*ದಸರಾ ಮಹೋತ್ಸವದಲ್ಲಿ ಕರಾವಳಿ ಕಂಬಳ ವೈಭವ ಸಾತ್ಗಳ್ಳಿಯಲ್ಲಿ ಸಿದ್ಧಗೊಳ್ಳುತ್ತಿದೆ ಭವ್ಯ ಟ್ರ್ಯಾಕ್* ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಕರಾವಳಿಯ ಜಾನಪದ ವೀರ ಕ್ರೀಡೆ ಕಂಬಳದ ರೋಮಾಂಚಕಾರಿ ಓಟ ಸಾರ್ವಜನಿಕರನ್ನು ರಂಜಿಸಲು ಸಿದ್ಧವಾಗುತ್ತಿದೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಂಬಳ ಆಯೋಜನೆಗೆ ಸಿದ್ಧತೆಗಳು ಭರದಿಂದ ಸಾಗಿದ್ದು ಕೋಣಗಳ ಭರ್ಜರಿ ಓಟಕ್ಕಾಗಿ ಸಾತ್ಗಳ್ಳಿಯಲ್ಲಿ ಬೃಹತ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ಈ ಬಾರಿಯ ದಸರಾ ಕಂಬಳದ ವಿಶೇಷತೆಗಳೇನು ಸಿದ್ಧತೆಗಳು ಎಲ್ಲಿಗೆ ಬಂದಿವೆ ಇಲ್ಲಿದೆ ನೋಡಿ ಕಂಪ್ಲೀಟ್ ರಿಪೋರ್ಟ್ ಹೌದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿರುವ ನಗರದ ಸಾತ್ಗಳ್ಳಿಯ 25 ಎಕರೆ ವಿಸ್ತಾರವಾದ ಜಾಗದಲ್ಲಿ ದಸರಾ ಕಂಬಳ ಆಯೋಜನೆಯಾಗುತ್ತಿದೆ. ಈಗಾಗಲೇ ಜಮೀನಿನ ಸುತ್ತಲಿನ ಗಿಡಗಂಟೆಗಳನ್ನು ಸ್ವಚ್ಛಗೊಳಿಸಲಾಗಿದ್ದು. ಹಳ್ಳ ದಿಬ್ಬಗಳನ್ನು ಸಮತಟ್ಟುಗೊಳಿಸಿ ಅಂಕಣವನ್ನು ಸಜ್ಜುಗೊಳಿಸಲಾಗುತ್ತಿದೆ. ಕರಾವಳಿ ಭಾಗದಿಂದಲೇ ನುರಿತ ಕೂಲಿ ಕಾರ್ಮಿಕರನ್ನು ಕರೆಸಲಾಗಿದ್ದು. ಸಿಮೆಂಟ್ ಇಟ್ಟಿಗೆಗಳಿಂದ 3 ಅಡಿ ಎತ್ತರ ಹಾಗೂ 150 ಮೀಟರ್ ಉದ್ದದ ತಡೆಗೋಡೆಗಳನ್ನು ನಿರ್ಮಿಸಿ 6 ಮೀಟರ್ ಅಗಲದ ನಡುವಿನ ಜಾಗದಲ್ಲಿ ಮಣ್ಣು ಮರಳು ಮತ್ತು ನೀರನ್ನು ಮಿಶ್ರಣ ಮಾಡಿ ಅಚ್ಚುಕಟ್ಟಾದ ಕೆಸರುಗದ್ದೆಯ ಟ್ರ್ಯಾಕ್ ರೂಪಿಸಲಾಗುತ್ತಿದೆ. ಇನ್ನು ಕಂಬಳ ಅಂಕಣಕ್ಕಾಗಿ ಕೊಳವೆಬಾವಿ ಕೊರೆಸಿ ನೀರಿನ ವ್ಯವಸ್ಥೆ ಮಾಡಲಾಗುತ್ತಿದ್ದು ಟ್ರ್ಯಾಕ್ ನಿರ್ಮಾಣದ ನಂತರ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಸೆಪ್ಟೆಂಬರ್ 15ರ ನಂತರ ಕರಾವಳಿಯಿಂದ ಕೆಲವು ಪ್ರಮುಖ ಕೋಣಗಳನ್ನು ಕರೆಯಿಸಿ ಟ್ರ್ಯಾಕ್‌ನಲ್ಲಿ ತಾಲೀಮು ಹಾಗೂ ಅಭ್ಯಾಸ ನಡೆಸಲು ಯೋಜನೆ ರೂಪಿಸಲಾಗಿದೆ. ಸೆಪ್ಟೆಂಬರ್ ಅಂತ್ಯಕ್ಕೆ ಎಲ್ಲಾ ಸಿದ್ಧತಾ ಕಾಮಗಾರಿ ಮುಕ್ತಾಯಗೊಳ್ಳಲಿದ್ದು ಮುಂಬರುವ ಅಕ್ಟೋಬರ್ 18 ಮತ್ತು 