Shuru
Apke Nagar Ki App…
ಅಮಾಯಕ ಬಡವರ ಹೊಟ್ಟೆ ಮೇಲೆ ಹೊಡೆದು ಸರ್ಕಾರಕ್ಕೆ ಏನು ಸಿಕ್ಕಿತೋ ಗೊತ್ತಿಲ್ಲ ಅಮಾಯಕ ಬಡವರ ಹೊಟ್ಟೆ ಮೇಲೆ ಹೊಡೆದು ಸರ್ಕಾರಕ್ಕೆ ಏನು ಸಿಕ್ಕಿತೋ ಗೊತ್ತಿಲ್ಲ
Veega News Kannada
ಅಮಾಯಕ ಬಡವರ ಹೊಟ್ಟೆ ಮೇಲೆ ಹೊಡೆದು ಸರ್ಕಾರಕ್ಕೆ ಏನು ಸಿಕ್ಕಿತೋ ಗೊತ್ತಿಲ್ಲ ಅಮಾಯಕ ಬಡವರ ಹೊಟ್ಟೆ ಮೇಲೆ ಹೊಡೆದು ಸರ್ಕಾರಕ್ಕೆ ಏನು ಸಿಕ್ಕಿತೋ ಗೊತ್ತಿಲ್ಲ
More news from ಕರ್ನಾಟಕ and nearby areas
- ಅಮಾಯಕ ಬಡವರ ಹೊಟ್ಟೆ ಮೇಲೆ ಹೊಡೆದು ಸರ್ಕಾರಕ್ಕೆ ಏನು ಸಿಕ್ಕಿತೋ ಗೊತ್ತಿಲ್ಲ ಅಮಾಯಕ ಬಡವರ ಹೊಟ್ಟೆ ಮೇಲೆ ಹೊಡೆದು ಸರ್ಕಾರಕ್ಕೆ ಏನು ಸಿಕ್ಕಿತೋ ಗೊತ್ತಿಲ್ಲ1
- *ಕೋಲಾರ ನಗರದ ಗ್ರಾಮ ದೇವತೆ ಕೋಲಾರಮ್ಮನ ಜನ್ಮ ದಿನೋತ್ಸವ ಸಂಭ್ರಮದಿಂದ ಆಚರಣೆ* ಕೋಲಾರ : ನಗರ ದೇವತೆ ಕೋಲಾರಮ್ಮ ಜನ್ಮ ದಿನೋತ್ಸವ ಸಂಭ್ರಮ ಮನೆ ಮಾಡಿದೆ. ಕೋಲಾರದ ಶಕ್ತಿದೇವತೆ, ಮೈಸೂರು ಚಾಮುಂಡೇಶ್ವರಿ ದೇವಿಜನ್ಮಯ ಪ್ರತಿರೂಪವಾಗಿರುವ ಕೋಲಾರಮ್ಮನ ದರ್ಶನ ಮಾಡಲು ಜನ ಸಾಗರವೇ ಹರಿದು ಬಂದಿದೆ. ಕೋಲಾರಮ್ಮ ಜನ್ಮದಿನೋತ್ಸವ ಹಿನ್ನೆಲೆ ದೇವಾಲಯಕ್ಕೆ ಜನ ಸಾಗರ ಹರಿದು ಬಂದಿದ್ದು ಸರತಿ ಸಾಲಿನಲ್ಲಿ ನಿಂತು ಸಾವಿರಾರು ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ. ದೇವಾಲಯಕ್ಕೆ ಭಕ್ತರಿಂದ ಅದ್ದೂರಿ ಹೂವಿನ ಅಲಂಕಾರ ಮಾಡಲಾಗಿದೆ. ಅಮ್ಮನವರ ಜನ್ಮದಿನಾಚರಣೆ ಹಿನ್ನೆಲೆ ದೇವಾಲಯಕ್ಕೆ ಬರುವ ಮಹಿಳೆಯರಿಗೆ ಅರಿಸಿನ ಕುಂಕುಮ ಕೊಟ್ಟು ಸತ್ಕಾರ ಮಾಡಲಾಗುತ್ತಿದೆ. ಕೋಲಾರಮ್ಮ ಉತ್ಸವ ಮೂರ್ತಿಗೂ ಅದ್ದೂರಿ ಅಲಂಕಾರ ಮಾಡಲಾಗಿದೆ. ಇಲ್ಲಿನ ಕೋಟೆಯಲ್ಲಿರುವ ಕೋಲಾರಮ್ಮ ದೇವಸ್ಥಾನದಲ್ಲಿ ಇಂದು ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯ ನೆರವೇರಿದೆ. ಲಲಿತ ಸಹಸ್ರ ನಾಮ, ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿ ನಡೆಯಿತು. ಕೋಲಾರಮ್ಮ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನೆಲೆಸಿರುವ ಚಾಮುಂಡೇಶ್ವರಿಯ ಸಹೋದರಿ ಎಂದು ಹೇಳಲಾಗುತ್ತೆ. ಸುಮಾರು 4 ಅಡಿ ಎತ್ತರದ ಶಿಲೆಯಲ್ಲಿ ತಾಯಿಯ ರೂಪ ಅರಳಿದೆ. ಕೋಲಾರಮ್ಮ ದೇವಾಲಯದಲ್ಲಿ 5 ಅಡಿ ಎತ್ತರದ ಚೇಳೂರಮ್ಮ ದೇವಿ ಇದೆ. ಇದು ರಾಜ್ಯದಲ್ಲೇ ಅಪರೂಪದ ವಿಗ್ರಹವಾಗಿದೆ. ಮನೆಗಳಲ್ಲಿ ಕಾಣಿಸುವ ಚೇಳು, ಜರಿಗಳಂತಹ ವಿಷ ಜಂತುಗಳು ಅಪಾಯದಿಂದ ಪಾರಾಗಲು ಜನರು ಈ ದೇವಾಲಯಕ್ಕೆ ಬಂದು ಚೇಳೂರಮ್ಮನಿಗೆ ಹರಕೆ ಹೊತ್ತುಕೊಳ್ಳುತ್ತಾರೆ. ಕೋಲಾರಮ್ಮ ಜನ್ಮದಿನೋತ್ಸವ ಹಿನ್ನೆಲೆ ದೇವಾಲಯ ತುಂಬೆಲ್ಲ ಅಲಂಕಾರ ಮಾಡಲಾಗಿದ್ದು ಮುಂಜಾನೆಯಿಂದಲೂ ಭಕ್ತರು ಬಂದು ತಾಯಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ತಾಯಿಯನ್ನೂ ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿದ್ದು ದೇವಾಲಯದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.4
- ಲಿಂಕ್ ಕೆನಾಲ್ ಕಾಮಗಾರಿ ಬಿಡುವ ಪ್ರಶ್ನೆಯೇ ಇಲ್ಲ ಮಾಡಿಯೇ ತೀರುತ್ತೇವೆ ನೂತನ ಸಚಿವ ಹೆಚ್ ಸಿ ಬಾಲಕೃಷ್ಣ ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿಯ ಜೋಡಿ ಹೊಸಳ್ಳಿ ಗ್ರಾಮದ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿದ ನೂತನ ಸಚಿವರಾದ ಹೆಚ್ ಸಿ ಬಾಲಕೃಷ್ಣ , ಶಾಸಕ ಡಾಕ್ಟರ್ ಎಚ್ ಡಿ ರಂಗನಾಥ್, ಯಾವುದೆ ಖಾತೆ ಕೊಟ್ಟರು ನಿಭಾಯಿಸುವೆ ಎಂದು ನೂತನ ಸಚಿವ ಹೆಚ್.ಸಿ ಬಾಲಕೃಷ್ಣ ತಿಳಿಸಿದರು. ಲಿಂಕ್ ಕೆನಾಲ್ ಯೋಜನೆಯ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.1
- ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆ.ಜಿ.ಎಫ್.ನಲ್ಲಿ ಬಿಜೆಪಿ ಬೃಹತ್ ಧರಣಿ: ಮಾಜಿ ಶಾಸಕ ವೈ. ಸಂಪಂಗಿ ನೇತೃತ್ವದಲ್ಲಿ ಪ್ರತಿಭಟನೆ ಕೆ.ಜಿ.ಎಫ್: ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಆಡಳಿತ ವೈಫಲ್ಯವನ್ನು ಖಂಡಿಸಿ ಕೆ.ಜಿ.ಎಫ್. ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ವೈ. ಸಂಪಂಗಿ ಅವರ ನೇತೃತ್ವದಲ್ಲಿ ಸಾವಿರಾರು ಸಾರ್ವಜನಿಕರೊಂದಿಗೆ ಬೃಹತ್ ಧರಣಿ ಮತ್ತು ಪ್ರತಿಭಟನಾ ಪ್ರದರ್ಶನ ಯಶಸ್ವಿಯಾಗಿ ನೆರವೇರಿತು. ಕ್ಷೇತ್ರದಲ್ಲಿ ಸುಮಾರು 14,500 ಅರ್ಹರ ಪಿಂಚಣಿ ರದ್ದುಗೊಳಿಸಿರುವುದು, 4,000 ಬಿಪಿಎಲ್ ರೇಷನ್ ಕಾರ್ಡ್‌ಗಳನ್ನು ವಜಾಗೊಳಿಸಿರುವುದು ಹಾಗೂ ಕೆ.ಜಿ. ಕೋಟೆ ಸರ್ವೆ ನಂ. 121ರಲ್ಲಿನ ಸುಮಾರು 60 ಎಕರೆ ಬೆಲೆಬಾಳುವ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿರುವ ಗಂಭೀರ ಅಕ್ರಮಗಳ ವಿರುದ್ಧ ಈ ಬೃಹತ್ ಜನಾಂದೋಲನ ರೂಪಿಸಲಾಗಿತ್ತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ವೈ. ಸಂಪಂಗಿ, "ಇದು ಕೇವಲ ರಾಜಕೀಯ ಕಾರ್ಯಕ್ರಮವಲ್ಲ, ನೊಂದ ಬಡವರು, ಹಿರಿಯ ನಾಗರಿಕರು ಮತ್ತು ಮಹಿಳೆಯರ ಬದುಕಿನ ಹಕ್ಕನ್ನು ಉಳಿಸುವ ಹೋರಾಟ. ಕಾಂಗ್ರೆಸ್ ಸರ್ಕಾರದ ವೈಫಲ್ಯದಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳಿಗೆ ನ್ಯಾಯ ಸಿಗುವವರೆಗೆ ಬಿ.ಜೆ.ಪಿ. ತನ್ನ ಹೋರಾಟವನ್ನು ವಿಶ್ರಮಿಸುವುದಿಲ್ಲ" ಎಂದು ಎಚ್ಚರಿಸಿದರು. ಈ ಐತಿಹಾಸಿಕ ಹೋರಾಟದಲ್ಲಿ ಕೋಲಾರ ಜಿಲ್ಲಾಧ್ಯಕ್ಷರಾದ ಓಂ ಶಕ್ತಿ ಚಲಪತಿ, ಕೋಲಾರದ ಮಾಜಿ ಸಂಸದರಾದ ಎಸ್. ಮುನಿಸ್ವಾಮಿ, ಪ್ರಮುಖ ನಾಯಕರಾದ ಬ್ಯಾಟರಂಗೇಗೌಡ, ವಾಸುದೇವಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷರಾದ ಪ್ರವೀಣ್.ಎಸ್, ಗ್ರಾಮಾಂತರ ಅಧ್ಯಕ್ಷರಾದ ಸ್ವಾಮಿ, ನಗರಾಧ್ಯಕ್ಷರಾದ ಸುರೇಶ, ಅಪ್ಪಿ ಮಹೇಶ್, ಸುರೇಶ ಬಾಬಿ, ಸುರೇಶ ನಾರಾಯಣ ಕುಟ್ಟಿ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾವಿರಾರು ಸಾರ್ವಜನಿಕರು ಭಾಗವಹಿಸಿ ಬೆಂಬಲ ಸೂಚಿಸಿದರು.1
