Shuru
Apke Nagar Ki App…
*ವರುಣನ ಆರ್ಭಟ : ಶುಚಿಗೊಂಡ ಲಕ್ಷ್ಮೀಸಾಗರದ ಶ್ರೀ ಚಾಮುಂಡೇಶ್ವರಿ ದೇವಾಲಯ* ಕೋಲಾರ:ಅನಾದಿಕಾಲದಿಂದಲೂ ಪ್ರತಿವರ್ಷವೂ ಕೋಲಾರ ತಾಲ್ಲೂಕು ನರಸಾಪುರ ಹೋಬಳಿಯ ಲಕ್ಷ್ಮೀಸಾಗರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ಜನ್ಮದಿನೋತ್ಸವದ ಮರುದಿನ ವರುಣನ ಕೃಪೆಯಿಂದ ಮಳೆ ಸುರಿದು ದೇವಾಲಯ ಸುತ್ತಲೂ ಸ್ವಚ್ಛ ಗೊಳಿಸುವ ಕೆಲಸ ಆಗುತ್ತದೆ ಎಂದು ದೇವಾಲಯದ ಧರ್ಮಾಧಿಕಾರಿಗಳಾದ ಚಂದ್ರು ತಿಳಿಸಿದ್ದಾರೆ. ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ದೇವಾಲಯದ ಸುತ್ತಲೂ ಕಸ ಕಡ್ಡಿ,ಊಟ ತಿಂದ ಗಲೀಜು,ಊಟದ ತಟ್ಟೆಗಳಿಂದ ಮೈಲಿಗೆ ಆಗುತ್ತದೆ ಆದರೆ ದೇವಿಯ ಕೃಪೆಯಿಂದ ವರುಣ ದೇವರ ಆಶೀರ್ವಾದದಿಂದ ಪ್ರತಿ ವರ್ಷ ಯಾರಿಗೂ ಕಷ್ಟ ಆಗದಂತೆ ತನ್ನ ದೇವಾಲಯ ಸುಚಿಗೊಳಿಸುವ ಕೆಲಸವನ್ನು ಆ ಮಹಾತಾಯಿ ಚಾಮುಂಡೇಶ್ವರಿ ಮಾಡುತ್ತಾಳೆ ಎಂದು ವಿವರಿಸಿದರು.
ಎಸ್.ಎನ್.ಪ್ರಕಾಶ್
*ವರುಣನ ಆರ್ಭಟ : ಶುಚಿಗೊಂಡ ಲಕ್ಷ್ಮೀಸಾಗರದ ಶ್ರೀ ಚಾಮುಂಡೇಶ್ವರಿ ದೇವಾಲಯ* ಕೋಲಾರ:ಅನಾದಿಕಾಲದಿಂದಲೂ ಪ್ರತಿವರ್ಷವೂ ಕೋಲಾರ ತಾಲ್ಲೂಕು ನರಸಾಪುರ ಹೋಬಳಿಯ ಲಕ್ಷ್ಮೀಸಾಗರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ಜನ್ಮದಿನೋತ್ಸವದ ಮರುದಿನ ವರುಣನ ಕೃಪೆಯಿಂದ ಮಳೆ ಸುರಿದು ದೇವಾಲಯ ಸುತ್ತಲೂ ಸ್ವಚ್ಛ ಗೊಳಿಸುವ ಕೆಲಸ ಆಗುತ್ತದೆ ಎಂದು ದೇವಾಲಯದ ಧರ್ಮಾಧಿಕಾರಿಗಳಾದ ಚಂದ್ರು ತಿಳಿಸಿದ್ದಾರೆ. ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ದೇವಾಲಯದ ಸುತ್ತಲೂ ಕಸ ಕಡ್ಡಿ,ಊಟ ತಿಂದ ಗಲೀಜು,ಊಟದ ತಟ್ಟೆಗಳಿಂದ ಮೈಲಿಗೆ ಆಗುತ್ತದೆ ಆದರೆ ದೇವಿಯ ಕೃಪೆಯಿಂದ ವರುಣ ದೇವರ ಆಶೀರ್ವಾದದಿಂದ ಪ್ರತಿ ವರ್ಷ ಯಾರಿಗೂ ಕಷ್ಟ ಆಗದಂತೆ ತನ್ನ ದೇವಾಲಯ ಸುಚಿಗೊಳಿಸುವ ಕೆಲಸವನ್ನು ಆ ಮಹಾತಾಯಿ ಚಾಮುಂಡೇಶ್ವರಿ ಮಾಡುತ್ತಾಳೆ ಎಂದು ವಿವರಿಸಿದರು.
More news from ಕರ್ನಾಟಕ and nearby areas
- ಕೆ.ಜಿ.ಎಫ್. ನಗರಸಭೆ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪುತ್ಥಳಿ ಅನಾವರಣ ಕೆ.ಜಿ.ಎಫ್: ನಗರಸಭೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭವ್ಯ ಕಂಚಿನ ಪುತ್ಥಳಿಯನ್ನು ಇಂದು ಶಾಸಕರಾದ ಶ್ರೀಮತಿ ರೂಪಕಲಾ ಎಂ. ಶಶಿಧರ್ ಅವರು ಅಧಿಕೃತವಾಗಿ ಅನಾವರಣಗೊಳಿಸಿದರು. ನಗರಸಭೆ ಆವರಣದಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ಕೆ.ಜಿ.ಎಫ್ ಶಾಸಕಿ ರೂಪಕಲಾ ಎಂ. ಶಶಿಧರ್ ಅವರು ಪುತ್ಥಳಿಗೆ ಮಾಲಾರ್ಪಣೆ ಮಾಡಿ, ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, "ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳು ಹಾಗೂ ತತ್ವಗಳು ಸಾರ್ವಕಾಲಿಕ. ಕೆ.ಜಿ.ಎಫ್ ನಗರಸಭೆ ಆವರಣದಲ್ಲಿ ಸ್ಥಾಪನೆಗೊಂಡಿರುವ ಈ ಕಂಚಿನ ಪುತ್ಥಳಿಯು ಸದಾ ಅವರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ನೆನಪಿಸಲಿದೆ" ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನಗರಸಭೆಯ ಜನಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.1
- ಶಾಸಕ ಶರತ್ ಬಚ್ಚೇಗೌಡ ಗೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಶಾಸಕ ಶರತ್ ಬಚ್ಚೇಗೌಡ ಬೇಸರ ಶಾಸಕ ಶರತ್ ಬಚ್ಚೇಗೌಡ ಗೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಶಾಸಕ ಶರತ್ ಬಚ್ಚೇಗೌಡ ಬೇಸರ ಹೊರಹಾಕಿದ್ದಾರೆ. ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಕಿಯೋನಿಕ್ಸ್ ನಿಗಮ ಮಂಡಳಿ ಬೇಡ ಬೇರೆಯವರಿಗೆ ಅವಕಾಶ ಮಾಡಿಕೊಡಿ ಅಂತ ಶರತ್ ಬೇಸರ ಹೊರಹಾಕಿದ್ದಾರೆ. ನಿಗಮ ಮಂಡಳಿಯ ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರಿನಲ್ಲಿ ಒಡಾಟ ನಡೆಸ್ತಿದ್ದು,ನಾನು 2.5 ತಿಂಗಳಿಂದ ಸಚಿವ ಸ್ಥಾನಕ್ಕೆ ಪ್ರಯತ್ನ ನಡೆಸಿದ್ದೆ. ಆದ್ರೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿದೆ ಸಹಜವಾಗೆ ನನಗೂ ಬೇಸರವಾಗಿದೆ. ಬೇಸರವಾಗಿದೆ ಅಷ್ಟೆ ಆದ್ರೆ ಅಸಮಧಾನವಿಲ್ಲ. ಮೂರು ವರ್ಷ ಸರ್ಕಾರದಲ್ಲಿ ನಾನು ಶಾಸಕನಾಗಿ ಕೆಲಸ ಮಾಡಿದ್ದೀನಿ ಸಾಕು. ಸಿಎಂ ನಿಗಮ ಮಂಡಳಿ ರಿಶಪಲ್ ಮಾಡ್ತೀನಿ ಅಂತ ಹೇಳಿದ್ದಾರೆ. ಅವರು ರೀ ಶಪಲ್ ಮಾಡಲಿ ಹೊಸಬರಿಗೆ ಅವಕಾಶ ಮಾಡಿಕೊಡಲಿ. ಬೇರೆ ಬೇರೆಯವರಿಗೆ ಅವಕಾಶ ಕೊಡಲಿ ಅಧಿಕಾರ ಯಾರೋಬ್ಬರ ಸ್ವತ್ತಲ್ಲ. ನಿಗಮ ಮಂಡಳಿ ಬೇಕು ಅಂತಲು ಹೇಳಲ್ಲ ಬೇಡ ಅಂತಲು ಹೇಳಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಅಸಮಾಧಾನ ಹೊರಹಾಕಿದ್ದಾರೆ.1
- ಅಮಾಯಕ ಬಡವರ ಹೊಟ್ಟೆ ಮೇಲೆ ಹೊಡೆದು ಸರ್ಕಾರಕ್ಕೆ ಏನು ಸಿಕ್ಕಿತೋ ಗೊತ್ತಿಲ್ಲ ಅಮಾಯಕ ಬಡವರ ಹೊಟ್ಟೆ ಮೇಲೆ ಹೊಡೆದು ಸರ್ಕಾರಕ್ಕೆ ಏನು ಸಿಕ್ಕಿತೋ ಗೊತ್ತಿಲ್ಲ1
- ಕುಣಿಗಲ್ :ತಾಲೂಕು ಜೋಡಿ ಹೊಸಹಳ್ಳಿ ಗ್ರಾಮದ ಲಕ್ಷ್ಮೀ ದೇವರ ದೇವಾಲಯಕ್ಕೆ ಭೇಟಿ ನೀಡಿದ ನೂತನ ಸಚಿವರಾದ ಮಾಗಡಿ ವಿಧಾನ ಸಭಾಕ್ಷೇತ್ರ ಹೆಚ್ ಸಿ ಬಾಲಕೃಷ್ಣ ಮತ್ತು ಕುಣಿಗಲ್ ವಿಧಾನ ಸಭಾ ಕ್ಷೇತ್ರ ಹೆಚ್. ಡಿ. ರಂಗನಾಥ್ ಕುಣಿಗಲ್ ತಾಲೂಕು ಹುತ್ರಿದುರ್ಗ ಹೋಬಳಿ ಜೋಡಿ ಹೊಸಹಳ್ಳಿ ಗ್ರಾಮದ ಲಕ್ಷ್ಮೀ ದೇವರ ದೇವಾಲಯಕ್ಕೆ ಭೇಟಿ ನೀಡಿ ಅವರು ಲಿಂಕ್ ಕೆನಾಲ್ ಕಾಮಗಾರಿ ಮಾಡೇ ಮಾಡ್ತೀವಿ ಎಂದು ಹೇಳಿದರು1
- ಲಿಂಕ್ ಕೆನಾಲ್ ಕಾಮಗಾರಿ ಬಿಡುವ ಪ್ರಶ್ನೆಯೇ ಇಲ್ಲ ಮಾಡಿಯೇ ತೀರುತ್ತೇವೆ ನೂತನ ಸಚಿವ ಹೆಚ್ ಸಿ ಬಾಲಕೃಷ್ಣ ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿಯ ಜೋಡಿ ಹೊಸಳ್ಳಿ ಗ್ರಾಮದ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿದ ನೂತನ ಸಚಿವರಾದ ಹೆಚ್ ಸಿ ಬಾಲಕೃಷ್ಣ , ಶಾಸಕ ಡಾಕ್ಟರ್ ಎಚ್ ಡಿ ರಂಗನಾಥ್, ಯಾವುದೆ ಖಾತೆ ಕೊಟ್ಟರು ನಿಭಾಯಿಸುವೆ ಎಂದು ನೂತನ ಸಚಿವ ಹೆಚ್.ಸಿ ಬಾಲಕೃಷ್ಣ ತಿಳಿಸಿದರು. ಲಿಂಕ್ ಕೆನಾಲ್ ಯೋಜನೆಯ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.1
