Shuru
Apke Nagar Ki App…
ಗುಂಬಳ್ಳಿ ಕರುಣಾ ಟ್ರಸ್ಟ್ ಬಳಿ ಆಟೊ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, 4ಮಂದಿಗೆ ತೀವ್ರವಾಗಿ ಗಾಯಗೊಂಡಿರುವ ಘಟಣೆ ನಡೆದಿದೆ. ಯಳಂದೂರು ನ್ಯೂಸ್ ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು ಯಳಂದೂರು ತಾಲೂಕಿನ ಗುಂಬಳ್ಳಿ ಕರುಣಾ ಟ್ರಸ್ಟ್ ಬಳಿ ಆಟೊ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, 4ಮಂದಿಗೆ ತೀವ್ರವಾಗಿ ಗಾಯಗೊಂಡಿರುವ ಘಟನೆ ಬುದುವಾರ ಬೆಳಿಗ್ಗೆ ನಡೆದಿದೆ. ಬುದುವಾರ ಬೆಳಿಗ್ಗೆ 11ಗಂಟೆ ಸಮಯ ದಲ್ಲಿ ಯಳಂದೂರು ಪಟ್ಟಣ ದಿಂದ ಗುಂಬಳ್ಳಿ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದ ಸಮಯ ದಲ್ಲಿ . ಮಾರ್ಗಮಧ್ಯೆ ಚಾಲಕನ ನಿಯಂತ್ರಣ ತಪ್ಪಿದ ಆಟೊ ರಸ್ತೆಯಲ್ಲೇ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ಚಾಲಕ ಸೇರಿದಂತೆ ಮೂವರು ಮಹಿಳೆಯರಿಗೆ ಗಾಯ ವಾಗಿದ್ದು ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಗಾಯಳು ಗಳನ್ನು ಆಂಬುಲೆನ್ಸ್‌ಗಳ ಮೂಲಕ ಗಾಯಾಳುಗಳನ್ನು ಪಟ್ಟಣದ ಆಸ್ಪತ್ರೆಗೆ ರವಾನಿಸಿದ್ದಾರೆ. ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
S.Puttaswamyhonnur
ಗುಂಬಳ್ಳಿ ಕರುಣಾ ಟ್ರಸ್ಟ್ ಬಳಿ ಆಟೊ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, 4ಮಂದಿಗೆ ತೀವ್ರವಾಗಿ ಗಾಯಗೊಂಡಿರುವ ಘಟಣೆ ನಡೆದಿದೆ. ಯಳಂದೂರು ನ್ಯೂಸ್ ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು ಯಳಂದೂರು ತಾಲೂಕಿನ ಗುಂಬಳ್ಳಿ ಕರುಣಾ ಟ್ರಸ್ಟ್ ಬಳಿ ಆಟೊ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, 4ಮಂದಿಗೆ ತೀವ್ರವಾಗಿ ಗಾಯಗೊಂಡಿರುವ ಘಟನೆ ಬುದುವಾರ ಬೆಳಿಗ್ಗೆ ನಡೆದಿದೆ. ಬುದುವಾರ ಬೆಳಿಗ್ಗೆ 11ಗಂಟೆ ಸಮಯ ದಲ್ಲಿ ಯಳಂದೂರು ಪಟ್ಟಣ ದಿಂದ ಗುಂಬಳ್ಳಿ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದ ಸಮಯ ದಲ್ಲಿ . ಮಾರ್ಗಮಧ್ಯೆ ಚಾಲಕನ ನಿಯಂತ್ರಣ ತಪ್ಪಿದ ಆಟೊ ರಸ್ತೆಯಲ್ಲೇ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ಚಾಲಕ ಸೇರಿದಂತೆ ಮೂವರು ಮಹಿಳೆಯರಿಗೆ ಗಾಯ ವಾಗಿದ್ದು ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಗಾಯಳು ಗಳನ್ನು ಆಂಬುಲೆನ್ಸ್‌ಗಳ ಮೂಲಕ ಗಾಯಾಳುಗಳನ್ನು ಪಟ್ಟಣದ ಆಸ್ಪತ್ರೆಗೆ ರವಾನಿಸಿದ್ದಾರೆ. ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
