Shuru
Apke Nagar Ki App…
ಸೂರಿ ಅಣ್ಣಾ ಚಿತ್ರ ತಂಡದಿಂದ ಪತ್ರಿಕಾ...
ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
ಸೂರಿ ಅಣ್ಣಾ ಚಿತ್ರ ತಂಡದಿಂದ ಪತ್ರಿಕಾ...
More news from ಕರ್ನಾಟಕ and nearby areas
- ಮುಧೋಳ : ತಾಲೂಕಿನ ಮುಗಳಖೋಡ ಗ್ರಾಮದ ಆರಾಧ್ಯ ದೈವ ಪರಮಾನಂದ ದೇವರ ಜಾತ್ರೋತ್ಸವ ಸೋಮವಾರ ಸಂಭ್ರಮದಿಂದ ಜರುಗಿತು. ಜಾತ್ರೆ ಹಿನ್ನೆಲೆ ದೇವರಿಗೆ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ಹತ್ತಾರು ದಾರ್ಮಿಕ ಕೈಂಕರ್ಯ ನಡೆದವು. ಮುತ್ತೈದೆಯರು ಆರತಿ ಹಿಡಿದು ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡರು. ಸಂಜೆ ದೇವರ ಸನ್ನಿಧಿಯಲ್ಲಿ ಜರುಗಿದ ದೈವ ವಾಣಿ ಆಲಿಸಲು ಸಾವಿರಾರು ಭಕ್ತರು ನೆರೆದಿದ್ದರು. ಮುಗಳಖೋಡ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಜಾತ್ರೋತ್ಸವದಲ್ಲಿ ಪಾಲ್ಗೊಂಡು ದೃವರ ಕೃಪಾಶೀರ್ವಾದಕ್ಕೆ ಪಾತ್ರರಾದರು.3
- ಬಾಗಲಕೋಟೆ: ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ವಸೂಲಾತಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಮುಧೋಳ ಭಾಗದ ರೈತರು ಸೋಮವಾರ ಬಾಗಲಕೋಟೆ ಜಿಲ್ಲೆಯ ಸಂಸದ ಪಿ.ಸಿ. ಗದ್ದಿಗೌಡರ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು. ಬಾಗಲಕೋಟೆ ಡಿಸಿ ಭವನದಲ್ಲಿರುವ ಸಂಸದ ಕಚೇರಿಗೆ ಬಂದ ರೈತರು, ಬ್ಯಾಂಕ್‌ಗಳಿಂದ ಲಿಲಾವ್ ನೋಟಿಸ್‌ಗಳನ್ನು ನೀಡಲಾಗುತ್ತಿದ್ದು, ಸಾಲ ಮರುಪಾವತಿಸದಿದ್ದರೆ ಆಸ್ತಿ ಜಪ್ತಿ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ ಎಂದು ದೂರಿದರು. ಇದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ ಎಂದು ತಿಳಿಸಿದರು. ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ಕಿರುಕುಳ ನೀಡದಂತೆ ಸೂಚನೆ ನೀಡಬೇಕು ಹಾಗೂ ಸಾಲ ಮರುಪಾವತಿಗೆ ಒನ್ ಟೈಮ್ ಸೆಟಲ್‌ಮೆಂಟ್ ವ್ಯವಸ್ಥೆ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದರು. ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಈ ವೇಳೆ ಸಂಸದ ಪಿ.ಸಿ. ಗದ್ದಿಗೌಡರ ಅವರು ರೈತರು ಮತ್ತು ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಸಭೆಯಲ್ಲಿ ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಿಇಒ ಶಶಿಧರ ಕುರೇರ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.3
- ಬಾಗಲಕೋಟ ಜಿಲ್ಲೆಯ ಇಳಕಲ್‌ದ ಕೆಎಚ್‌ಡಿಸಿ ಕಾಲೋನಿ, ವಿದ್ಯಾಗಿರಿ ಕಾಲೋನಿಯಲ್ಲಿ ರ‍್ನಾಲ್ಕು ಮನೆಗಳ ಬೀಗ ಹೊಡೆದು ಕಳ್ಳತನ ಮಾಡಲು ಪ್ರಯತ್ನಪಟ್ಟಿದ್ದಾರೆ ಕಳ್ಳತನಗಳು ವಿಫಲಗೊಂಡಿವೆ. ಮೂರು ಮನೆಯಲ್ಲಿ ಏನು ಸಿಗದೇ ನಿರಾಸೆಗೊಂಡಿದ್ದ ಕಳ್ಳರು ಮತ್ತೊಂದು ಮನೆಗೆ ಕಳ್ಳತನ ಮಾಡಲು ಹೋದಾಗ ಬೀಗ ಹೊಡೆಯುವ ಸಮಯದಲ್ಲಿ ಮುಂದಿನ ಮನೆಯೊಬ್ಬರು ಎಚ್ಚರಗೊಂಡು ಹೋದ ನೋಡಲು ಹೋದಾಗ ನಾಲ್ಕು ಜನರ ಗುಂಪೋದನ್ನು ಕಂಡಿದ್ದ ಮಹಿಳೆ ಬಾಯಿ ಮಾಡಿದ ತಕ್ಷಣವೇ ಆ ಮಹಿಳೆಯ ಮನೆಗೆ ದೊಡ್ಡ ದೊಡ್ಡ ಕಲ್ಲುಗಳನ್ನು ಕಳ್ಳರು ಎಸೆದಿದ್ದರಿಂದ ಬಾಗಿಲು ಮತ್ತು ಕುರ್ಚಿಗಳನ್ನು ಮುರಿದಿರುವ ಘಟನೆ ಫೆ.೧೭ ಮಂಗಳವಾರ ನಸುಕಿನ ಜಾವ ೨ ಗಂಟೆಗೆ ಸಂದರ್ಭ ನಡೆದಿದೆ. ಸುದ್ದಿ ತಿಳಿದಿ ಶಹರ್ ಪೋಲಿಸ್ ಠಾಣೆಯ ಪೋಲಿಸರು ಭೇಟಿ ನೀಡಿ ಪರಿಶೀಲಿಸಿ ತನಿಖೆಯನ್ನು ನಡೆಸಿದ್ದಾರೆ. ಈ ಸುದ್ದಿ ತಿಳಿದ ಸ್ಥಳೀಯ ನಿವಾಸಿಗಳು ಕಳ್ಳರ ಹಾವಳಿಗೆ ಬೆಚ್ಚಿ ಬಿದ್ದಿದ್ದಾರೆ.2
- ರಾಮದುರ್ಗ : ಸುರೇಬಾನ ನಾಡಕಚೇರಿ ಮುಂಭಾಗದಲ್ಲಿ ಪಾನ್ ಮಸಾಲ ಹಾಗೂ ಗುಟ್ಕಾ ತಿಂದು ಉಗುಳಲು ಬಕೆಟ್ ಇಡುತ್ತಿರುವ ದೃಶ್ಯ ಕಂಡು ಬಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರತಿ ದಿನ ಸಾವಿರಾರು ಜನರು ವಿವಿಧ ಸರ್ಕಾರಿ ಕೆಲಸಗಳಿಗಾಗಿ ನಾಡಕಚೇರಿಗೆ ಭೇಟಿ ನೀಡುತ್ತಾರೆ. ಇಂತಹ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಬೇಕಾದ ಜವಾಬ್ದಾರಿ ಅಧಿಕಾರಿಗಳದ್ದಾಗಿದ್ದರೂ, ಆವರಣದಲ್ಲಿ ಅಸ್ವಚ್ಛತೆ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ಇನ್ನೂ ಆತಂಕಕಾರಿ ವಿಷಯವೆಂದರೆ, ನಾಡಕಚೇರಿ ಆವರಣದಲ್ಲೇ ಪೂರ್ವ ಪ್ರಾಥಮಿಕ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ದಿನನಿತ್ಯ ನೂರಾರು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಾನ್ ಮಸಾಲ ಹಾಗೂ ಗುಟ್ಕಾ ಉಗುಳುವಿಕೆ ಮಕ್ಕಳ ಆರೋಗ್ಯಕ್ಕೂ ಹಾನಿಕಾರಕವಾಗುವ ಸಾಧ್ಯತೆ ಇದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಮತ್ತು ಸಾರ್ವಜನಿಕರು ಅಧಿಕಾರಿಗಳ ನಿರ್ಲಕ್ಷ್ಯವೇ ಈ ಪರಿಸ್ಥಿತಿಗೆ ಕಾರಣ ಎಂದು ಆರೋಪಿಸಿದ್ದಾರೆ. ತಕ್ಷಣವೇ ಸ್ವಚ್ಛತಾ ಕ್ರಮ ಕೈಗೊಳ್ಳಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಿಕೆ ನಿಷೇಧಿಸಲು ಕಠಿಣ ಕ್ರಮ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.3
- ಬೆಳಗಾಂವ ಜಿಲ್ಲಾ ರಾಮದುರ್ಗ ತಾಲೂಕಿನ ಹೊಸಕೋಟೆ ಗ್ರಾಮದ ಸಾರ್ವಜನಿಕರು ರಾಮದುರ್ಗ ತಾಲೂಕಿಗೆ ಬಂದಂತ ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿ ತಮ್ಮ ಅಳಿಲನ್ನು ಮಾಧ್ಯಮದವರ ಮುಂದೆ ಹೇಳಿಕೊಂಡರು. ಹೊಸಕೋಟೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಬ್ಬ ಡಾಕ್ಟರ್ ಇದ್ದು ಎರಡು ವರ್ಷದಿಂದ ಅವರ ಸೇವೆ ಒಳ್ಳೆ ತರಹ ಮಾಡುತ್ತಾ ಬಂದಿದ್ದು ಹೊಸಕೋಟೆ ಗ್ರಾಮದ ಸುತ್ತು ಮುತ್ತಿಲಿನ ಹಳ್ಳಿಗಳಿಗೆ ಇವರ ಸೇವೆ ಅಚ್ಚುಮೆಚ್ಚಿಗೆ ಪಾತ್ರರಾಗಿದ್ದಾರೆ. ಈಗ ಸರ್ಕಾರದವರು ಇವರನ್ನು ವರ್ಗಾವಣೆ ಮಾಡಿದ್ದಕ್ಕೆ ಹೊಸಕೋಟೆ ಗ್ರಾಮಸ್ಥರು ಅವರನ್ನು ವರ್ಗಾವಣೆ ಮಾಡದಂತೆ ಮನವಿ ಸಲ್ಲಿಸಿ ತಮ್ಮ ಅನಿಸಿಕೆಗಳನ್ನು ಮಾಧ್ಯಮದವರು ಮುಂದೆ ಹೇಳಿಕೊಂಡು ಅವರನ್ನು ವರ್ಗಾವಣೆ ಮಾಡಿದಲ್ಲಿ ಜಿಲ್ಲಾಮಟ್ಟದಲ್ಲಿ ಸತ್ಯಾಗ್ರಹ ಮಾಡಲಾಗುವುದೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.1