- ದೇವನಹಳ್ಳಿಯಲ್ಲಿ ಕೋಲಾರದ ಶಾಸಕರಿಗೆ ಸಚಿವ ಕೆ.ಹೆಚ್.ಮುನಿಯಪ್ಪ ತಿರುಗೇಟು ಬೆಂಗಳೂರು:ಕೋಲಾರ ಶಾಸಕರಿಗೆ ಮಂತ್ರಿಸ್ಥಾನ ಸಿಗದಿದಕ್ಕೆ ಸಚಿವ ಕೆ.ಹೆಚ್.ಮುನಿಯಪ್ಪ ಮೇಲೆ ಶಾಸಕರು ಆರೋಪ ಮಾಡಿದ್ದಾರೆ.ನಮಗೆ ಮಂತ್ರಿಸ್ಥಾನ ಸಿಗದೆ ಇರಲು ನಮ್ಮ ಮಾಜಿ ಸಂಸದ ಪಾತ್ರ ಇದೆ ಎಂದು ಕೋಲಾರದ ಶಾಸಕರಿಗೆ ಸಚಿವ ಕೆ.ಹೆಚ್.ಮುನಿಯಪ್ಪ ತಿರುಗೇಟು ಕೊಟ್ಟಿದ್ದಾರೆ.ಅವರು ನನ್ನ ಬಂದು ಕೇಳಿಲ್ಲ, ಒಂದು ವೇಳೆ ಕೇಳಿದ್ರೆ ಹೈಕಮಾಂಡ್ ಬಳಿ ಮಾತಾಡ್ತಿದ್ದೆ,ಮುಖ್ಯಮಂತ್ರಿಗಳ ಬಳಿ, ಸಿದ್ರಾಮಣ್ಣ ಬಳಿ, ಹರಿಪ್ರಸಾದ್ ಬಳಿ ಹೇಳಬಹುದಾಗಿತ್ತು.ಯಾಕೆ ಅವ್ರು ಈಗೆ ಹೇಳ್ತಿದ್ದಾರೆ ಗೊತ್ತಿಲ್ಲ, ಕೇಳಿದ್ರೆ ನನ್ನ ಕರ್ತವ್ಯವಿತ್ತು,ನಾನು ಅವರನ್ನೆಲ್ಲಾ ಕರ್ಕೊಂಡು ಹೋಗಿ ಸೀನಿಯರ್ಸ್ ಇದ್ದಾರೆ, ಕೆಲಸ ಮಾಡಿದ್ದಾರೆ, ಕೊಡ್ಬೇಕು ಅಂತ ಒತ್ತಾಯ ಮಾಡ್ತಿದ್ದೆ,ಅವರ ಹತ್ತಿರ ಮಾತಾಡ್ತೀನಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಡಿಸಿ ಆಫೀಸ್ ಬಳಿ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿ ಹೊರಟರು.1
- DK ಶಿವಕುಮಾರ್ ಅವರನ್ನು ಮಾತನಾಡಲೂ ಬಿಡದ ದರ್ಶನ್ ಅಭಿಮಾನಿಗಳು DK ಶಿವಕುಮಾರ್ ಅವರನ್ನು ಮಾತನಾಡಲೂ ಬಿಡದ ದರ್ಶನ್ ಅಭಿಮಾನಿಗಳು1
- ಮುಖ್ಯಮಂತ್ರಿಯನ್ನ ಕೆಳಗಿಳಿಸುತ್ತಾರೆ ಸಿದ್ದರಾಮಯ್ಯ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕಾ ಪ್ರಹಾರ ನೂತನ ಮುಖ್ಯಮಂತ್ರಿ ಆಗಿರುವಂತಹ ಡಿ ಕೆ ಶಿವಕುಮಾರ್ ಅವರನ್ನು ಕೆಳಗೆ ಇಳಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಗುದ್ದಲಿ ಪೂಜೆಯನ್ನು ಮಾಡಿದ್ದು ಯಾವಾಗ ಬೇಕಾದರೂ ಬಿಡಿಸಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತುಮಕೂರಿನಲ್ಲಿ ಟೀ ಕಾ ಪ್ರಹಾರ ಮಾಡಿದ್ದಾರೆ1
- ಸರ್ಕಾರಿ ಬಸ್ ನಲ್ಲಿ ಹೃದಯ ಘಾತ ರಸ್ತೆಯಲ್ಲೇ ಆಸ್ಪತ್ರೆಗೆ ದಾಖಲು ತುಮಕೂರು ನಿಂದ ಶಿರಾ ಭಾಗಕ್ಕೆ ತೆರಳುತ್ತಿದ್ದಂತಹ ಸರ್ಕಾರಿ ಬಸ್ಸಿನಲ್ಲಿ ಪ್ಯಾಸೆಂಜರ್ ಒಬ್ಬರಿಗೆ ಹೃದಯಘಾತ ಕಾಣಿಸಿಕೊಂಡ ಕೂಡಲೇ ಬಸ್ ನಿಲ್ಲಿಸಿ ಸ್ಥಳದಲ್ಲೇ ಇದ್ದ ಪ್ರಯಾಣಕರು ಕೊಡಲೇ ಖಾಸಗಿ ಆಸ್ಪತ್ರೆಗೆ ಸೇರಿಸುವ ಮೂಲಕ ಜೀವ ಉಳಿಸುವ ಕೆಲಸ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.1