More news from ಕರ್ನಾಟಕ and nearby areas
- ಗುಂಬಳ್ಳಿ ಕರುಣಾ ಟ್ರಸ್ಟ್ ಬಳಿ ಆಟೊ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, 4ಮಂದಿಗೆ ತೀವ್ರವಾಗಿ ಗಾಯಗೊಂಡಿರುವ ಘಟಣೆ ನಡೆದಿದೆ. ಯಳಂದೂರು ನ್ಯೂಸ್ ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು ಯಳಂದೂರು ತಾಲೂಕಿನ ಗುಂಬಳ್ಳಿ ಕರುಣಾ ಟ್ರಸ್ಟ್ ಬಳಿ ಆಟೊ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, 4ಮಂದಿಗೆ ತೀವ್ರವಾಗಿ ಗಾಯಗೊಂಡಿರುವ ಘಟನೆ ಬುದುವಾರ ಬೆಳಿಗ್ಗೆ ನಡೆದಿದೆ. ಬುದುವಾರ ಬೆಳಿಗ್ಗೆ 11ಗಂಟೆ ಸಮಯ ದಲ್ಲಿ ಯಳಂದೂರು ಪಟ್ಟಣ ದಿಂದ ಗುಂಬಳ್ಳಿ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದ ಸಮಯ ದಲ್ಲಿ . ಮಾರ್ಗಮಧ್ಯೆ ಚಾಲಕನ ನಿಯಂತ್ರಣ ತಪ್ಪಿದ ಆಟೊ ರಸ್ತೆಯಲ್ಲೇ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ಚಾಲಕ ಸೇರಿದಂತೆ ಮೂವರು ಮಹಿಳೆಯರಿಗೆ ಗಾಯ ವಾಗಿದ್ದು ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಗಾಯಳು ಗಳನ್ನು ಆಂಬುಲೆನ್ಸ್‌ಗಳ ಮೂಲಕ ಗಾಯಾಳುಗಳನ್ನು ಪಟ್ಟಣದ ಆಸ್ಪತ್ರೆಗೆ ರವಾನಿಸಿದ್ದಾರೆ. ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.1
- ಚಾಮರಾಜನಗರ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ರಚನೆಗೆ ಮಲ್ಲೇಶ್ ಆಗ್ರಹ ವರದಿ: ಹೊಮ್ಮನಂಜುಂಡನಾಯಕ ಚಾಮರಾಜನಗರ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ರಚನೆಗೆ ಮಲ್ಲೇಶ್ ಆಗ್ರಹ ಚಾಮರಾಜನಗರ: ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ರಚನೆ ಮಾಡಬೇಕು ಎಂದು ಚಿಲಕವಾಡಿ ಮಲ್ಲೇಶ್ ಆಗ್ರಹಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರತಿ ಜಿಲ್ಲೆಯಲ್ಲೂ ಪೋಲಿಸ್ ದೂರು ಪ್ರಾಧಿಕಾರ ಇರುತ್ತದೆ. ಆದರೆ ಚಾಮರಾಜನಗರ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಪೊಲೀಸ್ ದೂರು ಪ್ರಾಧಿಕಾರ ರಚನೆ ಮಾಡುವಂತೆ ಇಲಾಖೆಯಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಜಿಲ್ಲಾ ಮಟ್ಟದ ಪೊಲೀಸ್ ದೂರು ಪ್ರಾಧಿಕಾರ ರಚನೆ ಮಾಡಿ ಸಾರ್ವಜನಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಪೊಲೀಸ್ ದೂರು ಪ್ರಾಧಿಕಾರವು ಪೊಲೀಸರ ಗಂಭೀರ ದುರ್ನಡತೆ, ದೌರ್ಜನ್ಯ ವಿರುದ್ಧ . ಸಾರ್ವಜನಿಕರಿಂದ ದೂರು ಸ್ವೀಕರಿಸಿ ತನಿಖೆ ನಡೆಸುವ ಸ್ವಾಯತ, ಉನ್ನತಮಟ್ಟದ ಪಾಧಿಕಾರವಾಗಿದೆ. ಇದನ್ನು . ಜಿಲ್ಲೆಯಲ್ಲಿ ರಚನೆ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ನ್ಯಾಯ ಸಿಗುತ್ತದೆ. ತಪ್ಪಿಸ್ಥ ಪೊಲೀಸ ಅಧಿಕಾರಿಗಳಿಗೆ ಸಿಬ್ಬಂದಿ. ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ. ಅಮಾಯಕರಿಗೆ ನ್ಯಾಯ ದೊರೆಯುತ್ತದೆ ಎಂದರು. 2021 ಸಾಲಿನ ಗ್ರಾ.ಪಂ.ಚುನಾವಣೆಗೆ ಸಂಬಂಧಿಸಿದಂತೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾನು ಒಂದು ಅಟ್ರಾಸಿಟಿ ದೂರು ನೀಡಿದ ಉದ್ದೇಶದಿಂದ ನನ್ನ ವಿರುದ್ಧ ಒಂದು ಸುಳ್ಳು ಪ್ರತಿದೂರು ದಾಖಲಿಸಿ, ಪೋಲಿಸರು ಅಧಿಕಾರ ದುರುಪಯೋಗ ಮಾಡಿರುತ್ತಾರೆ. ಅಲ್ಲಿಂದ ಇಲ್ಲಿಯತನಕ ಮಾನವಹಕ್ಕು ಆಯೋಗ, ಎಸ್‌ಸಿ, ಎಸ್‌ಟಿ ಹಿತರಕ್ಷಣಾ ಸಮಿತಿ ಇತರ ಮೇಲಾಧಿಕಾರಿಗಳಿಗೆ ನಾನು ದೂರು ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲೆಯ ಭ್ರಷ್ಟ ಪೋಲಿಸ್ ಒಂದೇ ಠಾಣೆಯಲ್ಲಿ ಎರಡು, ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿಕೊಟ್ಟಿರುವುದು ಕಾರ್ಯಾಂಗ, ಶಾಸಕಾಂಗದ ಭ್ರಷ್ಟಾಚಾರವನ್ನು ಎತ್ತಿ ತೋರಿಸುತ್ತದೆ. ನನ್ನ ಮೇಲೆ ಸುಳ್ಳು ಪ್ರಕರಣ ದಾಖಲು... ಮಾಡಿದರು. ಅವೆಲ್ಲವನ್ನು ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಂಡಿದ್ದೇನೆ. ಆಗಾಗಿ ತಪ್ಪಿಸ್ಥ ಪೋಲಿಸ್. ಅಧಿಕಾರಿಗಳಿಗೆ ವಿರುದ್ಧ ಕ್ರಮ ಆಗಬೇಕು. ಜಿಲ್ಲೆಯಲ್ಲಿ ಪೊಲೀಸ್ ದೂರು ಪ್ರಾಧಿಕಾರ ರಚನೆ ಆಗಿಲ್ಲ. ಮೇಲಾಧಿಕಾರಿಗಳಾದ ಎಸ್‌ಪಿ, ಡಿಸಿ ಅವರು ಸಮಿತಿ ರಚನೆ ಮಾಡದೆ ಹ ಪೊಲೀಸ್ ಇಲಾಖೆಯಲ್ಲಿ ನಡೆಯುವ ದೌರ್ಜನ್ಯ, ದಬ್ಬಾಳಿಕೆಗಳನ್ನು ಮುಚ್ಚಿ ಹಾಕಿ, ಸಾರ್ವಜನಿಕರ ಮೇಲೆ ಸುಳ್ಳುಪ್ರಕರಣ ದಾಖಲು ಮಾಡುವುದು, ತಮ್ಮ ಅಧಿಕಾರಿಗಳನ್ನು ರಕ್ಷಣೆ ಮಾಡುವುದಕ್ಕಾಗಿ ಪ್ರಾಧಿಕಾರಿ ರಚನೆ ಮಾಡಿಲ್ಲ. ಗೃಹ ಸಚಿವರು ಇಲಾಖೆಯನ್ನು ಶುದ್ಧಗೊಳಿಸಿ ಸಾರ್ವಜನಿಕರ ಮೇಲೆ ಆಗುವ ಸುಳ್ಳು ಎಫ್‌ಐಆರ್‌ಗಳನ್ನು ಮರುಪರಿಶೀಲನೆಗೆ ಅವಕಾಶ ಕೊಡಬೇಕು. ಚಾಮರಾಜನಗರ ಜಿಲ್ಲೆಯಲ್ಲಿ ಪೊಲೀಸ್ ದೂರು ಪಾಧಿಕಾರಿ ರಚನೆ ಮಾಡಬೇಕು ಮಲ್ಲೇಶ್ ಒತ್ತಾಯಿಸಿದರು.3
