ದುಷ್ಕರ್ಮಿಗಳಿಂದ ಸಾರ್ವಜನಿಕ ಶೌಚಾಲಯ ಧ್ವಂಸ ಕ್ರಮಕ್ಕೆ ಆಗ್ರಹಿಸಿ ಸಾರ್ವಜನಿಕರಿಂದ ಪ್ರತಿಭಟನೆ ರಾಯಬಾಗ ವರದಿ: ದುಷ್ಕರ್ಮಿಗಳಿಂದ ಸಾರ್ವಜನಿಕ ಶೌಚಾಲಯ ಧ್ವಂಸ ಕ್ರಮಕ್ಕೆ ಆಗ್ರಹಿಸಿ ಸಾರ್ವಜನಿಕರಿಂದ ಪ್ರತಿಭಟನೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ವಾರ್ಡ್ ನಂ 7ರಲ್ಲಿ ಪುರಸಭೆ ಸನ್ 2015-16 ಸಾಲಿನ ಎಸ್.ಎಫ.ಜಿ ಮುಕ್ತ ನಿಧಿ ಯೋಜನೆಯಡಿಲ್ಲಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯಗಳನ್ನು ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಬಹುತೇಕ ಬಡಜನರೆ ಎಲ್ಲ ವರ್ಗದವರು ವಾಸಿಸುವ ಪುರಸಭೆ ವಾರ್ಡ್ ಸಂಖ್ಯೆ 7ರ ಜನರು ಶೌಚಕ್ಕಾಗಿ ಸಾರ್ವಜನಿಕ ಶೌಚಲಯವನ್ನೆ ಅವಲಂಬಿಸಿದ್ದು ಹೆಚ್ಚಾಗಿ ಹಿರಿಯರು, ಮಹಿಳೆಯರು ಚಿಕ್ಕ ಮಕ್ಕಳಿಗೆ ಬಹಳ ಅನುಕೂಲವಾಗಿತ್ತು. ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಏಕಾಏಕಿ ಶೌಚಾಲಯಗಳನ್ನು ಕೆಡವಿದ್ದು, ಯಾರೇ ಆಗಲಿ ಪುರಸಭೆ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವ ಕೃತ್ಯದಲ್ಲಿ ಭಾಗಿಯಾದ ದುಷ್ಕರ್ಮಿಗಳ ಮೇಲೆ ಗಂಭೀರ ಅಪರಾದದಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸ್ಥಳೀಯ ಆಡಳಿತದಿಂದ ಕೂಡಲೇ ಶೌಚಾಲಗಳನ್ನು ದುರಸ್ತಿ ಮಾಡಿಸಿ, ಇಲ್ಲ ಹೊಸದಾಗಿ ನಿರ್ಮಿಸಿ ಕೊಡುವಂತೆ ಆಗ್ರಹಿಸಿ ಪುರಸಭೆ ಎದುರೆ ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿ ಅನುಪಸ್ಥಿತಿಯಲ್ಲಿ ಸಮುದಾಯ ಸಂಘಟನಾಧಿಕಾರಿ ಎಸ್.ಬಿ.ಕದಮ ಮೂಲಕ ಮನವಿ ಸಲ್ಲಿಸಿದರು. ಈ ಸಂಧರ್ಭದಲ್ಲಿ ಶಿವಪ್ಪ ಗಸ್ತಿ, ಮಾರುತಿ ನಾಯಿಕ, ರಮೇಶ ಗಸ್ತಿ, ನಾಮದೇವ ಗಸ್ತಿ, ವಿಠ್ಠಲ ಗಸ್ತಿ, ಪರಸು ಗಸ್ತಿ, ಸೋನಾ ಗಸ್ತಿ, ಕುಶಪ್ಪ ಗಸ್ತಿ, ರವಿ ಗಸ್ತಿ, ಮುಸದಿಕ ಸಂದರವಾಲೆ, ಜೈರೋದಿನ ಫತ್ತೇಮಹ್ಮದ, ಅಣ್ಣಾಸಾಬ ನಾಯಿಕ, ಸುನೀತಾ ಗಸ್ತಿ, ಸಂಜು ಗಸ್ತಿ, ಬಾಯವ್ವ ಗಸ್ತಿ, ಅಶ್ಫಾಕ್ ನಂದಿವಾಲೆ ಇತರರು ಉಪಸ್ಥಿತರಿದ್ದರು.
ದುಷ್ಕರ್ಮಿಗಳಿಂದ ಸಾರ್ವಜನಿಕ ಶೌಚಾಲಯ ಧ್ವಂಸ ಕ್ರಮಕ್ಕೆ ಆಗ್ರಹಿಸಿ ಸಾರ್ವಜನಿಕರಿಂದ ಪ್ರತಿಭಟನೆ ರಾಯಬಾಗ ವರದಿ: ದುಷ್ಕರ್ಮಿಗಳಿಂದ ಸಾರ್ವಜನಿಕ ಶೌಚಾಲಯ ಧ್ವಂಸ ಕ್ರಮಕ್ಕೆ ಆಗ್ರಹಿಸಿ ಸಾರ್ವಜನಿಕರಿಂದ ಪ್ರತಿಭಟನೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ವಾರ್ಡ್ ನಂ 7ರಲ್ಲಿ ಪುರಸಭೆ ಸನ್ 2015-16 ಸಾಲಿನ ಎಸ್.ಎಫ.ಜಿ ಮುಕ್ತ ನಿಧಿ ಯೋಜನೆಯಡಿಲ್ಲಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯಗಳನ್ನು ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಬಹುತೇಕ ಬಡಜನರೆ ಎಲ್ಲ ವರ್ಗದವರು ವಾಸಿಸುವ ಪುರಸಭೆ ವಾರ್ಡ್ ಸಂಖ್ಯೆ 7ರ ಜನರು ಶೌಚಕ್ಕಾಗಿ ಸಾರ್ವಜನಿಕ ಶೌಚಲಯವನ್ನೆ ಅವಲಂಬಿಸಿದ್ದು ಹೆಚ್ಚಾಗಿ ಹಿರಿಯರು, ಮಹಿಳೆಯರು ಚಿಕ್ಕ ಮಕ್ಕಳಿಗೆ ಬಹಳ ಅನುಕೂಲವಾಗಿತ್ತು. ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಏಕಾಏಕಿ ಶೌಚಾಲಯಗಳನ್ನು ಕೆಡವಿದ್ದು, ಯಾರೇ ಆಗಲಿ ಪುರಸಭೆ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವ ಕೃತ್ಯದಲ್ಲಿ ಭಾಗಿಯಾದ ದುಷ್ಕರ್ಮಿಗಳ ಮೇಲೆ ಗಂಭೀರ ಅಪರಾದದಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸ್ಥಳೀಯ ಆಡಳಿತದಿಂದ ಕೂಡಲೇ ಶೌಚಾಲಗಳನ್ನು ದುರಸ್ತಿ ಮಾಡಿಸಿ, ಇಲ್ಲ ಹೊಸದಾಗಿ ನಿರ್ಮಿಸಿ ಕೊಡುವಂತೆ ಆಗ್ರಹಿಸಿ ಪುರಸಭೆ ಎದುರೆ ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿ ಅನುಪಸ್ಥಿತಿಯಲ್ಲಿ ಸಮುದಾಯ ಸಂಘಟನಾಧಿಕಾರಿ ಎಸ್.ಬಿ.ಕದಮ ಮೂಲಕ ಮನವಿ ಸಲ್ಲಿಸಿದರು. ಈ ಸಂಧರ್ಭದಲ್ಲಿ ಶಿವಪ್ಪ ಗಸ್ತಿ, ಮಾರುತಿ ನಾಯಿಕ, ರಮೇಶ ಗಸ್ತಿ, ನಾಮದೇವ ಗಸ್ತಿ, ವಿಠ್ಠಲ ಗಸ್ತಿ, ಪರಸು ಗಸ್ತಿ, ಸೋನಾ ಗಸ್ತಿ, ಕುಶಪ್ಪ ಗಸ್ತಿ, ರವಿ ಗಸ್ತಿ, ಮುಸದಿಕ ಸಂದರವಾಲೆ, ಜೈರೋದಿನ ಫತ್ತೇಮಹ್ಮದ, ಅಣ್ಣಾಸಾಬ ನಾಯಿಕ, ಸುನೀತಾ ಗಸ್ತಿ, ಸಂಜು ಗಸ್ತಿ, ಬಾಯವ್ವ ಗಸ್ತಿ, ಅಶ್ಫಾಕ್ ನಂದಿವಾಲೆ ಇತರರು ಉಪಸ್ಥಿತರಿದ್ದರು.
- ರಾಯಬಾಗ ವರದಿ: ದುಷ್ಕರ್ಮಿಗಳಿಂದ ಸಾರ್ವಜನಿಕ ಶೌಚಾಲಯ ಧ್ವಂಸ ಕ್ರಮಕ್ಕೆ ಆಗ್ರಹಿಸಿ ಸಾರ್ವಜನಿಕರಿಂದ ಪ್ರತಿಭಟನೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ವಾರ್ಡ್ ನಂ 7ರಲ್ಲಿ ಪುರಸಭೆ ಸನ್ 2015-16 ಸಾಲಿನ ಎಸ್.ಎಫ.ಜಿ ಮುಕ್ತ ನಿಧಿ ಯೋಜನೆಯಡಿಲ್ಲಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯಗಳನ್ನು ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಬಹುತೇಕ ಬಡಜನರೆ ಎಲ್ಲ ವರ್ಗದವರು ವಾಸಿಸುವ ಪುರಸಭೆ ವಾರ್ಡ್ ಸಂಖ್ಯೆ 7ರ ಜನರು ಶೌಚಕ್ಕಾಗಿ ಸಾರ್ವಜನಿಕ ಶೌಚಲಯವನ್ನೆ ಅವಲಂಬಿಸಿದ್ದು ಹೆಚ್ಚಾಗಿ ಹಿರಿಯರು, ಮಹಿಳೆಯರು ಚಿಕ್ಕ ಮಕ್ಕಳಿಗೆ ಬಹಳ ಅನುಕೂಲವಾಗಿತ್ತು. ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಏಕಾಏಕಿ ಶೌಚಾಲಯಗಳನ್ನು ಕೆಡವಿದ್ದು, ಯಾರೇ ಆಗಲಿ ಪುರಸಭೆ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವ ಕೃತ್ಯದಲ್ಲಿ ಭಾಗಿಯಾದ ದುಷ್ಕರ್ಮಿಗಳ ಮೇಲೆ ಗಂಭೀರ ಅಪರಾದದಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸ್ಥಳೀಯ ಆಡಳಿತದಿಂದ ಕೂಡಲೇ ಶೌಚಾಲಗಳನ್ನು ದುರಸ್ತಿ ಮಾಡಿಸಿ, ಇಲ್ಲ ಹೊಸದಾಗಿ ನಿರ್ಮಿಸಿ ಕೊಡುವಂತೆ ಆಗ್ರಹಿಸಿ ಪುರಸಭೆ ಎದುರೆ ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿ ಅನುಪಸ್ಥಿತಿಯಲ್ಲಿ ಸಮುದಾಯ ಸಂಘಟನಾಧಿಕಾರಿ ಎಸ್.ಬಿ.ಕದಮ ಮೂಲಕ ಮನವಿ ಸಲ್ಲಿಸಿದರು. ಈ ಸಂಧರ್ಭದಲ್ಲಿ ಶಿವಪ್ಪ ಗಸ್ತಿ, ಮಾರುತಿ ನಾಯಿಕ, ರಮೇಶ ಗಸ್ತಿ, ನಾಮದೇವ ಗಸ್ತಿ, ವಿಠ್ಠಲ ಗಸ್ತಿ, ಪರಸು ಗಸ್ತಿ, ಸೋನಾ ಗಸ್ತಿ, ಕುಶಪ್ಪ ಗಸ್ತಿ, ರವಿ ಗಸ್ತಿ, ಮುಸದಿಕ ಸಂದರವಾಲೆ, ಜೈರೋದಿನ ಫತ್ತೇಮಹ್ಮದ, ಅಣ್ಣಾಸಾಬ ನಾಯಿಕ, ಸುನೀತಾ ಗಸ್ತಿ, ಸಂಜು ಗಸ್ತಿ, ಬಾಯವ್ವ ಗಸ್ತಿ, ಅಶ್ಫಾಕ್ ನಂದಿವಾಲೆ ಇತರರು ಉಪಸ್ಥಿತರಿದ್ದರು.1