19ರಂದು ಭವ್ಯ ಕಂಬಳ ಕೂಟ ನಡೆಯಲಿದೆ. ಈ ಕೂಟದಲ್ಲಿ ಬರೋಬ್ಬರಿ 120 ರಿಂದ 150ಕ್ಕೂ ಹೆಚ್ಚು ಜೋಡಿ ಕಂಬಳದ ಕೋಣಗಳು ಪೈಪೋಟಿ ನಡೆಸಲಿವೆ. ವಿಶೇಷ ಎಂದರೆ ಕಂಬಳ ಆಟಕ್ಕೆ ಬಳಸುವ ಅಪಾರ ಪ್ರಮಾಣದ ನೀರು ವ್ಯರ್ಥವಾಗದಂತೆ ಆ ನೀರನ್ನು ನಗರಪಾಲಿಕೆ ಜಿಲ್ಲಾ ಪಂಚಾಯತ್ ಹಾಗೂ ಅರಣ್ಯ ಇಲಾಖೆಯ ನರ್ಸರಿಗಳಿಗೆ ಮರುಬಳಕೆ ಮಾಡಲು ಪ್ಲಾನ್ ಮಾಡಲಾಗಿದೆ. ಸಾರ್ವಜನಿಕರ ವೀಕ್ಷಣೆಗೆ ಗ್ಯಾಲರಿ ವ್ಯವಸ್ಥೆ ಹಾಗೂ ಕರಾವಳಿಯಿಂದ ಆಗಮಿಸುವ ಕೋಣಗಳ ವಾಸ್ತವ್ಯಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸದ್ಯದಲ್ಲೇ ಕೋಣಗಳ ಮಾಲೀಕರ ಸಭೆ ಕರೆದು ಚರ್ಚಿಸಲಾಗುವುದು ಎಂದಿದ್ದಾರೆ ಒಟ್ಟಿನಲ್ಲಿ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಸಾಂಸ್ಕೃತಿಕ ವೈಭವದ ಜೊತೆಗೆ ಕರಾವಳಿಯ ಜಾನಪದ ವೀರ ಕ್ರೀಡೆ ಕಂಬಳದ ಗಮ್ಮತ್ತು ಕಣ್ಣುಂಬಿಕೊಳ್ಳಲು ಮೈಸೂರಿಗರು ಹಾಗೂ ಪ್ರವಾಸಿಗರು ಕಾತುರದಿಂದ ಕಾಯುತ್ತಿದ್ದಾರೆ

- *ದಸರಾ ಮಹೋತ್ಸವದಲ್ಲಿ ಕರಾವಳಿ ಕಂಬಳ ವೈಭವ ಸಾತ್ಗಳ್ಳಿಯಲ್ಲಿ ಸಿದ್ಧಗೊಳ್ಳುತ್ತಿದೆ ಭವ್ಯ ಟ್ರ್ಯಾಕ್* ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಕರಾವಳಿಯ ಜಾನಪದ ವೀರ ಕ್ರೀಡೆ ಕಂಬಳದ ರೋಮಾಂಚಕಾರಿ ಓಟ ಸಾರ್ವಜನಿಕರನ್ನು ರಂಜಿಸಲು ಸಿದ್ಧವಾಗುತ್ತಿದೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಂಬಳ ಆಯೋಜನೆಗೆ ಸಿದ್ಧತೆಗಳು ಭರದಿಂದ ಸಾಗಿದ್ದು ಕೋಣಗಳ ಭರ್ಜರಿ ಓಟಕ್ಕಾಗಿ ಸಾತ್ಗಳ್ಳಿಯಲ್ಲಿ ಬೃಹತ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ಈ ಬಾರಿಯ ದಸರಾ ಕಂಬಳದ ವಿಶೇಷತೆಗಳೇನು ಸಿದ್ಧತೆಗಳು ಎಲ್ಲಿಗೆ ಬಂದಿವೆ ಇಲ್ಲಿದೆ ನೋಡಿ ಕಂಪ್ಲೀಟ್ ರಿಪೋರ್ಟ್ ಹೌದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿರುವ ನಗರದ ಸಾತ್ಗಳ್ಳಿಯ 25 ಎಕರೆ ವಿಸ್ತಾರವಾದ ಜಾಗದಲ್ಲಿ ದಸರಾ ಕಂಬಳ ಆಯೋಜನೆಯಾಗುತ್ತಿದೆ. ಈಗಾಗಲೇ ಜಮೀನಿನ ಸುತ್ತಲಿನ ಗಿಡಗಂಟೆಗಳನ್ನು ಸ್ವಚ್ಛಗೊಳಿಸಲಾಗಿದ್ದು. ಹಳ್ಳ ದಿಬ್ಬಗಳನ್ನು