- ಮಸಣಾಪುರದಲ್ಲಿ ವಿಜೃಂಭಣೆಯಿಂದ ನಡೆದ ಕಳ್ಳಿಪುರಮಾರಮ್ಮನ ರಥೋತ್ಸವ ಚಾಮರಾಜನಗರ: ಮಸಣಾಪುರ-ಚಾಟೀಪುರ ಗ್ರಾಮದಲ್ಲಿ ಕಳೆದ 3 ದಿನಗಳಿಂದ ಗ್ರಾಮದೇವತೆ ಶ್ರೀ ಕಳ್ಳಿಪುರಮಾರಮ್ಮನ ಹಬ್ಬವು ತುಂಬಾ ಶಾಂತಿಯುತವಾಗಿ ನಡೆಯಿತು. ಕಳೆದ 3 ತಿಂಗಳಿನಿಂದ ಆತಂಕದಲ್ಲಿ ಇದ್ದ ಗ್ರಾಮಸ್ಥರ ಆತಂಕವನ್ನು ದೂರಮಾಡಿ ಗ್ರಾಮದೇವತೆ ಹಬ್ಬವು ವಿಜೃಂಭಣೆಯಿಂದ ನಡೆಯಲು ಆರಕ್ಷಕರು ತೋರಿದ ಪ್ರೀತಿ ಸಹನೆಗೆ ಕೈಮುಗಿದು ನಮಸ್ಕರಿಸಬೇಕು ಅಂತೆಯೇ ಇಂದು ಹಬ್ಬದ ಕೊನೆಯ ದಿನವೂ ಕೂಡ ದೇವತೆಯ ಮೆರವಣಿಗೆಯ ಮುಖಾಂತರ ಶಾಂತಿಯುತವಾಗಿ ಅಂತ್ಯವಾಯಿತು.2
- ನಿಗಾರ್ತಿಕರನ್ನು ಅಡ್ಡ ಮಾರ್ಗದಲ್ಲಿ ಕರೆದುಕೊಂಡು ಬಂದು ಜೀತ ಪದ್ಧತಿಯಲ್ಲಿ ತೊಡಗಿಸಿಕೊಳ್ಳುತ್ತಿರುವ ಆರೋಪ,,, ಹನೂರು ತಾಲ್ಲೂಕಿನ ಸೂಳೆರಿಪಾಳ್ಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಂಗನ ದೊಡ್ಡಿ ಗ್ರಾಮದಲ್ಲಿ ಅಕ್ರಮವಾಗಿ ಯಾವುದೇ ಸೌಲಭ್ಯ ನೀಡದೆ ಸತತವಾಗಿ ಒಂದು ವರ್ಷದಿಂದ ದುಡಿಸಿಕೊಳ್ಳುತ್ತಿದ್ದೂ ರೈತ ಸಂಘದ ಚಾಮರಾಜನಗರ ಕಾರ್ಯಧ್ಯಕ್ಷ ಅಮದಜ್ ಖಾನ್ ಮುಖಾಂತರ ಬೆಳಕಿಗೆ ಬಂದಿದೆ,,,4
- ಹನೂರು: ಕೆಲಸ ಕೊಡಿಸುವುದಾಗಿ ನಂಬಿಸಿ ಕರೆತಂದು, ಕಳೆದ ಒಂದು ವರ್ಷದಿಂದ ಕೂಲಿ ನೀಡದೆ ಗುಡ್ಡದ ತಪ್ಪಲಿನಲ್ಲಿ ಅಕ್ರಮವಾಗಿ ಬಂಧಿಸಿ ದುಡಿಸಿಕೊಳ್ಳಲಾಗುತ್ತಿತ್ತು ಎನ್ನಲಾದ ತಮಿಳುನಾಡು, ಬಿಹಾರ ಹಾಗೂ ಆಂಧ್ರಪ್ರದೇಶ ಮೂಲದ 30 ಕಾರ್ಮಿಕರನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ಸುದ್ದಿ ಬಿತ್ತರವಾದ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಕಾರ್ಮಿಕರನ್ನು ಹನೂರಿನ ಡಾ.ಬಿ.ಆರ್. ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಿದ್ದಾರೆ. ಕಾರ್ಮಿಕರಿಗೆ ಆಹಾರ, ಆಶ್ರಯ ಹಾಗೂ ವೈದ್ಯಕೀಯ ನೆರವು ಒದಗಿಸುವ ಕ್ರಮ ಕೈಗೊಳ್ಳಲಾಗಿದೆ. ಕಾರ್ಮಿಕರನ್ನು ಅಕ್ರಮವಾಗಿ ಬಂಧಿಸಿ ದುಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಷಣ್ಮುಗಂ ಮೇಸ್ತ್ರಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಹನೂರು: ಕೆಲಸ ಕೊಡಿಸುವುದಾಗಿ ನಂಬಿಸಿ ಕರೆತಂದು, ಕಳೆದ ಒಂದು ವರ್ಷದಿಂದ ಕೂಲಿ ನೀಡದೆ ಗುಡ್ಡದ ತಪ್ಪಲಿನಲ್ಲಿ ಅಕ್ರಮವಾಗಿ ಬಂಧಿಸಿ ದುಡಿಸಿಕೊಳ್ಳಲಾಗುತ್ತಿತ್ತು ಎನ್ನಲಾದ ತಮಿಳುನಾಡು, ಬಿಹಾರ ಹಾಗೂ ಆಂಧ್ರಪ್ರದೇಶ ಮೂಲದ 30 ಕಾರ್ಮಿಕರನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ಸುದ್ದಿ ಬಿತ್ತರವಾದ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಕಾರ್ಮಿಕರನ್ನು ಹನೂರಿನ ಡಾ.ಬಿ.ಆರ್. ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಿದ್ದಾರೆ. ಕಾರ್ಮಿಕರಿಗೆ ಆಹಾರ, ಆಶ್ರಯ ಹಾಗೂ ವೈದ್ಯಕೀಯ ನೆರವು ಒದಗಿಸುವ ಕ್ರಮ ಕೈಗೊಳ್ಳಲಾಗಿದೆ. ಕಾರ್ಮಿಕರನ್ನು ಅಕ್ರಮವಾಗಿ ಬಂಧಿಸಿ ದುಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಷಣ್ಮುಗಂ ಮೇಸ್ತ್ರಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.1
- ಪಟ್ಟಣದಲ್ಲಿ ಚೆಸ್ಕಾಂ ಪ್ರಕಟಣೆ, ವಿದ್ಯುತ್ ಕಂಬಗಳ ಸ್ಥಳಾಂತರ ಕಾರಣ ಕಿರುಗಾವಲು ವ್ಯಾಪ್ತಿಯ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಎಂದಿರುವ ಇ ಇ ಮಳವಳ್ಳಿ : ತಾಲ್ಲೂಕಿನ ಕಿರುಗಾವಲು ಸಂತೆಮಾಳ ರಸ್ತೆ ಅಗಲೀಕರಣ ಕಾರ್ಯ ನಡೆ ಯುತ್ತಿದ್ದು ವಿದ್ಯುತ್ ಕಂಬಗಳ ಸ್ಥಳಾಂತರಗೊಳಿಸಬೇಕಾಗಿರುವುದರಿಂದ ಸೆಪ್ಟಂಬರ್ 3 ರಂದು 66/11 ಕಿರುಗಾವಲು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಮಾರ್ಗಗಳ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ. ಈ ಕುರಿತು ಬುಧವಾರ ಸಾಯಂಕಾಲ 4 ಗಂಟೆ ಸಮಯದಲ್ಲಿ ಪ್ರಕಟಣೆ ನೀಡಿರುವ ಚೆಸ್ಕಾಂನ ಮಳವಳ್ಳಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಟಿ ಪುಟ್ಟಸ್ವಾಮಿ ಅವರು ಸೆಪ್ಟಂಬರ್ 3 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ವರೆಗೆ ಕಿರುಗಾವಲು ವಿ ವಿ ಕೇಂದ್ರ ವ್ಯಾಪ್ತಿಯ ಕಲ್ಕುಣಿ, ಕಿರುಗಾವಲು, ಡಿ ಜಿ ಕೊಪ್ಪಲು, ಚಿಕ್ಕಮಾಳಿಗೆಕೊಪ್ಪಲು, ಹೊನಗನಹಳ್ಳಿ, ಪುಟ್ಟೇಗೌಡನ ಕೊಪ್ಪಲು, ಬುಳ್ಳಿಕೆಂಪನದೊಡ್ಡಿ, ಮಿಕ್ಕೆರೆ, ಹಿಟ್ಟನಹಳ್ಳಿ ಕೊಪ್ಪಲು, ಹೊನಗನಹಳ್ಳಿ, ಚಿಕ್ಕಮುಲ ಗೂಡಿ ಹಾಗೂ ಸುತ್ತಮುತ್ತಲ ಗ್ರಾಮಗಳ ವಿದ್ಯುತ್ ಪೂರೈಕೆ ಯಲ್ಲಿ ಅಡಚಣೆ ಉಂಟಾಗ ಲಿದ್ದು ಗ್ರಾಹಕರು ಸಹಕರಿಸಬೇ ಕೆಂದು ಅವರು ಕೋರಿದ್ದಾರೆ.1