- ಸಾಮೂಹಿಕ ಸಂಘಟನೆಗಳಿಂದ ತಹಸೀಲ್ದಾರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಸುರಪುರ: ನಗರದ ತಹಸೀಲ್ದಾರ ಕಚೇರಿಯ ಮುಂಭಾಗದಲ್ಲಿ ಮಂಗಳವಾರ ಸಾಮೂಹಿಕ ಸಂಘಟನೆಗಳ ವತಿಯಿಂದ ಶ್ರೀ ಪ್ರಭು ಮಹಾ ವಿದ್ಯಾಲಯದ ಮೈದಾನದ ಖಾರಿಜ್ ಖಾತಾ ಸರ್ವೇ ನಂ 7/1 ಮತ್ತು 23/1ರಲ್ಲಿ ಸಾರ್ವಜನಿಕರ ಊಪಯೋಗಕ್ಕೆ ಮೀಸಲಿಡುವಂತೆ ಆಗ್ರಹಿಸಿ ಪ್ರತಿಭಟಿಸಿ, ಮನವಿಯನ್ನು ತಹಸೀಲ್ದಾರ ಹೆಚ್.ಎ.ಸರಕಾವಸ್ ಅವರಿಗೆ ಸಲ್ಲಿಸಿದರು. ಈ ವೇಳೆ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಬಹುವರ್ಷಗಳಿಂದ ನಗರದ ಜನರು ಸಂಜೆ ಮತ್ತು ಬೆಳಿಗ್ಗೆ ವಾಯುವಿಹಾರ ಮತ್ತು ಕ್ರೀಕೇಟ್ ನಂತಹ ಜನಪ್ರೀಯೆ ಕ್ರಿಡೆಗಳನ್ನು ಆಯೊಜಿಸುತ್ತಾ ಬಂದಿರುವ ಜಮೀನನ್ನು ಯಾರದೊ ಒತ್ತಡದಿಂದ ಒಂದು ಕೊಮಿನವರಿಗೆ ನೀಡುತ್ತಿರುವುದು ಅಧಿಕಾರಿ ವರ್ಗ ಸಾರ್ವಜನಿಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಆಕ್ರೋಶ ಆಕ್ರೋಶವನ್ನು ಹೊರಹಾಕಿದರು. ಈ ಪ್ರತಿಭಟನೆಗೆ ಸುಮಾರು 40ಕ್ಕೂ ಹೆಚ್ಚು ಸಂಘಟನೆಯವರು ಬೆಂಬಲಿಸಿದರು. ವಿವಿಧ ಸಂಘಟನೆಯ ಮೂಖಂಡರುಗಳಾದ ಹಣಮಂತ ಕಟ್ಟಿಮನಿ,ಕಾಳಪ್ಪ ಎಮ್ ಕವತಿ, ರಮಾನಂದ ಕವಲಿ, ದಾನಪ್ಪ ಲಕ್ಷ್ಮಿಪೂರ, ನಂದಕುಮಾರ ಕನ್ನೆಳ್ಳಿ, ಭೀಮನ ಗೌಡ ವಿ. ಲಕ್ಷ್ಮೀ, ವೆಂಕಟೇಶ್ ಬೈರಿಮಡ್ಡಿ, ಚಂದ್ರಶೇಖರ ಎಲ್ಲಿಗಾರ್, ನಿಂಗಪ್ಪ ನಾಯಕ್, ರಮೇಶ್ ದೊರೆ ಆಲ್ದಾಳ, ನಾಗರಾಜ ಪ್ಯಾಪಲಿ, ಭೀಮು ನಾಯಕ್ ಮಲ್ಲಿಭಾವಿ, ಉಪೇಂದ್ರ ನಾಯಕ, ಶರಣು ನಾಯಕ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.1
