Shuru
Apke Nagar Ki App…
Available for Sale Locality : Sedam taluka Area (dimensions) : 4 acres Expected Price : 3000000 Property Type : Agricultural / Farm Land Near N T COLLEGE UDAGI ROAD SEDAM TALUKA in road side
Raghavendrareddy
Available for Sale Locality : Sedam taluka Area (dimensions) : 4 acres Expected Price : 3000000 Property Type : Agricultural / Farm Land Near N T COLLEGE UDAGI ROAD SEDAM TALUKA in road side
More news from Kalaburagi and nearby areas
- Available for Sale Locality : Sedam taluka Area (dimensions) : 4 acres Expected Price : 3000000 Property Type : Agricultural / Farm Land Near N T COLLEGE UDAGI ROAD SEDAM TALUKA in road side1
- ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿರುವ ಜಿಕೆ ರಸ್ತೆಯಲ್ಲಿ, ವಾಸವದತ್ತಾ ಸಿಮೆಂಟ್ ಕಾರ್ಖಾನೆಯಿಂದ ಬಸವೇಶ್ವರ ಸರ್ಕಲ್‌ವರೆಗೆ ರಾಜ್ಯ ಹೆದ್ದಾರಿ ಮತ್ತು ಸರ್ವಿಸ್ ರಸ್ತೆಗಳ ಮೇಲೆ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಪೊಲೀಸ್ ಇಲಾಖೆಯ ಭಯವಿಲ್ಲದೆ ಲಾರಿ, ಟ್ಯಾಂಕರ್, ಜೆಸಿಬಿ, ಟಂಟಂ ಮತ್ತು ಜೀಪಗಳನ್ನು ಅಕ್ರಮವಾಗಿ ನಿಲುಗಡೆ ಮಾಡಲಾಗುತ್ತಿದೆ. ಇದು ಸಾರ್ವಜನಿಕ ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ವಿಪರೀತ ಸಮಸ್ಯೆಯನ್ನುಂಟುಮಾಡುತ್ತಿದೆ. ಪೊಲೀಸರು ಈ ಕುರಿತು ಗಮನಿಸಿಲ್ಲವೇ, ಅಥವಾ ಗೊತ್ತಿದ್ದೂ ಸುಮ್ಮನಿದ್ದಾರೆಯೇ ಎಂಬ ಪ್ರಶ್ನೆ ಜನರಲ್ಲಿ ಮೂಡುವಂತಾಗಿದೆ. ವಾಹನ ಚಾಲಕರು ರಸ್ತೆಗಳನ್ನು ತಮ್ಮ ನಿಲ್ದಾಣಗಳನ್ನಾಗಿ ಬಳಸುತ್ತಿದ್ದು, ಪೊಲೀಸರು ಎಚ್ಚೆತ್ತುಕೊಳ್ಳುತ್ತಿಲ್ಲ. ಬೈಕ್ ಮತ್ತು ಪಾದಚಾರಿಗಳ ಸುರಕ್ಷತೆಗಾಗಿ ಕಲ್ಪಿಸಲಾದ ಸರ್ವಿಸ್ ರಸ್ತೆಯ ಉದ್ದೇಶವೇ ಇದರಿಂದ ವ್ಯರ್ಥವಾಗುತ್ತಿದೆ. ಈ ಅಕ್ರಮ ನಿಲುಗಡೆಯಿಂದ ಜನರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಪಾರ್ಕಿಂಗ್ ಮಾಡುವವರಿಗೆ ಪೊಲೀಸ್ ಭಯವಿಲ್ಲವೇ, ಅಥವಾ ಇಲಾಖೆ ಇದ್ದೂ ಇಲ್ಲದಂತಾಗಿದೆಯೇ ಎಂಬ ಬಲವಾದ ಪ್ರಶ್ನೆಗಳು ಈಗ ಸೇಡಂ ಜನರಿಂದ ಕೇಳಿಬರುತ್ತಿವೆ.1