- *ದಸರಾ ಮಹೋತ್ಸವದಲ್ಲಿ ಕರಾವಳಿ ಕಂಬಳ ವೈಭವ ಸಾತ್ಗಳ್ಳಿಯಲ್ಲಿ ಸಿದ್ಧಗೊಳ್ಳುತ್ತಿದೆ ಭವ್ಯ ಟ್ರ್ಯಾಕ್* ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಕರಾವಳಿಯ ಜಾನಪದ ವೀರ ಕ್ರೀಡೆ ಕಂಬಳದ ರೋಮಾಂಚಕಾರಿ ಓಟ ಸಾರ್ವಜನಿಕರನ್ನು ರಂಜಿಸಲು ಸಿದ್ಧವಾಗುತ್ತಿದೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಂಬಳ ಆಯೋಜನೆಗೆ ಸಿದ್ಧತೆಗಳು ಭರದಿಂದ ಸಾಗಿದ್ದು ಕೋಣಗಳ ಭರ್ಜರಿ ಓಟಕ್ಕಾಗಿ ಸಾತ್ಗಳ್ಳಿಯಲ್ಲಿ ಬೃಹತ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ಈ ಬಾರಿಯ ದಸರಾ ಕಂಬಳದ ವಿಶೇಷತೆಗಳೇನು ಸಿದ್ಧತೆಗಳು ಎಲ್ಲಿಗೆ ಬಂದಿವೆ ಇಲ್ಲಿದೆ ನೋಡಿ ಕಂಪ್ಲೀಟ್ ರಿಪೋರ್ಟ್ ಹೌದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿರುವ ನಗರದ ಸಾತ್ಗಳ್ಳಿಯ 25 ಎಕರೆ ವಿಸ್ತಾರವಾದ ಜಾಗದಲ್ಲಿ ದಸರಾ ಕಂಬಳ ಆಯೋಜನೆಯಾಗುತ್ತಿದೆ. ಈಗಾಗಲೇ ಜಮೀನಿನ ಸುತ್ತಲಿನ ಗಿಡಗಂಟೆಗಳನ್ನು ಸ್ವಚ್ಛಗೊಳಿಸಲಾಗಿದ್ದು. ಹಳ್ಳ ದಿಬ್ಬಗಳನ್ನು ಸಮತಟ್ಟುಗೊಳಿಸಿ ಅಂಕಣವನ್ನು ಸಜ್ಜುಗೊಳಿಸಲಾಗುತ್ತಿದೆ. ಕರಾವಳಿ ಭಾಗದಿಂದಲೇ ನುರಿತ ಕೂಲಿ ಕಾರ್ಮಿಕರನ್ನು ಕರೆಸಲಾಗಿದ್ದು. ಸಿಮೆಂಟ್ ಇಟ್ಟಿಗೆಗಳಿಂದ 3 ಅಡಿ ಎತ್ತರ ಹಾಗೂ 150 ಮೀಟರ್ ಉದ್ದದ ತಡೆಗೋಡೆಗಳನ್ನು ನಿರ್ಮಿಸಿ 6 ಮೀಟರ್ ಅಗಲದ ನಡುವಿನ ಜಾಗದಲ್ಲಿ ಮಣ್ಣು ಮರಳು ಮತ್ತು ನೀರನ್ನು ಮಿಶ್ರಣ ಮಾಡಿ ಅಚ್ಚುಕಟ್ಟಾದ ಕೆಸರುಗದ್ದೆಯ ಟ್ರ್ಯಾಕ್ ರೂಪಿಸಲಾಗುತ್ತಿದೆ. ಇನ್ನು ಕಂಬಳ ಅಂಕಣಕ್ಕಾಗಿ ಕೊಳವೆಬಾವಿ ಕೊರೆಸಿ ನೀರಿನ ವ್ಯವಸ್ಥೆ ಮಾಡಲಾಗುತ್ತಿದ್ದು ಟ್ರ್ಯಾಕ್ ನಿರ್ಮಾಣದ ನಂತರ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಸೆಪ್ಟೆಂಬರ್ 15ರ ನಂತರ ಕರಾವಳಿಯಿಂದ ಕೆಲವು ಪ್ರಮುಖ ಕೋಣಗಳನ್ನು ಕರೆಯಿಸಿ ಟ್ರ್ಯಾಕ್‌ನಲ್ಲಿ ತಾಲೀಮು ಹಾಗೂ ಅಭ್ಯಾಸ ನಡೆಸಲು ಯೋಜನೆ ರೂಪಿಸಲಾಗಿದೆ. ಸೆಪ್ಟೆಂಬರ್ ಅಂತ್ಯಕ್ಕೆ ಎಲ್ಲಾ ಸಿದ್ಧತಾ ಕಾಮಗಾರಿ ಮುಕ್ತಾಯಗೊಳ್ಳಲಿದ್ದು ಮುಂಬರುವ ಅಕ್ಟೋಬರ್ 18 ಮತ್ತು 19ರಂದು ಭವ್ಯ ಕಂಬಳ ಕೂಟ ನಡೆಯಲಿದೆ. ಈ ಕೂಟದಲ್ಲಿ ಬರೋಬ್ಬರಿ 