- ಮೈದುಂಬಿ ಧುಮುಕುತ್ತಿರುವ ಮಳವಳ್ಳಿ ತಾಲೂಕಿನ ಐತಿಹಾಸಿಕ ಗತ ವೈಭವ ಸಾರುವ ಗಗನಚುಕ್ಕಿ ಜಲಪಾತ ಪ್ರಕೃತಿ ಸೌಂದರ್ಯ ಸವಿಯಲು ಅರಿದು ಬರುತ್ತಿರುವ ಜನಸಾಗರ ಮೈದುಂಬಿ ದುಮುಕ್ಕುತ್ತಿರುವ ಗಗನಚುಕ್ಕಿ-ಜಲಪಾತ-ಪ್ರಕೃತಿ ಸೌಂಧರ್ಯ ಸವಿಯಲು ಹರಿದು ಬರುತ್ತಿರುವ ಜನಸಾಗರ ಮಳವಳ್ಳಿ.ತೀವ್ರ ಬರಗಾಲ ಮಳೆಯಿಲ್ಲದೆ ತತ್ತರಿಸಿ ಹೋಗಿ ನೀರಿಲ್ಲದೆ ಬಣಗುಡುತ್ತಿದ್ದ ಗತ ವೈಭವ ಸಾರುವ ತಾಲೂಕಿನ ಶಿವನಸಮುದ್ರಂನ ಗಗನಚುಕ್ಕಿ ಜಲಪಾತ ಮೈದುಂಬಿ ದುಮುಕ್ಕುತ್ತಿರುವುದು ಪ್ರಕೃತಿ ಸೌಂದರ್ಯವನ್ನು ಸವಿಯುವ ಪ್ರವಾಸಿಗರಿಗೆ ರಸದೌತಣ ನೀಡಿದೆ, ಕಾವೇರಿ ಉಗಮ ಪ್ರದೇಶಗಳಲ್ಲಿ ತೀವ್ರ ಮಳೆ ಕೆ.ಅರ್.ಎಸ್‌ನಿಂದ ಹೆಚ್ಚಿ ನೀರು ಬಿಡುಗಡೆ ಕಾವೇರಿ ಕಬಿನಿ ಕಪಿಲ ನದಿಗಳ ಹರಿವಿನಲ್ಲಿ ಹೆಚ್ಚಳದಿಂದ ನೀರಿನ ಬೋರ್ಗೆರೆತ ಹೆಚ್ಚಾಗಿದೆ, ಕಾವೇರಿ ಕಬಿನಿ ಮತ್ತು ಕೆ.ಆರ್.ಎಸ್‌ನಿಂದ ಹೆಚ್ಚಿನ ನೀರು ಬಿಟ್ಟಿರುವುದರಿಂದ ಕಾವೇರಿ ನದಿಯ ದಡಗಳು ನೀರಿನಿಂದ ಮುಳುಗಿದ್ದು ನೋಡಲು ಬರುವ ಪ್ರವಾಸಿಗರಿಗೆ ಈ ರಮಣೀಯ ದೃಶ್ಯ ಹಬ್ಬವಾಗಿದೆ. ಮೂಲ ಸೌಲಭ್ಯ :ಗಗನಚುಕ್ಕಿ ಜಲಪಾತ ನೋಡಲು ಬರುವ ಜನರಿಗೆ ಸೂಕ್ತ ಮೂಲಭೂತ ಸೌಲಭ್ಯ ಹಾಗೂ ವಾಹನ ನಿಲ್ದಾಣವಿದ್ದರೂ ನಿರ್ವಹಣೆ ಕೊರತೆಯಿದೆ. ಜನರು ವಾಹನಗಳನ್ನು ರಸ್ತೆಯ ಬದಿಯಲ್ಲಿ,ಜಮೀನುಗಳಲ್ಲಿ,ನಿಲ್ಲಿಸುವಂತಾಗಿದ್ದರಿAದ ವಾಹನಗಳು ಎಲ್ಲಿ ನೋಡಿದರೆ ಅಲ್ಲಿ ನಿಲ್ಲುತ್ತಿರುವುದರಿಂದ ಸಂಚಾರ ಸ್ಥಗಿತಗೊಂಡು ಜನರು ನೋಡಲು ಏಕೆ ಬಂದೆವೋ ಅನ್ನುವಷ್ಠು ಸಂಕಷ್ಠಕ್ಕೀಡಾಗಿದೆ. ಇದಲ್ಲದೆ ದೂರದ ಪ್ರದೇಶಗಳಿಂದ ಬರುವ ಪ್ರವಾಸಿಗರು ಗಗನಚುಕ್ಕಿ ನೋಡಲು ಬಂದು ಟ್ರಾಪಿಕ್ ಜಾಮ್‌ನಲ್ಲಿ ಸಿಲುಕಿ ಇತ್ತು ಹಿಂದೆ ಅಥವಾ ಮುಂದೆ ಹೋಗಲು ಆಗದೆ ಸುಮಾರು ಗಂಟೆಗಳ ಕಾಲ ರಸ್ತೆಯಲ್ಲಿ ಪರದಾಡುವಂತಾಗಿತ್ತು. ಪ್ರವಾಸಿಗರಿಗೆ ಎಚ್ಚರ: ಮೈದುಂಬಿ ಜಲಪಾತಕ್ಕೆ ಧುಮ್ಮುಕ್ಕುತ್ತಿರುವ ನೀರಿನ ದೃಶ್ಯವನ್ನು ನೋಡುವುದೆ ಪ್ರವಾಸಿಗರಿಗೆ ಆನಂದವೋ.ಆನAದ,ಆದರೆ ಈ ಸಂದರ್ಭದಲ್ಲಿ ಎಚ್ಚರವೂ ಅಗತ್ಯವಿದೆ.