- ಸಿಂದಗಿ: ಬಲರಾಮ ಕುಟುಂಬಕ್ಕೆ ಆರೋಗ್ಯ ಕಾರ್ಡ್ ವಿತರಿಸಿದ ಎಂಬಿ ಪಾಟೀಲ್ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಅವರು, ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಬಲಾರಾಮ್ ಕೃಷ್ಣ ಬಾಗಲಕೋಟ್ ಅವರ ತ್ಯಾಗ ದೇಶಕ್ಕೇ ಮಾದರಿಯಾಗಿದೆ ಎಂದು ಸೋಮವಾರ ನಗರದ ಬಿ ಎಲ್ ಡಿ ಇ ವಿಶ್ವವಿದ್ಯಾಲಯದಲ್ಲಿ ಮೃತ ಬಲರಾಮ್ ಕುಟುಂಬಕ್ಕೆ ಆರೋಗ್ಯ ಕಾರ್ಡ್ ವಿತರಿಸಿ ಮಾತನಾಡಿದರು. ಬಲರಾಮ ಕೃಷ್ಣ ಅವರ ಆದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಅವರ ಕುಟುಂಬಕ್ಕೆ ಆಸರೆಯಾಗಲಿ ಎಂದು ಆರೋಗ್ಯ ಕಾರ್ಡ್ ನೀಡಲಾಗಿದೆ ಎಂದು ತಿಳಿಸಿದರು.1
- ಲೋಕಾಪುರ ಪಟ್ಟಣದ ಪವಾಡದ ಪುರುಷ ಶ್ರೀ ಲೋಕೇಶ್ವರ ಜಾತ್ರೆಯ ನಿಮಿತ್ತ ಸೋಮವಾರ ಸಂಜೆ ಅಪಾರ ಭಕ್ತರ ಮಧ್ಯೆ ರಥೋತ್ಸವ ಸಂಭ್ರಮದಿಂದ ನೆರವೇರಿತು. ಬೆಳಗಿನ ಜಾವದಿಂದಲೇ ದೇವಸ್ಥಾನದಲ್ಲಿ ಕ್ರಿಯಾ ಮೂರ್ತಿಗಳ ನೇತೃತ್ವದಲ್ಲಿ ಅರ್ಚಕರ ಬಳಗ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಭಕ್ತರು ಸರತಿ ಸಾಲಿನಲ್ಲಿ ನಿಂತು ಲೋಕನಾಥನ ದರ್ಶನ ಪಡೆದು ಪುನೀತರಾದರು. ರಥವನ್ನು ವಿವಿಧ ಬಣ್ಣಗಳ ಬಟ್ಟೆ, ರುದ್ರಾಕ್ಷಿ ಮಾಲೆ ಹಾಗೂ ಹೂಗಳಿಂದ ಅಲಂಕರಿಸಲಾಗಿತ್ತು. ರಥದ ಕಳಸ ತುದಿಯಲ್ಲಿ ವರ್ಣಾಲಂಕಾರ ಧ್ವಜ ಕಟ್ಟಿದ ಬಳಿಕ ನವರತ್ನ, ಫಲ-ಪುಷ್ಪಗಳಿಂದ ಅಲಂಕೃತಗೊಂಡ ಲೋಕನಾಥ ವಿಗ್ರಹವನ್ನು ರಥದಲ್ಲಿರಿಸಿ ಪೂಜಾ ಕೈಂಕರ್ಯ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥ ಸಾಗುತ್ತಿದ್ದಂತೆಯೇ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು “ಲೋಕೇಶ್ವರ ಮಹಾರಾಜ್ ಕೀ ಜೈ”, “ಹರ ಹರ ಮಹಾದೇವ” ಎಂಬ ಜೈಕಾರಗಳೊಂದಿಗೆ ರಥ ಎಳೆದು ಭಕ್ತಿಭಾವ ವ್ಯಕ್ತಪಡಿಸಿದರು. ಲೋಕೇಶ್ವರ ದೇವಸ್ಥಾನದಿಂದ ಆರಂಭಗೊಂಡ ರಥೋತ್ಸವ ಬೆಳಗಾವಿ–ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಸಾಗುತ್ತಿದ್ದಂತೆ ಭಕ್ತರು ಬಾಳೆಹಣ್ಣು, ಉತ್ತತ್ತಿ, ಹೂವುಗಳನ್ನು ಎಸೆದು ಹರಕೆ ಸಲ್ಲಿಸಿದರು. ವಿವಿಧ ಹಣ್ಣು ಹಾಗೂ ನಾಣ್ಯಗಳನ್ನು ರಥದತ್ತ ಸಮರ್ಪಿಸಿ ಭಕ್ತಿಸೇವೆ ಸಲ್ಲಿಸಿದರು. ರಥೋತ್ಸವ ಶ್ರೀ ರಾಮಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಮರಳಿ ಮೂಲ ದೇವಸ್ಥಾನಕ್ಕೆ ತಲುಪಿತು. ಜಾತ್ರೆಯಲ್ಲಿ ಲೋಕಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ದೇಸಾಯಿ ವಾಡೆಯಿಂದ ನಂದಿಕೋಲ, ಝಾಂಜ್ ಪಥಕ್, ಅಂಬಾರಿ, ವಾದ್ಯಮೇಳ ಸೇರಿದಂತೆ ವಿವಿಧ ಕಲಾ ಮೇಳಗಳೊಂದಿಗೆ ರಥೋತ್ಸವದ ಕಳಸವನ್ನು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತರಲಾಯಿತು. ಜಾತ್ರೆ ನಿಮಿತ್ತ ದೇವಸ್ಥಾನ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು. ಮುಗಿಲುಮುಟ್ಟುವ ಘೋಷಣೆಗಳ ನಡುವೆ ರಥ ಮುಂದೆ ಸಾಗುತ್ತಿದ್ದಂತೆ ಭಾವಪರವಶಗೊಂಡ ಭಕ್ತರು ಲೋಕೇಶ್ವರ ಮಹಾರಾಜ್ ಕೀ ಜೈ, ಹರ ಹರ ಮಹಾದೇವ, ಜೈ ಶಂಕರ ಎಂದು ಜೈಕಾರ ಹಾಕುತ್ತಾ ರಥದ ಮೇಲೆ ಉತ್ತತ್ತಿ, ಬಾಳೆಹಣ್ಣುಗಳನ್ನು ಎಸೆದು ತಮ್ಮ ಹರಕೆಯನ್ನು ಸಮರ್ಪಿಸಿದರು. ರಥವು ರಾಮಲಿಂಗೇಶ್ವರ ದೇವಸ್ಥಾನಕ್ಕೆ ತಲುಪಿದಾಗ ಕಂಡುಬಂದ ದೃಶ್ಯ ಭಕ್ತರ ಮನಸೆಳೆಯುವಂತಿತ್ತು.1
- ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಶ್ರೀ ನಿವಾಸ ಚಿತ್ರಮಂದಿರ ಹತ್ತಿರ ಇರುವ ಬೈಕ್ ಗ್ಯಾರೇಜ್ ಗೆ ಬೆಂಕಿ ತಗುಲಿ ೮ ಕ್ಕೂ ಹೆಚ್ಚು ಬೈಕ್ ಗಳು ಬೆಂಕಿಗೆ ಆಹುತಿಯಾದ ಘಟನೆ ಫೆ.೧೬ ರಾತ್ರಿ ೧೦ ಗಂಟೆಯ ಸಂದರ್ಭ ನಡೆದಿದೆ. ಬೆಂಕಿ ತಗುಲಿದ ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಈ ಬೆಂಕಿ ಅವಘಡದಲ್ಲಿ ೮ ಕ್ಕೂ ಹೆಚ್ಚು ಬೈಕ್ ಗಳು ಬೆಂಕಿಗೆ ಆಹುತಿಯಾಗಿದೆ ಎಂದು ಗ್ಯಾರೇಜ್ ಮಾಲೀಕ ಕೃಷ್ಣ ವದ್ದಿ ತಿಳಿಸಿದ್ದಾರೆ. ಗ್ಯಾರೇಜ್ ಗೆ ಬೆಂಕಿ ತಗುಲಿದ ಕಾರಣ ತಿಳಿದುಬಂದಿಲ್ಲ.1