120 ರಿಂದ 150ಕ್ಕೂ ಹೆಚ್ಚು ಜೋಡಿ ಕಂಬಳದ ಕೋಣಗಳು ಪೈಪೋಟಿ ನಡೆಸಲಿವೆ. ವಿಶೇಷ ಎಂದರೆ ಕಂಬಳ ಆಟಕ್ಕೆ ಬಳಸುವ ಅಪಾರ ಪ್ರಮಾಣದ ನೀರು ವ್ಯರ್ಥವಾಗದಂತೆ ಆ ನೀರನ್ನು ನಗರಪಾಲಿಕೆ ಜಿಲ್ಲಾ ಪಂಚಾಯತ್ ಹಾಗೂ ಅರಣ್ಯ ಇಲಾಖೆಯ ನರ್ಸರಿಗಳಿಗೆ ಮರುಬಳಕೆ ಮಾಡಲು ಪ್ಲಾನ್ ಮಾಡಲಾಗಿದೆ. ಸಾರ್ವಜನಿಕರ ವೀಕ್ಷಣೆಗೆ ಗ್ಯಾಲರಿ ವ್ಯವಸ್ಥೆ ಹಾಗೂ ಕರಾವಳಿಯಿಂದ ಆಗಮಿಸುವ ಕೋಣಗಳ ವಾಸ್ತವ್ಯಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸದ್ಯದಲ್ಲೇ ಕೋಣಗಳ ಮಾಲೀಕರ ಸಭೆ ಕರೆದು ಚರ್ಚಿಸಲಾಗುವುದು ಎಂದಿದ್ದಾರೆ ಒಟ್ಟಿನಲ್ಲಿ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಸಾಂಸ್ಕೃತಿಕ ವೈಭವದ ಜೊತೆಗೆ ಕರಾವಳಿಯ ಜಾನಪದ ವೀರ ಕ್ರೀಡೆ ಕಂಬಳದ ಗಮ್ಮತ್ತು ಕಣ್ಣುಂಬಿಕೊಳ್ಳಲು ಮೈಸೂರಿಗರು ಹಾಗೂ ಪ್ರವಾಸಿಗರು ಕಾತುರದಿಂದ ಕಾಯುತ್ತಿದ್ದಾರೆ1
- ಚಾಮರಾಜನಗರದಲ್ಲಿ ವಿವಿಧ ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ಕಿಚ್ಚಸುದೀಪ್ ಹುಟ್ಟುಹಬ್ಬ ಆಚರಣೆ ವರದಿ: ಹೊಮ್ಮನಂಜುಂಡನಾಯಕ. ಚಾಮರಾಜನಗರದಲ್ಲಿ ವಿವಿಧ ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ಕಿಚ್ಚಸುದೀಪ್ ಹುಟ್ಟುಹಬ್ಬ ಆಚರಣೆ ವರದಿ: ಹೊಮ್ಮನಂಜುಂಡನಾಯಕ. ಬೆಳಿಗ್ಗೆಯಿಂದ ಸಂಜೆತನಕ ನಿರಂತರ ಸೇವಾ ಕಾರ್ಯ ನಗರದ ಕೊಳದ ಗಣಪತಿ, ಚಾಮರಾಜೇಶ್ವರ, ಬಿಳಿಗಿರಿರಂಗಸ್ವಾಮಿಗೆ ವಿಶೇಷಪೂಜೆ, ಅನ್ನಸಂತರ್ಪಣೆ, 50 ಮಂದಿ ಬಡವರಿಗೆ ಪುಡ್ ಕಿಡ್ ವಿತರಣೆ ಚಾಮರಾಜನಗರ: ವಿವಿಧ ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ಕಿಚ್ಚಸುದೀಪ್ ಹುಟ್ಟುಹಬ್ಬವನ್ನು ನಗರದಲ್ಲಿ ಅಭಿಮಾನಿಗಳು ಅರ್ಥಪೂರ್ ವಾಗಿ ಆಚರಣೆ ಮಾಡಿದರು. ಕನ್ನಡ ಚಿತ್ರರಂಗದ ನಟ ಕಿಚ್ಚು ಸುದೀಪ್ ಅವರ ಹುಟ್ಟುಹಬ್ಬ ಅಂಗವಾಗಿ ಚಾಮರಾಜನಗರ ಜಿಲ್ಲಾ ಆಲ್ ಇಂಡಿಯಾ ಬಾದ್‌ಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್ ವತಿಯಿಂದ ಮೊದಲಿಗೆ ಕೊಳದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಸುದೀಪ್ ಭಾವಚಿತ್ರ ಹಿಡಿದು ವಿಶೇಷ ಪೂಜೆ ಸಲ್ಲಿಸಲಾಯಿತು. ಸಂತೇಮರಳ್ಳಿ ವೃತ್ತದಲ್ಲಿ ಅನ್ನಸಂತರ್ಪಣೆ ಮಾಡಲಾಯಿತು.