- ಯಾದಗಿರಿ ಜಿಲ್ಲಾ ಕೇಂದ್ರವಾಗಿ ೧೬ ವರ್ಷಗಳಾಗಿದ್ದರೂ, ಸುಮಾರು ೧೩ ಎಕ್ಸ್‌ಪ್ರೆಸ್ ರೈಲುಗಳು ಇನ್ನೂ ನಿಲ್ಲದಿರುವುದು ಜಿಲ್ಲೆಯ ದುರದೃಷ್ಟಕರ ಸಂಗತಿ ಎಂದು ಅಖಿಲ ಭಾರತೀಯÀ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲಾ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಮತ್ತು ಇಂಟರ್‌ಸಿಟಿ ರೈಲು ಮರು ಪ್ರಾರಂಭಕ್ಕಾಗಿ ನಿರಂತರ ಹೋರಾಟ ನಡೆಸುವುದಾಗಿ ಅವರು ತಿಳಿಸಿದ್ದಾರೆ. ತಾಲೂಕಿನ ಠಾಣಗುಂದಿ (ವಿಶ್ವಾಸಪೂರ) ತಾಂಡಾದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಈ ವಿನೂತನ ಅಭಿಯಾನಕ್ಕೆ ದೇವಸ್ಥಾನದ ಪೂಜಾರಿ ರಡ್ಡಿ ಪೂಜಾರಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ರೈಲು ನಿಲ್ದಾಣದ ಮೂಲಕ ಸಂಚರಿಸುವ ರಾಜಧಾನಿ ಎಕ್ಸ್‌ಪ್ರೆಸ್, ಅಹಮದಾಬಾದ್ ಸುಪರ್ ಫಾಸ್ಟ್ ಎಕ್ಸ್‌ಪ್ರೆಸ್, ರಾಜಕೋಟ್ ಎಕ್ಸ್‌ಪ್ರೆಸ್, ಸಾಯಿನಗರ ಶಿರಡಿ ಸೂಪರ್ ಫಾಸ್ಟ್, ಗೋರಕ್‌ಪುರ ಎಕ್ಸ್‌ಪ್ರೆಸ್, ವಿವೇಕ್ ಎಕ್ಸ್‌ಪ್ರೆಸ್ ರೈಲುಗಳಿಗೆ ತಕ್ಷಣ ನಿಲುಗಡೆ ಒದಗಿಸಬೇಕು ಎಂದು ಮುದ್ನಾಳ್ ಒತ್ತಾಯಿಸಿದರು. ಮುಖ್ಯವಾಗಿ ಕೊರೊನಾ ಸಮಯದಲ್ಲಿ ರದ್ದಾಗಿರುವ ಇಂಟರ್‌ಸಿಟಿ ರೈಲನ್ನು ಮತ್ತೆ ಪುನರಾರಂಭಿಸಬೇಕು ಎಂದೂ ಅವರು ಆಗ್ರಹಿಸಿದರು. ಈ ನಿರ್ಲಕ್ಷ್ಯಕ್ಕೆ ಸೊಲ್ಲಾಪುರ ಗುಂತಕಲ್ ಸಿಕಿಂದ್ರಾಬಾದ್ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮತ್ತು ಸಂಬಂಧಪಟ್ಟ ರೈಲ್ವೆ ಸಚಿವರೇ ನೇರ ಹೊಣೆ ಎಂದು ಅವರು ದೂರಿದ್ದಾರೆ. ರೈಲು ನಿಲ್ದಾಣದಲ್ಲಿ ವಿಶೇಷ ಮೂಲಭೂತ ಸೌಕರ್ಯಗಳಾದ ಲಿಫ್ಟ್ ವ್ಯವಸ್ಥೆ, ಅಂಗವಿಕಲರು ಮತ್ತು ವಯೋವೃದ್ಧರಿಗೆ ಅನುಕೂಲವಾಗಲು ವಿಶೇಷ ವಿದ್ಯುತ್ ಚಾಲಿತ ವಾಹನ ವ್ಯವಸ್ಥೆ, ರೈಲು ನಿಲ್ದಾಣದ ಪ್ಲಾಟ್‌ಫಾರಂಗಳಲ್ಲಿ ಸಂಪೂರ್ಣ ಮೇಲ್ಛಾವಣಿ ವ್ಯವಸ್ಥೆ ಮತ್ತು ಆಸನದ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಂತೆ ಹೋರಾಟಗಾರರು