ಸಮತಟ್ಟುಗೊಳಿಸಿ ಅಂಕಣವನ್ನು ಸಜ್ಜುಗೊಳಿಸಲಾಗುತ್ತಿದೆ. ಕರಾವಳಿ ಭಾಗದಿಂದಲೇ ನುರಿತ ಕೂಲಿ ಕಾರ್ಮಿಕರನ್ನು ಕರೆಸಲಾಗಿದ್ದು. ಸಿಮೆಂಟ್ ಇಟ್ಟಿಗೆಗಳಿಂದ 3 ಅಡಿ ಎತ್ತರ ಹಾಗೂ 150 ಮೀಟರ್ ಉದ್ದದ ತಡೆಗೋಡೆಗಳನ್ನು ನಿರ್ಮಿಸಿ 6 ಮೀಟರ್ ಅಗಲದ ನಡುವಿನ ಜಾಗದಲ್ಲಿ ಮಣ್ಣು ಮರಳು ಮತ್ತು ನೀರನ್ನು ಮಿಶ್ರಣ ಮಾಡಿ ಅಚ್ಚುಕಟ್ಟಾದ ಕೆಸರುಗದ್ದೆಯ ಟ್ರ್ಯಾಕ್ ರೂಪಿಸಲಾಗುತ್ತಿದೆ. ಇನ್ನು ಕಂಬಳ ಅಂಕಣಕ್ಕಾಗಿ ಕೊಳವೆಬಾವಿ ಕೊರೆಸಿ ನೀರಿನ ವ್ಯವಸ್ಥೆ ಮಾಡಲಾಗುತ್ತಿದ್ದು ಟ್ರ್ಯಾಕ್ ನಿರ್ಮಾಣದ ನಂತರ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಸೆಪ್ಟೆಂಬರ್ 15ರ ನಂತರ ಕರಾವಳಿಯಿಂದ ಕೆಲವು ಪ್ರಮುಖ ಕೋಣಗಳನ್ನು ಕರೆಯಿಸಿ ಟ್ರ್ಯಾಕ್‌ನಲ್ಲಿ ತಾಲೀಮು ಹಾಗೂ ಅಭ್ಯಾಸ ನಡೆಸಲು ಯೋಜನೆ ರೂಪಿಸಲಾಗಿದೆ. ಸೆಪ್ಟೆಂಬರ್ ಅಂತ್ಯಕ್ಕೆ ಎಲ್ಲಾ ಸಿದ್ಧತಾ ಕಾಮಗಾರಿ ಮುಕ್ತಾಯಗೊಳ್ಳಲಿದ್ದು ಮುಂಬರುವ ಅಕ್ಟೋಬರ್ 18 ಮತ್ತು 19ರಂದು ಭವ್ಯ ಕಂಬಳ ಕೂಟ ನಡೆಯಲಿದೆ. ಈ ಕೂಟದಲ್ಲಿ ಬರೋಬ್ಬರಿ 120 ರಿಂದ 150ಕ್ಕೂ ಹೆಚ್ಚು ಜೋಡಿ ಕಂಬಳದ ಕೋಣಗಳು ಪೈಪೋಟಿ ನಡೆಸಲಿವೆ. ವಿಶೇಷ ಎಂದರೆ ಕಂಬಳ ಆಟಕ್ಕೆ ಬಳಸುವ ಅಪಾರ ಪ್ರಮಾಣದ ನೀರು ವ್ಯರ್ಥವಾಗದಂತೆ ಆ ನೀರನ್ನು ನಗರಪಾಲಿಕೆ ಜಿಲ್ಲಾ ಪಂಚಾಯತ್ ಹಾಗೂ ಅರಣ್ಯ ಇಲಾಖೆಯ ನರ್ಸರಿಗಳಿಗೆ ಮರುಬಳಕೆ ಮಾಡಲು ಪ್ಲಾನ್ ಮಾಡಲಾಗಿದೆ. ಸಾರ್ವಜನಿಕರ ವೀಕ್ಷಣೆಗೆ ಗ್ಯಾಲರಿ ವ್ಯವಸ್ಥೆ ಹಾಗೂ ಕರಾವಳಿಯಿಂದ ಆಗಮಿಸುವ ಕೋಣಗಳ ವಾಸ್ತವ್ಯಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸದ್ಯದಲ್ಲೇ ಕೋಣಗಳ ಮಾಲೀಕರ ಸಭೆ ಕರೆದು ಚರ್ಚಿಸಲಾಗುವುದು ಎಂದಿದ್ದಾರೆ ಒಟ್ಟಿನಲ್ಲಿ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಸಾಂಸ್ಕೃತಿಕ ವೈಭವದ ಜೊತೆಗೆ ಕರಾವಳಿಯ ಜಾನಪದ ವೀರ ಕ್ರೀಡೆ ಕಂಬಳದ ಗಮ್ಮತ್ತು ಕಣ್ಣುಂಬಿಕೊಳ್ಳಲು ಮೈಸೂರಿಗರು ಹಾಗೂ ಪ್ರವಾಸಿಗರು ಕಾತುರದಿಂದ ಕಾಯುತ್ತಿದ್ದಾರೆ1
