 
 ಪ್ರತಿಯೊಬ್ಬರಿಗೆ ಹಕ್ಕು ನಮ್ಮ ನಮ್ಮ ಹಕ್ಕನ್ನು ಕಟ್ಟುವ ದಿನ 
ಇಂದು ನಮ್ಮ ಸವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ನಮ್ಮ ಭಾರತಕ್ಕೆ ಸಂವಿಧಾನ ಬರದ ಕೊಟ್ಟುವ ಕಟ್ಟಿದ ದಿನ 
ಪ್ರತಿ ಒಬ್ಬ ಭಾರತಿಗೆ ಹಕ್ಕನ್ನು ನಮ್ಮ ಹಕ್ಕನ್ನು ಹೇಗೆ ಪಡೆಯದೊಂದು ನಮ್ಮ ಸಂವಿಧಾನ ಕೊಟ್ಟು ಕೊಟ್ಟ ಮಹಾ ನಾಯಕ 
ಡಾಕ್ಟರ್ ಬಿ ಆರ್ ಅಂಬೇಡ್ಕರ್ 
💐❤️💐👍
    user_ಎಂ ಆರ್ ಮಹದೇವ್ ಕಟ್ಟಡ ಕಾರ್ಮಿಕ ಅಧ
    ಎಂ ಆರ್ ಮಹದೇವ್ ಕಟ್ಟಡ ಕಾರ್ಮಿಕ ಅಧ
    Construction Worker ಯಲಹಂಕ, ಬೆಂಗಳೂರು ನಗರ, ಕರ್ನಾಟಕ•
    21 hrs ago
  • ಮಲ್ಲೋಹಳ್ಳಿ ರಂಗನಾಥ ಸ್ವಾಮಿ ದೇವಾಲಯಕ್ಕೆ ಅಧಿಕಾರಿಗಳ ಬೀಗ ಬುಧವಾರ ರಾತ್ರಿ ಏಕಾಏಕಿ ಬೀಗ ಹಾಕಿದ ಕಂದಾಯ ಇಲಾಖೆ ಅಧಿಕಾರಿಗಳು! ಮಲ್ಲೋಹಳ್ಳಿ ರಂಗನಾಥ ಸ್ವಾಮಿ ದೇವಾಲಯಕ್ಕೆ ಅಧಿಕಾರಿಗಳ ಬೀಗ ಬುಧವಾರ ರಾತ್ರಿ ಏಕಾಏಕಿ ಬೀಗ ಹಾಕಿದ ಕಂದಾಯ ಇಲಾಖೆ ಅಧಿಕಾರಿಗಳು! ಪುರಾತನ ದೇವಾಲಯದ ಬಾಗಿಲು ಮುಚ್ಚಿದ್ದಕ್ಕೆ ಭಕ್ತರ ಆಕ್ರೋಶ! ನಾಲ್ಕು ಅರ್ಚಕರ ಕುಟುಂಬಗಳ ಪೂಜಾ ವಿಚಾರದಲ್ಲಿ ವಿವಾದ? ಒಂದು ವರ್ಷದ ಪೂಜಾ ಅವಧಿ ಆರು ತಿಂಗಳಿಗೆ ಇಳಿಸಿದ ಆರೋಪ! ಪ್ರಭಾವಿಗಳ ಒತ್ತಡಕ್ಕೆ ಮಣಿದ್ರಾ ಅಧಿಕಾರಿಗಅದು ಹಲವು ವರ್ಷಗಳ ಇತಿಹಾಸವಿರುವ ರಂಗನಾಥಸ್ವಾಮಿ ದೇವಾಲಯ. ಆ ದೇವಾಲಯಕ್ಕೆ ನಾಲ್ಕು ಅರ್ಚಕರ ಕುಟುಂಬ ವಿದ್ದು ವರ್ಷಕ್ಕೊಮ್ಮೆ ಒಬ್ಬ ಅರ್ಚಕರು ಪೂಜಾ ಕೈಂಕಾರ್ಯ ನೇರವೇರಿಸುತ್ತಿದ್ರು. ಆದ್ರೆ ಗ್ರಾಮದ ಪ್ರಭಾವಿಗಳು ಇದ್ದಕ್ಕಿದ್ದಂತೆ 6 ತಿಂಗಳಿಗೆ‌ ಒಬ್ಬರಂತೆ ಪೂಜೆಗೆ ಆದೇಶ ತಂದಿದ್ದು, ದೇವರ ದರ್ಶನಕ್ಕೆ ಬರುವ ಭಕ್ತರಿಗೆ ದೇವಾಲಯದ ಬಾಗಿಲೇ ಬಂದ್ ಆಗಿದೆ.. ನೂರಾರು ವರ್ಷಗಳ ಇತಿಹಾಸವಿರುವ ಪುರಾತನ ದೇವಾಲಯಕ್ಕೆ ಅಧಿಕಾರಿಗಳೇ ಬೀಗ ಹಾಕಿದ್ದು ದೇವಸ್ಥಾನದ ಬಳಿ ದೊಡ್ಡ ಹೈಡ್ರಾಮವೇ ನಡೆದಿದೆ. ಅಷ್ಟಕ್ಕೂ ರಂಗನಾಥ ಸ್ವಾಮಿ ದೇವಾಲಯದಲ್ಲಿ ನಡೆದಿದ್ದೇನು? ತೋರಿಸ್ತೀವಿ ನೋಡಿ .