ಬಡ 50 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಭೋಗಾಪುರ ಗ್ರಾಮದ ಅಂಧಮಕ್ಕಳ ಆಶ್ರಮಕ್ಕೆ ಊಟದ ವ್ಯವಸ್ಥೆ ಮಾಡಲಾಯಿತು. ಶ್ರೀ ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಕ್ತಾಧಿಗಳಿಗೂ ಊಟದ ವ್ಯವಸ್ಥೆ ಮಾಡುವ ಮೂಲಕ ಬಹಳ ಅರ್ಥಪೂರ್ಣವಾಗಿ ಕಿಚ್ಚುಸುದೀಪ್ ಹುಟ್ಟುಹಬ್ಬ ಆಚರಿಸಲಾಯಿತು. ಕಾರ್ಯಕ್ರಮ ನೇತ್ರತ್ವ ವಹಿಸಿದ್ದ ಚಾಮರಾಜನಗರ ಜಿಲ್ಲಾ ಆಲ್ ಇಂಡಿಯಾ ಬಾದ್‌ಷಾ, ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎಸ್. ನಾಗೇಂದ್ರ ಮಾತನಾಡಿ, ಕಿಚ್ಚು ಸುದೀಪ್ ಅಣ್ಣನವರ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ. ಅದಕ್ಕಾಗಿ ನಾವು ಅವರ ಹುಟ್ಟುಹಬ್ಬವನ್ನು ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗಿದ್ದು, ಬೆಳಿಗ್ಗೆ ಕೊಳದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂತೇಮರಳ್ಳಿ ವೃತ್ತದಲ್ಲಿ ಅನ್ನಸಂತರ್ಪಣೆ ಮಾಡಲಾಯಿತು.ಬಡ 50 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಭೋಗಾಪುರ ಗ್ರಾಮದ ಅಂಧಮಕ್ಕಳ ಆಶ್ರಮಕ್ಕೆ ಊಟದ ವ್ಯವಸ್ಥೆ ಮಾಡಲಾಯಿತು. ಶ್ರೀ ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಕ್ತಾಧಿಗಳಿಗೂ ಊಟದ ವ್ಯವಸ್ಥೆ ಮಾಡುವ ಮೂಲಕ ಕಿಚ್ಚುಸುದೀಪ್ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಭಗವಂತ ಅವರಿಗೆ ಹೆಚ್ಚಿನ ಆರೋಗ್ಯ, ಆಯಸ್ಸು ಕರುಣಿಸಿ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುವಂತಾಗಲಿ ಎಂದು ಪ್ರಾರ್ಥಿಸಿದರು. ನಗರಸಭಾ ಮಾಜಿ ಸದಸ್ಯ ಶಿವರಾಜ್ ಮಾತನಾಡಿ, ಕನ್ನಡ ಚಿತ್ರರಂಗದ ದೊಡ್ಡಮಟ್ಟದಲ್ಲಿ ಹೆಸರುಗಳಿಸಿರುವ ಕಿಚ್ಚಸುದೀಪ್ ಅವರು ಭಾರತೀಯ ಚಿತ್ರರಂಗದಲ್ಲೂ ಉನ್ನತ ಮಟ್ಟದಲ್ಲಿ ಬೆಳೆಯಲಿ ಅವರ ಹುಟ್ಟುಹಬ್ಬ ಅಂಗವಾಗಿ ಅವರ ಅಭಿಮಾನಿ ಬಳಗವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆ ಆಗಿದೆ. ಸುದೀಪ್ ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಆಲ್ ಇಂಡಿಯಾ ಬಾದ್‌ಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್ ನ ಆನಂದ್, ಚಂದ್ರು, ಸತೀಶ್, ಉಲ್ಲಾಸ್, ರವಿ, ಸಂತೋಷ, ಸ್ವಾಮಿನಾಯಕ್, ಚೇತು, ಮೋಹನ್, ಚಂದ್ರು ಮಾದೇಶ್ ಇತರರು ಹಾಜರಿದ್ದರು.4