- All About,Irregularities & One Man 5 Post by highly influential person in #DistrictWaqfAdvisoryCommittee #Mysuru *ಭಾರತ ನಲ್ಲಿ ವೈರಲ್*1
- ನಂಜನಗೂಡು ತಾಲ್ಲೂಕಿನಲ್ಲಿ ಡಿಸಿಎಂ ಡಾ.ಜಿ. ಪರಮೇಶ್ವರ್ ಬರ ಪರಿಶೀಲನೆ ನಂಜನಗೂಡು ತಾಲ್ಲೂಕಿನಲ್ಲಿ ಡಿಸಿಎಂ ಡಾ.ಜಿ. ಪರಮೇಶ್ವರ್ ಬರ ಪರಿಶೀಲನೆ ನಂಜನಗೂಡು: ತಾಲ್ಲೂಕಿನ ಚಿಕ್ಕ ಕವಲಂದೆ, ದೊಡ್ಡ ಕವಲಂದೆ ಹಾಗೂ ಗಟ್ಟವಾಡಿ ಗ್ರಾಮಗಳಲ್ಲಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಬರ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಜೋಳ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳನ್ನು ರೈತರ ಜಮೀನುಗಳಿಗೆ ತೆರಳಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಉಪಮುಖ್ಯಮಂತ್ರಿಗಳಿಗೆ ಸಾಥ್ ನೀಡಿದರು. ಗಟ್ಟವಾಡಿ ಗ್ರಾಮದ ರೈತ ಮಹದೇವಪ್ಪ ಮತ್ತು ಶಿವಬಸಪ್ಪ ಅವರ ಜಮೀನಿಗೆ ಭೇಟಿ ನೀಡಿ ಬೆಳೆ ಪರಿಸ್ಥಿತಿಯನ್ನು ಪರಿಶೀಲಿಸಿದ ಡಾ.ಜಿ. ಪರಮೇಶ್ವರ್ ಅವರು, ನಂಜನಗೂಡು ತಾಲೂಕಿನಲ್ಲಿ ಬರ ವೀಕ್ಷಣೆಗೆ ಬಂದಿದ್ದೇನೆ. ಮಳೆಯ ಕೊರತೆಯಿಂದ ಜೋಳ ಹಾಗೂ ಸೂರ್ಯಕಾಂತಿ ಸೇರಿದಂತೆ ಹಲವು ಬೆಳೆಗಳು ಒಣಗಿ ನಾಶವಾಗಿವೆ ಎಂದು ಹೇಳಿದರು. ರೈತರು ಸಾಲ ಮಾಡಿಕೊಂಡು ಸಾವಿರಾರು ರೂಪಾಯಿ ವೆಚ್ಚ ಮಾಡಿ ಬೆಳೆ ಬೆಳೆದಿದ್ದಾರೆ. ಆದರೆ ಮಳೆ ಇಲ್ಲದೆ ಬೆಳೆಗಳು ನಾಶವಾಗಿರುವುದರಿಂದ ರೈತರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಈ ಗಂಭೀರ ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ದೊಡ್ಡ ಕವಲಂದೆ ಭಾಗಕ್ಕೆ ನೀರಾವರಿ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಕೆಲಸ ಮಾಡಲಿದ್ದಾರೆ ಎಂದರು. ರೈತರ ಅಸಮಾಧಾನ ಇದೇ ವೇಳೆ ಪತ್ರಕರ್ತರು ಸ್ಮಶಾನ ಭೂಮಿ ಸಮಸ್ಯೆ ಕುರಿತು ಕಂದಾಯ ಸಚಿವರ ಗಮನ ಸೆಳೆಯಲು ಪ್ರಯತ್ನಿಸಿದರೂ, ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಮುಂದುವರಿದರು. ಬರ ಪರಿಶೀಲನಾ ಪ್ರವಾಸವು ಕೇವಲ ಕೆಲವೇ ನಿಮಿಷಗಳಿಗೆ ಸೀಮಿತವಾಗಿದ್ದು, ರೈತರಿಗೆ ತಮ್ಮ ಸಮಸ್ಯೆಗಳನ್ನು ಸಂಪೂರ್ಣವಾಗಿ ವಿವರಿಸಲು ಅವಕಾಶ ದೊರೆಯಲಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ರೈತರನ್ನು ಉಪಮುಖ್ಯಮಂತ್ರಿಗಳ ಬಳಿ ತೆರಳಿ ಸಮಸ್ಯೆ ಹೇಳಲು ಅವಕಾಶ ನೀಡಲಿಲ್ಲ ಎಂಬ ಆರೋಪವೂ ರೈತರಿಂದ ಕೇಳಿಬಂದಿದೆ. “ಬರ ಪ್ರವಾಸವು ಕೇವಲ ನಾಮಕಾವಸ್ಥೆಗೆ ಮಾತ್ರ ಸೀಮಿತವಾಗಿದೆಯೇ?” ಎಂಬ ಪ್ರಶ್ನೆಯನ್ನು ರೈತರು ವ್ಯಕ್ತಪಡಿಸಿದ್ದು, ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ತಹಶೀಲ್ದಾರ್ ಡಾ. ಸ್ಮಿತಾ ರಾಮು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ರವಿ, ಸಹಾಯಕ ಕೃಷಿ ನಿರ್ದೇಶಕ ರವಿ, ಕವಲಂದೆ ಉಪ ತಹಶೀಲ್ದಾರ್ ಕಿರಣ್ ಕುಮಾರ್, ರಾಜಸ್ವ ನಿರೀಕ್ಷಕ ಹೆನ್ರಿ ಡಿಸೋಜಾ, ಡಾ.ಜಿ. ಪರಮೇಶ್ವರ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಿ. ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.4
- ಗುಂಬಳ್ಳಿ ಕರುಣಾ ಟ್ರಸ್ಟ್ ಬಳಿ ಆಟೊ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, 4ಮಂದಿಗೆ ತೀವ್ರವಾಗಿ ಗಾಯಗೊಂಡಿರುವ ಘಟಣೆ ನಡೆದಿದೆ. ಯಳಂದೂರು ನ್ಯೂಸ್ ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು ಯಳಂದೂರು ತಾಲೂಕಿನ ಗುಂಬಳ್ಳಿ ಕರುಣಾ ಟ್ರಸ್ಟ್ ಬಳಿ ಆಟೊ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, 4ಮಂದಿಗೆ ತೀವ್ರವಾಗಿ ಗಾಯಗೊಂಡಿರುವ ಘಟನೆ ಬುದುವಾರ ಬೆಳಿಗ್ಗೆ ನಡೆದಿದೆ. ಬುದುವಾರ ಬೆಳಿಗ್ಗೆ 11ಗಂಟೆ ಸಮಯ ದಲ್ಲಿ ಯಳಂದೂರು ಪಟ್ಟಣ ದಿಂದ ಗುಂಬಳ್ಳಿ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದ ಸಮಯ ದಲ್ಲಿ . ಮಾರ್ಗಮಧ್ಯೆ ಚಾಲಕನ ನಿಯಂತ್ರಣ ತಪ್ಪಿದ ಆಟೊ ರಸ್ತೆಯಲ್ಲೇ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ಚಾಲಕ ಸೇರಿದಂತೆ ಮೂವರು ಮಹಿಳೆಯರಿಗೆ ಗಾಯ ವಾಗಿದ್ದು ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಗಾಯಳು ಗಳನ್ನು ಆಂಬುಲೆನ್ಸ್‌ಗಳ ಮೂಲಕ ಗಾಯಾಳುಗಳನ್ನು ಪಟ್ಟಣದ ಆಸ್ಪತ್ರೆಗೆ ರವಾನಿಸಿದ್ದಾರೆ. ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.1