ಈಗಾಗಲೇ ಹಲವು ಧುರ್ಘಟನೆಗಳು ಇಲ್ಲಿ ಜರುಗಿವೆ.ಆನಂದಲ್ಲಿ ಮೈಮರತೆರ ಸಾವು ಖಚಿತ ಎನ್ನುವುದನ್ನು ಪ್ರವಾಸಿಗರು ಎಚ್ಚರ ವಹಿಸಿಬೇಕಿದೆ. ಮುನ್ನೆಚ್ಚರಿಕೆ ಕ್ರಮ ಅವಶ್ಯ: ಈಗಾಗಲೇ ಬೆಳಕವಾಡಿ ಪೋಲಿಸರು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದರು ಸಹ ಕೆಲ ಯುವ ಪ್ರವಾಸಿಗರು ಜಲಪಾತದ ಸವಿಯನ್ನು ಸವಿಯಲು ಜಲಪಾತದ ಕೆಳಗೆಡೆ ಇಳಿಯುವುದು ಹೆಚ್ಚಾಗಿದೆ.ಇದನ್ನು ತಡೆಗಟ್ಟಿ ಪ್ರವಾಸಿಗರ ರಕ್ಷಣೆಗೆ ಜಿಲ್ಲಾಢಳಿತ ಮುನ್ನೆಚ್ಚರಿಕೆ ಕ್ರಮವಹಿಸಬೇಕಿದೆ.ಇದಲ್ಲದೆ ಪ್ರವಾದ್ಯೋಮ ಇಲಾಖೆ ಗಗನ ಚುಕ್ಕಿ ಪ್ರದೇಶವ್ನನು ಅಭಿವೃದ್ದಿ ಪಡಿಸಿದರೂ ನಿರ್ವಹಣೆ ಕೊರತೆ ಬರುವ ಪ್ರವಾಸಿಗರಿಗೆ ಸೂಕ್ತ ಸೌಲಭ್ಯಗಳ ಸಮಸ್ಯೆ ಇದೆ.ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಮೂಲಸೌಲಭ್ಯ ಕಲ್ಪಿಸಲು ಮುಂದಾಗಬೇಕಿದೆ.1
- ದೇವನಹಳ್ಳಿಯಲ್ಲಿ ಕೋಲಾರದ ಶಾಸಕರಿಗೆ ಸಚಿವ ಕೆ.ಹೆಚ್.ಮುನಿಯಪ್ಪ ತಿರುಗೇಟು ಬೆಂಗಳೂರು:ಕೋಲಾರ ಶಾಸಕರಿಗೆ ಮಂತ್ರಿಸ್ಥಾನ ಸಿಗದಿದಕ್ಕೆ ಸಚಿವ ಕೆ.ಹೆಚ್.ಮುನಿಯಪ್ಪ ಮೇಲೆ ಶಾಸಕರು ಆರೋಪ ಮಾಡಿದ್ದಾರೆ.ನಮಗೆ ಮಂತ್ರಿಸ್ಥಾನ ಸಿಗದೆ ಇರಲು ನಮ್ಮ ಮಾಜಿ ಸಂಸದ ಪಾತ್ರ ಇದೆ ಎಂದು ಕೋಲಾರದ ಶಾಸಕರಿಗೆ ಸಚಿವ ಕೆ.ಹೆಚ್.ಮುನಿಯಪ್ಪ ತಿರುಗೇಟು ಕೊಟ್ಟಿದ್ದಾರೆ.ಅವರು ನನ್ನ ಬಂದು ಕೇಳಿಲ್ಲ, ಒಂದು ವೇಳೆ ಕೇಳಿದ್ರೆ ಹೈಕಮಾಂಡ್ ಬಳಿ ಮಾತಾಡ್ತಿದ್ದೆ,ಮುಖ್ಯಮಂತ್ರಿಗಳ ಬಳಿ, ಸಿದ್ರಾಮಣ್ಣ ಬಳಿ, ಹರಿಪ್ರಸಾದ್ ಬಳಿ ಹೇಳಬಹುದಾಗಿತ್ತು.ಯಾಕೆ ಅವ್ರು ಈಗೆ ಹೇಳ್ತಿದ್ದಾರೆ ಗೊತ್ತಿಲ್ಲ, ಕೇಳಿದ್ರೆ ನನ್ನ ಕರ್ತವ್ಯವಿತ್ತು,ನಾನು ಅವರನ್ನೆಲ್ಲಾ ಕರ್ಕೊಂಡು ಹೋಗಿ ಸೀನಿಯರ್ಸ್ ಇದ್ದಾರೆ, ಕೆಲಸ ಮಾಡಿದ್ದಾರೆ, ಕೊಡ್ಬೇಕು ಅಂತ ಒತ್ತಾಯ ಮಾಡ್ತಿದ್ದೆ,ಅವರ ಹತ್ತಿರ ಮಾತಾಡ್ತೀನಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಡಿಸಿ ಆಫೀಸ್ ಬಳಿ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿ ಹೊರಟರು.1