ದೇವಾಲಯದ ಬಾಗಿಲಿಗೆ ಬಿದ್ದಿರುವ ಬೀಗ....... ಆಕ್ರೋಶದಿಂದ ಕುದಿಯುತ್ತಿರುವ ಭಕ್ತರು...... ಸ್ಥಳದಲ್ಲಿ ಜಮಾಯಿಸಿರುವ ಗ್ರಾಮಸ್ಥರು.. ಹೌದು.. ಇಂತಹದೊಂದು ಬಿಗುವಿನ ವಾತಾವರಣಕ್ಕೆ ಸಾಕ್ಷಿಯಾಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಮಲ್ಲೋಹಳ್ಳಿ ಗ್ರಾಮದಲ್ಲಿ. ಅಂದಹಾಗೆ ಗ್ರಾಮದ ಪುರಾತನ ಶ್ರೀ ರಂಗನಾಥ ಸ್ವಾಮಿ ದೇವಾಲಯಕ್ಕೆ ಬುಧವಾರ ರಾತ್ರಿ ಕಂದಾಯ ಇಲಾಖೆ ಅಧಿಕಾರಿಗಳು ಏಕಾಏಕಿ ಬೀಗ ಹಾಕಿದ್ದಾರೆ ಎನ್ನಲಾಗಿದೆ.. ಯಾವುದೇ ಮುನ್ಸೂಚನೆ ನೀಡದೆ ದೇವಾಲಯದ ಬಾಗಿಲು ಮುಚ್ಚಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.. ಇನ್ನು ದೇವಾಲಯದ ಪೂಜಾ ವಿಚಾರವೇ ಈ ಎಲ್ಲಾ ಗೊಂದಲಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.. ನಾಲ್ಕು ಕುಟುಂಬಗಳ ಅರ್ಚಕರು ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದು, ಈ ಕುಟುಂಬಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬುದು ಗ್ರಾಮಸ್ಥರ ಸ್ಪಷ್ಟನೆ.. ಆದರೆ ಪ್ರಭಾವಿ ವ್ಯಕ್ತಿಗಳು ಮುಜರಾಯಿ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಒಂದು ವರ್ಷದ ಪೂಜಾ ಅವಧಿಯನ್ನು ಆರು ತಿಂಗಳಿಗೆ ಕಡಿತಗೊಳಿಸುವ ಆದೇಶ ತಂದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.. ಅಲ್ಲದೆ ದೇವಾಲಯದ ಚಿನ್ನಾಭರಣಗಳು ಅರ್ಚಕರು ನಾಪತ್ತೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ‌ಬಂದಿದ್ದು ಇದೇ ವಿಚಾರವಾಗಿ ಅಧಿಕಾರಿಗಳು ದೇವಾಲಯಕ್ಕೆ ಬೀಗ ಹಾಕಿದ್ದಾರೆ ಎಂಬುದು ಭಕ್ತರ ಆರೋಪ. ಇನ್ನು ದೇವಾಲಯಕ್ಕೆ ಬೀಗ ಹಾಕಿರುವ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹಾಗೂ ಭಕ್ತರು ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ಹೊರಹಾಕಿದ್ದಾರೆ.. ದೇವಾಲಯದ ಬಾಗಿಲು ಕೂಡಲೇ ತೆರೆಯಬೇಕು.. ಭಕ್ತರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಕೆಲಸ ನಿಲ್ಲಬೇಕು.. ಏಕಾಏಕಿ ಬೀಗ ಹಾಕಿದ ರೆವಿನ್ಯೂ ಇನ್ಸ್‌ಪೆಕ್ಟರ್ ಅವರನ್ನು ಅಮಾನತು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.. ಇನ್ನು ಪ್ರತಿಭಟನೆ ವೇಳೆ ಗ್ರಾಮಸ್ಥರು ಹಾಗೂ ಅರ್ಚಕರ ನಡುವೆ ಮಾತಿನ ಚಕಮಕಿ ನಡೆದಿದೆ.. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪರಿಸ್ಥಿತಿ ನಿಯಂತ್ರಿಸಲು ಡಿವೈಎಸ್ಪಿ ಪಾಂಡುರಂಗ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ದೊಡ್ಡಬಳ್ಳಾಪುರ ಉಪವಿಭಾಗಧಿಕಾರಿ ಮಂಜುನಾಥ್ ಭೇಟಿ ನೀಡಿ ದೇವಾಲಯ ಬಾಗಿಲು ತೆರೆಸಿದ್ದು, ವಿವಾದ ಬಗೆಹರಿಯುವರೆಗೂ ಬೇರೆ ಅರ್ಚಕರನ್ನ ನೇಮಿಸುತ್ತಿದ್ದೇವೆ ಅಂತಾ ತಿಳಿಸಿದ್ದಾರೆ. ಒಟ್ಟಿನಲ್ಲಿ ಮೆಲ್ಲೊಹಳ್ಳಿ ರಂಗನಾಥಸ್ವಾಮಿ ದೇವಾಲಯ ಇದೀಗ ವಿವಾದದ ಕೇಂದ್ರಬಿಂದುವಾಗಿದ್ದು ಗ್ರಾಮದ ಕೆಲ ಪ್ರಭಾವಿಗಳು ಹಾಗೂ ಅರ್ಚಕರ ನಡುವಿನ ಮುಸುಕಿನ ಗುದ್ದಾಟ ತಾರಕ್ಕಕ್ಕೆರಿದೆ. ಸದ್ಯಕ್ಕೆ ದೇವಾಲಯ ಬಾಗಿಲು ತೆರೆದು ಬೇರೆ ಅರ್ಚಕರಿಗೆ ಪೂಜೆ ಪುನಸ್ಕಾರಕ್ಕೆ ಜಿಲ್ಲಾಡಳಿತ ನೇಮಕ ಮಾಡಲಾಗಿದ್ದು, ಮುಂದೆ ದೇವಾಲಯ ವಿವಾದ ಯಾವ ಸ್ವರೂಪ ಪಡೆಯಲಿದೆ ಅನ್ನೋದು ಕಾದು‌ನೋಡಬೇಕಿದೆ.
    4
    ಮಲ್ಲೋಹಳ್ಳಿ ರಂಗನಾಥ ಸ್ವಾಮಿ ದೇವಾಲಯಕ್ಕೆ ಅಧಿಕಾರಿಗಳ ಬೀಗ
ಬುಧವಾರ ರಾತ್ರಿ ಏಕಾಏಕಿ ಬೀಗ ಹಾಕಿದ ಕಂದಾಯ ಇಲಾಖೆ ಅಧಿಕಾರಿಗಳು!