- ಚಾಮರಾಜನಗರ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ರಚನೆಗೆ ಮಲ್ಲೇಶ್ ಆಗ್ರಹ ವರದಿ: ಹೊಮ್ಮನಂಜುಂಡನಾಯಕ ಚಾಮರಾಜನಗರ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ರಚನೆಗೆ ಮಲ್ಲೇಶ್ ಆಗ್ರಹ ಚಾಮರಾಜನಗರ: ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ರಚನೆ ಮಾಡಬೇಕು ಎಂದು ಚಿಲಕವಾಡಿ ಮಲ್ಲೇಶ್ ಆಗ್ರಹಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರತಿ ಜಿಲ್ಲೆಯಲ್ಲೂ ಪೋಲಿಸ್ ದೂರು ಪ್ರಾಧಿಕಾರ ಇರುತ್ತದೆ. ಆದರೆ ಚಾಮರಾಜನಗರ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಪೊಲೀಸ್ ದೂರು ಪ್ರಾಧಿಕಾರ ರಚನೆ ಮಾಡುವಂತೆ ಇಲಾಖೆಯಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಜಿಲ್ಲಾ ಮಟ್ಟದ ಪೊಲೀಸ್ ದೂರು ಪ್ರಾಧಿಕಾರ ರಚನೆ ಮಾಡಿ ಸಾರ್ವಜನಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಪೊಲೀಸ್ ದೂರು ಪ್ರಾಧಿಕಾರವು ಪೊಲೀಸರ ಗಂಭೀರ ದುರ್ನಡತೆ, ದೌರ್ಜನ್ಯ ವಿರುದ್ಧ . ಸಾರ್ವಜನಿಕರಿಂದ ದೂರು ಸ್ವೀಕರಿಸಿ ತನಿಖೆ ನಡೆಸುವ ಸ್ವಾಯತ, ಉನ್ನತಮಟ್ಟದ ಪಾಧಿಕಾರವಾಗಿದೆ. ಇದನ್ನು . ಜಿಲ್ಲೆಯಲ್ಲಿ ರಚನೆ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ನ್ಯಾಯ ಸಿಗುತ್ತದೆ. ತಪ್ಪಿಸ್ಥ ಪೊಲೀಸ ಅಧಿಕಾರಿಗಳಿಗೆ ಸಿಬ್ಬಂದಿ. ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ. ಅಮಾಯಕರಿಗೆ ನ್ಯಾಯ ದೊರೆಯುತ್ತದೆ ಎಂದರು. 2021 ಸಾಲಿನ ಗ್ರಾ.ಪಂ.