- DK ಶಿವಕುಮಾರ್ ಅವರನ್ನು ಮಾತನಾಡಲೂ ಬಿಡದ ದರ್ಶನ್ ಅಭಿಮಾನಿಗಳು DK ಶಿವಕುಮಾರ್ ಅವರನ್ನು ಮಾತನಾಡಲೂ ಬಿಡದ ದರ್ಶನ್ ಅಭಿಮಾನಿಗಳು1
- ಕೆ.ಜಿ.ಎಫ್. ನಗರಸಭೆ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪುತ್ಥಳಿ ಅನಾವರಣ ಕೆ.ಜಿ.ಎಫ್: ನಗರಸಭೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭವ್ಯ ಕಂಚಿನ ಪುತ್ಥಳಿಯನ್ನು ಇಂದು ಶಾಸಕರಾದ ಶ್ರೀಮತಿ ರೂಪಕಲಾ ಎಂ. ಶಶಿಧರ್ ಅವರು ಅಧಿಕೃತವಾಗಿ ಅನಾವರಣಗೊಳಿಸಿದರು. ನಗರಸಭೆ ಆವರಣದಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ಕೆ.ಜಿ.ಎಫ್ ಶಾಸಕಿ ರೂಪಕಲಾ ಎಂ. ಶಶಿಧರ್ ಅವರು ಪುತ್ಥಳಿಗೆ ಮಾಲಾರ್ಪಣೆ ಮಾಡಿ, ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, "ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳು ಹಾಗೂ ತತ್ವಗಳು ಸಾರ್ವಕಾಲಿಕ. ಕೆ.ಜಿ.ಎಫ್ ನಗರಸಭೆ ಆವರಣದಲ್ಲಿ ಸ್ಥಾಪನೆಗೊಂಡಿರುವ ಈ ಕಂಚಿನ ಪುತ್ಥಳಿಯು ಸದಾ ಅವರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ನೆನಪಿಸಲಿದೆ" ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನಗರಸಭೆಯ ಜನಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.1
- ಸರ್ಕಾರಿ ಬಸ್ ನಲ್ಲಿ ಹೃದಯ ಘಾತ ರಸ್ತೆಯಲ್ಲೇ ಆಸ್ಪತ್ರೆಗೆ ದಾಖಲು ತುಮಕೂರು ನಿಂದ ಶಿರಾ ಭಾಗಕ್ಕೆ ತೆರಳುತ್ತಿದ್ದಂತಹ ಸರ್ಕಾರಿ ಬಸ್ಸಿನಲ್ಲಿ ಪ್ಯಾಸೆಂಜರ್ ಒಬ್ಬರಿಗೆ ಹೃದಯಘಾತ ಕಾಣಿಸಿಕೊಂಡ ಕೂಡಲೇ ಬಸ್ ನಿಲ್ಲಿಸಿ ಸ್ಥಳದಲ್ಲೇ ಇದ್ದ ಪ್ರಯಾಣಕರು ಕೊಡಲೇ ಖಾಸಗಿ ಆಸ್ಪತ್ರೆಗೆ ಸೇರಿಸುವ ಮೂಲಕ ಜೀವ ಉಳಿಸುವ ಕೆಲಸ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.1