- ನ್ಯಾಯಾಲಯದ ತೀರ್ಪನ್ನು ಗೌರವಿಸುವ ಬದಲು ಅಪರಾಧಿಗಳನ್ನು ಸಮರ್ಥಿಸಿಕೊಳ್ಳುವುದು ಸರಿಯಲ್ಲ ಎಂದು ಜನಜಾಗೃತಿ ಸಂಘದ ಮುಖಂಡ ಸುರೇಶ ಕೋರಿ ತಿಳಿಸಿದರು. ಧಾರವಾಡ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೊಗೇಶಗೌಡ ಕೊಲೆ ಪ್ರಕರಣದಲ್ಲಿ ಹೋರಾಟ ಮಾಡಿದ ಜನ ಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ವಿರುದ್ಧ ಧಾರವಾಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಏಗನಗೌಡರ ಅವರ ಹೇಳಿಕೆ ಖಂಡನೀಯವಾಗಿದೆ. ಮಾಜಿ ಸಚಿವ ವಿನಯ ಕುಲಕರ್ಣಿ ಮೇಲೆ ಅರವಿಂದ ಏಗನಗೌಡರ ಅವರಿಗೆ ಅಭಿಮಾನ ಇರಲಿ ಮೊದಲು ಭಾರತದ ಸಂವಿಧಾನಕ್ಕೆ ಗೌರವ ನೀಡುವುದನ್ನು ಕಲಿಯಬೇಕು. ನಮ್ಮ ದೇಶದ ಕಾನೂನಿಗೆ ಗೌರವ ನೀಡಬೇಕು. ಇವರು ನ್ಯಾಯಾಲಯದ ವಿರುದ್ಧ ಮೌನ ಪ್ರತಿಭಟನೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.1
- ವಿಧಿಯೇ ನಿನೇಷ್ಟು ಕ್ರೂರಿ.. ಈ ಸಾವು ನ್ಯಾಯವೇ... ಹೆತ್ತ ಕಂದನ ಕಳೆದುಕೊಳ್ಳೋ ನೋವು ಕೊಡಬೇಡ ದೇವ್ರೆ.. ಕಿತ್ತುಕೊಳ್ಳೊದೆ ನಿಜವಾದ್ರೆ ಕೊಡೋದ್ಯಾಕೆ?? ಕಸಿದುಕೊಳ್ಳೊದ್ಯಾಕೆ.??. ಆತ್ಮೀಯ ಮಿತ್ರ Shankar Kamatagi ಅವರ ಮಗ ನಿನ್ನೆ ಬೆಳ್ಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದು ನಮ್ಮನ್ನೆಲ್ಲ ದಿಗ್ಬ್ರಮೆಗೊಳಿಸಿದೆ. ರಸ್ತೆ ಪಕ್ಕದಲ್ಲಿ ನಿಂತಾಗ ಯಮರೂಪದಲ್ಲಿ ಬಂದ ಕಾರು ಬಡಿದ ಪರಿಣಾಮ ಮಗು ಜೀವವನ್ನೇ ಬಿಟ್ಟಿದೆ. ಸುಂದರ,ಬೆಳ್ಳನೆಯ ಮಗುವನ್ನ ಕಳೆದುಕೊಂಡ ತಂದೆ ತಾಯಿಯ ನೋವು ಹೇಳತೀರದ್ದು..ದೇವರ ಇಷ್ಟು ಕ್ರೂರ ನೋವು ಯಾರಿಗೂ ಕೊಡಬೇಡ. ವಿಪರ್ಯಾಸ ಎಂದರೆ ಕೇಲವು ದಿನಗಳ ಹಿಂದೆ ಅಲ್ಲಿ ರಸ್ತೆ ಹಂಪ್ಸ ಹಾಕಲು ಮಗುವಿನ ತಂದೆನೇ ಒತ್ತಾಯಿಸಿದರು. ಹಂಪ್ಸ ಇರದ ಕಾರಣ ವೇಗವಾಗಿ ಬಂದ ಕಾರು ಮಗುವಿಗೆ ಗುದ್ದಿದೆ.ಈ ವ್ಯವಸ್ಥೆಯಲ್ಲಿ ಯಾರನ್ನ ದೂಷಿಸಿಸಬೇಕೋ ತಿಳಿತಿಲ್ಲ.