ಮಲ್ಲೋಹಳ್ಳಿ ರಂಗನಾಥ ಸ್ವಾಮಿ ದೇವಾಲಯಕ್ಕೆ ಅಧಿಕಾರಿಗಳ ಬೀಗ
ಬುಧವಾರ ರಾತ್ರಿ ಏಕಾಏಕಿ ಬೀಗ ಹಾಕಿದ ಕಂದಾಯ ಇಲಾಖೆ ಅಧಿಕಾರಿಗಳು!
ಪುರಾತನ ದೇವಾಲಯದ ಬಾಗಿಲು ಮುಚ್ಚಿದ್ದಕ್ಕೆ ಭಕ್ತರ ಆಕ್ರೋಶ!
ನಾಲ್ಕು ಅರ್ಚಕರ ಕುಟುಂಬಗಳ ಪೂಜಾ ವಿಚಾರದಲ್ಲಿ ವಿವಾದ?
ಒಂದು ವರ್ಷದ ಪೂಜಾ ಅವಧಿ ಆರು ತಿಂಗಳಿಗೆ ಇಳಿಸಿದ ಆರೋಪ!
ಪ್ರಭಾವಿಗಳ ಒತ್ತಡಕ್ಕೆ ಮಣಿದ್ರಾ ಅಧಿಕಾರಿಗಅದು ಹಲವು ವರ್ಷಗಳ ಇತಿಹಾಸವಿರುವ ರಂಗನಾಥಸ್ವಾಮಿ ದೇವಾಲಯ. ಆ ದೇವಾಲಯಕ್ಕೆ ನಾಲ್ಕು ಅರ್ಚಕರ ಕುಟುಂಬ ವಿದ್ದು ವರ್ಷಕ್ಕೊಮ್ಮೆ ಒಬ್ಬ ಅರ್ಚಕರು ಪೂಜಾ ಕೈಂಕಾರ್ಯ ನೇರವೇರಿಸುತ್ತಿದ್ರು. ಆದ್ರೆ ಗ್ರಾಮದ ಪ್ರಭಾವಿಗಳು ಇದ್ದಕ್ಕಿದ್ದಂತೆ 6 ತಿಂಗಳಿಗೆ‌ ಒಬ್ಬರಂತೆ ಪೂಜೆಗೆ ಆದೇಶ ತಂದಿದ್ದು, ದೇವರ ದರ್ಶನಕ್ಕೆ ಬರುವ ಭಕ್ತರಿಗೆ ದೇವಾಲಯದ ಬಾಗಿಲೇ ಬಂದ್ ಆಗಿದೆ.. ನೂರಾರು ವರ್ಷಗಳ ಇತಿಹಾಸವಿರುವ ಪುರಾತನ ದೇವಾಲಯಕ್ಕೆ ಅಧಿಕಾರಿಗಳೇ ಬೀಗ ಹಾಕಿದ್ದು ದೇವಸ್ಥಾನದ ಬಳಿ ದೊಡ್ಡ ಹೈಡ್ರಾಮವೇ ನಡೆದಿದೆ. ಅಷ್ಟಕ್ಕೂ  ರಂಗನಾಥ ಸ್ವಾಮಿ ದೇವಾಲಯದಲ್ಲಿ ನಡೆದಿದ್ದೇನು? ತೋರಿಸ್ತೀವಿ ನೋಡಿ
.ದೇವಾಲಯದ ಬಾಗಿಲಿಗೆ ಬಿದ್ದಿರುವ ಬೀಗ....... ಆಕ್ರೋಶದಿಂದ ಕುದಿಯುತ್ತಿರುವ ಭಕ್ತರು...... ಸ್ಥಳದಲ್ಲಿ ಜಮಾಯಿಸಿರುವ ಗ್ರಾಮಸ್ಥರು.. ಹೌದು.. ಇಂತಹದೊಂದು ಬಿಗುವಿನ ವಾತಾವರಣಕ್ಕೆ ಸಾಕ್ಷಿಯಾಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಮಲ್ಲೋಹಳ್ಳಿ ಗ್ರಾಮದಲ್ಲಿ. ಅಂದಹಾಗೆ ಗ್ರಾಮದ ಪುರಾತನ ಶ್ರೀ ರಂಗನಾಥ ಸ್ವಾಮಿ ದೇವಾಲಯಕ್ಕೆ ಬುಧವಾರ ರಾತ್ರಿ ಕಂದಾಯ ಇಲಾಖೆ ಅಧಿಕಾರಿಗಳು ಏಕಾಏಕಿ ಬೀಗ ಹಾಕಿದ್ದಾರೆ ಎನ್ನಲಾಗಿದೆ.. ಯಾವುದೇ ಮುನ್ಸೂಚನೆ ನೀಡದೆ ದೇವಾಲಯದ ಬಾಗಿಲು ಮುಚ್ಚಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ..