ಚುನಾವಣೆಗೆ ಸಂಬಂಧಿಸಿದಂತೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾನು ಒಂದು ಅಟ್ರಾಸಿಟಿ ದೂರು ನೀಡಿದ ಉದ್ದೇಶದಿಂದ ನನ್ನ ವಿರುದ್ಧ ಒಂದು ಸುಳ್ಳು ಪ್ರತಿದೂರು ದಾಖಲಿಸಿ, ಪೋಲಿಸರು ಅಧಿಕಾರ ದುರುಪಯೋಗ ಮಾಡಿರುತ್ತಾರೆ. ಅಲ್ಲಿಂದ ಇಲ್ಲಿಯತನಕ ಮಾನವಹಕ್ಕು ಆಯೋಗ, ಎಸ್‌ಸಿ, ಎಸ್‌ಟಿ ಹಿತರಕ್ಷಣಾ ಸಮಿತಿ ಇತರ ಮೇಲಾಧಿಕಾರಿಗಳಿಗೆ ನಾನು ದೂರು ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲೆಯ ಭ್ರಷ್ಟ ಪೋಲಿಸ್ ಒಂದೇ ಠಾಣೆಯಲ್ಲಿ ಎರಡು, ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿಕೊಟ್ಟಿರುವುದು ಕಾರ್ಯಾಂಗ, ಶಾಸಕಾಂಗದ ಭ್ರಷ್ಟಾಚಾರವನ್ನು ಎತ್ತಿ ತೋರಿಸುತ್ತದೆ. ನನ್ನ ಮೇಲೆ ಸುಳ್ಳು ಪ್ರಕರಣ ದಾಖಲು... ಮಾಡಿದರು. ಅವೆಲ್ಲವನ್ನು ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಂಡಿದ್ದೇನೆ. ಆಗಾಗಿ ತಪ್ಪಿಸ್ಥ ಪೋಲಿಸ್. ಅಧಿಕಾರಿಗಳಿಗೆ ವಿರುದ್ಧ ಕ್ರಮ ಆಗಬೇಕು. ಜಿಲ್ಲೆಯಲ್ಲಿ ಪೊಲೀಸ್ ದೂರು ಪ್ರಾಧಿಕಾರ ರಚನೆ ಆಗಿಲ್ಲ. ಮೇಲಾಧಿಕಾರಿಗಳಾದ ಎಸ್‌ಪಿ, ಡಿಸಿ ಅವರು ಸಮಿತಿ ರಚನೆ ಮಾಡದೆ ಹ ಪೊಲೀಸ್ ಇಲಾಖೆಯಲ್ಲಿ ನಡೆಯುವ ದೌರ್ಜನ್ಯ, ದಬ್ಬಾಳಿಕೆಗಳನ್ನು ಮುಚ್ಚಿ ಹಾಕಿ, ಸಾರ್ವಜನಿಕರ ಮೇಲೆ ಸುಳ್ಳುಪ್ರಕರಣ ದಾಖಲು ಮಾಡುವುದು, ತಮ್ಮ ಅಧಿಕಾರಿಗಳನ್ನು ರಕ್ಷಣೆ ಮಾಡುವುದಕ್ಕಾಗಿ ಪ್ರಾಧಿಕಾರಿ ರಚನೆ ಮಾಡಿಲ್ಲ. ಗೃಹ ಸಚಿವರು ಇಲಾಖೆಯನ್ನು ಶುದ್ಧಗೊಳಿಸಿ ಸಾರ್ವಜನಿಕರ ಮೇಲೆ ಆಗುವ ಸುಳ್ಳು ಎಫ್‌ಐಆರ್‌ಗಳನ್ನು ಮರುಪರಿಶೀಲನೆಗೆ ಅವಕಾಶ ಕೊಡಬೇಕು. ಚಾಮರಾಜನಗರ ಜಿಲ್ಲೆಯಲ್ಲಿ ಪೊಲೀಸ್ ದೂರು ಪಾಧಿಕಾರಿ ರಚನೆ ಮಾಡಬೇಕು ಮಲ್ಲೇಶ್ ಒತ್ತಾಯಿಸಿದರು.3
- ಮಸಣಾಪುರದಲ್ಲಿ ವಿಜೃಂಭಣೆಯಿಂದ ನಡೆದ ಕಳ್ಳಿಪುರಮಾರಮ್ಮನ ರಥೋತ್ಸವ ಚಾಮರಾಜನಗರ: ಮಸಣಾಪುರ-ಚಾಟೀಪುರ ಗ್ರಾಮದಲ್ಲಿ ಕಳೆದ 3 ದಿನಗಳಿಂದ ಗ್ರಾಮದೇವತೆ ಶ್ರೀ ಕಳ್ಳಿಪುರಮಾರಮ್ಮನ ಹಬ್ಬವು ತುಂಬಾ ಶಾಂತಿಯುತವಾಗಿ ನಡೆಯಿತು. ಕಳೆದ 3 ತಿಂಗಳಿನಿಂದ ಆತಂಕದಲ್ಲಿ ಇದ್ದ ಗ್ರಾಮಸ್ಥರ ಆತಂಕವನ್ನು ದೂರಮಾಡಿ ಗ್ರಾಮದೇವತೆ ಹಬ್ಬವು ವಿಜೃಂಭಣೆಯಿಂದ ನಡೆಯಲು ಆರಕ್ಷಕರು ತೋರಿದ ಪ್ರೀತಿ ಸಹನೆಗೆ ಕೈಮುಗಿದು ನಮಸ್ಕರಿಸಬೇಕು ಅಂತೆಯೇ ಇಂದು ಹಬ್ಬದ ಕೊನೆಯ ದಿನವೂ ಕೂಡ ದೇವತೆಯ ಮೆರವಣಿಗೆಯ ಮುಖಾಂತರ ಶಾಂತಿಯುತವಾಗಿ ಅಂತ್ಯವಾಯಿತು.2