😭😭 ಸ್ಥಳೀಯ ಜನರು ಅಪಾಯ ತರುವ ಯಾವುದೇ ಸಮಸ್ಯೆಗಳಿದ್ದರೆ ಸ್ಥಳೀಯ ಮಟ್ಟದ ಅಧಿಕಾರಿಗಳ ಗಮನಕ್ಕೆ ತನ್ನಿ ..ಇಲ್ಲದೇ ಹೋದರೆ ಈ ರೀತಿಯ ಘಟನೆಗಳು ಸಂಭವಿಸುವುದರಲ್ಲಿ ಸಂಶಯನೇ ಇಲ್ಲ.. ನನ್ನದೊಂದು ವಿನಂತಿ: ವಿಧಿಯ ಕ್ರೌರ್ಯಕ್ಕೆ ಬೆಲೆ ತೆತ್ತ ಈ ಕುಟುಂಬಕ್ಕೆ ಸಾಮಾಜಿಕವಾಗಿ ನಾವು ಜೊತೆಯಿರೋಣ. ರಸ್ತೆಗಳಲ್ಲಿ ಸಂಚರಿಸುವಾಗ ನಾವು ಮಾಡುವ ಸಣ್ಣ ತಪ್ಪುಗಳು ಅಥವಾ ಅಜಾಗರೂಕತೆ ಇಂತಹ ಘೋರ ದುರಂತಗಳಿಗೆ ಕಾರಣವಾಗುತ್ತವೆ. ಪ್ರತಿ ಜೀವವೂ ಅಮೂಲ್ಯ. "ಹೋಗಿ ಬಾ ಪುಟ್ಟ ಕಂದಮ್ಮ, ನಿನ್ನ ನಗು ಆ ಮನೆಯಲ್ಲಿ ಮತ್ತೆ ಮರುಕಳಿಸಲಿ. ಅಗಲಿದ ಆ ಪುಟ್ಟ ಆತ್ಮಕ್ಕೆ ಶಾಂತಿ ಸಿಗಲಿ, ಮತ್ತು ಆ ತಂದೆ ತಾಯಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಭರಿಸಲಿ... ಮತ್ತೆ ಹುಟ್ಟಿ ಬಾ ಕಂದ..1
- Post by @april14news1
- ಶಿಗ್ಗಾವಿ: ಶಿಗ್ಗಾವಿ ತಾಲೂಕಿನ ಹನುಮರಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಶಿಕ್ಷಕಿ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಗ್ರಾಮಸ್ಥರು ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಹನುಮರಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ 29ರಲ್ಲಿ ಕಳೆದ ಆರು ತಿಂಗಳಿಂದ ಶಿಕ್ಷಕಿ ಹುದ್ದೆ ಖಾಲಿ ಇತ್ತು. ಈ ಹುದ್ದೆಗೆ ಅದೇ ಗ್ರಾಮದ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ನಿಯಮ ಬಾಹಿರವಾಗಿ ಬೇರೆ ಊರಿನ ಮಹಿಳೆಯನ್ನು ನೇಮಕ ಮಾಡಿದ್ದಾರೆ ಎಂಬುದು ಗ್ರಾಮಸ್ಥರ ಪ್ರಮುಖ ಆರೋಪ. ನೀಡಿದ್ದರೂ, ಯಾವುದೇ ಪರಿಶೀಲನೆ ನಡೆಸದೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ (CDPO) ಗಣೇಶ್ ಅವರಿಗೆ ಗ್ರಾಮಸ್ಥರು ಫೇರಾವ್ ಹಾಕಿದರು. "ಅಕ್ರಮ ನೇಮಕಾತಿಯನ್ನು ತಕ್ಷಣವೇ ರದ್ದುಪಡಿಸಬೇಕು, ಅಲ್ಲಿಯವರೆಗೆ ಅಂಗನವಾಡಿ ಬೀಗ ತೆಗೆಯುವುದಿಲ್ಲ" ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.1