ಇನ್ನು ದೇವಾಲಯದ ಪೂಜಾ ವಿಚಾರವೇ ಈ ಎಲ್ಲಾ ಗೊಂದಲಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.. ನಾಲ್ಕು ಕುಟುಂಬಗಳ ಅರ್ಚಕರು ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದು, ಈ ಕುಟುಂಬಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬುದು ಗ್ರಾಮಸ್ಥರ ಸ್ಪಷ್ಟನೆ..
ಆದರೆ ಪ್ರಭಾವಿ ವ್ಯಕ್ತಿಗಳು ಮುಜರಾಯಿ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಒಂದು ವರ್ಷದ ಪೂಜಾ ಅವಧಿಯನ್ನು ಆರು ತಿಂಗಳಿಗೆ ಕಡಿತಗೊಳಿಸುವ ಆದೇಶ ತಂದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.. ಅಲ್ಲದೆ ದೇವಾಲಯದ ಚಿನ್ನಾಭರಣಗಳು ಅರ್ಚಕರು ನಾಪತ್ತೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ‌ಬಂದಿದ್ದು
ಇದೇ ವಿಚಾರವಾಗಿ ಅಧಿಕಾರಿಗಳು ದೇವಾಲಯಕ್ಕೆ ಬೀಗ ಹಾಕಿದ್ದಾರೆ ಎಂಬುದು ಭಕ್ತರ ಆರೋಪ.
ಇನ್ನು ದೇವಾಲಯಕ್ಕೆ ಬೀಗ ಹಾಕಿರುವ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹಾಗೂ ಭಕ್ತರು ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ಹೊರಹಾಕಿದ್ದಾರೆ.. ದೇವಾಲಯದ ಬಾಗಿಲು ಕೂಡಲೇ ತೆರೆಯಬೇಕು.. ಭಕ್ತರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಕೆಲಸ ನಿಲ್ಲಬೇಕು.. ಏಕಾಏಕಿ ಬೀಗ ಹಾಕಿದ ರೆವಿನ್ಯೂ ಇನ್ಸ್‌ಪೆಕ್ಟರ್ ಅವರನ್ನು ಅಮಾನತು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ..
ಇನ್ನು ಪ್ರತಿಭಟನೆ ವೇಳೆ ಗ್ರಾಮಸ್ಥರು ಹಾಗೂ ಅರ್ಚಕರ ನಡುವೆ ಮಾತಿನ ಚಕಮಕಿ ನಡೆದಿದೆ.. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪರಿಸ್ಥಿತಿ ನಿಯಂತ್ರಿಸಲು ಡಿವೈಎಸ್ಪಿ ಪಾಂಡುರಂಗ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ದೊಡ್ಡಬಳ್ಳಾಪುರ ಉಪವಿಭಾಗಧಿಕಾರಿ ಮಂಜುನಾಥ್ ಭೇಟಿ ನೀಡಿ ದೇವಾಲಯ ಬಾಗಿಲು ತೆರೆಸಿದ್ದು, ವಿವಾದ ಬಗೆಹರಿಯುವರೆಗೂ ಬೇರೆ ಅರ್ಚಕರನ್ನ ನೇಮಿಸುತ್ತಿದ್ದೇವೆ ಅಂತಾ ತಿಳಿಸಿದ್ದಾರೆ.
ಒಟ್ಟಿನಲ್ಲಿ ಮೆಲ್ಲೊಹಳ್ಳಿ ರಂಗನಾಥಸ್ವಾಮಿ ದೇವಾಲಯ ಇದೀಗ ವಿವಾದದ ಕೇಂದ್ರಬಿಂದುವಾಗಿದ್ದು ಗ್ರಾಮದ ಕೆಲ ಪ್ರಭಾವಿಗಳು ಹಾಗೂ ಅರ್ಚಕರ ನಡುವಿನ ಮುಸುಕಿನ ಗುದ್ದಾಟ ತಾರಕ್ಕಕ್ಕೆರಿದೆ. ಸದ್ಯಕ್ಕೆ ದೇವಾಲಯ ಬಾಗಿಲು ತೆರೆದು ಬೇರೆ ಅರ್ಚಕರಿಗೆ ಪೂಜೆ ಪುನಸ್ಕಾರಕ್ಕೆ ಜಿಲ್ಲಾಡಳಿತ ನೇಮಕ ಮಾಡಲಾಗಿದ್ದು, ಮುಂದೆ ದೇವಾಲಯ ವಿವಾದ ಯಾವ ಸ್ವರೂಪ ಪಡೆಯಲಿದೆ ಅನ್ನೋದು ಕಾದು‌ನೋಡಬೇಕಿದೆ.
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    13 hrs ago
  • ಕೆ ಆರ್ ಪುರ ಪೊಲೀಸರ ಕಾರ್ಯಚರಣೆ ಒಂಟಿ ಮಹಿಳೆಯನ್ನ ಸುಲಿಗೆ ಮಾಡಿದ್ದ ಆರೋಪಿ ಬಂಧನ ಕೆ ಆರ್ ಪುರ ಪೊಲೀಸರ ಕಾರ್ಯಚರಣೆ ಒಂಟಿ ಮಹಿಳೆಯನ್ನ ಸುಲಿಗೆ ಮಾಡಿದ್ದ ಆರೋಪಿ ಬಂಧನ ಮೊಬೈಲ್ ಕಳ್ಳತನ ವೇಳೆ ಮಹಿಳೆ ಕಿರುಚಿಕೊಂಡಿದ್ದ ಹಿನ್ನಲೆ ಆರೋಪಿ ಕಲ್ಲಿನಿಂದ ಮಹಿಳೆಯನ್ನ ಹಲ್ಲೆ ಮಾಡಿದ್ದ ಬಾಬು ಬಂಧಿತ ಆರೋಪಿ ಓಲ್ಡ್ ಮದ್ರಾಸ್ ರಸ್ತೆಯ ಮೇಡಹಳ್ಳಿ ಬಿಡ್ಜ್ ಬಳಿ ಸ್ಕೈವಾಕ್ ಹತ್ತಿರ ಮೊಬೈಲ್ ಕಳ್ಳತನಕ್ಕೆ ಯತ್ನ ಮಹಿಳೆ ಕಿರುಚಿಕೊಂಡ ಹಿನ್ನಲೆ ಇಬ್ಬರು ಮಹಿಳೆಯ ಸಹಾಯಕ್ಕೆ ಬಂದು ಮಹಿಳೆಗೆ ಸಹಾಯ ಮಾಡಿದ್ದ ಯುವಕರು ಕೆ ಆರ್ ಪುರ ಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ
    1
    ಕೆ ಆರ್ ಪುರ ಪೊಲೀಸರ ಕಾರ್ಯಚರಣೆ 
ಒಂಟಿ ಮಹಿಳೆಯನ್ನ ಸುಲಿಗೆ ಮಾಡಿದ್ದ ಆರೋಪಿ ಬಂಧನ
ಕೆ ಆರ್ ಪುರ ಪೊಲೀಸರ ಕಾರ್ಯಚರಣೆ 
ಒಂಟಿ ಮಹಿಳೆಯನ್ನ ಸುಲಿಗೆ ಮಾಡಿದ್ದ ಆರೋಪಿ ಬಂಧನ
ಮೊಬೈಲ್ ಕಳ್ಳತನ ವೇಳೆ ಮಹಿಳೆ ಕಿರುಚಿಕೊಂಡಿದ್ದ ಹಿನ್ನಲೆ 