ಆಗ್ರಹಿಸಿದ್ದಾರೆ. ಗುಂತಕಲ್ ಹೊರತುಪಡಿಸಿದರೆ ಯಾದಗಿರಿ ಅತಿ ಹೆಚ್ಚು ಆದಾಯ ನೀಡುವ ರೈಲು ನಿಲ್ದಾಣವಾಗಿದೆ ಎಂದು ಮುದ್ನಾಳ್ ಹೇಳಿದ್ದಾರೆ. ಅಲ್ಲದೆ, ಈ ಭಾಗದಿಂದ ಗುಳೆ ಹೋಗುವ ಕೂಲಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಬೇಕು ಎಂದೂ ಅವರು ಒತ್ತಾಯಿಸಿದ್ದಾರೆ. ಎಲ್ಲಾ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಯಾಗುವವರೆಗೆ ಈ ಅಭಿಯಾನ ಹಂತ ಹಂತವಾಗಿ ಮುಂದುವರಿಯಲಿದೆ ಎಂದು ಉಮೇಶ ಕೆ. ಮುದ್ನಾಳ್ ತಿಳಿಸಿದ್ದಾರೆ. ಸಾಕಷ್ಟು ಬಾರಿ ಹೋರಾಟದ ಮೂಲಕ ಮನವಿ ಸಲ್ಲಿಸಿದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ಖಂಡಿಸಿ, ಸಾಮಾಜಿಕ ನ್ಯಾಯ ಸಿಗುವವರೆಗೆ ನಿರಂತರ ಹೋರಾಟ ನಡೆಸಲಾಗುವುದು ಎಂದವರು ಹೇಳಿದ್ದಾರೆ. ಒಂದು ವೇಳೆ ಬೇಡಿಕೆಗಳು ಈಡೇರದಿದ್ದರೆ, ಮುಂದಿನ ದಿನಗಳಲ್ಲಿ ೫ ಸಾವಿರ ಜನರನ್ನು ಸೇರಿಸಿ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಈ ಅಭಿಯಾನದಲ್ಲಿ ಪವನ, ವಿಶಾಲ, ಗೋವಿಂದ ಪವಾರ್, ಗೋಬ್ರು ಪವಾರ್, ವಿಜಯ ಪವಾರ್, ಬಜನ್ ಪವಾರ್, ತಿರುಮಲ ರಾಟೋಡ್, ರಾಜು ರಾಥೋಡ್, ರೋಹಿತ್, ಚಾನ್ಸಿಂಗ್, ದೇವ್ ಜಿ ನಾಯಕ್, ಮುತ್ತು ಪವಾರ್, ರವಿ ಜಾದವ್, ಕಿಶನ್ ಪವಾರ್, ಶಂಕರ, ವಿಜಯ್ ಪವಾರ್, ಪ್ರಕಾಶ, ರಾಮು, ತಾರಾಸಿ, ವಿಠ್ಠಲ್, ವಿನೋದ್, ಲಾಲ್ ಬಹದ್ದೂರ್, ಅರ್ಜುನ್, ವಿಕಾಸ್, ಕರಾಣ, ಯುವರಾಜ್, ವಿಕಾಸ್, ಸಂಜೆ ಬಾಸು, ಪ್ರಕಾಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.1
- ಪತ್ರಕರ್ತ ಮತ್ತು ಸಂಪಾದಕ ಮಲ್ಲಿಕಾರ್ಜುನ್ ಪಗಡೆ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ.1
- ಯಾದಗಿರಿ ಜಿಲ್ಲೆಯ ವಡಿಗೇರಾ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಾಗದ ಕಾರಣ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ವಿವಿಧ ಕೆಲಸಗಳಿಗಾಗಿ ಬೆಳಗ್ಗೆಯೇ ಕಚೇರಿಗೆ ಆಗಮಿಸಿದ್ದ ಜನರು ಅಧಿಕಾರಿಗಳಿಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ಬೆಳಗ್ಗೆ 10:40 ಆದರೂ ಒಬ್ಬರೂ ಅಧಿಕಾರಿಗಳು ಕಚೇರಿಗೆ ಬಂದಿರಲಿಲ್ಲ ಎಂದು ವರದಿಯಾಗಿದೆ. ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ನಿರ್ಲಕ್ಷಿಸಿ ಬೇಜವಾಬ್ದಾರಿ ತೋರಲಾಗುತ್ತಿದೆ ಎಂದು ಆರೋಪಿಸಿದ್ದು, ಕಚೇರಿ ಸಂಪೂರ್ಣ ಖಾಲಿ ಖಾಲಿಯಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.1
- ಕಲಬುರಗಿಯಲ್ಲಿ, ಖಾಸಗಿ ಶಾಲಾ ವಾಹನಗಳಿಂದ ಉಂಟಾಗುವ ಅಪಘಾತಗಳನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಗುರು ಬಂಡಿ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.1
- ಹುಣಸಗಿ ತಾಲೂಕಿನ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದ ರಾಜೀ ಸಂಧಾನದ ವೇಳೆ ಕರೆತರಲಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ. ಮೃತಪಟ್ಟವರನ್ನು ಕರಿಕಲ್ ಗ್ರಾಮದ 70 ವರ್ಷದ ರಾಜೇಸಾಬ್ ವಾಲಿಕಾರ್ ಎಂದು ಗುರುತಿಸಲಾಗಿದೆ. ಅವರ ಸಾವಿಗೆ ಪೊಲೀಸರ ಹಲ್ಲೆಯೇ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ರಾಜೇಸಾಬ್ ಅವರನ್ನು ಠಾಣೆಗೆ ಕರೆಸಿಕೊಂಡಿದ್ದರು ಎನ್ನಲಾಗಿದೆ. ವಿಚಾರಣೆ ನಡೆಸುವ ವೇಳೆ ಠಾಣೆಯ ಎಎಸ್‌ಐ ಸಂಗಪ್ಪ ಅವರು ರಾಜೇಸಾಬ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಹಲ್ಲೆಯಿಂದ ಅಸ್ವಸ್ಥಗೊಂಡ ರಾಜೇಸಾಬ್ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.1
- ಯಾದಗಿರಿ ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ರೈತರು ಬಿತ್ತನೆ ಮಾಡಿದ್ದ ಹತ್ತಿ, ತೊಗರಿ, ಶೇಂಗಾ ಹಾಗೂ ಹೆಸರು ಬೆಳೆಗಳು ಒಣಗುವ ಹಂತ ತಲುಪಿವೆ. ಕೈಗೆ ಬಂದ ಬೆಳೆ ಕೈತಪ್ಪಿ ಹೋಗುವ ಭೀತಿಯಲ್ಲಿರುವ ಅನ್ನದಾತರು, ತಮ್ಮ ಬೆಳೆಗಳನ್ನು ಹೇಗಾದರೂ ಮಾಡಿ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಸದ್ಯ ಲಭ್ಯವಿರುವ ಅಲ್ಪಸ್ವಲ್ಪ ನೀರನ್ನೇ ಬಳಸಿಕೊಂಡು, ಸ್ಪಿಂಕ್ಲರ್ (ತುಂತುರು ನೀರಾವರಿ) ಮೂಲಕ ಹೊಲಗಳಿಗೆ ನೀರು ಹರಿಸುತ್ತಾ, ಬೆಳೆಯನ್ನು ಉಳಿಸಿಕೊಳ್ಳಲು ತೀವ್ರವಾಗಿ ತವಕಿಸುತ್ತಿದ್ದಾರೆ. ಸ್ಪಿಂಕ್ಲರ್ ಮೂಲಕ ಬೆಳೆ ರಕ್ಷಣೆಗೆ ಮುಂದಾಗಿರುವ ಈ ರೈತರ ಗೋಳು ಮುಗಿಲು ಮುಟ್ಟಿದೆ.1