- ದೇವಸ್ಥಾನಗಳಲ್ಲಿ ಜೀರ್ಣೋದ್ಧಾರಕ್ಕಾಗಿ ಆರಾಧನಾ ಯೋಜನೆ ಅಡಿಯಲ್ಲಿ3.5 ಕೋಟಿ ರೂಪಾಯಿ ಮೀಸಲು ಇರಿಸಲಾಗಿದೆ ಎಂದು ಶಾಸಕ ಯಾಸೀರ್ ಖಾನ್ ಪಠಾಣ ಹೇಳಿದರು, ಶಿಗ್ಗಾವಿ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ, ಆರಾಧನಾ ಯೋಜನೆ ಅಡಿ ದೇವಸ್ಥಾನಗಳ ಅಭಿವೃದ್ಧಿಗಾಗಿ ಬಿಡುಗಡೆಯಾದ ಚೆಕ್ ವಿತರಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು, ಈ ಸಂದರ್ಭದಲ್ಲಿ ತಾಲೂಕ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಎಸ್ ಎಫ್ ಮನಕಟ್ಟಿ, ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುಂಡಪ್ಪ ಜಲ್ದಿ, ಮುಖಂಡರಾದ ಅಣ್ಣಪ್ಪ ಲಮಾಣಿ, ಅಶೋಕ್ ಓಲೆಕಾರ್, ಎಂ ಜೆ ಮುಲ್ಲಾ , ಚಂದ್ರು ಕೊಡ್ಲಿವಾಡ್, ಹಾಗೂ ವಿವಿಧ ಗ್ರಾಮಗಳ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು,1
- ಗುಳೇದಗುಡ್ಡ: ಮಹಾದೇವ ಜಗತಾಪ ಅವರ ಕಾವ್ಯ ರಾಷ್ಟ್ರ ಪ್ರೇಮವನ್ನು ಪ್ರತಿಪಾದಿಸುತ್ತದೆ. ಕವಿಯ ಆಲೋಚನೆ ನವೋದಯದ ಛಾಯೆಯಾಗಿ, ಸಾಂಸ್ಕೃತಿಕ ಹಿರಿಮೆ, ಇತಿಹಾಸ, ಚಿತ್ರಕಲಾ ಯೋಗ ಪರಿಣಿತಿಯ ಅನುಭವಗಳ ಕನ್ನಡಿಯಾಗಿದೆ. ಎಂದು ಪ್ರೊ. ಚಂದ್ರಶೇಖರ ಹೆಗಡೆ ಹೇಳಿದರು. ಅವರು ಭಾನುವಾರ ಪಟ್ಟಣದ ಮಹಾದೇವ ಜಗತಾಪ ಅವರ ಮನೆಯ ಚಿತ್ರ ಚೇತನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಸಾಹಿತಿ ಮಹದೇವ ಜಗತಾಪ ಅವರ ರಚಿಸಿದ ನೋವು ನಲಿವು ಕವನ ಸಂಕಲನ ಕೃತಿ ಕುರಿತು ಮಾತನಾಡಿ, ಮಹಾದೇವ ಜಗತಾಪ ಅವರು ಇಂದು ನೋವು ನಲಿವು ಕವನ ಸಂಕಲನ ರಚನೆಯ ಮೂಲಕ ಸೃಜನಸಾಹಿತ್ಯಲೋಕದತ್ತ ತಮ್ಮನ್ನು ವಿಸ್ತರಿಸಿಕೊಳ್ಳುತ್ತಿರುವದು ಆದರ್ಶಪ್ರಾಯವಾಗಿದೆ. ಜಗತಾಪ ಅವರ ಕಾವ್ಯದಲ್ಲಿ ದೇಶಪ್ರೇಮ, ಪ್ರಕೃತಿ ಪ್ರೀತಿ, ಯೋಗಸಾಧನೆ, ಆಧ್ಯಾತ್ಮಿಕತೆ, ವಿಜ್ಞಾನಕ್ಕೆ ಸಂಬಂಧಿಸಿದ ಚಿಂತನಾರ್ಹ ಸಂಗತಿಗಳಿರುವುದು ಅವರ ಬಹುಮುಖಿ ಅಧ್ಯಯನವನ್ನು ಅನಾವರಣಗೊಳಿಸಿದೆ ಎಂದು ಹೇಳಿದರು. ಡಾ. ವಿ.