- ಗುಂಡ್ಲುಪೇಟೆ: ತುಂಡಾದ ಸಂಚಾರ ನಾಮಫಲಕಗಳು; ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲು ಆಗ್ರಹ. ಗುಂಡ್ಲುಪೇಟೆ: ಪಟ್ಟಣದ ಮೈಸೂರು–ಊಟಿ ರಾಷ್ಟ್ರೀಯ ಹೆದ್ದಾರಿಯ ಬಿಇಒ ಕಚೇರಿ ಮುಂಭಾಗ, ಫುಟ್‌ಪಾತ್‌ಗೆ ಹೊಂದಿಕೊಂಡಿರುವ ‘ನೋ ಪಾರ್ಕಿಂಗ್’ ನಾಮಫಲಕ ತುಂಡಾಗಿ ಕೆಳಗೆ ಬಿದ್ದಿದ್ದು, ಕೂಡಲೇ ದುರಸ್ತಿಪಡಿಸಿ ವಾಹನ ಸವಾರರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವಂತೆ ಸಂಬಂಧಪಟ್ಟ ಇಲಾಖೆಗೆ ಕರ್ನಾಟಕ ಕಾವಲು ಪಡೆ ಮನವಿ ಮಾಡಿದೆ. ಈ ಕುರಿತು ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷ ಎ. ಅಬ್ದುಲ್ ಮಾಲಿಕ್ ಮಾತನಾಡಿ, ಪಟ್ಟಣದ ವಿವಿಧೆಡೆ ಪೊಲೀಸ್ ಇಲಾಖೆಯಿಂದ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸುವ ನಾಮಫಲಕಗಳನ್ನು ಅಳವಡಿಸಲಾಗಿದೆ. ಆದರೆ ಕೆಲವು ದಿನಗಳ ಹಿಂದೆ ಅಂಚೆ ಕಚೇರಿ, ಕ್ಯಾಸಿನೋ ಬೇಕರಿ ಹಾಗೂ ನೂರ್ ಸ್ಟೋರ್ ಮುಂಭಾಗದಲ್ಲಿದ್ದ ಸಂಚಾರ ನಿಯಮಗಳ ಜಾಗೃತಿ ಫಲಕಗಳು ಕೂಡ ತುಂಡಾಗಿ ಬಿದ್ದಿದ್ದು, ಸಂಬಂಧಪಟ್ಟ ಪೊಲೀಸ್ ಇಲಾಖೆ ಕೂಡಲೇ ಗಮನಹರಿಸಬೇಕು ಎಂದು ಒತ್ತಾಯಿಸಿದರು. ಫಲಕಗಳನ್ನು ಸಮರ್ಪಕವಾಗಿ ದುರಸ್ತಿಪಡಿಸಿ ಅಥವಾ ಗುಣಮಟ್ಟದ ಹೊಸ ಫಲಕಗಳನ್ನು ಅಳವಡಿಸುವ ಮೂಲಕ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಕನ್ನಡಪರ ಹೋರಾಟಗಾರ ರಂಗಪ್ಪ ಮಾತನಾಡಿ, ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಉತ್ತಮ ಗುಣಮಟ್ಟದ ಸಂಚಾರ ನಿಯಮಗಳ ನಾಮಫಲಕಗಳನ್ನು ಅಳವಡಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಅಬ್ದುಲ್ ರಷೀದ್, ಸಂಚಾಲಕ ಮಿಮಿಕ್ರಿ ರಾಜು, ರಹಮತ್ತುಲ್ಲಾ ಖಾನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.3
- All About,Anchor requesting the common people to question the Responsible person for their Responsibilities *ಭಾರತ ನಲ್ಲಿ ವೈರಲ್*1