ಆರೋಪಿ ಕಲ್ಲಿನಿಂದ ಮಹಿಳೆಯನ್ನ ಹಲ್ಲೆ ಮಾಡಿದ್ದ
ಬಾಬು ಬಂಧಿತ ಆರೋಪಿ 
ಓಲ್ಡ್ ಮದ್ರಾಸ್ ರಸ್ತೆಯ ಮೇಡಹಳ್ಳಿ ಬಿಡ್ಜ್  ಬಳಿ ಸ್ಕೈವಾಕ್ ಹತ್ತಿರ ಮೊಬೈಲ್ ಕಳ್ಳತನಕ್ಕೆ ಯತ್ನ
ಮಹಿಳೆ ಕಿರುಚಿಕೊಂಡ ಹಿನ್ನಲೆ ಇಬ್ಬರು ಮಹಿಳೆಯ ಸಹಾಯಕ್ಕೆ ಬಂದು ಮಹಿಳೆಗೆ ಸಹಾಯ ಮಾಡಿದ್ದ ಯುವಕರು
ಕೆ ಆರ್ ಪುರ ಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ
    user_Asha N
    Asha N
    Bengaluru Urban, Karnataka•
    11 hrs ago
  • ನ್ಯಾಯಾಲಯದ ಆವರಣದಲ್ಲೇ ಕೊಲೆ ಆರೋಪಿಗೆ ಭೀಕರ ದಾಳಿ ಗುಂಡಿನ ದಾಳಿ ಬಳಿಕ ಮಚ್ಚಿನಿಂದ ಹಲ್ಲೆ; ಗಂಭೀರ ಗಾಯಗೊಂಡ ಆರೋಪಿ ಆಸ್ಪತ್ರೆಗೆ ದಾಖಲು ನ್ಯಾಯಾಲಯದ ಆವರಣದಲ್ಲೇ ಕೊಲೆ ಆರೋಪಿಗೆ ಭೀಕರ ದಾಳಿ ಗುಂಡಿನ ದಾಳಿ ಬಳಿಕ ಮಚ್ಚಿನಿಂದ ಹಲ್ಲೆ; ಗಂಭೀರ ಗಾಯಗೊಂಡ ಆರೋಪಿ ಆಸ್ಪತ್ರೆಗೆ ದಾಖಲು
    1
    ನ್ಯಾಯಾಲಯದ ಆವರಣದಲ್ಲೇ ಕೊಲೆ ಆರೋಪಿಗೆ ಭೀಕರ ದಾಳಿ
ಗುಂಡಿನ ದಾಳಿ ಬಳಿಕ ಮಚ್ಚಿನಿಂದ ಹಲ್ಲೆ; ಗಂಭೀರ ಗಾಯಗೊಂಡ ಆರೋಪಿ ಆಸ್ಪತ್ರೆಗೆ ದಾಖಲು
ನ್ಯಾಯಾಲಯದ ಆವರಣದಲ್ಲೇ ಕೊಲೆ ಆರೋಪಿಗೆ ಭೀಕರ ದಾಳಿ
ಗುಂಡಿನ ದಾಳಿ ಬಳಿಕ ಮಚ್ಚಿನಿಂದ ಹಲ್ಲೆ; ಗಂಭೀರ ಗಾಯಗೊಂಡ ಆರೋಪಿ ಆಸ್ಪತ್ರೆಗೆ ದಾಖಲು
    user_Veega News Kannada
    Veega News Kannada
    Software company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    8 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.