ಎ.ಬೆನಕನಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ರಾಜ್ಯ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಎಸ್. ಕೋಟಿ, ಡಾ.ರಾಜಶೇಖರ ಬಸುಪಟ್ಟದ ಮಾತನಾಡಿದರು. ಈ ಸಂದರ್ಭದಲ್ಲಿ ಡಾ.ವಿ.ಎನ್. ಢಾಣಕಶಿರೂರ, ಅಶೋಕ ಹೆಗಡೆ, ಸುರೇಶ ಪರ್ವತೀಕರ, ರವಿ ಅಂಗಡಿ, ಸಿದ್ದು ರಾವಳ, ಎಸ್. ಎಸ್.ಗುರವ, ಸುರೇಶ ವಗ್ಗಾ, ಸಿದ್ದರಾಮಯ್ಯ ಪುರಾಣಿಕಮಠ, ದೀಪಕ ಜಗತಾಪ, ಮೋಹನ ಕರನಂದಿ, ಶಂಕರ ಲಮಾಣಿ,ವಿದ್ಯಾ ಜಗತಾಪ, ಶಶಿಕಲಾ ಜಗತಾಪ, ಹುಚ್ಚೇಶ ಯಂಡಿಗೇರಿ, ಲಕ್ಷ್ಮೀಭಾಯಿ ಜಾಧವ ಇತರರು ಇದ್ದರು. ಅಭಾಸಾಪ ಕಾರ್ಯದರ್ಶಿ ಮಲ್ಲಿಕಾರ್ಜುನ ನಿರೂಪಿಸಿದರು.1
- ಧಾರವಾಡ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯನ್ನು ಬೃಹತ್ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬಹುಮತದಿಂದ ಅಂಗೀಕಾರ ಮಾಡಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಭಾ ನಾಯಕ ಈರೇಶ ಅಂಚಟಗೇರಿ ತಿಳಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸದಸ್ಯರು ಈ ವಿಷಯದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕ ಮಾಡುವುದರಿಂದ ಬಹಳಷ್ಟು ಸಮಸ್ಯೆಗಳು ಉಂಟಾಗುತ್ತವೆ. ಗ್ರಾಮೀಣ ಭಾಗದ ಹಳ್ಳಿಗಳನ್ನು ಮಹಾನಗರ ಪಾಲಿಕೆ ಸೇರಿಸುವುದರಿಂದ ಬಹಳಷ್ಟು ತೊಂದರೆ ಉಂಟಾಗಲಿದೆ ಎಂದು ತಿಳಿಸಿದರು. ಬೆಂಗಳೂರು ಮಾದರಿಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪಡಿಸಬೇಕು. ವೇಗವಾಗಿ ಬೆಳೆಯುತ್ತಿರುವ ಕೈಗಾರಿಕೆಗಳು ಹಾಗೂ ನಗರೀಕರಣ ಮತ್ತು ಹೆಚ್ಚುತ್ತಿರುವ ನಾಗರಿಕ ಸೇವಾ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.1